ಕೋವಿಡ್ ನಿಭಂದನೆಗಳನ್ನು ಮೀರಿ ಹಗಲು ರಾತ್ರಿ ವ್ಯಾಪಾರಅಕ್ರಮ ಅವರೆಮಂಡಿಗಳಲ್ಲಿ ಮಾಸ್ಕ್ ಅಂತರ ಎರಡೂ ಇಲ್ಲ.ಕಾಟಾಚಾರಕ್ಕೆ ಬಂದು ಹೋಗುವ ಪೋಲಿಸರು ಶ್ರೀನಿವಾಸಪುರ:- ಕೋವಿಡ್ ನಿಯಂತ್ರಿಸಲು ಸರ್ಕಾರ ಜಾರಿಗೆ ತಂದಿರುವ ವಿಕೇಂಡ್ ಕರ್ಫ್ಯೂ ಶ್ರೀನಿವಾಸಪುರ ಪಟ್ಟಣದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಕರ್ಫ್ಯೂ ಜಾರಿಗೆ ತರಬೇಕಿದ್ದ ಸ್ಥಳೀಯ ಆಡಳಿತ ಜಾಣಕುರಡು ಪ್ರದರ್ಶನ ಮಾಡುತ್ತಿದೆ.ಶುಕ್ರವಾರ ರಾತ್ರಿಯಿಂದಲೇ ಕರ್ಫ್ಯೂ ಇದೆ ಎಂದು ತಡರಾತ್ರಿ ಪೋಲಿಸರು ತಮ್ಮ ವಾಹನಗಳಲ್ಲಿ ಮೈಕ್ ಮೂಲಕ ಪ್ರಚಾರ ಮಾಡಿದರಾದರೂ ಜಾರಿಗೊಳಿಸಲು ಯಾವ ಇಲಾಖೆಯೂ ಆಸಕ್ತಿ ತೊರಲಿಲ್ಲಬೆಳಿಗ್ಗೆ 10 ಗಂಟೆಯ ತನಕ ಬೆರಳಣಿಕೆಯಷ್ಟು ಮಾರ್ಗಗಳಲ್ಲಿ ಕೆ.ಎಸ್.ಅರ್.ಟಿ.ಸಿ ಬಸ್ಸುಗಳು ಸಂಚರಿಸಿತಾದರೂ ಜನ ಸಂಚಾರ ಇಲ್ಲದೇ ಕಾಲಿ ವಾಹನಗಳು ಸಂಚರಿಸಿ 10 ಗಂಟೆಯ ನಂತರ ಡಿಪೋ ಸೇರಿಕೊಂಡವು. ಬಟ್ಟೆ,ಬಂಗಾರ ಚಪ್ಪಲಿ ಫ್ಯಾನ್ಸಿ.ಸ್ಠಷನರಿ ಜೆರಾಕ್ಸ್ ಅಂಗಡಿಗಳು ಬಾಗಿಲು ತೆರೆಯಲಿಲ್ಲ ಹೋಟೆಲ್,ದಿನಸಿ ಅಂಗಡಿಗಳು ತೆರೆದು ಕರ್ಫ್ಯೂ ನಡುವೇಯೂ ವ್ಯಾಪಾರ ಮಾಡಿದರು.ಅಕ್ರಮ ಅವರೆಮಂಡಿ ವ್ಯಾಪಾರಸ್ಥರ ದೌಲುಎಂ.ಜಿ.ರಸ್ತೆಯಲ್ಲಿ ಅಕ್ರಮವಾಗಿ ನಡೆಸುತ್ತಿರುವ ಅವರೆಕಾಯಿ ಮಂಡಿ ವ್ಯಾಪಾರಸ್ಥರು ಅಂತರ ಕಾಪಾಡದೆ,ಮಾಸ್ಕ್ ಧರಿಸದೆ ಕೋವಿಡ್ ನಿಯಮ ಉಲ್ಲಂಘಿಸಿ ಪೋಲಿಸರ ಓಡಾಟದ…
Author: admin
ಪ್ರಧಾನಿಗೆ ಬದ್ರತೆ ಒದಗಿಸಲು ಪಂಜಾಬ್ ಸರ್ಕಾರ ವಿಫಲಪಂಜಾಬ್ ಸರ್ಕಾರ ವಜಾ ಗೊಳಿಸಿ ಪ್ರತಿಭಟಿಸಿದ ಬಿಜೆಪಿಪ್ರತಿಭಟನೆ ವೇಳೆ ಕೋವಿಡ್ ನಿಯಮ ಉಲ್ಲಂಘಿಸಿದ ಬಿಜೆಪಿ!ಘಟನೆ ನಡೆದ ಹಲವು ದಿನಗಳ ನಂತರ ಪ್ರತಿಭಟಿಸಿದ ಬಿಜೆಪಿ ಶ್ರೀನಿವಾಸಪುರ: ದೇಶದ ಪ್ರಧಾನಿ ಮೋದಿಯವರಿಗೆ ಬದ್ರತೆ ಕಲ್ಪಿಸುವಲ್ಲಿ ವಿಫಲರಾಗಿರುವ ಪಂಜಾಬ್ ನಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಕೂಡಲೆ ವಜಾ ಮಾಡಬೇಕು ಎಂದು ಬಿಜೆಪಿ ಅಗ್ರಹಿಸಿತು. ಪಂಜಾಬ್ ಕಾಂಗ್ರೆಸ್ ಸರ್ಕಾರದ ವಿರುದ್ದ ತಾಲೂಕು ಭಾರತೀಯ ಜನತಾ ಪಕ್ಷದ ಮುಖಂಡರು ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ನಡೆಸಿದರು.ತಾಲೂಕು ಅಧ್ಯಕ್ಷ ಅಶೋಕ್ ರೆಡ್ಡಿ ನೇತೃತ್ವದಲ್ಲಿ ತಹಶೀಲ್ದಾರ್ ಮೂಲಕ ರಾಷ್ಟಪತಿಗಳಿಗೆ ಮನವಿ ಪತ್ರ ನೀಡಿ ಮಾತನಾಡಿ ಅವರು ದೇಶದ ಪ್ರಧಾನಿಗೆ ಬದ್ರತೆ ಕಲ್ಪಿಸಲಾಗದ ಪಂಜಾಬ್ ನಲ್ಲಿರುವ ಆಡಳಿತಾರೂಡ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಮುಂದುವರಿಯಬಾರದು ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಡಿಜಿಪಿ ಸೇರಿ ಪೋಲಿಸ್ ಅಧಿಕಾರಿಗಳನ್ನು ಸೇವೆಯಿಂದ ವಜಾ ಗೋಳಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಜಯರಾಮರೆಡ್ಡಿ, ಕೊಟ್ರಗೂಳಿನಾರಯಣಸ್ವಾಮಿ, ರಮೇಶ್ ರೆಡ್ಡಿ, ಶಿವಶಂಕರಗೌಡ ಯಲ್ದೂರು ಪದ್ಮನಾಭ್,ಷಫಿ,ಬೈರೆಡ್ಡಿ ಮುಂತಾದವರು ಇದ್ದರು.ಕೋವಿಡ್ ನಿಯಮ…
ಶ್ರೀನಿವಾಸಪುರ: ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿಯವರನ್ನು ಶಾಸಕ ರಮೇಶ್ ಕುಮಾರ್ ಪೋಲಿಸ್ ಠಾಣೆಯಲ್ಲಿ ಅಗೌರವದಿಂದ ಮಾತನಾಡಿ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಶಾಸಕರ ವಿರುದ್ದ ದಿಕ್ಕಾರ ಕೂಗಿ ಪ್ರತಿಭಟಿಸಿದ ಘಟನೆ ಇಂದು ತಡ ಸಂಜೆ ಶ್ರೀನಿವಾಸಪುರ ಪೋಲಿಸ್ ಠಾಣೆ ಮುಂಬಾಗದಲ್ಲಿ ನಡೆದಿರುತ್ತದೆ.ತಾಲೂಕಿನ ಪಾತಬಲ್ಲಪಲ್ಲಿ ಗ್ರಾಮದಲ್ಲಿ ಎರಡು ಮನೆಗಳ ನಡುವೆ ಇದ್ದ ಹಳೇ ವೈಶ್ಯಮ್ಯದ ಹಿನ್ನಲೆಯಲ್ಲಿ ಬುಧವಾರ ರಾತ್ರಿ ಎರಡು ಕುಟುಂಬಗಳ ನಡೆವೆ ಗಲಭೆ ನಡೆದಿರುತ್ತದೆ ಈ ಸಂಭಂದ ಎರಡು ಕುಟುಂಬಗಳಿಂದ ಪೋಲಿಸರಿಗೆ ದೂರು ಪ್ರತಿ ದೂರು ದಾಖಲಾಗಿದ್ದು ಈ ವಿಚಾರವಾಗಿ ವೃತ್ತ ನೀರಿಕ್ಷಕ ರವಿಕುಮಾರ್ ಅವರನ್ನು ಮಾತನಾಡಲು ಇಂದು ಸಂಜೆ ತೂಪಲ್ಲಿನಾರಯಣಸ್ವಾಮಿ ಶ್ರೀನಿವಾಸಪುರ ಪೋಲಿಸ್ ಸ್ಟೇಷನ್ ಗೆ ಹೋಗಿದ್ದು ಇದೇ ಸಂದರ್ಭದಲ್ಲಿ ಶಾಸಕ ರಮೇಶ್ ಕುಮಾರ್ ಸಹ ಪೋಲಿಸ್ ಸ್ಟೇಷನ್ ಗೆ ಬಂದಿರುತ್ತಾರೆ ಅಲ್ಲಿ ತೂಪಲ್ಲಿನಾರಯಣಸ್ವಾಮಿ ಇರುವುದನ್ನು ನೋಡಿದ ಶಾಸಕರು ಏಕಾ ಏಕಿ ನಾರಯಣಸ್ವಾಮಿ ವಿರುದ್ದ ಕೂಗಾಡಿ ರಾತ್ರಿ ವೇಳೆ ಸಹ ಪೋಲಿಸ್ ಠಾಣೆಗಳಲ್ಲಿ ರಾಜಕೀಯ ಮಾಡುತ್ತಿರ…
ಶ್ರೀನಿವಾಸಪುರ:ಕಾಂಗ್ರೆಸ್ ನವರಿಗೆ ಸರ್ಕಾರಿ ಶಿಷ್ಟಚಾರದ ಸಬ್ಯತೆ ಗೊತ್ತಿಲ್ಲದ ಅವರದು ಗೂಂಡಾ ಸಂಸೃತಿ ಎಂದು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಆಶೋಕರೆಡ್ಡಿ ಕಿಡಿಕಾರಿದರು.ಅವರು ಇಂದು ಪಟ್ಟಣದ ಇಂದಿರಾಭವನ್ ವೃತ್ತದಲ್ಲಿ ರಾಮನಗರದಲ್ಲಿ ನಡೆದಂತ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜ್ಯ ಮಂತ್ರಿಯನ್ನು ಅಪಮಾನ ಮಾಡಿ ಅದರಲ್ಲೂ ಮುಖ್ಯಮಂತ್ರಿಗಳು ಭಾಗವಹಿಸಿದ್ದ ಸಭೆಯಲ್ಲಿ ಆಗೌರವದಿಂದ ನಡೆದುಕೊಂಡಿರುವ ಸಂಸದ ಡಿ.ಕೆ.ಸುರೇಶ್ ಗೂಂಡಾ ರಿತಿಯಲ್ಲಿ ವರ್ತಿಸಿದ್ದಾರೆ ಎಂದು ಆರೋಪಿಸಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಜಯರಾಮರೆಡ್ಡಿ,ಕೊಟ್ರಗೂಳಿ ನಾರಯಣಸ್ವಾಮಿ,ಪುರಸಭೆ ಸದಸ್ಯ ವಿನೋದ್,ಷಫಿ,ರಮೇಶ್, ರಾಮಾಂಜಿ, ಜಯಣ್ಣ,ಬೈರೆಡ್ಡಿ,ಅಂಕುಶಂ ನಾರಯಣಸ್ವಾಮಿ ಮುಂತಾದವರು ಇದ್ದರು.ಶ್ರೀನಿವಾಸಪುರ ಬಿಜೆಪಿಗರ ಎಡವಟ್ಟುಪ್ರತಿಭಟನೆ ಸಂದರ್ಭದಲ್ಲಿ ಶ್ರೀನಿವಾಸಪುರದ ಬಿಜೆಪಿಗರು ಪಕ್ಷದ ಮುಖಂಡರು ಕಾರ್ಯಕರ್ತರು ಡಿ.ಕೆ. ಸುರೇಶ್ ಗೆ ದಿಕ್ಕಾರ ಕೂಗುವ ಬದಲು ಡಿ.ಕೆ.ರವಿಗೆ ದಿಕ್ಕಾರ ಕೂಗಿ ಎಡವಟ್ಟು ಮಾಡಿ ಸಾರ್ವಜನಿಕವಾಗಿ ಅಪಹಾಸ್ಯಕ್ಕೆ ಒಳಗಾದರು.ಶ್ರೀನಿವಾಸಪುರದ ಬಿಜೆಪಿಗರ ವಿರುದ್ದ ನೆಟ್ಟಿಗರ ಟ್ರೋಲ್!ಸಂಸದ ಡಿ.ಕೆ ಸುರೇಶ್ ಹಾಗು ಕೋಲಾರದಲ್ಲಿ ಕ್ರೀಯಾಶೀಲ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ.ರವಿ ಹೆಸರಿನ ನಡುವಿನ ವ್ಯತ್ಯಾಸ ತಿಳಿಯದ ಶ್ರೀನಿವಾಸಪುರ ಬಿಜೆಪಿಗರು ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಶ್ರೀನಿವಾಸಪುರದ ಬಿಜೆಪಿ ಮುಖಂಡರನ್ನು ನೆಟ್ಟಿಗರು ಟ್ರೋಲ್…
ಶ್ರೀನಿವಾಸಪುರ:-ದೇವಾಲಯದಲ್ಲಿ ಪ್ರಸಾದ ಸೇವಿಸಿದ ಗ್ರಾಮದ ಎಳೆಯ ಮಕ್ಕಳು ವಯಸ್ಕರು ಸುಮಾರು 100 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದು ಇದರಲ್ಲಿ 19 ಮಕ್ಕಳು 10 ಮಂದಿ ಹಿರಿಯರು ಚಿಕಿತ್ಸೆ ಪಡೆಯಲು ಶ್ರೀನಿವಾಸಪುರ ಸಾರ್ವಜನಿಕ ಆಸ್ಪತ್ರೆ ದಾಖಲಾಗಿದ್ದಾರೆ.ಉಳಿದವರು ಶ್ರೀನಿವಾಸಪುರದ ಖಾಸಗಿ ಆಸ್ಪತ್ರೆ ಇನ್ನೂ ಕೆಲವರು ಕೋಲಾರದ ನರ್ಸಿಂಗ್ ಹೋಂಗಳಲ್ಲಿ ಚಿಕಿತ್ಸೆ ಪಡೆಯಲು ದಾಖಲಾಗಿರುತ್ತಾರೆ. ಇನ್ನೂಳಿದವರು ಚಿಕಿತ್ಸೆ ಪಡೆದುಕೊಂಡು ಊರಿಗೆ ವಾಪಸ್ಸು ಹೋಗಿರುವುದಾಗಿ ಹೇಳಲಾಗಿದೆ.ಅಸ್ವಸ್ಥರಾದವರು ಪ್ರಾಣಪಯದಿಂದ ಪಾರಾಗಿರುವುದಾಗಿ ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆತಾಲೂಕಿನ ಯಲ್ದೂರು ಹೋಬಳಿ ಲಕ್ಷ್ಮೀಸಾಗರ ಪಂಚಾಯಿತಿಯ ಬೀರಗಾನಹಳ್ಳಿಯಲ್ಲಿನ ಗಂಗಮ್ಮ ದೇವಾಲಯದಲ್ಲಿ ಗ್ರಾಮಸ್ಥರು ಕೂಡಿ ಹೊಸ ವರ್ಷ ಆಚರಣೆ ಮಾಡಿರುತ್ತಾರೆ ಈ ಸಂದರ್ಭದಲ್ಲಿ ದೇವಾಲಯದ ಆವರಣದಲ್ಲಿ ವಿಶೇಷ ಪೂಜೆ ಇತರೆ ಧಾರ್ಮಿಕ ಚಟುವಟಿಕೆಗಳು ಹಮ್ಮಿಕೊಂಡು ಇದರ ಸಂಭ್ರಮದಲ್ಲಿ ಸಂಜೆ ಗ್ರಾಮದ ಭಕ್ತರೊಬ್ಬರು ಮಾಡಿಸಿದ್ದ ಚಿತ್ರಾನ್ನ ಹಾಗೂ ಕೇಸರಿಬಾತ್ ಪ್ರಸಾದವನ್ನು ಹಂಚಲಾಗಿದೆ ಇದನ್ನು ಸೇವಿಸಿದ್ದ ಭಕ್ತರು, ತಡ ಸಂಜೆ ಫುಡ್ ಪಾಯಿಸನ್ ರಿಯಾಕ್ಷನ್ ಆಗಿದ್ದು ಒಬ್ಬೊಬ್ಬರಾಗಿ ಬೇದಿ ವಾಂತಿ ಮಾಡಿಕೊಳ್ಳಲು ಆರಂಭಿಸಿ ನಲುಗಿ ಹೋಗಿ ಆಸ್ಪತ್ರೆ ದಾರಿ…
ಶ್ರೀನಿವಾಸಪುರ: ಪ್ರೌಡಶಾಲಾ ವಿಧ್ಯಾರ್ಥಿಯ ಬೈಕ್ ವೀಲಿಂಗ್ ಹುಚ್ವಾಟಕ್ಕೆ ಏಳು ಮಂದಿ ವಿಧ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿಸ್ಥೆ ಪಡೆಯುತ್ತಿದ್ದಾರೆ.ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ KSRTC ಬಸ್ ಡಿಪೋ ಬಳಿ ಶ್ರೀನಿವಾಸಪುರದ ಪ್ರತಿಷ್ಟಿತ ವೇಣು ಶಾಲೆಯಲ್ಲಿ ಓದುತ್ತಿರುವ ಪ್ರೌಡಶಾಲಾ ವಿಧ್ಯಾರ್ಥಿ ಸೂರ್ಯ ತಾನು ತಂದಿದ್ದ ಪಲ್ಸರ್ ಬೈಕ್ ನಲ್ಲಿ ತನ್ನ ಇಬ್ಬರು ಸ್ನೇಹಿತರನ್ನು ಕೂರಿಸಿಕೊಂಡು ನಡು ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡುತ್ತ ಸ್ಟಂಟ್ ಮಾಡಿಕೊಂಡು ಬೈಕ್ ಚಲಾಯಿಸಿಕೊಂಡು ಹೋಗಿರುತ್ತಾನೆ ಈ ಸಂದರ್ಭದಲ್ಲಿ ಆಯಾತಪ್ಪಿದ ಬೈಕ್ ರಸ್ತೆಯಲ್ಲಿ ಹೋಗುತ್ತಿದ್ದ ವಿಧ್ಯಾರ್ಥಿಗಳ ಮೇಲೆ ಹರಿದಿದೆ ಘಟನೆಯಿಂದ ಏಳು ವಿಧ್ಯಾರ್ಥಿನಿಯರು ಮತ್ತು ಬೈಕ್ ಸವಾರ ಸೂರ್ಯ ಹಾಗು ಹಿಂಬದಿ ಕುಳಿತಿದ್ದ ಇಬ್ಬರು ವಿಧ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆ ಹಾಗು ಖಾಸಗಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.ಲಿಖಿತ ಎನ್ನುವ ವಿಧ್ಯಾರ್ಥಿನಿ ಸ್ಥಿತಿ ಗಂಭೀರವಾಗಿದ್ದು ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ತಡರಾತ್ರಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಿರುವುದಾಗಿ ಹೇಳಲಾಗಿದೆ.ಘಟನ ಸ್ಥಳಕ್ಕೆ ಶ್ರೀನಿವಾಸಪುರ ಇನ್ಸ್ಪೇಕ್ಟರ್ ರವಿಕುಮಾರ್ ಭೇಟಿ ನೀಡಿ ಮಾಹಿತಿ…
ಶ್ರೀನಿವಾಸಪುರ:ತಾಡಿಗೋಳ್ ಗ್ರಾಮ ಪಂಚಾಯಿತಿ ಉಪ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ವಿಜಯೋತ್ಸವ ಆಚರಿಸುವ ಸಂದರ್ಭದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡೆವೆ ನಡೆದ ಗಲಭೆಯಲ್ಲಿ ಕಾರ್ಯಕರ್ತರುಗಳಿಗೆ ಗಾಯಗಳಾಗಿದ್ದು ಈ ಸಂಭಂದ ಪೋಲಿಸ್ ಠಾಣೆಯಲ್ಲಿ ದೂರುದಾಖಲಾಗಿದೆ.ತಾಡಿಗೋಳ್ ಗ್ರಾಮದ ಪಂಚಾಯಿತಿ ಸದಸ್ಯ ಮಂಜುನಾಥ್ ಮೃತಪಟ್ಟ ಹಿನ್ನಲೆಯಲ್ಲಿ ಉಪಚುನಾವಣೆ ನಡೆದು ಇಂದು ನಡೆದ ಚುನಾವಣೆ ಮತ ಎಣಿಕೆಯಲ್ಲಿ ಜೆಡಿಎಸ್ ಅಭ್ಯರ್ಥಿ ಮಕ್ಬೂಲ್ ಬರಿದ್ 90 ಮತಗಳ ಅಂತರದಿಂದ ವಿಜೇತರಾಗಿ ವಿಜೆತ ಅಭ್ಯರ್ಥಿಯೊಂದಿಗೆ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಗ್ರಾಮದಲ್ಲಿ ವಿಜಯೋತ್ಸವ ಆಚರಿಸುವಾಗ ಗ್ರಾಮದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಗಲಭೆ ನಡೆದು ತಳ್ಳಾಟ ನೂಕಾಟಗಳು ಆಗಿ ಪರಸ್ಪರ ಹೋಡೆದಾಡಿಕೊಂಡು ಪ್ರಕ್ಷುಬ್ದ ಪರಿಸ್ಥಿತಿ ನಿರ್ಮಾಣವಾಗಿದ್ದು ಪೋಲಿಸರು ಲಾಠಿ ಬೀಸಿ ಗಲಭೆಯನ್ನು ನಿಯಂತ್ರಿಸಿ ಗ್ರಾಮದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ನಿಯೋಜಿಸಲಾಗಿದ್ದು ಪರಿಸ್ಥಿತಿ ಹತೋಟಿಯಲ್ಲಿರುವುದಾಗಿ ಇನ್ಸೆಪೇಕ್ಟರ್ ರವಿಕುಮಾರ್ ತಿಳಿಸಿರುತ್ತಾರೆ. ಈ ಸಂಬಂಧ ಎರಡು ಪಕ್ಷದ ಕಾರ್ಯಕರ್ತರು ಶ್ರೀನಿವಾಸಪುರ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.
ಶ್ರೀನಿವಾಸಪುರ: ಶ್ರೀನಿವಾಸಪುರ ತಾಲೂಕಿನ ಸೋಮಯಾಜಲಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹತ್ತು ಮಕ್ಕಳಿಗೆ ಕೊರೋನಾ ಸೋಂಕು ದೃಡಪಟ್ಟಿದೆ ಸೋಂಕಿತ ವಿಧ್ಯಾರ್ಥಿಗಳನ್ನು ಶಾಲೆಯ ಹಾಸ್ಟೆಲ್ ನಲ್ಲಿ ಕ್ವಾರೆಂಟೈನ್ ಮಾಡಲಾಗಿದೆ.ಎರಡು ದಿನಗಳ ಹಿಂದೆ ವಸತಿ ಶಾಲೆಯ 50 ಕ್ಕು ಹೆಚ್ಚು ವಿಧ್ಯಾರ್ಥಿಗಳಿಗೆ ಆರೋಗ್ಯ ಇಲಾಖೆ ವತಿಯಿಂದ RTPCR ಪರೀಕ್ಷೆ ಮಾಡಿಸಲಾಗಿದ್ದು ಇಂದು ಬಂದಂತ RTPCR ಪರೀಕ್ಷಾ ವರದಿಯಲ್ಲಿ 10 ಮಂದಿ ಮಕ್ಕಳಿಗೆ ಕೊರೊನಾ ಪಾಸಿಟಿವ್ ದೃಡಪಟ್ಟಿರುತ್ತದೆ.ಸೋಂಕಿತ 10 ವಿಧ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಹಿನ್ನಲೆಯಲ್ಲಿ ಅವರನ್ನು ತಾಲೂಕು ಆರೋಗ್ಯಾಧಿಕಾರಿಯ ಸಲಹೆಯಂತೆ ವಸತಿ ಶಾಲೆಯ ಹಾಸ್ಟೆಲ್ ನಲ್ಲಿ ಕ್ವಾರೆಂಟೈನ್ ಮಾಡಲಾಗಿದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ತಿಳಿಸಿರುತ್ತಾರೆ.ಹಾಸ್ಟೆಲ್ ಕಟ್ಟಡವನ್ನು ಕಂಟೇನ್ಮೆಂಟ್ ಜೋನ್ ಎಂದು ಆರೋಗ್ಯ ಇಲಾಖೆ ಘೋಷಣೆ ಮಾಡಿದೆ.
ಶ್ರೀನಿವಾಸಪುರ: ಪಂಚಾಯಿತಿ ಅಧ್ಯಕ್ಷರ ಅಧಿಕಾರನ್ನು ದುರುಪಯೋಗ ಪಡಿಸಿಕೊಳ್ಳುವಂತ ರಾಜಕೀಯ ಮುಖಂಡರಿಗೆ ನಾಚಿಕೆಯಾಗಬೇಕು ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಆರೋಪಿಸಿದರು. ಅವರು ಇಂದು ತಮ್ಮ ಗೃಹ ಕಚೇರಿಯಲ್ಲಿ ಮೀಸಲಾತಿ ಅಡಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡದಿದ್ದ ತಾಲೂಕಿನ ರಾಯಲ್ಪಾಡು ಹೋಬಳಿ ಯರ‍್ರಂವಾರಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮಣಮ್ಮ ಅವರನ್ನು ಜೆಡಿಎಸ್ ಗೆ ಸೆರ್ಪಡೆ ಮಾಡಿಕೊಂಡು ಮಾತನಾಡಿದರು. ಗ್ರಾಮ ಪಂಚಾಯಿತಿ ಅಧಿಕಾರ ವ್ಯಾಪ್ತಿಯಲ್ಲಿ ಮೂರನೇ ವ್ಯಕ್ತಿ ರಾಜಕಾರಣ ಅಭಿವೃದ್ದಿಗೆ ಮಾರಕ ಆಗುತ್ತದೆ ಇದು ಒಳ್ಳೆಯ ಬೆಳವಣಿಗೆ ಅಲ್ಲ ಮೀಸಲಾತಿ ಅಡಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮಹಿಳೆಗೆ ಅಧಿಕಾರ ನಡೆಸುವ ಸ್ವೆಚ್ಚೆ ಇರಬೇಕು ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷೆ ರವಣಮ್ಮ ಅಧ್ಯಕ್ಷೆಯಾದಾಗಿನಿಂದ ನಾನು ನಂಬಿದ್ದ ಕಾಂಗ್ರೆಸ್ ಮುಖಂಡರು ನನ್ನನ್ನು ನಾಮಕಾವಸ್ಥೆ ಅಧ್ಯಕ್ಷರನ್ನಾಗಿಸಿ ನನ್ನ ಹೆಸರಿನಲ್ಲಿ ಅಧಿಕಾರ ಚಲಾಯಿಸುವುದಲ್ಲದೆ ನನ್ನನ್ನು ಕೇವಲವಾಗಿ ಕಾಣುತ್ತಿದ್ದರು ಇದರಿಂದ ನನಗೆ ಮನಸ್ಸಿಗೆ ತುಂಬಾ ಬೇಸರ ಉಂಟಾಗಿ ಸಾರ್ವಜನಿಕ ಜೀವನದಲ್ಲಿ ಇಂತಹ ಅಪಮಾನ ಬೇಡ ಎಂದು, ಉಪಾಧ್ಯಕ್ಷ ಶ್ರೀನಿವಾಸರೆಡ್ಡಿ ಅವರೊಂದಿಗೆ ಚರ್ಚಿಸಿ ಜೆಡಿಎಸ್ ಸೇರುತ್ತಿರುವುದಾಗಿ…
ಶ್ರೀನಿವಾಸಪುರ; ಶ್ರೀನಿವಾಸಪುರದ ಶಾಸಕ ರಮೇಶ್ ಕುಮಾರ್ ಆರು ಭಾರಿ ಶಾಸಕರಾಗಿ ಎರಡು ಭಾರಿ ಸ್ಪೀಕರ್ ಆಗಿ ಒಮ್ಮೆ ಸಚಿವರಾಗಿ ಸದಾ ಮೇಧಾವಿಯಂತೆ ಮಾತನಾಡುವ ರಾಜಕಾರಣಿ ಮಹಿಳೆಯರ ಕುರಿತಾಗಿ ಅವರಾಡಿರುವ ಮಾತು ಮಹಿಳೆಯರು ನೂವು ಉಣ್ಣುವಂತಾಗಿದೆ ಹಾಗೇ ತಾಲ್ಲೂಕಿನ ಜನತೆ ತಲೆ ತಗ್ಗಿಸುವಂತಾಗಿದೆ ಎಂದು ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಆರೋಪಿಸಿದರು.ಶ್ರೀನಿವಾಸಪುರ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ರಮೇಶ್ ಕುಮಾರ್ ವಿರುದ್ದ ಹಮ್ಮಿಕೊಂಡಿದ್ದ ಪ್ರತಿಭಟನೆ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮಹಿಳೆಯರ ಬಗ್ಗೆ ಇಷ್ಟೊಂದು ಲಘುವಾಗಿ ಮಾತನಾಡುವರು ಯಾವುದೇ ಕಾರಣಕ್ಕೂ ರಾಜಕಾರಣದಲ್ಲಿ ಮುಂದುವರೆಯಬಾರದು ಕೂಡಲೇ ರಾಜೀನಾಮೆ ನೀಡಿ ರಾಜಕೀಯ ವಿಶ್ರಾಂತಿ ಪಡೆಯಬೇಕೆಂದು ಒತ್ತಾಯಿಸಿದರು.ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅಮುದಾವೇಣು ಮಾತನಾಡಿ ಇತ್ತೀಚೆಗೆ ರಮೇಶ್ ಕುಮಾರ್ ಸದನದಲ್ಲಿ ಮಾತನಾಡುವಾಗ ನೈತಿಕ ಮೌಲ್ಯಗಳನ್ನು ಕಳೆದುಕೊಂಡು ಮಾತನಾಡುತ್ತ ಮಹಿಳೆಯರನ್ನು ಅಪಮಾನ ಮಾಡಿರುವುದು ಮಹಿಳಾಲೋಕ ಕಳಂಕ ಎದುರಿಸುವಂತಾಗಿದೆ.ಮಹಿಳೆಯರ ಬಗ್ಗೆ ಅಗೌರವವಾಗಿ ನಡೆದುಕೊಳ್ಳುವವರಿಗೆ ಕಾನೂನು ಆ ಪದದ ಬಗ್ಗೆ ಮಾತನಾಡುವವರ ಮೇಲೂ ಅನ್ವಯಿಸುವಂತೆ ಸ್ವಯಂ ಪ್ರೇರಿತವಾಗಿ ಕೇಸು ದಾಖಲಾಗಬೇಕು…