ಶ್ರೀನಿವಾಸಪುರ:- ಪಟ್ಟಣದ ಪೋಸ್ಟಾಪಿಸ್ ರಸ್ತೆಯಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಲಕ್ಷಾಂತರ ರೂಪಾಯಿ ಮೊಬೈಲುಗಳನ್ನು ಕದ್ದುಕೊಂಡು ಹೋಗಿರುವ ಘಟನೆ ನಡೆದಿರುತ್ತದೆ.ಶ್ರೀ ವಿನಾಯಕ ಮೊಬೈಲ್ ಅಂಗಡಿಯ ಹಿಂಬಾಗದಲ್ಲಿ ಪುರಸಭೆ ನೂತನ ಕಚೇರಿ ಆವರಣದಲ್ಲಿ ಅಂಗಡಿ ಗೋಡೆಗೆ ಕನ್ನ ಕೊರೆದು ಕಳ್ಳರು ಕಳ್ಳತನ ಮಾಡಿದ್ದಾರೆ ಎಂದು ಅಂಗಡಿ ಮಾಲಿಕ ಪುಟ್ಟಣ್ನ ಪೋಲಿಸರಿಗೆ ದೂರು ನೀಡಿರುತ್ತಾರೆ.ಪುಟ್ಟಣ್ಣ ಇತ್ತಿಚಿಗಷ್ಟೆ ಸಾಲಸೋಲ ಮಾಡಿ ಮೊಬೈಲ್ ಅಂಗಡಿ ಪ್ರಾರಂಭಿಸಿದ್ದ ಅಂಗಡಿ ವ್ಯಾಪಾರ ಪ್ರವರ್ಧಮಾನಕ್ಕೆ ಬರುವಷ್ಟರಲ್ಲಿ ಕೊರೋನಾ ವ್ಯಾಧಿಯಿಂದ ಮಾರುಕಟ್ಟೆ ಮೇಲೆ ಪ್ರರಿಣಾಮ ಉಂಟಾಗಿದ್ದು ಅಷ್ಟರಲ್ಲಿ ಲಾಕ್ಡೌನ್ ನಿಂದಾಗಿ ಬಾಗಿಲು ಹಾಕಿದುತ್ತಾರೆ ನಿನ್ನೆಯಷ್ಟೆ ಮಾಗಿಲು ತಗೆದು ಅಂಗಡಿ ಸ್ವಚ್ಚಮಾಡಿ ಲಾಕ್ಡೌನ್ ತೆರವಾಗುವ ಸೋಮವಾರದಿಂದ ಪೂರ್ಣಪ್ರಮಾಣದಲ್ಲಿ ಬಾಗಿಲು ತಗೆಯಲು ಯೋಜನೆ ರೂಪಿಸಲು ಇಂದು ಬೆಳೆಗ್ಗೆ ಬಾಗಿಲು ತಗೆದಾಗ ಅಂಗಡಿಯಲ್ಲಿ ಮೊಬೈಲ್ ಇಲ್ಲವಾಗಿದೆ ಮತ್ತೆ ಅಂಗಡಿಯಲ್ಲಿ ಜಗಮಗಿಸುವ ಬೆಳಕಿರುವುದನ್ನು ನೋಡಿ ಗಾಭಾರಿಯಾದ ಮಾಲಿಕ ನೋಡಿದಾಗ ಕಳ್ಳರು ಪುರಸಭೆ ನೂತನ ಕಚೇರಿ ಆವರಣದ ಮೂಲಕ ಗೋಡೆಗೆ ಕನ್ನ ಕೊರೆದು ಅಂಗಡಿ ಮೂಲಕ ಒಳಬಂದು ಆಂಡ್ರಾಯಿಡ್ ಮೊಬೈಲಗಳು ಕಿಪ್ಯಾಡ್ ಮೊಬೈಲಗಳು…
Author: admin
ಮೃತ ತಂದೆ ನಿವೃತ್ತ ಶಿಕ್ಷ್ಕಕ ವೆಂಕಟೇಶ್ಮಗನಿಗೆ ಬುದ್ದಿ ಹೇಳಿದಕ್ಕೆ ತಂದೆ ಕೊಲೆತಂದೆ ಕೊಂದ ಆರೋಪಿ ವಿಕೃತ ವರ್ತನೆ ಶ್ರೀನಿವಾಸಪುರ:- ವೈವಾಹಿಕ ಜೀವನ ಸರಿಮಾಡಲಿಲ್ಲ ಎಂಬ ಆರೋಪದಲ್ಲಿ ಜನ್ಮ ಕೊಟ್ಟ ತಂದೆಯನ್ನೇ ಮಗ ಕೊಲೆಮಾಡಿರುವ ಧಾರುಣ ಘಟನೆ ಶ್ರೀನಿವಾಸಪುರ ಪಟ್ಟಣದ ಅಂಬೇಡ್ಕರ್ ಪಾಳ್ಯದಲ್ಲಿ ನಡೆದಿದೆ. ಶುಕ್ರವಾರ ಮುಂಜಾನೆ ನಾಲ್ಕು ಗಂಟೆ ಸಮಯಲದಲ್ಲಿ ಮಲಗಿದ್ದ ತಂದೆಯ ತೆಲೆಗೆ ರುಬ್ಬುವ ಗುಂಡುನಿಂದ ಹೊಡೆದು ಅಮಾನುಷವಾಗಿ ಕೊಲೆಮಾಡಿರುತ್ತಾನೆ ಕೊಲೆಯಾದ ದುರದೈವಿ ತಂದೆ ವೆಂಕಟೇಶ್(65) ವೃತ್ತಿಯಲ್ಲಿ ಶಿಕ್ಷಕರಾಗಿ ನಿವೃತ್ತಿಯಾಗಿದ್ದರುತಂದೆಯನ್ನೆ ಬರ್ಬರವಾಗಿ ಕೊಂದ ಬಳಿಕ ಪಾಪಿ ಮಗ ನವೀನ್ ನನ್ನು ಮನೆಯ ಸುಮುತ್ತಲಿನವರು ಹಿಡಿದು ಪೋಲಿಸರಿಗೆ ಒಪ್ಪಿಸಿರುತ್ತಾರೆ. ಕೊಲೆಯಾದ ದುರದೈವಿ ತಂದೆ ವೆಂಕಟೇಶ್(65) ಆರೋಪಿ ನವೀನ್ ಇಂಜನಿಯರ್ ಪದವಿಧರನಾಗಿದ್ದು ತಾನು ವಾಸವಿರುವ ಅಂಬೇಡ್ಕರ್ ಪಾಳ್ಯದ ನಿವಾಸಿ ಯುವತಿಯನ್ನು ಪ್ರೀತಿಸಿ ಎರಡು ಕುಡುಂಬದವರನ್ನು ಒಪ್ಪಿಸಿ ಮದೆಯಾಗಿದ್ದ ಅಕೆಯೂ ಇಂಜನಿಯರ್ ಪದವಿಧರೆಯಾದ ಹಿನ್ನಲೆಯಲ್ಲಿ ಮದುವೆಯಾದ ನಂತರ ಇಬ್ಬರು ಹೈದರಾಬಾದ್ ನಲ್ಲಿ ಮನೆ ಮಾಡಿ ಸಂಸಾರ ಇದ್ದರಾದರು ಇಬ್ಬರ ನಡುವೆ ಅನ್ಯೂನ್ಯತೆ ಇಲ್ಲದೆ ನವೀನ್…
ನ್ಯೂಜ್ ಡೆಸ್ಕ್: ವಿಶ್ವದ ಟೆಕ್ ದಿಗ್ಗಜ ಸಂಸ್ಥೆ ಮೈಕ್ರೋ ಸಾಫ್ಟ್ ಸಂಸ್ಥೆಯ ಸಿಇಒ ಆಗಿದ್ದ ಸತ್ಯನಾದೇಳ್ಲ ಈಗ ಮೈಕ್ರೋಸಾಫ್ಟ್ ಕಂಪನಿಗೆ ಅಧ್ಯಕ್ಷರಾಗಿದ್ದಾರೆ. ದಕ್ಷಿಣ ಭಾರತದ ಹೈದರಾಬಾದ್ ಮೂಲದ ಸತ್ಯನಾದೇಳ್ಲ ಕರ್ನಾಟಕದ ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಓದಿರುವುದು ಅವರು ಮೈಕ್ರೋಸಾಫ್ಟ್ ಕಂಪನಿಯಲ್ಲಿ ಹಲವಾರು ಜವಾಬ್ದಾರಿಯುತ ಹುದ್ದೇಗಳನ್ನು ನಿರ್ವಹಿಸಿದ್ದ ಅವರನ್ನು ಮೈಕ್ರೋಸಾಫ್ಟ್ ಸಂಸ್ಥೆಯ ನಿರ್ದೇಶಕರ ಮಂಡಳಿ ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆಮಾಡಿದೆ. ಈ ಬಗ್ಗೆ ಬುಧವಾರ ಮೈಕ್ರೋಸಾಫ್ಟ್ ಕಾರ್ಪೊರೇಷನ್ ಘೋಷಿಸಿತು. ಹಾಲಿ ಅಧ್ಯಕ್ಷರಾದ ಜಾನ್ ಡಬ್ಲ್ಯೂ. ಥಾಮ್ಸನ್ ಅವರನ್ನು ಸಂಸ್ಥೆಯ ಸ್ವತಂತ್ರ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.ಸತ್ಯನಾದೇಲ್ಲ 2014 ರಿಂದ ಮೈಕ್ರೋಸಾಫ್ಟ್ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಹುದ್ದೆಗೆ ಸತ್ಯಜಿತ್ ರೇ ಬದಲಿಗೆ ಸ್ಟೀವ್ ಬಾಲ್ಮರ್ ಅವರನ್ನು ಆಯ್ಕೆ ಮಾಡಲಾಯಿತು. ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಸತ್ಯ ನಾದೇಲ್ಲಾ ಮೈಕ್ರೋಸಾಫ್ಟ್ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ. ಮೈಕ್ರೋಸಾಫ್ಟ್ನ ಬೆಳವಣಿಗೆಗೆ ಸಹಕಾರಿಯಾಗಿದ್ದ ಶತಕೋಟಿ ಡಾಲರ್ ಸಂಸ್ಥೆಗಳಾದ ನುವಾನ್ಸ್ ಕಮ್ಯುನಿಕೇಷನ್ಸ್,ಲಿಂಕ್ಡ್ಇನ್ ಮತ್ತು ಜೆನಿಮ್ಯಾಕ್ಸ್ ಮತ್ತು ಹಲವಾರು ವ್ಯವಹಾರಗಳು ಯಶಸ್ವಿಯಾಗಲು ಸತ್ಯನಾದೇಳ್ಳ…
ನ್ಯೂಜ್ ಡೆಸ್ಕ್:- ತಿರುಮಲ ಶ್ರೀನಿವಾಸನ ದರ್ಶನ ಪಡೆಯಲು ಭಕ್ತರ ಅನುಕೂಲಕ್ಕಾಗಿ ತಿರುಮಲ-ತಿರುಪತಿ(ಟಿಟಿಡಿ) ದೇವಾಸ್ಥಾನದವರು ಈ ಜೂನ್ ತಿಂಗಳ 22, 23 ಮತ್ತು 24 ಕ್ಕೆ 300 ರೂ ವಿಶೇಷ ದರ್ಶನದ ಟಿಕೆಟ್‌ಗಳ ಕೋಟಾವನ್ನು ಬುಧವಾರ ಬಿಡುಗಡೆ ಮಾಡಿದೆ. ಟಿಟಿಡಿ ವೆಬ್‌ಸೈಟ್ ‘ತಿರುಪತಿಬಾಲಾಜಿ.ಅಪ್.ಜೀವೋವ್.ಇನ್’, ‘ಗೋವಿಂದ’ ಆ್ಯಪ್ ಮೂಲಕ ಭಕ್ತರು ಟಿಕೆಟ್ ಕಾಯ್ದಿರಿಸಬಹುದು. ಗೋವಿಂದ ಆಪ್ ಗೊಗೂಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದಿಯಂತೆ
ಶ್ರೀನಿವಾಸಪುರ:-ಮಾವು ಬೆಳೆ ಈ ಬಾರಿಯೂ ಇಳುವರಿ ಕಡಿಮೆ ಹಾಗು ಲಾಕ್ಡೌನ್ ನಿಂದಾಗಿ ಮಾರುಕಟ್ಟೆ ಇಲ್ಲದೆ ಮಾವು ಬೆಳೆಗಾರರು ನಷ್ಟದಲ್ಲಿದ್ದಾರೆ ಇವರಿಗೆ ಬೆಂಬಲ ಬೆಲೆ ನೀಡುವ ಮೂಲಕ ಮಾವು ಬೆಳೆಗಾರರನ್ನು ಕೈ ಹಿಡಿಯುವಂತೆ ಮಾವು ಬೆಳೆಗಾರ ಸಂಘದ ಅಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ ತೋಟಗಾರಿಕಾ ಹಾಗು ರೇಷ್ಮೆ ಖಾತೆ ಸಚಿವ ಶಂಕರ್ ಅವರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು.ಕೋವಿಡ್ ಸಂಕಷ್ಟದ ಮಾವು ಬೆಳೆಗಾರರಿಗೆ ಸರ್ಕಾರ ಈಗ ಘೋಷಿಸಿರುವ ಒಂದು ಹೆಕ್ಟರ್ ಗೆ ಹತ್ತು ಸಾವಿರ ಯಾವುದಕ್ಕೂ ಸಾಲುವುದಿಲ್ಲ ಕನಿಷ್ಟ ಐವತ್ತು ಸಾವಿರ ರೂಪಾಯಿ ಘೋಷಿಸಬೇಕು ಹಾಗೇ ಒಂದು ಟನ್ ಮಾವಿಗೆ ಐದು ಸಾವಿರ ಬೆಂಬಲ ಬೆಲೆ ಘೋಷಿಸಬೇಕು ಎಂದು ಹೇಳಿದರು ಇದಕ್ಕೆ ಸ್ಪಂದಿಸಿದ ಸಚಿವ ಶಂಕರ್ ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮಾಹಿತಿ ಸಾದ್ಯವಾದಷ್ಟು ಜಾರಿಗೆ ತರುವ ಪ್ರಯತ್ನ ಮಾಡುವುದಾಗಿ ತಿಳಿಸಿದರು. ರೈತ ಸಂಘದಿಂದಲೂ ಮನವಿಮಾವಿನ ವಿಷಯದಲ್ಲಿ ಸರ್ಕಾರ ಶೀಘ್ರವಾಗಿ ತಿರ್ಮಾನ ತೆಗೆದುಕೊಂಡು ಬೆಂಬಲ ಬೆಲೆ ಘೋಷಿಸ ಬೇಕು ಮತ್ತು ದೊಡ್ದ ಮೊತ್ತದಲ್ಲಿ ನಷ್ಟ ಪರಿಹಾರ…
ಮಾವು ದಲ್ಲಾಲರ ವಿರುದ್ದ ಕೇಸು ದಾಖಲಿಸಲು ಸಚಿವ ಸೂಚನೆ.ಕಾಂಗ್ರೆಸ್ ಮುಖಂಡ ಬೇಟಪ್ಪ ಗುಲಾಬಿ ಪಾಲಿ ಹೌಸ್ ಸಚಿವ ಭೇಟಿ. ಶ್ರೀನಿವಾಸಪುರ:-ಮುಂದಿನ 2 ವರ್ಷದ ಅವಧಿಗೂ ಬಿ.ಸ್.ವೈ ಅವರೇ ಸಿಎಂ ಆಗಿ ಇರುತ್ತಾರೆ ಇದರಲ್ಲಿ ಯಾವುದೇ ಅನುಮಾನ ಇಲ್ಲ ಸಿಎಂ ಬದಲಾವಣೆ ಎಂಬುದು ವದಂತಿ ಎಂದು ತೋಟಗಾರಿಕಾ ಹಾಗು ರೇಷ್ಮೆ ಖಾತೆ ಸಚಿವ ಸಚಿವ ಆರ್ ಶಂಕರ್ ಇಂದು ಶ್ರೀನಿವಾಸಪುರದಲ್ಲಿ ಹೇಳಿದರು.ಪಕ್ಷದಲ್ಲಿ ಯಾವುದೇ ರಿತಿಯ ಭಿನ್ನಮತ ಇಲ್ಲ ಧಾರವಾಡ ಗ್ರಾಮೀಣ ಶಾಸಕ ಅರವಿಂದ್ ಬೆಲ್ಲದ್ ಅವರು ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಅವರು ವೈಯಕ್ತಿಕ ಕೆಲಸದ ನಿಮಿತ್ತ ಅಲ್ಲಿಗೆ ಹೋಗಿದ್ದಾಗಿ ಬೆಲ್ಲದ್ ಹೇಳಿದ್ದಾರೆ.ರಾಜ್ಯದಲ್ಲಿ ಸಿಎಂ ಬದಲಾವಣೆ ಅನ್ನೋದು ಕೆವಲ ಊಹಾಪೋಹ,ವೈಯಕ್ತಿಕ ವಿಚಾರಗಳಿಗೆ ದೆಹಲಿಗೆ ತೆರಳಿದ್ರೆ ಅದಕ್ಕೆ ರೆಕ್ಕೆಪುಕ್ಕ ಕಟ್ಟಿ ಮಾತೋಡುದು ಬೇಡಎಂದರು.ಅವರು ಇಂದು ಶ್ರೀನಿವಾಸಪುರದ ಸನ್ ಸಿಪ್ ಆಗ್ರೋ ಫೂಡ್ಸ್ ಮಾವಿನ ಹಣ್ಣಿನ ಸಂಸ್ಕರಣ ಘಟಕ(ಜ್ಯೂಸ್ ಫ್ಯಾಕ್ಟರಿ), ಹೊಸಹಳ್ಳಿಯ ಮಾವು ಮಾಗಿಸಿವ ಕೇಂದ್ರ ಕೊಳತೂರಿನಲ್ಲಿ ಟಮ್ಯಾಟೊ ದಿಂದ ನಷ್ಟವಾದ…
ತಿರುಪತಿ:- ಆಂಧ್ರದಲ್ಲಿ ಎತೇಚ್ಚವಾಗಿ ಕರ್ನಾಟಕದ ಮದ್ಯದ ಸರಕು ವ್ಯಾಪಾರವಾಗುತ್ತಿದೆ ಖಚಿತ ಮಾಹಿತಿ ಮೇರೆಗೆ ತಂಬಾಕು ಉತ್ಪನ್ನಗಳನ್ನು ಹಿಡಿಯುವ ಸಲುವಾಗಿ ತಿರುಪತಿಯ ಮನೆಯೊಂದರ ಮೇಲೆ ದಾಳಿ ನಡೆಸಿರುವ ತಿರುಪತಿ ಅಪರಾಧ ವಿಭಾಗದ ಪೋಲಿಸರಿಗೆ ಅಲ್ಲಿ ಕರ್ನಾಟಕದ ಮದ್ಯದ ಬಾಟಿಲ್ ಗಳು ಇದ್ದು ಅದನ್ನು ವಶಪಡಿಸಿಕೊಂಡಿದ್ದಾರೆ. ಒರ್ವ ಆರೋಪಿಯನ್ನು ಬಂಧಿಸಲಾಗಿದೆ. ಪೂರ್ವ ಸಿಐ ಶಿವಪ್ರಸಾದ್ ರೆಡ್ಡಿ ಅವರ ಪ್ರಕಾರ, ತಿರುಪತಿ ನಗರದ ಪಿಕೆ ಲೇಟ್ ನಿವಾಸಿ ಕೇಶವ್, ಕರ್ನಾಟಕ ಮದ್ಯದ ಜೊತೆಗೆ ಅಕ್ರಮ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು ಗುರುವಾರ ರಾತ್ರಿ ಅವರ ಮನೆಯ ಮೇಲೆ ದಾಳಿ ನಡೆಸಿ ಅಕ್ರಮ ತಂಬಾಕು ಉತ್ಪನ್ನಗಳ ಜೊತೆಗೆ 15 ಸಾವಿರ ಮೌಲ್ಯದ 78 ಕರ್ನಾಟಕದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.ಕರ್ನಾಟಕ ರಾಜ್ಯದ ರಾಯಲ್‌ಪಾಡಿನಿಂದ ಮದ್ಯದ ಬಾಟಿಲಗಳನ್ನು ತಂದು ಕಲಿಕಿರಿ ಮಂಡಲ ಕಾಲೋನಿ ಬಳಿಯ ಅಕುಲ ಗುಟ್ಟಾದಲ್ಲಿ ಮಾರಾಟ ಮಾಡುತ್ತಿದ್ದಾಗ ಕಲಿಕಿರಿಯ ಇಂದಿರಾಮ್ಮ ಕಾಲೋನಿ ನಿವಾಸಿ ಟಿ.ಕುಮಾರಸ್ವಾಮಿ ಅವರನ್ನು ಪೊಲೀಸರು ಬಂಧಿಸಿ, ಅವರಿಂದ 20 ಬಾಟಲಿಗಳ ಮದ್ಯವನ್ನು ವಶಪಡಿಸಿಕೊಂಡು…
ಪಕ್ಷ ದ್ರೋಹ ತರವಲ್ಲ ಎಂ.ಶ್ರೀನಿವಾಸನ್ ದೂರುರೈತರು ಸಂಕಷ್ಟದಲ್ಲಿರುವ ಸಮಯದಲ್ಲಿ ರಾಜಕೀಯ ಅನವಶ್ಯಕನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಮ್ಮೆ ಗೆದ್ದು ಬರಲಿ ಅಕ್ರಮಗಳನ್ನು ಮುಚ್ಚಿಡಲು ನನ್ನ ವಿರುದ್ದ ಆರೋಪ ಪೆದ್ದರೆಡ್ಡಿನಾನು ವಿದ್ಯಾವಂತ ಪ್ರಮಾಣಿಕ ರಾಜಕಾರಣಿನಮ್ಮ ಕುಟುಂಬದ ಆಶ್ರಯದಲ್ಲಿ ರಾಜಕಾರಣ ಮಾಡಿದವರುನನ್ನ ವಿರುದ್ದ ಮಾತನಾಡುವ ನೈತಿಕತೆ ಇಲ್ಲ ಎಂ.ಶ್ರೀನಿವಾಸನ್ ಶ್ರೀನಿವಾಸಪುರ:-ಪಕ್ಷದಲ್ಲಿದ್ದುಕೊಂಡು ಪಕ್ಷಕ್ಕೆ ದ್ರೋಹ ಮಾಡುವುದು ಅವರ ರಾಜಕೀಯ ನಡವಳಿಕೆಗೆ ಶೋಭೆ ತರುವುದಿಲ್ಲ ಎಂದು ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷ ಹಾಲಿ ಸದಸ್ಯ ರಾಜೇಂದ್ರ ಪ್ರಸಾದ್ ವಿರುದ್ದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಪರೋಕ್ಷವಾಗಿ ಕಿಡಿ ಕಾರಿದರು. ರಾಜೇಂದ್ರ ಪ್ರಸಾದ್ ಹೆಸರು ಪರಸ್ತಾಪಿಸದೆ ಮಾತನಾಡಿದ ಅವರು ಎ.ಪಿ.ಎಂ.ಸಿ. ಯಲ್ಲಿ ನಡೆದ ಅವಿಶ್ವಾಸ ನಿರ್ಣಯದ ಸಭೆಯ ನಂತರ ಎ.ಪಿ.ಎಂ.ಸಿ. ಯಲ್ಲಿ ಅಧಿಕಾರ ಉಳಸಿಕೊಂಡ ಅಧ್ಯಕ್ಷ ರಮೇಶ್ ಬಾಬು, ಉಪಾಧ್ಯಕ್ಷ ರಾಜಣ್ಣ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು.ಪಕ್ಷದ ಸಿದ್ದಾಂತ ಗಾಳಿಗೆ ತೂರಿ ವಿರೋಧ ಪಕ್ಷದವರ ಜೋತೆ ಕೈ ಜೋಡಿಸಿ ಶಾಸಕ ರಮೇಶ್ ಕುಮಾರ್ ಅವರ ನಿಷ್ಟಾವಂತ ಕಾರ್ಯಕರ್ತರಿಗೆ ಮೋಸಮಾಡಲು…
ಶ್ರೀನಿವಾಸಪುರ:-ಕೊರೋನಾ ಲಾಕೌ ಡೌನ್ ನಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವಂತ ಸಹಾಯಕ ವಕೀಲರಿಗೆ ನೆರವಾಗುವ ಸದುದ್ದೇಶದಿಂದ ದಿನಸಿ ಕಿಟ್ ವಿತರಿಸುತ್ತಿರುವುದಾಗಿ ಶ್ರೀನಿವಾಸಪುರ ವಕೀಲರ ಸಂಘದ ಅಧ್ಯಕ್ಷ ಹಾಗು ಹೀರಿಯ ವಕೀಲ ಶಿವಪ್ಪ ಹೇಳಿದರು ಅವರು ಇಂದು ಶ್ರೀನಿವಾಸಪುರ ವಕೀಲರ ಸಂಘದಲ್ಲಿರುವ ಸಹಾಯಕ ವಕೀಲರಿಗೆ ಸುಮಾರು ಐದು ಸಾವಿರ ಮೌಲ್ಯದ ದಿನಸಿ ಕಿಟ್ ಗಳನ್ನು 30 ಮಂದಿಗೆ ವಿತರಣೆ ಮಾಡಿ ಮಾತನಾಡಿದರು.ನಾವು ಸಂಪಾಧನೆ ಮಾಡುವುದು ದೊಡ್ಡದಲ್ಲ ನಮ್ಮೊಂದಿಗೆ ಇರುವಂತ ಆತ್ಮೀಯರು ಹಿತೈಷಿಗಳು ನಮ್ಮಷ್ಟೆ ಗೌರ್ವಾನಿತ ಜೀವನ ಸಾಗಿಸಬೇಕು ಎಂದ ಅವರು ನಾನು ದಿನಸಿ ವಿತರಣೆ ಮಾಡುತ್ತಿರುವುದು ತೋರ್ಪಡಿಕೆಗಲ್ಲ ಅಥಾವ ಪ್ರಚಾರಕ್ಕಲ್ಲ ಸಮಾಜದಲ್ಲಿರುವ ಅನಕೂಲವಂತರಿಗೆ ಪ್ರೇರಣೆ ಆಗಲಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಹಿರೀಯ ಪ್ರಧಾನ ಸಿವಿಲ್ ನ್ಯಾಯಾಧಿಶರಾದ ಹೆಚ್.ಆರ್.ದೇವರಾಜ್ ಹೀರಿಯ ವಕೀಲ ವೆಂಕಟೇಶ್, ಶೆಟ್ಟಿಶ್ರೀನಿವಾಸ್, ಶ್ರೀನಿವಾಸನ್,ರೂಪಾವತಿ,ಅರ್ಜುನ್ ಮುಂತಾದವರು ಇದ್ದರು.
ಶ್ರೀನಿವಾಸಪುರ:-ಶ್ರೀನಿವಾಸಪುರದ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಅಡಳಿತಾರೂಡ ಪಕ್ಷದಲ್ಲಿಯೇ ಅಧ್ಯಕ್ಷ ಸ್ಥಾನಕ್ಕೆ ಏರಲು ಜಟಾಪಟಿ ಶೂರುವಾಗಿದೆ ಒಟ್ಟು 15 ಸದಸ್ಯರ ಸಂಖ್ಯಾಬಲದ ಆಡಳಿತ ಮಂಡಳಿಯಲ್ಲಿ ಕಾಂಗ್ರೆಸ್ 8 ಜೆ.ಡಿ.ಎಸ್ 4 ಮತ್ತು ಬಿ.ಜೆ.ಪಿ ಮೂವರು ನಾಮ ನಿರ್ದೇಶಕ ಸದಸ್ಯರಿದ್ದು ಈಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕಾಂಗ್ರೆಸ್ ಪಕ್ಷದ ಸೋಮಯಾಜಲಹಳ್ಳಿ ರಮೆಶ್ ಬಾಬು ಅಧ್ಯಕ್ಷರಾಗಿ ಮತ್ತು ರಾಜಣ್ಣ ಉಪಾಧ್ಯಕ್ಷರಾಗಿದ್ದಾರೆ. ಈ ಹಿಂದಿನ ಒಪ್ಪಂದಂತೆ ಕಾಂಗ್ರೆಸ್ ಸದಸ್ಯೆ ರೂಪ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ನಡೆದ ಮಾತುಕತೆ ವಿಫಲವಾದ ಹಿನ್ನಲೆಯಲ್ಲಿ ಅಧ್ಯಕ್ಷ ಹಾಗು ಉಪಾಧ್ಯಕ್ಷರನ್ನು ಅಧಿಕಾರದಿಂದ ಕೆಳಗಿಸಲು ಕಾಂಗ್ರೆಸ್ಸಿನ ಕೆಲ ಸದಸ್ಯರು ಜೆ.ಡಿ.ಎಸ್ ಹಾಗು ಬಿ.ಜೆ.ಪಿ ಸದಸ್ಯರ ಬೆಂಬಲ ಪಡೆದು ಅಧ್ಯಕ್ಷರ ವಿರುದ್ದ ಅವಿಶ್ವಾಸಕ್ಕೆ ಮುಂದಾದಾಗ ರೆಬಲ್ ಆಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಇಬ್ಬರು ಸದಸ್ಯರು ಮತ್ತು ಒರ್ವ ಬಿ.ಜೆ.ಪಿ ನಾಮ ನಿರ್ದೇಶಕ ಸದಸ್ಯ ಕೊನೆಗಳಿಗೆಯಲ್ಲಿ ಅಧ್ಯಕ್ಷ ಹಾಗು ಉಪಾಧ್ಯಕ್ಷರಿಗೇ ಬೆಂಬಲ ನೀಡಿದ್ದು ಮತ್ತು ರೂಪಾವತಿ ಅಧ್ಯಕ್ಷರಾಗಬೇಕು ಎಂದು ಅವಿಶ್ವಾಸ ನಿರ್ಣಯಕ್ಕೆ ಸಹಿ ಮಾಡಿದ್ದ ಕೆಲ…