Author: admin

ಶ್ರೀನಿವಾಸಪುರ:-ವಿಧಾಸಭೆಯಲ್ಲಿ ಮಾಜಿ ಸ್ಪೀಕರ್ ಹಾಲಿ ಶಾಸಕ ರಮೇಶ್ ಕುಮಾರ್ ಅತ್ಯಾಚಾರ ಕುರಿತಾಗಿ ನೀಡಿರುವಂತ ಹೇಳಿಕೆ ವಿರುದ್ದ ಶ್ರೀನಿವಾಸಪುರ ಪಟ್ಟಣದಲ್ಲಿ ಜೆಡಿಎಸ್ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.ರಾಜ್ಯ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಭಿಮಗುಂಟಪಲ್ಲಿಶಿವಾರೆಡ್ಡಿ ನೇತೃತ್ವದಲ್ಲಿ ದೊಡ್ಡಸಂಖ್ಯೆಯಲ್ಲಿ ಕಾರ್ಯಕರ್ತರು ಜೆಡಿಎಸ್ ಕಚೇರಿ ಇರುವ ಕುವೆಂಪು ವೃತ್ತದಿಂದ ಪಟ್ಟಣದಲ್ಲಿ ಮೆರವಣಿಗೆ ಮೂಲಕ ಹೊರಟು ಬಸ್ ನಿಲ್ದಾಣದ ಬಳಿ ರಮೇಶ್ ಕುಮಾರ್ ಪ್ರತಿಕೃತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.ಕ್ಷೇತ್ರದ ಮತದಾರ ತಲೆತಗ್ಗಿಸುವಂತಾಗಿದೆಈ ಸಂದರ್ಭದಲ್ಲಿ ವಕೀಲ ಶಿವಪ್ಪ ಮಾತನಾಡಿ ಕ್ಷೇತ್ರದ ಶಾಸಕ ರಮೇಶ್ ಕುಮಾರ್ ಮಹಿಳೆಯರ ಕುರಿತಾಗಿ ವಿಧಾನಸಭೆಯಲ್ಲಿ ಅಗೌರವವಾಗಿ ಮಾತನಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ, ಅವರ ಮೂರ್ಖತನದ ಮಾತು ಇಡಿ ಸ್ತ್ರೀ ಸಮೂಹ ನೋವುಂಡುವಂತಾಗಿದೆ ಅಷ್ಟೆ ಅಲ್ಲ ಶ್ರೀನಿವಾಸಪುರ ಕ್ಷೇತ್ರದ ಮತದಾರರ ಗೌರವಕ್ಕೆ ಧಕ್ಕೆ ತರುವಂತಿದೆ ಎಂದು ಶಾಸಕ ರಮೇಶ್ ಕುಮಾರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಮಹಿಳೆಯರ ವಿಚಾರವಾಗಿ ಕೆಟ್ಟದಾಗಿ ವರ್ತಿಸುವಂತ ತಿಳಿಗೆಡಿ ದುರ್ಮಾರ್ಗಿಗಳಿಗೆ ಅವರ ಹೇಳಿಕೆ ಪುಷ್ಟಿ ನೀಡುವಂತಿದೆ. ತಾನೇ ಮೆಧಾವಿ ಎನ್ನುವ ಶಾಸಕ ಮಹಿಳೆಯರ ಸಂಕಷ್ಟ…

Read More

ಕೋಲಾರ:- ಕೋಲಾರ-ಚಿಕ್ಕಬಳ್ಳಾಪುರ ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ತ್ರಿಕೋನ ಸ್ಪರ್ದೆಯಲ್ಲಿ ಕೊನೆಗೂ ಕಾಂಗ್ರೆಸ್ ಗೆದ್ದಿದೆ ಆಣೆ ಪ್ರಮಾಣಗಳು ಜಾತಿ ಲೆಕ್ಕಚಾರ ಇಲ್ಲಿ ಎಲ್ಲವೂ ತಲೆಕೆಳಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅನಿಲ್ ಕುಮಾರ್ ಸುಮಾರು 445 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕರಾಗಿ ಇಡಿ ಚುನಾವಣೆ ಭಾರವನ್ನು ಹೊತ್ತುಸಾಗಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ಪ್ರತಿಷ್ಠಿಯ ಚುನಾವಣೆಯಾಗಿತ್ತು, ಕೋಲಾರ-ಚಿಕ್ಕಬಳ್ಳಾಪುರ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿರುವುದು ಮುಂದಿನ ದಿನಗಳಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರಭಾವಿ ನಾಯಕರಾಗಿರುವ ರಮೇಶ್ ಕುಮಾರ್ ಮುಂದೆ ಪ್ರಶ್ನಾತೀತ ನಾಯರಾಗಿ ಹೊರಹೊಮ್ಮಿದ್ದಾರೆ.ಈ ಚುನಾವಣೆಯಲ್ಲಿ ಮಾಜಿ ಸಂಸದ ಮಾಜಿ ಕೇಂದ್ರ ಸಚಿವ ಮುನಿಯಪ್ಪ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಕಾಂಗ್ರೆಸ್ ಕಾರ್ಯಕರ್ತರ ಸಂಪರ್ಕ ಕಳೆದುಕೊಂಡವರಂತೆ ಸಂಪೂರ್ಣವಾಗಿ ದೂರವೆ ಉಳಿದಿದ್ದರು.ಚಿಂತಾಮಣಿ ಮಾಜಿ ಶಾಸಕ ಡಾ.ಸುಧಾಕರ್ ಮುಳಬಾಗಿಲು ಮಾಜಿ ಶಾಸಕ ಕೊತ್ತೂರುಮಂಜುನಾಥ್ ಚುನಾವಣೆಯ ಜವಬ್ದಾರಿ ಹೊತ್ತು ಒಡಾಡಿದ್ದು ಫಲ ಕೊಟ್ಟಿದೆ ಎನ್ನುತ್ತಾರೆ ರಾಜಕೀಯ ಪಂಡಿತರು.ಬಿಜೆಪಿ ನೆಲೆ ವಿಸ್ತರಣೆಗೆ ಅವಕಾಶಬಿಜೆಪಿ ಅಭ್ಯರ್ಥಿ ಡಾ.ವೇಣುಗೋಪಾಲ್ ಚುನಾವಣೆ ರಾಜಕೀಯಕ್ಕೆ ಹೊಸಬರು…

Read More

ಶ್ರೀನಿವಾಸಪುರ:-ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುವಂತೆ ಪ್ರೇರಣೆ ನೀಡುತ್ತ ಪ್ರಚಾರ ಮಾಡುತ್ತಿದ್ದ ಪ್ರಚಾರಕರಿಗೆ ಸ್ಥಳಿಯ ಯುವಕರು ಪ್ರತಿರೋಧ ವ್ಯಕ್ತಪಡಿಸಿ ಅವರನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಪಟ್ಟಣದ ಹಳೇಪೇಟೆ ಹನುಮನಪಾಳ್ಯದಲ್ಲಿ ಇಂದು ನಡೆದಿದೆ.ಬಹುತೇಕ ಹಿಂದು ಧರ್ಮದ ಕುಟುಂಬಗಳೇ ವಾಸಿಸುವಂತ ಹನುಮನಪಾಳ್ಯ,ಹಳೇಪೇಟೆ ನರಸಿಂಹಪಾಳ್ಯದಲ್ಲಿ ಆಂಧ್ರ ನೊಂದಣಿಯ ವಾಹನದಲ್ಲಿ ಬಂದಂತ ನಾಲ್ವರು ಕ್ರಿಶ್ಚಿಯನ್ ಧರ್ಮ ಪ್ರಚಾರಕರು ಮೈಕ್ ಮೂಲಕ ಕ್ರಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ತೆಲಗು ಭಾಷೆಯಲ್ಲಿ ಪ್ರಚೋದನೆ ನೀಡುತ್ತ ಮತಾಂತರವಾದರೆ ಸಿಗುವಂತ ಅನಕೂಲಗಳ ಕುರಿತಾಗಿ ಸಾರ್ವಜನಿಕವಾಗಿ ಪ್ರಚಾರ ಮಾಡುತ್ತ ಮನೆ ಮನೆಗೆ ತೆರಳಿ ಕ್ರಿಶ್ಚಿಯನ್ ಧರ್ಮದ ಸಾಹಿತ್ತಯದ ಪುಸ್ತಕಗಳನ್ನು ಹಂಚುತ್ತಿದ್ದರು ಇದನ್ನು ಕಂಡ ಸ್ಥಳೀಯ ಯುವಕರಾದ ಹರಿಶ್ ಯಾದವ್,ಮಂಜುನಾಥರೆಡ್ಡಿ, ಶಿವರಾಜ್ ಗೌಡ, ನಂದೀಶ್ ತಂಡದವರು ಪ್ರತ್ರಿಭಟಿಸಿದ್ದಾರೆ ಈ ಸಂದರ್ಭದಲ್ಲಿ, ಯುವ ಮುಖಂಡನೊಬ್ಬ ಫೋನ್ ಮೂಲಕ ಯುವಕರ ವಿರುದ್ದ ಹರಿಹಾಯ್ದಿದ್ದು ಈ ಸಂದರ್ಭದಲ್ಲಿ ಮಾತಿನ ಚಕಮುಖಿ ನಡೆದು ಮುಖಂಡ ಘಟನಾ ಸ್ಥಳಿಕ್ಕೆ ಆಗಮಿಸಿ ಧರ್ಮಪ್ರಚಾಕರ ಪರವಾಗಿ ವಾದಿಸಿದ್ದಾನೆ ಇದಕ್ಕೆ ಸ್ಥಳೀಯ ಜನತೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದಾಗ ಯುವಮುಖಂಡ ಜಾಗಕಾಲಿಮಾಡಿದ್ದಾನೆ.ಯುವಕರೆ…

Read More

ಶ್ರೀನಿವಾಸಪುರ: ವಿಧಾನ ಪರಿಷತ್ ಚುನಾವಣೆಗೂ ಮುಂಚೆ ತಾಲೂಕು ಪ್ರಭಾವಿ ಕಾಂಗ್ರೆಸ್ ಮುಖಂಡ ಯು ಟರ್ನ್ ಹೊಡೆದಿರುವ ಹಿಂದಿನ ಮರ್ಮವೇನು? ಈಗ ಜನಸಾಮನ್ಯನ ಬಾಯಲ್ಲಿ ಕೇಳಿಬರುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ, ಸ್ವಾಭಿಮಾನದ ಮಾತುಗಳನ್ನಾಡಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಂದ ದೂರವೆ ಉಳಿದಿದ್ದ ವ್ಯಕ್ತಿ ಏಕಾಏಕಿ ಸುದ್ಧಿಗೊಷ್ಠಿ ಕರೆದು ನಾನು ಪಕ್ಷಕ್ಕೆ ದ್ರೋಹ ಬಗೆಯಲ್ಲ ನಾನು ನನ್ನ ಕುಟುಂಬ ಕಾಂಗ್ರೆಸ್ ನಿಷ್ಠಾವಂತರು ನಾನು ವಿಧಾನಪರಿಷತ್ ಚುನಾವಣೆಯಲ್ಲಿ ನನ್ನ ಬೆಂಬಲ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ ಅವರಿಗೆ ಎಂದು ಹೇಳಿಕೆ ನೀಡುವ ಮೂಲಕ ತಾಲೂಕಿನ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯ ವಿಷಯವಾಗಿದೆ.ಶ್ರೀನಿವಾಸಪುರ ತಾಲೂಕಿನ ಪ್ರಭಾವಿ ಕಾಂಗ್ರೆಸ್ ಮುಖಂಡ ಮಾವು ಮಂಡಳಿ ಮಾಜಿ ಅಧ್ಯಕ್ಷ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ದಳಸನೂರು ಗೋಪಾಲಕೃಷ್ಣ ಅವರು ಸುದ್ಧಿಗೊಷ್ಠಿಯಲ್ಲಿ ಪಕ್ಷ ದ್ರೋಹದ ಕೆಲಸ ಮಾಡಲಾರೆ ನನ್ನ ಬಗ್ಗೆ ಬಂದಿರುವಂತ ಉಹಾಪೋಹಗಳು ಕೆವಲ ಉಹಾಪೊಹಗಳಷ್ಟೆ ಇದರಲ್ಲಿ ಯಾವುದೇ ಸತ್ಯ ಇಲ್ಲ ಎಂದು ವಿಧಾನಪರಿಷತ್ ಚುನಾವಣೆಗೆ ಎರಡು ದಿನ ಇರುವ ಸಮಯದಲ್ಲಿ ನೀಡಿರುವ ಹೇಳಿಕೆ ಜನಸಾಮನ್ಯರಲ್ಲಿ…

Read More

“ಬ್ರೇಕ್ ವಿಫಲವಾಗಿ ಸಾಗುವ ಬುಲ್ಡೋಜರ್‌ನಂತೆ ಅಬ್ಬರಿಸಿ ಬೊಬ್ಬಿಡುತ್ತ ಸಾಗುತ್ತಿದೆ ಬಾಲಕೃಷ್ಣ ನಟನೆಯ ಅಖಂಡ ಸಿನಿಮಾ” ನ್ಯೂಜ್ ಡೆಸ್ಕ್: ನಂದಮೂರಿ ಬಾಲಕೃಷ್ಣ ನಟನೆಯ ತೆಲಗು ಚಿತ್ರ ಅಖಂಡ ಅಮೋಘ ಯಶಸ್ಸನ್ನು ಕಂಡು ಬ್ಲಾಕ್‌ ಬಸ್ಟರ್ ಹಿಟ್ ಆಗಿದೆ ತೆಲಗು ಸಿನಿಮಾ ರಂಗದಲ್ಲಿ ಸಿನಿಮಾ ಘರ್ಜಿಸುತ್ತಿದಿಯಂತೆ ಅಖಂಡ ಅಬ್ಬರಕ್ಕೆ ಚಿತ್ರಮಂದಿರಗಳು ತತ್ತರಿಸುತ್ತಿವೆ,ಬೋಯಿಪೊಟಿ ಶೀನು ನಿರ್ದೇಶನದ ಈ ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು ಕರೋನಾ ನಂತರ ಬಿಡುಗಡೆಯಾದ ದೊಡ್ಡ ಚಿತ್ರವಾಗಿ ಗುರುತಿಸಿಕೊಂಡಿದೆ.ಅಖಂಡ ಯಶಸ್ಸು ಟಾಲಿವುಡ್‌ಗೆ ಹೊಸ ಉತ್ಸಾಹ ತುಂಬಿದೆ,ಸಿನಿಮಾದಲ್ಲಿ ಬಾಲಯ್ಯ ಹಿಂದೆಂದೂ ಕಾಣದ ವಿಭಿನ್ನ ಪಾತ್ರದಲ್ಲಿ ನಟಿಸಿ ವಿಶ್ವರೂಪವನ್ನೆ ತೋರಿಸಿದ್ದು ಇಡಿ ಸಿನಿಮಾವನ್ನು ಬಾಲಕೃಷ್ಣ ತಮ್ಮ ಬುಜಗಳ ಮೇಲೆ ಹೊತ್ತು ಸಾಗಿದ್ದಾರೆ. ದಿನಕಳೆದಂತೆ ಥಿಯೇಟರ್ ಗಳಲ್ಲಿ ಧೂಳೆಬ್ಬಿಸುತ್ತ ದುಡ್ಡಿನ ಕೊಳ್ಳೆ ಹೋಡೆಯುತ್ತಿದೆ. ಬಾಲಯ್ಯ ಬೋಯಿಪೊಟಿ BB ಕಾಂಬಿನೇಷನಲ್ಲಿ ಸಿಂಹ,ಲೆಜೆಂಡ್ ನಂತರ ಮೂರನೇ ಚಿತ್ರವಾದ ಅಖಂಡ ಹ್ಯಾಟ್ರಿಕ್ ಬಾರಿಸಿದೆ, ಅಭಿಮಾನಿಗಳು BB ಕಾಂಬಿನೇಷನಲ್ಲಿ ಮತ್ತೊಂದು ಸಿನಿಮಾ ಮಾಡಬೇಕು ಘೋಷಣೆ ಮಾಡುವಂತೆ ಒತ್ತಾಯ ಹಾಕುತ್ತಿದ್ದಾರೆ ಅದೂ ಅಖಂಡ ಎರಡನೆಯ ಭಾಗ…

Read More

ಮೂರು ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್​ ರಾವತ್​ ಅವರು ಪ್ರಯಾಣಿಸುತ್ತಿದ್ದ ವಾಯುಪಡೆಯ ಹೆಲಿಕಾಪ್ಟರ್​​ ತಮಿಳುನಾಡಿನಲ್ಲಿ ಪತನಗೊಂಡಿದ್ದು, ರಾವತ್​​ ಸೇರಿ 13 ಮಂದಿ ಸಾವಿಗೀಡಾಗಿದ್ದಾರೆ. ಇದರಲ್ಲಿ ಚಿತ್ತೂರು ಜಿಲ್ಲೆ ಮದನಪಲ್ಲಿಯ 27 ವರ್ಷದ ಲ್ಯಾನ್ಸ್ ನಾಯ್ಕ್​ ಸಾಯಿ ತೇಜ್​​ ಎಂಬ ಯೋಧ ನಿಧನರಾಗಿದ್ದಾರೆ. ಮದನಪಲ್ಲಿ: ಬುಧವಾರ ಬೆಳಗ್ಗೆ ನಡೆದಿರುವ ಸೇನಾ ಹೆಲಿಕಾಪ್ಟರ್​ ಅಪಘಾತದಲ್ಲಿ 27 ವರ್ಷದ ಲ್ಯಾನ್ಸ್​ ನಾಯ್ಕ್​ ಸಾಯಿ ತೇಜ್​ ಮೃತಪಟ್ಟಿದ್ದು. ಬಿಪಿನ್​ ರಾವತ್​​​ ಅವರ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತಿದ್ದ ಸಾಯಿ ತೇಜ್​​ ಮೂಲತಃ ಆಂಧ್ರಪ್ರದೇಶದವ ಕರ್ನಾಟಕದ ಗಡಿಯಲ್ಲಿನ ಬಿ.ಕೊತ್ತಕೊಟ ಬಳಿಯ ಕುರಬಲಕೋಟ ಮಂಡಲದ ಯರ್ರಬಳ್ಳಿ ಪಂಚಾಯತಿಯ ಏಗುವ-ರೆಗಡ ಗ್ರಾಮದ ನಿವಾಸಿ,2012ರಲ್ಲಿ ಭಾರತೀಯ ಸೇನೆಯ ಬೆಂಗಳೂರು ರೆಜಿಮೆಂಟ್​​ಗೆ ಸೇರಿದ್ದ ಅಪ್ರೆಂಟಿಸ್ಟ್ ಮುಗಿದ ನಂತರ ಕೆಲ ಕಾಲ ಸೈನಿಕನಾಗಿ ಸೇವೆ ಸಲ್ಲಿಸಿ ನಂತರ ಸೇನಾ ಮುಖ್ಯಸ್ಥ ಬಿಪಿನ್​ ರಾವತ್​​ ಅವರ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿ ನೇಮಕಗೊಂಡಿದ್ದರು.ಇವರ ಸಹೋದರ ಮಹೇಶ್​ ಬಾಬು ಕೂಡ ಭಾರತೀಯ ಸೇನೆಯಲ್ಲಿದ್ದು, ಹಿಮಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಮೃತಪಟ್ಟಿರುವ ಲ್ಯಾನ್ಸ್​…

Read More

ಶ್ರೀನಿವಾಸಪುರ: ಪಕ್ಷದ ಮುಖಂಡರ ನಡುವೆ ನನಗೂ ಮನಸ್ಥಾಪ ಇರಬಹುದು ಆದರೇ ಪಕ್ಷಕ್ಕೆ ದ್ರೋಹ ಬಗೆಯುವಂತ ಕೆಲಸ ಮಾಡಲಾರೆ ಎಂದು ಮಾವು ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಹಾಗು ತಾಲೂಕಿನ ಪ್ರಭಾವಿ ಕಾಂಗ್ರೆಸ್ ಮುಖಂಡ ದಳಸನೂರುಗೋಪಾಲಕೃಷ್ಣ ತಿಳಿಸಿದರು.ಅವರು ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಜೊತೆಗೂಡಿ ಮಾತನಾಡಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಎಂ.ಎಲ್. ಅನಿಲ್ ಕುಮಾರ್ ಅವರ ಗೆಲುವಿಗೆ ನನ್ನ ಬೆಂಬಲವಿದೆ ಎಂದರು.ಅನೇಕ ವರ್ಷಗಳಿಂದ ನಮ್ಮ ಕುಟುಂಬದ ಹಿರಿಯರಾದಿಯಾಗಿ ಕಾಂಗ್ರೆಸ್ ಪಕ್ಷದಲ್ಲಿ ನಮ್ಮ ಪೂರ್ವಿಕರು ಹಾಕಿರುವ ಅಡಿಪಾಯದಲ್ಲಿ ಕೆಲಸ ಮಾಡಿರುವೆ ವಿದ್ಯಾರ್ಥಿ ದಿಸೆಯಿಂದ ಸಕ್ರಿಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ. ಪಕ್ಷವು ಸಹ ನನ್ನನ್ನು ಗುರ್ತಿಸಿ ಕೆಲವು ಅಧಿಕಾರಗಳನ್ನು ನೀಡಿದೆ. ಇದನ್ನು ಎಂದಿಗೂ ಮರೆಯುವುದಿಲ್ಲ. ಇತ್ತೀಚೆಗೆ ಹಲವು ಸಭೆ ಸಮಾರಂಭಗಳಲ್ಲಿ ನಾನು ಭಾಗವಹಿಸದೆ ಇರಬಹುದು, ಅದಕ್ಕೆ ಹಲವು ಕಾರಣಗಳಿವೆ. ಪ್ರತಿಯೊಂದಕ್ಕೂ ಕಾಲವೇ ಉತ್ತರ ಹೇಳುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ಬ್ಲಾಕ್‌ಕಾಂಗ್ರೆಸ್‌ಅಧ್ಯಕ್ಷಅಕ್ಬರ್ ಶರೀಫ್, ಕಸಬಾ ಮಹಿಳಾ ಬ್ಲಾಕ್‌ಕಾಂಗ್ರೆಸ್‌ ಅಧ್ಯಕ್ಷೆರೂಪಶ್ರೀನಿವಾಸ್, ಮಾಸ್ತೇನಹಳ್ಳಿ ಗ್ರಾಮ ಪಂಚಾಯಿತಿಅಧ್ಯಕ್ಷ ರವಿಕುಮಾರ್,…

Read More

ಕೋಲಾರ:ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರನ್ನು ಆಮೀಷಕ್ಕೆ ಒಳಪಡಿಸಲು ಹೊರಟಿರುವ ಬಿಜೆಪಿಯವರು ಬೌದ್ಧಿಕವಾಗಿ ದಿವಾಳಿಯಾಗಿ ವರ್ತಿಸುತ್ತಿದ್ದಾರೆ ಎಂದು ಮಾಜಿ ಸ್ಪೀಕರ್​ ರಮೇಶ್ ಕುಮಾರ್​ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಈ ಬಗ್ಗೆ ಕೋಲಾರದಲ್ಲಿ ಮಾತಾನಾಡಿರುವ ಅವರು, ಬಿಜೆಪಿಯವರು ಮತದಾರರಿಗೆ ದುಡ್ಡು ಲಡ್ಡು ಕೊಟ್ಟು ಜೊತೆಗೆ ಶನೈಶ್ವರನ ಫೋಟೋ ಇಟ್ಟು ದೌರ್ಜನ್ಯವಾಗಿ ಆಣೆ ಪ್ರಮಾಣಗಳನ್ನು ಮಾಡಿಸಿ ಮಾತಿಗೆ ತಪ್ಪ ಬೇಡಿ ನೀವು ಪ್ರಮಾಣ ಮಾಡಿರುವುದು ಶನೈಶ್ವರನ ಫೋಟೋ ಮೇಲೆ ಎಂದು ಮತದಾರರಿಗೆ ಭಾವನಾತ್ಮಕವಾಗಿ ಬೆದರಿಸಿ ಬೌದ್ಧಿಕ ದಾರಿದ್ರ್ಯಪ್ರದರ್ಶಿಸಲು ಹೋರಟಿದ್ದಾರೆ ಎಂದು ಹೇಳಿದರು.ಬಿಜೆಪಿ ಆಮೀಷಕ್ಕೆ ಒಳಗಾಗಿರುವ ಮತದಾರ ಭಯಬಿಳುತ್ತಿದ್ದಾರೆಪ್ರಜಾಪ್ರಭುತ್ವದಲ್ಲಿ ಇದು ಆರೋಗ್ಯಕರ ಲಕ್ಷಣವಲ್ಲ ಇದು ಮಾರಕ, ಬಿಜೆಪಿಯವರ ಬೌದ್ಧಿಕ ದಾರಿದ್ರ್ಯದ ದಿವಾಳಿತನಕ್ಕೆ ಮತದಾರರು ಭಯಬಿಳದೆ ಪ್ರಜಾಪ್ರಭುತ್ವದ ಅಡಿಯಲ್ಲಿ ಧ್ಯರ್ಯವಾಗಿ ಮತಚಲಾಯಿಸುವಂತೆ ಹೇಳಿದರು.

Read More

ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಾರೆಡ್ಡಿಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಭಾವಿ ಮುಖಂಡಮುಖ್ಯಮಂತ್ರಿ ಸಮ್ಮುಖದಲ್ಲಿ BJP ಸೇರ್ಪಡೆಬಂಗಾರಪೇಟೆ MLA ನಾರಯಣಸ್ವಾಮಿ ಪರಮಾಪ್ತಇತ್ತಿಚಿಗೆ ಇಬ್ಬರ ನಡುವೆ ಹಳಸಿರುವ ಸ್ನೇಹ!ಬಿಜೆಪಿ ಗೆ ವರ್ತೂರು ಪ್ರಕಾಶ್ ಜೈ ಕೋಲಾರ:ಕೈ ಪಕ್ಷದಲ್ಲಿ ವಿಧಾನಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕೋಲಾರ ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ ಇಂದು ಬಿಜೆಪಿ ಸೇರುವ ಮೂಲಕ ಕೋಲಾರ ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತ ಬುಗಿಲೆದ್ದಿದೆ ಇಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಸಾಭಿತಾಗಿದೆ!ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಭಾವಿ ಮುಖಂಡರಾಗಿದ್ದ ಚಂದ್ರಾರೆಡ್ಡಿ ಶಾಸಕ ಎಸ್.ಎನ್.ನಾರಯಣಸ್ವಾಮಿ ಪರಮಾಪ್ತರಾಗಿದ್ದರು ಒಂದೇ ಜೀವ ಎರಡು ದೇಹ ಎಂಬಂತೆ ಇದ್ದರು ಬದಲಾದ ರಾಜಕೀಯದಲ್ಲಿ ಶಾಸಕ ನಾರಯಣಸ್ವಾಮಿ ಅವರನ್ನು ಬಿಟ್ಟು ಹೊರಬಂದಿರುವುದು ಕೋಲಾರ ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ ನಾಮಪತ್ರ ಸಲ್ಲಿಸಿದ ನಂತರ ಬೆಂಬಲ ಕೊರಲು ಚಂದ್ರಾರೆಡ್ಡಿ ಬಳಿ ಹೋದಾಗ ನಿನಗೆ ಬೆಂಬಲ ಕೊಡುವುದಿಲ್ಲ ನಾನು ಬಿಜೆಪಿ ಸೇರುವುದಾಗಿ ಚಂದ್ರಾರೆಡ್ಡಿ ನೇರವಾಗಿ ಹೇಳಿದ್ದರಂತೆ!ಕಾಂಗ್ರೆಸ್…

Read More

ರೋಣೂರಿನಲ್ಲಿ ಮನೆ ಕುಸಿದು ವೃದ್ದ ಸಾವು.ರೈಲು ಡಿಕ್ಕಿ ಹೊಡೆದು ಒರ್ವವ್ಯಕ್ತಿ ನಿಧನ. ಶ್ರೀನಿವಾಸಪುರ:ಇತ್ತಿಚಿಗೆ ಸುರಿದ ಧಾರಕಾರ ಮಳೆಯಿಂದ ರೋಣೂರಿನಲ್ಲಿ ಮನೆ ಬಿದ್ದು ವೃದ್ದರೊಬ್ಬರು ಮೃತ ಪಟ್ಟಿರುವ ಘಟನೆ ಗುರುವಾರ ಸಂಜೆ ನಡೆದಿರುತ್ತದೆ.ಮೃತರನ್ನು ರೋಣೂರು ಗ್ರಾಮದ ಶ್ಯಾಮಾಚಾರಿ(64) ಎಂದು ಗುರುತಿಸಲಾಗಿದ್ದು ಮೃತ ವ್ಯಕ್ತಿ ಪತ್ನಿಯೊಂದಿಗೆ ವಾಸವಾಗಿದ್ದು ಇಂದು ಸಂಜೆ ಪತ್ನಿ ದನಕರುಗಳಿಗೆ ಹುಲ್ಲುತರಲು ಹೋಗಿದ್ದ ಸಂದರ್ಭದಲ್ಲಿ ಶ್ಯಾಮಚಾರಿ ಮನೆಯ ಮುಂಬಾಗ ಹೆಂಚಿನ ಒಪ್ಪಾರದಲ್ಲಿ ನಿಂತಿದ್ದಾಗ ಒಪ್ಪಾರ ಕುಸಿದು ಅಸರೆಯಾಗಿ ನಿಲ್ಲಿಸಿದ್ದ ಕಲ್ಲುಚಪ್ಪಡಿ ಆತನ ಮೆಲೆ ಬಿದ್ದು ಸ್ಥಳದಲ್ಲಿಯೇ ಪ್ರಾಣಬಿಟ್ಟಿರುತ್ತಾರೆ.ಘಟನೆ ನಡೆದ ಸ್ಥಳಕ್ಕೆ ತಹಶೀಲ್ದಾರ್ ಶ್ರೀನಿವಾಸ್ ತಾಲ್ಲೂಕು ಪಂಚಾಯಿತಿ ಇವೊ ಆನಂದ್,ಪೋಲಿಸ್ ಇನ್ಸೆಪೆಕ್ಟರ್ ರವಿಕುಮಾರ್, ರೆವಿನ್ಯೂ ಅಧಿಕಾರಿ ಜನಾರ್ದನ್,ಪಿ.ಡಿ.ಒ ರಮೇಶ್ ಕುಮಾರ್ ಭೇಟಿ ನೀಡಿದ್ದು ತಾತ್ಕಲಿಕ ಪರಿಹಾರವಾಗಿ 5 ಸಾವಿರ ಹಣ ನೀಡಿರುತ್ತಾರೆ.ರೈಲು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಮೃತ ಸಾವುಗುರುವಾರ ಮಧ್ಯನಾಃ ರೈಲು ಡಿಕ್ಕಿಯಾಗಿ ಕುರಿಗಾಹಿ ಸಾವನಪ್ಪಿರುತ್ತಾನೆ ಮೃತನನ್ನು ಪಟ್ಟಣದ ಸಂತೇಮೈದಾನದ ನಿವಾಸಿ ರಾಮಪ್ಪ(60) ಎಂದು ಗುರುತಿಸಲಾಗಿದ್ದು ಮೃತನು ಕುರಿಗಳನ್ನು ಮೆಯಿಸಿಕೊಂಡು ರೈಲ್ವೆ ಹಳಿ…

Read More