Author: admin

ಶ್ರೀನಿವಾಸಪುರ:ಚಲ್ದಿಗಾನಹಳ್ಳಿ ಪಂಚಾಯಿತಿ ದಾಖಲಾತಿಗಳು ಅನುಮಾನಸ್ಪದವಾಗಿ ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದ್ದು ಇದರ ಹಿಂದೆ ಇರುವಂತ ದುಷ್ಕರ್ಮಿಗಳು ಯಾರು ಎನ್ನುವುದೆ ಅಧಿಕಾರಿಗಳಿಗೆ ತಲೆನೋವಾಗಿದೆ.ಚಲ್ದಿಗಾನಹಳ್ಳಿ ಪಂಚಾಯಿತಿ ಕಟ್ಟಡ ತೀರಾ ಇಕ್ಕಟ್ಟಾಗಿದ್ದು ಕಚೇರಿ ಕೆಡವಿ ನೂತನವಾಗಿ ಕಟ್ಟಡ ನಿರ್ಮಾಣ ಮಾಡುವ ಸಲುವಾಗಿ ಪಂಚಾಯಿತಿ ಆಡಳಿತ ಕಚೇರಿಯನ್ನು ತಾತ್ಕಲಿಕವಾಗಿ ಗ್ರಾಮದ ಶಾಲೆ ಬಳಿ ಇರುವಂತ ಸಮುದಾಯ ಭವನಕ್ಕೆ ವರ್ಗಾಯಿಸಬೇಕೆಂದು ಪಂಚಾಯಿತಿ ಸಭೆಯಲ್ಲಿ ತಿರ್ಮಾನ ಮಾಡಿ ಅದರಂತೆ ಸಮುದಾಯ ಭವನಕ್ಕೆ ವರ್ಗಾಯಿಸಿರುತ್ತಾರೆ. ಈ ವಿಚಾರವಾಗಿ ಪಂಚಾಯಿತಿ ರಾಜಕೀಯ ನಾಯಕರಲ್ಲಿ ಬಿನ್ನಾಭಿಪ್ರಾಯ ಹೊಗೆಯಾಡಿದೆ ಈ ಬಗ್ಗೆ ಎರಡು ರಾಜಕೀಯ ಪಕ್ಷಗಳ ಮುಖಂಡರು ಪರವಿರೋಧ ವ್ಯಕ್ತವಾಗಿದೆ ಇದರ ನಡುವೆ ಗುರುವಾರ ರಾತ್ರಿ ಸಮುಧಾಯ ಭವನದಲ್ಲಿನ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡು ಉದ್ಯೋಗಖಾತ್ರಿ ಯೋಜನೆಯ ನರೇಗಾ ದಾಖಲಾತಿಗಳು ಮತ್ತು ವಿವಿಧ ಯೋಜನೆಗಳ ಮನೆಗಳ ಫಲಾನುಭವಿಗಳ ಆಯ್ಕೆ ಪಟ್ಟಿ ಕಡತಗಳು ಬೆಂಕಿಗೆ ಆಹುತಿಯಾಗಿದೆ ಇದಕ್ಕೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶಂಕರಪ್ಪ, ಹೇಳುವಂತೆ ಪಂಚಾಯಿತಿಯಲ್ಲಿ ಉಂಟಾಗಿರುವ ಬೆಂಕಿ ಅವಘಡ ವಿದ್ಯತ್ ಶಾರ್ಟಸರ್ಕಿಟ್ ನಿಂದ ಆಗಿರುತ್ತದೆ ಸುಟ್ಟು ಹೋಗಿರುವಂತ…

Read More

ಬೆಂಗಳೂರು:ಕುಟುಂಬದ ವ್ಯಾಮೋಹಕ್ಕೆ ಬಲಿಯಾಗಿ ರಾಜಕೀಯ ಜೀವನಕ್ಕೆ ಕುತ್ತು ತಂದುಕೊಳ್ಳಬೇಡಿ ನಿಮ್ಮ ಸುತ್ತ ಇರುವಂತ ಬ್ಯಾಂಡ್ ಸೆಟ್ ಬ್ಯಾಚ್ ಅನ್ನು ದೂರ ಇಡಿ ಹೀಗೆಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಿಧಾನಸಭೆಯಲ್ಲಿ ನೇರವಾಗಿ ಸಲಹೆ ನೀಡುವ ಮೂಲಕ ಕುಟುಕಿದ್ದಾರೆ. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ನಡೆಯುತ್ತಿರುವ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ರಮೇಶ್ ಕುಮಾರ್, ಮುಖ್ಯಮಂತ್ರಿ ಯಡಿಯೂರಪ್ಪನವರ ಕುಟುಂಬ ರಾಜಕಾರಣದ ಬಗ್ಗೆ ಸಲಹೆ ನೀಡುತ್ತಲೆ ತರಾಟೆಗೆ ತೆಗೆದುಕೊಂಡರು. ಮುಖ್ಯಮಂತ್ರಿ ಸ್ಥಾನಕ್ಕೆ ಯಾರೇ ಬಂದರು ಅವರ ಸುತ್ತ ಒಂದಿಷ್ಟು ಜನ ಸೇರಿಕೊಂಡು ತಂಡ ಮಾಡಿಕೊಳ್ಳುತ್ತಾರೆ ಅಂತಹ ಜನರನ್ನು ಬ್ಯಾಂಡ್ ಸೆಟ್ ನವರು ಎಂದು ಕರೆಯುತ್ತಾರೆ. ಈ ಬ್ಯಾಂಡ್ ಸೆಟ್ ನವರು ಮುಖ್ಯಮಂತ್ರಿ ಅವರನ್ನು ಸುತ್ತುವರೆದು ತಮಗೆ ಬೇಕಾದ ಕೆಲಸ ಮಾಡಿಸಿಕೊಳ್ಳುತ್ತಾರೆ. ಈ ಹಂತದಲ್ಲಿ ಅತನ ನಿಜವಾದ ಕರ್ತವ್ಯ ಮರೆತುಹೋಗಲು ಕಾರಣಕರ್ತರಾಗುತ್ತಾರೆ ಎಂದರು. ನೀವು ಹೋರಾಟದ ಮೂಲಕ ಸಾರ್ವಜನಿಕ ಜೀವನಕ್ಕೆ ಬಂದವರು, ಶಿಕಾರಿಪುರದ ಪುರಸಭೆ ಅಧ್ಯಕ್ಷ ಗಾದಿಯಿಂದ ಇಲ್ಲಿಯವರಿಗೂ ಬಂದಿರುವಿರಿ, ಇವತ್ತು ನಿಮ್ಮನ್ನು ಸುತ್ತುವರಿದಿರುವ…

Read More

ಕೋಲಾರ:-ತಾಲೂಕು ವೇಮಗಲ್ ಪಟ್ಟಣದ ಪ್ರಜಾ ಹಿತ ಸೇವಾ ಸಮಿತಿ ಪದಾಧಿಕಾರಿಗಳು 15ನೇ ಶ್ರಮದಾನದ ಅಂಗವಾಗಿ “ನಮ್ಮ ಊರು ನನ್ನ ಸೇವೆ” ಎಂಬ ಘೋಷವಾಕ್ಯ ದೊಂದಿಗೆ ವೇಮಗಲ್ ನ ಸಾರ್ವಜನಿಕ ನೂತನ ಆಸ್ಪತ್ರೆ ಆವರಣ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛತೆ ಮಾಡಿರುತ್ತಾರೆ. ಈ ಸಂಸರ್ಭದಲ್ಲಿ ಮಾತನಾಡಿದ ಪದಾಧಿಕಾರಿಗಳು ನಮ್ಮ ಊರಿನ ಸ್ವಚ್ಚತೆ ನಮ್ಮದೇ ಜವಬ್ದಾರಿ ಊರು ಬೀದಿ ಸ್ವಚ್ಚವಾಗಿದ್ದರೆ ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ ಇದಕ್ಕಾಗಿ ನಾವು ಶ್ರಮಾಧಾನದ ಹೆಸರಿನಲ್ಲಿ ಸ್ವಚ್ಚತೆ ಹಾಗು ಗ್ರಾಮದ ಇತರೆ ಉತ್ತಮ ಕೆಲಸ ಕಾರ್ಯಗಳಿಗೆ ಸಹಕಾರ ನೀಡುತ್ತ ಬಂದಿರುವುದಾಗಿ ಹೇಳಿದರು.ಸಫಲ್ ಶ್ರೀನಿವಾಸ ಮತ್ತು ವೇಮಗಲ್ ಆನಂದ್ ,ಸೂರ್ಯನಾರಾಯಣ ಸ್ವಾಮಿ,ಪೈಂಟಿಂಗ್ ಮುನಿರಾಜು,ಶಿವಕುಮಾರ್ ,ಸಿಸಿಟಿವಿ ನವೀನ್,ಮೂರ್ತಿ,ಯಜಮಾನನಾಗೇಶ್, ದಾಸಪ್ಪ,ರಾಜಗೋಪಾಲ್, ಮಂಜುನಾಥ,ಮಧು, ಬಿ.ಎಂ.ಟಿ.ಸಿ.ರಾಜೇಂದ್ರರವರು, ಶ್ರಮದಾನಿಗಳಾಗಿ ಭಾಗಿಯಾಗಿದ್ದರು.ಆಸ್ಪತ್ರೆಯ ಕ್ಲೀನಿಂಗ್ ಸಿಬ್ಬಂದಿಗೂ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿ ಮುಂದಿನ ದಿನಗಳಲ್ಲಿ ಸುಚಿತ್ವ ಕಾಪಾಡಿಕೊಂಡು ಬರುವಂತೆ ಸೂಚಿಸಿರುತ್ತಾರೆ. ಸಮುದಾಯಕ್ಕೆ ಮಾದರಿ ವ್ಯವಸ್ಥೆಯಲ್ಲಿ ಯುವಕರು ಯಾರು ಯಾರ ಮಾತು ಕೇಳದೆ ದಾರಿತಪ್ಪುತ್ತಿರುವ ಕಾಲದಲ್ಲಿ ಗ್ರಾಮದ ಸ್ವಚ್ಚತೆಗೆ ಗ್ರಾಮದ ಯುವಕರು ಒಗ್ಗೂಡಿ ಸ್ವಚ್ಚತೆ…

Read More

ಶ್ರೀನಿವಾಸಪುರ: ಶ್ರೀನಿವಾಸಪುರ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಎಸ್‌ಎಫ್‌ಸಿ ಯೋಜನೆಯಡಿ ಮಂಜೂರಾಗಿರುವ ಅನುದಾನವನ್ನು ಸರ್ಕಾರ ತಡೆಹಿಡಿದಿರುತ್ತದೆ ಈ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ಎಂದು ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರು ಸೇರಿದಂತೆ ಪುರಸಭೆ ಸದಸ್ಯರ ನಿಯೋಗದೊಂದಿಗೆ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿರುತ್ತಾರೆ.ಈ ಸಂದರ್ಭದಲ್ಲಿ ಮಂತ್ರಿ ನಾಗರಾಜ್ ಅವರಲ್ಲಿ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, 2018-19ರಲ್ಲಿ ಶ್ರೀನಿವಾಸಪುರ ಪಟ್ಟಣ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳ ಅಡಿಯಲ್ಲಿ 15 ಕೋಟಿ ಅನುದಾನ ಮಂಜೂರಾಗಿತ್ತು, ಕಾರಣಾಂತರಗಳಿಂದ ಹಣ ಬಿಡುಗಡೆಯಾಗಲಿಲ್ಲ ಇದರಿಂದಾಗಿ ಪಟ್ಟಣದಲ್ಲಿ ಆಗಬೇಕಾಗಿದ್ದ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ನೀರು ಸರಬರಾಜು ಯೋಜನೆಗಳ ಅನುಷ್ಟಾನವು ಕುಂಠಿತಗೊಂಡಿರುತ್ತದೆ.ಪುರಸಭೆ ವತಿಯಿಂದ ಆಗಬೇಕಿದ್ದ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ ಎಂದು ಸಚಿವರ ಗಮನಕ್ಕೆ ತಂದರು. ಶ್ರೀನಿವಾಸಪುರ ಪುರಸಭೆ ವ್ಯಾಪ್ತಿಗೆ ಹೊಸದಾಗಿ 4 ಹಳ್ಳಿಗಳು ಸೇರ್ಪಡೆಯಾಗಿರುತ್ತವೆ. ಹಳ್ಳಿಗಳಲ್ಲಿ ಚರಂಡಿ, ರಸ್ತೆ, ಬೀದಿ ದೀಪ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನದ ಕೊರತೆಯಿದೆ.ಬೆಸಿಗೆ ಕಾಲ ಆರಂಭವಾಗಿದೆ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತದೆ,…

Read More

ನ್ಯೂಜ್ ಡೆಸ್ಕ್:- ದಕ್ಷಿಣ ಭಾರತ ಖ್ಯಾತ ಚಲನ ಚಿತ್ರ ನಟಿ ಮಾಧವಿ 17 ವರ್ಷಗಳಕಾಲ ದಕ್ಷಿಣ ಚಲನ ಚಿತ್ರರಂಗವನ್ನು ಆಳಿದ ನಟಿ ಕನ್ನಡ,ತೆಲುಗು,ತಮಿಳು,ಬೆಂಗಾಲಿ,ಮಲಯಾಳಂ,ಒರಿಯಾ ಮತ್ತು ಹಿಂದಿ ಸೇರಿದಂತೆ ಏಳು ಭಾಷೆಗಳಲ್ಲಿ ನಾಯಕಿಯಾಗಿ ನಟಿಸಿದ್ದ ಅವರು ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ಡಾ.ರಾಜಕುಮಾರ್,ಶಿವಾಜಿ ಗಣೇಶನ್, ಎನ್‌ಟಿಆರ್,ಈನ್ ಆರ್ ಅಮಿತಾಭ್ ಬಚ್ಚನ್ ಮೇರು ಕಲಾವಿದರ ಜೊತೆ ಮಾಧವಿ ಅಭಿನಯಿಸಿದ್ದಾರೆ.1976ರಿಂದ 1996ರ ಅವಧಿಯ ಬಹು ಬೇಡಿಕೆಯ ನಟಿಯಾಗಿದ್ದರು ಮಾಧವಿ.ಇವರು ಹುಟ್ಟಿದ್ದು ಆಗಿನ ಆಂಧ್ರಪ್ರದೇಶ ಈಗಿನ ತೆಲಂಗಾಣದ ಹೈದರಾಬಾದ್ ನಗರದಲ್ಲಿ.ಬಾಲ್ಯದಲ್ಲೇ ಭರತನಾಟ್ಯ ಸೇರಿದಂತೆ ಭಾರತೀಯ ಖ್ಯಾತ ನೃತ್ಯಗಳನ್ನು ಕಲಿತು ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ. ಪ್ರೌಡಾವಸ್ಥೆಯಲ್ಲಿ ತೆಲಗಿನ ವಿಭಿನ್ನ ನಿರ್ದೇಶಕ ದಾಸರಿ ನಾರಾಯಣರಾವ್ ಅವರ ‘ತೂರ್ಪು ಪಡಮರ’ ಎಂಬ ತೆಲುಗು ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಪಡೆದ ಅವರು ಆ ಸಿನಿಮಾ ಯಶಸ್ವಿ ಆಯಿತು ಆ ಹಿನ್ನಲೆಯಲ್ಲಿ ಅಂದಿನ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ 1979 ರಲ್ಲಿ ಮರೋಚರಿತ್ರ ಚಿತ್ರದಲ್ಲಿ ಕಮಲಹಾಸನ್ ಜತೆಗೆ ಪ್ರಮುಖಪಾತ್ರವೊಂದನ್ನು ನೀಡಿದ್ದು…

Read More

ಶ್ರೀನಿವಾಸಪುರ:ತಾಲೂಕಿನ ಅರಕೇರಿ ಶ್ರೀ ನಾಗನಾಥೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವವು ಸಾಂಪ್ರದಾಯಕವಾಗಿ ನಡೆಯಿತು,ಕೋವಿಡ್ ಹಿನ್ನೆಲೆ ಸ್ಥಳೀಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.ತಾಲೂಕಿನ ಅರಕೇರಿ ಶ್ರೀ ನಾಗನಾಥೇಶ್ವರ ದೇವಾಲಯದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಬೆಳೆಗ್ಗೆ ವಿಶೇಷ ಹೋಮ ಹವನ ಹಾಗು ಗಿರಿಜಾ ಕಲ್ಯಾಣ ಆಯೋಜಿಸಲಾಗಿತ್ತು, ಮಧ್ಯಾಹ್ನ ನಡೆದಂತ ಬ್ರಹ್ಮರಥೋತ್ಸವ ಸಂಪ್ರದಾಯದಂತೆ ದೇವಾಲಯದ ಧರ್ಮಾಧಿಕಾರಿ ರಮೇಶಬಾಬು ನೇತೃತ್ವದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ರಥ ಎಳೆದು ಪುನಿತರಾದರು, ಭಕ್ತರು ಎಂದಿನಂತೆ ವಿಶೇಷ ಪೂಜಾ ಕಾರ್ಯಗಳು ಹಾಗು ಉತ್ಸವಗಳಲ್ಲಿ ಪಾಲ್ಗೋಂಡು ಭಕ್ತಿಭಾವ ಮೆರೆದರು. ರಥೋತ್ಸವ ಕಾರ್ಯಕ್ರಮದಲ್ಲಿ ಶಾಸಕ ರಮೇಶಕುಮಾರ್,ಕೋಚಿಮುಲ್ ನಿರ್ದೇಶಕ ಹನುಮೇಶ,ಪುರಸಭೆ ಸದಸ್ಯ ರಮೇಶ್ ಕುಮಾರ್,ಆದ್ಯಾತ್ಮಿಕ ಚಿಂತಕ ಬಾಬಾಅಂಕಲ್ ನಾಗರಾಜ್,ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ವಿ.ಸುಧಾಕರ್,ಸದಸ್ಯ ನಾರಯಣಸ್ವಾಮಿ,ಮುಖಂಡರಾದ ದೊರೆಸ್ವಾಮಿರೆಡ್ಡಿ,ಲಕ್ಷ್ಮೀಸಾಗರ ಆಶೋಕ್,ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವೆಂಕಟರಮಣಪ್ಪ ಸೇರಿದಂತೆ ಮುಂತಾದವರು ಇದ್ದರು. ವೇದ ಬ್ರಹ್ಮ ಉಮಾಶಂಕರ ಶರ್ಮಾ ಅವರಿಂದ ಪೂಜಾ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮದಲ್ಲಿ ಕೆರಳದ ವಾದ್ಯಯಕಾರರು ನುಡಿಸಿದ ಚಂಡಿವಾದ್ಯ ಭಕ್ತರನ್ನು ವಿಶೇಷವಾಗಿ ಆಕರ್ಷಿಸಿತು. ವರದಿ.ವಿವೇಕ್ ಎಸ್ ಶೆಟ್ಟಿ

Read More

ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿ ಮಾತ್ರ ರಾತ್ರಿಯ ಹೊತ್ತು ಪೂಜೆ, ಭಜನೆ ನಡೆಸುವ ವಿಶೇಷ ಆಚರಣೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ ನ್ಯೂಜ್ ಡೆಸ್ಕ್:-ಅನೇಕ ಧರ್ಮಗಳ,ಹಲವು ಭಾಷೆಗಳ ಆಗರ.ಭರತಭೂಮಿ ಭಾರತ ಆಧ್ಯಾತ್ಮದ ತವರು ಈ ಭೂಮಿಯಲ್ಲಿ ನಡೆಯುವ ಪ್ರತಿಯೊಂದು ಹಬ್ಬಕ್ಕೂ ಇಲ್ಲಿಯದೇ ಮಹತ್ವ,ವೈಶಿಷ್ಟತೆ. ಆಚರಣೆ ಇದೆ, ವೈವಿದ್ಯಮಯ ವಿಧಾನಗಳಿವೆ ಹಾಗೂ ಆಧ್ಯಾತ್ಮಿಕತೆಯ ಹಿನ್ನೆಲೆ ಇದೆ.ಶಿವರಾತ್ರಿಯ ಹಬ್ಬದ ಪರಿಚಯವನ್ನು ನಮಗೆ ತಿಳಿಸುತ್ತಾ ಶಿವರಾತ್ರಿಯ ಅರ್ಥವನ್ನು ತಿಳಿದುಕೊಳ್ಳುವ ಮುನ್ನ ನಾವು ಶಿವ ಪರಮಾತ್ಮನ ಸತ್ಯ ಪರಿಚಯವನ್ನು ಸ್ವಲ್ಪ ಮಾಡಿಕೊಳ್ಳೋಣ.ಜಗತ್ತಿನಲ್ಲಿ ಪರಮಾತ್ಮ ಎಂಬ ಶಬ್ದವನ್ನು ಕೇಳದವರು ಬಹುಶ: ಯಾರೂ ಇರಲಿಕ್ಕಿಲ್ಲ. ಆದರೆ ಪರಮಾತ್ಮ ಶಿವನ ಸತ್ಯ ಪರಿಚಯ ಅಥವಾ ಯಥಾರ್ಥ ಜ್ಞಾನವನ್ನು ಅರಿಯದಿರುವವರು ಬಹಳಷ್ಟು ಜನರಿದ್ದಾರೆ.ಪ್ರತಿಯೊಬ್ಬ ಮನುಷ್ಯನು ತನ್ನ ಶಾರೀರಿಕ ತಂದೆಯ ನಾಮ, ರೂಪ ಮತ್ತು ಕರ್ತವ್ಯ ಇತ್ಯಾದಿಯನ್ನು ಅರಿತಿದ್ದಾನೆ,…

Read More

ನ್ಯೂಜ್ ಡೆಸ್ಕ್:-ಕರ್ನಾಟಕದಲ್ಲಿ ಮುಂಬರುವ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಜೆಡಿಎಸ್ ಪಕ್ಷ ಪ್ರಕಟಿಸಿದೆ. ಆದರೆ ಕೇರಳದಲ್ಲಿ ನಡೆಯುವಂತ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿದೆ. ಪಕ್ಷದ ಮುಖ್ಯಸ್ಥ ದೇವೇಗೌಡ ಅವರು ಕೆರಳದ ನಾಲ್ಕು ಸ್ಥಾನಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿರುವುದಾಗಿ ಘೋಷಿಸಿದ್ದಾರೆ ಅಭ್ಯರ್ಥಿಗಳ ಪಟ್ಟಿಯನ್ನು ಸಹ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುತ್ತಾರೆ. ಕೋವಲಂ, ತರುವಾಲ್ಲಾ, ಚಿತ್ತೂರು ಮತ್ತು ಅಂಕಮಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ .ಬೆಂಗಳೂಜೆಡಿಎಸ್ ಕಚೇರಿಯಿಂದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರ ಹೆಸರಿನಲ್ಲಿ ಬಿಡುಗಡೆಮಾಡಿದ್ದಾರೆ ಇದರಲ್ಲಿನ ಮಾಹಿತಿಯಂತೆ ಕೋವಲಂ ಕ್ಷೇತ್ರದಿಂದ ಡಾ.ನೀಲಾ ಲೋಹಿತದಸ್ಸ ನಾಡರ್,ತಿರುವಲ್ಲಾದಿಂದ ಮ್ಯಾಥ್ಯೂ ಟಿ. ಥಾಮಸ್,ಚಿತ್ತೂರಿನಿಂದ ಕೆ.ಕೃಷ್ಣ ಕುಟ್ಟಿ ಮತ್ತು ಅಂಕಮಲಿಯಲ್ಲಿ ಜೋಸ್ ಥೆಟ್ಟಿ ಅವರನ್ನು ಅಖಾಡಕ್ಕಿಳಿಸಲಿದ್ದಾರೆ.ಕರ್ನಾಟಕದಲ್ಲಿ ಮುಂಬರುವ ಉಪ ಚುನಾವಣೆಗಳಿಂದ ದೂರವಿರುವುದಾಗಿ ದೇವೇಗೌಡರೇ ಹೇಳಿದ್ದರು.ಕರ್ನಾಟಕದಲ್ಲಿ ನಡೆದ ಉಪಚುನಾವಣೆ ಕುರಿತಾಗಿ ದೇವೇಗೌಡ ಪ್ರತಿಕ್ರಿಯಿಸಿ,ಉಪಚುನಾವಣೆಗಳಲ್ಲಿ ಜೆಡಿಎಸ್ ಸ್ಪರ್ಧಿಸುತ್ತಿಲ್ಲ, ಚುನಾವಾಣೆಗೆ ಮತದಾನಕ್ಕೆ ಹೋಗಲು ನಮ್ಮ ಬಳಿ ಹಣವಿಲ್ಲ.ಮುಂಬರುವ ಉಪಚುನಾವಣೆಯಲ್ಲಿ ನಾವು ಪಕ್ಷವನ್ನು ಬಲಪಡಿಸಲು ಪಕ್ಷದ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ…

Read More

ನ್ಯೂಜ್ ಡೆಸ್ಕ್: ಮಹಾಶಿವರಾತ್ರಿ ಹಬ್ಬದ ರಜೆ ಸೇರಿದಂತೆ ಬ್ಯಾಂಕುಗಳಿಗೆ ಸಾಲು ಸಾಲು ರಜೆ ಬರಲಿದ್ದು ಸಾಮಾನ್ಯ ಗ್ರಾಹಕ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ ಅವಶ್ಯಕತೆ ಇದೆ ಎನ್ನಲಾಗಿದೆ.ಮಾರ್ಚ್ 11 ಶಿವರಾತ್ರಿ ರಜೆ ಇರುತ್ತದೆ ನಂತರ ಮಾ 12 ಶುಕ್ರವಾರ ಒಂದು ದಿನ ಕಾರ್ಯನಿರ್ವಹಿಸುವ ಬ್ಯಾಂಕುಗಳು ಮಾ 13 ಎರಡನೇ ಶನಿವಾರ ಮತ್ತು ಮಾ 14 ಭಾನುವಾರ ಸೇರಿದಂತೆ ಮಾರ್ಚ್ 15 ಮತ್ತು 16 ರಂದು ಬ್ಯಾಂಕುಗಳ ಖಾಸಗೀಕರಣವನ್ನು ಪ್ರತಿಭಟಿಸಿ ಬ್ಯಾಂಕ್ ಕಾರ್ಮಿಕರ ಸಂಘಗಳು ಮುಷ್ಕರ ಹಿನ್ನೆಲೆಯಲ್ಲಿ ಸತತ ನಾಲ್ಕು ದಿನಗಳವರೆಗೆ ಬ್ಯಾಂಕುಗಳನ್ನು ಮುಚ್ಚಲಾಗುವುದು ಹಾಗಾಗಿ ಸಾಂಪ್ರದಾಯಿಕ ವಹಿವಾಟು ನಡೆಸುವಂತ ಗ್ರಾಹಕರು ಸಾದ್ಯವಾದಷ್ಟುಮಾ10 ಮತ್ತು 12 ರಂದು ತಮ್ಮ ಹಣಕಾಸಿನ ವಹಿವಾಟಿಗೆ ಮುಂಚಿತವಾಗಿ ಯೋಜಿಸುವಂತೆ ಗ್ರಾಹಕರಿಗೆ ಕೆಲ ಬ್ಯಾಂಕುಗಳು ಸೂಚಿಸಿದಿಯಂತೆ.ಇಂಟರ್ ನೆಟ್ ಹಾಗು ಆನ್ ಲೈನ್ ವಹಿವಾಟು ದಾರರಿಗೆ ಯಾವುದೆ ತೊಂದರೆ ಆಗದು ಎನ್ನಲಾಗಿದೆ

Read More

ಕೋಚಿಮುಲ್ ವಿಭಜಿತ ಕೋಲಾರ ಜಿಲ್ಲೆಗೆ ಕಾಮಧೇನು ಶ್ರೀನಿವಾಸಪುರ ಮಾವು ಬೆಳೆಗಾರರ ಉತ್ಪಾದಕರ ನಿಯಮಿತ ಸಂಸ್ಥೆ ಕಚೇರಿ ಉದ್ಘಾಟನೆ. ಶ್ರೀನಿವಾಸಪುರ:-ಮಾವು ಮಂಡಳಿಯಲ್ಲಿ ಮಾವು ಬೆಳೆಗಾರರಿಗೆ ಅನವು ಮಾಡಿಕೊಡಲು ಆರ್ಥಿಕ ತೊಂದರೆ ಇದ್ದು ರಾಜ್ಯಸರ್ಕಾರ ಬಡ್ಜೆಟ್ ನಂತರ ಮಂಡಳಿಗೆ ಅನುಧಾನ ಬಿಡುಗಡೆಯಾಗುವ ಭರವಸೆ ಇದೆ ನಂತರ ಬೆಳಗಾರರಿಗೆ ಸಾನುಕೂಲವಾಗಿ ಮಾವು ಕೊಯ್ಲು ಮಾಡುವಂತ ಪರಿಕರಗಳು,ತಾಂತ್ರಿಕ ತರಬೇತಿಗಳು, ಹಣ್ಣು ಸಾಗಿಸಲು ಕ್ರೇಟ್ ಗಳನ್ನು ಕೊಡುವ ಬಗ್ಗೆ ಚಿಂತನೆ ಮಾವು ಮಂಡಳಿಗೆ ಇದೆ ಎಂದು ಮಾವು ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್ ಹೇಳಿದರು ಅವರು ಇಂದು ಶ್ರೀನಿವಾಸಪುರ ಮಾವು ಬೆಳೆಗಾರರ ಉತ್ಪಾದಕರ ನಿಯಮಿತ ಸಂಸ್ಥೆಯನ್ನು ಭೈರವೇಶ್ವರ ವಿದ್ಯಾನಿಕೇತನ ಆವರಣದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಸಂಸ್ಥೆಯ ಉದ್ದೇಶ ಉನ್ನತವಾಗಿದ್ದು ಜೊತೆಗೆ ಸಂಸ್ಥೆಗೆ ಮಾರುಕಟ್ಟೆ ಹಾಗು ತಾಂತ್ರಿಕ ಸಲಹೆಗಾಗಿ ಬೆಂಗಳೂರು ಗಾಂದಿ ಕೃಷಿ ವಿಜ್ಙಾನ ಕೇಂದ್ರದ ತಜ್ಙರು ಎಲ್ಲಾ ರಿತಿಯ ಸಹಕಾರ ನೀಡಲು ಇರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.ಮಾವು ಮಂಡಳಿ ಆರ್ಥಿಕ ಚೈತನ್ಯಗೊಳಿಸಿ ಆ ಮೂಲಕ ಮಾವು ಬೆಳೆಗಾರರಿಗೆ ತಾಂತ್ರಿಕವಾಗಿ ಪರಣಿತರನ್ನಾಗಿಸಲು…

Read More