ಶ್ರೀನಿವಾಸಪುರ-ಚಿಂತಾಮಣಿ ತಾಲೂಕುಗಳ ಮೂಲಕ ಯೋಜನೆ ರೂಪಿಸಿತ್ತುಬದಲಾದ ಕಾಘಟ್ಟದಲ್ಲಿ ಈಗಿನ ಆಂಧ್ರ ಸರ್ಕಾರ ಕಡಪಾ-ಅನಂತಪುರ ಮಾರ್ಗವಾಗಿ ರೂಪಿಸಲಾಗಿದೆಸ್ಥಳಿಯ ಸರ್ಕಾರಗಳು ಒಪ್ಪಿದರೆ ಮಾತ್ರ ಸಾಧ್ಯ ಕೇಂದ್ರ ಸಚಿವಹಿಂದಿನ ಸರ್ಕಾರ ರೂಪಿಸಿದ ಮಾರ್ಗದಂತೆ ಎಕ್ಸ್ ಪ್ರೆಸ್ ವೇ ನಿರ್ಮಾಣಕ್ಕೆ ಒತ್ತಾಯಸಾರ್ವಜನಿಕ ಗಮನ ಸೇಳೆದ ಯುವಶಕ್ತಿ ಯುವಕರುಹಳೇ ಮಾರ್ಗದಲ್ಲಿ ಎಕ್ಸ್ ಪ್ರೆಸ್ ವೇ ನಿರ್ಮಾಣಕ್ಕೆ ವಕೀಲ ಶರ್ಮ ಕೃಷಿ ಶ್ರೀನಿವಾಸಪುರ:-ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಮೂಲಕ ಹಾದು ಹೋಗಲಿದ್ದ ವಿಜಯವಾಡ-ಬೆಂಗಳೂರು ನಾಲ್ಕುಪಥ ಎಕ್ಸ್ ಪ್ರೆಸ್ ವೇ ರಸ್ತೆ ಮಾರ್ಗಕ್ಕೆ ಆಂಧ್ರದ ಈಗಿನ ಸರ್ಕಾರ ಅಡ್ಡಗಾಲು ಹಾಕಿ ಮಾರ್ಗ ಬದಲಾವಣೆ ಮಾಡಿಸಿಕೊಂಡಿದೆ ಈಗ ನೂತನ ಮಾರ್ಗದಂತೆ ಆಂಧ್ರದ ಕಡಪಾ ಅನಂತಪುರ ಮೂಲಕ ಸಾಗಲು ಕೈಗೊಂಡಿರುವಂತ ನಿರ್ಧಾರವನ್ನು ಕೇಂದ್ರ ಭೂ ಸಾರಿಗೆ ಸಚಿವಾಲಯ ಕೈ ಬಿಟ್ಟು ಹಿಂದೇ ಆಂಧ್ರ ಸರ್ಕಾರ ರೂಪಿಸಿರುವಂತ ಮಾರ್ಗಸೂಚಿಯಂತೆ ಮುಂದುವರಿಸಬೇಕು ಎಂದು ಇತ್ತಿಚಿಗೆ ದೆಹಲಿಯಲ್ಲಿ ನಡೆದಂತ ರಾಷ್ಟ್ರೀಯ ರಸ್ತೆ ಸುರಕ್ಷತಾ ಪರಿಷತ್ ಸಭೆಯಲ್ಲಿ ಪ್ರಸ್ತಾಪವಾಗಿ ಚರ್ಚೆ ನಡೆದಿರುತ್ತದೆ.ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದಂತ ರಾಷ್ಟೀಯ…
Author: admin
ದೇವೇಗೌಡರ ಕುಟುಂಬದ ಋಣದಲ್ಲಿ ಶ್ರೀನಿವಾಸಗೌಡ ಯಾರನ್ನೊ ಮೆಚ್ಚಿಸಲು ಕುಮಾರಸ್ವಾಮಿ ವಿರುದ್ದ ಟೀಕೆ ಜೆಡಿಎಸ್ ಚಿನ್ಹೆ ಮೇಲೆ ಗೆದ್ದಿರುವುದು ರಾಜಿನಾಮೆ ನೀಡಿ ಕುಮಾರಸ್ವಾಮಿ ಆಡಳಿತ ದೇಶಕ್ಕೆ ಮಾದರಿ ಶ್ರೀನಿವಾಸಪುರ:- ದೇವೇಗೌಡರ ಕುಟುಂಬ ಅಧಿಕಾರದಲ್ಲಿದ್ದಾಗ ಅವರಿಂದ ಸಾಕಷ್ಟು ಅನುಕೂಲಗಳನ್ನು ಪಡೆದುಕೊಂಡು ಇವತ್ತು ಯಾರದೋ ಮಾತು ಕೇಳಿ ಅವರ ವಿರುದ್ದವೇ ಮಾತನಾಡುವಷ್ಟು ನೀಚತನ ತೋರಿಸುತ್ತಿದ್ದಾರೆ ಎಂದು ಕೋಲಾರದ ಶಾಸಕ ಶ್ರೀನಿವಾಸಗೌಡ ವಿರುದ್ದ ಕೋಲಾರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ವೆಂಕಟಶಿವಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.ಭಾನುವಾರ ಶ್ರೀನಿವಾಸಪುರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಉಂಡ ಮನೆಗೆ ದ್ರೋಹ ಬಗೆಯುವುದು ಅಂದರೆ ಇದೇ ಎಂದ ಅವರು, ಯಾರನ್ನೋ ಮೆಚ್ಚಿಸಲು ಕುಮಾರಸ್ವಾಮಿಯವರನ್ನು ಟಿಕಿಸುತ್ತಿದ್ದಿಯ ಎಂದು ತೀವ್ರ ಧಾಟಿಯಲ್ಲಿ ಶ್ರೀನಿವಾಸಗೌಡ ವಿರುದ್ದ ವಾಗ್ದಾಳಿ ನಡೆಸಿದರು.ಕುಮಾರಸ್ವಾಮಿ ಆಡಳಿತದ ಬಗ್ಗೆ ಮಾತನಾಡುವಾಗ ಎಚ್ಚರ ಇರಲಿ ಮಾತಿನ ಮೇಲೆ ಹಿಡಿತ ಇರಲಿ ಅವರ ಅಧಿಕಾರವಧಿಯಲ್ಲಿ ದೇಶಕ್ಕೆ ಮಾದರಿ ಎನ್ನುವಂತೆ ದಾಖಲೆ ಮಟ್ಟದಲ್ಲಿ ರೈತರ ಸಾಲ ಮನ್ನಾ ಯೋಜನೆ ರೂಪಿಸಿ ಯಶಸ್ವಿಯಾಗಿ ಜಾರಿಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ…
ಎರಡು ಸಲ ಜೆಡಿಎಸ್ ನಿಂದ ಶಾಸಕ ಕೆ.ಶ್ರೀನಿವಾಸಗೌಡ.ಮಗನ ರಾಜಕೀಯ ಭವಿಷ್ಯತ್ತಿಗಾಗಿ ಕಾಂಗ್ರೆಸ್ವರ್ತೂರು ಪ್ರಕಾಶ್ ವಿರುದ್ದ ಗೆದಿದ್ದ ಶ್ರೀನಿವಾಸಗೌಡ.2018 ಚುನಾವಣೆಯಲ್ಲಿ ಜೆಡಿಎಸ್ ಸ್ಥಳೀಯ ಮುಖಂಡರ ಒತ್ತಡಕ್ಕೆ ಟಿಕೆಟ್ ಕೋಲಾರ:ಕೋಲಾರದ ಜೆಡಿಎಸ್ ಶಾಸಕ ಕುಡುವನಹಳ್ಳಿಶ್ರೀನಿವಾಸಗೌಡ ಪಕ್ಷ ತೊರೆಯುವ ಸ್ಪಷ್ಟ ಸೂಚನೆ ನೀಡಿದರು ಇಂದು ತಮ್ಮ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಅವರು ನನ್ನನ್ನು ಜೆಡಿಎಸ್ ನಿಂದ ಉಚ್ಛಾಟಿಸಿದ್ದಾರೆ ಎಂದು ಹೇಳಿಕೊಂಡರು.ಜೆಡಿಎಸ್ ಕುಟುಂಬಕ್ಕೆ ಸೀಮಿತವಾದ ಪಕ್ಷವಾಗಿದೆ ಎಂದು ಜೆಡಿಎಸ್ ವರಿಷ್ಟ ದೇವೇಗೌಡ ಮತ್ತು ಕುಮಾರಸ್ವಾಮಿ ವಿರುದ್ದ ತೀವ್ರವಾಗ್ದಾಳಿ ನಡೆಸಿದ ಅವರು ಅಧಿಕಾರದಲ್ಲಿದ್ದಾಗ ಎಲ್ಲ ಅಧಿಕಾರ ಹಾಗು ಒಳ್ಳೋಳ್ಳೆ ಮಂತ್ರಿ ಪದವಿಗಳು ಅವರ ಕುಟುಂಬಕ್ಕೆ ಬೇಕು ಎಂದು ವ್ಯಂಗ್ಯವಾಡಿದರು..ಕೆಸಿ ವ್ಯಾಲಿ ನೀರಾವರಿ ಯೋಜನೆ ವಿಚಾರದಲ್ಲಿ ಕುಮಾರಸ್ವಾಮಿಗೆ ಅಸೂಯೆ ಪಡ್ತಾರೆ ಈ ಯೋಜನೆ ಜಾರಿಗೆ ಬರಲು ಶ್ರಮಿಸಿದ ರಮೇಶ್ ಕುಮಾರ್, ಕೃಷ್ಣಬೈರೇಗೌಡರ ಹೊಗಳಿದರೆ ಕುಮಾರಸ್ವಾಮಿ ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಾರೆ ನನ್ನ ವಿರುದ್ದ ಉದ್ದೇಶಪೂರ್ವಕವಾಗಿ ಹಗೆ ಸಾಧಿಸುತ್ತಿದ್ದಾರೆ ಎಂದರು.ಇದೆ ಸಂದರ್ಭದಲ್ಲಿ ಕಾಂಗ್ರೆಸ್ ಸೇರಲು ಡಿಕೆ.ಶಿವಕುಮಾರ್ ಜೊತೆ ಮಾತುಕತೆ ನಡೆದಿರುವುದಾಗಿ ಬಹಿರಂಗ ಪಡಿಸಿದರು.…
ಶ್ರೀನಿವಾಸಪುರ:- ಸೋಮವಾರ ತಡರಾತ್ರಿ ಮದನಪಲ್ಲಿ ರಸ್ತೆಯ ನಿಲಟೂರು ಕ್ರಾಸ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ದ್ವಿಚಕ್ರವಾಹನ ಸವಾರ ಮೃತಪಟ್ಟಿರುತ್ತಾನೆ.ರಾತ್ರಿ 8.30 ಸಮಯದಲ್ಲಿ ವ್ಯಕ್ತಿಯೊಬ್ಬ ದ್ವಿಚಕ್ರವಾಹದಲ್ಲಿ ಹೋಗುತ್ತಿರಬೇಕಾದಾಗ ರಸ್ತೆಯಲ್ಲಿ ನಿಂತಿದ್ದ ಮತ್ತೊಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಲಿಸುತ್ತಿದ್ದ ವಾಹನ ಸವಾರನ ಮುಖಕ್ಕೆ ತೀವ್ರ ಪೆಟ್ಟಾಗಿ ಸ್ಥಳದಲ್ಲೀಯೇ ಮೃತ ಪಟ್ಟಿರುತ್ತಾನೆ.ಮೃತ ವ್ಯಕ್ತಿಯನ್ನು ಲೋಚರವುಪಲ್ಲಿ ಗ್ರಾಮದ ಕೃಷ್ಣಮೂರ್ತಿ(70) ಎಂದು ಗುರತಿಸಲಾಗಿದೆ.ಈ ಸಂಬಂದ ವೃತ್ತ ನೀರಿಕ್ಷಕ ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಶ್ರೀನಿವಾಸಪುರ:- ಸೌರ್ಹಾದತೆಯ ಸಮಾಜ ನಿರ್ಮಾಣಕ್ಕೆ ನನ್ನೊಂದಿಗೆ ಕೈ ಜೊಡಿಸಿ ನಿಮ್ಮನ್ನು ಗೌರವದಿಂದ ನಡಸಿಕೊಳ್ಳುತ್ತೇನೆ ಎಂದು ಸಮಾಜಸೇವಕ ಗುಂಜೂರುಶ್ರೀನಿವಾಸರೆಡ್ಡಿ ಹೇಳಿದರು ಅವರು ಇಂದು ಶ್ರೀನಿವಾಸಪುರ ಪಟ್ಟಣದ ಇಂದಿರಾನಗರದಲ್ಲಿ ಮುಸ್ಲಿಂ ಯುವಕರೊಂದಿಗೆ ಸಂವಾದ ಕಾರ್ಯಕ್ರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಭಾಗದಲ್ಲಿ ಸಿಗಬೇಕಾದ ಮೂಲಭೂತ ಸೌಕರ್ಯಗಳನ್ನು ಪಡೆಯುವಲ್ಲಿ ಇಲ್ಲಿನ ಜನ ವಿಫಲರಾಗಿದ್ದಾರೆ ಇಲ್ಲಿ ವಾಸಿಸುವಂತ ಜನತೆ ಕೂಲಿ ಕಾರ್ಮಿಕರಾಗಿದ್ದು ಅವರಿಗೆ ಸಿಗಬೇಕಾದ ಅವಶ್ಯ ಮೂಲಭೂತ ಸೌಕರ್ಯಗಳು ಸಿಕ್ಕಿಲ್ಲದಿರುವುದು ವಿಷಾದನೀಯ ಎಂದ ಅವರು ಜನರಿಗೆ ಸಿಗಬೇಕಾದ ಸೌಕರ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸಿದಾಗ ಮಾತ್ರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಜನರ ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ ಎಂದರು.ಇಲ್ಲಿನ ಮುಸ್ಲಿಂ ಯುವರು ಸ್ವಯಂ ಪ್ರೇರಿತರಾಗಿ ಬಂದು ಆಹ್ವಾನ ನೀಡಿದ ಹಿನ್ನಲೆಯಲ್ಲಿ ಅವರೊಂದಿಗೆ ಇಲ್ಲಿ ಸಂವಾದ ನಡೆಸಿದ್ದಾಗಿ ಹೇಳಿದರು. ಅವರ ಅಭಿಷ್ಟೆಯಂತೆ ಇಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಅವರು ಸಾಮಾಜಿಕವಾಗಿ ಆರ್ಥಿಕವಾಗಿ ಅಭಿವೃದ್ದಿಯಾಗಲು ಸಹಕಾರ ನೀಡುವುದಾಗಿ ಶ್ರೀನಿವಾಸರೆಡ್ಡಿ ತಿಳಿಸಿದರು. ಮುಖಂಡ ರಾಜಶೇಖರರೆಡ್ಡಿ ಮಾತನಾಡಿ ಈ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಂದ ವ್ಯಕ್ತಿಗತ ರಾಜಕಾರಣ ನಡೆಯುತ್ತಿದೆ…
ಹಿಂದೆ ಮುಂದೆ ನೊಡದೆ ಕಡಿಮೆ ಬೆಲೆಗೆ ಹಳೇ ಬಂಗಾರ ಖರೀದಿ!ಹತ್ಯೆ ಸಂಭಂದ ಅಬರಣ ಶ್ರೀನಿವಾಸಪುರದಲ್ಲಿ ಖರಿದಿ!ಬೆಂಗಳೂರುರಾಮಮೂರ್ತಿ ನಗರ ಪೋಲಿಸರ ಕಾರ್ಯಚರಣೆ? ಶ್ರೀನಿವಾಸಪುರ: ಬಂಗಾರದ ವ್ಯಾಪಾರಸ್ಥರು ತಮ್ಮಲ್ಲಿಗೆ ಹಳೇಯ ಬಂಗಾರ ಮಾರಾಟ ಮಾಡಲು ಬರುವಂತವರ ಪೂರ್ಣ ಮಾಹಿತಿ ಪಡೆದು, ಅವರ ಹಿನ್ನಲೆ ತಿಳಿದು ಅವರೊಂದಿಗೆ ವ್ಯವಹಾರ ನಡೆಸಬೇಕು ಎಂದು ಶಾಸಕ ರಮೇಶಕುಮಾರ್ ಬಂಗಾರದ ಅಭರಣ ವ್ಯಾಪರಸ್ಥರ ಸಭೆಯಲ್ಲಿ ಸೂಚ್ಯಕವಾಗಿ ತಿಳಿಸಿದರು.ಪಟ್ಟಣದ ಬಂಗಾರದ ವ್ಯಾಪಾರಸ್ಥರು ಕ್ರೈಂ ಪೋಲಿಸರು ಕಳ್ಳತನದ ಮಾಲು ಖರಿದಿಯ ಆರೋಪ ಹೋರಿಸಿ,ವಿಚಾರಣೆ ನೆಪದಲ್ಲಿ ನಮ್ಮನ್ನು ಅಕ್ರಮವಾಗಿ ಬಂಧಿಸಿ ಹೆದರಿಸಿ ಬೆದರಿಸಿ ನಾವು ತಪ್ಪು ಮಾಡದಿದ್ದರು ನಮ್ಮ ಮೇಲೆ ಆರೋಪ ಹೇರುತ್ತಾರೆ ನಂತರ ಕಳ್ಳನ ಬಳಿ ನೀವು ಇಷ್ಟು ಗ್ರಾಮ ಬಂಗಾರವನ್ನು ನೀವು ಖರಿದಿ ಮಾಡಿರುತ್ತಿರ ಅಷ್ಟು ಗ್ರಾಮ ನಮ್ಮಿಂದ ವಸೂಲಾತಿ ಮಾಡುತ್ತಾರೆ ಇದಕ್ಕೆ ನಾವು ಹೆದರಿ ಕಳೆದ ನಾಲ್ಕೈದು ದಿನಗಳಿಂದ ವ್ಯಾಪಾರ ವಹಿವಾಟು ಬಂದ್ ಮಾಡಿಕೊಂಡು ನಿಮ್ಮಲ್ಲಿಗೆ ಬಂದಿರುವುದಾಗಿ ಪಟ್ಟಣದ ಅಭರಣ ವ್ಯಾಪಾರಸ್ಥರು ಶಾಸಕ ರಮೇಶಕುಮಾರ್ ಬಳಿ ಅಲವತ್ತುಕೊಂಡರು. ಇದಕ್ಕೆ ಸ್ಪಂದಿಸಿದ…
ಶ್ರೀನಿವಾಸಪುರ:-ಅತಿ ವೇಗವಾಗಿ ಹೊಗುತ್ತಿದ್ದ ಪ್ರಯಾಣಿಕರು ತುಂಬಿದ್ದ ಹಳೇ ಮಾಡಲ್ ಜೀಪು ಸಿಮೆಂಟ್ ಟ್ಯಾಂಕರ್ ಗೆ ಡಿಕ್ಕಿಯಾಗಿ ಜೀಪಿನ ಚಾಲಕ ಸೇರಿ ಜಿಪಿನಲ್ಲಿದ್ದ ಸುಮಾರು ಎಂಟು ಮಂದಿ ಪ್ರಯಾಣಿಕರು ಮೃತ ಪಟ್ಟಿರುವ ಧಾರುಣ ಘಟನೆ ಚಿಂತಾಮಣಿ-ಮದನಪಲ್ಲಿ ರಾಜ್ಯ ಹೆದ್ದಾರಿಯ ಅಲವಾಟ ಗೆಟ್ ಬಳಿ ಸಂಜೆ ನಡೆದಿರುತ್ತದೆ.ಮೃತರ ಕುರಿತಾಗಿ ಸ್ಪಷ್ಟಮಾಹಿತಿ ಲಭ್ಯವಾಗಿಲ್ಲ ಆದರೂ ಮೃತ ಪಟ್ಟಿರುವಂತ ಬಹುತೇಕರು ಶ್ರೀನಿವಾಸಪುರ ತಾಲೂಕಿನವರೆಂದು ಹೇಳಲಾಗಿದೆ ಒರ್ವ ಮಹಿಳೆ ಗೋಪಲ್ಲಿಯವರೆಂದು ಮತ್ತೊಬ್ಬ ಪುರುಷ ಕೂಸಂದ್ರ,ಇನ್ನೊಬ್ಬ ವ್ಯಕ್ತಿ ಆಂಧ್ರದ ಮದನಪಲ್ಲಿಯರು, ಮತ್ತೊರ್ವ ಚಿಂತಾಮಣಿಯವರು ಎನ್ನಲಾಗಿದೆ ಮಿಕ್ಕವರ ಮಾಹಿತಿ ತಿಳಿಯಬೇಕಿದೆ.ಅಪಘಾತದ ತೀವ್ರತೆ ಹೇಗಿತ್ತು ಎಂದರೆ ಲಾರಿಗೆ ಡಿಕ್ಕಿಯಾದ ಸಂದರ್ಭದಲ್ಲಿ ಜೀಪಿನಲ್ಲಿದ್ದ ಪ್ರಯಾಣಿಕರು ರಸ್ತೆಯಲ್ಲ ತರಗೆಲೆಗಳಂತೆ ಚಲ್ಲಾಪಿಲ್ಲಿಯಾಗಿ ಚದರಿ ಬಿದ್ದಿರುತ್ತಾರೆ ಎನ್ನುತ್ತಾರೆ ಪ್ರತ್ಯಕ್ಷ ದರ್ಶಿಗಳು.ಮೃತರ ಪೈಕಿ ಜೀಪ್ ಚಾಲಕ ರಮೇಶ್ ಸೇರಿದಂತೆ ಎಂಟು ಮಂದಿ ಪ್ರಯಾಣಿಕರು ಮೃತಪಟ್ಟಿದ್ದು ಹಲವರ ಸ್ಥಿತಿ ಚಿಂತಾಜನಕವಾಗಿದೆ ಗಾಯಾಳುಗಳನ್ನು ಚಿಂತಾಮಣಿಯ ಸರ್ಕಾರಿ ಆಸ್ಪತ್ರೆ ಹಾಗು ಕೋಲಾರದ ಎಸ್.ಎನ್.ಆರ್ ಹಾಗು ಜಾಲಪ್ಪ ಆಸ್ಪತ್ರೆಗೆಳಿಗೆ ದಾಖಲಿಸಲಾಗಿದೆ.ಅಪಘಾತ ನಡೆದ ಸ್ಥಳ ಚಿಂತಾಮಣಿ ತಾಲೂಕು…
ಆಡಳಿತ ರೂಡ ಪಕ್ಷದ ಮುಖಂಡರ ದೌರ್ಜನ್ಯದ ಪರಾಕಾಷ್ಟೆ ನಾಚಿಕೆ ಗೇಡುಪಂಚಾಯಿತಿ ರಾಜ್ ಇಲಾಖೆ ಪ್ರಿನ್ಸಿಪಲ್ ಸೆಕೆಟ್ರಿ ಮೇಲೆ ಒತ್ತಡ ಹಾಕಿ ಎನ್ ಆರ್ ಇ ಜಿ ಬಿಲ್ ತಡೆಅಧಿಕಾರಿಗಳಿಗೆ ಹೆದರಸಿ ಬೆದರಿಸಿ ಅವಾಚ್ಯ ಶಬ್ದಗಳಿಂದ ಬೈದು ಬ್ಲಾಕ್ ಮೇಲ್ ಶ್ರೀನಿವಾಸಪುರ:- ವಿಧಾನಸಭಾ ಕ್ಚೇತ್ರದಲ್ಲಿ ಆಂಧ್ರ ಪ್ರದೇಶದ ಅಕ್ರಮ ಮತದಾರರು ಇದ್ದಾರೆ ಅಕ್ರಮ ಮತದಾರರನ್ನು ತೊಲಗಿಸಿ ನಂತರ ಮುಂಬರುವಂತ ಚುನಾವಣೆಗಳನ್ನು ನಡೆಸುವಂತೆ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಜಿಲ್ಲಾಡಳಿತ ಮತ್ತು ಚುನಾವಣೆ ಆಯೋಗವನ್ನು ಒತ್ತಾಯಿಸಿದರು.ಅವರು ಶ್ರೀನಿವಾಸಪುರ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ತಾಲೂಕಿನ ಗಡಿಭಾಗದ ರಾಯಲ್ಪಾಡು ಹೋಬಳಿಯಲ್ಲಿ ಅಕ್ರಮವಾಗಿ ಆಂಧ್ರದ ಜನರನ್ನು ಕರೆ ತಂದು ಮತದಾರರ ಪಟ್ಟಿಯಲ್ಲಿ ಆಡಳಿತಾರೂಡ ಕಾಮಗ್ರೆಸ್ ಪಕ್ಷದ ಮುಖಂಡರು ಸೇರಿಸಿದ್ದಾರೆ ಎಂದು ರಮೇಶ್ ಕುಮಾರ್ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.ಕ್ಷೇತ್ರದಲ್ಲಿ 15 ರಿಂದ 20 ಸಾವಿರ ಮತದಾರರನ್ನು ಅಕ್ರಮವಾಗಿ ಸೇರ್ಪಡೆ ಮಾಡಿಸಿ ಚುನಾವಣೆ ನಡೆಸಲು ಕಾಂಗ್ರೆಸ್ ಪಕ್ಷದ ಮುಖಂಡರು ಯೋಜನೆ ರೂಪಿಸಿದ್ದು ಹೀಗೆ ಅಕ್ರಮ ಮತದಾರರ…
ಇಬ್ಬರು ಘಟಾನು ಘಟಿ ಶಾಸಕ ಹಾಗು ಸಚಿವರ ನಡುವಿನ ಗುದ್ದಾಟ ಜಿಲ್ಲಾ ಹಾಗು ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸರ್ಕಾರಿ ಸೇವೆ ಸಾಕಪ್ಪ ಅನಿಸಿದಿಯಂತೆ, ಅತ್ತ ದರಿ ಇತ್ತ ಪುಲಿಯಂತಾಗಿದೆ ಎನ್ನುತ್ತಾರೆ. ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ಉದ್ಘಾಟನೆಯಾಗುತ್ತಿರುವ ಮೂರು ಪ್ರಾಥಮಿಕ ಆರೋಗ್ಯಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಶ್ರೀನಿವಾಸಪುರದ ಸ್ವಾಮಿ-ರೆಡ್ಡಿಯ ನಡುವಿನ ವ್ಯಕ್ತಿಗತ ರಾಜಕೀಯದ ಕಪ್ಪು ಛಾಯೆ ಬಿಳುವಂತಿದೆ.ಕಳೆದವಾರವಷ್ಟೆ ಸ್ಥಳಿಯ ಶಾಸಕ ರಮೇಶಕುಮಾರ್ ನೇತೃತ್ವದಲ್ಲಿ ಮೂರು ಆಸ್ಪತ್ರೆಗಳನ್ನು ಉದ್ಘಾಟೆನೆ ಆಗಿದೆ. ಅಂದು ನಡೆದ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬರಬೇಕಾಗಿತ್ತು, ಅಂದು ಅವರು ಮುಖ್ಯಮಂತ್ರಿಗಳೊಂದಿಗೆ ದೆಹಲಿಗೆ ತೆರಳಿದ್ದ ಕಾರಣ ಆರೋಗ್ಯ ಸಚಿವರ ಸೂಚನೆಯಂತೆ ಕಾರ್ಯಕ್ರಮವನ್ನು ರದ್ದುಪಡಿಸಲಾಗಿತ್ತು, ಅದರೂ ಶಾಸಕ ರಮೇಶ್‌ಕುಮಾರ್ ನಿಗದಿತ ದಿನಾಂಕದಂದು ತಾಲೂಕಿನ ಲಕ್ಷ್ಮಿಸಾಗರ,ಬೈರಗಾನಪಲ್ಲಿ ಹಾಗು ಮುದುವಾಡಿ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಟೇಪು ಕತ್ತರಿಸಿ ಪೂಜೆ ಸಲ್ಲಿಸಿ ಸರಳವಾಗಿ ಉದ್ಘಾಟಿಸಿದರು.ಅಂದು ಶಾಸಕರು ನಡೆಸಿದ ಕಾರ್ಯಕ್ರಮದಲ್ಲಿ ಇರಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮತ್ತು ಸಂಸದ ಎಸ್.ಮುನಿಸ್ವಾಮಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿನ…
ಶ್ರೀನಿವಾಸಪುರ:- ಬೆಸ್ಕಾಂ ಬಾಕಿ ಹಣ ಕೇಳಿದ್ದಿಕ್ಕೆ ಬೆಸ್ಕಾಂ ಮೀಟರ್ ರೀಡರ್ ನನ್ನು ಮನಸೋ ಇಚ್ಚೆ ಥಳಿಸಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ಗೌವನಿಪಲ್ಲಿ ಬೆಸ್ಕಾಂ ವ್ಯಾಪ್ತಿಯ ಕೊತ್ತೂರು ಗ್ರಾಮದಲ್ಲಿ ನಡೆದಿದೆ ಗಾಯಗೊಂಡ ಮೀಟರ್ ರೀಡರ್ ನನ್ನು ನಾಗೇಶ್ ಎಂದು ಗುರುತಿಸಲಾಗಿದೆ.ಹಲ್ಲೆ ಮಾಡಿದವರನ್ನು ಕೊತ್ತೂರು ಗ್ರಾಮದ ಉತ್ತಣ್ಣ ಹಾಗು ಅವರ ಮಗ ಶ್ರೀನಾಥ್ ಎನ್ನಲಾಗಿದ್ದು ಉತ್ತಣ್ಣ 13 ಸಾವಿರ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿದ್ದ ಸಂಬಂದ ವಿದ್ಯುತ್ ಪೂರೈಕೆ ನಿಲ್ಲಿಸಲಾಗಿತ್ತು ಇದರಿಂದ ಕುಪಿತರಾದ ಉತ್ತಣ್ಣ ಮತ್ತು ಮಗ ಶ್ರೀನಾಥ್ ಸೋಮವಾರ ಗ್ರಾಮಕ್ಕೆ ಮೀಟರ್ ರಿಡಿಂಗ್ ಪಡೆದು ಮಾಡಿ ಬಿಲ್ ನೀಡುವ ಕಾರ್ಯಯಕ್ಕೆ ಬಂದಿದ್ದ ಬಂದ ಮೀಟರ್ ರಿಡರ್ ನಾಗೇಶ್ ಜೊತೆ ತಂದೆ ಮಗ ವ್ಯಾಜ್ಯ ತಗೆದು ಮಾತಿನ ಚಕಮಕಿ ನಡೆಸಿ ತಳ್ಳಾಡಿಕೊಂಡಿದ್ದಾರೆ ಒಬ್ಬಂಟಿಯಾಗಿದ್ದ ನಾಗೇಶ್ ಗಾಯಗೊಂಡಿದ್ದು, ಹೊಡೆದಾಟದ ವಿಡಿಯೊ ಮೊಬೈಲ್ ನಲ್ಲಿ ಸೆರೆಯಾಗಿದೆ ಎಲ್ಲೆಡೇ ವೈರಲ್ ಆಗಿದೆ ಗಾಯಗೊಂಡಿರುವ ನಾಗೇಶ್ ಗೌನಿಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಈ ಸಂಬಂದ ಗೌನಿಪಲ್ಲಿ ಪೋಲಿಸ್ ಠಾಣೆಯಲ್ಲಿ…