ಶ್ರೀನಿವಾಸಪುರ ಪುರಸಭೆಯಲ್ಲಿ ರಾಜಕೀಯ ಜಿದ್ದಾ-ಜಿದ್ದಿಗೆ ಕಾರಣವಾಗಿದೆ ಯಾರು ಯಾರಿಗೂ ಕಡಿಮೆ ಇಲ್ಲದಂತೆ ಸೇರಿಗೆ ಸವ್ವಾ ಸೇರು ಎಂಬಂತೆ ಇಲ್ಲಿನ ಸಾಂಪ್ರದಾಯಿಕ ಕಾಂಗ್ರೆಸ್ ಹಾಗು ಜೆಡಿಎಸ್ ಎದರು ಬದರಾಗಿದೆ ಇದಕ್ಕೆ ನಿನ್ನೇಯ ಘಟನಾವಳಿಗಳೆ ಸಾಕ್ಷಿ ಕಾಂಗ್ರೆಸ್ ಆರೋಪಗಳುಅಕ್ರಮ ಕಟ್ಟಡ ನಿರ್ಮಾಣದಲ್ಲಿ ಜೆಡಿಎಸ್ ಭ್ರಷ್ಟಚಾರಪುರಸಭೆ ಜಮೀನಿನಲ್ಲಿ ಅಕ್ರಮ ಕಟ್ಟಡ ನಿರ್ಮಾಣಜನಸಾಮನ್ಯರ ಕೆಲಸ ಕಾರ್ಯಗಳಿಗೆ ಬ್ರೋಕರ್ ಗಳ ಕಾಟ ಶ್ರೀನಿವಾಸಪುರ:-ಪುರಸಭೆ ಜಾಗದಲ್ಲಿ ಪುರಸಭೆ ಆಡಳಿತದಲ್ಲಿರುವ ಜೆ.ಡಿ.ಎಸ್ ನವರು ಅಕ್ರಮವಾಗಿ ಹಣ ಪಡೆದುಕೊಂಡು ವ್ಯಾಪರಸ್ಥರಿಗೆ ಕಟ್ಟಡ ನಿರ್ಮಾಣ ಮಾಡಲು ಅನವು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ತಾಲೂಕಿನ ಕಾಂಗ್ರೆಸ್ ಮುಖಂಡರು ಪುರಸಭೆ ಕಚೇರಿ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು.ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಆಶೋಕ್,ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಪುರಸಭೆ ಸದಸ್ಯ ಬಿ.ಎಲ್ ಭಾಸ್ಕರ್ ಮುನಿರಾಜು ಕೆ.ಕೆ.ಮಂಜು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖಂಡರು ಮಾತನಾಡಿ ಪುರಸಭೆಯಲ್ಲಿ ಅಧಿಕಾರದಲ್ಲಿರು ಜೆ.ಡಿ.ಎಸ್ ನವರು ಮತ್ತು ಅಧಿಕಾರಿ ವರ್ಗ ತ್ಯಾಗರಾಜಕಾಲೋನಿ ರಸ್ತೆಯಲ್ಲಿರುವಂತ ಪುರಸಭೆ ಮಳಿಗೆಗಳ ವ್ಯಾಪರಸ್ಥರ ಬಳಿ ಅಕ್ರಮವಾಗಿ ಹಣಪಡೆದುಕೊಂಡು ಪುರಸಭೆ ಅವರಣದಲ್ಲಿನ…
Author: admin
ಅಬ್ಬರಿಸಿ ಬೊಬ್ಬಿರಿಯುತ್ತಿರುವ ಕೆರೆಗಳುಕೆರೆಗಳ ಆರ್ಭಟದ ಸದ್ದಿಗೆ ಜನತೆ ಕಂಗಾಲುಹಳ್ಳ ಕೊಳ್ಳಗಳಲ್ಲಿ ಭೊರ್ಗೆರೆತ ನೀರಿನ ಹರಿವುಅಡ್ಡಗಲ್ಲು, ಕೆಂಪರೆಡ್ಡಿಗಾರಿಪಲ್ಲಿ ಕೆರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಶ್ರೀನಿವಾಸಪುರ:- ತಾಲೂಕಿನಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ರಾಯಲ್ಪಾಡು ಹೋಬಳಿಯ ಬಹುತೇಕ ಕೆರೆಗಳು ಭೊರ್ಗೆರೆಯುತ್ತ ಅಬ್ಬರಿಸುತ್ತಿರುವ ಪರಿಣಾಮ ಹಳ್ಳ ಕೊಳ್ಳಗಳು ತುಂಬಿಹರಿಯುತ್ತಿದ್ದು ಗುರುವಾರ ತಡೆ ಸಂಜೆ ನಡೆದ ಅವಘಡದಲ್ಲಿ ಸೇತುವೆಯೊಂದರ ಮೇಲೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಯುವಕ ಹಾಗು ಮಹಿಳೆ ಸೇತುವೆ ಕುಸಿದು ವಾಹನ ಚಲಾಯಿಸುತ್ತಿದ್ದ ಯುವಕ ಅದೃಷಾವಶಾತ್ ನೀರಿನಿಂದ ತಪ್ಪಿಸಿಕೊಂಡಿದ್ದ ಮಹಿಳೆ ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು ಇಂದು ಸುಮಾರು ೧೦೦ ಮೀಟರ್ ದೂರದಲ್ಲಿ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ. ಸೇತುವೆ ಕುಸಿಯುವ ಮುಂಚೆಸೇತುವೆ ಕುಸಿದ ನಂತರ ಸಂಪರ್ಕ ಬಂದ್ ಹಳ್ಳದ ನೀರಿನಲ್ಲಿ ಕೊಚ್ಚಿಹೋದ ಮಹಿಳೆಯನ್ನು ಎ.ಕೊತ್ತೂರು ಗ್ರಾಮದ ಅಮರಾವತಮ್ಮ (65) ಗುರತಿಸಲಾಗಿದ್ದು ಈಕೆ ತಾಲೂಕಿನ ಪ್ರಮುಖ ರಾಜಕಾರಣಿಯಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಆಪ್ತರಾಗಿದ್ದ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ದಿವಂಗತ ಕೆ.ಎಸ್.ರೆಡ್ದಪ್ಪನವರ ಪತ್ನಿ.…
ಶ್ರೀನಿವಾಸಪುರ:- ತಾಲೂಕಿನ ರಾಯಲ್ಪಾಡು ಹೋಬಳಿಯ ಕೂರಿಗೆಪಲ್ಲಿ ಆಂಧ್ರದ ಬಿ.ಕೊತ್ತಕೋಟ ರಸ್ತೆಯಲ್ಲಿ ಜಮೀನು ಕಡೆಗೆ ಹೋಗಿ ಬರುತ್ತಿದ್ದ ಮಹಿಳೆಯೊಬ್ಬರು ಮಳೆ ನೀರು ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿಹೋಗಿರುವ ಧಾರುಣ ಘಟನೆ ನಡೆದಿರುತ್ತದೆ ಮೃತ ಮಹಿಳೆಯನ್ನು ಕೂರಿಗೆಪಲ್ಲಿ ಪಂಚಾಯಿತಿಯ ದಿವಂಗತ ಕೊತ್ತೂರುರೆಡ್ಡೆಪ್ಪ ಅವರ ಪತ್ನಿ ಅಮರಾವತಮ್ಮ (65) ಎಂದು ಗುರುತಿಸಲಾಗಿದೆ.ತಾಲೂಕಿನ ಬದ್ದಿಪಲ್ಲಿ ನೀರಾವರಿ ಪ್ರಾಜೆಕ್ಟ್ ಬಳಿ ಕೋರಿಗೆಪಲ್ಲಿ ಗ್ರಾಮದಿಂದ ಆಂಧ್ರದ ಬಿ.ಕೊತ್ತಕೋಟಗೆ ಹೋಗುವ ರಸ್ತೆಯಲ್ಲಿ ಹಾದು ಹೋಗುವ ಹಳ್ಳದ ನೀರಿಗೆ ಕಟ್ಟಲಾಗಿದ್ದ ಸೇತುವೆ ಮುರಿದು ಬಿದ್ದು ಅನಾಹುತ ನಡೆದಿದೆ ಎನ್ನಲಾಗಿದೆ.ನೀರಿನಲ್ಲಿ ಕೊಚ್ಚಿಹೋಗಿರುವ ಅಮಾರವತಮ್ಮ ತೋಟದ ಮಾಲಿ ಬಾಬುರೆಡ್ಡಿ ಯೊಂದಿಗೆ ಬೈಕ್ ನಲ್ಲಿ ತೋಟದ ಕಡೆ ಹೋಗಿ ಸಂಜೆ ವಾಪಸ್ಸು ಬರುತ್ತಿರಬೇಕಾದರೆ ಹಳ್ಳದಾಟುವಾಗ ಸೇತುವೆ ಕುಸಿದು ಬೈಕ್ ಸಮೇತ ಇಬ್ಬರು ಹಳ್ಳದಲ್ಲಿ ಬಿದ್ದಿರುತ್ತಾರೆ ಬೈಕ್ ಒಡಿಸುತ್ತಿದ್ದ ಯುವಕ ಬಾಬು ರೆಡ್ಡಿ ಈಜಿಕೊಂಡು ಪ್ರಾಣಪಯದಿಂದ ಪಾರಾಗಿದ್ದು ಬೈಕ್ ಮತ್ತು ಅಮರಾವತಮ್ಮ ಹಳ್ಳದಲ್ಲಿ ಕೊಚ್ಚಿಕೊಂಡು ಆಂಧ್ರದ ಕಡೆ ಹರಿದುಹೋಗಿರಬಹುದು ಎನ್ನಲಾಗಿದೆ.ಕರ್ನಾಟಕದ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಯಲ್ಲಿ ಬಿಳುವಂತ ಮಳೆಯ ನೀರು ಬಿರಂಗಿ ಕಾಲುವೆಯ…
ಶ್ರೀನಿವಾಸಪುರ:- ಅತಿಯಾದ ಮಳೆಯಿಂದ ಬರದ ಬೀಡು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳು ಮಲೆನಾಡಂತಾಗಿದೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನತೆ ತತ್ತರಿಸಿದ್ದಾರೆ,ವರುಣನ ಆರ್ಭಟಕ್ಕೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಕೈಗೆ ಬಂದ ಬೆಳೆ ನೆಲಕಚ್ಚಿ ಭೂಮಿ ಪಾಲಾಗಿದ್ದು ಕೃಷಿಕನ ಬದಕು ಮೂರಾಬಟ್ಟೆಯಂತಾಗಿದೆ.ಈ ವರ್ಷ ಮುಂಗಾರು ಬೇಗ ಆರಂಭ ಆಗಿದಲ್ಲದೆ ಕೆರೆ ಕುಂಟೆಗಳಿಗೆ ನೀರುಬಂದಿದ್ದು ಕಂಡು ಆರಂಭದಲ್ಲಿ ರೈತರು ಖುಷಿ ಪಟ್ಟರಾದರೂ ಖುಷಿ ಹೆಚ್ಚು ಉಳಿಯಲಿಲ್ಲ ಮಳೆ ಬಿಟ್ಟುಬಿಡದೆ ನಿರಂತರವಾಗಿ ಸುರಿಯುತ್ತ ಕೆರೆಗಳು ಕೊಡಿ ಬಿತ್ತಲ್ಲದೆ ಬಿಡುವಿಲ್ಲದೆ ಮಳೆ ಸುರಿದ ಪರಿಣಾಮ ರೈತನ ಸಹನೆ ಸತ್ತು ಹೋಗಿ ಗೋಳಾಡುವ ಪರಿಸ್ಥಿತಿ ತಲುಪಿದ್ದಾನೆ.ಇಲ್ಲಿನ ಬಹುತೇಕ ಕೆರೆಗಳು ಈ ವರ್ಷದಲ್ಲಿ ಎರಡೇರಡು ಬಾರಿ ಕೊಡಿ ಬಿದ್ದಿವೆ ಕುಂಟೆ,ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ ನೀರು ಮರಿಚಿಕೆಯಾಗಿದ್ದ ಇಲ್ಲಿ ಎಲ್ಲೆಲ್ಲೂ ನೀರು ಕಾಣು ಸಿಗುತ್ತಿದೆ.ಫಸಲು ಕೊಯ್ಯುವ ವೇಳೆಯಲ್ಲಿ ಮಳೆ ಸುರಿಯುತ್ತಿದೆನಿತ್ಯವೂ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಟಾವು ಮಾಡಬೇಕಾಗಿದ್ದ ರಾಗಿಫಸಲು ಅರ್ದಬಂದ ಕಟಾವಾಗಿದ್ದು ಹೊಲದಲ್ಲೇ ಉಳಿದ ರಾಗಿ ಬೆಳೆ ನೆಲಕಚ್ಚಿದೆ.ತೆನೆಯು ನೀರು ತುಂಬಿ ರಾಗಿ ಕಾಳು…
ತಾಲ್ಲೂಕುಗಳಲ್ಲಿರುವ ಮಿನಿ ವಿಧಾನಸೌಧ ಕಟ್ಟಡಗಳ ಮರುನಾಮಕರಣಇನ್ಮುಂದೆ ತಾಲ್ಲೂಕು ಆಡಳಿತ ಸೌಧ ಎಂದು ಹೆಸರುಮಿನಿ ವಿಧಾನಸೌಧಗಳ ಹೆಸರು ಬದಲಾವಣೆ ಮಾಡಿ ಸುತ್ತೋಲೆ ಹೊರಡಿಸಿದ ಕಂದಾಯ ಇಲಾಖೆಸೆಪ್ಟೆಂಬರ್ ನಲ್ಲೇ ಈ ಬಗ್ಗೆ ಸುಳಿವು ಕೊಟ್ಟಿದ್ದ ಸಚಿವ ಆಶೋಕ್ ಬೆಂಗಳೂರು: ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಇರುವಂತ ಮಿನಿ ವಿಧಾನಸೌಧ(Mini Vidhansoudha) ಹೆಸರನ್ನು ಇನ್ನು ಮುಂದೆ ‘ತಾಲೂಕು ಆಡಳಿತ ಸೌಧ’ (Taluk administration building) ಎಂದು ನಾಮಾಂಕಿತಗೊಳಿಸಲು ಕಂದಾಯ ಇಲಾಖೆ ಸೂಚನೆ ನೀಡಿದೆ. ಈ ವಿಚಾರಕ್ಕೆ ಕಂದಾಯ ಇಲಾಖೆ ಆದೇಶ ಹೊರಡಿಸಿದ್ದು,ಹೆಸರು ಬದಲಾಯಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದೆ.ಸುತ್ತೋಲೆಯಲ್ಲಿ ಏನಿದೆ?ರಾಜ್ಯದಲ್ಲಿರುವ ತಾಲೂಕು ಮಟ್ಟದಲ್ಲಿ ಕಂದಾಯ ಇಲಾಖೆಯನ್ನೊಳಗೊಂಡಂತೆ ಇತರೆ ಸರ್ಕಾರಿ ಕಚೇರಿಗಳು ಮಿನಿವಿಧಾನಸೌಧ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು ರಾಜ್ಯದ ಎಲ್ಲಾ ತಾಲೂಕುಗಳಲ್ಲಿರುವ ಮಿನಿ ವಿಧಾನಸೌಧ ಎಂಬ ತಾಲೂಕು ಆಡಳಿತ ಕಚೇರಿಗಳನ್ನು ರಾಜ್ಯದ ಭಾಷಾನೀತಿಗೆ ಒಳಪಡುವಂತೆ ಹಾಗೂ ರಾಜ್ಯದ ಅಧಿಕೃತ ಭಾಷೆ ಕನ್ನಡವಾಗಿರುವುದರಿಂದ, ನಾಡು-ನುಡಿ ಸಂಸ್ಕೃತಿಗೆ ಪೂರಕವಾಗಿ ತಾಲೂಕು ಆಡಳಿತ ಸೌಧ ಎಂದು ಬದಲಿಸುವುದು ಸೂಕ್ತ ಎಂದು…
ಚಿಂತಾಮಣಿ:- ಚಿಂತಾಮಣಿ ತಾಲೂಕಿನ ಚಿಲಕಲನೆರ್ಪು ಹೋಬಳಿ ಮಿಟ್ಟಹಳ್ಳಿ ಗ್ರಾಮದ ಸುತ್ತಮುತ್ತ ಮಂಗಳವಾರ ಭೂಕಂಪಿಸಿದ ಬೆನ್ನಲ್ಲೆ ಮತ್ತೇ ಬುಧವಾರ ಮದ್ಯರಾತ್ರಿ ನಸುಕಿನಲ್ಲಿ ಎರಡು ಬಾರಿ ಹಾಗು ಗುರುವಾರ ಬೆಳಿಗ್ಗೆ ಮತ್ತೇ ಬಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದ ಹಿನ್ನಲೆಯಲ್ಲಿ ಜನತೆ ಆತಂಕಗೊಂಡು ಊರು ಬಿಡುತ್ತಿದ್ದಾರೆ! ಹಳೇಯ ಮನೆಗಳನ್ನು ಹೊಂದಿರುವಂತ ಬಹುತೇಕ ಗ್ರಾಮಸ್ಥರು ಊರು ಕಾಲಿ ಮಾಡಿದ್ದು ಊರಿನಲ್ಲಿ ಉಳಿದುಕೊಂಡಿರುವ ಜನರು ಆತಂಕದಿಂದ ಕಾಲ ಕಳೆಯುತ್ತಿದ್ದಾರೆ.ಮನೆಯಲ್ಲಿ ಇರಲು ಕಂಪನದ ಭಯ ಒಂದಡೆಯಾದರೆ ಮನೆಯಿಂದ ಹೊರಬಂದರೆ ಜಡಿ ಮಳೆ,ಇದರಿಂದ ಜನತೆ ಮತ್ತಷ್ಟು ಭಯಗೊಂಡಿದ್ದಾರೆ.ಈ ಕುರಿತು ಗ್ರಾಮಸ್ಥರು ಸುದ್ದಿಗಾರರೊಂದಿಗೆ ಮಾತನಾಡಿ ಹವಾಮಾನ ವೈಪರಿತ್ಯದಿಂದ ಭೂಮಿಯಲ್ಲಿ ತೆವಾಂಶ ಹೆಚ್ಚಾಗಿ ಭೂಕಂಪನ ಅಗಿರಬಹುದು ಎಂದು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹೇಳುತ್ತಿದೆ,ಈ ಬಗ್ಗೆ ಅಧಿಕಾರಿಗಳ ಹೇಳಿಕೆಯಲ್ಲಿ ಯಾವುದೆ ನಿಖರತೆ ಇಲ್ಲ ವೈಙ್ಞಾನಿಕವಾಗಿ ಯಾವುದೇ ಮಾಪನ ಮಾಡದೆ ಅಂದಾಜಿನಲ್ಲಿ ಹೇಳುವುದು ಸರಿಯಲ್ಲ ಜಿಲ್ಲಾಡಳಿತ ಈ ವಿಚಾರವನ್ನು ತೀವ್ರವಾಗಿ ಪರಿಗಣಿಸಬೇಕು ಎಂದು ಅಗ್ರಹಿಸಿದ್ದಾರೆ.ಇಂದು ಗ್ರಾಮಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ಹನುಮಂತರಾಯಪ್ಪ ಅವರನ್ನು ಗ್ರಾಮದ ಮಹೆಳೆಯರು ಮುತ್ತಿಗೆ ಹಾಕಿ…
ಚಿಂತಾಮಣಿ:-ಚಿಂತಾಮಣಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಭೂಕಂಪನ ಆಗಿದ್ದು ಜನತೆ ಬಯಭೀತರಾಗಿ ಮನೆಯಿಂದ ಹೊರಬಂದ ಘಟನೆ ಇಂದು ಮಂಗಳವಾರ ರಾತ್ರಿ ಸುಮಾರು 8.50 ಗಂಟೆ ಸಮಯದಲ್ಲಿ ನಡೆದಿರುತ್ತದೆ.ಚಿಂತಾಮಣಿ ತಾಲೂಕಿನ ಕೆಂಚರ್ಲಾಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯ ಮಿಟ್ಟಹಳ್ಳಿ,ಅಪ್ಸಾನಹಳ್ಳಿ, ದೊಡ್ಡಹಳ್ಳಿ,ನಂದನಹಳ್ಳಿ, ಗೋನಿಪಲ್ಲಿ,ಅನಪಲ್ಲಿ,ರಾಸಪಲ್ಲಿ ಹಾಗು ಸುತ್ತುಮುತ್ತಲಿನ ಹಲವಾರು ಗ್ರಾಮಗಳಲ್ಲಿ ಭೂಮಿನಡುಗಿದ ಅನುಭವ ಆಗಿದೆ ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಜನರು ಹೊರಗೆ ಬಂದಿರುತ್ತಾರೆ.ಕೆಲವು ಗ್ರಾಮಗಳಲ್ಲಿ ದೊಡ್ಡ ಸದ್ದಿನ ಕಂಪನ ನಡೆದರೆ ಇನ್ನೂ ಕೆಲವು ಗ್ರಾಮಗಳಲ್ಲಿ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ. ಆದರೆ ಯಾವುದೇ ಪ್ರಾಣ ಹಾನಿ ಆಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.ಭೂಮಿಯ ಕಂಪನದಿಂದ ಮನೆಯಲ್ಲಿನ ಪಾತ್ರೆಗಳು ಅಲ್ಲಾಡಿ ಕೆಳಗೆ ಬಿದ್ದಿದ್ದು ಜನತೆ ಆತಂಕ ಗೊಂಡಿರುತ್ತಾರೆ. ಮನೆಯಿಂದ ಹೊರ ಬಂದ ಜನತೆ ರಸ್ತೆಗಳಲ್ಲಿ ನಿಂತು ಇದು ನಿಜನಾ ಅಥಾವ ಕನಸ ಎಂದು ಆತಂಕದಿಂದ ಪರಸ್ಪರ ಮುಟ್ಟಿನೊಡಿಕೊಂಡು ಅನಿಭವ ಹೇಳಿಕೊಳ್ಳುತ್ತಿದ್ದಾರೆ.ಮನೆ ಮಂದಿಯಲ್ಲ ಮನೆಯಿಂದ ಹೊರ ಬಂದಿದ್ದು ಈಗ ಮತ್ತೆ ಮನೆಯ ಒಳಗೆ ಹೋಗಲು ಜನತೆಗೆ ಧೈರ್ಯವೇ ಇಲ್ಲವಂತೆ ಹೀಗೆಂದು ನಡು ರಸ್ತೆಯಲ್ಲೇ ನಿಂತ…
ಕೋವಿಡ್-19 ಲಾಕ್ಡೌನ್ ನಂತರ ಪುನರಾರಂಭವಾಗುತ್ತಿರುವ ರೈಲುಗಳು18 ತಿಂಗಳ ಕಾಲ ಸ್ಥಗಿತ ಗೊಂಡಿದ್ದ ಡೆಮೊ ರೈಲುಗಳುಬೆಳಿಗ್ಗೆ ಹೋರಡುವ ರೈಲು ಮೆಜೆಸ್ಟಿಕ್ ಗೆ ಹೋಗಲಿದೆರಾಮನಗರ ಚನ್ನಪಟ್ಟಣಕ್ಕೆ ತೆರಳಲಿರುವ ರೈಲುಬೆಂಗಳೂರು-ಚಿಕ್ಕಬಳ್ಳಾಪುರ ನಡುವೆ ಪ್ರತಿ ಗಂಟೆಗೊಮ್ಮೆ ಮೆಮೊ ರೈಲುಗಳು!ಎಲ್ಲಾ ರೈಲುಗಳು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಹೋಗಲಿದೆ ನ್ಯೂಜ್ ಡೆಸ್ಕ್ :-ಬೆಂಗಳೂರು, ಕೋಲಾರ,ಶ್ರೀನಿವಾಸಪುರ ಚಿಂತಾಮಣಿ,ಚಿಕ್ಕಬಳ್ಳಾಪುರ, ಮಾರ್ಗದಲ್ಲಿ ರೈಲುಗಳ ಓಡಾಟ ಮತ್ತೇ ಪ್ರಾರಂಭವಾಗಲಿದೆ ಎಂಬ ಮಾಹಿತಿ ಹೋರಬಂದಿದೆ.ನವೆಂಬರ್ 8 ಅಥಾವ 9 ರಿಂದ ಈ ಮಾರ್ಗಗಳಲ್ಲಿ ರೈಲುಗಳ ಸಂಚಾರ ಪುನಾರಂಭಗೊಳ್ಳಲಿದೆ.ರೈಲ್ವೆ ಮಂಡಳಿ 8 ಡೇಮು (ಡಿಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ರೈಲುಗಳನ್ನು ಈ ಮಾರ್ಗಗಳಲ್ಲಿ ಪುನಾರಂಭ ಮಾಡಲು ನಿರ್ಧರಿಸಿದೆ. ಈ ಪೈಕಿ ಕೆಐಎ ಹಾಲ್ಟ್ ನಿಲ್ದಾಣಕ್ಕೂ 4 ರೈಲುಗಳ ಮೂಲಕ ಸಂಪರ್ಕ ಕಲ್ಪಿಸಲಾಗಿದೆ.ರೈಲ್ವೆ ಅಧಿಕಾರಗಳು ನೀಡಿರುವ ಮಾಹಿತಿಯಂತೆ ಕೋವಿಡ್-19 ಲಾಕ್ ಡೌನ್ ನಂತರ 18 ತಿಂಗಳ ಕಾಲ ಈ ಮಾರ್ಗದಲ್ಲಿ ರೈಲುಗಳನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೇ ರೈಲುಗಳು ಪುನಾರಂಭಗೊಳ್ಳುತ್ತಿವೆ.ವಾರದಲ್ಲಿ 6 ದಿನಗಳ ಕಾಲ ಭಾನುವಾರ ಹೊರತುಪಡಿಸಿ ರೈಲುಗಳು ಸಂಚರಿಸಲಿದ್ದು…
ಶ್ರೀನಿವಾಸಪುರ:-ಶ್ರೀನಿವಾಸಪುರ-ಕೋಲಾರ ರಸ್ತೆಯಲ್ಲಿ ಹಾಡುಹಗಲೆ ದ್ವಿಚಕ್ರ ವಾಹನ ತಡೆಗಟ್ಟಿ ಹಣ ಕಿತ್ತುಕೊಂಡು ಹೋಗಿರುವ ಘಟನೆ ನವೆಂಬರ್ ಒಂದು ಸೋಮವಾರ ನಡೆದಿದೆ ಎಂದು ಹಣ ಕಳೆದುಕೊಂಡ ತಾಲೂಕಿನ ಕೊರ್ನಹಳ್ಳಿ ಗ್ರಾಮದ ಶ್ರೀರಾಮಪ್ಪ ಶ್ರೀನಿವಾಸಪುರ ಅಪರಾಧ ಠಾಣೆಯಲ್ಲಿ ದೂರುದಾಖಲಿಸಿರುತ್ತಾನೆ.ಕೊರ್ನಹಳ್ಳಿ ಗ್ರಾಮದ ಶ್ರೀರಾಮಪ್ಪ ಎಂಬ ಯುವಕ ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದು ಸಾಲು ರಜೆ ಇರುವ ಹಿನ್ನಲೆಯಲ್ಲಿ ಊರಿಗೆ ಬಂದಿರುತ್ತಾನೆ,ಈಗ್ಗೆ ಎರಡು ವರ್ಷಗಳ ಹಿಂದೆ ಅಪಘಾತವಾಗಿ ಕಾಲಿಗೆ ರಾಡ್ ಹಾಕಿದ್ದು ಅದನ್ನು ತೆಗೆಸಲು ಸೋಮವಾರ ಸಹೋದರನ ಜೊತೆ ದ್ವಿಚಕ್ರ ವಾಹನದಲ್ಲಿ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಹೋಗಿ ವೈದ್ಯರು ಸಿಗದೆ ಊರಿಗೆ ಹೋಗಲು ವಾಪಸ್ಸು ಬರುತ್ತಿರಬೇಕಾದರೆ ಮಧ್ಯಾನಃ ಸುಮಾರು 1 ಗಂಟೆ ಸಮಯದಲ್ಲಿ ಕೋಲಾರ-ಶ್ರೀನಿವಾಸಪುರ ನಡುವೆ ದಳಸನೂರು ಗೇಟ್ ನಂತರ ಹೊಸಹಳ್ಳಿ ಕ್ರಾಸ್ ಗೂ ಮುಂಚಿನ ಕಾಡಿನ ನಡುವೆ ನಿರ್ಜನ ಪ್ರದೇಶದಲ್ಲಿ ವೇಗವಾಗಿ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ನಾಲ್ಕು ಮಂದಿ ಅಪರಿಚಿತರು ದ್ವಿಚಕ್ರ ವಾಹನ ಅಡ್ಡಗಟ್ಟಿ ಚಾಕು,ಲಾಂಗುಗಳನ್ನು ತೊರಿಸಿ ಬೆದರಿಸಿದ್ದು ಈ ಸಂದರ್ಭದಲ್ಲಿ ಬಂದಂತ ದಾರಿ ಹೊಕರು…
ನ್ಯೂಜ್ ಡೆಸ್ಕ್:- ಪುನೀತ್ ರಾಜ್ಕುಮಾರ್ ಮಾಡುತ್ತಿದ್ದ ಸಮಾಜಮುಖಿ ಕಾರ್ಯಕ್ಕೆ ಸಹಕಾರ ನೀಡುತ್ತೇನೆ ಎಂದು ತಮಿಳು ನಟ ವಿಶಾಲ್ ಹೇಳಿದ್ದಾರೆ ಅವರು ಭಾನುವಾರ ರಾತ್ರಿ ತೆಲಗು ಚಿತ್ರರಂಗ ಪುನೀತ್ ಗೆ ಶ್ರದ್ಧಾಂಜಲಿ ಅರ್ಪಿಸಲು ನಡೆಸಿದ ಕಾರ್ಯಕ್ರಮದ ಸಭೆಯಲ್ಲಿ ಮಾತನಾಡುತ್ತಾ ಪುನೀತ್ ಓದಿಸುತ್ತಿದ್ದ 1800 ಮಕ್ಕಳ ಜವಾಬ್ದಾರಿ ಮುಂದಿನ ವರ್ಷದಿಂದ ನನ್ನದು ಎಂದು ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊರುವೆ ಎಂದು ವಿಶಾಲ್ ಘೋಷಣೆ ಮಾಡಿರುತ್ತಾರೆ, ಪುನೀತ್ ಕೇವಲ ಸ್ನೇಹಿತ ಅಲ್ಲ ಬಹುದೊಡ್ಡ ಮಾನವತಾವಾದಿ ಎಂದು ಬಣ್ಣಿಸಿದ್ದಾರೆ, ಪುನೀತ್ ರಾಜ್ಕುಮಾರ್ ನಿಧನ ಕೇವಲ ಸಿನಿಮಾ ರಂಗಕ್ಕೆ ಅಲ್ಲ ಇಡಿ ದಕ್ಷಿಣಭಾರತಕ್ಕೆ ಅಗಿರುವ ನೋವು ಎಂದು ಹೇಳಿದ್ದಾರೆ.ಪುನೀತ್ ರಾಜ್ಕುಮಾರ್ ಕೇವಲ ಮಕ್ಕಳನ್ನು ಓದಿಸುತ್ತಿರಲಿಲ್ಲ, ಸದ್ದಿಲ್ಲದೆ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ಕೂಡ ತೊಡಗಿಕೊಂಡಿದ್ದರು ಎಂದರು.ತಮಿಳುನಟನಾಗಿ ಖ್ಯಾತರಾಗಿರುವ ವಿಶಾಲ್@ವಿಶಾಲರೆಡ್ಡಿ ಮೂಲತಃ ಬೆಂಗಳೂರಿನವರು ಅಪ್ಪು ಮೇಲಿನ ಅಭಿಮಾನದೊಂದಿಗೆ ತಾವು ತೆಗೆದುಕೊಂಡಿರುವ ನಿರ್ಣಯವನ್ನು ಅತ್ಯಂತ ವಿನಮ್ರವಾಗಿ ಪ್ರಕಟಿಸಿದ್ದಾರೆ. ವಿಶಾಲ್ ಅವರ ಈ ಸಹೃದಯೀ ನಿರ್ಧಾರದ ಬಗ್ಗೆ ಕನ್ನಡಿಗರು ಅಭಿಮಾನದ ಹೊಳೆ ಹರಿಸಿದ್ದಾರೆ. ಹೃದಯತುಂಬಿ…