ನ್ಯೂಜ್ ಡೆಸ್ಕ್:- ಕೊರೋನಾ ಸೋಂಕಿತರನ್ನು ಬೆಂಬಿಡದೆ ಕಾಡುತ್ತಿರುವ ಅಪಾಯಕಾರಿ ಬ್ಲಾಕ್ ಫಂಗಸ್ ಅಥವಾ ಮ್ಯೂಕರ್ ಮೈಕೋಸಿಸ್ ರೋಗ ಕೋಲಾರ ಜಿಲ್ಲೆಗೂ ವಕ್ಕರಿಸಿದೆ ಇಂದು ಒಂದೇ ದಿನ 12 ಮಂದಿಗೆ ರೋಗ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.ಬ್ಲಾಕ್ ಫಂಗಸ್ ಸೋಂಕು ಪತ್ತೆಯಾದ,12 ಜನರ ಪೈಕಿ ಏಳು ಜನರಿಗೆ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಕೊರೋನಾ ಸೋಂಕಿತರಾಗಿ ಚಿಕಿತ್ಸೆ ಮಡೆದು ಗುಣಮುಖರಾದ 12 ಮಂದಿಗೆ ಬ್ಲಾಕ್ ಫಂಗಸ್ ರೋಗದ ಲಕ್ಷಣ ಗೋಚರವಾಗಿದೆ ಇವರಲ್ಲಿ ಮೂರು ರೋಗಿಗಳಿಗೆ ಮಾತ್ರ ಆಪರೇಷನ್ ಮಾಡಿ ಚಿಕಿತ್ಸೆ ನೀಡಲಾಗಿದೆ.ಉಳಿದವರಿಗೆ ಚಿಕಿತ್ಸೆ ನೀಡಲು ಆಂಪೋರಿಯೋಸಿಸ್ ಬಿ ಇಂಜೆಕ್ಷನ್ ಸಿಗದ ಹಿನ್ನೆಲೆ ತುರ್ತು ಚಿಕಿತ್ಸೆಗೆ ಸಮಸ್ಯೆಯಾಗಿದೆ. ಆಂಪೋರಿಯೋಸಿಸ್ ಬಿ ಇಂಜೆಕ್ಷನ್ ಹೈದರಾಬಾದ್ ನಿಂದ ತರಿಸಬೇಕಿದೆ ಎನ್ನಲಾಗಿದೆ.ಬ್ಲಾಕ್ ಫಂಗಸ್ ಚಿಕಿತ್ಸೆಗೆ ಮೂರು ನಾಲ್ಕು ಶಸ್ತ್ರಚಿಕಿತ್ಸೆ ಮಾಡಬೇಕಾದ ಅಗತ್ಯ ಇದ್ಧು ಜಿಲ್ಲೆಯ ವೈದ್ಯರು ಲಭ್ಯವಿರುವ ಸೌಲಭ್ಯಗಳಲ್ಲೇ ಚಿಕಿತ್ಸೆಯನ್ನು ನೀಡುತ್ತಿದ್ದಾರೆ ಎಂದು ಜಿಲ್ಲಾ ಕೊರೊನಾ ನೋಡಲ್ ಅಧಿಕಾರಿ ಡಾ.ಚಾರಿಣಿ ಹೇಳಿದ್ದಾರೆ. ಕೋವಿಡ್ ಸೋಂಕಿನಿಂದ ಗುಣಮುಖರಾದ ಮೇಲೂ ಈ ಲಕ್ಷಣಗಳು ಕಂಡುಬಂದರೆ…
Author: admin
ನ್ಯೂಜ್ ಡೆಸ್ಕ್:-ಕೋವಿಡ್ ಸೋಂಕಿತರನ್ನು ರಂಜಿಸಿ ಮನೋ ಧೈರ್ಯ ತುಂಬುವ ಸಲುವಾಗಿ ಮಂಡ್ಯ ಜಿಲ್ಲೆಯ ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ ಹಾಡಿ, ನೃತ್ಯ ಮಾಡಿರುತ್ತಾರೆ.ಮಳವಳ್ಳಿ ಪಟ್ಡಣದ KSRTC ತರಬೇತಿ ಕೇಂದ್ರದಲ್ಲಿ ನಡೆಯುತ್ತಿರುವ ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರನ್ನು ರಂಜಿಸಲು ನೃತ್ಯ ಮಾಡಿದ್ದಾರೆ.ಸೋಂಕಿತರಿಗೆ ಮನೋರಂಜನೆ ನೀಡುವುದಕ್ಕೆ ಸಾಂಸ್ಕತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿ ಈ ಸಂದರ್ಭದಲ್ಲಿ ಗ್ರಾಮೀಣ ಸೋಗಡಿನ ಜನಪದ ಗೀತೆಗಳಿಗೆ ಶಾಸಕ ಹಾಡಿ ನೃತ್ಯ ಮಾಡಿದಾಗ ಸೋಂಕಿತರು ಸಹ ತಾವು ನಿಂತಿದ್ದ ಜಾಗದಲ್ಲೇ ನೃತ್ಯ ಮಾಡಿ ಆನಂದಿಸಿದರು.ವೃತ್ತಿಯಲ್ಲಿ ವೈದ್ಯರಾಗಿರುವ ಶಾಸಕ ಡಾ.ಕೆ.ಅನ್ನದಾನಿ ಸ್ವತಃ ಜಾನಪದ ಗಾಯಕರು ಹಾಗೂ ಕಲಾವಿದರಾಗಿದ್ದು, ಸೋಂಕಿತರಿಗೆ ಉತ್ಸಾಹ ತುಂಬಿ ಮನೋ ಧೈರ್ಯ ತುಂಬುವ ಉದ್ದೇಶದಿಂದ ವೃತ್ತಿಪರ ಜಾನಪದ ಕಲಾವಿದರು ಮತ್ತು ಹಾಡುಗಾರರನ್ನು ಕರೆಯಿಸಿ ಕಾರ್ಯಕ್ರಮ ಆಯೋಜಿಸಿರುವುದಾಗಿ ಹೇಳಲಾಗಿದೆ. ಕೊರೊನ ದಿಂದ ರಕ್ಷಿಸಿಕೊಳ್ಳಲು ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಬಿಸಿ ನೀರಿನ ಸ್ನಾನ ಮಾಡಿ.ಸ್ವಚ್ಚತೆ ಕಾಪಾಡಿಕೊಳ್ಳಿ.ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.ಸಾರ್ವಜನಿಕ…
ಇಸ್ರೇಲ್ – ಪ್ಯಾಲೆಸ್ಟೈನ್ ನಡುವೆ ಉದ್ವಿಗ್ನತೆ ಮತ್ತೆ ಕಾವೇರಿದೆ.ಎರಡು ದೇಶಗಳ ನಡುವೆ ಯುದ್ಧದ ವಾತವರಣ ನಿರ್ಮಾಣವಾಗಿದೆಎರಡು ರಾಷ್ಟ್ರಗಳು ಸ್ಥಾಪನೆಯಾದಾಗಿನಿಂದಲೂ ಒಂದಿಲ್ಲೊಂದು ವಿವಾದಗಳು ಕೇಳಿಬರುತ್ತದೆ. ನ್ಯೂಜ್ ಡೆಸ್ಕ್:ಇಸ್ರೇಲ್ನ ಅತಿದೊಡ್ಡ ಮೆಟ್ರೋಪಾಲಿಟನ್ ಪ್ರದೇಶ ಮತ್ತು ಇತರ ನಗರ ಪ್ರದೇಶಗಳಲ್ಲಿ ಇದರಿಂದ ಅಪಾರ ಪ್ರಮಾಣದ ತೊಂದರೆ ಆಗಿದ್ದು, ಅನೇಕ ಬಹುಮಹಡಿ ಕಟ್ಟಡ ಸಂಪೂರ್ಣವಾಗಿ ನೆಲಸಮವಾಗಿವೆ. ಈ ಹಿಂದೆ 2007ರಲ್ಲೂ ಇಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಆ ವೇಳೆ, 233 ಜನರು ಸಾವನ್ನಪ್ಪಿದ್ದರು. ಆದರೆ, ಇದೀಗ ಮತ್ತೊಮ್ಮೆ ಅದೇ ರೀತಿಯ ಹಿಂಸಾಚಾರ ಆರಂಭಗೊಂಡಿದೆ.ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಉದ್ವಿಗ್ನತೆಯ ಪರಿಣಾಮ, ಸುಮಾರು 103 ಮಂದಿ ಈಗಾಗಲೇ ಸಾವನ್ನಪ್ಪಿದ್ದು, 580ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಇಸ್ರೇಲ್ ಧಗಧಗಿಸುತ್ತಿದೆ, ಹಿಂಸಾಚಾರಕ್ಕೆ ಇದುವರಿಗೂ 70ಕ್ಕೂ ಹೆಚ್ಚು ಜನ ಸಾವನಪ್ಪಿದ್ದಾರೆ. ಹಿಂಸೆ ಭುಗಿಲೆದ್ದ ಬಳಿಕ ಹಲವು ದೇಶಗಳು ಘಟನೆಯನ್ನು ಖಂಡಿಸಿವೆ. ಭಾರತ ಸಹ ಹಿಂಸಾಚಾರದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದೆ. ಜೆರುಸಲೇಂನ ‘ಟೆಂಪಲ್ ಮೌಂಟ್’ ಬಳಿ ನಡೆದ ಹಿಂಸಾಚಾರವನ್ನು ಖಂಡಿಸಿದೆ.ಹಿಂಸೆ ಬಿಟ್ಟು ಶಾಂತಿಯಿಂದ ವರ್ತಿಸಲು ಭಾರತ…
ನಂದಮೂರಿ ಬಾಲಕೃಷ್ಣ ಆಂಧ್ರ ಹಿಂದೂಪುರದ ಶಾಸಕಕ್ಷೇತ್ರದ ಜನರಿಗೆ ನೆರವು ನೀಡಿದ ನಂದಮೂರಿ ಬಾಲಕೃಷ್ಣ20 ಲಕ್ಷ ರೂಪಾಯಿ ಮೌಲ್ಯದ ಔಷಧಿಗಳ ಕೊಡುಗೆ. ನ್ಯೂಜ್ ಡೆಸ್ಕ್:-ಮಹಾಮಾರಿ ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯಿಂದ ಭಾರತದಲ್ಲಿ ಮತ್ತೊಮ್ಮೆ ಸಂಕಷ್ಟದ ಸ್ಥಿತಿ ಎದುರಾಗಿದೆ. ಪ್ರತಿ ದಿನ ಹೆಚ್ಚು ಹೆಚ್ಚು ಸೋಂಕಿತರು ಪತ್ತೆಯಾಗುತ್ತಿರುವುದರಿಂದ ಆರೋಗ್ಯ ವ್ಯವಸ್ಥೆ ಮೇಲೆ ಒತ್ತಡ ಉಂಟಾಗಿದ್ದು, ಚಿಕಿತ್ಸೆ ಸಿಗದೆ ಸೋಂಕಿತರು ಒದ್ದಾಡುತ್ತಿದ್ದಾರೆ. ಇಂತಹ ಕರಾಳ ಪರಿಸ್ಥಿತಿಯಲ್ಲಿ ಜನರ ಪರ ಸಹಾಯ ಮಾಡಲು ಅನೇಕ ಸೆಲೆಬ್ರಿಟಿಗಳು ಮುಂದೆ ಬಂದಿದ್ದಾರೆ.ಬಾಲಿವುಡ್ ನಟ ಸೋನು ಸೂದ್ ಸೇರಿದಂತೆ ಹಲವು ಕಲಾವಿದರು ಜನರ ಜೀವ ಉಳಿಸಲು ಮುಂದಾಗಿದ್ದಾರೆ. ಕೆಲವರು ತಮ್ಮ ಕೈಲಾದಷ್ಟು ದೇಣಿಗೆ ನೀಡಿದ್ದಾರೆ. ಇದೀಗ ಟಾಲಿವುಡ್ ನಟ ‘ಲೆಜೆಂಡ್’ ಬಾಲಕೃಷ್ಣ ಕೂಡ ಜನರಿಗೆ ಸಹಾಯ ಮಾಡಿದ್ದಾರೆ.ತೆಲುಗಿನ ನಟ ನಂದಮೂರಿ ನಟ ಸಿಂಹ ಬಾಲಕೃಷ್ಣ ರಾಜಕಾರಣಿಯೂ ಆಗಿದ್ದು.ಆಂಧ್ರ ಪ್ರದೇಶದ ಹಿಂದೂಪುರ ಕ್ಷೇತ್ರದ ಶಾಸಕರಾಗಿರುವ ಬಾಲಕೃಷ್ಣ ಇದೀಗ ತಮ್ಮ ಕ್ಷೇತ್ರದ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ತಮ್ಮ ಹಿಂದೂಪುರ ಕ್ಷೇತ್ರದ ಜನರಿಗೆ…
ಶ್ರೀನಿವಾಸಪುರ:-ಕೊರೋನಾ ಲಸಿಕೆ ಪಡೆಯಲು ಗ್ರಾಮಸ್ಥರು ತಯಾರಾಗಿದ್ದರು ಲಸಿಕೆ ನೀಡಲು ಆರೋಗ್ಯ ಇಲಾಖೆ ನಿರಾಸಕ್ತಿ ತೊರಿಸುತ್ತಿದೆ ಆವಲಕುಪ್ಪ ಗ್ರಾಮ ಪoಚಾಯಿತಿ ಸದಸ್ಯೆ ಹಾಗು ಹೋದಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಆರೋಪಿಸಿದ್ದಾರೆ. ಆವಲಕುಪ್ಪ ಗ್ರಾಮದಲ್ಲಿ ಇತ್ತೀಚೆಗೆ ಸುಮಾರು ಕೆಲವು ಕುಟುಂಬಗಳಿಗೆ ಸೋಂಕು ತಗಲಿದ್ದು ಕೆಲವರು ಗುಣಮುಖರಾಗಿದ್ದಾರೆ ಇನ್ನೂ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆವಲಕುಪ್ಪ ಗ್ರಾಮ ಸೋಮಯಾಜಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವ್ಯಾಪ್ತಿಗೆ ಸೇರಿದ್ದಾಗಿದ್ದು ಅಲ್ಲಿನ ವೈದ್ಯೆ ಸೌಮ್ಯ ಆರೋಗ್ಯ ನಿರೀಕ್ಷಕ ಶ್ರೀನಿವಾಸ್ ಇವರ ಸಲಹೆಯಂತೆ ಕರೋನ ಲಸಿಕೆ ಪಡೆದುಕೊಳ್ಳಲು ಆಸಕ್ತಿ ಹೊಂದಿ ಸ್ಥಳೀಯ ಆಶಾ ಕಾರ್ಯಕರ್ತರಿಗೆ ಲಸಿಕೆ ಪಡೆಯುವಂತವರು 50 ಮಂದಿ ತಮ್ಮ ವಿವರವನ್ನು ನೊಂದಣಿ ಮಾಡಿಕೊಂಡಿರುತ್ತಾರೆ. ವೈದ್ಯರು ಹೇಳಿದಂತೆ ಸಮುದಾಯ ಭವನದಲ್ಲಿ ಲಸಿಕೆ ಪಡೆಯಲು 2 ದಿನಗಳಿಂದ ಕಾಯುತ್ತಿದ್ದರು ಲಸಿಕೆ ನೀಡಲು ವೈದ್ಯರು ಹಾಗು ಸಿಬ್ಬಂದಿ ಗ್ರಾಮಕ್ಕೆ ಆಗಮಿಸಲಿಲ್ಲ ಈ ವಿಚಾರವಾಗಿ ವೈದ್ಯೆ ಸೌಮ್ಯ ಅವರಿಗೆ ಕರೆ ಮಾಡಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಎರಡು ದಿನಗಳಿಂದ ಕಾಯುತ್ತಿರುವುದಾಗಿ ತಿಳಿಸಿದರೆ ಇದಕ್ಕೆ…
ಶ್ರೀನಿವಾಸಪುರ:-ಲಾಕ್ ಡೌನ್ ಆದರೆ ಎನು ಸಿಗುತ್ತದೋ ಎನು ಸಿಗಲ್ವೋ ಎಂದು ಜನ ಇಂದು ಮಾಂಸದಂಗಡಿಗಳ ಮುಂದೆ ತರಕಾರಿ ಹಾಗು ದಿನಸಿ ಅಂಗಡಿಗಳ ಮುಂದೆ ಕೊರೋನಾ ನಿಯಮಾವಳಿಗಳನ್ನು ಉಲ್ಲಂಘಿಸಿ ಜಮಾವಣೆಯಾಗಿ ಬರ್ಜರಿ ವ್ಯಾಪಾರ ಮಾಡಿದರು. ಪೋಲಿಸರು ಇಲ್ಲ ತಾಲೂಕು ಅಧಿಕಾರಿಗಳು ಪತ್ತೇ ಇಲ್ಲ.ಪಟ್ಟಣದಲ್ಲಿ ಭಾನುವಾರದ ದಿನದಂದು ಜನ ಮರಳೊ ಜಾತ್ರೆ ಮರಳೊ ಎಂಬಂತೆ ಜನತೆ ಬರುತ್ತಾರೆ ಎಂಬ ಮಾಹಿತಿ ಇದ್ದರು ಇದನ್ನು ತಡೆಯಲು ಪೋಲಿಸರೇ ಪತ್ತೇ ಇಲ್ಲ. ಎಂ.ಜಿ.ರಸ್ತೆ, ಹಳೇ ಆಸ್ಪತ್ರೆ ಮಾರುಕಟ್ಟೆ, ಮಾಂಸದಂಗಡಿಗಳು ಇರುವ ಆಜಾದ್ ರಸ್ತೆ, ಕಟ್ಟೆಕೆಳಗಿನ ಪಾಳ್ಯ,ಪೋಸ್ಟಾಪಿಸ್ ರಸ್ತೆಯಲ್ಲಿ ಜನವೊ ಜನ ಒಬ್ಬರ ಮೇಲೊಬ್ಬರು ಬಿದ್ದು ಸರಕು ಸರಂಜಾಮುಗಳನ್ನು ಕೊಂಡು ಕೊಳ್ಳುತ್ತಿದ್ದರು.ಜನತಾ ಕರ್ಫೂನೂ ಇಲ್ಲ ಲಾಕ್ ಡೌನ್ ಇಲ್ಲವೇನು ಎಂದು ಜನ ಮುಗಿಬಿದ್ದು ಸರಕು ಕೊಳ್ಳುತ್ತಿದ್ದರು.ಕೊರೋನಾ ಪೀಡಿತರ ಸಂಖ್ಯೆ ಏರುತ್ತಿದ್ದರು ಇತ್ತ ಜನರಲ್ಲಿ ಅದರ ಅರಿವೇ ಇಲ್ಲ ಎಂಬಂತೆ ಸರಕು ಕೊಳ್ಳಲು ಜಾತ್ರೆ ಸೇರಿದಂತೆ ಜನ ಜಮಾವಣೆ ಯಾಗಿದ್ದರು. ಹಿಂದೆಲ್ಲ ಜನರು ಒಂದೇಡೆ ಸೇರಬಾರದು ಎಂದು ಮಾರುಕಟ್ಟೆ ಸೇರಿದಂತೆ…
ನ್ಯೂಜ್ ಡೆಸ್ಕ್: ಲಾಕ್ಡೌನ್ ಪ್ರಕಟಣೆಗೂ ಮುಂಚಿತವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಕೊರೋನಾ ಸಂಕಷ್ಟ ನಿವಾರಣೆ ಪ್ರಾರ್ಥಿಸಿ ಬೆಂಗಳೂರು ನಗರ ದೇವತೆ ಅಣ್ಣಮ್ಮದೇವಿಗೆ ಹಾಲು-ಮೊಸರು ಎರೆದು ಪೂಜೆ ಸಲ್ಲಿಸಿರುತ್ತಾರೆ. ಮುಖ್ಯಮಂತ್ರಿ ಯಡಿಯೂರಪ್ಪ ನೇರವಾಗಿ ದೇವಾಲಯಕ್ಕೆ ತೆರಳಿ ಅಲ್ಲಿರುವ ನಂಬಿಕೆ ಮೂರ್ತಿಗಳಿಗೆ ಹಾಲು-ಮೊಸರು ಎರೆದ ಅವರು ನಂತರ ಅಣ್ಣಮ್ಮನ ಮೂರ್ತಿಗೆ ಮಂಗಳಾರತಿ ಎತ್ತಿ ಪೂಜೆ ಸಲ್ಲಿಸಿರುತ್ತಾರೆ.ಈ ಸಂದರ್ಭದಲ್ಲಿ ಅವರೊಂದಿಗೆ ಕೆಲವೆ ಕೆಲವು ಅಧಿಕಾರಿಗಳು ಹಾಗು ಕೋಲಾರದ ಅಣ್ಣಮ್ಮನ ಪರಮ ಭಕ್ತ ಬಿಜೆಪಿ ಸ್ಲಂ ಮೊರ್ಚಾ ಕಾರ್ಯದರ್ಶಿ ಹಾಗು ಅರಣ್ಯ ನಿಗಮದ ನಿರ್ದೇಶಕ ರಾಜೇಂದ್ರ ಮಾತ್ರ ಇದ್ದರು.ಪೂಜೆ ಸಲ್ಲಿಸಿದ ಮುಖ್ಯಂತ್ರಿಗಳಿಗೆ ರಾಜೇಂದ್ರ ತಿಲಕ ಇಟ್ಟು ಗೌರವಿಸಿರುತ್ತಾರೆ. ಹಾಲು-ಮೊಸರು ನಂಬಿಕೆಗ್ರಾಮೀಣ ಭಾಗದಲ್ಲಿ ಮನೆಯ ಮಕ್ಕಳಿಗೆ ಅಮ್ಮ ಹಟ್ಟಿರುವುದು,ಕ್ಷಯ ಇತರೆ ಸೋಂಕಿನ ರೋಗಗಳು ಬಂದಾಗ ತಾಯಂದರೂ ಗ್ರಾಮ ದೇವತೆಗೆ ಹಾಲು-ಮೊಸರು ಎರೆದು ಬೆವಿನ ಸೋಪ್ಪು ಅರ್ಪಿಸುವುದು ಈಗಲೂ ನಂಬಿಕೆಯಾಗಿ ನಡೆದುಕೊಂಡು ಬರುತ್ತಿದೆ.ಅದರಂತೆ ಭೂಮಿ ಮೇಲೆ ಮಹಾಮಾರಿಯಾಗಿ ಕಾಡುತ್ತಿರುವ ಸೋಂಕಿನ ರೋಗ ಕೊರೋನಾ ತಡೆಯಲು ನಗರದೇವತೆ ಅಣ್ಣಮ್ಮದೇವಿಗೆ ಮುಖ್ಯಮಂತ್ರಿ ಯಡಿಯೂರಪ್ಪ…
ತಮಿಳುನಾಡಿನಲ್ಲಿ ಬಿಜೆಪಿ ಗೆದ್ದಿರುವುದು ನಾಲ್ಕು ಸ್ಥಾನವೈ.ಎ.ಎನ್ ಉಸ್ತುವಾರಿಯಲ್ಲಿ ಮುಡಕುರುಚಿಯಲ್ಲಿ ಬಿಜೆಪಿ ಗೆಲವುತಮಿಳುನಾಡು ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಸಿ.ಟಿ.ರವಿ. ನ್ಯೂಜ್ ಡೆಸ್ಕ್:-ತಮಿಳುನಾಡಿನ ಈರೋಡ್ ಜಿಲ್ಲೆಯ ಮುಡಕುರುಚಿ ವಿಧಾನ ಸಭಾ ಕ್ಷೇತ್ರದಲ್ಲಿ ಮೊನ್ನೆ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಬಿ.ಜೆ.ಪಿ ಗೆಲವು ಸಾಧಿಸಿದೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಕೆ.ಸರಸ್ವತಿ ಡಿಎಂಕೆ ಪಕ್ಷದ ಅಭ್ಯರ್ಥಿ ಮಾಚಿ ಸಚಿವೆ ಸುಬ್ಬುಲಕ್ಷ್ಮಿ ಜಗದಿಶನ್ ಅವರನ್ನು 281 ಮತಗಳ ಅಂತರದಿಂದ ಸೋಲಿಸಿದ್ದಾರೆ.ಈ ಕ್ಷೇತ್ರದಲ್ಲಿ ಕಳೆದ ಎರಡು ಬಾರಿಯೂ ಬಿಜೆಪಿ ಮಿತ್ರ ಪಕ್ಷವಾದ ಜಯಲಲಿತ ಪಕ್ಷ AIADIMK ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸಿಕೊಂಡು ಬರುತ್ತಿದ್ದು ಈ ಬಾರಿ ಇಲ್ಲಿನ ಹಾಲಿ ಶಾಸಕರಾಗಿದ್ದ ಶಿವ ಸುಭ್ರಮಣಿ BJPಗೆ ಕ್ಷೇತ್ರ ತ್ಯಾಗ ಮಾಡಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಕೆ.ಸರಸ್ವತಿ ಅವರ ಗೆಲುವಿಗೆ ಸಹಕಾರ ನೀಡಿದ್ದಾರೆ.ಬಿಜೆಪಿ ಅಭ್ಯರ್ಥಿಯಾಗಿ ಗೆಲವು ಸಾಧಿಸಿರುವ ಡಾ.ಸಿ.ಕೆ.ಸರಸ್ವತಿ ಈರೋಡ್ ನ ಸಿ.ಕೆ ಆಸ್ಪತ್ರೆ ಮುಖ್ಯಸ್ಥೆ ಅವರ ಪತಿ ಚಿನ್ನಸ್ವಾಮಿ ಸಹ ವೈದ್ಯರು.ತಮಿಳುನಾಡಿನ ಚುನಾವಣೆಯಲ್ಲಿ ಬಿಜೆಪಿ ವತಿಯಿಂದ ಸ್ಪರ್ದಿಸಿದ್ದ ಘಟಾನು ಗಟಿಗಳೆ ಸೋತಿರುತ್ತಾರೆ ಅವರಲ್ಲಿ…
ನ್ಯೂಜ್ ಡೆಸ್ಕ್:-ಕೊರೋನಾ ತಡೆಗಟ್ಟಲು ಕೋಲಾರ ಜಿಲ್ಲೆಗೆ ಸರ್ಕಾರದಿಂದ ಹೆಚ್ಚಿನ ಆದ್ಯತೆ ಬೇಕಾಗಿದೆ ಎಂದು ಸಂಸದ ಮುನಿಸ್ವಾಮಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು ಅವರು ಇಂದು ಬೆಂಗಳೂರಿನಲ್ಲಿ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಜೊತೆಗೂಡಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿಯಾಗಿದ್ದರು ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಮುನಿಸ್ವಾಮಿ ಜಿಲ್ಲೆಯಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ತಡೆಯುವ ಸಲುವಾಗಿ ಜಿಲ್ಲೆಗೆ ಹೆಚ್ಚಿನ ವೈದ್ಯಕೀಯ ನೆರವು ಬೇಕಾಗಿದೆ ಎಂದು ವಿವರಿಸಿರುತ್ತಾರೆ. ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ಆರುಸಾವಿರ ಸಾಮಾರ್ಥ್ಯದ ದ್ರವಿಕೃತ ಆಮ್ಲಜನಕದ ಟ್ಯಾಂಕ್, ತಾಲೂಕು ವಾರು ಆಸ್ಪತ್ರೆಗಳಿಗೆ ಜಂಬು ಸೈಜ್ ಸಿಲಿಂಡರ್,ಕೆ.ಜಿ.ಎಫ್ ನಲ್ಲಿ ಪುನಾರಂಭ ಮಾಡಲಾಗುತ್ತಿರುವ ಬಿ.ಜಿ.ಎಂ.ಎಲ್ ಆಸ್ಪತ್ರೆಗೆ ಆರ್ಥಿಕ ಸಹಾಯ,ಅಗತ್ಯತೆಗೆ ತಕ್ಕಷ್ಟು ರೆಮಿಡ್ ಸಿವಿರ್ ಇಂಜೆಕ್ಷನಗಳು ಸರಬರಾಜು ಮಾಡುವಂತೆ ಮನವಿ ನೀಡಿರುವುದಾಗಿ ಮತ್ತು ಸೋಂಕಿತರಿಗೆ ತಕ್ಷಣಕ್ಕೆ ನೇರವಾಗಿ ಆಕ್ಸಿಜನ್ ಮತ್ತು ವೆಂಟಿಲೇಟರ್ ಹಾಸಿಗೆಯ ಆಸ್ಪತ್ರೆ ನೆರವು ಸಿಗಲು ಕೋಲಾರ ಜಿಲ್ಲೆಗೆ ಪ್ರತ್ಯಕವಾಗಿ ಅಂತರ್ಜಾಲ…
ನ್ಯೂಜ್ ಡೆಸ್ಕ್: ಚಾಮರಾಜನಗರದ ಸರಕಾರಿ ಆಸ್ಪತ್ರೆಯಲ್ಲಿ ಸಂಭವಿಸಿರುವ ಸಾವುಗಳು ನಿಮ್ಮ ಮನಸ್ಸಿನ ಮೇಲೆ ಯಾವುದೇ ರೀತಿಯ್ ಪರಿಣಾಮ ಬೀರಲಿಲ್ಲವೇ ಮುಖ್ಯಮಂತ್ರಿ ಯಡಿಯೂರಪ್ಪನವರೆ ಒಂದು ಕ್ಷಣ ಕಾಲ ನಿಮ್ಮ ಸ್ಥಾನವನ್ನು ಮರೆತು ಒಬ್ಬ ಸಾಮಾನ್ಯ ಮಾನವರಾಗಿ ಆಲೋಚಿಸಿ ನೋಡಿ ಎಂದು ಮಾಜಿ ಸ್ಪೀಕರ್ ಹಾಲಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದ್ದಾರೆ.ಚಾಮರಾಜನಗರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ರಮೇಶ್ ಕುಮಾರ್ ಬಹಿರಂಗ ಪತ್ರ ಬರೆದಿದ್ದು .ನಾವು ಅಲಂಕರಿಸಿರುವ ಸ್ಥಾನಗಳು ನಮ್ಮ ಮನುಷ್ಯತ್ವಕ್ಕೆ ಹೊದಿಸಿದ ಕವಚಗಳೇ ಹೊರತು ನಮ್ಮ ಸೂಕ್ಷ್ಮತೆಯನ್ನು ನುಂಗಿಹಾಕುವ ಸಾಧನಗಳಾಗಬಾರದು ಎಂದು ತೀಕ್ಷಣವಾಗಿ ಹೇಳಿದ್ದಾರೆ.ಶಾಸಕನಾಗಿ ಅಥಾವ ವಿಶೇಷವಾಗಿ ಪ್ರತಿಪಕ್ಷದನಾಗಿ ಈ ಮಾತುಗಳನ್ನಾಡುತ್ತಿಲ್ಲ. ರಾಜಕಾರಣ ತನ್ನ ಗಾಂಭೀರ್ಯವನ್ನು ಮತ್ತು ಘನತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಕೆಲವೇ ದಿನಗಳ ಹಿಂದೆ ಮದ್ರಾಸ್ ಶ್ರೇಷ್ಠ ನ್ಯಾಯಾಲಯವು ಕೇಂದ್ರ ಚುನಾವಣಾ ಆಯೋಗದ ಕರ್ತವ್ಯ ಭ್ರಷ್ಟತೆಯ ಬಗ್ಗೆ ಆಡಿರುವ ನಿಷ್ಠುರದ ಮಾತುಗಳನ್ನು ತಾವು ಗಮನಿಸಿರಬಹುದು ಎಂದು ನಂಬಿದ್ದೇನೆ. ಇದರ ಹಿನ್ನೆಲೆಯಲ್ಲಿ ನಡೆದಿರುವ ದುರಂತ ಏನೆಂದು ನಮಗೆ ಸೂಚನೆ…