ಆಕ್ಸಿಜನ್ ಕೊರತೆ ಆತಂಕದಲ್ಲಿ ಖಾಸಗಿ ಆಸ್ಪತ್ರೆಪೋಲಿಸ್ ಅಧಿಕಾರಿ ಸಮಯ ಪ್ರಜ್ಞೆ ಉಳಿದ 18 ಜನರುಆಕ್ಸಿಜನ್ ಸಮಸ್ಯೆ ಉಂಟಾಗಿ, ಸೋಂಕಿತರು ನರಳಾಡುವ ಸ್ಥಿತಿ ಉಂಟಾಗಿದೆ.ತಡರಾತ್ರಿ ನಟ ಸೋನು ಸೂದ್ ಚಾರಿಟಬಲ್ ಟ್ರಸ್ಟ್ ನಿಂದ 11 ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡಿದೆ. ನ್ಯೂಜ್ ಡೆಸ್ಕ್:-ಪೋಲಿಸ್ ಇನ್ಸೆಪೆಕ್ಟರ್ ಯಾಮಾರಿ ಕೈ ಚಲ್ಲಿದ್ದರೆ ಬರೋಬರಿ 18 ಜನ ಉಸಿರು ನಿಂತು ಹೋಗುತಿತ್ತು ಅವರ ಸಮಯ ಪ್ರಜ್ಞೆಯಿಂದ ಇವತ್ತು ಜನರ ಬದುಕಿದ್ದಾರೆ, ಇಲ್ಲವಾಗಿದ್ದರೆ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಆದಂತೆ ಜನರು ಸತ್ತು ಹೋಗುತ್ತಿದ್ದರು.ಸಮಯ ಪ್ರಜ್ಞೆ ತೋರಿ ಜನರ ಜೀವ ಉಳಿಸಿದ ಪೋಲಿಸ್ ಅಧಿಕಾರಿ ಹೆಸರು ಕೆ. ಪಿ. ಸತ್ಯನಾರಾಯಣ. ಇವರು ಯಲಹಂಕ ಟೌನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್. ಇವರು ಹೆಸರಿಗೆ ಪೋಲಿಸ್ ಅಧಿಕಾರಿಯಾದರು ಇವರ ಮುಖದಲ್ಲಿ ಎದ್ದು ಕಾಣೋದು ಅಕ್ಕರೆ ಮತ್ತು ಕರುಣೆ ತುಂಬಿದ ನೋಟ.ಇವರ ಸಮಯ ಪ್ರಜ್ಞೆ ತೋರಿದ್ದು ಸೋಮವಾರ ಮಧ್ಯರಾತ್ರಿ ೧ ಗಂಟೆಸಮಯದಲ್ಲಿ ಯಲಹಂಕದ ಅರ್ಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಮುಕ್ತಾಯವಾಗಿದೆ.ಸುಮಾರು 18 ಜನ ಪ್ರಾಣವಾಯುವಿನ ಉಸಿರಾಡುತ್ತಿದ್ದವರ…
Author: admin
ನ್ಯೂಜ್ ಡೆಸ್ಕ್:-ಕೊರೊನಾ ಲಸಿಕೆ ಕುರಿತಾಗಿ ತಪ್ಪು ಮಾಹಿತಿ ನೀಡಿದ್ದ ತಮಿಳು ಹಾಗು ತೆಲಗು ಸಿನಿಮಾಗಳ ಖಳ ಹಾಗು ಪೊಷಕ ನಟ ಮನ್ಸೂರ್ ಅಲಿ ಖಾನ್ ಗೆ ಮದ್ರಾಸ್ ಹೈಕೋರ್ಟ್ 2 ಲಕ್ಷ ರೂ. ದಂಡ ವಿಧಿಸಿದೆ.ವ್ಯಾಕ್ಸಿನ್ ಪಡೆದ ತಮಿಳು ನಟ ವಿವೇಕ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ಮನ್ಸೂರ್ ಅಲಿ ಖಾನ್ ಸಾಮಾಜಿಕ ಜಾಲ ತಾಣದಲ್ಲಿ ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು. ಬಳಿಕ ಮನ್ಸೂರ್ ಅಲಿ ಖಾನ್ ವಿರುದ್ಧ ಆರೋಗ್ಯಾಧಿಕಾರಿ ದೂರು ದಾಖಲಿಸಿದ ಪರಿಣಾಮ,ಮನ್ಸೂರ್ ಅಲಿ ಖಾನ್ ವಿರುದ್ಧ ಚನೈ ವಡಪಳನಿ ಪೋಲೀಸ್ ಸ್ಟೇಷನ್ ನಲ್ಲಿ ಎಫ್.ಐ.ಆರ್ ದಾಖಲಾಗಿತ್ತು.ಕಳೆದ ತಿಂಗಳು ತಮಿಳು ಸಿನಿಮಾಗಳ ಹಾಸ್ಯ ನಟ ವಿವೇಕ್ ನಿಧನ ಹೊಂದಿದ್ದರು. ಕೊರೊನಾ ಲಸಿಕೆ ಪಡೆದ ಮಾರನೇ ದಿನ ಹೃದಯಾಘಾತದಿಂದ ವಿವೇಕ್ ಕೊನೆಯುಸಿರೆಳೆದಿದ್ದರು. ಕೊರೊನಾ ಲಸಿಕೆ ಪಡೆದುಕೊಂಡಿದ್ದಕ್ಕೂ, ವಿವೇಕ್‌ಗೆ ಹೃದಯಾಘಾತ ಸಂಭವಿಸಿದ್ದಕ್ಕೂ ಸಂಬಂಧ ಇಲ್ಲದಿದ್ದರು ಈ ವಿಚಾರದ ಬಗ್ಗೆ ನಟ ಮನ್ಸೂರ್ ಅಲಿ ಖಾನ್ ಎರಡಕ್ಕೂ ಲಿಂಕ್ ಮಾಡಿ ಮಾತನಾಡಿದ್ದರು. ಕೊರೊನಾ ಲಸಿಕೆ…
ತಾಲೂಕಿನಲ್ಲಿ ವ್ಯಾಪಕವಾಗಿ ಹರಡಿರುವ ಸೋಂಕುಪಂಚಾಯಿತಿ ಮಟ್ಟದಲ್ಲಿ ನಿಭಂದನೆಗಳ ಅನ್ವಯ ಜಾಗ್ರತೆಸ್ವತಃ ವೈದ್ಯನಿಗೆ ಸೋಂಕುಕೋವಿಡ್ ಆಸ್ಪತ್ರೆಯಲ್ಲಿ ಹಾಸಿಗೆಗಳ ಏರಿಕೆ! ಶ್ರೀನಿವಾಸಪುರ:-ತಾಲೂಕಿನ ನೆಲವಂಕಿ ಹೋಬಳಿಯ ಗ್ರಾಮಗಳಲ್ಲಿ ಕೊರೋನಾ ವಿಜೃಂಬಿಸಿದೆ ಬಹುತೇಕ ಗ್ರಾಮಗಳನ್ನು ಆವರಿಸಿಕೊಂಡಿರುವ ಕೊರೋನಾ ಸೋಂಕಿತರ ಸಂಖ್ಯೆ ಸುಮಾರು 40-50 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು.ಲಕ್ಷ್ಮಿಪುರ ಪಂಚಾಯಿತಿ ವ್ಯಾಪ್ತಿಯ ಬೂರಕಾಯಿಲಕೋಟೆ(ಕಾಶಿಂಗಡ್ಡ)ಗ್ರಾಮವನ್ನು ಕಂಟೈನ್ಮೆಂಟ್ ಪ್ರದೇಶ ಎಂದು ಘೋಷಿಸಿರುವುದಾಗಿ ಪಂಚಾಯಿತಿ ಅಧಿಕಾರಿ ಚಂದ್ರಶೇಖರ್ ತಿಳಿಸಿರುತ್ತಾರೆ.ನೆಲವಂಕಿ ಪಂಚಾಯಿತಿ ವ್ಯಾಪ್ತಿಯ ಗೋರವಿಮಾಕಲಹಳ್ಳಿ ಗ್ರಾಮದಲ್ಲಿ ಸೋಂಕಿತರು ವಾಸಿಸುವ ಪ್ರದೇಶವನ್ನು ಸೀಲ್ ಡೌನ್ ಮಾಡಿರುವುದಾಗಿ ಪಂಚಾಯಿತಿ ಅಧಿಕಾರಿ ಗೌಸ್ ಪಾಷ ತಿಳಿಸಿರುತ್ತಾರೆ.ಹೋಬಳಿಯ ವ್ಯಾಪ್ತಿಯಲ್ಲಿ ಬರುವಂತ ಗ್ರಾಮಗಳಾದ ಲಕ್ಷ್ಮಿಪುರ,ನೆಲವಂಕಿ,ಅವುಲದೊಡ್ಡಿ,ಪಚಾರಮಾಕಲಹಳ್ಳಿ, ಜೋಡಿಕೊತ್ತಪಲ್ಲಿ.ಕೆ.ಗೊಲ್ಲಪಲ್ಲಿ,ಕೊಂಡಸಂದ್ರ,ಪಾತಕೋಟೆ,ನಂಬುವಾರಿಪಲ್ಲಿ ಹಾಗು ಪುಲಗೂರುಕೋಟೆ ಪಂಚಾಯಿತಿ ವ್ಯಾಪ್ತಿಯ ಪುಲಗೂರುಕೋಟೆ,ಮುದ್ದೆಪಲ್ಲಿ,ಪಾತಬಲ್ಲಪಲ್ಲಿ,ಜನ್ನಪಲ್ಲಿ ಗ್ರಾಮಗಳಲ್ಲಿ ಸೋಂಕಿತರು ಇರುವುದಾಗಿ ತಿಳಿಸಿರುತ್ತಾರೆ.ನೆಲವಂಕಿ ಹೊಬಳಿಯ ಎರಡು ಗ್ರಾಮಪಂಚಾಯಿತಿಗಳಾದ ಲಕ್ಷ್ಮಿಪುರ ಮತ್ತು ನೆಲವಂಕಿ ಪಂಚಾಯಿತಿಗಳು ಲಕ್ಷ್ಮಿಪುರ ಪ್ರಾಥಮಿಕ ಆರೋಗ್ಯಕೇಂದ್ರದ ವ್ಯಾಪ್ತಿಗೆ ಒಳಪಟ್ಟಿದ್ದ್ದು ಇಲ್ಲಿನ ವೈದ್ಯೆ ವರಲಕ್ಷ್ಮಿಯವರು ಹೇಳುವಂತೆ ಕೊರೋನಾ ತಡೆಯುವ ವಿಚಾರದಲ್ಲಿ ಸಿಬ್ಬಂದಿಯೊಂದಿಗೆ ಟೀಂ ವರ್ಕ್ ಮಾಡಿರುತ್ತೇವೆ ಸೋಂಕಿನ ತೀವ್ರತೆ ಇಲ್ಲದಿರುವಂತವರಿಗೆ ಅವರ ಮನೆಯ ಅನಕೂಲಗಳನ್ನು ಪರಶೀಲನೆ…
ಹೆಚ್ಚುತ್ತಿರುವ ಕರೋನಾ ಪ್ರಕರಣಗಳು.ಈಗಾಗಲೇ 15 ಉದ್ಯೋಗಿಗಳು ಸಾವನ್ನಪ್ಪಿದ್ದಾರಂತೆ.ಭಯಾಂದೋಳನದಲ್ಲಿ TTD ಸಿಬ್ಬಂದಿ. ನ್ಯೂಜ್ ಡೆಸ್ಕ್:- ಕರೋನಾ ಎರಡನೆ ಅಲೆಯ ಕದಂಬ ಬಾಹುವನ್ನು ತಿರುಮಲ ತಿರುಪತಿ ದೇವಾಲಯದ ನೌಕರರ ಮೇಲೂ ಬಿಸಿದ ಪರಿಣಾಮ ಸೋಂಕಿತರ ಸಂಖ್ಯೆ ಹೆಚ್ಚುತ್ತಿವೆ. ಈಗಾಗಲೇ 15 ಜನರು ಸಾವನ್ನಪ್ಪಿರುವುದರಿಂದ ನೌಕರರು ಭಯಭೀತರಾಗಿದ್ದಾರಂತೆ. ಕಳೆದ ವರ್ಷದ ಪರಿಸ್ಥಿತಿಕಳೆದ ವರ್ಷ ಮಾರ್ಚ್2020 ರಲ್ಲಿ, ಕರೋನಾ ಪ್ರಕರಣಗಳು ಹೆಚ್ಚಾಗಿದ್ದಾಗ, ಟಿಟಿಡಿ ಜನವರಿ 21 ರಿಂದ ಶ್ರೀವಾರಿ ದರ್ಶನವನ್ನು ರದ್ದುಗೊಳಿಸಿತು ಆದಾಗ್ಯೂ, 800 ಕ್ಕೂ ಹೆಚ್ಚು ಉದ್ಯೋಗಿಗಳು ಸೋಂಕಿಗೆ ಒಳಗಾಗಿದ್ದರು. ಅದರಲ್ಲಿ ಒರ್ವ ಅರ್ಚಕ ಹಾಗು ಆರು ಉದ್ಯೋಗಿಗಳು ಮೃತಪಟ್ಟಿದ್ದರು ಎಂದು ವರದಿಯಾಗಿತ್ತು. ಸರ್ಕಾರಗಳು ಲಾಕ್ಡೌನ್ ಸಡಿಲ ಗೋಳಿಸಿದ ನಂತರ 2020 ಜೂನ್ 8 ರಿಂದ 6,000 ಜನರೊಂದಿಗೆ ಶ್ರೀವಾರಿ ದರ್ಶನವನ್ನು ಪ್ರಾರಂಭಿಸಲಾಗಿತ್ತು ಅಂದಿನಿಂದ ಕ್ಷೀಣಿಸುತ್ತಿದ್ದ ಕೋವಿಡ್ ಪ್ರಕರಣಗಳು ಅನುಗುಣವಾಗಿ ಭಕ್ತರ ದರ್ಶನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಪ್ರಸ್ತುತ ಸ್ಥಿತಿ ಈ ವರ್ಷದ ಮಾರ್ಚ್ ಮೊದಲ ವಾರದಲ್ಲಿ 300 ರೂಪಾಯಿಗಳ 25 ಸಾವಿರ ಟಿಕೆಟ್ ಗಳನ್ನು ಬಿಡುಗಡೆ…
ಕೋಲಾರದಲ್ಲಿ ಇಂದು ಕೊರೋನಾ ರುದ್ರ ನರ್ತನಕೊರೊನ ರೂಲ್ಸ್ ಬ್ರೇಕ್ ಮಾಡಿದವರಿಗೆ ಲಾಠಿ ರುಚಿಬೇಕಾರಿಗಳಿಗೆ ಲಾಠಿ ಬೀಸಿದ ಪುರಸಭೆ ಸಿಬ್ಬಂದಿಲಾಕ್ಡೌನ್ ನಲ್ಲೂ ನಮಾಜಿಗೆ ಬಂದ ಶಿಕ್ಷಣ ಇಲಾಖೆ ಜೀಪ್ ಡ್ರೈವರ್.ಜೀಪ್ ವಶಕ್ಕೆ ಪಡೆದ ಪೊಲೀಸರು.ಆಂಧ್ರದ ಚಿತ್ತರೂ ಜಿಲ್ಲೆಯಲ್ಲೂ ಲಾಕ್ಡೌನ್. ಶ್ರೀನಿವಾಸಪುರ:ಲಾಕ್ಡೌನ್ ಮೊದಲನೆ ದಿನ ಶ್ರೀನಿವಾಸಪುರ ತಾಲೂಕಾದ್ಯಂತ ಪೂರ್ತಿಯಾಗಿ ಯಶಸ್ವಿಯಾಗಿದ್ದು ಬೆಳೆಗ್ಗೆ 10 ಗಂಟೆಗೆಲ್ಲ ಅವಶ್ಯ ವಸ್ತುಗಳ ವ್ಯಾಪಾರ ವ್ಯವಹಾರ ಸಂಪೂರ್ಣವಾಗಿ ಬಂದ್ ಆಗಿ ರಸ್ತೆಗೆಳೆಲ್ಲ ನಿರ್ಮಾನುಷ್ಯವಾಯಿತು.ನಂತರ ಬೇಕಾ ಬಿಟ್ಟಿ ಒಡಾಡುತ್ತಿದ್ದವರಿಗೆ ಒಂದಡೆ ಪೋಲಿಸರು ಲಾಠಿ ರುಚಿ ತೊರಿಸಿ ಬುದ್ದಿ ಹೇಳುತ್ತಿದ್ದರೆ ಮತ್ತೊಂದಡೆ ಪುರಸಭೆ ಸಿಬ್ಬಂದಿ ಲಾಠಿ ಹಿಡಿದು ಬಾರಿಸುತ್ತಿದ್ದರು.ಕಳ್ಳತನವಾಗಿ ಕದ್ದುಮುಚ್ಚಿ ಟಿ ಕಾಫಿ ಮಾರುತ್ತಿದ್ದವರನ್ನು ಬಿಡದೆ ಪುರಸಭೆಯವರು ಮುಚ್ಚಿಸಿದರು.ಸಂಜೆ ಚಿಂತಾಮಣಿ ವೃತ್ತದಲ್ಲಿ ಅನಾವಶ್ಯಕವಾಗಿ ಒಡದಾಡಿದವರಿಗೆ ಪೋಲಿಸರು ಲಾಠಿ ರುಚಿ ತೋರಿಸಿದ್ದಾರೆ ಈ ಸಂದರ್ಭದಲ್ಲಿ ಅತಿವೇಗ ಹಾಗು ಅಜಾಗುರುಕತೆಯಿಂದ ಚಾಲನೆ ಮಾಡಿಕೊಂಡು ಬಂದ ಬಿ.ಇ.ಒ ಜಿಪ್ ಅನ್ನು ನಿಲ್ಲಿಸಿದಾಗ ಜೀಪಿನಲ್ಲಿ ಚಾಲಕ ಬಿಟ್ಟರೆ ಯಾರು ಇರಲಿಲ್ಲ ಅತಿವೇಗದಿಂದ ಬಂದ ಚಾಲಕನನ್ನು ಪೋಲಿಸರು ಪ್ರಶ್ನಿಸಿದಾಗ ಚಾಲಕ…
ಶ್ರೀನಿವಾಸಪುರ:-ತಾಲೂಕಿನ ಕಸಬಾ ಹೋಬಳಿ ಚಲ್ದಿಗಾನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಮೊಗಿಲಹಳ್ಳಿ ಗ್ರಾಮದಲ್ಲಿ ಕೊರೋನಾ ಸೋಂಕು ಹರಡುತಿದ್ದು ಗ್ರಾಮದಲ್ಲಿ ಸುಮಾರು 16 ಜನ ಸೋಂಕಿಗೆ ಒಳಗಾಗಿದ್ದಾರೆ. ಇಂದು ಗ್ರಾಮದ ಒರ್ವ ವ್ಯಕ್ತಿ ಉಸಿರಾಟದ ತೊಂದರೆ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿಸ್ಥೆಗೆ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯಿದಿದ್ದ್ರು ಆತ ಇಂದು ಮುಂಜಾನೆ ಮೃತ ಪಟ್ಟ ಹಿನ್ನಲೆಯಲ್ಲಿ ಗ್ರಾಮದ ಜನರ ಆತಂಕ ಹೆಚ್ಚಾಗಿದೆ.ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಗ್ರಾಮದಲ್ಲಿ, ಚಲ್ದಿಗಾನಹಳ್ಳಿ ಪಂಚಾಯಿತಿ ವತಿಯಿಂದ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಗ್ರಾಮಕ್ಕೆ ಹೊರಗಿನಿಂದ ಯಾರು ಬರಬಾರದು ಎಂದು ಗ್ರಾಮವನ್ನು ಜನ ನೀಷೆದಿತ ಪ್ರದೇಶ(ಕಂಟೈನ್ಮೆಂಟ್) ಪ್ರದೇಶ ಎಂದು ಘೋಷಿಸಿರುವುದಾಗಿ ಪಂಚಾಯಿತಿ ಅಧಿಕಾರಿ ಶಂಕರಪ್ಪ ತಿಳಿಸಿರುತ್ತಾರೆ. ಗ್ರಾಮದಲ್ಲಿ ವ್ಯಾಪಕವಾಗಿ ಸೋಂಕು ಹರಡುತ್ತಿಡರುವ ಹಿನ್ನಲೆಯಲ್ಲಿ ಗ್ರಾಮಕ್ಕೆ ನೋಡಲ್ ಅಧಿಕಾರಿಗಳಾದ ಉಪವಿಭಾಗಾಧಿಕಾರಿ ಸೋಮಶೇಖರ್,ತಹಶೀಲ್ದಾರ್ ಶ್ರೀನಿವಾಸ್,ತಾಲೂಕು ಪಂಚಾಯಿತಿ ಇಒ ಆನಂದ್, ತಾಲೂಕು ವೈದ್ಯಾಧಿಕಾರಿ ಭೇಟಿ ನೀಡಿ ಪರಶೀಲನೆ ನಡೆಸಿರುತ್ತಾರೆ. ನಂಬಿಹಳ್ಳಿ ಪ್ರಾಥಾಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡುವ ಮೊಗಿಲಹಳ್ಳಿ ಗ್ರಾಮದಲ್ಲಿ ಸೋಂಕು ಹರಡಲು ಕಾರಣವಾಗಿದ್ದು ಗ್ರಾಮದ ಯುವಕನೊಬ್ಬ ಹಾಸನದಲ್ಲಿದ್ದು…
ಶ್ರೀನಿವಾಸಪುರ:-ಕೊರೋನಾ ಸೋಂಕು ಹರಡುವುದನ್ನು ತಡೆಯಲು ಸರ್ಕಾರ ಜಾರಿಮಾಡಿರುವ ಲಾಕ್ ಡೌನ್ ಗೆ ಶ್ರೀನಿವಾಸಪುರ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಜನತೆ ಉತ್ತಮವಾಗಿ ಸ್ಪಂದಿಸಿದರು.ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ತಾಲೂಕಾದ್ಯಂತ ಜನಸಂಚಾರ ಮತ್ತು ವಾಹನ ಸಂಚಾರ ಕಡಿಮೆಯಾಗಿತ್ತು. ಬೆಳಗ್ಗೆ ಹತ್ತು ಗಂಟೆಗೆ ಕರ್ಫ್ಯೂ ಕಟ್ಟು ನಿಟ್ಟಾಗಿ ಜಾರಿಗೆ ಬರುವ ಹಿನ್ನೆಲೆಯಲ್ಲಿ ದಿನಸಿ ಹಣ್ಣು ತರಕಾರಿ ವ್ಯಾಪಾರಿಗಳು ಸಣ್ಣ ಪುಟ್ಟ ಹೋಟೆಲ್ ಗಳು ತೆರದಿದ್ದವು.ಗ್ರಾಮೀಣ ಜನತೆ ತಮ್ಮ ಅವಶ್ಯ ವಸ್ತುಗಳನ್ನು ಕೊಳ್ಳಲು ಬೆಳಗ್ಗೆ ಪಟ್ಟಣದ ಅಂಗಡಿಗಳಿಗೆ ಬಂದು ವಹಿವಾಟು ಮಾಡಿಕೊಂಡು ಹೋದ ನಂತರ ಜನ ಸಂಚಾರ ಇಲ್ಲದೇ ರಸ್ತೆಗಳು ಬಿಕೋ ಎನ್ನುತಿತ್ತು. ಗ್ರಾಹಕರಿಂದ ಒಂದಷ್ಟು ವ್ಯಾಪಾರ ನಿರೀಕ್ಷಿಸಿದ್ದ ಮಾರಾಟಗಾರರು ನಿರಾಸೆ ಅನುಭವಿಸಿದರು. ಸೊಪ್ಪು ತರಕಾರಿ ಹಣ್ಣು ಹಂಪಲು ಇತ್ಯಾದಿ ವಸ್ತುಗಳು ಮಾರಾಟವಾಗದೇ ಉಳಿದವು.ಹತ್ತು ಗಂಟೆ ಹೊತ್ತಿಗೆ ಪೊಲೀಸರು ಮತ್ತು ಪುರಸಭೆ ಸಿಬ್ಬಂದಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಜನತೆಯನ್ನು ಮನೆಗಳಿಗೆ ಹೋಗುವಂತೆ ಸೂಚಿಸಿದರು. ಪೋಲಿಸ್ ಬ್ಯಾರಿಕೇಡ್ ರಸ್ತೆ ಬಂದ್ಹತ್ತು ಗಂಟೆಯ ನಂತರ ಮುಳಬಾಗಿಲು ವೃತ್ತ ಹಾಗು ಕಾಂಗ್ರೆಸ್ ಕಚೇರಿ…
ಬಯಲು ಸೀಮೆಗೆ ವರವಾಗಬೇಕಿದ್ದ ಮಳೆ ಮಾರಕವಾಗಿದೆಮಳೆಯ ಅಬ್ಬರಕ್ಕೆ ತೋಟಗಾರಿಕೆ ಬೆಳೆಗಳು ನೆಲಸಮಬೆಟ್ಟದ ಕಲ್ಲಿನ ಗಾತ್ರದ ಆಲಿಕಲ್ಲು ನೆಲಕಚ್ಚಿದ ಪಾಲಿಹೌಸುಗಳುಬಾರಿ ಗಾತ್ರದ ಅಲಿಕಲ್ಲಿ ಮಾನವನ ಮೇಲೆ ಬಿದಿದ್ದರೆ? ಚಿಕ್ಕಬಳ್ಳಾಪುರ:-ಬಯಲುಸೀಮೆ ಜಿಲ್ಲೆಯಾದ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ ಗುರುವಾರ ಮಧ್ಯಾಹ್ನ ಬಿದ್ದ ಮಳೆಗೆ ತೋಟಗಾರಿಕೆ ರೈತರ ಕೃಷಿ ಸಂಪೂರ್ಣ ನಾಶವಾಗಿದೆ ಕೋಟ್ಯಂತರ ಮೌಲ್ಯದ ಬೆಳೆಗಳು ನೆಲಕಚ್ಚಿದೆ ಬೆಟ್ಟದ ಕಲ್ಲಿನ ಗಾತ್ರದ ಆಲಿಕಲ್ಲು ಬಿದ್ದು ಪಾಲಿಹೌಸ್, ದಾಳಿಂಬೆ, ದ್ರಾಕ್ಷಿ, ನರ್ಸರಿ ತೋಟಗಳು ನೆಲಸಮವಾಗಿವೆ. ಇದರಿಂದ ಈ ಭಾಗದ ರೈತರು ಕಂಗಾಲಾಗಿದ್ದಾರೆ.ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿ, ಗೌಡಗೆರೆ ಸುತ್ತಮುತ್ತ ಗ್ರಾಮ ಸುತ್ತಮುತ್ತ ಗುಡುಗು ಸಮೇತ ಸುರಿದ ಮಳೆ ಮತ್ತು ಬೆಟ್ಟದ ಕಲ್ಲುಗಳ ಗಾತ್ರದ ಆಲಿ ಕಲ್ಲು ಬಿದ್ದಿದ್ದು, ಪ್ರತಿ ಕಲ್ಲು ಅಂದಾಜು 30 ರಿಂದ 40 ಕೆ.ಜಿ.ಯಷ್ಟು ತೂಕದ್ದಾಗಿವೆ.ದೊಡ್ಡ ಗಾತ್ರದ ಆಲಿಕಲ್ಲು ನೋಡಲು ಜನರು ತಂಡೋಪತಂಡವಾಗಿ ಬರುತ್ತಿದ್ದಾರಂತೆ. ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ವ್ಯಾಪ್ತಿಯಲ್ಲಿ ರೈತರು ಲಕ್ಷಾಂತರ ಖರ್ಚು ಮಾಡಿ ಶುರುಮಾಡಿದ್ದ ದಾಳಿಂಬೆ ಕೃಷಿ ಮಣ್ಣುಪಾಲಾಗಿದೆ ಎನ್ನುತ್ತಾರೆ ಇಲ್ಲಿನ…
ಶ್ರೀನಿವಾಸಪುರ:-ತಾಲೂನಲ್ಲಿ ಕೊರೋನಾ ಅಟ್ಟಹಾಸ ಮೆರದಿದ್ದು ಗುರುವಾರ ಒಂದೇ ದಿನ 90 ಕೇಸುಗಳು ದಾಖಲಾಗಿದೆ ನೆಲವಂಕಿ ಹೋಬಳಿ ಕೆ.ಗೊಲ್ಲಪಲ್ಲಿ ಗ್ರಾಮದಲ್ಲಿ ಸುಮಾರು 08 ಪಾಸಿಟಿವ್ ಕೇಸುಗಳು ಬಂದಿದೆ ಎನ್್ನಲಾಗಿದೆ . ಅಡ್ಡಗಲ್. ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಗ್ರಾಮದಲ್ಲಿ ಎಲ್ಲರನ್ನು ಪರಿಕ್ಷೇಗೆ ಒಳಪಡಿಸಿದ್ದು ಸ್ವ್ಯಾಬ್ ಸಂಗ್ರಹ ಮಾಡಿರುತ್ತಾರೆ ಸೋಂಕಿತರಿಗೆ ಹೋಂ ಕ್ವಾರಂಟೈನ್ ಮಾಡಿಸಿದ್ದು, ಪಂಚಾಯಿತಿ ವತಿಯಿಂದ ಸ್ಯಾನಿಟರೈಜ್ ಮಾಡಿಸಿದ್ದು ಹೊರಗಿನವರು ಊರಿಗೆ ಬಾರದಂತೆ ನಿರ್ಭಂದ ವಿಧಿಸಲಾಗಿ ಕಂಟೈನ್ಮೈಂಟ್ ಪ್ರದೇಶ ಎಂದು ಘೋಷಿಸಿ ಗ್ರಾಮದಲ್ಲಿ ಅವಶ್ಯಕತೆ ಇರುವ ಮುಂಜಾಗ್ರತೆ ತಗೆದುಕೊಂಡಿರುವುದಾಗಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಗೌಸ್ ತಿಳಿಸಿರುತ್ತಾರೆ. ಸಾಂದರ್ಭಿಕ ಚಿತ್ರ ಬೆಂಗಳೂರು,ಕೋಲಾರ ಎ.ಪಿ.ಎಂ.ಸಿ ,ಆಂಧ್ರದ ಮದನಪಲ್ಲಿ,ಪುಂಗನೂರು,ಸಂಪರ್ಕದಿಂದ ವಿಶೇಷವಾಗಿ ಹಳ್ಳಿ ಪ್ರದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ ಎನ್ನುತ್ತಾರೆ ಇಲ್ಲಿನ ಜನತೆ.ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ 40 ಹಾಸಿಗೆಗಳ ಕೋವಿಡ್ ಕೇಂದ್ರ ಇದ್ದು ಅಲ್ಲಿ 40 ಸಿಂಟಮ್ಯಾಟಿಕ್ ಪಾಸಿಟಿವ್ ರೋಗಿಗಳೇ ಇದ್ದು ಅಲ್ಲಿಗೆ ಬಹುತೇಕ ಬರ್ತಿ ಆದ ಹಾಗೆ.ಕೋಲಾರ ಜಿಲ್ಲೆಯಲ್ಲಿಂದು ಅರ್ದ ಸಾವಿರ ಪಾಸಿಟಿವ್ ಕೇಸುಗಳು ದಾಖಲಾಗಿದ್ದು…
ಪಟ್ಟಣದಲ್ಲಿ ರೌಂಡ್ಸ್ ಮಾಡಿದ ಡಿಸಿವ್ಯಾಪರಸ್ಥ ಮಾಸ್ಕ್ ಹಾಕಿಕೊಂಡು ವ್ಯಾಪಾರ ನಡಸಬೇಕುನಿಯಮ ಉಲ್ಲಂಘಿಸಿದರ ವಿರುದ್ದ ಫೈನ್ಕೋವಿಡ್ ಕೇಂದ್ರದಲ್ಲಿ ವಿಕೃತಿಯಾಗಿ ವರ್ತಿಸಿದರೆ ಕೇಸ್ ಶ್ರೀನಿವಾಸಪುರ:- ಕೊರೋನಾ ನಿರ್ಲಕ್ಷ್ಯ ಮಾಡದೆ ನಿಯಮಾವಳಿಗಳನ್ನು ಪಾಲಿಸಿ ಮಾಸ್ಕ ದರಿಸಿ ಅರೋಗ್ಯದ ಬಗ್ಗೆ ಗಮನ ನೀಡಿ ಎಂದು ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಹೇಳಿದರು ಅವರು ಸಿಟಿ ರೌಂಡ್ಸ್ ಮಾಡಿ ಪಟ್ಟಣದ ಕೆಲವು ಪ್ರದೇಶಗಳಲ್ಲಿ ಸಂಚರಿಸಿ ಜನರಿಗೆ ತಿಳುವಳಿಕೆ ಮೂಡಿಸಿದ ಅವರು ನಿಯಮಾವಳಿಗಳನ್ನು ಉಲ್ಲಂಘಿಸಿ ನಿರ್ಲಕ್ಷ್ಯ ಮಾಡುವವರ ವಿರುದ್ದ ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದರು ನಂತರ ತಾಲೂಕು ಆಡಳಿತಕ್ಕೆ ಸೂಚಿಸಿದ ಅವರು. ಮಾಸ್ಕ್ ದರಿಸದೆ ಒಡಾಡುವಂತವರಿಗೆ ದಂಡ ವಿದಿಸಿ ಅಗತ್ಯ ಬಿದ್ದರೆ ಕ್ರಮಕೈಗೊಳ್ಳಿ ಎಂದರು ಪಟ್ಟಣದ ಬಸ್ ನಿಲ್ದಾಣ,ರಾಮಕೃಷ್ಣಾರಸ್ತೆ, ಪೊಸ್ಟ್ ಆಫಿಸ್ ರಸ್ತೆ ಇಂದಿರಾಭನವನ್ ವೃತ್ತ ಮುಂತಾದ ಕಡೆ ಸಂಚರಿಸಿದ ಜಿಲ್ಲಾಧಿಕಾರಿ ವ್ಯಾಪಾರಸ್ಥರು ಮೊದಲು ಮಾಸ್ಕ್ ದರಿಸಬೇಕು ನಂತರ ವ್ಯಾಪಾರ ಮಾಡಬೇಕು ವ್ಯಾಪರಸ್ಥರು ಕೋವಿಡ್ ನಿಯಮಾವಳಿ ಉಲ್ಲಂಘಿಸಿದರೆ ಅಂತಹವರಿಗೆ ದಂಡ ವಿಧಿಸಲಾಗುತ್ತದೆ ಮತ್ತು ಕೆಸ್ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ…