ಗೃಹ ಸಚಿವರೇ ಬೇಡ ಅಂದ್ರು ನಿಮ್ಮದೇನ್ರಿ ತಪಾಸಣೆ ಕಿರಿಕಿರಿಇಂತಹ ಕೆಲಸ ಮಾಡಿದರೆ ನಿಮಗೆ ಒಳ್ಳೆಯದಾಗುತ್ತೇನ್ರಿಮಾಜಿ ಸ್ಪೀಕರ್ ಗರಂ ಆಗಿದ್ದು ನೋಡಿ ಸಲ್ಯೂಟ್ ಹೊಡೆದ ಪೋಲಿಸರು ಜಾಗ ಕಾಲಿ ಚಿಂತಾಮಣಿ:- ಏನ್ರಿ ನೀವು ಮನುಷ್ಯರೇನ್ರಿ ಏನ್ರಿ ಇದು ನ್ಯೂಸೆನ್ಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಮಾಡಿಕೊಂಡು ತಪಾಸಣೆ ಮಾಡ್ತಾ ಇರೋದು ಹೀಗೆಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್. ಕಡಪಾ-ಬೆಂಗಳೂರು ರಸ್ತೆಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಹೆದ್ದಾರಿ ಗಸ್ತು ವಾಹನದ ಚಿಂತಾಮಣಿ ಪೋಲಿಸ್ ಎ.ಎಸ್.ಐ ಮುನಾವರಪಾಷ ತಂಡದ ವಿರುದ್ದ ಏರು ಧ್ವನಿಯಲ್ಲಿ ಮಾತನಾಡಿರುವ ಘಟನೆ ಶುಕ್ರವಾರ ನಡೆದಿರುತ್ತದೆ.ಈ ಘಟನೆಯ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಾರ್ವಜನಿಕರು ರಮೇಶ್ ಕುಮಾರ್ ಅವರ ವೈಖರಿಗೆ ಮೆಚ್ಚುಗೆ ಸೂಚಿಸಿದ್ದಾರೆ.ರಮೇಶ್ ಕುಮಾರ್ ಬೆಂಗಳೂರಿಗೆ ಹೋಗಲು ತಮ್ಮ ಅನುಯಾಯಿಗಳೊಂದಿಗೆ ಸ್ವಗ್ರಾಮ ಅಡ್ಡಗಲ್ ನಿಂದ ತಾಡಿಗೋಳ್ ಕ್ರಾಸ್,ಮಾಡಿಕೆರಿ ಕ್ರಾಸ್ ಮೂಲಕ ಬೆಂಗಳೂರು-ಕಡಪಾ ಹೆದ್ದಾರಿಯಲ್ಲಿ ಹೋರಟಿದ್ದಾಗ ಐಮರೆಡ್ಡಹಳ್ಳಿ ಕ್ರಾಸ್ ಹತ್ತಿರ ರಸ್ತೆ ಟ್ರಾಫಿಕ್ ಜಾಮ್ ಆಗಿ ವಾಹನ ಸಂಚಾರರಿಗೆ ಅಡ್ಡಿಯಾಗಿದ್ದು ಮಾಜಿ ಸ್ಪೀಕರ್ ಇದ್ದ…
Author: admin
ತಿರುಮಲ:-ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ತಿರುಮಲ ಬೆಟ್ಟದಲ್ಲಿ ಶ್ರಾವಣ ಹುಣ್ಣಿಮೆ ಭಾನುವಾರದಂದು ನಡೆಯಬೇಕಿದ್ದ ಗರುಡ ವಾಹನ ಸೇವೆಯನ್ನು ಪೊರೈಸಲಾಗಲಿಲ್ಲ.ಪ್ರತಿ ಹುಣ್ಣಿಮೆಯಂದು ನಡೆಸುತ್ತಿದ್ದ ಗರುಡ ವಾಹನ ಸೇವೆ ಶ್ರಾವಣ ಮಾಸದ ಹುಣ್ಣಿಮೆಯಂದುಶ್ರೀವಾರಿ ಉತ್ಸವ ಮೂರ್ತಿಯನ್ನು ಗರುಡನ ಮೇಲೆ ಕುರಿಸಿ ವಿಶೇಷ ಆಭರಣಗಳಿಂದ ಮಲಯಪ್ಪಸ್ವಾಮಿ ಅವತಾರದಲ್ಲಿ ಅಲಂಕರಿಸಿ ಭಕ್ತರಿಗೆ ದರುಶನಕ್ಕೆ ಏರ್ಪಾಟು ಮಾಡಲಾಗುತ್ತಿತ್ತು.ಆದರೇ ಸುರಿದ ಕುಂಭದ್ರೋಣ ಮಳೆಯಿಂದಾಗಿ ಶ್ರೀ ವೆಂಕಟೇಶ್ವರನನ್ನು ಹೊತ್ತ ವಾಹನವು ಮುಂದೆ ಸಾಗಲು ಸಾಧ್ಯವಾಗದ ಕಾರಣ ರಾತ್ರಿ ಏಳು ರಿಂದ ಎಂಟು ಗಂಟೆಯವರೆಗೆ ವಾಹನ ಮಂಟಪದಲ್ಲಿಯೇ ಇರಿಸಲಾಗಿ ಅರ್ಚಕರು ಅಲ್ಲಿಯೇ ಪೂಜಾಕೈಂಕರ್ಯಗಳನ್ನು ನೇರವೇರಿಸಿ ಶ್ರೀವಾರಿ ಉತ್ಸವ ಮೂರ್ತಿಯನ್ನು ದೇವಾಲಯಕ್ಕೆ ಕರೆದೊಯ್ದರು.ಸುರಿಯುತ್ತಿರುವ ಮಳೆಯಲ್ಲಿಯೇ ನೆನೆದುಕೊಂಡು ಕೆಲ ಭಕ್ತರು ದೇವರ ದರುಶನ ಪಡೆದರು. ತಿರುಮಲದಲ್ಲಿ ಭಾನುವಾರ 22,832 ಭಕ್ತರು ಶ್ರೀನಿವಾಸನ ದರ್ಶನ ಪಡೆದಿದ್ದು 10,889 ಭಕ್ತರು ಮುಡಿ ಅರ್ಪಿಸಿರುತ್ತಾರೆ. ಶ್ರೀವಾರಿ ಹುಂಡಿಗೆ ಅಂದಾಜು 2.33 ಕೋಟಿ ರೂ ಸಂಗ್ರಹವಾಗಿರುತ್ತದೆ.
ಶ್ರೀನಿವಾಸಪುರ ರಾಜಕಾರಣಕ್ಕೆ ಹೊಸ ಮುಖ ಶ್ರೀನಿವಾಸರೆಡ್ಡಿರೆಡ್ಡಿ-ಸ್ವಾಮಿ ವ್ಯಕ್ತಿ ರಾಜಕಾರಣದ ನಡುವೆ ಗುದ್ದಾಡಲು ಮತ್ತೊಬ್ಬ ರೆಡ್ಡಿ ಅತ್ತಿಕುಂಟೆ ರಾಜಶೇಖರೆಡ್ಡಿ ಕಾಲೇಜು ಸ್ನೇಹಿತ ಗುಂಜೂರುಶ್ರೀನಿವಾಸರೆಡ್ಡಿ ಶ್ರೀನಿವಾಸಪುರ: ಶ್ರೀನಿವಾಸಪುರ ತಾಲೂಕನ್ನು ಹೊಸ ಅಲೆಯು ರಾಜಕೀಯದೊಂದಿಗೆ ಅಭಿವೃದ್ದಿ ಪಡಿಸಲು ಇಲ್ಲಿಗೆ ಬಂದಿರುವುದಾಗಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ರಾಜಕಾರಣಕ್ಕೆ ನೂತನವಾಗಿ ಆಗಮಿಸಿರುವ ಸಮಾಜಸೇವಕ ಗುಂಜೂರು ಶ್ರೀನಿವಾಸರೆಡ್ಡಿ ಹೇಳಿದರು ಅವರು ತಾಲೂಕಿನ ರಾಯಲ್ಪಾಡು ಹೋಬಳಿಯಲ್ಲಿ ಪ್ರವಾಸಮಾಡಿ ವಿವಿಧ ಹಂತಗಳಲ್ಲಿ ತೊಂದರೆಗೊಳಗಾದ ಸಂತ್ರಸ್ತರು/ಬಾದಿತರಿಗೆ ಹಣಕಾಸು ನೆರವು ನೀಡಿ ಮಾತನಾಡಿದ ಅವರು ತಾಲೂಕಿನಲ್ಲಿ ಜನತೆ ಬದಲಾವಣೆ ಬಯಸುತ್ತಿದ್ದಾರೆ ಇದಕ್ಕಾಗಿ ಸ್ನೇಹಿತರ ಸಲಹೆಯಂತೆ ಇಲ್ಲಿಗೆ ಬಂದಿರುವುದಾಗಿ ಹೇಳಿದರು. ಇಲ್ಲಿ ನಡೆಯುತ್ತಿರುವ ವ್ಯಕ್ತಿ ರಾಜಕಾರಣದ ಅರಿವು ಇದೆ ಇಲ್ಲಿನ ರಾಜಕೀಯ ಸ್ಥಿತಿ ಗತಿಗಳು ಜನತೆ ನಾಡಿ ಮಿಡಿತದ ಮಾಹಿತಿ ಇದೆ ಜನತೆ ಆಶಯಗಳಂತೆ ರಾಜಕಾರಣ ಮಾಡುವ ಉದ್ದೇಶದಿಂದ ತಾಲೂಕಿಗೆ ಬಂದಿರುವುದಾಗಿ ಹೇಳಿದರು. ವಾಪಸ್ಸು ಹೋಗುವನಲ್ಲ ಶ್ರೀನಿವಾಸರೆಡ್ಡಿಇದುವರಿಗೂ ಕ್ಷೇತ್ರಕ್ಕೆ ಯಾರು ಬಂದಿದ್ದರೊ ಯಾರು ಹೋಗಿದ್ದಾರೋ ನಾನು ಈ ಬಗ್ಗೆ ಚರ್ಚೆ ಮಾಡಲ್ಲ ಅದರ ಅವಶ್ಯಕತೆ ನನಗೆ ಬೇಡ…
ಶ್ರೀನಿವಾಸಪುರ:- ದ್ವಿಚಕ್ರವಾಹನದಲ್ಲಿ ಮನೆಗೆ ಹೋಗುತ್ತಿದ್ದ ಬಂಗಾರದ ವ್ಯಾಪಾರಿಯೊಬ್ಬನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಹಲ್ಲೆ ನಡೆಸಿ ಬಂಗಾರ, ನಗದು ಕಿತ್ತುಕೊಳ್ಳಲು ಯತ್ನಿಸಿ ವಿಫರಾಗಿರುವ ಘಟನೆ ತಾಲ್ಲೂಕಿನ ಗುಂದೇಡು-ಲಕ್ಷ್ಮೀಪುರ ಕ್ರಾಸ್ ನಡುವೆ ಬೆಂಗಳೂರು-ಕಡಪಾ ರಸ್ತೆಯಲ್ಲಿ ನಡೆದಿರುತ್ತದೆ. ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯನ್ನು ಗುಂದೇಡು ಗ್ರಾಮದ ಹರಿನಾಥ್ ರೆಡ್ಡಿ ಎಂದು ಗುರುತಿಸಲಾಗಿದೆ ಈತ ತಾಲ್ಲೂಕಿನ ಲಕ್ಷ್ಮೀಪುರ ಕ್ರಾಸ್ ನಲ್ಲಿ ಸಣ್ಣ ಮಟ್ಟದ ಬಂಗಾರದ ಅಂಗಡಿ ನಡೆಸುತ್ತಿದ್ದ.ಎಂದಿನಂತೆ ಈತ ಸಂಜೆ ಅಂಗಡಿ ಮುಚ್ಚಿ ಮನೆಗೆ ಹಣ ಹಾಗೂ ಬಂಗಾರದ ಒಡವೇಗಳನ್ನು ಗ್ರಾಮದ ಮನೆಗೆ ತಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ 4 ಜನ ದುಷ್ಕರ್ಮಿಗಳು ಮಾರುತಿ ಹಳೇಯ ಜೆನ್ ಕಾರಿನಲ್ಲಿ ಆಗಮಿಸಿ ಲಾಂಗು, ಮಚ್ಚುಗಳಿಂದ ಹಲ್ಲೆ ನಡೆಸಿರುತ್ತರೆ ನಂತರ ಅವನ ಬಳಿ ಇದ್ದ ಹಣ, ಒಡವೇಗಳನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಹರಿನಾಥ್ ರೆಡ್ಡಿ ಮತ್ತು ದುಷ್ಕರ್ಮಿಗಳ ನಡುವೆ ಕೆಲ ಹೊತ್ತು ನೂಕಾಟ ತಳ್ಳಾಟಗಳು ನಡೆಯುತ್ತಿರುವಾಗ ಹರಿನಾಥ್ ಕಾರಿನ ಬೀಗವನ್ನು ತಗೆದು ಪಕ್ಕದ ಹೊಲಗಳಲ್ಲಿ ಬಿಸಾಡಿ ಸಹಾಯಕ್ಕಾಗಿ ದಾರಿ…
ಮೂಲ ಶ್ರೀ ಅಪ್ರಮೇಯ ದೇವರುದೇವಾಲಯದ ಆವರಣದಲ್ಲಿ ಅಂಬೆಗಾಲು ಕೃಷ್ಣನ ಗುಡಿ “ಜಗದೋದ್ದಾರನ ಆಡಿಸಿದಳೆಶೋದೆ” ಈ ಹಾಡನ್ನು ಕೇಳದ ಕನ್ನಡಿಗರಿಲ್ಲ ಪುರಂದರದಾಸರಿಗೆ ಈ ಹಾಡನ್ನು ಬರೆಯಲು ಸ್ಪೂರ್ತಿಯಾದ ಅಂಬೆಗಾಲು ಕೃಷ್ಣನ ಬಗ್ಗೆ ತಿಳಿಯೋಣ. ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚೆನ್ನಪಟ್ಟಣ ನಗರದಿಂದ 1ಕಿಮೀ ದೂರದಲ್ಲಿನ ದೊಡ್ಡಮಳೂರು ಎಂಬಲ್ಲಿದೆ ಇಲ್ಲಿನ (ನವನೀತ) ಅಂಬೆಗಾಲು ಕೃಷ್ಣನ ಗುಡಿಯಲ್ಲಿ ಮತ್ತೆಲ್ಲೂ ಕಾಣದ ಕಪ್ಪುಶಿಲೆಯ ಕೃಷ್ಣನ ಮೂರ್ತಿ ಕೈಯಲ್ಲಿ ಬೆಣ್ಣೆ ಮುದ್ದೆ ಹಿಡಿದು ತೆವಳುತ್ತಾ ಗರುಡಪೀಠದ ಮೇಲೆ ಕುಳಿತಿರುವ ಬಾಲ ಕೃಷ್ಣನನ್ನು ನೋಡುವುದೇ ಒಂದು ಸೊಗಸು. ಹರಿಣದಂತಹ ಕಣ್ಣುಗಳು, ಗುಂಗುರು ಕೂದಲು , ಕೊರಳಲಲ್ಲಿ ಹುಲಿ ಉಗುರಿನ ಪದಕ, ಕಂಠೀಹಾರ,ನಡುವಲ್ಲಿ ಒಡ್ಯಾಣ(ಡಾಬು), ಕಿಣಿ ಕಿಣಿ ನಾದದ ಕಾಲಂದಿಗೆಗಳಿಂದ ಶೋಭಿತವಾಗಿರುವಂತೆ ಮೂರ್ತಿಯನ್ನು ಕೆತ್ತಿಸಿ ಪ್ರತಿಷ್ಟಾಪಿಸಿದ್ದು ವ್ಯಾಸ ಮಹರ್ಷಿ ಎಂದು ಹೇಳಲಾಗುತ್ತದೆ. ಮುಖ ಚಂದ್ರಬಿಂಬದಂತೆ ಇದ್ದು ನಿಮ್ಮೆಡೆಗೆ ಅಂಬೆಗಾಲು ಇಡುತ್ತಾ ಬರುವಂತೆ ಭಾಸವಾಗುತ್ತದೆ. ಪುರಂದರದಾಸರು ಈ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಈ ಮೂರ್ತಿಯನ್ನು ನೋಡಿ ಮೋಹಿತರಾಗಿ ಭಾವಪರವಶತೆಯಿಂದ “ಜಗದೋದ್ದಾರನ ಆಡಿಸಿದಳೆಶೋದೆ” ಕೀರ್ತನೆ…
ಚಿಂತಾಮಣಿ:-ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕು ಜಂಗಮ ಕೋಟೆ ಹೋಬಳಿ ಚಿಂತಾಮಣಿ ತಾಲೂಕಿಗೆ ಹೊಂದಿಕೊಂಡಿರುವ ಅಮರಾವತಿ ಬಳಿ ನಿರ್ಮಿಸಲು ಉದ್ದೇಶಿಸಿರುವ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸಂಬಂದ ಪಟ್ಟ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಸ್ಥಳಕ್ಕೆ ಬೆಂಗಳೂರು ವಿಶ್ವ ವಿದ್ಯಾಲಯದ ಉಪ ಕುಲಪತಿ ಕೆಂಪರಾಜು ರವರೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅರ್.ಲತ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು ಈ ಸಂದರ್ಬದಲ್ಲಿ ಕಾಮಗಾರಿ ನಡೆಸುವ ಕುರಿತಾಗಿ ಚರ್ಚೆ ನಡೆಸಿದರು.ವಿಶ್ವ ವಿದ್ಯಾಲಯಕ್ಕೆ ಅವಶ್ಯ ಇರುವಂತ ಭೂಮಿಗಾಗಿ ಜಿಲ್ಲಾಡಳಿತದ ವತಿಯಿಂದ 110 ಎಕರೆ ಜಾಗ ಮಂಜೂರು ಮಾಡಲಾಗಿದೆ ಅವಶ್ಯ ಇರುವ 60 ಎಕರೆ ಜಾಗ ಖರೀದಿಸಲು ಕ್ರಮವಸಲಾಗುತ್ತಿದೆ ಎಂದ ಜಿಲ್ಲಾಧಿಕಾರಿ ಗ್ರಾಮೀಣ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಿತ ದೃಷ್ಟಿಯಿಂದ ಆದ್ಯತೆಯಲ್ಲಿ ಅಭಿವೃದ್ದಿಪಡಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ಎಂದರು. ಈ ಸಂಧರ್ಭದಲ್ಲಿ ಉಪವಿಭಾಗಾಧಿಕಾರಿ ರಘುನಂದನ್, ಶಿಡ್ಲಘಟ್ಟ ತಹಸೀಲ್ದಾರ್ ರಾಜೀವ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಗುಣಮಟ್ಟದ ಹಾಲು ಮತ್ತು ದಣಿವರಿಯದೆ ದುಡಿಯುವ ದೇಶಿ ತಳಿ ಅಮೃತ ಮಹಲ್’ಬೆಣ್ಣೆ ಚಾವಡಿಯೇ ಅಮೃತ ಮಹಲ್ ಆಗಿರುವುದುಮೈಸೂರು ಅರಸರು ಅಭಿವೃದ್ದಿ ಪಡಿಸಿರುವ ಗೋ ತಳಿಹಳೇ ಮೈಸೂರು ಪ್ರಾಂತ್ಯದ ಕೆಲಸಗಾರ ಗೋ ತಳಿಹೈದರಾಬಾದ್ ನಿಜಾಮನ ಸೈನ್ಯವನ್ನು ಓಡಿಸಿದ ಅಮೃತ ಮಹಲ್ ಗೋವುಗಳು ನ್ಯೂಜ್ ಡೆಸ್ಕ್:-ಅಮೃತ ಮಹಲ್ ದೇಶಿ ಗೋ ತಳಿ ಕರ್ನಾಟಕದಲ್ಲಿ ಸ್ಥಳೀಯವಾಗಿ ಅಭಿವೃದ್ದಿಯಾಗಿರುವ ತಳಿ ಇವುಗಳು ಕೆಲಸಗಾರ ತಳಿ ವರ್ಗಕ್ಕೆ ಸೇರಿದವುಗಳಾಗಿವೆ. ಕರ್ನಾಟಕದ ಹಳೇ ಮೈಸೂರು ಪ್ರಾಂತ್ಯದ ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ವಿಶೇಷವಾಗಿ ಇವೆ ಇವುಗಳನ್ನು ವಿಶೇಷವಾಗಿ ಮೈಸೂರು ಅರಸರು 1572 ರಿಂದ 1636ರ ಕಾಲಘಟ್ಟದಲ್ಲಿ ಅಭಿವೃದ್ಧಿಗೊಳಿಸಿಲಾಗಿದ್ದು ಯುದ್ಧಗಳ ಸಂದರ್ಭದಲ್ಲಿ ಸಾಮಾನು ಸರಂಜಾಮುಗಳ ಸಾಗಾಟಕ್ಕಾಗಿ ಈ ತಳಿಯ ಅಭಿವೃದ್ಧಿಯಾಯಿತು ಎನ್ನುತ್ತಾರೆ.1617-1704 ರಲ್ಲಿ ಆಗಿನ ಮೈಸೂರಿನ ಮಹಾರಾಜರು ಕಾಲಾನುಸಾರವಾಗಿ ಕರುಹಟ್ಟಿಗೆ ರಾಸುಗಳನ್ನು ಸೇರಿಸಿ, ಈ ರಾಸುಗಳಿಗೆ ನಿಗದಿತ ‘ಕಾವಲು’ಗಳನ್ನು ತಮ್ಮ ರಾಜ್ಯದ ವಿವಿಧ ಭಾಗದಲ್ಲಿ ನೀಡಿದರು. ಅಂದಿನ ಮಹಾರಾಜರಾದ ಚಿಕ್ಕದೇವರಾಜ ಒಡೆಯರ್ ರವರು ಈ ಸಂಸ್ಥೆಗೆ ‘ಬೆಣ್ಣೆ ಚಾವಡಿ’…
ಕರ್ನಾಟಕ ರಾಜಕೀಯದ ಬಗ್ಗೆ ಉಪಾಪೋಹಗಳದೆ ಕಾರುಬಾರುಗಂಟೆಗೊಂದು ಗಳಿಗೆಗೊಂದು ಸುದ್ದಿಗಳು ಹೊರಬರುತ್ತಿವೆಬದಲಾಗುತ್ತಿರುವ ಕರ್ನಾಟಕದ ರಾಜಕೀಯ ಪರಿಸ್ಥಿತಿಗಳು ನ್ಯೂಜ್ ಡೆಸ್ಕ್:ಕರ್ನಾಟಕದ ರಾಜಕೀಯದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಮುಖ್ಯಮಂತ್ರಿಯನ್ನು ಬದಲಾಯಿಸಲಾಗುವುದು ಎಂಬ ಉಹಾಪೋಹ ಸುದ್ದಿಗಳಿಗೆ ರೆಕ್ಕೆ ಪುಕ್ಕ ಬಂದು ಕರ್ನಾಟಕದ ರಾಜಕೀಯ ಪಡಸಾಲೆಯಲ್ಲಿ ತೆಲುತ್ತಿವೆ.ಈ ತಿಂಗಳ 26 ರಂದು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಎರಡು ವರ್ಷಗಳು ಪೂರ್ಣಗೊಳ್ಳುತ್ತದೆ ಅದಕ್ಕಾಗಿ 25 ರಂದು ಪಕ್ಷದ ಶಾಸಕರು ಮತ್ತು ಮಂತ್ರಿಗಳಿಗೆ ಸಿಎಂ ಯಡಿಯೂರಪ್ಪ.ಬಾರಿ ಪ್ರಮಾಣದ ಭೋಜನ ಕೂಟ ಎರ್ಪಡಿಸಿದ್ದರು ಆದರೆ ಬದಲಾದ ಸನ್ನಿವೇಶದ ಹಿನ್ನಲೆಯಲ್ಲಿ ಭೋಜನ ಕೂಟದ ಬದಲಾಗಿ ಎರಡು ವರ್ಷಗಳ ಸಾಧನೆಯನ್ನು ನಾಡಿನ ಜನತೆಗೆ ತಲುಪಿಸಲು 26 ರಂದು ಸೋಮವಾರ ‘ಸಾಧನಾ’ ಎಂಬ ಕಾರ್ಯಕ್ರಮವನ್ನು ವಿಧಾನಸೌದದ ಬ್ಯಾಂಕ್ವಿಟ್ ಸಭಾಂಗಣದಲ್ಲಿ ಸರಳವಾಗಿ ಆಯೋಜಿಸಲಾಗಿದೆ ಎಂದು ಸರ್ಕಾರದ ಮುಖ್ಯ ಸಚೇತಕ ಸುನಿಲ್ ಕುಮಾರ್ ಹೇಳಿರುವುದಾಗಿ ತಿಳಿದುಬಂದಿದೆ.ಈ ನಡುವೆ ಸಚಿವ ಶ್ರೀರಾಮ್ ಅವರನ್ನು ಬಿಜೆಪಿ ಹೈಕಮಾಂಡ್ ದೆಹಲಿಗೆ ಬರಲು ಹೇಳಿದೆ, ಈ ಎಲ್ಲಾ ಬೆಳವಣಿಗೆಗಳ ಹಿನ್ನಲೆಯಲ್ಲಿ ಈ ತಿಂಗಳ…
ನಾರೆಪ್ಪ ಸಿನಿಮಾದಲ್ಲಿ ಮದ್ಯವಯಸ್ಕನಾಗಿ ಇಬ್ಬರು ಮಕ್ಕಳ ತಂದೆಯಾಗಿ ಸಾಮಾನ್ಯ ಕುಟುಂಬದ ಯಜಮಾನನಾಗಿ ವಿಕ್ಟರಿ ವೆಂಕಟೇಶ್ ಅದ್ಭುತವಾಗಿ ನಟಿಸಿದ್ದಾರೆ.ನಿನ್ನೆಯಷ್ಟೆ ಡಿಜಿಟಲ್ ಫ್ಲಾಟ್ ಫಾರ್ಮಾಂ ಅಮೇಜಾನ್ ಪ್ರೈಂ ನಲ್ಲಿ ಬಿಡುಗಡೆಯಾಗಿರುವ ತೆಲಗು ಸಿನಿಮಾ ನಾರಪ್ಪ ರೀವೂಮೂಲತಃ ತಮಿಳು ಸಿನಿಮಾ “ಅಸುರನ್” ರೀಮೇಕ್ ಆಗಿರುವ “ನಾರೆಪ್ಪ” ತೆಲಗು ನೆಟಿವೇಟಿಗೆ ಹೊಂದಿಕೊಳ್ಳುವಂತೆ ಭಟ್ಟಿ ಇಳಿಸಲಾಗಿದೆ ನ್ಯೂಜ್ ಡೆಸ್ಕ್ :-ನಿರ್ದೇಶಕ ಶ್ರೀಕಾಂತ್ ಅದ್ದಾಲಾ ಅವರು ಮೂಲ ಚಿತ್ರಕ್ಕಿಂತ ಉತ್ತಮವಾಗಿ ತೆಲಗು ರಿಮೇಕ್ ಮಾಡಿದ್ದಾರೆ,ಇದು ನಿರ್ದೇಶಕರ ಮೊದಲ ರಿಮೇಕ್ ಚಿತ್ರ ಇದುವರಿಗೂ ಸಾಕಷ್ಟು ನೇರವಾಗಿ ತೆಲಗು ಸಿನಿಮಾಗಳನ್ನು ನಿರ್ದೇಶಿಸಿದ್ದು ಮೊದಲ ಬಾರಿಗೆ ರೀಮೇಕ್ ಚಲನಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.ತಮಿಳುನಾಡಿನ ತಿರುನಲ್ ವೇಲಿ ಎಂಬಲ್ಲಿ ನಡೆದಂತ ನೈಜ ಕಥೆಯನ್ನು ಆದರಿಸಿ ಮೊದಲಿಗೆ ತಮಿಳಲ್ಲಿ ಸಿನಿಮಾ ಮಾಡಿದ್ದು ರಜನಿಕಾಂತ್ ಅಳಿಯ ಧನುಷ್ ನಟಿಸಿ ವೆಟ್ರಿಮಾರನ್ ನಿರ್ದೇಶನದ ‘ಅಸುರನ್’ ಎಂಬ ತಮಿಳು ಚಿತ್ರರಂಗದಲ್ಲಿ ಭಾರಿ ಯಶಸ್ಸ ಕಂಡಿತುಅದನ್ನು ತೆಲುಗಿನಲ್ಲಿ ವೆಂಕಟೇಶ್ ಅವರೊಂದಿಗೆ, ಹಿಂದೆ ಘರ್ಷಣ ಸಿನಿಮಾ ಮಾಡಿದ್ದ ಕಲೈಪುಲಿ ಎಸ್. ತನು, “ನಾರಪ್ಪ” ತಗೆಯಲು ಮುಂದಾದಾಗ…
ಶ್ರೀನಿವಾಸಪುರ:-ಕೊರೋನಾ ಸೋಂಕಿನಿಂದ ನಿಧನರಾದ ಇಬ್ಬರು ಪತ್ರಕರ್ತರಿಗೆ ಕೋಲಾರದ ಸಂಸದ ಮುನಿಸ್ವಾಮಿ ವೈಯುಕ್ತಿಕ ಧನ ಸಹಾಯ ಮಾಡಿರುತ್ತಾರೆ.ಕೊರೋನಾ ಎರಡನೆ ಅಲೆಯ ಸೋಂಕಿನಿಂದ ನಿಂದ ಮೃತ ಪಟ್ಟ ಪತ್ರಕರ್ತರಾದ ಎನ್.ಎಸ್.ಮೂರ್ತಿ ಹಾಗು ಕೊಳ್ಳೂರುನಾಗೇಂದ್ರ ಅವರ ಕುಟುಂಬಗಳಿಗೆ ಕೋಲಾರದ ಸಂಸದ ಮುನಿಸ್ವಾಮಿ ತಲಾ ಐವತ್ತು ಸಾವಿರ ರೂಪಾಯಿಗಳ ಧನ ಸಹಾಯ ಮಾಡಿರುತ್ತಾರೆ.ಕೋಲಾರದಲ್ಲಿ ನಡೆದ ಪತ್ರಕಾ ದಿನಾಚರಣೆಯಂದು ಪತ್ರಕರ್ತರ ಭವನದಲ್ಲಿ ಎನ್.ಎಸ್.ಮೂರ್ತಿ ಅವರ ಪತ್ನಿ ಅಂಬಿಕಾ ಅವರಿಗೆ ಸಂಸದ ಹಾಗು ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದತಗಡೂರು ಕೊಲಾರ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಮುನಿರಾಜು,ನಿಕಟ ಪೂರ್ವ ಅಧ್ಯಕ್ಷ ಗಣೇಶ್, ರಾಜ್ಯಕಾರ್ಯಕಾರಿಣಿ ಸದಸ್ಯ ಗೋಪಿನಾಥ್ ಪ್ರಧಾನಕಾರ್ಯದರ್ಶಿ ಚಂದ್ರಶೇಖರ್,ಖಜಾಂಜಿ ಸುರೇಶಕುಮಾರ್ ಹಸ್ತಾಂತರಿಸಿದರು. ಕೊಳ್ಳೂರುನಾಗೇಂದ್ರ ಅವರಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ವೇಣುಗೋಪಾಲ್.ತಾಲೂಕು ಅಧ್ಯಕ್ಷ ಅಶೋಕರೆಡ್ಡಿ, ಹಿರಿಯ ಮುಖಂಡ ಅವಲಕುಪ್ಪಜಯರಾಮರೆಡ್ಡಿ,ರೋಟರಿ ಶಿವಮೂರ್ತಿ ಅವರು ಸ್ವಗೃಹಕ್ಕೆ ತೆರಳಿ ವಿತರಿಸಿದರು.