Author: admin

ಶ್ರೀನಿವಾಸಪುರ:- ಜಡಿಮಳೆಯಲ್ಲಿ ಬೆಂಗಳೂರಿನಿಂದ ಶ್ರೀನಿವಾಸಪುರದ ಕಡೆ ಬರುತ್ತಿದ್ದ ಖಾಸಗಿ ಬಸ್ಸಿಗೆ ಚಿಂತಾಮಣಿ ಕಡೆಗೆ ಹೋರಟಿದ್ದ ಕ್ಯಾಂಟರ್ ಡಿಕ್ಕಿ ಹೋಡೆದು ಬಸ್ಸಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಇಂದು ಸಂಜೆ ಚಿಂತಾಮಣಿ-ಶ್ರೀನಿವಾಸಪುರ ರಸ್ತೆಯ ಕಲ್ಲೂರು ಕೆರೆ ಕಟ್ಟೆ ಮೇಲೆ ನಡೆದಿರುತ್ತದೆ.ಶ್ರೀನಿವಾಸಪುರದಿಂದ ಚಿಂತಾಮಣಿ ಕಡೆಗೆ ಹೋರಟಿದ್ದ ಕ್ಯಾಂಟರ್ ಅತಿವೇಗದಿಂದ ವಾಹನ ಚಾಲನೆ ಮಾಡಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್ ಶ್ರೀನಿವಾಸಪುರದ ಕಡೆಗೆ ಬರುತ್ತಿದ್ದ ಬೆಂಗಳೂರು MBS ಖಾಸಗಿ ಬಸ್ ಗೆ ಡಿಕ್ಕಿ ಹೊಡೆದಿರುತ್ತಾನೆ,ಬಸ್ಸಿನಲ್ಲಿದ್ದ ಸುಮಾರು 30 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಯಾವುದೆ ಪ್ರಾಣಪಯವಾಗಿಲ್ಲ ಎನ್ನಲಾಗಿದೆ.ಈ ಸಂದರ್ಭದಲ್ಲಿ ಬಸ್ ಚಾಲಕನ ಸಮಯ ಪ್ರಙ್ಞೆಯಿಂದ ಬಸ್ಸು ಕಲ್ಲೂರು ಕೆರೆಗೆ ಬೀಳುವುದನ್ನು ತಪ್ಪಿಸಿದ್ದಾಗಿ ಬಸ್ ಪ್ರಯಾಣಿಕರು ಹೇಳುತ್ತಾರೆ.ಅಪಘಾತ ನಡೆದು ಸ್ಥಳಿಯರು ಮಾಹಿತಿ ನೀಡಿದರಾದರೂ ಸಮಯಕ್ಕೆ 108 ಅಂಬೂಲೆನ್ಸ್ ಬಾರದೇ ಹೋಯಿತು ಎನ್ನುತ್ತಾರೆ ಪ್ರತ್ಯಕ್ಷ ದರ್ಶಿಗಳು. ರಾಷ್ಟ್ರೀಯ ಹೆದ್ದಾರಿ ಇಂಜನೀಯರಗಳ ನಿರ್ಲಕ್ಷ್ಯ ಕೆರೆ ಕಟ್ಟೆಗೆ ತಡೆ ಗೋಡೆ ಇಲ್ಲ!ರಾಷ್ಟ್ರೀಯ ಹೆದ್ದಾರಿ 234 ಕಲ್ಲೂರು ಕೆರೆ ಕಟ್ಟೆ ಮೇಲೆ…

Read More

ರಸ್ತೆ ಮೂಲಕ ಸಾಗಿಸಿದ್ದರೆ ಸಾಗಾಣಿಕೆಗೆ ದುಬಾರಿಕೆಜಿ ಮಾವು ಸಾಗಿಸಲು 10 ರಿಂದ 12 ರೂಪಾಯಿ ಆಗುತಿತ್ತುರೈಲಿನಲ್ಲಿ ಕೆಜಿ ಮಾವು 2 ರಿಂದ 3 ರೂಪಾಯಿ ವೆಚ್ಚ ಆಗುತ್ತಂತೆಕಿಸಾನ್ ರೈಲಿನಲ್ಲಿ ಮೂವತ್ತು ಸಾವಿರ ಟನ್ ಮಾವು ಸಾಗಾಣಿಕೆ ಶ್ರೀನಿವಾಸಪುರ:- ಶ್ರೀನಿವಾಸಪುರ ಭಾಗದ ಸುಮಾರು ಮೂವತ್ತು ಸಾವಿರ ಟನ್ ಮಾವಿನ ಕಾಯಿಯನ್ನು ವಿಶೇಷ ಕಿಸಾನ್ ರೈಲಿನಲ್ಲಿ ಇದುವರಿಗೂ ಉತ್ತರ ಭಾರತಕ್ಕೆ ರವಾನೆ ಮಾಡಿದೆ. ಶ್ರೀನಿವಾಸಪುರ-ಚಿಂತಾಮಣಿ ನಡುವಿನ ಪೆದ್ದನೆತ್ತ ರೈಲ್ವೇ ಸ್ಟೇಷನ್ ನಿಂದ ಮಾವಿನ ಕಾಯಿ ಹೊತ್ತು ಹೋರಡುವ ಕಿಸಾನ್ ರೈಲು ಇದುವರಿಗೂ 12 ಬಾರಿ ಇಲ್ಲಿಂದ ಹೋಗಿದ್ದು ಪ್ರತಿ ಬಾರಿ ಅಂದಾಜು 250 ಟನ್ ಮಾವಿನ ಕಾಯಿಯನ್ನು ಸಾಗಿಸುತ್ತಿದೆ ಎಂದು ರೈಲ್ವೆ ಸಿಬ್ಬಂದಿ ಹೇಳುತ್ತಾರೆ.ಪೆದ್ದನೆತ್ತ ರೈಲ್ವೇ ಸ್ಟೇಷನಿಂದ ದೆಹಲಿಯ ಆದರ್ಶ ನಗರ ರೈಲ್ವೇ ಸ್ಠಷನ್ ಗೆ ಹೋಗುವ ರೈಲಿನಲ್ಲಿ ಇದುವರಿಗೂ ಬೆನುಷಾ(ಬೈಗಂಪಲ್ಲಿ) ಜಾತಿಯ ಮಾವಿನ ಕಾಯಿಯನ್ನು ಮಾತ್ರ ರವಾನಿಸಿದೆ ಎಂದು ಮಾವಿನ ವ್ಯಾಪರಸ್ಥ ರಾಜಧಾನಿ ಸಂಸ್ಥೆಯ ಮುಜಾಯಿದ್ ಅನ್ಸಾರಿ ತಿಳಿಸಿರುತ್ತಾರೆ ದೆಹಲಿಯ ಖ್ಯಾತ ವ್ಯಾಪರಸ್ಥರೊಬ್ಬರು…

Read More

ಶ್ರೀನಿವಾಸಪುರ:-ತಾಲೂಕಿನ ಪ್ರತಿಷ್ಠಿತ ಪಂಚಾಯಿತಿ ಕೇಂದ್ರವಾದ ಜೆ.ತಿಮ್ಮಸಂದ್ರ ಪಂಚಾಯಿತಿ ಜೆ.ಡಿ.ಎಸ್ ಪಾಲಾಗಿದೆ ಇದುವರಿಗೂ ಅಲ್ಲಿ ಕಾಂಗ್ರೆಸ ಅಧಿಕಾರದಲ್ಲಿತ್ತು ಅದ್ಯಕ್ಷರಾಗಿದ್ದ ಕಾಂಗ್ರೆಸ್ ಬೆಂಬಲಿತ ಅಲವಾಟ ಚೌಡಮ್ಮ ಆನಾರೋಗ್ಯದಿಂದ ಮೃತ ಪಟ್ಟ ಹಿನ್ನಲೆಯಲ್ಲಿ ನಡೆದ ಅಧ್ಯಕ್ಷ ಪದವಿ ಚುನಾವಣೆಯಲ್ಲಿ ಮೂವರು ಕಾಂಗ್ರೆಸ್ ಸದಸ್ಯರು ಜೆ.ಡಿ.ಎಸ್ ಪರ ಬೆಂಬಲ ವ್ಯಕ್ತಪಡಿಸಿದ್ದು ಮತ್ತು ಒಂದು ಕ್ರಾಸ್ ಮತದ ಬೆಂಬಲದೊಂದಿಗೆ ಜೆ.ತಿಮ್ಮಸಂದ್ರ ಪಂಚಾಯಿತಿಯಲ್ಲಿ ಜೆ.ಡಿ.ಎಸ್ ಅಧಿಕಾರ ಪಡೆದುಕೊಂಡಿದೆ.17 ಸಂಖ್ಯಾ ಬಲದ ಜೆ.ತಿಮ್ಮಸಂದ್ರ ಪಂಚಾಯಿತಿಯಲ್ಲಿ ಕಾಂಗ್ರೆಸ್ 10 ಜೆ.ಡಿ.ಎಸ್ 7 ಜನ ಸದಸ್ಯರಿದ್ದು ಅಧ್ಯಕ್ಷರಾಗಿದ್ದ ಚೌಡಮ್ಮ ನಿಧನರಾದ ಹಿನ್ನಲೆಯಲ್ಲಿ ಅಧ್ಯಕ್ಷ ಪದವಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರಸ್ ಬೆಂಬಲಿತ ಕಲ್ಲೂರು ಗ್ರಾಮದ ಸದಸ್ಯರಾದ ಶಂಕರರೆಡ್ಡಿ ಮಂಜುಳವೆಂಕಟ್ರಮಣ ಮತ್ತು ಜೆ.ವಿ ಕಾಲೋನಿ ಕೃಷ್ಣಮ್ಮವೆಂಕಟರಮಣ ಜೆ.ಡಿ.ಎಸ್ ಪರವಾಲಿದಲ್ಲದೇ ಕೃಷ್ಣಮ್ಮವೆಂಕಟರಮಣ ಜೆ.ಡಿ.ಎಸ್ ಬೆಂಬಲದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲು ಕಾರಣಗಳುಜೆ.ತಿಮ್ಮಸಂದ್ರ ಪಂಚಾಯಿತಿಯಲ್ಲಿ ಕಾಂಗ್ರೆಸ್ ಗೆ ಅಧಿಕಾರ ಕಳೆದುಕೊಳ್ಳಲು ಕಸಬಾ ಹೋಬಳಿಯ ಕೆಲ ಯುವ ಮುಖಂಡರು ಜೆ.ತಿಮ್ಮಸಂದ್ರ ಪಂಚಾಯಿತಿಯಲ್ಲಿ ತಮ್ಮ ವೈಯುಕ್ತಿಕ ರಾಜಕೀಯ ಬೆಳೆ ಬೆಯಿಸಿಕೊಳ್ಳಲು ಪಂಚಾಯಿತಿ…

Read More

ಕೋಲಾರ:- ಕೋಲಾರ ನಗರದ ಬೆಂಗಳೂರು ಹೈವೆಯಲ್ಲಿ ವಿನಯ ಸಭಾಂಗಣದ ಪಕ್ಕದಲ್ಲಿರುವ ಕರ್ನಾಟಕ ವಿದ್ಯತ್ ಸರಬರಾಜು ಕೆ.ಪಿ.ಟಿ.ಸಿ.ಎಲ್ ವಿದ್ಯತ್ ಸರಬರಾಜು ಪವರ್ ಸ್ಟೇಷನ್ ನಲ್ಲಿ ಬಾರಿಗಾತ್ರದ ಎರಡು ಟ್ರಾನ್ಸ್ ಫಾರಮರ್ ಗಳು ಶನಿವಾರ ಮಧ್ಯಾನಃ ಶಾರ್‍ಟ ಸರ್ಕಿಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಬೆಂಕಿಯ ಜ್ವಾಲೆಗಳು ಆಕಾಶದೆತ್ತರಿಕ್ಕೆ ಏರಿದ್ದು ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹ ಪಡುತ್ತಿದ್ದಾರೆ. ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ ಎನ್ನಲಾಗಿದೆ. ಕೋಲಾರ ನಗರ ಸೇರಿದಂತೆ ಸುತ್ತ ಮುತ್ತಲ ಗ್ರಾಮೀಣ ಭಾಗದ ವಿದ್ಯತ್ ಸರಬರಾಜು ಇಲ್ಲ

Read More

ನ್ಯೂಜ್ ಡೆಸ್ಕ್:- ಕೋವಿಶೀಲ್ಡ್‌ ಲಸಿಕೆ ಎರಡನೆಯ ಡೋಸ್‌ ನಡುವೆ ಅಂತರ ಹೆಚ್ಚಿದರೆ ಹೆಚ್ಚು ಲಾಭ ಆಗಲಿದೆ ಎಂದು ಆಧ್ಯಯನಗಳಲ್ಲಿ ಹೇಳಲಾಗುತ್ತಿದಿಯಂತೆ. ಮೊದ ಮೊದಲು ಎರಡ್ನೆಯ ಡೋಸ್‌ ಲಸಿಕೆ ಪಡೆಯಲು ಹೆಚ್ಚಿನ ಅಂತರ ಇರುವಂತೆ ಸರ್ಕಾರಗಳು ಹೇಳಿತ್ತು ಇದು ಲಸಿಕೆಯ ಕೊರತೆಯಿಂದ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂಬ ಆರೋಪ ಕೇಳಿಬಂದಿತ್ತು, ಆದರೆ ಈಗ ಆಕ್ಸ್‌ಫರ್ಡ್ ಅಧ್ಯಯನದ ಪ್ರಕಾರ ಅಚ್ಚರಿಯ ವರದಿಯೊಂದು ಬಹಿರಂಗವಾಗಿದ್ದು ಕೋವಿಶೀಲ್ಡ್‌ ಲಸಿಕೆಯ ಡೋಸ್‌ಗಳ ನಡುವಿನ ಅಂತರ ಹೆಚ್ಚಾಗಿ ಅಂದಾಜು 10 ತಿಂಗಳು ಇದ್ದರೆ ಹೆಚ್ಚು ಆ್ಯಂಟಿಬಾಡಿ ಬೂಸ್ಟ್‌ ಮಾಡುತ್ತದೆ ಎಂದು ಆಕ್ಸ್‌ಪರ್ಡ್‌ ವರದಿ ಹೇಳಿದೆ. ಕೋವಿಶೀಲ್ಡ್‌ ಲಸಿಕೆಯ ಎರಡು ಡೋಸ್‌ಗಳನ್ನು 44-45 ವಾರಗಳ ಅಂತರದಲ್ಲಿ ತೆಗೆದುಕೊಂಡರೆ 8-12 ವಾರಗಳ ಅಂತರದಲ್ಲಿ ನೀಡಿದ್ದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಪ್ರತಿಕಾಯಗಳನ್ನು ಉತ್ಪಾದಿಸುತ್ತವೆ ಎಂದು ಲಸಿಕೆಯ ಡೆವಲಪರ್‌ಗಳಾದ ಆಕ್ಸ್‌ಫರ್ಡ್ ಲಸಿಕಾ ಸಮೂಹ ವರದಿ ಮಾಡಿದೆ.ಇದು ಒಂದನೆ ಲಸಿಕೆ ಪಡೆದು ಎರಡನೆಯದಕ್ಕೆ ಯಾಯುವರಿಗೊಂದು ಒಳ್ಳೆಯ ಅವಕಾಶ ಕಲ್ಪಿಸಿದಂತಾಗುತ್ತದೆ.ಆ್ಯಂಟಿಬಾಡಿ ಮಟ್ಟವು ಸುಮಾರು ಒಂದು ವರ್ಷದವರೆಗೆ…

Read More

ರಾಜ್ಯದಲ್ಲಿ ಮತ್ತೆ ಏರಿದ ಕೊರೋನಾಶನಿವಾರ 4 ಸಾವಿರಕ್ಕೂ ಹೆಚ್ಚು ಹೊಸ ಕೇಸ್ ಪತ್ತೆ ನ್ಯೂಜ್ ಡೆಸ್ಕ್:-ಆರ್ಥಿಕ ಚಟುವಟಿಕೆಗಳು ಚುರುಕಾಗಲು ಲಾಕ್ಡೌನ್ ಸಡಿಲಗೊಳಿಸಿ ಪರಿಸ್ಥಿತಿ ಮತ್ತೆ ಎತಾಸ್ಥಿತಿಗೆ ತರುತ್ತಿದ್ದಂತೆ ಮರೆಯಲ್ಲಿದ್ದ ರಾಜ್ಯದಲ್ಲಿ ಕೊರೋನಾ ವೈರಸ್ ತನ್ನ ಆರ್ಭಟವನ್ನು ಮತ್ತೆ ಶುರು ಹಚ್ಚಿಕೊಂಡಿದೆ ರಾಜ್ಯದಲ್ಲಿ ಶನಿವಾರ 4,272 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಕೊರೋನಾ 2ನೇ ಅಲೆಯ ಅಂತ್ಯದಲ್ಲಿದ್ದು, ಮೂರು ಅಂಕಿಗೆ ಸೋಂಕಿತರ ಸಂಖ್ಯೆ ಬರುವವರೆಗೂ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕೋವಿಡ್ ತಾಂತ್ರಿಕ ಸಮಿತಿಯ ಸದಸ್ಯರಾಗಿರುವ ಡಾ.ಸಿಎನ್. ಮಂಜುನಾಥ್ ಅವರು ಮಾತನಾಡಿ, ರಾಜ್ಯದಲ್ಲಿ ದೈನಂದಿನ ಪರೀಕ್ಷೆಯ ಸಂಖ್ಯೆ 1.7 ಲಕ್ಷಕ್ಕೆ ಏರಿಕೆಯಾಗಿದೆ. ಇದಲ್ಲದೆ, ಅಂತರ್ ರಾಜ್ಯ ಮತ್ತು ಅಂತರ್ ಜಿಲ್ಲಾ ಪ್ರಯಾಣಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಾಗುತ್ತಿದೆ. ಇದೀಗ ನಾವು ಕೊರೋನಾ 2ನೇ ಅಲೆಯ ಅಂತಿಮ ಹಂತದಲ್ಲಿದ್ದೇವೆ. ಮೊದಲ ಅಲೆ ಅಂತ್ಯದಲ್ಲಿ ಮೂರು ಅಂಕಿಗಳ ಸೋಂಕನ್ನು ನೋಡಿದ್ದೆವು. ಶೀಘ್ರದಲ್ಲೇ ಮೂರಂಕಿ ಸೋಂಕಿತರ ಸಂಖ್ಯೆ ನೋಡಲಿದ್ದೇವೆಂದು…

Read More

ನ್ಯೂಜ್ ಡೆಸ್ಕ್:- ಅಕ್ರಮವಾಗಿ ವಾಸಮಾಡುತ್ತಿದ್ದ ಬಾಂಗ್ಲಾದೇಶದ ಪ್ರಜೆಗಳಿಗೆ ಅಕ್ರಮವಾಗಿ ನಿವಾಸಿ ಪ್ರಮಾಣಪತ್ರವನ್ನು (residence certificate) ನೀಡಿದ ಆರೋಪದ ಮೇಲೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಒರ್ವ ಮಾಜಿ ಕೌನ್ಸಿಲರ್ ನನ್ನು ಬಂಧಿಸಲಾಗಿದೆ. ಈ ಪ್ರಮಾಣ ಪತ್ರದ ಅಧಾರದಲ್ಲಿ ಅಕ್ರಮ ಬಾಂಗ್ಲಾವಾಸಿಗಳು ಭಾರತದ ಮತದಾನದ ಗುರುತಿನ ಚೀಟಿ ಮತ್ತು ಇತರೇ ಭಾರತೀಯ ದಾಖಲೆಗಳನ್ನು ಪಡೆಯಲು ಸಹಾಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.ವೀಸಾ ಅವಧಿ ಮುಗಿದ ಕಾರಣ ಬಾಂಗ್ಲಾದೇಶದ ನಾಗರಿಕ ನಯನ್ ಸರ್ಕಾರ್ ಮತ್ತು ಅವನ ಕುಟುಂಬದ ಸದಸ್ಯರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅಕ್ರಮವಾಗಿ ತಂಗಿದ್ದರು ಎಂದು ಪೊಲೀಸರು ಹೇಳಿದ್ದು ಮಾಜಿ ಕೌನ್ಸಿಲರ್ ಸಂಜಯ್ ಮೆಶಾಕ್ ಅವರು ನಯನ್ ಸರ್ಕಾರ್, ಮತ್ತು ಅವನ ಸಹೋದರ ಮತ್ತು ಪೋಷಕರಿಗೆ ನಿವಾಸಿ ಪ್ರಮಾಣಪತ್ರಗಳನ್ನು ಕೋಡಿಸಿರುತ್ತಾನೆ.ಈ ಪ್ರಮಾಣಪತ್ರಗಳು ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಪಡೆಯಲು ಸಹಾಯ ಮಾಡಿದೆ. ಅಧಿಕೃತ ದಾಖಲೆಗಳಿಲ್ಲದೆ ಭಾರತದಲ್ಲಿ ಅಕ್ರಮವಾಗಿ ಉಳಿದುಕೊಂಡಿದ್ದಕ್ಕಾಗಿ ಸರ್ಕಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಸರ್ಕಾರ್ ಮತ್ತು ಅವರ…

Read More

ನ್ಯೂಜ್ ಡೆಸ್ಕ್:- ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮುಲಕಲೆಚೆರವು ವ್ಯಾಪ್ತಿಯ ಪೆದ್ದತಿಪ್ಪಸಮುದ್ರಂ ವಲಯದಲ್ಲಿ ಶುಕ್ರವಾರ ನಡೆದ ದಾಳಿಯಲ್ಲಿ ಕರ್ನಾಟಕದ ಮದ್ಯದ 434 ಪ್ಯಾಕೆಟ್‌ಗಳನ್ನು ಚಿತ್ತೂರು ಎಸ್.ಇ.ಬಿ ಅಧಿಕಾರಿಗಳು ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿ ನಾಲ್ಕು ಮೋಟರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಿಟಿಎಂ ವಲಯ ಸಂಪತಿ ಫೋರ್ಟ್ ಕ್ರಾಸ್‌ನಲ್ಲಿ ಎಸ್‌ಇಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ತಪಾಸಣೆ ನಡೆಸಿದಾಗ್ ಅನಂತಪುರ ಜಿಲ್ಲೆಯ ತನಕಲ್ಲು ವಲಯದ ನಂದಗಣಿಪಲ್ಲಿಗೆ ದ್ವಿಚಕ್ರ ವಾಹನದಲ್ಲಿ ಮದ್ಯ ಸಾಗಿಸುತ್ತಿದ್ದ ಹುಸೇನ್ ಬಾಷಾ, ಕರ್ನಾಟಕದ ಭಜಂತ್ರಿ ಸಿದ್ಧಿಯಾ ಅವರನ್ನು ಬಂಧಿಸಿ 192 ಕರ್ನಾಟಕ ಮದ್ಯ ಪ್ಯಾಕೆಟ್‌ಗಳು ಸೇರಿದಂತೆ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, 96 ಪ್ಯಾಕೆಟ್ ಮದ್ಯವನ್ನು ಬಿ. ಕೊಟ್ಟಕೋಟಕ್ಕೆ ಸಾಗಿಸುತ್ತಿದ್ದ ಶಂಕರ್‌ನನ್ನು ಬಂಧಿಸಲಾಗಿ, ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಹಳೆಯ ಮುಲಕಲಾ ಚೆರುವು ಪಂಚಾಯತ್ ಬುರುಜುಪಲ್ಲೆಗೆ ಮದ್ಯದ ಪ್ಯಾಕೆಟ್‌ಗಳನ್ನು ಸಾಗಿಸುತ್ತಿದ್ದ ರೆಡ್ಡೇಪ್ಪನನ್ನು ಬಂಧಿಸಲಾಗಿದ್ದು, 48 ಕರ್ನಾಟಕ ಮದ್ಯದ ಪ್ಯಾಕೆಟ್‌ಗಳು ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳನ್ನು ನೋಡಿದ ವ್ಯಕ್ತಿಯೊಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. 96 ಮದ್ಯದ ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.…

Read More

ಶ್ರೀನಿವಾಸಪುರ:- ಕೊರೋನಾ ರೋಗಿಗಳನ್ನು ಆರೈಕೆ ಮಾಡುತ್ತಿರುವ ಡಿ ಗ್ರೂಪ್ ನೌಕರರ ಪಾತ್ರ ಬಹಳ ದೊಡ್ಡದು ಅವರ ಕಾರ್ಯವನ್ನು ಸಮಾಜ ಗುರುತಿಸಬೇಕಾದ ಅವಶ್ಯಕತೆ ಇದೆ, ಕೋವಿಡ್ ರೋಗಿಗಳು ಬಳಸುವಂತ ವಸ್ತುಗಳನ್ನು ಹೊರ ಹಾಕಿ ಕೋಠಡಿಗಳನ್ನು ಸ್ವಚ್ಚಮಾಡುವಂತ ನೌಕರರು ಮಾತೃ ಸ್ವರೂಪಿಗಳು ನಿಷ್ಕಳಂಕರಾಗಿ ರೋಗಿಗಳ ಆರೈಕೆಯಲ್ಲಿ ತೊಡಗುವ ಅವರ ಸೇವೆ ಅನನ್ಯ ಎಂದು ಎಸ್.ಎಸ್.ವಿ.ಎಸ್ ಟ್ರಸ್ಟ್ ಕಾರ್ಯದರ್ಶಿ ಶ್ರೀನಿವಾಸಮೂರ್ತಿ ಹೇಳಿದರು ಅವರು ಮ್ಯಾಂಗೋಸ್ ಹೇವೆನ್ ವ್ಯಾಟ್ಸಾಪ್ ಗ್ರೂಪ್ ಸದಸ್ಯರು ಎಸ್.ಎಸ್.ವಿ.ಎಸ್ ಟ್ರಸ್ಟ್ ಸಹಯೋಗದೊಂದಿಗೆ ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಯಲ್ಲಿ “ಡಿ” ಗ್ರೂಪ್ ನೌಕರರಾಗಿ ದುಡಿಯುತ್ತಿರುವ ಸುಮಾರು ಇಪ್ಪತ್ತೇಂಟು ಮಂದಿ ನೌಕರರಿಗೆ ಗೌರವನಗದು ನೀಡಿ ಗೌರವಿಸಿ ಮಾತನಾಡಿದರು.ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ ಆಸ್ಪತ್ರೆಯ “ಡಿ” ಗ್ರೂಪ್ ನೌಕರರು ಸೇವೆ ಗುರುತಿಸಿ ಅವರನ್ನು ಗೌರವಿಸಿರುವಂತ ಮ್ಯಾಂಗೋಸ್ ಹೇವೆನ್ ವ್ಯಾಟ್ಸಾಪ್ ಗ್ರೂಪ್ ಸದಸ್ಯರ ನಡೆ ನಿಜಕ್ಕೂ ಶ್ಲಾಘನೀಯ ಇದೊಂದು ಮಾದರಿ ತಿರ್ಮಾನ ಎಂದರು. ಕೋವಿಡ್ ರೋಗಿಗಳಿಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಡಾ.ಉಮಾಶಂಕರ್,ಡಾ.ಶ್ರೀನಿವಾಸ್ ಹಾಗು ಶುಶ್ರುಶಾ ಅಧಿಕಾರಿ ಶ್ರಿಮತಿ ಲಿಡಿಯಾ…

Read More

ಹವಾಮಾನ ವೈಪರಿತ್ಯ ಧರ ಇಲ್ಲದೆಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಮಾವು ರೈತತೋಟಗಳಲ್ಲಿ,ಮಂಡಿಗಳಲ್ಲಿ ಕೊಳೆಯುತ್ತಿರುವ ಮಾವುತಿರಳು ಉದ್ಯಮ ಇಲ್ಲದ್ದು ದುರಂತ ನ್ಯೂಜ್ ಡೆಸ್ಕ್:ಹವಾಮಾನ ವೈಪರಿತ್ಯ, ಆಲಿಕಲ್ಲು ಮಳೆ ,ಕೀಟಗಳ ದಾಳಿ ಲಾಕ್ಡೌನ್, ಧರ ಕುಸಿತ ಹೀಗೆ ಸರಣಿ ಸಮಸ್ಯಗಳಿಂದ ಮಾವಿನ ಬೆಳೆಗಾರ ಈ ಬಾರಿ ಜರ್ಜಿತನಾಗಿದ್ದಾನೆ. ಕಣ್ಣಿರಿನಲ್ಲಿ ಕೈತೊಳೆಯುತ್ತಿದ್ದಾನೆ, ಶ್ರೀನಿವಾಸಪುರ ಭಾಗದ ಜೀವನಾಡಿ ಬೆಳೆ ಮಾವಿನ ಇಳುವರಿ ಕುಸಿದು ಬಿದ್ದಿದ್ದೆ.ಇಲ್ಲಿನ ಜನ ವಾರ್ಷಿಕ ಬೆಳೆಯಾಗಿ, ಜೀವನಾಡಿಯಂದು ನಂಬಿದ್ದ ಮಾವು ಸಂಪೂರ್ಣವಾಗಿ ನೆಲಕಚ್ಚಿದೆ. ಮಾವು ಈ ಬಾರಿ ಕಡಿಮೆ ಇಳುವರಿ ಬಂದಿದೆ ಅದರಲ್ಲೂ ಅದೂ ಫಲ ಪೂರ್ಣವಾಗುತ್ತಿಲ್ಲ ಕಾಯಿ ಬೆಳೆದಷ್ಟು ಊಜಿನೋಣದ ಕಾಟದಿಂದ ಗಿಡದಲ್ಲೆ ಕೊಳೆತು ಹೋಗುತ್ತಿದೆ.ತೋತಾಪುರಿ,ಮಾಲ್ಲಿಕಾ,ನೀಲಂ ಮತ್ತು ಬೆನಿಷಾ ಇಲ್ಲಿನ ಮುಖ್ಯ ಬೆಳೆಗಳು ಉಳಿದಂತೆ ಸೇಂದುರಾ ಇತರೆ ಮಾವಿನ ಜಾತಿ ಹಣ್ಣಗಳು ಇಲ್ಲಿ ಅಪರೂಪ.ಪ್ರಮುಖವಾಗಿ ಬೆಳೆಯುವ ತೋತಾಪುರಿ ಕಾಯಿ ಕೊಳ್ಳಲು ಇಲ್ಲಿನ ಬೆಳೆಗಾರ ಆಂಧ್ರ,ತಮಿಳುನಾಡುಗಳಲ್ಲಿರುವ ತಿರುಳು ಫ್ಯಾಕ್ಟರಿಗಳ ದಾರಿ ಕಾಯುವ ಅನಿವಾರ್ಯತೆ ಇದೆ ಈ ಬಾರಿ ತಿರುಳು ಉದ್ಯಮವು ಇಲ್ಲಿನ ಮಾವಿನಹಣ್ಣು ಖರೀದಿಸಲು ಆಸಕ್ತಿ…

Read More