ನ್ಯೂಜ್ ಡೆಸ್ಕ್:- ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷದಲ್ಲಿ ಚುನಾವಣೆ ನಡೆಯಲಿದೆ ಇಂತ ಸಮಯದಲ್ಲಿ ಅಲ್ಲಿನ ಕಾಂಗ್ರೆಸ್ ವಿಕೆಟ್ ಒಂದು ಪತನ ಗೋಂಡಿದೆ ತನ್ನ ಪಕ್ಷಕ್ಕೆ ಕೈಕೊಟ್ಟು ಬಿ.ಜೆ.ಪಿ ಪಡಾಸಾಲೆಯಲ್ಲಿ ಹೋಗಿ ಕುಳಿತಿದ್ದಾರೆ. ರಾಹುಲ್ ಗಾಂಧಿ ಆಪ್ತ ವಲಯದ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಜಿತಿನ್ ಪ್ರಸಾದ್ ಇದು ಉತ್ತರ ಪ್ರದೇಶದ ಕಾಂಗ್ರೆಸ್ಸಿಗೆ ದೊಡ್ಡ ಹೊಡೆತ ನೀಡಿರುತ್ತಾರೆ.ಕಾಂಗ್ರೆಸ್ ತೊರೆದಿರುವ ಜಿತಿನ್ ಪ್ರಸಾದ್ ಬುಧವಾರ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಕಛೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮಾತ್ರ ನಿಜವಾದ ರಾಜಕೀಯ ಪಕ್ಷ ಮತ್ತು ಏಕೈಕ ರಾಷ್ಟ್ರೀಯ ಪಕ್ಷ. ಉಳಿದ ಪಕ್ಷಗಳೆಲ್ಲಾ ಪ್ರಾದೇಶಿಕ ಪಕ್ಷಗಳು ಎಂದು ಹೇಳಿರುವ ಜಿತಿನ್, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಮಾತ್ರ ಈಗ ದೇಶ ಎದುರಿಸುತ್ತಿರುವ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲರು ಎಂದಿರುತ್ತಾರೆ.ಜಿತಿನ್ ರವರಿಗೆ ಪಕ್ಷದ ಸದಸ್ಯತ್ವ ನೀಡಿ ಮಾತನಾಡಿದ ಪಿಯೂಷ್ ಗೋಯಲ್, ಜಿತಿನ್ ಅವರು ಉತ್ತರ ಪ್ರದೇಶದ ಜಿಲ್ಲೆಗಳಲ್ಲಿ ಓಡಾಡಿ ಜನರಿಗಾಗಿ…
Author: admin
ಶ್ರೀನಿವಾಸಪುರ:- ತಾಲೂಕಿನ ರಾಯಲ್ಪಾಡು ಪೋಲಿಸ್ ಸಬ್ ಇನ್ಸಪೇಕ್ಟರ್ ವಿರುದ್ದ ಮಾಜಿ ಸ್ಪೀಕರ್ ರಮೇಶಕುಮಾರ್ ತಿರುಗಿ ಬಿದಿದ್ದಾರೆ ಸ್ವತಃ ಅಖಾಡಕ್ಕೆ ಇಳಿದ ಅವರು ಇಂದು ಬೆಂಗಳೂರು-ಕಡಪ ರಾಜ್ಯ ಹೆದ್ದಾರಿಯ ಕರ್ನಾಟಕ-ಆಂಧ್ರ ಗಡಿಯಲ್ಲಿ ಸ್ವತಃ ಧರಣಿ ಕುಳಿತು ರಾಯಲ್ಪಾಡು ಟಾಠೆ ಸಬ್ ಇನ್ಸಪೇಕ್ಟರ್ನರಸಿಂಹಮೂರ್ತಿ ಭ್ರಷ್ಟಾಚಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಪೋಲಿಸ್ ವ್ಯವಸ್ಥೆ ವಿರುದ್ದ ಗುಡುಗಿದ್ದಾರೆ. ಪೋಲಿಸ್ ಚೆಕ್ ಪೋಸ್ಟ್ ನಲ್ಲಿ ಅಕ್ರಮವಾಗಿ ರೈತರನ್ನು, ದ್ವಿಚಕ್ರ ವಾಹನದ ಸವಾರನ್ನು, ರೋಗಿಗಳನ್ನು ಹಾಗು ಹಾಲು ಡೈರಿ ವಾಹನಗಳನ್ನು ಬಿಡದೆ ಹಣ ಕಿಳುತ್ತಿದ್ದಾರೆ ಇದರ ಜೋತೆಗೆ ಲಂಚದ ಹಣ ನೀಡಲಿಲ್ಲ ಎಂದರೆ ಮಾರನೆ ದಿನ ಮನೆ ಬಳಿ ಸಾಲಗಾರನ ರೀತಿಯಲ್ಲಿ ಹಣ ವಸೂಲಾತಿಗೆ ಬರುತ್ತಾರೆ ಎಂದು ಸಾರ್ವಜನಿಕರಿಂದ ಪೋಲಿಸ್ ಲಂಚಾವತಾರದ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಇಂದು ಏಕಾಏಕಿ ಅಖಾಡಕ್ಕೆ ಇಳಿದ ರಮೇಶಕುಮಾರ್ ಬೆಂಗಳೂರು-ಕಡಪ ರಾಜ್ಯ ಹೆದ್ದಾರಿಯ ಹಕ್ಕಿ ಪಿಕ್ಕಿ ಕಾಲೋನಿ ಬಳಿ ಇರುವಂತ ಪೋಲಿಸ್ ಚೆಕ್ ಪೋಸ್ಟ್ ಬಳಿ ಹೆದ್ದಾರಿಯಲ್ಲಿಯೇ ಧರಣಿ ಕುಳಿತು ಪ್ರತಿಭಟಿಸಿದರು. ಹಿರಿಯ ಪೋಲಿಸ್…
ನ್ಯೂಜ್ ಡೆಸ್ಕ್:-ಹಂತ ಹಂತವಾಗಿ ಲಾಕ್ ಡೌನ್ ಅನ್ನು ಜೂನ್ 7ರ ನಂತರ ತೆರವು ಗೋಳಿಸಲಾಗುವುದು ಎಂದು ಹೇಳಲಾಗುತ್ತಿದೆ3 ಷರತ್ತು ಪಾಲನೆಯಾದರೆ ಮಾತ್ರವಷ್ಟೆ ಲಾಕ್ ಡೌನ್ ತೆರವು ಮಾಡಲು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದರಂತೆ.ವರದಿಯಲ್ಲಿ ಹೇಳಿರುವಂತೆ ಆಸ್ಟ್ರೇಲಿಯಾದ ವಿಕ್ಟೋರಿಯಾ ಮಾಡೆಲ್ ಪ್ರಸ್ತಾಪಿಸಿದ್ದು ಲಾಕ್ ಡೌನ್ ತೆರಿವಿಗೆ 3 ಪ್ರಮುಖ ಷರತ್ತುಗಳನ್ನು ಸೂಚಿಸಿದ್ದು. 3 ಷರತ್ತು ಪಾಲನೆಯಾದರಷ್ಟೇ ಲಾಕ್ ಡೌನ್ ತೆರವು ಮಾಡಿ ಇಲ್ಲವಾದಲ್ಲಿ ಲಾಕ್‍ಡೌನ್ ಮುಂದುವರಿಸುವುದು ಅನಿವಾರ್ಯ ಎಂದಿರುತ್ತಾರೆ.ಒಂದು ವೇಳೆ 3 ಷರತ್ತು ಪಾಲನೆ ಆಗದೇ ಹೋದರೆ ಜೂನ್ 14ರವರೆಗೆ ಲಾಕ್‍ಡೌನ್ ವಿಸ್ತರಣೆ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ.ತಜ್ಞರ ವರದಿಯ ಸಾರಾಂಶವನ್ನು ಹೊತ್ತೊಯ್ದ ಸುಧಾಕರ್,ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಚರ್ಚೆ ನಡೆಸಿದ್ದಾರಂತೆ ಈ ವೇಳೆ, ತಜ್ಞರ ವರದಿಯನ್ನೇ ಪರಿಗಣಿಸೋಣ, ಸಚಿವರ ಜೊತೆಯೂ ಮಾತಾಡೋಣ. ಇನ್ನೊಂದು ವಾರ ಮುಂದುವರಿಸುವ ಬಗ್ಗೆ ಎರಡ್ಮೂರು ದಿನದಲ್ಲಿ ನಿರ್ಧಾರ ಮಾಡೋಣ ಎಂದು ಮುಖ್ಯಮಂತ್ರಿ ಹೇಳಿರುವುದಾಗಿ ತಿಳಿದು ಬಂದಿದೆ. ಇದರ ಬೆನ್ನಲ್ಲೇ, ನಾಳೆ ಕೋವಿಡ್ ನಿರ್ವಹಣಾ ಸಚಿವರ ಜೊತೆ ಸಿಎಂ ಸಭೆ…
ನ್ಯೂಜ್ ಡೆಸ್ಕ್:- ಹೊನ್ನಾಳಿಯ ವಿಧಾನ ಸಭಾ ಕ್ಷೇತ್ರದಲ್ಲಿ ಕೊರೋನಾ ಓಡಿಸಲು ಶಾಸಕ ಹಾಗು ಮುಖ್ಯ ಮಂತ್ರಿಗಳ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಇನ್ನಿಲ್ಲದ ಸಾಹಸ ಮಾಡುತ್ತ ಮಾನವೀಯ ಕಾರ್ಯಗಳ ಮೂಲಕ ಸುದ್ದಿಯ ಮೂಂಚುಣಿಯಲ್ಲಿದ್ದಾರೆ ಅದು ಒಂದು ಎರಡಲ್ಲ ದಿನನಿತ್ಯ ಸುದ್ದಿಯಾಗುತ್ತಿದ್ದಾರೆ.ಕೊರೋನಾ ಅರೈಕೆ ಕೇಂದ್ರದಲ್ಲಿ ಮನೋರಂಜನೆ ಕಾರ್ಯಕ್ರಮ ಆಯೋಜನೆ ಮಾಡುವುದು ಯೋಗಾಭ್ಯಾಸದ ಶಿಕ್ಷಣ ನೀಡುವುದು ಆರಕೇಸ್ಟ್ರ ಆಯೋಜಿಸಿ ಸ್ವತಃ ಡ್ಯಾನ್ಸ್ ಮಾಡಿ ಸೋಂಕಿತರನ್ನು ರಂಜಿಸಿದ್ದಾರೆ,ಮನೆಯಿಂದಲೆ ಒಬ್ಬಟ್ಟಿನ ಊಟ ಮಾಡಿಸಿ ಸೋಂಕಿತರಿಗೆ ಊಣ ಬಡಿಸಿದ್ದಾರೆ ಪೋಲಿಸರಿಗೆ ಒಳಿಗೆ ಊಟಹಾಕಿಸುತ್ತಾರೆ.ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಕೊರೋನಾ ಸೋಂಕಿತರ ವಾರ್ಡಿನಲ್ಲಿ ಹೋಗಿ ಅಲ್ಲಿನ ಸ್ಥಿತಿಗತಿಗಳ ಪರಶೀಲನೆ ಮಾಡಿದ್ದಾರೆ, ಡ್ರೈವರ್ ಇಲ್ಲ ಎಂದು ೧೦೮ ಆಂಬುಲೆನ್ಸ್ ಚಲಾಯಿಸಿದ್ದಾರೆ,ಕೋವಿಡ್ ನಿಯಮಾವಳಿ ಪಾಲಿಸುತ್ತಿಲ್ಲ ಎಂದು ಹಳ್ಳಿಗಳಿಗೆ ಹೋಗಿ ಸಾರ್ವಜನಿಕರಿಗೆ ಕೊರೋನಾ ಸೋಂಕಿನಿಂದಾಗುವ ಅಪಾಯದ ಅರಿವು ಮೂಡಿಸುತ್ತಾರೆ ಹೀಗೆ ಹೇಳುತ್ತ ಹೋದರೆ ಒಂದಾ ಎರಡ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಸುದ್ದಿಯಾಗುತ್ತಿದ್ದಾರೆ ಬಹುಶಃ ಕರ್ನಾಟಕದ ಇನ್ಯಾವುದೇ ಶಾಸಕರಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಇಷ್ಟೊಂದು ಪ್ರಚಾರ ಸಿಕ್ಕಿಲ್ಲವೇನೊ ಅನ್ನಬಹುದಾಗಿದೆ. ಇದರ…
ಕೋಲಾರ: ಎರಡು ವರ್ಷದಿಂದ ಮಹಾಮಾರಿ ಕೋರೊನ ಇಡೀ ಜನ ಸಮೂಹವನ್ನು ಬೆಚ್ಚಿ ಬೀಳಿಸಿದ್ದು,ಸಮಾಜದಲ್ಲಿ ತೀವ್ರ ಸಂಕಷ್ಟದ ಪರಿಸ್ಥಿತಿ ಏರ್ಪಟ್ಟಿದೆ. ಪರಿಸ್ಥಿಗೆ ಹೊಂದಿಕೊಂಡು ಜೀವನ ನಡೆಸಬೇಕು ಎಂದು ಅಕ್ಷಯ ಫಲ ಸಂಸ್ಥೆಯ ಮುಖ್ಯಸ್ಥ ನವೀನ್ ಸಿಂಗ್ ಸಲಹೆ ನೀಡಿದರು.ಕೋಲಾರ ನಗರದ ವಿವಿಧ ಬಡಾವಣೆಗಳಲ್ಲಿ ಅಕ್ಷಯ ಫಲ ಸಂಸ್ಥೆ ವತಿಯಿಂದ ಅರ್ಹ ಫಲಾನುಭವಿಗಳಿಗೆ ದಿನಸಿ ಹಾಗೂ ತರಕಾರಿ ಕಿಟ್ ಗಳನ್ನು ವಿತರಿಸಿ ಮಾತನಾಡಿದರು.ಬಡವರಿಗೆ ದಿನಸಿ, ತರಕಾರಿ ಕಿಟ್ ವಿತರಣೆ ಮಾಡಲು ಸಂಸ್ಥೆಯಿಂದ ತೀರ್ಮಾನಕೈಗೊಳ್ಳಲಾಗಿದೆ. ಅರ್ಹ ಬಡವರನ್ನು ಗುರುತಿಸಲು ಸ್ವಯಂ ಸೇವಕರನ್ನು ವಾರ್ಡುವಾರು ನೇಮಕ ಮಾಡಿದ್ದು,ಕೀಲುಕೋಟೆ, ವಿಭೂತಿಪೂರ, ಗಲ್ ಪೇಟೆ, ಮುನೇಶ್ವರ ನಗರದ ಖಾಸಗಿ ಶಾಲಾ ಶಿಕ್ಷಕರಿಗೆ, ಮನೆಗೆಲಸದವರಿಗೆ ಹಾಗೂ ಕೆಲ ಕಾರ್ಮಿಕರಿಗೆ ಮೊದಲ ಹಂತವಾಗಿ 7೦ ಮಂದಿಗೆ ಕಿಟ್ ವಿತರಣೆ ಮಾಡಲಾಗಿದ್ದು ಒಟ್ಟು ಮೂನ್ನೂರಕ್ಕೂ ಹೆಚ್ಚು ಕಿಟ್ ವಿತರಿಸುವ ಗುರಿ ಹೊಂದಿರುವುದಾಗಿ ಹೇಳಿದರು. ಕೋರೊನ ಸೋಂಕು ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಇದರಿಂದಾಗಿ ಸೋಂಕು ಮುಕ್ತರಾಗಲು ಸಹಕಾರಿಯಾಗುತ್ತದೆ. ಸೋಂಕು ನಿರ್ಮೂಲನೆ ಸ್ಥೈರ್ಯವಾಗಿ…
ಕೋಲಾರ:- ಕಠಿಣ ಲಾಕ್‌ಡೌನ್ ಗೂ ಜಾರಿಗೆ ತಂದರೂ ಕೋಲಾರ ಜಿಲ್ಲೆಯಲ್ಲಿ ಕೊರೋನಾ ಸೋಂಕು ಇಳಿಮುಖವಾಗುತ್ತಿಲ್ಲ.ಜಿಲ್ಲೆಯಲ್ಲಿ ಎರಡನೇ ಹಂತದ ಲಾಕ್‌ಡೌನ್ ಕೂಡಾ ಭಾನುವಾರ ಅಂತ್ಯಗೊಂಡಿದೆ. ಆದರೆ ಸೋಂಕು ಹರಡುತ್ತಲೇ ಇದೆ.ಸೋಂಕಿನ ಪ್ರಮಾಣ ನಿರೀಕ್ಷಿತ ಪ್ರಮಾಣದಲ್ಲಿ ಇಳಿಯದ ಕಾರಣ ಕಠಿಣ ಲಾಕ್‌ಡೌನ್‌ನ್ನು ಮತ್ತೇ ಮುಂದುವರೆಸುವ ಸಾಧ್ಯತೆ ಎನ್ನಲಾಗುತ್ತಿದೆ.ಜಿಲ್ಲೆಯಲ್ಲಿ ಇದುವರೆಗೆ 38 ಸಾವಿರ ಮಂದಿಗೆ ಕೊರೋನಾ ಹಬ್ಬಿದ್ದು ಸೋಂಕಿಗೆ 376 ಮಂದಿ ಮೃತಪಟ್ಟಿದ್ದಾರೆ. 7400 ಮಂದಿ ಸಕ್ರಿಯ ಪ್ರಕರಣಗಳಿವೆ. ಸೋಂಕಿನ ಶೇಕಡವಾರು ಪ್ರಮಾಣ ಶನಿವಾರ 32.72 ರಷ್ಟಿತ್ತು. ಸೋಂಕಿನ ಶೇಕಡವಾರು ಪ್ರಮಾಣದಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ನಾಲ್ಕನೇ ಸ್ಥಾನದಲ್ಲಿದೆ.ಜನತಾ ಕಫ್ರ್ಯೂ,ಸೆಮಿ ಲಾಕ್‌ಡೌನ್ ಹಾಗು ಎರಡು ಬಾರಿ ಕಠಿಣ ಲಾಕ್‌ಡೌನ್‌ಗೂ ಸೋಂಕು ತಗ್ಗುತ್ತಿಲ್ಲ. ಮತ್ತೊಂದು ಜಿಲ್ಲಾ ಮಟ್ಟದ ಸಂಪೂರ್ಣ ಲಾಕ್‌ಡೌನ್ ಮಾಡುವ ಅನಿವಾರ್ಯತೆ ಉಂಟಾಗಿದೆ. ಜಿಲ್ಲೆಯಲ್ಲಿ ಇವತ್ತಿಗೂ ಸೋಂಕಿತರ ಸಂಖ್ಯೆ 680 ಕ್ಕೂ ಹೆಚ್ಚು ಇದೆ.ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಸೋಂಕು ಹರಡುತ್ತಿರುವುದರಿಂದ ವ್ಯವಸ್ಥೆ ಹಿಡಿತಕ್ಕೆ ಸಿಗುತ್ತಿಲ್ಲವಂತೆ, ಸೋಂಕು ಇಂತಹ ಗ್ರಾಮದಲ್ಲಿ ಇಲ್ಲವೇ ಇಲ್ಲ ಎಂದು ಹೇಳಲು ಸಾಧ್ಯವಾಗದ…
ಟಿ.ಟಿ.ಡಿ ಕಲ್ಯಾಣ ಮಂಟಪದಲ್ಲಿ ಆರೈಕೆ ಕೇಂದ್ರದಾನಿಗಳ ಸಹಕಾರ ದಿಂದ ಕೇಂದ್ರ ನಿರ್ವಹಣೆಶಾಸಕ ರಮೇಶಕುಮಾರ್ ಆಶಯದಂತೆ ಕೇಂದ್ರ ಶ್ರೀನಿವಾಸಪುರ:- ತಾಲೂಕಿನ ಉತ್ತರ ಭಾಗದ ಗ್ರಾಮದ ಕೊರೋನಾ ಸೋಂಕಿತರ ಆರೋಗ್ಯದ ದೃಷ್ಠಿಯಿಂದ ಅವರ ಅನಕೂಲಕ್ಕಾಗಿ ತಾಲೂಕಿನ ರಾಯಲ್ಪಾಡು ಹೋಬಳಿ ಯರ್ರಂವಾರಿಪಲ್ಲಿ ಪಂಚಾಯಿತಿ ವ್ಯಾಪ್ತಿಯ ಖ್ಯಾತ ಪುಣ್ಯ ಕ್ಷೇತ್ರವಾದ ಗನಿಬಂಡೆ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದ ಆವರಣದಲ್ಲಿನ ತಿರುಮಲ ತಿರುಪತಿ(ಟಿ.ಟಿ.ಡಿ) ಕಲ್ಯಾಣ ಮಂಟಪದಲ್ಲಿ ಕೊರೋನಾ ಸೋಂಕಿತರ ಆರೈಕೆ ಕೇಂದ್ರ ಹಾಗು ಅತ್ಯವಶ್ಯ ಸಂದರ್ಭದಲ್ಲಿ ಉಪಯೋಗಿಸಲು ಆಕ್ಸಿಜನ್ ಕಾನ್ಸಟ್ರೆಷನ್ಸ್ ಯಂತ್ರಗಳನ್ನು ಅಳವಡಿಸಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ರಮೇಶ್ ಕುಮಾರ್ ಹೇಳಿದರು ಅವರು ಕಲ್ಯಾಣ ಮಂಟಪದಲ್ಲಿ ಪೂಜಾ ಕಾರ್ಯಕ್ರಮದೊಂದಿಗೆ ಆರೈಕೆ ಕೇಂದ್ರಕ್ಕೆ ಚಾಲನೆ ನೀಡಿದರು. ಜೂನ್ ೧ ರಿಂದ ಪ್ರಾರಂಭವಾಗುವ ಅಕ್ಸಿಜನ್ ಸಹಿತ ಸೋಂಕಿತರ ಆರೈಕೆ ಕೇಂದ್ರದಿಂದ ಈ ಭಾಗದ ಜನರಿಗೆ ಶ್ರೀನಿವಾಸಪುರಕ್ಕೆ ಹೋಗಬೇಕಾದ ಅನಿವಾರ್ಯತೆ ತಪ್ಪುತ್ತದೆ ಎಂದ ಅವರು ಶ್ರೀನಿವಾಸಪುರಕ್ಕೆ ಹೋಗಲು ಕೆಲವೊಮ್ಮೆ ಅನಾನುಕೂಲವಾಗುತಿತ್ತು ಮತ್ತು ಅರೈಕೆ ಕೇಂದ್ರ ಮಾಡುತ್ತಿರುವ ಕಲ್ಯಾಣ ಮಂಟಪ ಅಡ್ಡಗಲ್ ಆರೋಗ್ಯ…
ಬೆಂಗಳೂರು:- ಕೊರೋನಾ ಸೋಂಕಿನಿಂದ ಮೃತಪಟ್ಟಿರುವಂತ ಶಿಕ್ಷಕರಿಗೆ ತಲಾ ಐವತ್ತು ಲಕ್ಷ ರೂಪಾಯಿಗಳ ಪರಿಹಾರ ಧನ ನೀಡುವಂತೆ ವಿಧಾನಪರಿಷತ್ ಸದಸ್ಯ ವೈ.ಎ.ನಾರಯಣಸ್ವಾಮಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಪತ್ರ ನೀಡಿ ವಿನಂತಿಸಿದ್ದಾರೆ.ಮುಖ್ಯಮಂತ್ರಿ ಅವರನ್ನು ಅವರ ಗೃಹ ಕಛೆರಿಯಲ್ಲಿ ಭೇಟಿಯಾಗಿದ್ದ ವಿಧಾನಪರಿಷತ್ ಸದಸ್ಯರಾದ ನಾರಯಣಸ್ವಾಮಿ ಮತ್ತು ಚಿದಾನಂದಗೌಡ ಮೃತ ಪಟ್ಟಿರುವ ಶಿಕ್ಷಕರಿಗೆ 50 ಲಕ್ಷ ಪರಿಹಾರ ನೀಡುವಂತೆ ಮತ್ತು ಕೊರೋನಾ ಲಾಕ್ ಡೌನ್ ನಿಂದ ಇಕ್ಕಟ್ಟಿನಲ್ಲಿ ಇರುವಂತ ಖಾಸಗಿ ಹಾಗು ಅನುಧಾನಿತ ಶಿಕ್ಷಣ ಸಂಸ್ಥೆಗಳ ಬೋಧಕ ಹಾಗು ಬೋಧಕೇತರ ಸಿಬ್ಬಂದಿಗೆ ತೆಲಂಗಾಣ ಸರ್ಕಾರದ ಮಾದರಿಯಲ್ಲಿ ತಲಾ 25,000ಸಾವಿರ ರೂಪಾಯಿಗಳ ವಿಶೇಷ ಆರ್ಥಿಕ ನೆರವು ಹಾಗು ಮುಂದಿನ ಶಿಕ್ಷಣ ಸಂಸ್ಥೆಗಳು ಪ್ರಾರಂಭವಾಗುವ ತನಕ ಪ್ರತಿ ತಿಂಗಳು 25 ಅಕ್ಕಿ ಹಾಗು ದಿನಸಿ ಪದಾರ್ಥಗಳನ್ನು ನೀಡುವಂತೆ ಮನವಿ ಸಲ್ಲಿಸಿ ಒತ್ತಾಯಿಸಿರುತ್ತಾರೆ.
ಶ್ರೀನಿವಾಸಪುರ:-ಸ್ಥಳಿಯರಿಗೆ ಮಾಹಿತಿ ನೀಡದೆ ಪಟ್ಟಣದ ಕೆಲವು ಪ್ರದೇಶಗಳನ್ನು ಸೀಲ್ ಡೌನ್ ಮಾಡಿರುತ್ತಾರೆ ಎಂದು ಪಟ್ಟಣದ ಜನತೆ ಆರೋಪಿಸಿದ್ದಾರೆ.ಇದನ್ನು ಯಾಕಾಗಿ ಮಾಡಿರುತ್ತಾರೆ ಯಾವ ಇಲಾಖೆಯವರು ಮಾಡಿದ್ದಾರೆ ಎಂಬ ಕನಿಷ್ಠ ಮಾಹಿತಿ ಸ್ಥಳಿಯ ಜನತೆಗೂ ಇಲ್ಲವಾಗಿದೆ.ನಾಳೆ ಸಾರ್ವಜನಿಕ ಪ್ರಕಟಣೆ ಮುಖ್ಯಾಧಿಖಾರಿ.ಈ ಬಗ್ಗೆ vcsnewz ಸುದ್ದಿ ತಂಡ ಪುರಸಭೆ ಪ್ರಭಾರಿ ಮುಖ್ಯಾಧಿಖಾರಿ ಶೇಖರೆಡ್ಡಿ ಅವರನ್ನು ಮಾತನಾಡಿ ಸೀಲ್ ಡೌನ್ ವಿಚಾರ ಪ್ರಸ್ತಾಪಿಸಿದ್ದಕ್ಕೆ, ಆರೋಗ್ಯ ಇಲಾಖೆ ನಿರ್ದೇಶನದ ಮೇರೆಗೆ ಪುರಸಭೆ ವತಿಯಿಂದ ತರಾತುರಿಯಲ್ಲಿ ಸೀಲ್ ಡೌನ್ ಮಾಡಿರುತ್ತೇವೆ ನಾಳೆ ವೇಳೆಗೆ ಅಲ್ಲಿ ಮಾಹಿತಿ ಅಂಟಿಸುತ್ತೇವೆ ಎಂದಷ್ಟೆ ಹೇಳಿದರು.ಹೆಚ್ಚು ಜನ ಸೋಂಕಿತರು ಇರುವ ಕಾರಣ ಮೂರ್ನಾಲ್ಕು ರಸ್ತೆ ಬಂದ್ ಮಾಡಿರುವುದು ಎಂದರು. ರಾಮಕೃಷ್ಣ ಬಡಾವಣೆಯ ಎರಡನೇಯ ಅಡ್ದರಸ್ತೆ ಬಂದ್ ಅದ ರಸ್ತೆಗಳು ಯಾವುವು?ರಾಮಕೃಷ್ಣ ಬಡಾವಣೆಯ ಒಂದನೇ ಅಡ್ದರಸ್ತೆ ಎರಡನೇಯ ಅಡ್ದರಸ್ತೆ ಹಾಗು ಬಾಲಕೀಯರ ಕಾಲೇಜು ಮುಂಬಾಗದ ರಸ್ತೆಗಳಿಗೆ ಜನರ ಒಡಾಟಕ್ಕೆ ನಿರ್ಭಂದ ವಿಧಿಸಿದ್ದಾರೆ.ಯಾವ ಇಲಾಖೆಯವರು ಯಾಕಾಗಿ ನಿರ್ಭಂದ ವಿಧಿಸಿದ್ದಾರೆ ಎಂಬ ಮಾಹಿತಿ ಸಹ ಅಂಟಿಸದೆ ರಸ್ತೆಗೆ ಬೊರ್ ವೆಲ್…
ಕೊರೊನಾ ಎರಡನೇ ಅಲೆ ರಾಜ್ಯದಲ್ಲಿ ಅನೇಕ ಸಂಕಷ್ಟಗಳನ್ನು ತಂದು ನಿಲ್ಲಿಸಿದೆ. ಅದರಲ್ಲೂ ಈ ಬಾರಿ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿಗಳಿಗೆ ಲಾಕ್ಡೌನ್ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಿದ್ದಾರೆ. ಸದ್ಯ ಈಗ ಚಿಕ್ಕಬಳ್ಳಾಪುರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಲಾಕ್ಡೌನ್ ಘೋಷಣೆಯಾಗುತ್ತಿದೆ. ನ್ಯೂಜ್ ಡೆಸ್ಕ್:- ಜಿಲ್ಲೆಗೆ ಅನುಗುಣವಾಗುವಂತೆ ಕ್ರಮ ಕೈಗೊಳ್ಳಿ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಲಾಕ್ ಡೌನ್ ಸಂಬಂಧ ಸಂಪೂರ್ಣ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ವಹಿಸಿದ್ದಾರೆ.ಕರ್ನಾಟಕದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಪ್ರಧಾನಿ, ಲಾಕ್ ಡೌನ್ ನಿರ್ಧಾರವನ್ನು ಜಿಲ್ಲಾಡಳಿತದ ಹೆಗಲಿಗೆ ವಹಿಸಿದ್ದಾರೆ. ಜಿಲ್ಲೆಯ ಸ್ಥಿತಿಗೆ ತಕ್ಕಂತೆ ನಿರ್ಧಾರ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.ಜಿಲ್ಲಾಡಳಿತಕ್ಕೆ ಜಿಲ್ಲೆಯ ಪರಿಸ್ಥಿತಿ ಚೆನ್ನಾಗಿ ಗೊತ್ತಿರುತ್ತೆ. ಹೀಗಾಗಿ ಜಿಲ್ಲೆಗೆ ಅನುಗುಣವಾಗಿ ನೀವೇ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ಮೋದಿ ಹೇಳಿದ್ದಾರೆ.ಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದರೆ ಇಡೀ ದೇಶ ಗೆದ್ದಂತೆ. ಕಾಳಸಂತೆಕೋರರ…