ಹೊಸಸಂವತ್ಸರ ಶ್ರೀ ಪ್ಲವ ನಾಮ ಸಂವತ್ಸರ ಆರಂಭ2021 ರ ಯುಗಾದಿ ಹಬ್ಬ ಆಚರಣೆ ಏಪ್ರಿಲ್ 13 ಮಂಗಳವಾರ ದಂದುಪಾಡ್ಯ ತಿಥಿ ಆರಂಭ: 2021 ರ ಏಪ್ರಿಲ್ 12 ರಂದು ಸೋಮವಾರ ಬೆಳಗ್ಗೆ 8:00 ಗಂಟೆಯಿಂದಪಾಡ್ಯ ತಿಥಿ ಮುಕ್ತಾಯ: 2021 ರ ಏಪ್ರಿಲ್ 13 ರಂದು ಮಂಗಳವಾರ ಬೆಳಗ್ಗೆ 10:16 ರವರೆಗೆ. ಹೊಸ ವರ್ಷದಲ್ಲಿ ಪ್ರಕೃತಿಯಲ್ಲೂ ಬದಲಾವಣೆ ಕಾಣುತ್ತಿವಿ ಹಣ್ಣೆಲೇ ಉದುರಿ ಹೊಸ ಚಿಗುರು ಬರುವಂತ ಕಾಲ. ನ್ಯೂಜ್ ಡೆಸ್ಕ್:- ಈ ವರ್ಷ ಯುಗಾದಿ ಹಬ್ಬ ಏಪ್ರಿಲ್ 13 ರಂದು ಮಂಗಳವಾರ ಬಂದಿದೆ. ಯುಗಾದಿ ಹಬ್ಬದ ವಿಶೇಷತೆಯೇನು..? ಯುಗಾದಿಯನ್ನು ಯಾಕೆ ಆಚರಿಸಬೇಕು..? ಯುಗಾದಿ ಹಬ್ಬದ ಶುಭ ಮುಹೂರ್ತ, ಮಹತ್ವ, ಆಚರಿಸುವ ವಿಧಾನ ಮತ್ತು ಇತಿಹಾಸ ತಿಳಿದಿಕೊಳ್ಳಳಿ.ಹಿಂದು ಹೊಸ. ಪ್ರಕೃತಿಯಲ್ಲಿ ಪ್ರಾಣಿಗಳಲ್ಲಿ ಪಕ್ಷಿಗಳಲ್ಲಿ ಮಾನವನಲ್ಲಿ ಹೊಸ ಸಂಚಲನ ಮೂಡಿಸುವ ಋತು ವಸಂತ ಋತು ಇದು ಶ್ರೇಷ್ಠವಾದುದು ಎಲ್ಲ ಹಬ್ಬಗಳಲ್ಲಿ ಯುಗಾದಿಯು ಶ್ರೇಷ್ಠ. ಈ ಹಬ್ಬವನ್ನು ಭಾರತ ವಿವಿದ ಭಾಗಗಳಲ್ಲಿ ಬೇರೆ-ಬೇರೆ ಹೆಸರಿನಿಂದ, ಆಚರಿಸಲಾಗುತ್ತದೆ ಹಬ್ಬಗಳಲ್ಲಿ…
Author: admin
ಶ್ರೀನಿವಾಸಪುರ:-ಕೆ.ಎಸ್.ಆರ್.ಟಿ.ಸಿ ನೌಕರರ ಹಿತ ಕಾಪಾಡುವ ಜವಾಬ್ದಾರಿ ಸರ್ಕಾರದ ಹೊಣೆ ಮುಷ್ಕರ ನಿರತ ನಿಮ್ಮನ್ನು ನಿರ್ಲಕ್ಷಿಸುವುದು ತರವಲ್ಲ ಎಂದು ಮಾಜಿ ಸ್ಪೀಕರ್ ಹಾಗು ಶಾಸಕ ರಮೇಶಕುಮಾರ್ ಹೇಳಿದರು ಅವರು ಇಂದು ಶ್ರೀನಿವಾಸಪುರದಲ್ಲಿ ತಮ್ಮನ್ನು ಭೇಟಿಯಾಗಿದ್ದ ಮುಷ್ಕರ ನಿರತ ಸಾರಿಗೆ ಸಂಸ್ಥೆ ನೌಕರರಿಗೆ ನೈತಿಕ ಬೆಂಬಲ ಸೂಚಿಸಿ ಮಾತನಾಡಿದರು.ಮುಷ್ಕರ ನಿರತ ಕಾರ್ಮಿಕರ ವಿರುದ್ದ ಸರ್ಕಾರ ದ್ವೇಷ ಸಾದಿಸುವುದನ್ನು ಬಿಟ್ಟು ಅವರೊಂದಿಗೆ ಮಾತುಕತೆಗೆ ಮುಂದಾಗುವಂತೆ ಅಗ್ರಹಿಸಿದರು. ಕೇಂದ್ರ ಮತ್ತು ರಾಜ್ಯದಲ್ಲಿ ನಿಮ್ಮದೆ ಸರ್ಕಾರಗಳು ಇವೆ ನೀವು ಮಾತೃಹೃದಯಿಯಾಗಿ ನೌಕರರ ಸಮಸ್ಯೆಗಳನ್ನು ಆಲಿಸಬೇಕು ಎಸ್ಮಾ ಜಾರಿ ಮಾಡುವುದನ್ನು ಬಿಟ್ಟು,ಶಾಂತಿ, ಸಾವಧಾನವಾಗಿ ಚರ್ಚೆ ಮೂಲಕ ಕಾರ್ಮಿಕರ ಹಿತ ಕಾಪಾಡುವುದರೊಂದಿಗೆ ಸೌಜನ್ಯಯುಕ್ತವಾಗಿ ವರ್ತಿಸುವಂತೆ ಸರ್ಕಾರಕ್ಕೆ ಹೇಳಿದರು.ಸಾರಿಗೆ ಸಿಬ್ಬಂದಿಯೂ ಸಹ ಹತಾಶರಾಗದೆ, ಹಟಕ್ಕೆ ಬೀಳದೆ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಿದ್ದರಾಗುವಂತೆ ಸಲಹೆ ನೀಡಿದರಲ್ಲದೆ, ನಾವು ಸದಾಕಾಲವೂ ದುಡಿಯುವ ವರ್ಗದ ಹಾಗೂ ಕಾರ್ಮಿಕರ ಪರವಾಗಿ ಬೆಂಬಲಕ್ಕೆ ಇರುವುದಾಗಿ ಭರವಸೆ ನೀಡಿದರು.ಖಾಸಗಿ ಕರಣದಿಂದ ಉದ್ದಾರ ಆಗುತ್ತದೆ ಎನ್ನುವುದು ಸುಳ್ಳು ಇದೊಂದು ಅವೈಜ್ಞಾನಿಕ ಚಿಂತನೆ ಎಂದು ಕಿಡಿಕಾರಿದರು.…
ಶ್ರೀನಿವಾಸಪುರ:-ಸಾರಿಗೆ ಮುಷ್ಕರದಲ್ಲಿ ಭಾಗಿಯಾಗದೇ ಕರ್ತವ್ಯಕ್ಕೆ ಹಾಜರಾಗಿದ್ದ ಕೆ.ಎಸ್.ಆರ್.ಟಿ.ಸಿ. ಚಾಲಕನೊಬ್ಬನ ಮೇಲೆ ಮುಷ್ಕರ ಬೆಂಬಲಿತ ಚಾಲಕ ಆಕ್ರೋಷಗೊಂಡು ಕಾರ್ಯನಿರತ ಚಾಲಕನ ಮೇಲೆ ಪೆಟ್ರೋಲ್ ಎರಚಿ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿರುತ್ತದೆ. ಶ್ರೀನಿವಾಸಪುರ ಘಟಕದ ಚಾಲಕ ಸತ್ಯಪ್ಪ ಮುಷ್ಕ್ರರ ತೊರೆದು ಬುಧವಾರ ಸಂಜೆ ಕರ್ತವ್ಯಕ್ಕೆ ಹಾಜರಾಗಿರುತ್ತಾನೆ ನಿರ್ವಾಹಕ ಮುದುವಾಡಿಮಂಜು ಜೋತೆಗೂಡಿ ಬಸ್ಸು ಚಲಾಯಿಸಿಕೊಂಡು ಕೋಲಾರಕ್ಕೆ ಹೋಗುವಾಗ ವಳಗೇರನಹಳ್ಳಿ ಗೇಟ್ ಬಳಿ ಶ್ರೀನಿವಾಸಪುರ ಘಟಕದ ಚಾಲಕ ಮತ್ತೋಬ್ಬ ಚಾಲಕ ಶ್ರೀನಿವಾಸಪ್ಪ ಬಸ್ಸನ್ನು ನಿಲ್ಲಿಸಿ,ಮುಷ್ಕರದ ಸಂದರ್ಭದಲ್ಲಿ ಡ್ಯೂಟಿ ಮಾಡುತ್ತಿರುವೇಯ ಎಂದು ಪ್ರಶ್ನಿಸಿ ಕರ್ತವ್ಯ ನಿರತ ಚಾಲಕನ ಮೇಲೆ ಹಲ್ಲೆಗೆ ಮುಂದಾಗಿರುತ್ತಾನೆ ನಂತರ ತಂದಿದ್ದ ಪೆಟ್ರೊಲ್ ಅನ್ನು ಕರ್ತವ್ಯ ನಿರತ ಚಾಲಕನ ಮೇಲೆ ಎರಚಿ ಬೆದರಿಕೆ ಹಾಕಿದ್ದಾರೆ ಈ ಸಂದರ್ಭದಲ್ಲಿ ಸ್ಥಳೀಯ ಜನತೆ ಇಬ್ಬರನ್ನು ತಡೆದು ಬುದ್ದಿ ಹೇಳಿ ಕಳಿಸಿದ್ದು ನಂತರ ಸತ್ಯಪ್ಪ ಬಸ್ಸನ್ನು ಕೋಲಾರಕ್ಕೆ ತಗೆದುಕೊಂಡು ವಾಪಸ್ಸು ಬರುವಾಗ ಪೋಲಿಸ್ ಬಂದೋ ಬಸ್ತಿನಲ್ಲಿ ಘಟಕಕ್ಕೆ ತಂದಿರುತ್ತಾರೆ.ಇಷ್ಟೆಲ್ಲಾ ರಾದ್ದಾಂತ ನಡೆದಿದೆಯಾದರೂ ಶ್ರೀನಿವಾಸಪುರ ಘಟಕದ ಸಾರಿಗೆ ಸಂಸ್ಥೆ…
ಜೆ.ಡಿ.ಎಸ್ 09 ಕಾಂಗ್ರೆಸ್ 4 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿರುತ್ತಾರೆ ಶ್ರೀನಿವಾಸಪುರ:- ತಾಲೂಕಿನ ಪ್ರತಿಷ್ಠಿತ ಹಾಲು ಉತ್ಪಾದಕರ ಸಹಕಾರ ಸಂಘದ 13 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು 9 ಮಂದಿ ಹಾಗು ಕಾಂಗ್ರೆಸ್ ಬೆಂಬಲಿತರು 4 ಸ್ಥಾನಗಳಿಸಿರುತ್ತಾರೆ.ಜೆ.ಡಿ.ಎಸ್ ನಿಂದ ಆಯ್ಕೆಯಾದ ನಿರ್ದೇಶಕರು ಅನಂತಪ್ಪ. ಕೆ,ಎಂ ಕೃಷ್ಣಪ್ಪ. ಕೆ. ಎಸ್. ಲಿಂಗಾರೆಡ್ಡಿ. ಕೆ. ಎಸ್. ವೆಂಕಟಸ್ವಾಮಿ. ಮುನಿರತ್ನಮ್ಮ. ವೆಂಕಟಮ್ಮ. ಕೃಷ್ಣಯ್ಯ ಶೆಟ್ಟಿ. ಪೆದ್ದರೆಡ್ಡಿ ರವರ ಮಂಜುನಾಥ್ ರೆಡ್ಡಿ.ಕಾಂಗ್ರೆಸ್ ನಿಂದ ಆಯ್ಕೆಯಾದ ನಿರ್ದೇಶಕರು ಪ್ರಭಾಕರ್,ಕೆ.ಸಿ.ವೆಂಕಟೇಶಪ್ಪ,ಡಿ.ವಿ.ಶ್ರೀರಾಮ,ಕೆ.ಸಿ.ಸೋಮಣ್ಣ.ಜೆ.ಡಿ.ಎಸ್ ಪಕ್ಷದ ರಾಜ್ಯ ಪ್ರಧಾನಕಾರ್ಯದರ್ಶಿ ಪ್ರಶಾಂತ್ ರೆಡ್ಡಿ ಸ್ವಾಗ್ರಾಮವಾದ ಕೊಳತೂರು ಉತ್ಪಾದಕರ ಸಹಕಾರ ಸಂಘದ ಪ್ರತಿಷ್ಠಿತೆಯ ಕಣವಾಗಿತ್ತು 13 ನಿರ್ದೇಶಕರ ಪೈಕಿ 9 ಮಂದಿ ಜೆ.ಡಿ.ಎಸ್ ಬೆಂಬಲಿತರು ವಿಜಯ ಸಾಧಿಸಿರುತ್ತಾರೆ.ಅಭಿವಂದನೆ ಸಲ್ಲಿಸಿದ ಮಾಜಿ ಶಾಸಕಮಾಜಿ ಶಾಸಕ ಜೆ.ಕೆ ವೆಂಕಟಾಶಿವರೆಡ್ಡಿ ಚುನಾಯಿತ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ ಈ ಭಾಗದ ರೈತಾಪಿ ಕುಟುಂಬಗಳ ಜೀವನಾಡಿಯಾದ ಹಾಲು ಉತ್ಪಾದಕರ ಸಂಘದಿಂದ ಹಾಲು ಉತ್ಪಾದಕರಿಗೆ ಪಕ್ಷಾತೀತವಾಗಿ ಾನಕೂಲಗಳನ್ನು ಕಲ್ಪಿಸಿ ನ್ಯಾಯೋಚಿತವಾಗಿ ಸಂಘವನ್ನು ಮುನ್ನೆಡುಸುವಂತೆ…
ರಾಬರ್ಟ್ ಚಿತ್ರ ರಾಜ್ಯಾದ್ಯಂತ ಯಶಸ್ವೀ 25 ದಿನಗಳನ್ನು ಪೂರೈಸಿದೆ. ಅತ್ಯದ್ಭುತವಾಗಿ ಉತ್ಸಾಹದಿಂದ ನಿರ್ಮಾಣ ಮಾಡಿರುವ ರಾಬರ್ಟ್. “ಡಿ” ಭಾಸ್ ಅಭಿಮಾನಿಗಳ ಅಪಾರ ಪ್ರಮಾಣದ ಪ್ರೀತಿ ಹಾಗೂ ಬೆಂಬಲದಿಂದ ನೀರಿಕ್ಷೇಗಳನ್ನು ಮೀರಿ ಯಶಸ್ಸು ಕಂಡಿದೆ. ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ರವರ ರಾಬರ್ಟ್ ಚಿತ್ರವು 100 ಕೋಟಿ ಗಳಿಸಿ ಬಾಕ್ಸ್ ಆಫೀಸ್ ಕೊಳ್ಳೆಹೊಡೆದಿದೆ ಇದು ಡಿ ಬಾಸ್ ಅಭಿಮಾನಿಗಳ ಆನ್ಲೈನ್ ಟೀಮ್ ಕಡೆಯಿಂದ ಸಂಭ್ರಮಾಚರಣೆ ನಡೆಯುತ್ತಿದೆ.ರಾಬರ್ಟ್ ಕಲೆಕ್ಷನ್ ಇತಿಹಾಸದಲ್ಲಿ ಹೊಸ ಇತಿಹಾಸ ಸೃಷ್ಠಿಸಿದಿಯಂತೆ ಪ್ರತಿ ಕೇಂದ್ರದಲ್ಲೂ ಹೌಸ್ ಕಲೆಕ್ಷನ್ ನಲ್ಲಿ ಸಾಗುತ್ತಿರುವುದಾಗಿ ಹೇಳಲಾಗಿದೆ. ತೆಲಗಿನ ರಾಬರ್ಟ್ ಹಾಡು “కన్నే అదిరింది” ಗಾಯಕಿ ಮಂಗ್ಲಿ ಹಾಡಿರುವ ಹಾಡು ತೆಲಗು ಚಿತ್ರರಸಿಕರ ನಿದ್ದೆ ಗೆಡೆಸಿದಿಯಂತೆ. ರಾಬರ್ಟ್ ಯಶಸ್ಸು ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಹಾಗು ನಿರ್ದೇಶಕ ತರುಣ್ ಸುಧಿರ್ ಶ್ರಮದ ಫಲ ಡಿ. ಅಭಿಮಾನಿಗಳಿಗೆ ಹಬ್ಬದೂಟವಾಗಿದೆ
ನ್ಯೂಜ್ ಡೆಸ್ಕ್:- ಸುಮಾರು ಒಂದು ವರ್ಷದ ಹಿಂದೆ ಮಹಿಂದ್ರಾ ಗ್ರೂಪ್ನ ಚೇರ್ಮನ್ ಆನಂದ್ ಮಹಿಂದ್ರಾ ತಮಿಳುನಾಡಿನ ಇಡ್ಲಿ ಅಮ್ಮನಿಗೆ ಸ್ವಂತ ಮನೆ ನಿರ್ಮಿಸಿಕೊಡುವುದಾಗಿ ಹೇಳಿದ್ದರು. ಈಗ ಆ ಮನೆ ನಿರ್ಮಾಣ ಆರಂಭವಾಗಿದೆ. ತಮಿಳುನಾಡಿನ ವಡಿವೇಲಂಪಾಲಯಂ ಗ್ರಾಮದ 80 ವರ್ಷ ವಯಸ್ಸಿನ ಕಮಲತ್ತಾಳ್ ಇಡ್ಲಿ ಅಮ್ಮ ಎಂದೇ ಖ್ಯಾತಿ ಪಡೆದಿದ್ದಾರೆ. ಒಂದು ರೂಪಾಯಿಗೆ ಒಂದು ಇಡ್ಲಿ ಜೊತೆಗೆ ಚಟ್ನಿ ಮತ್ತು ಸಾಂಬಾರ್ ಮಾರುತ್ತಾರೆ ಆಕೆ. ತಮಿಳುನಾಡಿನಲ್ಲಿ ಒಂದು ರೂಪಾಯಿಗೆ ಒಂದು ಇಡ್ಲಿ ಮಾರುತ್ತಿದ್ದ ಕಮಲತ್ತಾಳ್ ಎಂಬ ಮಹಿಳೆಯೊಬ್ಬರ ವಿಡಿಯೋ ವೈರಲ್ ಆಗಿ ಅದನ್ನು ಭಾರತದ ಹೆಮ್ಮೆಯ ಉದ್ಯಮಿ ಆನಂದ್ ಮಹಿಂದ್ರಾ ಆ ವಿಡಿಯೋ ನೋಡಿ ಶೇರ್ ಮಾಡಿದ್ದರು ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದ ಆಕೆಗೆ ಸಹಾಯವಾಗಲೆಂದು ಎಲ್ಪಿಜಿ ಸ್ಟೌವ್ ಕೊಡಿಸುವುದಾಗಿ ಟ್ವಿಟರ್ ನಲ್ಲಿ ಹೇಳಿದ್ದರು. ಅವರ ಟ್ವೀಟ್ ಗಮನಿಸಿದ್ದ ಕೊಯಂಬತೂರಿನ ಭಾರತ್ ಗ್ಯಾಸ್ ಸಂಸ್ಥೆ ಆಕೆಗೆ ಉಚಿತವಾಗಿ ಎಲ್ಪಿಜಿ ಕನೆಕ್ಷನ್ ನೀಡಿತ್ತು. ಇಡ್ಲಿ ಅಮ್ಮನ ಒಂದು ರೂಪಾಯಿ ಇಡ್ಲಿ ವಹಿವಾಟಿನಲ್ಲಿ ಹೂಡಿಕೆ ಮಾಡಲು…
ಯುವಕರ ತ್ರಿಬಲ್ ರೈಡಿಂಗ್ ಹಿಡಿಯಲು ಪೋಲಿಸರು ಹಿಂದೇಟುಯುವಕರ ರಾಜಕೀಯ ನಂಟು ಪೋಲಿಸರಿಗೆ ಭಯ! ಶ್ರೀನಿವಾಸಪುರ:- ರಾಷ್ಟ್ರೀಯ ಹೆದ್ದಾರಿ ಚಿಂತಾಮಣಿ ರಸ್ತೆಯ ಹೆದ್ದಾರಿಯಲ್ಲಿ ಪುಂಡರ ಬೈಕ್ ವ್ಹೀಲಿಂಗ್ ಸಾಮಾನ್ಯವಾಗಿದ್ದು ಈ ರಸ್ತೆಯ ನಂಬಿಹಳ್ಳಿ ಹಾಗು ವರ್ತುಲ ರಸ್ತೆಯಲ್ಲಿ ಸಂಜೆ ಮಬ್ಬು ಗತ್ತಲಿನಲ್ಲಿ ಪುಂಡರ ಅಪಾಯಕಾರಿ ಬೈಕ್ ಸ್ಟಂಟ್‌ಗಳಿಗೆ ರಸ್ತೆ ಸವಾರರು ಹೈರಾಣಾಗಿದ್ದಾರೆ. ಯುವಕರ ಬೈಕ್ ವ್ಹೀಲಿಂಗ್ ಹುಚ್ಚಾಟ ಹೆಚ್ಚಾಗಿದ್ದು, ವ್ಹೀಲಿಂಗ್ ಎಗ್ಗಿಲ್ಲದೆ ನಡೆಯುತ್ತಿದ್ದು. ಪೋಲೀಸರು ಇವರ ಪುಂಡಾಟಕ್ಕೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಪುಂಡರ ವ್ಹೀಲಿಂಗ್ ಹುಚ್ಚಾಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಪಟ್ಟಣದಲ್ಲೂ ಪುಂಡರ ಕಾಟರಾತ್ರಿ ವೇಳೆ ಪುಂಡರು ಮೂರನಾಲ್ಕು ದ್ವಿಚಕ್ರ ವಾಹನಗಳನ್ನು ಪಟ್ಟಣದ ಮುಖ್ಯರಸ್ತೆಗಳಲ್ಲಿ ಕರ್ಕಶ ಶಬ್ದಮಾಡುತ್ತ ಕೇಕೆ ಹಾಕುತ್ತ ಅಡ್ಡಾದಿಡ್ದಿಯಾಗಿ ಒಡಿಸುವುದು ಇಲ್ಲಿ ಸಾಮಾನ್ಯವಾಗಿಬಿಟ್ಟಿದೆ ಇದಕ್ಕೆಲ್ಲ ಇಲ್ಲಿನ ಪೋಲಿಸರ ದಿವ್ಯ ಮೌನ ಸಾರ್ವಜನಿಕರಿಗೆ ಅರ್ಥವೇ ಆಗುತ್ತಿಲ್ಲ ಎನ್ನಲಾಗುತ್ತಿದೆ.ಇನ್ಸಪೇಕ್ಟರ್ ರವಿಕುಮಾರ್ ಸ್ಪಷ್ಟನೆ.ವ್ಹೀಲಿಂಗ್ ಮಾಡುವ ಬಗ್ಗೆ ನಿಗಾ ಇಡಲು ಪ್ರದೇಶಗಳನ್ನು ಗುರುತಿಸಿ ಪೋಲಿಸರನ್ನು ನಿಯೋಜಿಸಿ ಬೈಕ್ ವ್ಹೀಲಿಂಗ್ ಮಾಡುವಂತ…
ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕಿನ ಪ್ರಕರಣಗಳು ದಾಖಲಾಗಿದ್ದು ದೇಶದಲ್ಲಿ ಅತೀ ಹೆಚ್ಚಿನ ಸಕ್ರಿಯ ಹೊಂದಿರುವ ಪಟ್ಟಿಯಲ್ಲಿ ರಾಜ್ಯ 2ನೇ ಸ್ಥಾನದಲ್ಲಿದೆ . ನ್ಯೂಜ್ ಡೆಸ್ಕ್:-ಕರ್ನಾಟದಲ್ಲಿ ಗುರುವಾರ ಕೊರೋನಾ ಸೊಂಕಿತರ ಸಂಖ್ಯೆ 4,234 ತಲುಪಿದೆ ಇದುವರಿಗೂ ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 10 ಲಕ್ಷ ಗಡಿ ದಾಟಿದೆ. ಇದು ದೇಶದಲ್ಲಿ 10 ಲಕ್ಷದ ಗಡಿ ದಾಟಿದ ಮೂರನೇ ರಾಜ್ಯ ಗುರುತಿಸಲಾಗುದೆ!ಕಳೆದ ವರ್ಷ ಮಾ.8ರಂದು ರಾಜ್ಯದಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿತ್ತು, ಮೊದಲ ಒಂದು ಲಕ್ಷ ಪ್ರಕರಣಗಳು 108 ದಿನಗಳಲ್ಲಿ ವರದಿಯಾದರೇ, ಕಡೆಯ ಒಂದು ಲಕ್ಷ ಪ್ರಕರಣಗಳು 110 ದಿನಗಳಲ್ಲಿ ವರದಿಯಾಗಿವೆ. ಈ ನಡುವೆ ಸೋಂಕಿತರ ಸಂಖ್ಯೆ ಏರಿಳಿತ ಕಂಡಿದೆ. ಈ ವರ್ಷದ ಮೊದಲ ತಿಂಗಳಲ್ಲಿ ಕೆಲ ದಿನಗಳು ಪ್ರಕರಣಗಳ ಸಂಖ್ಯೆ 500ರ ಗಡಿಯ ಆಸುಪಾಸಿಗೆ ಇಳಿಕೆಯಾಗಿತ್ತು. ಈಗ ಮತ್ತೆ ಏರುತ್ತಿದೆ. ಮಾರ್ಚ್ ಒಂದೇ ತಿಂಗಳಲ್ಲಿ 45,753 ಮಂದಿ ಸೋಂಕಿತರಾಗಿದ್ದಾರೆ.ರಾಜ್ಯದಲ್ಲಿ ಇದೀಗ ಒಟ್ಟಾರೆ ಶೇ.4.65ರಷ್ಟು ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 265 ಮಂದಿ…
ಚಿತ್ತೂರು(ಆಂಧ್ರಪ್ರದೇಶ್):- ಪಾಠ ಮಾಡುವ ಸರಸ್ವತಿ ನಿಲಯವನ್ನು ಮಾಂಸದ ಹೋಟೆಲ್ ಹಾಗು ಸರಾಯಿ ಕುಡಿಯುವ ಸ್ಥಳವನ್ನಾಗಿ ಮಾಡಿ ತಾನು ಬೋದನೆ ಮಾಡುವ ಪವಿತ್ರ ವೃತ್ತಿಗೆ ಮೇಷ್ಟ್ರೋಬ್ಬ ಕಪ್ಪು ಮಸಿ ಬಳೆದಿರುವ ಘಟನೆ ಆಂಧ್ರದ ಚಿತ್ತೂರು ಜಿಲ್ಲೆಯ ಚಂದ್ರಗಿರಿ ಕ್ಷೇತ್ರದ ಪಾಕಾಲಾ ಮಂಡಲ ಮೊಗರಾಲ ಪಂಚಾಯತ್ ವ್ಯಾಪ್ತಿಯ ಕೃಷ್ಣಪುರಂ ಮಂಡಲ್ ಪರಿಷತ್ ಪ್ರಾಥಮಿಕ ಶಾಲೆಯಲ್ಲಿ ನಡೆದಿರುತ್ತದೆ.ಮಕ್ಕಳಿಗೆ ಶಿಸ್ತು ಮತ್ತು ಶಿಕ್ಷಣವನ್ನು ಕಲಿಸಬೇಕಾದ ಶಿಕ್ಷಕ ಶಾಲೆಯಲ್ಲಿಯೇ ಮದ್ಯ ಸೇವಿಸುತ್ತ ಮಾದಕ ವ್ಯಸನಿಯಾಗಿ ಅಲ್ಲೇ ಮಾಂಸ ತಿಂದು ಪವಿತ್ರ ಸ್ಥಳವನ್ನು ಅಪವಿತ್ರ ಗೊಳಿಸಿದ್ದಾನಂತೆ, ಏಕೋಪಾದ್ಯಾಯ ಶಿಕ್ಷಕ ಕೋಟೇಶ್ವರ ರಾವ್,ಮದ್ಯವೇಸನಿ ಶಿಕ್ಷಕ ಶಾಲಾ ವಿದ್ಯಾರ್ಥಿಗಳನ್ನು ಅಶ್ಲಿಲವಾಗಿ ಬೈಯ್ಯುವುದು ಅವರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ ಎಂಬ ಅಪಾದನೆ ಇದ್ದು, ವಿದ್ಯಾರ್ಥಿಗಳನ್ನು ವಿವಸ್ತ್ರಗೊಳಿಸಿ ಪೈಶಾಚಿಕವಾಗಿ ಅಪಹಾಸ್ಯ ಮಾಡುವುದು ಇದನ್ನು ಕೇಳಲು ಬರುವಂತ ವಿದ್ಯಾರ್ಥಿಗಳ ಪೋಷಕರನ್ನು ಸಹ ಬೈದು ಕಳಿಸುವುದು ಮಾಡುತ್ತಿದ್ದಈ ಬಗ್ಗೆ ಗ್ರಾಮದ ಜನತೆ ಹಾಗು ಪೋಷಕರು ಗುರುವಾರ ಶಾಲೆಗೆ ಬಂದಾಗ ಕಂಠ ಪೂರ್ತಿ ಕುಡಿದಿದ್ದ ಶಿಕ್ಷಕ ಶಾಲೆಯಲ್ಲಿ ಬಿರಿಯಾನಿ ತಿನ್ನುತ್ತ ಕುಳತಿದ್ದ…
ಸಮಾಜವಾದಿ ಸಿದ್ದಾಂತದ ಸಿದ್ದರಾಮಯ್ಯ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿನಾನು ನಾಸ್ತಿಕನಲ್ಲ, ಆದರೆ ಆಷಾಢಭೂತಿತನದ ಭಕ್ತಿ ನನ್ನದಲ್ಲವಿಶೇಷ ಪೂಜೆ ಬಳಿಕ ಸಿದ್ದರಾಮಯ್ಯ ಅವರನ್ನು ಸ್ಮಾನಿಸಿದ ಮಠದ ಆಡಳಿತ ಮಂಡಳಿ ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನ ಉತ್ತರಹಳ್ಳಿ ಪೂರ್ಣಪ್ರಜ್ಞ ಲೇಔಟ್‌ನಲ್ಲಿರುವ ಕಲ್ಪವೃಕ್ಷ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ವಿಶೇಷ ಆಹ್ವಾನದ ಮೇರೆಗೆ ಮಠಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ, ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯದಲ್ಲಿ(ಮಠ) ನಡೆಯುತ್ತಿರುವ ಶ್ರೀ ರಾಘವೇಂದ್ರ ವೈಭವ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಶ್ರೀ ರಾಯರ ಬೃಂದಾವನಕ್ಕೆ ಆರತಿ ಬೆಳಗಿ,ಪೂಜೆ ಸಲ್ಲಿಸಿ, ಸಾಮನ್ಯ ಭಕ್ತನಂತೆ ನಿಂತು ನಮಸ್ಕಾರ ಮಾಡಿದ ಅವರುಹೂವು ಸಮರ್ಪಣೆ ಮಾಡಿರುತ್ತಾರೆ.ಈ ಸಂದರ್ಭದಲ್ಲಿ ಶ್ರೀ ಮಠದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು ಇದಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಸಿದ್ದರಾಮಯ್ಯ, ನಾನು ನಾಸ್ತಿಕನಲ್ಲ. ನನಗೆ ದೇವರ ಮೇಲೆ ಭಕ್ತಿಯಿದೆ. ಮನುಷ್ಯನಿಗೆ ದೇವರ ಮೇಲೆ ನಿಜ ಭಕ್ತಿ ಇರಬೇಕು.ಆಷಾಢಭೂತಿತನದ ಭಕ್ತಿ ಒಳ್ಳೆಯದಲ್ಲ.ನಾನು ದೇವರನ್ನು ನಂಬಿದ್ದೇನೆ. ಆದರೆ,ದೇವರೊಬ್ಬ ನಾಮ…