Author: admin

ದೇಶದಲ್ಲಿ ಸೋಂಕಿತರ ಸಾವು 1501ರಾಜ್ಯದಲ್ಲಿ ಸೋಂಕಿತರ ಸಾವು 81ಬೆಂಗಳೂರಲ್ಲಿ ಸೋಂಕಿತರ ಸಾವು 60ಕೋವಿಡ್ ಆಸ್ಪತ್ರೆಗಳಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವರು 620ಕೋಲಾರ ಜಿಲ್ಲೆಯಲ್ಲಿ 174 ಪಾಸಿಟಿವ್ ಕೇಸ್ ನ್ಯೂಜ್ ಡೆಸ್ಕ್:-ದೇಶದಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ಇತಿಹಾಸದ ದಾಖಲೆ ಬರೆದಿದೆ.ಒಂದೇ ದಿನ ಬರೊಬ್ಬರಿ 2.61ಲಕ್ಷ ಮಂದಿಗೆ ಸೋಂಕು ಪ್ರಕರಣಗಳು ದಾಖಲಾಗಿದೆ. ಇದರ ಜೊತೆಗೆ 1,501 ಮಂದಿ ಸೋಂಕಿತರು ಸಾವನ್ನಪ್ಪಿರುತ್ತಾರೆ.ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 2,61,500 ಸೋಂಕು ಪ್ರಕರಣಗಳು ವರದಿಯಾಗಿದ್ದು, ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,47,88,109ಕ್ಕೆ ಏರಿಕೆಯಾಗಿದೆ. ನಿನ್ನೆ 1,501 ಸೋಂಕಿತರು ಸಾವನ್ನಪ್ಪಿದ್ದು ಇದುವರಿಗೂ ಕೋವಿಡ್ ಸೋಂಕಿಗೆ ಬಲಿಯಾದವರ ಸಂಖ್ಯೆ 1,77,150ಕ್ಕೆ ಏರಿಕೆಯಾಗಿದಿಯಂತೆಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 1,38,423 ಮಂದಿ ಸೋಂಕಿತರು ಗುಣಮುಖರಾಗಿದ್ದು, ದೇಶದಲ್ಲಿ ಒಟ್ಟಾರೆ ಗುಣಮುಖರ ಸಂಖ್ಯೆ 1,28,09,643ಕ್ಕೆ ಏರಿಕೆಯಾಗಿದ್ದು ಪ್ರಸ್ತುತ ದೇಶದಲ್ಲಿ 18,01,316 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.ರಾಜ್ಯದಲ್ಲೂ ಕೊರೋನಾ ಅಬ್ಬರ ಮುಂದುವರೆದಿದ್ದು, ಭಾನುವಾರ…

Read More

SBI ಉದ್ಯೋಗಿಗೆ ಕೊರೋನಾ ಪಾಸಿಟಿವ್ಉಳಿದವರಿಗೆ ಕೊರೋನಾ ಪರಿಕ್ಷೆ ಶ್ರೀನಿವಾಸಪುರ:- ಭಾರತೀಯ ಸ್ಟೆಟ್ ಬ್ಯಾಂಕ್ ಆಪ್ ಇಂಡಿಯಾSBI ಪಟ್ಟಣದ ಶಾಖೆಯಲ್ಲಿ ಉದ್ಯೋಗಿಯೊಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಈ ಹಿನ್ನಲೆಯಲ್ಲಿ ಇಂದು ಬ್ಯಾಂಕ್ ಬಂದ್ ಮಾಡಲಾಗಿತ್ತು ನಂತರ ಉಳಿದ ಉದ್ಯೋಗಿಗಳು ಮತ್ತು ಅಧಿಕಾರಿಗಳು ಕೊರೋನಾ ಪರಿಕ್ಷೆ ಮಾಡಿಸಿಕೊಂಡಿರುತ್ತಾರೆ ಇದರಿಂದಾಗಿ ಇಂದು ಬ್ಯಾಂಕ್ ವಹಿವಾಟು ನಡೆಸದೆ ಬಂದ್ ಮಾಡಲಾಗಿತ್ತು. ಶನಿವಾರ ಕೋಲಾರದ ಕೊರೋನಾ ಪರಿಸ್ಥಿತಿ ಹೀಗಿದೆ ಜಿಲ್ಲೆಯಾದ್ಯಂತ ಒಟ್ಟು 129 ಪಾಸಿಟಿವ್ ಕೇಸುಗಳು ದಾಖಲಾಗಿದ್ದರೆ ಕೋಲಾರದಲ್ಲಿ 63,ಮಾಲೂರಿನಲ್ಲಿ 10,ಬಂಗಾರಪೇಟೆ 12,ಕೆ.ಜಿ.ಎಫ್.13,ಮುಳಬಾಗಿಲು14 ಶ್ರೀನಿವಾಸಪುರದಲ್ಲಿ 17 ಪಾಸಿಟಿವ್ ಬಂದಿರುತ್ತದೆ.ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಒಟ್ಟು 176 ಕೇಸುಗಳಿದ್ದು ತಾಲೂಕುವಾರು ಚಿಕ್ಕಬಳ್ಳಾಪುರ 87,ಚಿಂತಾಮಣಿ46,ಬಾಗೇಪಲ್ಲಿ06,ಗೌರಿಬಿದನೂರು13,ಗುಡಿಬಂಡೆ05,ಶಿಡ್ಲಘಟ್ಟ20 ಕೇಸುಗಳು ದಾಖಲಾಗಿದೆ.ಕೊರೋನಾ ಅಂಕಿ ಅಂಶಗಳು ಅಯಾ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಬುಲಿಟಿನ್ ಪ್ರಕಾರ ಪ್ರಕಟಿಸಿರುತ್ತದೆ.

Read More

ನ್ಯೂಜ್ ಡೆಸ್ಕ್:- ನಿಮ್ಮ ಬಳಿ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಇದ್ದರೆ ತಕ್ಷಣ ಎರಡನ್ನೂ ಲಿಂಕ್ ಮಾಡಿ ಇಲ್ಲದಿದ್ದರೆ … ನಿಮ್ಮ ಹಣಕಾಸು ವ್ಯವಹಾರ ಬ್ಯಾಂಕು ಖಾತೆಗಳಿಗೆ ತೊಂದರೆಗಳು ಉಂಟಾಗಬಹುದು. ಸಂಬಂಧಿತ ವ್ಯವಸ್ಥೆ ಹಲವಾರು ದಿನಗಳಿಂದ ಪ್ಯಾನ್ ಕಾರ್ಡಿಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಿ ಎಂದು ಎಚ್ಚರಿಕೆ ನೀಡುತ್ತಿದ್ದರೂ … ಇಲ್ಲಿಯವರೆಗೆ ಪ್ರಕ್ರಿಯೆಯ ಅರ್ಧದಷ್ಟು ಸಹ ಆಗಿಲ್ಲ. ಕೇಂದ್ರೀಯ ಆದಾಯ ತೆರಿಗೆ ಮಂಡಳಿ (ಸಿಬಿಡಿಟಿ) ಪ್ಯಾನ್, ಆಧಾರ್ ಲಿಂಕ್ ಮಾಡಲು ಗಡುವನ್ನು ವಿಸ್ತರಿಸಿದ್ದು . ಈಗ ಬಹುಶಃ ಇದು ಅಂತಿಮ ದಿನಾಂಕವಾಗಿ ಜೂನ್ 30 ವರಿಗೂ ಅವಕಾಶ ನೀಡಿರುತ್ತಾರೆ.ಭವಿಷ್ಯದಲ್ಲಿ ಪ್ಯಾನ್ ಮತ್ತು ಆಧಾರ್ ಎರಡನ್ನು ಲಿಂಕ್ ಮಾಡಲು ವಿಫಲವಾದರೆ ದಂಡಕ್ಕೆ ಕಾರಣವಾಗಬಹುದು.ಅಥಾವ ಪ್ಯಾನ್ ಕಾರ್ಡ್ ಅಮಾನ್ಯವಾಗಬಹುದು! ಎನ್ನಲಾಗುತ್ತಿದೆ.ಆಧಾರ್ ಅನ್ನು ಪ್ಯಾನ್ ಕಾರ್ಡ್‌ನೊಂದಿಗೆ ಜೋಡಿಸಲು(LINK) ಮಾಡದೆ ಹೋದರೆ ಅಂತವರಿಗೆ ದಂಡ ವಿಧಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಬಹುದಾಗಿದೆ ದಂಡದ ಪ್ರಮಾಣ ಒಂದು ಸಾವಿರ ಮೀರಬಾರದು ಎನ್ನಲಾಗುತ್ತಿದೆ. ಆದಾಯ ತೆರಿಗೆ ಕಾಯ್ದೆ 1961 ಅನ್ನು ಈಗಾಗಲೇ…

Read More

ನಾಡ ದೊರೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಎರಡನೆ ಬಾರಿಗೆ ಕೊರೋನಾ ಪಾಸಿಟಿವ್. ಎಂ.ಎಸ್ ರಾಮಯ್ಯ ಆಸ್ಪತ್ರೆ ಯಿಂದ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ನ್ಯೂಜ್ ಡೆಸ್ಕ್: ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಕಳೆದೆರಡು ದಿನಗಳಿಂದ ಜ್ವರ, ಸುಸ್ತಿನಿಂದ ಬಳಲುತ್ತಿದ್ದ ಅವರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಿ ಕೊರೋನಾ ಪರೀಕ್ಷೆಗೆ ಒಳಪಡಿಸಿದಾಗ ಕೊರೋನಾ ಪಾಸಿಟಿವ್ ಬಂದಿದೆ. ಇಂದು ಮಧ್ಯಾಹ್ನ ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ತಪಾಸಣೆಗೆ ಹಾಜರಾಗಿದ್ದರು. ಅಲ್ಲಿ ನಿಗದಿಯಂತೆ ಅವರಿಗೆ ಕೊರೋನಾ ಪರೀಕ್ಷೆಗೆ ಒಳಪಡಿಸಲಾಯಿತು. ಆಗ ಪಾಸಿಟಿವ್ ಬಂದಿದ್ದು ಇದೀಗ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಸಿಎಂ ಯಡಿಯೂರಪ್ಪ ಅವರಿಗೆ ಕೊರೋನಾ ಬರುತ್ತಿರುವುದು ಇದು ಎರಡನೇ ಸಲ. ಕಳೆದ ವರ್ಷ ಕೂಡ ಕೊರೋನಾ ಬಂದು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

Read More

ರಾಜ್ಯದಲ್ಲಿ ಇಂದು ಸುಮಾರು 15 ಸಾವಿರ ಕೊರೋನಾ ಪ್ರಕರಣಗಳು ಪತ್ತೇಯಾಗಿವೆಬೆಂಗಳುರಿನಲ್ಲೇ 10 ಸಾವಿರ ಸೋಂಕಿತರುಕೋಲಾರ ಜಿಲ್ಲೆಯಲ್ಲಿ 104 ಪ್ರಕರಣಗಳುಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 89 ಸೋಂಕಿತರು ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ಪ್ರಕರಣ ದಾಖಲಾಗಿದ್ದು ರಾಜ್ಯದಲ್ಲಿ 14,738 ಪ್ರಕರಣಗಳು ದಾಖಲಾಗಿದ್ದು, ಇದು ಹಿಂದಿನ ದಾಖಲೆಗಳನ್ನು ಮೀರಿಸಿದೆ. ಬೆಂಗಳೂರು:-ಎರಡನೇ ಅಲೆ ಕೊರೋನಾ ಸೋಂಕಿಗೆ ರಾಜ್ಯ ತತ್ತರಿಸಿ ಹೋಗಿದೆ.ದಿನದಿಂದ ದಿನಕ್ಕೇ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ ಇಂದು ಏ 15 ಗುರುವಾರ ದಾಖಲೆ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿದೆ. ಈ ವರ್ಷದಲ್ಲಿ ಇಷ್ಟೊಂದು ಪ್ರಮಾಣ. ಹಿಂದಿನ ದಾಖಲೆಗಳನ್ನು ಮೀರಿಸಿದೆ. ಅಲ್ಲದೇ ಒಂದೇ ದಿನದಲ್ಲಿ 66ಜನರು ಸೋಂಕಿಗೆ ಮೃತಪಟ್ಟಿರುತ್ತಾರೆ ರಾಜಧಾನಿ ಬೆಂಗಳೂರಿನಲ್ಲಿ ನಿಯಂತ್ರಣ ಮೀರಿ ಸೋಂಕು ಹರಡುತ್ತಿದ್ದು ಇಂದು 10.497 ಕೇಸ್ ಪತ್ತೆಯಾಗಿದೆ ಬೆಂಗಳೂರಿನಲ್ಲಿ 30 ಮಂದಿ ಸಾವನ್ನಪ್ಪಿರುತ್ತಾರೆ,ರಾಜ್ಯದಲ್ಲಿ ಇಂದು 3591 ಮಂದಿ ಇಂದು ಗುಣಮುಖರಾಗಿ ಡಿಸ್ವಾರ್ಜ್ ಆದರೆ, ಇನ್ನೂ 555 ಮಂದಿಗೆ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚು ಹಾಸಿಗೆಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚು…

Read More

ಶ್ರೀನಿವಾಸಪುರ: ಅಂಬೇಡ್ಕರ್ ಜಯಂತಿ ಪೂರ್ವಬಾವಿ ಸಭೆಯ ನಿರ್ಣಯದಂತೆ ಅಂಬೇಡ್ಕರ್ ಜಯಂತಿಯಂದು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ತಾಲೂಕು ಅಡಳಿತ ಭೂಮಿ ಪೂಜೆ ನೆರವೇರಿಸಲಿಲ್ಲ ಎಂದು ಆರೋಪಿಸಿ ತಾಲ್ಲೂಕಿನ ವಿವಿಧ ದಲಿತ ಸಂಘಟನೆಗಳ ಮುಖಂಡರು ಕಪ್ಪುಪಟ್ಟಿ ಧರಿಸಿ ತಾಲ್ಲೂಕು ಆಡಳಿತಕ್ಕೆ ದಿಕ್ಕಾರಗಳನ್ನು ಕೂಗಿ ತಹಶೀಲ್ದಾರ್ ಕಚೇರಿ ಮುಂಬಾದಲ್ಲಿ ಪ್ರತಿಭಟನೆ ನಡೆಸಿದರು.ಅಂಬೇಡ್ಕರ್ ರವರ 130ನೇ ಜಯಂತಿ ಆಚರಿಸುವ ಸಂಬದ ತಹಸೀಲ್ದಾರ್ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ತಾಲೂಕಿನ ದಲಿತ ಮುಖಂಡರು ನೀಡಿದ ಸಲಹೆಯಂತೆ ಡಿಗ್ರಿ ಹಾಸ್ಟೆಲ್ ಪಕ್ಕದಲ್ಲಿ ಮೀಸಲಿಟ್ಟಿರುವ ಸ್ಥಳದಲ್ಲಿ ಏಪ್ರಿಲ್ 14 ಅಂಬೇಡ್ಕರ್ ಜಯಂತಿಯಂದು ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಬೇಕೆಂದು ತಿರ್ಮಾನಿಸಲಾಗಿತ್ತು ಇದಕ್ಕೆ ತಹಶೀಲ್ದಾರ್ ಮಾತನ್ನು ನೀಡಿದ್ದರು.ಅದರೆ ಇಂದು ಭವನ ನಿರ್ಮಾಣ ಕಾರ್ಯ ಕುರಿತಾಗಿ ಯಾವುದೆ ಪ್ರಸ್ತಾವನೆ ಇಲ್ಲದೆ ತಹಸೀಲ್ದಾರ್,ಸೇರಿದಂತೆ ತಾಲೂಕು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ತಾಲ್ಲೂಕು ದಲಿತ ಸಂಘಟನೆಗಳ ಮುಖಂಡರು ತಾಲ್ಲೂಕು ಆಡಳಿತಕ್ಕೆ ದಿಕ್ಕಾರಗಳನ್ನು ಕೂಗಿ ಕಪ್ಪುಬಟ್ಟೆ ಪ್ರದರ್ಶಿಸಿ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕು…

Read More

ಶ್ರೀನಿವಾಸಪುರ: ಅಂಬೇಡ್ಕರ್ ಪುತ್ತಳಿಗಳಿಗೆ ಮಾಲಾರ್ಪಣೆ ಮಾಡಿದರೆ ಸಾಲದು ಅವರ ಆಶಯಗಳಂತೆ ಸಮಾಜದಲ್ಲಿ ನಮ್ಮ ನಡವಳಿಕೆಗಳು ಇರಬೇಕು ಹಾಗು ಇಂದಿನ ಯುವ ಪೀಳಿಗೆ ಆಶಯಗಳನ್ನು ತಿಳಿಸುವಂತ ಪ್ರಯತ್ನ ಆಗಬೇಕಿದೆ ಎಂದು ಶಾಸಕ ರಮೇಶ್ ಕುಮಾರ್ ಹೇಳಿದರು ಅವರು, ತಾಲ್ಲೂಕು ಆಡಳಿತ ಆಯೋಜಿಸಿದ್ದ ಡಾ. ಅಂಬೇಡ್ಕರ್ ರವರ 130ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಮಹಾನ್ ವ್ಯಕ್ತಿಗಳ ವಿಚಾರ ದಾರೆಗಳನ್ನು ತಿಳಿದುಕೊಳ್ಳಬೇಕು, ಅವರ ಆಶಯಗಳಂತೆ ನಮ್ಮ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು, ಅಂಬೇಡ್ಕರ್ ಯಾರ ಬಳಿ ಕೈ ಚಾಚದವರಲ್ಲ ಇದಕ್ಕೆ ಉದಾರಣೆಯಾಗಿ ಅವರ ಪುತ್ರ ವಿಧಿವಶರಾದಾಗ, ಅಂತ್ಯಕ್ರಿಯೆ ಸಂದರ್ಭದಲ್ಲಿ ಅವರ ಅರ್ಥಿಕ ಸ್ಥಿತಿ ಶೋಚನೀಯವಾಗಿದ್ದರೂ ಅವರು ಸ್ವಾಭಿಮಾನ ಬಿಡದೆ ಕರ್ಮಗಳನ್ನು ತೀರಿಸಿದವರು. ಸಾಮಾಜಿಕ ಅಸಮಾನತೆಯ ವಿರುದ್ದ ಹೋರಾಡಿದ ಅಂಬೇಡ್ಕರ್, ಸಂವಿಧಾನದ ಮೂಲಕ ಪ್ರಜಾಪ್ರಭುತ್ವಕ್ಕೆ ರೂಪ ನೀಡಿದವರು ಅವರು ಹಚ್ಚಿದ ದೀಪದ ಬೆಳಕು ಇವತ್ತು ನಮಗೆಲ್ಲ ದಾರಿದೀಪವಾಗಿದೆ. ಎಂದರು.ಕಾರ್ಯಕ್ರಮಕ್ಕೂ ಮುಂಚಿತವಾಗಿ ತಾಲೂಕು ಕಚೇರಿ ಮುಂಬಾಗದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಶಾಸಕ ಮಾಲಾರ್ಪಣೆ ಮಾಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ…

Read More

ಶ್ರೀನಿವಾಸಪುರ:-ಹೊಸ ಸಂವತ್ಸರ ಯುಗಾದಿಯಂದು ಪ್ರತಿವರ್ಷ ಊರಿನ ದೇವರುಗಳ ಪಲ್ಲಕ್ಕಿ ಉತ್ಸವ ನಡೆಸುವುದು ಇಲ್ಲಿ ವಾಡಿಕೆಯಾಗಿ ನಡೆದುಕೊಂಡು ಬರುತ್ತಿದೆ.ಅದರಂತೆ ಈ ಯುಗಾದಿಯಂದು ರಾತ್ರಿ ಹತ್ತು ಪಲ್ಲಕ್ಕಿಗಳಲ್ಲಿ ಊರಿನ ದೇವರುಗಳ ಮೆರವಣಿಯನ್ನು ವಿಜೃಂಬಣೆಯಿಂದ ನಡೆಸಲಾಯಿತು.ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇವಾಲಯದ ಬಳಿಯಿಂದ ಶ್ರೀ ಚೌಡೇಶ್ವರಮ್ಮ, ಶ್ರೀ ಪ್ಲೇಗಮ್ಮ-ಗಂಗಮ್ಮ,ಶ್ರೀನಡೀರಮ್ಮ,ಶ್ರೀನಲ್ಲಗಂಗಮ್ಮ,ಶ್ರೀಯಲ್ಲಮ್ಮ,ಶ್ರೀ ವಾಸವಿ ಕನ್ಯಾಕಾಪರಮೇಶ್ವರಿ, ಶ್ರೀ ವರದ ಬಾಲಾಂಜನೇಯ,ಶ್ರೀ ಉಗ್ರ ನರಸಿಂಹ,ಶ್ರೀ ತಿರುಮಲರಾಯ,ಶ್ರೀ ಅಷ್ಟ ಮೂರ್ತಮ್ಮ ದೇವರುಗಳನ್ನು ದೀಪಾಲಂಕೃತ ಪಲ್ಲಕ್ಕಿಗಳಲ್ಲಿ ಸ್ಥಾಪಿಸಿ ರಾತ್ರಿ ಎಂಟೆಗೆ ಪ್ರಾರಂಭಿಸಿ ಈಡಿ ರಾತ್ರಿ ಪಲ್ಲಕ್ಕಿ ಉತ್ಸವಗಳು ಊರಿನ ಪ್ರಮುಖ ರಸ್ತೆಗಳ ಮೂಲಕ ಶ್ರೀ ವರದ ಬಾಲಾಂಜನೇಯ ಕ್ಷೇತ್ರಕ್ಕೆ ಸೇರಿಕೊಂಡಿತು. ದೇವರಿಗೆ ಹಣ್ಣುಕಾಯಿ ನೀಡುತ್ತಿರುವ ಭಕ್ತರು ಊರಿನ ದೇವರುಗಳ ಪಲ್ಲಕ್ಕಿ ಉತ್ಸವ ನಡೆಸಿದರೆ ಊರಿಗೆ ಕ್ಷೇಮವಾಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ ಹಾಗೆ ದೇವರ ಪಲ್ಲಕ್ಕಿ ಮನೆ ಮುಂದೆ ಬಂದಾಗ ಹಣ್ಣು ಕಾಯಿ ನೀಡುವುದು ವಾಡಿಕೆಯಾಗಿ ನಡೆದುಕೊಂಡು ಬಂದಿದೆ ಎನ್ನುತ್ತಾರೆ ದೇವರ ಪಲ್ಲಕ್ಕಿ ಉತ್ಸವದ ಆಯೋಜಕರು. ಶ್ರೀ ಚೌಡೇಶ್ವರಮ್ಮ ಪಲ್ಲಕ್ಕಿ

Read More

ಕಣ್ಣೆ ಅದರಿಂದಿ, ಕಣ್ಣು ಹೊಡೆಯಾಕ ಎಂದು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಹಾಗು ಲಂಬಾಣಿ ಭಾಷೆಯ ಹಾಡುಗಳೊಂದಿಗೆ ಮಸ್ಕಿ ಬೈ ಎಲೆಕ್ಷನ್ ಅಖಾಡದಲ್ಲಿ ತೆಲುಗು ಜನಪದ ಗಾಯಕಿ ಸತ್ಯವತಿ ರಾಥೋಡ್@ ಮಂಗ್ಲಿ ತಾಂಡಾಗಳಲ್ಲಿರುವ ಮತದಾರರನ್ನು ತಮ್ಮ ಪುಷ್ಕಳ ನಗುವಿನಿಂದ ಸೆಳೆಯುವ ಯತ್ನ ಮಾಡಿದರು. ನ್ಯೂಜ್ ಡೆಸ್ಕ್:- ಯಡಿಯೂರಪ್ಪ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರತಾಪಗೌಡ ಪಾಟೀಲರ ರಾಜಿನಾಮೆಯಿಂದ ತೆರವಾದ ಮಸ್ಕಿ ವಿಧಾನಸಭೆ ಉಪಚುನಾವಣೆಯು ಇದೇ ಏಪ್ರಿಲ್ 17 ರಂದು ನಡೆಯಲಿದ್ದು ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರನ್ನು ಸೆಳೆಯಲು ನಾನಾ ರಿತಿಯಲ್ಲಿ ಬಿಜೆಪಿ ಪ್ರಚಾರ ಕೈಗೊಂಡಿದೆ ಇದರ ಅಂಗವಾಗಿ ಮತ ಬೇಟೆಗಾಗಿ ಬಿಜೆಪಿ ತೆಲಗಿನ ಜಾನಪದ ಗಾಯಿಕಿ ಲಂಬಾಣಿ ಜನಾಂಗದ ಹಾಡುಗಾರ್ತಿ ಕಣ್ಣೆಅದಿರಿಂದಿ ಹಾಗು ರಾಮುಲೋ ರಾಮುಲ ಹಾಡುಗಳ ಖ್ಯಾತಿಯ ಗಾಯಕಿ ಮಂಗ್ಲಿಯನ್ನು ಕರೆಸಿ ರೋಡ್ ಶೋ ಮಾಡಿಸಿದೆ.ಅಲ್ಪ ಸಮಯದಲ್ಲಿ ಕರ್ನಾಟಕದಲ್ಲಿ ಜನಪ್ರಿಯರಾಗಿರುವ ಸತ್ಯವತಿ ರಾಥೋಡ್@ಮಂಗ್ಲಿ, ಈಗ ಕನ್ನಡಿಗರ ಫೆವರೇಟ್ ಹಾಟ್ ಗಾಯಕಿಯಾಗಿದ್ದಾರೆ. ಸಾಮಾಜಿಕ‌ ಜಾಲತಾಣಗಳಲ್ಲಿ ಅತ್ಯಂತ ಹೆಚ್ಚು ಕನ್ನಡಿಗರು ಮಂಗ್ಲಿಯ ಫಾಲೋವರ್…

Read More

ಕೊರೋನಾ ರುದ್ರತಾಂಡವ ತಪ್ಪಿಸಲು ಕಟ್ಟು ನಿಟ್ಟಿನ ಕ್ರಮ ಅಗತ್ಯ ಬೆಂಗಳೂರು: ಸರ್ಕಾರದ ಸಮಾರಂಬಗಳು, ಜಾತ್ರೆಗಳು, ಮದುವೆ, ಇನ್ನಿತರೆ ಸಮಾರಂಭಗಳಿಗೆ ಸರ್ಕಾರ ಬ್ರೇಕ್ ಹಾಕದೇ ಹೋದರೆ ಮುಂಬರುವ ದಿನಗಳಲ್ಲಿ ಅಪಾಯ ಗ್ಯಾರಂಟಿ ಎಂದು ಆರೋಗ್ಯ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ ಮಂಜುನಾಥ್ ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.ಕೊರೊನಾ ನಿಯಂತ್ರಣ ಸಂಬಂಧ ಸರ್ಕಾರ ಕರೆದ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ಕೊರೊನಾ ಎರಡನೆ ಅಲೆ ಆರಂಭವಾಗಿದೆ.ಈಗಲೇ ಇದಕ್ಕೆ ನಿಯಂತ್ರಣ ಹೇರದೇ ಇದ್ದರೆ ಮುಂದೆ ದೊಡ್ದ ಮಟ್ಟದ ಅಪಾಯ ಇರುವ ಸಾಧ್ಯತೆಯಿದೆ ಎಂದು ಹೇಳಿದರು.ಬೆಂಗಳೂರಿನಲ್ಲಿ ಈಗ ದಿನಕ್ಕೆ 5 ಸಾವಿರ ಪ್ರಕರಣಗಳು ವರದಿಯಾಗುತ್ತಿದೆ. ನಿರ್ಲಕ್ಷ್ಯ ಮುಂದುವರಿದರೇ ಮೇ 15ರ ಹೊತ್ತಿಗೆ ಇದರ ಸಂಖ್ಯೆ ದಿನಕ್ಕೆ 15 ಸಾವಿರಕ್ಕೆ ತಲುಪಬಹುದು. ಜನತೆ ಐಸ್ ಕ್ರೀಂ ಪಾರ್ಲರ್, ಪಾನಿಪೂರಿ ಚಾಟ್ ಫುಡ್ ಮಾಲ್ ಗಳು, ಅಂಗಡಿಗಳಲ್ಲಿ ಗುಂಪು ಸೇರುತ್ತಾರೆ. ಕನಿಷ್ಠ ಗಾಳಿಯಾಡದ ಸ್ಥಳಗಳಲ್ಲಿ ಗುಂಪು ಗುಂಪಾಗಿ ಸೇರುವುದರಿಂದ ಸಾಮಾಜಿಕ ಅಂತರವನ್ನು ಕಾಪಾಡುತ್ತಿಲ್ಲ. ಮದುವೆ,…

Read More