ಶ್ರೀನಿವಾಸಪುರ:-ರಾಜ್ಯದಲ್ಲಿ ರೈತರ ಬಡವರ ಪರವಾಗಿ ಇರುವಂತ ಜೆ.ಡಿ.ಎಸ್ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಗ್ರಾಮೀಣಭಾಗದ ಯುವ ಕಾರ್ಯಕರ್ತರು ಸಂಘಟಿತರಾಗಿ ಕಾರ್ಯನಿರ್ವಹಿಸಿ ಪಕ್ಷವನ್ನು ಗೆಲ್ಲಿಸಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡೋಣ ಎಂದು ಶ್ರೀನಿವಾಸಪುರದ ಮಾಜಿ ಶಾಸಕ ಹಾಗು ಕೋಲಾರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ವೆಂಕಟಶಿವಾರೆಡ್ದಿ ಹೇಳಿದರು ಅವರು ಇಂದು ತಾಲೂಕಿನ ಕಸಬಾ ಹೋಬಳಿ ಗಾಂಡ್ಲಹಳ್ಳಿ ಗ್ರಾಮದಲ್ಲಿ ನಡೆದ ದಳಸನೂರು ಮತ್ತು ಮಾಸ್ತೇನಹಳ್ಲಿ ಪಂಚಾಯಿತಿ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ವಿಶೇಷವಾಗಿ ರೈತರ ಸಾಲಮನ್ನಾ ಯೋಜನೆ ರೂಪಿಸಿ ಭಾರತದಲ್ಲಿ ಯಾರೂ ಮಾಡದಂತ ಅದ್ಭುತವಾದ ಕಾರ್ಯಕ್ರಮವನ್ನು ರೈತರಿಗೆ ನೀಡಿರುತ್ತಾರೆ ಎಂದರು.ಭಗವಂತ ಕರುಣಿಸಿದ್ದು ವರುಣನ ಕೃಪೆಯಿಂದ ಕೋಲಾರ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ ನಮ್ಮ ತಾಲ್ಲೂಕಿನಲ್ಲೂ ಬಹುತೇಕ ಕೆರೆಗಳು ತುಂಬಿ ಕೋಡಿಹರಿಯುತ್ತಿದೆ ಎಂದ ಅವರು ರೈತ ಉತ್ತಮ ಬೆಳೆ ತಗೆದು ಸಂತೃಪ್ತ ಜೀವನ ನಡೆಸುವಂತಾಗಲಿ ಎಂದರು.ಮುಳಬಾಗಿಲು ತಾಲೂಕು ಜೆ ಡಿ ಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಮಾತನಾಡಿ ಮುಂಬರುವ ಜಿಲ್ಲಾಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳು ವಿಧಾನಸಭೆ…
Author: admin
ಅಧಿಕಾರದಲ್ಲಿದ್ದಾಗ ಎತ್ತಿನ ಹೊಳೆ ಪ್ರಾಜೆಕ್ಟ್ ಗೆ ಹಣ ಕೊಡದವರುಕೋಲಾರಕ್ಕೆ ಬಂದು ಕೆ.ಸಿ.ವ್ಯಾಲಿ ಯೋಜನೆಯನ್ನು ಕೊಳಚೆ ನೀರು ಅಂತಾರೆ11 ತಿಂಗಳ ಕಡಿಮೆ ಅವಧಿಯಲ್ಲಿ ಪೂರ್ಣವಾದ ಕೆ.ಸಿ.ವ್ಯಾಲಿ ಪ್ರಾಜೇಕ್ಟ್ಕೆ.ಸಿ.ವ್ಯಾಲಿ ಯೋಜನೆ ನೀರು ಗೃಹ ತ್ಯಾಜ್ಯದ್ದು ಶ್ರೀನಿವಾಸಪುರ:-ಕೆ.ಸಿ.ವ್ಯಾಲಿ ಯೋಜನೆಯಲ್ಲಿ ಹರಿಯುತ್ತಿರುವ ನೀರಲ್ಲಿ ಯಾವುದೇ ರಾಸಾಯಿನಿಕ ತ್ಯಾಜ್ಯ ಇಲ್ಲ ಅದರಲ್ಲಿ ಮನುಷ್ಯ ಉಪಯೋಗಿಸಿದ ಗೃಹ ತ್ಯಾಜ್ಯದ ನೀರು ಮಾತ್ರ ಹರಿಯುತ್ತಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಿಕರಣ ನೀಡಿದರು.ಅವರು ಇಂದು ಗುರುವಾರ ತಾಲೂಕಿನ ಕಸಬಾ ಹೋಬಳಿಯ ಗಾಂಡ್ಲಹಳ್ಳಿ ಗ್ರಾಮದ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದರು,ಹರಿಯುವ ನೀರು ಗಂಗಾಭವಾನಿಗೆ ಯಾವುದೇ ರಾಜಕೀಯ ಇಲ್ಲ ಯಾರು ಬೇಕಾದರೂ ಈ ನೀರನ್ನು ಉಪಯೋಗಿಸಬಹುದಾಗಿದೆ ನೀರಿಗ್ಯಾಕೆ ರಾಜಕೀಯ ಎಂದ ಅವರು, ಒಬ್ಬರೇನೊ ಕೊಚ್ಚೆ ನೀರು ಅಂತಾರೆ ಇನ್ನೋಬ್ಬ ರೈತರ ಹೆಸರಿನಲ್ಲಿ ಕೋರ್ಟಿಗೆ ಹೋಗಿ ತಡೆಯಾಙ್ಞೆ ತರ್ತಾರೆ, ಅಡ್ಡಿ ಅತಂಕಗಳು ಒಂದ ಎರಡ ಸಾಯಿಬಾಬನ ಅಶಿರ್ವಾದ ಬೇಡಿ ಆತನ ಅನುಗ್ರಹದಿಂದ ಸುಪ್ರೀಂ ಕೋರ್ಟನಲ್ಲಿ ತಡೇಯಾಙ್ಞೆ ತೆರವಾಗಿ ಇದ್ದ ಅಡ್ಡಿ ಅತಂಕಗಳು ಹೋಗಿ ಕಾಮಗಾರಿಗೆ…
ಆಂಧ್ರಕ್ಕೆ ಹರಿದು ಹೋಗುತ್ತಿರುವ ನೀರು. ಇಲ್ಲೇ ಉಳಿಸಿಕೊಳ್ಳುವ ಪ್ರಯತ್ನಕ್ಕೆ ರಮೇಶ್ ಕುಮಾರ್ ಯೋಜನೆ? ಬಿರಂಗಿ ನಾಲೆಗೆ ಅಡ್ದವಾಗಿ ಪ್ರಾಜೆಕ್ಟ್ ನಿರ್ಮಾಣಕ್ಕೆ ಚಿಂತನೆ. ಶ್ರೀನಿವಾಸಪುರ:ಹಲವು ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದ ತಾಲೂಕಿನ ಉತ್ತರ ಭಾಗದ ಬಹುತೇಕ ಕೆರೆಗಳು, ದೊಡ್ಡಹಳ್ಳಗಳು, ಕುಂಟೆಗಳು, ಚೆಕ್ ಡ್ಯಾಮ್ ಗಳು ಕೊಡಿ ಹೊಗುತ್ತಿವೆ ರಾಯಲ್ಪಾಡು,ನೆಲವಂಕಿ ಹೊಬಳಿ ಭಾಗದ ಎಲ್ಲಾ ಕೆರೆಗಳು ಕೊಡಿ ಬಿದ್ದಿವೆ ರಾಯಲ್ಪಾಡು ಹೋಬಳಿ ದೊಡ್ಡ ಕೆರೆ ಎನ್ನಲಾದ ಕೋಡಿಪಲ್ಲಿ ಕೆರೆ ಕಳೆದ ಮೂರು ದಿನಗಳ ಹಿಂದೆ ಕೊಡಿ ಹೊದರೆ ಅದೇ ಪ್ರದೇಶದ ಜಾಲಗುಂಡ್ಲಹಳ್ಳಿ ಪ್ರಾಜೆಕ್ಟ್ ಮೆಲ್ಪಟ್ಟದ ವರಿಗೂ ಹರಿದಿದೆ,ಮಲ್ಲೆಮೊರಿಪಲ್ಲಿ,ಕಂಬಾಲಪಲ್ಲಿ, ಲಕ್ಮಮ್ಮಕುಂಟ ಕೆರೆಗಳು ತುಂಬಿ ಹರಿದಿವೆ ಮಂಗಳವಾರ ಸುರಿದ ಮಳೆಯಿಂದಾಗಿ ಅಡ್ಡಗಲ್,ಅವಗಾನಪಲ್ಲಿ,ಬಾಲಿರೆಡ್ಡಿಪಲ್ಲಿ ಕೋಡಿ ಬಿದ್ದರೆ ಕೊಟೇಕಲ್ಲೂರು ತುಂಬಿದೆ.ಆಂಧ್ರ ಸೇರುತ್ತಿರುವ ಕೆರೆಗಳ ನೀರು! ನಮ್ಮ ಭಾಗದ ಹಳ್ಳಿಗಳ ಕೆರೆಗಳು ಹಾಗು ಚಿಂತಾಮಣಿ ತಾಲೂಕಿನ ಉತ್ತರ ಭಾಗದ ಕೆರೆಗಳು ಜೊತೆಗೆ ನಂದಿ ಬೆಟ್ಟದಲ್ಲಿ ಜನ್ಮತಾಳುವ ಪಾಗ್ನಿ ನಧಿ ತುಂಬಿಹರಿದರೆ ನೀರು ಹರಿದು ಹೊಗುವುದು ಆಂಧ್ರದ ಗಡಿಯಂಚಿನಲ್ಲಿರುವ ಬಿರಂಗಿ ನಾಲೆ ಮೂಲಕ…
ಶ್ರೀನಿವಾಸಪುರ:-ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಮೂಲಕ ಹಾದು ಹೋಗಲಿದ್ದ ವಿಜಯವಾಡ-ಬೆಂಗಳೂರು ನಾಲ್ಕು ಪಥ ಎಕ್ಸ್ ಪ್ರೆಸ್ ವೇ ರಸ್ತೆ ಮಾರ್ಗಕ್ಕೆ ಆಂಧ್ರದ ಸರ್ಕಾರ ಅಡ್ಡಗಾಲು ಹಾಕಿ ಮಾರ್ಗ ಬದಲಾವಣೆ ಮಾಡಿಸಿಕೊಂಡಿರುವುದರ ಕುರಿತಾಗಿ ಯುವಶಕ್ತಿ ನಡೆಸುತ್ತಿರುವ ಹೋರಾಟಕ್ಕೆ ಮಾಜಿ ಸ್ಪೀಕರ್ ಪ್ರಶಿಂಸೆ ವ್ಯಕ್ತಪಡಿಸಿದರು,ಯುವಶಕ್ತಿ ಪದಾಧಿಕಾರಿಗಳೊಂದಿಗೆ ಇಂದು ಬೆಂಗಳೂರಿನ ಶಾಸಕರ ಭವನದ ತಮ್ಮ ಕೊಠಡಿಯಲ್ಲಿ ಚರ್ಚೆ ನಡೆಸಿದ ಅವರು ಎಕ್ಸ್ ಪ್ರೆಸ್ ವೇ ರಸ್ತೆ ಮಾರ್ಗದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯುವಶಕ್ತಿ ನಡೆಸುತ್ತಿರುವ ಹೋರಾಟ ಗಮನಿಸಿದೆ ನೀವು ಸಾಮಜಿಕ ಕಾಳಜಿ ಇಟ್ಟುಕೊಂಡು ಮುಂದುವರೆದಿರುವುದು ಉತ್ತಮ ಬೆಳವಣಿಗೆ ಎಂದರು.ನಾಲ್ಕುಪಥ ಎಕ್ಸ್ ಪ್ರೆಸ್ ವೇ ರಸ್ತೆ ಮಾರ್ಗ ಬದಲಾವಣೆಗೆ ಅಂಧ್ರ ಸರ್ಕಾರ ಮತ್ತು ಕಂಟ್ರಾಕ್ಟರ್ ಗಳ ಚಿತಾವಣೆಯಿಂದ ನಡೆದಿರುವುದಾಗಿ ಅನುಮಾನ ವ್ಯಕ್ತಪಡಿಸಿದರು. ಮದನಪಲ್ಲಿ ಹಾಗು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಮೂಲಕ ಹಾದು ಹೋಗಬೇಕಿದ್ದ ನಾಲ್ಕುಪಥ ಎಕ್ಸ್ ಪ್ರೆಸ್ ವೇ ರಸ್ತೆ ಮಾರ್ಗವನ್ನು, ಅನಂತಪುರ ಮಾರ್ಗವಾಗಿ ಬದಲಾಯಿಸಿರುವುದಕ್ಕೆ ತೀವ್ರ ಬೆಸರ ವ್ಯಕ್ತಪಡಿಸಿದರು. ಡಿ.ಪಿ.ಆರ್. ಆಗಿರುವ ಹಳೇಯ ಮಾರ್ಗದ ರಸ್ತೆ ಅಭಿವೃದ್ದಿ ಮಾಡಿದರೆ ಆಂಧ್ರದ…
ಹಸರೀಕರಣಕ್ಕೆ NTR ಮಾಡಿದ ಕಾರ್ಯಕ್ರಮ ಪ್ರೇರಣೆಶ್ವೇತವರ್ಣ ಧಿರಿಸಿನಲ್ಲಿ ಆಂಧ್ರ ದಿ.ರಾಜಶೇಖರರೆಡ್ದಿ ಶೈಲಿಯಲ್ಲಿ ರಮೇಶಕುಮಾರ್ಎಂಬತ್ತರ ದಶಕದಲ್ಲಿ ತಿರುಮಲ ಬೆಟ್ಟದಲ್ಲಿ NTR ಕಾರ್ಯಕ್ರಮಅಂಧ್ರದ ಗಡಿಯಂಚಿನ ಗುಡ್ಡಕಾಡು ಪ್ರದೇಶದಲ್ಲಿ ಹಸರೀಕರಣಪ್ಯಾರ ಗ್ಲೈಡರ್ ಮೂಲಕ ಬಿಜದೂಂಡೆ ಹರಡಲಾಯಿತುಜನ ಸಂದಣಿ ನಡುವೆ ಅಸ್ವಸ್ಥರಾದ ರಮೇಶ್ ಕುಮಾರ್ ಶ್ರೀನಿವಾಸಪುರ:- ಇದುವರಿಗೂ ನಾವು ಪ್ರಕೃತಿಯ ಶಾಪದಲ್ಲಿ ಇದ್ದೀವಿ ಮುಂದಿನ ದಿನಗಳಲ್ಲಾದರೂ ಪ್ರಕೃತಿಯ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸೋಣ,ಅರಣ್ಯ ಇಲಾಖೆ ಹಾಗು ಜನರ ಮಧ್ಯೆ ಸೌಹರ್ದತೆ ಬೆಳೆಸಿಕೊಳ್ಳುವ ಮೂಲಕ ಪ್ರಕೃತಿಯ ರಕ್ಷಣೆ ಮಾಡೋಣ ಎಂದು ಶಾಸಕ ರಮೇಶ್ ಕುಮಾರ್ ಹೇಳಿದರು.ಶ್ರೀನಿವಾಸಪುರ ತಾಲ್ಲೂಕಿನ ಸುಣಕಲ್ಲು ಅರಣ್ಯ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಬೀಜದುಂಡೆ ಬಿತ್ತನೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ತಾಲೂಕಿನ 9000 ಎಕರೆ ಪ್ರದೇಶದಲ್ಲಿ 1500 ಕೆಜಿ ಬೀಜದುಂಡೆಗಳನ್ನು ಹರಡುವ ಗುರಿ ಹೊಂದಿದ್ದು. ಎನ್.ಟಿ.ರಾಮರಾವ್ 1985 ರಲ್ಲಿ ಆಂಧ್ರ ಮುಖ್ಯಮಂತ್ರಿಯಾಗಿದ್ದಾಗ ತಿರುಮಲ ಬೆಟ್ಟದ ಮೇಲೆ ಬೀಜದ ಹುಂಡೆಗಳನ್ನು ಹರಡುವುದರ ಮೂಲಕ ಅರಣ್ಯೀಕರಣಕ್ಕೆ ಚಾಲನೆ ನೀಡಿ ಸಪ್ತಬೆಟ್ಟಗಳನ್ನು ಸಸ್ಯಶ್ಯಾಮಲ ಮಾಡಿದರು ಆ ಕಾರ್ಯಕ್ರಮವೇ ನನಗೆ ಪ್ರೇರಣೆಯಾಗಿದೆ ಇದರ ಪರಿಣಾಮ…
ಶ್ರೀನಿವಾಸಪುರ:-ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಕ್ಷರಶಃ ಉಗ್ರ ಸ್ವರೂಪಿಯಾಗಿ ಕಂದಾಯ ಇಲಾಖೆ ನೌಕರರನ್ನು ಅಧಿಕಾರಿಗಳನ್ನು ಹಿಗ್ಗಾ ಮುಗ್ಗಾ ಅವಾಚ್ಯ ಶಬ್ದಗಳಿಂದ ಜಾಡಿಸಿದ್ದಾರೆ.ಶ್ರೀನಿವಾಸಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ರಮೇಶ್ ಕುಮಾರ್,ತಹಶೀಲ್ದಾರ್ ಶ್ರೀನಿವಾಸ್ ಹಾಗು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಸಮ್ಮುಖದಲ್ಲಿ ಡಿಸಿಸಿ ಬ್ಯಾಂಕ್ ಸಾಲ ವಿತರಣೆ ಕುರಿತಾಗಿ ಚರ್ಚಿಸಲು ಸಹಕಾರ ಸಂಘಗಳ ಕಾರ್ಯದರ್ಶಿಗಳ ಜೊತೆಗಿನ ಸಭೆಯಲ್ಲಿ ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆಯಲು ರೆವೆನ್ಯೂ ದಾಖಲೆಗಳನ್ನು ನೀಡಬೇಕಾದ ಅವಶ್ಯಕತೆ ಇರುತ್ತದೆ ದಾಖಲೆಗೆ ತಹಶೀಲ್ದಾರ್ ಕಚೇರಿಯಲ್ಲಿ ನಿರ್ಧಿಷ್ಟ ದಾಖಲೆ ನೀಡಲು ಕಂದಾಯ ಇಲಾಖೆ ನೌಕರರು ತಿಂಗಳಾನುಗಟ್ಟಲೆ ಕಾಯಿಸುತ್ತಾರೆ ಮತ್ತೆ ಅಧಿಕಾರಿಗಳು ದಾಖಲೆ ನೀಡಲು ಸತಾಯಿಸುತ್ತಾರೆ ಎನ್ನುವ ಆರೋಪಕ್ಕೆ ಮಾಜಿಸ್ಪೀಕರ್ ಸಭೆಯಲ್ಲಿಯೇ ರೌದ್ರಾವತಾರ ತಾಳಿಯೇ ಬಿಟ್ಟಿದ್ದಾರೆ. ನೇರವಾಗಿ ಕಂದಾಯ ಇಲಾಖೆ ನೌಕರರ ವಿರಿದ್ದ ತಮ್ಮ ಬಾಯಿ ಹರಿಬಿಟ್ಟಿದ್ದಾರೆ ಬೈಗುಳದ ಸರಮಾಲೆಯನ್ನೇ ಹೊರಹಾಕಿದ್ದಾರೆ, ರೈತನ ಕಷ್ಟಕ್ಕೆ ಆಗದಿದ್ದರೆ ಅವರಿಗೆ ಮನುಷ್ಯತ್ವನೆ ಇಲ್ವಾ ಎಂದು ಏರು ಧನಿಯಲ್ಲಿ ಕೂಗಾಡಿ ಕಂದಾಯ ಇಲಾಖೆಯವರ ಜನ್ಮ ಜಾಲಾಡಿದ್ದಾರೆ, ನೀವು ದಾಖಲೆ ಕೊಡುವುದೇ…
ಕನ್ನಡ-ತೆಲಗು ಭಾಷೆಯಲ್ಲಿ ಸಿನಿಮಾ ನಿರ್ಮಾಣರಾಯಲಸಿಮೆ ಭಾಗದಲ್ಲಿ ನಡೆದಂತ ನೈಜ ಘಟನೆ ಆದಾರಿತಶ್ರೀನಿವಾಸಪುರದ ರಾಜಿವ್ ಕೃಷ್ಣ॒॒ @ಆರ್.ಕೆ. ಗಾಂಧಿ ನಿರ್ದೇಶನಬಹುಭಾಷೆ ನಟ ಪ್ರಕಾಶ್ ರಾಜ್ ಶೀರ್ಷಿಕೆ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಹೈದರಾಬಾದ್: ಶ್ರೀನಿವಾಸಪುರದ ರಾಜಿವ್ ಕೃಷ್ಣ॒॒ @ಆರ್.ಕೆ. ಗಾಂಧಿ ನಿರ್ದೇಶನದ ತೆಲಗು ಚಿತ್ರ ರುದ್ರಾಕ್ಷಪುರಂ ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ಅನ್ನು ದಕ್ಷಿಣ ಬಾರತದ ಖ್ಯಾತ ನಟ ಪ್ರಕಾಶ್ ರಾಜ್ ಅನಾವರಣ ಮಾಡಿದರು.ಕನ್ನಡ ಮತ್ತು ತೆಲಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಮಲ್ಟಿ ಸ್ಟಾರರ್ ಸಿನಿಮಾದಲ್ಲಿ ಬ್ಯಾಟ್ ಲವರ್ ತೆಲಗು ಸಿನಿಮಾದಲ್ಲಿ ಹಿರೊ ಆಗಿ ಮಿಂಚಿದ್ದ, ಮಣಿಸಾಯಿತೆಜ್, ಪವನ್ ವರ್ಮ ಇವರೊಂದಿಗೆ ಬಾಗೇಪಲ್ಲಿಯ ಹುಲಿಬೇಲೆ ರಾಜೇಶ್ ಮತ್ತು ನಾಯಕಿಯರಾಗಿ ಮೈಸೂರಿನ ವೈಡೂರ್ಯ,ಬಾಗೇಪಲ್ಲಿಯ ವರ್ಷಿತ ಹಾಗು ಕನ್ನಡದ ಉಗ್ರಾವತಾರ ಚಿತ್ರದಲ್ಲಿ ನಟಿಸಿದ್ದ ಪೂಜಾ ನಟಿಸುತ್ತಿದ್ದಾರೆ.ಜೂನಿಯರ್ ಎನ್.ಟಿ.ಅರ್. ಹಾಗು ರಾಜಮೌಳಿ ಕಾಂಬಿನೇಷನ್ ಸಿನಿಮಾಗಳಿಗೆ ಪಿ.ಆರ್.ಒ PRO ಆಗಿ ಕಾರ್ಯನಿರ್ವಿಸಿದ್ದ ವೀರಬಾಬು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾವನ್ನು ,ಟೆನ್ ಟ್ರೀಸ್ ಫಿಲ್ಮ್ ಪ್ರೊಡಕ್ಷನ್ ಹೌಸ್ ಬ್ಯಾನರ್ ನಲ್ಲಿ ಕನಕದುರ್ಗರಾಜು…
ಶ್ರೀನಿವಾಸಪುರ: ರೈತ ಸಂಘದ ಇತಿಹಾಸ ತಿಳಿಯದೆ ಕೋಲಾರದ ಸಂಸದ ಮುನಿಸ್ವಾಮಿ ರೈತ ಹೋರಾಟದ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ತಮ್ಮ ಹುದ್ದೆಯ ಗೌರವ ತಾವೆ ಕಳೆದುಕೊಂಡಿದ್ದಾರೆ ಎಂದು ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ನಂಬಿಹಳ್ಳಿಶ್ರೀರಾಮರೆಡ್ಡಿ ಆರೋಪಿಸಿದ್ದಾರೆ.ಇಂದು ತಾಲೂಕು ರೈತ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಂಸದ ಮುನಿಸ್ವಾಮಿ ರೈತರು ಮತ್ತು ರೈತ ಸಂಘಟನೆ,ಹೋರಾಟಗಳ ಕುರಿತಾಗಿ ಅಧ್ಯಯನ ನಡೆಸಿ ನಂತರ ಹಸಿರು ಶಾಲು ಕುರಿತಾಗಿ ಮಾತನಾಡಿ ಎಂದರು.ಎಂಟು ದಶಕಗಳ ಇತಿಹಾಸ ಇರುವಂತ ರೈತ ಹೋರಾಟ ಇವರಿಗೆ ಕೇವಲವಾಗಿ ಕಾಣಿಸುವುದು ಎನ್ನುವುದಾದರೆ ರಿಗೆ ನೀವು ರೈತಾಪಿ ಕುಟುಂಬದ ಸಂಪರ್ಕ ಇಲ್ಲವೇ ನಿಮ್ಗೆ ರೈತರ ಕಷ್ಟ ನಷ್ಟ ಸುಖ ದುಖಃ ತಿಳಿದಿಲ್ಲವೆ ಈ ಎಲ್ಲವೂ ತಿಳಿಯದೆ ರೈತಾಪಿ ಕುಟುಂಬಗಳನ್ನು ಜಪ್ತಿ ಮಾಡುವಾಗ ಪ್ರೊಫೆಸರ್ ನಂಜುಂಡಸ್ವಾಮಿ ಹಸಿರು ಶಾಲು ಹೇಗಲೇರಿಸಿಕೊಂಡು ಬಂದು ರೈತರ ಪ್ರಾಣ ಮಾನ ಉಳಿಸಿದ ಮಹಾನುಭಾವರ ತಿಳಿದುಕೊಳ್ಳಬೇಕಾದ ಅವಶ್ಯಕತೆ ಸಂಸದ ಮುನಿಸ್ವಾಮಿ ಅವರಿಗೆ ಇದೆ ಎಂದರು. ಹಸಿರು…
ಶ್ರೀನಿವಾಸಪುರ:ಅಹಿಂದ ವರ್ಗಗಳ ಸಮಾಜದವರು ಸರ್ಕಾರದ ಹಿಂದುಳಿದ ಸಮಾಜಗಳಿಗೆ ನೀಡುವಂತ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಅಭಿವೃದ್ದಿ ಯಾಗಬೇಕು ಎಂದು ಕೋಲಾರ ಜಿಲ್ಲಾ ಅಹಿಂದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಪ್ರಸಾದ್ ಬಾಬು ತಿಳಿಸಿದರು.ಶ್ರೀನಿವಾಸಪುರದ ಕನಕಭವನದಲ್ಲಿ ತಾಲ್ಲೂಕು ಅಹಿಂದ ಒಕ್ಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಜನರಿಗೆ ಸರ್ಕಾರದಿಂದ ಬರುವಂತ ಸೌಲಭ್ಯಗಳನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕಿದೆ. ಹಿಂದುಳಿದ ಸಮಾಜಗಳ ಕಟ್ಟೆಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ಸಿಗಬೇಕೆಂಬುದು ಒಕ್ಕೊಟ್ಟದ ಉದ್ದೇಶವಾಗಿದೆ ಎಂದರು.ಜಿಲ್ಲೆಯಲ್ಲಿ ಗಟ್ಟಿತಳಪಾಯದಿಂದ ಬೆಳೆದಿರುವ ಒಕ್ಕೂಟವನ್ನು ತಾಲೂಕಿನಲ್ಲೂ ಬಲಿಷ್ಠವಾಗಿ ಬೆಳೆಸುವ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ದಲಿತ ಮತ್ತು ಅಹಿಂದ ವರ್ಗಗಳು ಈ ದೇಶದ ಬೆನ್ನೆಲಬು ರಾಜಕೀಯವಾಗಿ ನಮ್ಮ ಸಮಾಜಗಳು ಪ್ರಬುದ್ದರಾಗಬೇಕು ಇದಕ್ಕಾಗಿ ಒಗ್ಗಟನ್ನು ಕಾಪಾಡಿಕೊಂಡು ಸಕ್ರಿಯವಾಗಿರಬೇಕು ಮುಂದಿನ ತಾಲ್ಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆ ಬರುತ್ತಿದ್ದು, ನಮ್ಮ ಅಹಿಂದ ವರ್ಗಗಳ ಸಮಾಜಗಳು ಸಿದ್ದರಾಗಬೇಕೆಂದು ಹೇಳಿದರು.ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅಹಿಂದ ಸಮಾಜಗಳ ಸಮುದಾಯಭವನ ನಿರ್ಮಾಣವಾಗಬೇಕು ೧ ವರ್ಷದ ಒಳಗೆ ಜಾಗವನ್ನು ಗುರುತಿಸುವುದರ ಜೊತೆಗೆ ಸುಜ್ಜಿತ ಭವನ ನಿರ್ಮಾಣಕ್ಕೆ ಎಲ್ಲರೂ…
ಎಂದಿನಂತೆ ಒಡಾಡಿದ ಕೆ.ಎಸ್.ಅರ್.ಟಿ.ಸಿಅಂಗಡಿ ಮುಂಗಟ್ಟುಗಳಿಗೆ ಮಾತ್ರ ಬಂದ್ ಬಿಸಿಪ್ಯಾಪೂಲರ್ ಫ್ರಂಟ್ ಪ್ರತಿಭಟನೆಗೆ ಸಾತ್ ಶ್ರೀನಿವಾಸಪುರ: ಭಾರತ್ ಬಂದ್ ಬೆಂಬಲಿಸಿ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರೆ,ಕೆ.ಎಸ್.ಅರ್.ಟಿ.ಸಿ ವಾಹನಗಳು ಎಂದಿನಂತೆ ಒಡಾಡುತ್ತಿದ್ದವು,ಸರ್ಕಾರಿ ಕಚೇರಿಗಳಲ್ಲಿ ಬಹುತೇಕ ಹಾಜರಾತಿ ಕಡಿಮೆ ಇತ್ತು, ಬಂದ್ ಬೆಂಬಲಿಸಿ ಕಾರ್ಮಿಕ ಸಂಘಟನೆ ಕಾರ್ಯಕರ್ತರು,ಯುವ ಕಾಂಗ್ರೆಸ್ ಕಾರ್ಯಕರ್ತರು,ರೈತ ಸಂಘಟನೆ ಮುಖಂಡರು,ಅಂಗನವಾಡಿ ಕಾರ್ಯಕರ್ತರು,ಪ್ಯಾಪೂಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ದೊಡ್ಡ ಸಖ್ಯೆಯಲ್ಲಿ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ಹಾಗು ಪ್ರಧಾನಿ ವಿರುದ್ದ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ಮಾಡಿದರು.ಆಜಾದ್ ರಸ್ತೆಯಲ್ಲಿನ ಮಾಂಸದ ಅಂಗಡಿಗಳು ಬಾಗಿಲು ಮುಚ್ಚಿ ವ್ಯಾಪಾರ ನಡೆಸುತ್ತಿದ್ದರು.ರಸ್ತೆಗಿಳಿದ ಕೆ.ಎಸ್.ಆರ್.ಟಿ.ಸಿ ಬಸ್ಸುಗಳನ್ನು ಪ್ರತಿಭಟನೆಕಾರರು ತಡೆದರಾದರೂ ಪೋಲಿಸರು ಮದ್ಯಪ್ರವೇಶಿಸಿ ಬಸ್ ಒಡಾಟಕ್ಕೆ ಅನವು ಮಾಡಿಕೊಟ್ಟರು.ಬಸ್ ನಿಲ್ದಾಣದ ಬಳಿ ವಾಹನ ತಡೆದ ಪ್ರತಿಭಟನೆ ಕಾರರು ರಸ್ತೆ ತಡೆ ಮಾಡಲು ಮುಂದಾದಾಗ ಪ್ರತಿಭಟನೆ ಕಾರರ ಮತ್ತು ಪೋಲಿಸರ ನಡುವೆ ಮಾತಿನ ಚಕಮುಖಿ ನಡೆಯಿತು. ವಕೀಲ ಶೀವಣ್ಣ ಬಂದ್ ಬೆಂಬಲಿಸಿ ಪ್ರಗತಿಪರ ಚಿಂತಕ ಹಾಗು ದಲಿತ ಸಂಘಟನೆ ಕಾರ್ಯಕರ್ತರ ಜೊತೆಗೂಡಿ…