Author: admin

ನ್ಯೂಜ್ ಡೆಸ್ಕ್:ತಿರುಮಲದಲ್ಲಿ ಭಕ್ತರ ಜನಜಂಗುಳಿ ಮುಂದುವರಿದಿದ್ದು, ದರುಶನ ಪಡೆಯಲು ನೂಕುನುಗ್ಗಲು ಉಂಟಾಗಿದೆ,9 ಕ್ಕೂ ಹೆಚ್ಚು ಕಂಪಾರ್ಟ್‌ಮೆಂಟ್‌ಗಳಲ್ಲಿ ದರುಶನಕ್ಕಾಗಿ ಭಕ್ತರು ಕಾದು ಕುಳತಿದ್ದು, ದೇವರ ದರ್ಶನಕ್ಕೆ 7 ರಿಂದ 8 ಗಂಟೆ ಸಮಯ ಆಗುತ್ತಿದೆ ದಿನಾಂಕ 26 ರಂದು ಬುಧವಾರ 71,689 ಭಕ್ತರು ತಿರುಮಲವಾಸಿ ಶ್ರೀವೆಂಕಟೇಶ್ವರ ದೇವರ ದರ್ಶನ ಪಡೆದಿರುತ್ತಾರೆ. ಬುಧವಾರ ಶ್ರೀವಾರಿ ಹುಂಡಿ ಆದಾಯ 4.42 ಕೋಟಿ ರೂಪಾಯಿ ಎಂದು ತಿರುಮಲ ತಿರುಪತಿ ದೇವಸ್ಥಾನಂ ಬಹಿರಂಗಪಡಿಸಿದೆ. ಸುಮಾರು 29 ಸಾವಿರ ಭಕ್ತರು ಸ್ವಾಮಿಗೆ ತಲೆ ಕೂದಲನ್ನು ಸಮರ್ಪಿಸಿದ್ದಾರಂತೆ.

Read More

ನ್ಯೂಜ್ ಡೆಸ್ಕ್: ಸಾಲ ಮಾಡಿ ಚುನಾವಣೆಯಲ್ಲಿ ಗೆದ್ದ ಯುವಕನೊಬ್ಬ ಚುನಾವಣೆಗಾಗಿ ಮಾಡಿದ ಸಾಲ ತಿರಿಸಲಾಗದೆ ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ಯುವ ರಾಜಕಾರಣಿ ಜನ ಪ್ರತಿನಿಧಿಯಾಗಿ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದು ಸಾಲ ಮಾಡಿ ಚುನಾವಣೆಯಲ್ಲಿ ಹಣ ಖರ್ಚು ಮಾಡಿ ಸಾಲ ತಿರಿಸಲಿಕ್ಕೆ ಸಾದ್ಯವಾಗದೆ ಆತ್ಮಹತ್ಯೆ ಶರಣಾಗಿದ್ದಾನೆ! ತೆಲಂಗಾಣ ರಾಜ್ಯದ ಜಗಿತ್ಯಾಲ ಜಿಲ್ಲೆಯ ಇಬ್ರಾಹಿಂಪಟ್ಟಣದ ಮೂಲರಾಂಪುರದಲ್ಲಿ ಈ ಹಿಂದೆ ಎರಡು ಬಾರಿ ಎಂಪಿಟಿಸಿ(ಗ್ರಾಮ ಪಂಚಾಯಿತಿ ಸದಸ್ಯ) ಗಾಗಿ ಒಮ್ಮೆ ಸರಪಂಚ್ (ಗ್ರಾಮ ಪಂಚಾತಿಯಿ ಅಧ್ಯಕ್ಷ) ಸ್ಥಾನಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತವನು ಹಿಂದೆ ಸರಿಯದೆ ಸರಪಂಚ್ ಚುನಾವಣೆಯಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆ ನಡೆಸಿ ಛಲಬಿಡದ ತ್ರಿವಿಕ್ರಮನಂತೆ ಸರ್ಪಂಚ್ ಚುನಾವಣೆಯಲ್ಲಿ ಸ್ಪರ್ದಿಸಿ ಮೂಲರಾಂಪುರ ಸರಪಂಚ್ ಆಗಿ ಗೆದ್ದ ಯುವಕ ಸಂಚು ಸಂತೋಷ್ ಚುನಾವಣಾ ವೆಚ್ಚಕ್ಕಾಗಿ ಸಿಕ್ಕ ಸಿಕ್ಕ ಕಡೆ ಸಾಲ ಮಾಡಿಕೊಂಡಿದ್ದ ಸಾಲದ ಮೊತ್ತ 30 ಲಕ್ಷ ರೂ ತಿರಿಸಲು ಸಾಧ್ಯವಾಗದೆ ದಿಕ್ಕುತೊಚದಂತಾಗಿ ತನ್ನ ಜಮೀನಿನಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ…

Read More

ಶ್ರೀನಿವಾಸಪುರ: ಅಪರಿಚಿತ ವಾಹನ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮೂವರಲ್ಲಿ ಇಬ್ಬರು ಸಾವನಪ್ಪಿ ಒರ್ವ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶ್ರೀನಿವಾಸಪುರ-ಕೋಲಾರ ರಸ್ತೆಯ ಶ್ರೀನಿವಾಸಪುರ ತಾಲ್ಲೂಕಿನ ಹೂವಳ್ಳಿ ಗೇಟ್ ನ ಬಳಿ ಶನಿವಾರ ತಡಸಂಜೆ ನಡೆದಿರುತ್ತದೆ.ಹೂವಳ್ಳಿ ಗ್ರಾಮದ ಮೂವರು ಒಂದೇ ದ್ವೀಚಕ್ರ ವಾಹದಲ್ಲಿ ಜೊನ್ನಪಲ್ಲಿ ಗ್ರಾಮದಲ್ಲಿನ ತಿಥಿ ಕಾರ್ಯಕ್ಕೆ ಹೋಗುತ್ತಿರುವಾಗ ಅಪಘಾತ ನಡೆದಿದ್ದು ಅಪಘಾತದಲ್ಲಿ ಹೂವಳ್ಳಿ ಗ್ರಾಮದ ರತ್ನಮ್ಮ (42) ಮತ್ತು ಆಕೆಯ ಮೈದುನ ವೆಂಕಟರವಣ (47) ಸ್ಥಳದಲ್ಲಿಯೇ ಮೃತಪಟ್ಟಿದ್ದು ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ರತ್ನಮ್ಮನ ಮಗ ಸುರೇಶ್ ಪ್ರಾಣಾಪಾಯದಿಂದ ಪಾರಾಗಿರುತ್ತಾನೆ.ಸ್ಥಳೀಯರ ಸಹಾಯದಿಂದ ಗಾಯಾಳು ಸುರೇಶ್ ನನ್ನು ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ.ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಠಾಣಾಧಿಕಾರಿ ನಾರಯಣಸ್ವಾಮಿ ಭೇಟಿ ನೀಡಿ ಪರಶೀಲಿಸಿರುತ್ತಾರೆ.

Read More

ಶ್ರೀನಿವಾಸಪುರ:ಸಾರ್ವಜನಿಕ ಶಿಕ್ಷಣ ಇಲಾಖೆ 2012-13 ಹಾಗೂ 2014-15 ನೇ ಸಾಲಿನಲ್ಲಿ ನಡೆದ ಸಹ ಶಿಕ್ಷಕರ ನೇಮಕಾತಿಯಲ್ಲಿ ವಾಮಮಾರ್ಗದಲ್ಲಿ ಹುದ್ದೆ ಪಡೆದಿದ್ದ ಶಿಕ್ಷಕರ ನೇಮಕಾತಿಯ ಅಕ್ರಮ ಪ್ರಕರಣದ ಬೆನ್ನು ಹತ್ತಿರುವ ಸಿಐಡಿ ಅಧಿಕಾರಿಗಳು ಕೋಲಾರ ಜಿಲ್ಲೆಯಲ್ಲೂ ಕಾರ್ಯಚರಣೆ ನಡೆಸಿ ಜಿಲ್ಲಾಲ್ಲಾಧ್ಯಂತ ಏಕಕಾಲಕ್ಕೆ ದಾಳಿ ನಡೆಸಿ ಅಕ್ರಮವಾಗಿ ನೇಮಕಾತಿ ಆಗಿರುವ 24 ಫೇಕ್ ಸಹ ಶಿಕ್ಷಕರನ್ನು ಬಂಧಿಸಿದ್ದಾರೆ.ಬಂದಿತ 24 ಸಹ ಶಿಕ್ಷಕರಲ್ಲಿ ಕೆ.ಜಿ.ಎಫ್. ಮತ್ತು ಬಂಗಾರಪೇಟೆಯಲ್ಲಿ 12, ಮುಳಬಾಗಿಲಿನಲ್ಲಿ 6 ಮಾಲೂರಿನಲ್ಲಿ 2 ಮತ್ತು ಶ್ರೀನಿವಾಸಪುರ ತಾಲೂಕಿನಲ್ಲಿ 6 ಮಂದಿ ಶಿಕ್ಷಕರಿದ್ದು ಇವರೆನೆಲ್ಲ ಏಕಕಾಲಕ್ಕೆ ಬಂಧಿಸಿದ್ದಾರೆ . ಶ್ರೀನಿವಾಸಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಫೇಕ್ ಶಿಕ್ಷಕರು ಇವರೆ! ಶ್ರೀನಿವಾಸಪುರ ತಾಲೂಕಿನ 6 ಶಿಕ್ಷಕರ ವಿವರ ಹೀಗಿದೆ ಕಲ್ಲೂರಿನ ಆದರ್ಶ ಶಾಲೆಯ ಕನ್ನಡ ಶಿಕ್ಷಕ ಬಸವರಾಜ್ ಬಿರಾದಾರ ಹಾಗು ಹಿಂದಿ ಶಿಕ್ಷಕಿ ಎ.ರೂಪ, ಪುಲಗೂರುಕೋಟೆಯ ಸರ್ಕಾರಿ ಹೈಸ್ಕೂಲಿನ ಇಂಗ್ಲಿಷ್ ಶಿಕ್ಷಕ ಪ್ರಭುಬಿರಾದಾರ,ರಾಯಲ್ ಪಾಡು ಸರ್ಕಾರಿ ಹೈಸ್ಕೂಲಿನ ದೈಹಿಕ ಶಿಕ್ಷಕ ವಿರೇಶ್ ಕೋಮನೂರು,ಬೈರಗಾನಹಳ್ಳಿ ಸರ್ಕಾರಿ ಹೈಸ್ಕೂಲಿನ ಕನ್ನಡ ಶಿಕ್ಷಕ ಚಂದ್ರಶೇಖರ್…

Read More

ಶ್ರೀನಿವಾಸಪುರ:ರಸ್ತೆ ನೀರು ವಿದ್ಯತ್ ನಂತಹ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿ ಅನುಷ್ಟಾನ ಆದಾಗ ಮಾತ್ರ ಅಭಿವೃದ್ದಿ ಅನ್ನುವುದು ಪೂರ್ಣ ಪ್ರಮಾಣದಲ್ಲಿ ಸಾದ್ಯವಾಗುತ್ತದೆ ಎಂದು ಗುಂಜೂರುಶ್ರೀನಿವಾಸರೆಡ್ದಿ ಹೇಳಿದರು.ಅವರ ಅಭಿಮಾನಿಗಳು ಲಕ್ಷ್ಮೀಪುರದಲ್ಲಿ ಆಯೋಜಿಸಿದ್ದ ವಿವಿಧ ಪಕ್ಷಗಳ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದಲ್ಲಿ ತಮ್ಮ ಬಣಕ್ಕೆ ಸೇರ್ಪಡೆಯಾದವರನ್ನು ಸ್ವಾಗತಿಸಿ ಮಾತನಾಡಿದರು. ತಾಲೂಕಿನ ಲಕ್ಷ್ಮೀಪುರ ಭಾಗದ ಪ್ರಮುಖ ಕಾಂಗ್ರೆಸ್ ಮುಖಂಡ ಅಬ್ಬಣ್ಣ ನೇತೃತ್ವದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಈ ಸಂದರ್ಭದಲ್ಲಿ ಸೇರ್ಪಡೆಯಾದರು.ಗುಂಜೂರುಶ್ರೀನಿವಾಸರೆಡ್ದಿ ಮಾತನಾಡಿ ತಾಲೂಕಿನಲ್ಲಿ ಕಳೆದ ನಾಲ್ಕು ದಶಕಗಳಿಂದ ಜನರ ಭಾವನೆಗಳನ್ನು ಧಿಕ್ಕರಿಸಿ ಯಾಮರಿಸಿ ರಾಜಕೀಯ ಮಾಡಿಕೊಂಡು ಬಂದಿರುವಂತವರ ರಾಜಕೀಯ ಜೀವನಕ್ಕೆ ಅಂತ್ಯದ ದಿನಗಳು ಹತ್ತಿರ ಬಂದಿದೆ ಎಂದರು.ನಾನು ಇಲ್ಲಿಗೆ ಓಟಿನ ರಾಜಕೀಯ ಮಾಡಲು ಬಂದಿಲ್ಲ ಯಾವುದೇ ಕುಟುಂಬ,ಜಾತಿ ಜನಾಂಗವನ್ನು ವಿಭಾಗಿಸಲು ಅಥಾವ ಒಡೆಯಲು ಬಂದಿಲ್ಲ ಜನ ಸೇವೆಯನ್ನೆ ಗುರಿಯಾಗಿಸಿಕೊಂಡು ಬಂದಿರುವ ನನಗೆ ಯಾವುದೆ ತಂತ್ರ ಕುತಂತ್ರಗಳನ್ನು ಮಾಡಲು ಬರುವುದಿಲ್ಲ,ಇಲ್ಲಿನ ಜನರ ಭಾವನೆಗಳನ್ನು ಗೌರವಿಸಿ ಯುವಕರ ಜೀವನಧಾರಕ್ಕೆ ಅನಕೂಲವಾಗುವಂತೆ ಸಾಮಾಜಿಕ ಹಾಗು ಆರ್ಥಿಕ ಬದ್ರತೆ ಒದಗಿಸಲು ಕೈಗಾರಿಕೆಗಳನ್ನು ತರುವಂತ ಪ್ರಾಮಾಣಿಕವಾದ…

Read More

ನ್ಯೂಜ್ ಡೆಸ್ಕ್: ಕಳೆದ ಎರಡೂವರೆ ವರ್ಷಗಳಿಂದ ಕೊರೊನಾ ಸೋಂಕು ಇಡಿ ಪ್ರಪಂಚವನ್ನು ಬೆಂಬಿಡದೆ ಕಾಡುತ್ತಿದೆ. ಮೊದಲನೆ ಅಲೆ, ಎರಡನೇ ಅಲೆ ಇದರ ಜೊತೆಗೆ ಹೊಸ ಹೊಸ ರೂಪಾಂತರಗಳಲ್ಲಿ ಜನರನ್ನು ಇನ್ನಿಲ್ಲದೆ ಕಾಡುತ್ತಿದೆ. ಇದಕ್ಕೆ ಅಂತ್ಯವಿಲ್ಲದಾಗಿದೆ. ಅಪಾಯಕಾರಿ ಮತ್ತು ಮಾರಣಾಂತಿಕ ಡೆಲ್ಟಾ ರೂಪಾಂತರಕ್ಕಿಂತ ಭಿನ್ನವಾಗಿ, ಒಮಿಕ್ರಾನ್ ಕೊರೊನಾವೈರಸ್ ಸೋಂಕಿನ ಸೌಮ್ಯ ಪ್ರಕರಣಗಳಿಗೆ ಕಾರಣವಾಗುತ್ತದೆ ಮತ್ತು ಸಾಮಾನ್ಯ ಶೀತ ಅಥವಾ ಜ್ವರದಂತಹ ಇತರ ಉಸಿರಾಟದ ಸೋಂಕುಗಳನ್ನು ಹೋಲುವಂತಿದೆ ಎಂದು ತಜ್ಙರ ಹೇಳುತ್ತಾರೆ.ಕೊರೊನಾವೈರಸ್ (Coronavirus) ಭಾರತದಲ್ಲೂ ಕಡಿಮೆಯಾಗುತ್ತಿಲ್ಲ,ಹೊಸ-ಹೊಸ ರೂಪಾಂತರದಲ್ಲಿ ಮತ್ತೆ ಮತ್ತೆ ಕೊವಿಡ್ ಸೋಂಕು (COVID-19) ವಕ್ಕರಿಸುತ್ತಿದೆ. ಒಮಿಕ್ರಾನ್ ಮತ್ತು ಕೊರೊನಾ ಸ್ಥಿತಿಯ ಕುರಿತಂತೆ ಭಾರತ ಸರ್ಕಾರದ ಅರೋಗ್ಯ ಸಚಿವ ಡಾ. ಮಾನ್ಸುಖ್ ಮಾಂಡವಿಯಾ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದು, ಹೊಸ ರೂಪದ ಒಮಿಕ್ರಾನ್ ರೂಪಾಂತರ (Omicron Variant) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ದೇಶಾದ್ಯಂತ ಮಾಸ್ಕ್‌ (Face Mask) ಧರಿಸುವುದನ್ನು ಕಡ್ಡಾಯಗೊಳಿಸುವುದು ಅಗತ್ಯವಾಗಿದೆ ಎಂದು ಆರೋಗ್ಯ ಸಚಿವಾಲಯ ನಿರ್ಧರಿಸಿರುವುದಾಗಿ ಹೇಳಲಾಗಿದೆ.ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು…

Read More

ನ್ಯೂಜ್ ಡೆಸ್ಕ್: ಇದೇನು ರಜನಿಕಾಂತ್ ಸಿನಿಮಾ ಅಲ್ಲ ಇದದೊಂದು ನಿಜ ಘಟನೆ,ಮೀನು ಮಾರಾಟಗಾರ ವ್ಯಕ್ತಿಯೊಬ್ಬ ಮನೆ ಸಾಲ ತಿರಿಸಲಾಗದೆ ಮನೆಗೆ ಜಪ್ತಿ ನೋಟಿಸ್ ಬಂದಿತ್ತು ಈದೇ ಸಂದರ್ಭದಲ್ಲಿ 70 ಲಕ್ಷ ಲಾಟರಿ ಹೊಡೆದು ವ್ಯಕ್ತಿ ಮನೆಯ ಸಾಲದ ಸುಳಿಯಿಂದ ಬಚಾವಾದ ಪರಕರಣ ಕೆರಳದಲ್ಲಿ ನಡೆದಿದೆ.ಅಕ್ಟೋಬರ್ 12 ರ ಬುಧವಾರ, ಕೇರಳದ ಕೊಲ್ಲಂ ಜಿಲ್ಲೆಯ ಮಿನಗಪಲ್ಲಿಯ ನಿಷ್ಕಪಟ ಪೂಕುಂಜು ಅವರ ಜೀವನದಲ್ಲಿ ಅತ್ಯಂತ ಪವಾಡಸದೃಶ್ಯವಾದ ಘಟನೆ ನಡೆದಿದೆ. ಎಂಟು ವರ್ಷಗಳ ಹಿಂದೆ ಪೂಕುಂಜು ಮನೆ ಕಟ್ಟಲು ಕಾರ್ಪೊರೇಷನ್ ಬ್ಯಾಂಕ್ ನಲ್ಲಿ 7.45 ಲಕ್ಷ ರೂಪಾಯಿ ಸಾಲ ಮಾಡಿದ್ದು ಅಂದಿನಿಂದ ಸಾಲ ತೀರಿಸಲು ಸಾದ್ಯವಾಗದೆ ಆರ್ಥಿಕ ಇಕ್ಕಟ್ಟಿನಲ್ಲಿ ಸಿಲುಕಿ ಪರದಾಡುತ್ತಿದ್ದ ಸಾಲದ ಲೆಕ್ಕ ಬಡ್ಡಿ ಸೇರಿ ಸುಮಾರು 12 ಲಕ್ಷ ರೂ. ಆಗಿತ್ತು. ಸಾಲ ಮರುಪಾವತಿಸಲು ಸಾಧ್ಯವಾಗದ ಪೂಕುಂಜು ಅವರಿಗೆ ಬ್ಯಾಂಕ್ ಅಟ್ಯಾಚ್‌ಮೆಂಟ್(ಜಪ್ತಿ) ನೋಟಿಸ್ ನೀಡಲಾಗಿದೆ.ನೋಟಿಸ್ ಸ್ವೀಕರಿಸಿದ ಒಂದೂವರೆ ಗಂಟೆಯ ನಂತರ ಅವರಿಗೆ ಅವರು ಸಹೋದರ ಕರೆ ಮಾಡಿ, 70 ಲಕ್ಷ ರೂಪಾಯಿ ಲಾಟರಿ…

Read More

ನ್ಯೂಜ್ ಡೆಸ್ಕ್: ರೈತರು ಹಾಗೂ ಸಾಮಾನ್ಯರ ಹಿತ ದೃಷ್ಟಿಯಿಂದ ರಾಜ್ಯ ಸರ್ಕಾರ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಮರು ಜಾರಿಗೊಳಿಸಿದೆ ಇದಕ್ಕಾಗಿ ನವೆಂಬರ್ 1 ರಿಂದ ನೋಂದಣಿ ಆರಂಭವಾಗಲಿದೆ.ಯಶಸ್ವಿನಿ ಯೋಜನೆ ಜಾರಿಗಾಗಿ ರೈತರು ಮತ್ತು ಸಹಕಾರಿ ಸಂಘಗಳ ಸದಸ್ಯರು ಬೇಡಿಕೆ ಇಟ್ಟಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸಿ ಆದೇಶ ಹೊರಡಿಸಿದೆ. ಇದಕ್ಕಾಗಿ 2022-23ನೇ ಬಜೆಟ್ ನಲ್ಲಿ 300 ಕೋಟಿ ಘೋಷಣೆ ಮಾಡಿದೆ.ಯಶಸ್ವಿನಿ ಯೋಜನೆ ಅಡಿ ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸೆ ವೆಚ್ಚ 5 ಲಕ್ಷ ರೂಪಾಯಿ ನಿಗದಿ ಮಾಡಲಾಗಿದ್ದು 4 ಸದಸ್ಯರು ಇರುವ ಕುಟುಂಬಕ್ಕೆ ವರ್ಷಕ್ಕೆ 500 ರೂಪಾಯಿಗಳ ವಂತಿಕೆ ಕಟ್ಟಬೇಕಾಗಿರುತ್ತದೆ.ನೊಂದಣಿ ಪ್ರಕ್ರಿಯೆಯನ್ನು ನವೆಂಬರ್ 1, 2022 ರಿಂದ ಪ್ರಾರಂಭವಾಗಲಿದೆ. ಯಶಸ್ವಿ ಯೋಜನೆ ಅವಧಿ 01-01-2023 ರಿಂದ 30-12-2023 ರವರೆಗೂ ಜಾರಿಯಲ್ಲಿರುತ್ತದೆ. 1650 ಖಾಯಿಲೆಗಳಿಗೆ ಈ ಯೋಜನೆ ಅಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.ಯಶಿಸ್ವಿನಿ ಯೋಜನೆಯ ಮಾರ್ಗಸೂಚಿಯಂತೆ ಸಹಕಾರ ಸಂಘಗಳ ಸದಸ್ಯರು, ಗ್ರಾಮೀಣ ಸ್ವ ಸಹಾಯ ಗುಂಪುಗಳ ಸದಸ್ಯರು…

Read More

ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದಲ್ಲಿನ ಮಹಾತ್ಮಗಾಂಧಿ ರಸ್ತೆಯ(M.G.ROAD)ಲ್ಲಿರುವ ವೃತ್ತಗಳು(circle) ಅಪಘಾತಗಳಿಗೆ ಅಹ್ವಾನ ನೀಡುತ್ತಿವೆ ಇವು ತುಂಬಾನೇ ಡೆಂಜರ್ ಅನ್ನಬಹುದು ಎನ್ನುವ ಹಾಗಿದೆ. ವೇಣು ಸ್ಕೂಲ್ ಬಳಿಯಿಂದ ಹಳೇಯ ಬಸ್ ನಿಲ್ದಾಣದವರಿಗೂ ಇರುವಂತ ಐದು ವೃತ್ತಗಳು ಜನರಿಗೆ ಕಂಟಕ ಪ್ರಾಯವಾಗಿದೆ ಯಾರು ಯಾವಾಗ ಕಾಲೋ ಕೈಯೋ ಮುರಿದಿಕೊಳ್ಳುತ್ತಾರೋ ಯಾವರಿತಿ ಅಪಘಾತ ಆಗುತ್ತದೊ ಎಂಬ ಆತಂಕ ಇಲ್ಲಿನ ಜನರನ್ನು ಕಾಡುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.ಮಹಾತ್ಮಗಾಂಧಿ ರಸ್ತೆಯಲ್ಲಿ ರಾಜ್ಯ ಹೆದ್ದಾರಿ 99 ಹಾದು ಹೋಗಿದೆ ಮೂರು ರಾಜ್ಯಗಳನ್ನು ಸಂಪರ್ಕಿಸುವ ಕೊತ್ತಪಲ್ಲಿ-ಮಾಸ್ತಿ ರಸ್ತೆಯಾಗಿದ್ದು ಪಟ್ಟಣದ ಜನರೆ ಅಲ್ಲ ಕೆಸ್.ಆರ್.ಟಿ.ಸಿ ಬಸ್ಸುಗಳು,ತಮಿಳುನಾಡು ಆಂಧ್ರಕ್ಕೆ ಹೋಗುವ ಬಾರಿಗಾತ್ರದ ಲಾರಿಗಳು,ಶಾಲಾ ವಾಹನಗಳು ಸೇರಿ ದೊಡ್ದಮಟ್ಟದಲ್ಲಿ ವಾಹನಗಳ ಸಂಚಾರ ಇರುತ್ತದೆ ಇಂತಹ ರಸ್ತೆಯಲ್ಲಿ ಯಾವುದೇ ವೃತ್ತದಲ್ಲೂ ರಸ್ತೆ ಉಬ್ಬುಗಳು ಇಲ್ಲ ರಸ್ತೆ ಮಾರ್ಗ ಸೂಚಿಗಳಿಲ್ಲ, ವೇಗದಮೀತಿ ಸೂಚನ ಫಲಕ ಇಲ್ಲ, ಶಾಲೆ/ಕಾಲೇಜು ಇವೆ, ಬಸ್ ಸ್ಟಾಂಡ್ ಇದೆ,ಬ್ಯಾಂಕ್ ಇದೆ ಎಂಬ ಸೂಚನ ಫಲಕಗಳನ್ನು ಅಳವಡಿಲ್ಲ, ವೃತ್ತಗಳಲ್ಲಿ ನೆಲಕ್ಕೆ ಬಿಳಿ ಬಣ್ಣ ಬಳಿದು ಕೈತೊಳೆದುಕೊಂಡಿರುವ ಪುರಸಭೆ ಮತ್ತು…

Read More

ನ್ಯೂಜ್ ಡೆಸ್ಕ್: ವಯಸ್ಸಿನ ಅಂತರ ಇಲ್ಲದೆ ಯಾರಿಗೆ ಬೇಕಾದರೂ ಕ್ಯಾನ್ಸರ್ ಬರಬಹುದು ಕ್ಯಾನ್ಸರ್ ಬಂದರೆ ಸಾವು ತಪ್ಪದು ಎಂಬ ಭಯ ಬೇಡ ಎಂದು ದಕ್ಷಿಣ ಭಾರತದ ಖ್ಯಾತ ನಟಿ ಗೌತಮಿ ಹೇಳಿದರು ಅವರು ತಿರುಪತಿ-ತಿರುಮಲ ದೇವಾಯಲದ ಮಹಿಳಾ ಉದ್ಯೋಗಿಗಳಿಗೆ ಮೂರು ದಿನಗಳ ಕಾಲ ಆಯೋಜಿಸಿದ್ದ ಕ್ಯಾನ್ಸರ್ ಜಾಗೃತಿ ಶಿಭಿರ ಉದ್ಘಾಟಿಸಿ ಮಾತನಾಡಿದರು.ಸ್ವತಃ ಕ್ಯಾನ್ಸರ್‌ ಪೀಡಿತೆಯಾಗಿ ಅದನ್ನು ಗುಣಪಡಿಸಲು ತಾವು ಅಳವಡಿಸಿಕೊಂಡ ಅಹಾರ ಹಾಗು ಜೀವನ ಪದ್ದತಿ ಕುರಿತಾಗಿ ನಂತರ ಅದು ಗುಣಮುಖವಾದ ಬಗ್ಗೆ ತಮ್ಮ ಅನುಭವಗಳನ್ನು ವಿವರಿಸಿದರು. ತಿರುಪತಿ-ತಿರುಮಲ ದೇವಾಯಲದ ಇಒ ಧರ್ಮಾರೆಡ್ಡಿ ಮಾತನಾಡಿ ಯೋಗ,ಧ್ಯಾನದ ಜೊತೆಗೆ ಗೋ ಆಧಾರಿತ ಉತ್ಪನ್ನಗಳನ್ನು ಆಹಾರವಾಗಿ ಸೇವಿಸುವುದರಿಂದ ಕ್ಯಾನ್ಸರ್ ಸಮರ್ಥವಾಗಿ ಜಯಿಸುವ ಮೂಲಕ ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.ಮಹಿಳೆಯರು ಕ್ಯಾನ್ಸರ್ ಬಗ್ಗೆ ಜಾಗೃತರಾದರೆ ಆರಂಭಿಕ ಹಂತದಲ್ಲೇ ಅದನ್ನು ಪತ್ತೆ ಹಚ್ಚಿ ತಡೆಗಟ್ಟಬಹುದು ಎಂದರು.ಮಾಂಸಾಹಾರ ಮತ್ತು ಪಾಶ್ಚಿಮಾತ್ಯ ಆಹಾರ ಪದ್ಧತಿಯೂ ಕ್ಯಾನ್ಸರ್ ಬರಲು ಕಾರಣವಾಗಿದ್ದು ಗೋ ಆಧಾರಿತ ಕೃಷಿ ಉತ್ಪನ್ನಗಳ…

Read More