ಶ್ರೀನಿವಾಸಪುರ:ವಿದ್ಯಾರ್ಥಿ ಜೀವನ ಗೋಲ್ಡನ್ ಲೈಫ್ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಸಾಮಜಿಕವಾಗಿ ಜವಬ್ದಾರಿಯುತವಾದಂತ ಹೆಜ್ಜೆ ಇಟ್ಟು ಉತ್ತಮ ಭವಿಷ್ಯತ್ತು ರೂಪಿಸಿಕೊಳ್ಳುವಂತೆ ಮಾಜಿ ಶಾಸಕ ವೆಂಕಟಶಿವಾರೆಡ್ದಿ ಹೇಳಿದರು ಅವರು ತಾಲೂಕಿನ ನೆಲವಂಕಿ ಪಂಚಾಯಿತಿಯ ಗೋರವಿಮಾಕಲಹಳ್ಳಿ ಗ್ರಾಮದಲ್ಲಿ ಬಾಲಕೀಯರ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ಎನ್.ಎಸ್.ಎಸ್ ಶಿಭಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ವಿದ್ಯಾರ್ಥಿಗಳು ಶೈಕ್ಷಣಕ ಕಲಿಕೆಗೆ ಸಮಯ ನಿಗದಿಮಾಡಿದಂತೆ ಸಾಮಾಜಿಕ ಕಳಕಳಿಯಿಂದ ತಮ್ಮ ಕೈಲಾದ ಸೇವೆಯನ್ನು ಗೌರವಿತವಾಗಿ ಸಮಾಜದಲ್ಲಿ ಸಲ್ಲಿಸುವಂತೆ ಹೇಳಿದರು.ದುಬಾರಿಯಾಗುತ್ತಿದೆ ಶಿಕ್ಷಣ ವ್ಯವಸ್ಥೆಭಾರತದಲ್ಲಿ ಶಿಕ್ಷಣ ವ್ಯವಸ್ಥೆ ದುಬಾರಿಯಾಗುತ್ತಿದೆ ಎಂದು ವಿಷಾಧಿಸಿದ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪೋಷಕರ ಪರಿಸ್ಥಿಯನ್ನು ಹತ್ತಿರದಿಂದ ಬಲ್ಲವನಾಗಿದ್ದು ಬೆಂಗಳೂರ0ತ ಮಹಾನಗರಗಳಲ್ಲಿ ಖಾಸಗಿ ಶಾಲಾ ಕಾಲೇಜಿಗಳಲ್ಲಿ ದುಬಾರಿ ಫೀಜು ಕಟ್ಟಿ ಜೊತೆಗೆ ಹಾಸ್ಟಲ್ ಹಾಗೆ ಪೀಜಿಗಳಿಗೂ ಹಣ ಕಟ್ಟುವುದು ಇಂದಿನ ದಿನಗಳಲ್ಲಿ ದುಬಾರಿ ಎಂದರು.ಇವೆಲ್ಲವನ್ನು ಅರಿತ ನಾನು ಎರಡು ದಶಕಗಳ ಹಿಂದೆಯೇ ನಾನು ಅಧಿಕಾರದಲ್ಲಿದ್ದಾಗ ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಶ್ರೀನಿವಾಸಪುರ ಪಟ್ಟಣದಲ್ಲಿ ಬಹುತೇಕ ಸರ್ಕಾರದ ಪದವಿ,ಪದವಿ ಪೂರ್ವ…
Author: admin
ನ್ಯೂಜ್ ಡೆಸ್ಕ್:ಮೆಗಾಸ್ಟಾರ್ ಚಿರಂಜಿವಿ ನಟನೆಯ ಬಹುನೀರಿಕ್ಷಿತ Godfather:‘ಗಾಡ್ ಫಾದರ್’ ಸಿನಿಮಾ ಸೂಪರ್ ಹಿಟ್ ಆಗಿದೆ ಅಭಿಮಾನಿಗಳ ವಿಮರ್ಶೆ ಮೂಲಕ ಅಭಿಪ್ರಾಯ ತಿಳಿಸಿದ ‘ಮೆಗಾಸ್ಟಾರ್’ ಫ್ಯಾನ್ಸ್‘ಚಿರಂಜೀವಿ ಮತ್ತೆ ಫಾರ್ಮ್ ನಲ್ಲಿ ನಟಿಸಿ.ನಯನತಾರಾ ಹಾಗೂ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ನಟನೆಯ ಸೂಪರ್ ಆಗಿದೆ’ ಎಂದು ‘ಗಾಡ್ ಫಾದರ್’ ನೋಡಿದ ಚಿರು ಅಭಿಮಾನಿಗಳು ಪ್ರೇಕ್ಷಕರು ಹೊಗಳುತ್ತಿದ್ದಾರೆ.‘ಮೆಗಾಸ್ಟಾರ್’ ಚಿರಂಜೀವಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅವರ ಆನಂದಕ್ಕೆ ಪಾರವೇ ಇಲ್ಲ ಚಿರು ನಟನೆಯ ‘ಗಾಡ್ ಫಾದರ್’ ಸಿನಿಮಾ 2022ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಸ್ಥಾನ ಪಡೆದ ಸಿನಿಮಾ ವಿಶ್ವಾದ್ಯಂತ ತೆರೆಕಂಡಿದೆ. ಮೊದಲ ದಿನ ಮೊದಲ ಶೋ ವನ್ನು ಫ್ಯಾನ್ಸ್ ಮುಗಿಬಿದ್ದು ನೋಡಿದ್ದಾರೆ.ಸಿನಿಮಾದಲ್ಲಿ ಸಲ್ಮಾನ್ ಖಾನ್ ನಟಿಸಿರುವುದು ವಿಶೇಷ. ಹಾಗಾಗಿ ಹಿಂದಿಗೂ ಡಬ್ ಆಗಿ ಈ ಸಿನಿಮಾ ತೆರೆಕಂಡಿದೆ. ದಕ್ಷಿಣ ಭಾರತದ ಜೊತೆಗೆ ಉತ್ತರ ಭಾರತದ ಸಿನಿಪ್ರಿಯರ ವಲಯದಲ್ಲೂ ಈ ಸಿನಿಮಾ ಧೂಳೆಬ್ಬಿಸುತ್ತಿದೆ. ಅಭಿಮಾನಿಗಳು ಟ್ವಿಟರ್ ಮೂಲಕ ‘ಗಾಡ್ ಫಾದರ್’ ಚಿತ್ರದ ವಿಮರ್ಶೆ (Godfather Twitter Review)…
ಶ್ರೀನಿವಾಸಪುರ:KSRTC ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯ ಪರಿಣಾಮ ಕೋಲಾರದಿಂದ ಶ್ರೀನಿವಾಸಪುರಕ್ಕೆ ಬರಲು ತಡರಾತ್ರಿ ಬಸ್ ಇಲ್ಲದೆ ವಿದ್ಯಾರ್ಥಿನಿಯರು ಕೋಲಾರ ಬಸ್ ನಿಲ್ದಾಣದಲ್ಲಿ ಪರಿದಾಡಿದ ಘಟನೆ ನಡೆದಿರುತ್ತದೆ.ಕೊನೆಗೆ ಶ್ರೀನಿವಾಸಪುರದ ವ್ಯಕ್ತಿಯೊಬ್ಬರು ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿ ಮದ್ಯರಾತ್ರಿ ಬಂದಂತ ಬಸ್ ನಲ್ಲಿ ಶ್ರೀನಿವಾಸಪುರಕ್ಕೆ ಕರೆತಂದಿರುತ್ತಾರೆ. ಕರೆತಂದ ವ್ಯಕ್ತಿ ನಡೆದ ಘಟನೆಯನ್ನು ವಿವರಿಸಿ ಜನಪ್ರತಿನಿಧಿಗಳಿಗೆ ವ್ಯಾಟ್ಸಾಪ್ ಮೆಸೆಜ್ ಕಳಿಸಿ ಈ ಸಮಯದಲ್ಲಿ ಬಸ್ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.ಶ್ರೀನಿವಾಸಪುರದ ಇಬ್ಬರು ವಿದ್ಯಾರ್ಥಿನಿಯರು ಹಾಗು ಇಬ್ಬರು ವಿದ್ಯಾರ್ಥಿಗಳು ಪ್ಯಾರಾಮೆಡಿಕಲ್ ಶಿಕ್ಷಣದ ಟ್ರೈನಿಂಗ್ ಸಂಬಂದ ಬೆಂಗಳೂರಿಗೆ ಹೋಗಿ ಬರುವಾಗ ತಡವಾಗಿದೆ ಸುಮಾರು ರಾತ್ರಿ 9:30 ಗಂಟೆಗೆ ಕೋಲಾರ KSRTC ಬಸ್ ನಿಲ್ದಾಣಕ್ಕೆ ಬಂದಿದ್ದಾರೆ ಆಗಷ್ಟೆ 15-20 ನಿಮಿಷಕ್ಕೆ ಮುಂಚೆ ಕೋಲಾರ ದಿಂದ ಶ್ರೀನಿವಾಸಪುರಕ್ಕೆ ಬಸ್ ಹೋರಟು ಹೋಗಿದೆ ಇನ್ನೂ ಶ್ರೀನಿವಾಸಪುರಕ್ಕೆ ಹೋಗಲು ಬಸ್ ಇಲ್ಲ ಎಂದು ಕೋಲಾರ ಬಸ್ ನಿಲ್ದಾಣದಲ್ಲಿ KSRTC ಸಿಬ್ಬಂದಿ ಹೇಳಿದಾರೆ ಇದರಿಂದ ಆತಂಕ ಗೊಂಡ ವಿದ್ಯಾರ್ಥಿಗಳು ಭಿತಿಯಿಂದ ಬಸ್ ನಿಲ್ದಾಣದಲ್ಲಿ ಕುಳಿತು ಚಡಪಡಿಸುತ್ತಿದ್ದಾರೆ ಇವರ ಚಡಪಡಿಕೆ…
ನ್ಯೂಜ್ ಡೆಸ್ಕ್: ತಿರುಮಲವಾಸ ಶ್ರೀ ವೆಂಕಟೇಶ್ವರ ಗರುಡ ವಾಹನ ಸೇವೆಯನ್ನು ಶ್ರೀನಿವಾಸನ ಭಕ್ತರು ಕಣ್ಣುಗಳಿಗೆ ಹಬ್ಬವೆಂದು ಆನಂದಿಸುತ್ತಾರೆ ಕಳೆದ ಎರಡು ವರ್ಷಗಳ ನಂತರ ತಿರುಮಲ ಬೆಟ್ಟದ ಮೇಲೆ ಭಕ್ತಾದಿಗಳ ನಡುವೆ ನಡೆಸಲಾದ ಶ್ರೀ ವೆಂಕಟೇಶ್ವರನ ವೈಭವೊಪೇತವಾಗಿ ನಡೆದ ಗರುಡ ವಾಹನ ಸೇವೆಯನ್ನು ಎರಡು ಲಕ್ಷ ಜನ ಕಣ್ತುಂಬಿಕೊಂಡರು.ಬೆಳೆಗ್ಗೆ ವೆಂಕಟೇಶ್ವರನಿಗೆ ಮೋಹಿನಿ ಅಲಂಕಾರ ಮಾಡಲಾದ ಮಲಯಪ್ಪನನ್ನು ರಥ ಬೀದಿಗಳಲ್ಲಿ ಭಕ್ತಕೋಟಿ ವೀಕ್ಷಿಸಿದರು. ಮಧ್ಯಾಹ್ನದ ನಂತರ ರಂಗನಾಯಕರ ಮಂಟಪದಲ್ಲಿ ಶ್ರೀ ವೆಂಕಟೇಶ್ವರನಿಗೆ ಬೃಹತ್ ಆಭರಣಗಳಾದ ರೇಷ್ಮೆ ವಸ್ತ್ರಗಳಿಂದ,ವಜ್ರ,ಚಿನ್ನದ ಆಭರಣಗಳಿಂದ ಅಲಂಕರಿಸಿ ವಜ್ರ ಖಚಿತವಾದ ಶಂಕು ಚಕ್ರಗಳಿಂದ ಅಲಂಕಾರ ಮಾಡಿದ ದೇವ ದೇವ ಶ್ರೀನಿವಾಸನನ್ನು ಅರ್ಚಕರು ವಾಹನ ಮಂಟಪಕ್ಕೆ ತಂದು ಗರುಡ ವಾಹನದ ಮೇಲೆ ಪ್ರತಿಷ್ಠಾಪಿಸಿ .ಶನಿವಾರ ಸಂಜೆ 7 ಗಂಟೆಗೆ ಗರುಡ ವಾಹನ ಸೇವೆ ಆರಂಭವಾಗಿ ರಾತ್ರಿ 11 ಗಂಟೆಯವರಿಗೂ ನಡೆಯಿತು. ಗರುಡ ಸೇವೆ ಹಾದು ಹೋಗುವ ರಥ ಬೀದಿಗಳಲ್ಲಿ ಪೂರ್ವ ಯೋಜನೆಯಂತೆ ನಿಗದಿ ಮಾಡಲಾದ ಗ್ಯಾಲರಿಗಳಲ್ಲಿಂದಲೇ ಭಕ್ತರು ಗರುಡವಾಹನದ ಮೇಲೆ ಬಂದಂತ ಶ್ರೀನಿವಾಸನನ್ನು…
ಶ್ರೀನಿವಾಸಪುರ:ದೇವರ ಪೂಜೆ ಹವನ ಹೋಮ ನಮ್ಮ ಹಿರಿಕರು ಹಾಕಿಕೊಟ್ಟ ಸಂಸ್ಕೃತಿ ಎಂದು ಶ್ರೀ ಅನ್ನುಪೂರ್ಣೆಶ್ವರಿ ಮಹಿಳಾ ಮಂಡಳಿ ಪ್ರತಿನಿಧಿಗಳು ಹೇಳುತ್ತಾರೆ ಅವರು ನವರಾತ್ರಿ ಅಂಗವಾಗಿ ತಮ್ಮ ಮಂಡಳಿಯಲ್ಲಿ ದಸರ ಬೊಂಬೆ ಕೂರಿಸಿ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಿ ಒಂಬತ್ತು ದಿನಗಳ ಕಾಲ ಸಂಪ್ರದಾಯದಂತೆ ನವದುರ್ಗೆ ವೈಭವ ಎನ್ನುವ ರಿತಿಯಲ್ಲಿ ಪ್ರತಿದಿನ ವೈಶಿಷ್ಠವಾಗಿ ವಿವಿಧ ರೂಪದಲ್ಲಿ ಅಲಂಕರಿಸಿ ಪೂಜೆ ಸಲ್ಲಿಸುತ್ತಾರೆ ಅದರಂತೆ ಬಾಲತ್ರಿಪುರ ಸುಂದರಿ ದೇವಿ ರೂಪದಲ್ಲೂ ಪೂಜೆ ಸಲ್ಲಿಸುವುದು ಪದ್ದತಿ ಎಂದು ಮಹಿಳಾ ಮಂಡಳಿ ಪ್ರತಿನಿಧಿ ವಿನಿತಾಶ್ರೀನಿವಾಸನ್ ಹೇಳುತ್ತಾರೆ.ದುರ್ಗಾದೇವಿಯನ್ನು ತ್ರಿಪುರಸುಂದರಿ, ಬಾಲಾತ್ರಿಪುರ ಸುಂದರಿ, ಮತ್ತು ತ್ರಿಪುರ ಭೈರವಿ ಎಂಬ ಮೂರು ರೂಪಗಳಲ್ಲಿ ಪೂಜಿಸಲಾಗುತ್ತದೆ ತ್ರಿಪುರ ಬಾಲಾ ಸುಂದರಿ ಯುವ ಕನ್ಯೆಯ ದೇವತೆಯ ಪ್ರತಿನಿಧಿಯಾಗಿ ಸಣ್ಣ ವೈಯಸ್ಸಿನ ಹೆಣ್ಮಕ್ಕಳನ್ನು ಕೂರಿಸಿ ಅಲಂಕಾರ ಮಾಡಿ ಬಾಲ ತ್ರಿಪುರ ಸುಂದರಿ ಪ್ರತೀಕ ಎಂದು ಪೂಜೆ ಸಲ್ಲಿಸುವುದು ಹಿರಿಯರು ಹಾಕಿಕೊಟ್ಟಂತ ಆದ್ಯಾತ್ಮಿಕ ಸಂಪ್ರದಾಯ ಎಂದು ವಿವರಿಸುತ್ತಾರೆ.ಅದರಂತೆ ವೈಶಿಷ್ಠತೆಯಿಂದ ಅಲಂಕಾರ ಮಾಡಿದ ಹೆಣ್ಮಗುವನ್ನು ಕೂರಿಸಿ ಆಕೆಯನ್ನು ದೇವರೆಂದು ಪೂಜಿಸಲಾಗುತ್ತದೆ ಹಿರಿಯರಾದಿಯಾಗಿ ಆಕೆಗೆ…
ಶ್ರೀನಿವಾಸಪುರ:ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಿದೆ ಅವರು ಮನಸ್ಸು ಮಾಡಿದರೆ ಸಮಾಜದ ದಿಕ್ಕು ದಸೆ ಬದಲಿಸಬಹುದು ಎಂದು ಸಂಸದ ಮುನಿಸ್ವಾಮಿ ಹೇಳಿದರು ಅವರು ತಾಲೂಕು ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಆಯೋಜಿಸಿದ್ದ ತಾಲ್ಲೂಕು ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.ಶಿಕ್ಷಣ ವ್ಯವಸ್ಥೆಗೆ ಹೆಚ್ಚಿನ ಮಹತ್ವವನ್ನು ಮೋದಿ ಸರ್ಕಾರ ನೀಡಿದೆ ವಿಶೇಷವಾಗಿ ಪ್ರಾಥಮಿಕ ಹಂತದ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ದೇಶದ ಭಾವಿ ಪ್ರಜೆಗಳ ಭವಿಷ್ಯ ಉಜ್ವಲ ಗೊಳಿಸುವ ನಿಟ್ಟಿನಲ್ಲಿ ಸರ್ಕಾರ ನಿಲವು ಇದೆ ಎಂದರು ಶಿಕ್ಷಕರು ಸರ್ಕಾರಿ ಶಾಲೆಯ ಮಕ್ಕಳ ಉಜ್ವಲ ಭವಿಷ್ಯತ್ ರೂಪಿಸಲು ಖಾಸಗಿ ಶಾಲೆಗಳಿಗೆ ಪೈಪೋಟಿಯಾಗಿ ಹಚ್ಚಿನ ಒತ್ತುಕೊಟ್ಟು ಕಾರ್ಯನಿರ್ವಹಿಸುವಂತೆ ಹೇಳಿದರು.ಪ್ರತಿ ತಾಲ್ಲೂಕಿನಲ್ಲೂ ಗುರುಭವನ ನಿರ್ಮಿಸಲು ಬೆಂಬಲ ನೀಡುವುದಾಗಿ ಹೇಳಿದ ಅವರು ಶಿಕ್ಷಕರ ಸಂಘಗಳಲ್ಲಿನ ಗುಂಪುಗಾರಿಕೆ ಬಿಟ್ಟು ಒಮ್ಮತವಾಗಿ ಮುಂದೆ ಬಂದರೆ ಸಹಕಾರ ನೀಡುತ್ತೇನೆ ಎಂದರು.ಅಕ್ಟೋಬರ್ 2 ಗಾಂಧಿ ಜಯಂತಿಯಂದು ಕೋಲಾರದಲ್ಲಿ ಆಯೋಜಿಸಿರುವ ರಕ್ತದಾನ ಶಿಭಿರದಲ್ಲಿ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ…
ಶ್ರೀನಿವಾಸಪುರ: ಪುರಸಭೆಯ ವಿಶೇಷ ಸಭೆಯಲ್ಲಿ ಸದಸ್ಯರು ಕೈ ಕೈ ಮಿಲಾಯಿಸಿಕೊಂಡು ಟೆಬಲ್ ಚೆರ್ ಹಿಡಿದುಕೊಂಡು ಬಡಿದಾಡಿಕೊಳ್ಳುವಷ್ಟು ಮಟ್ಟಕ್ಕೆ ಹೋದಾಗ ಪೋಲಿಸರು ಮದ್ಯಪ್ರವೇಶಸಿ ಸದಸ್ಯರನ್ನು ಸಮಾಧಾನ ಪಡಿಸಿದ ಘಟನೆ ಮಂಗಳವಾರ ನಡೆಯಿತು. ಪುರಸಭೆ ಅಧ್ಯಕ್ಷೆ ಲಲಿತಾಶ್ರೀನಿವಾಸ್ ಅಧ್ಯಕ್ಷತೆಯಲ್ಲಿ 11 ಗಂಟೆಗೆ ವಿಶೇಷ ಸಭೆ ಕರೆಯಲಾಗಿತ್ತು ಆದರೆ ಅಧ್ಯಕ್ಷೆ ಲಲಿತಾಶ್ರೀನಿವಾಸ ಅನಾರೋಗ್ಯ ನಿಯಮಿತ ಸಭೆಗೆ ಬರಲು ಸಾದ್ಯವಾಗುವುದಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿಗೆ ವ್ಯಾಟ್ಸಾಪ್ ಮೆಸೆಜ್ ಕಳಿಸಿದ್ದು ಈ ಬಗ್ಗೆ ಮುಖ್ಯಾಧಿಕಾರಿ ಜಯರಾಮ್ ಅಧ್ಯಕ್ಷರು ಆನಾರೋಗ್ಯದ ಹಿನ್ನಲೆಯಲ್ಲಿ ಬರಲು ಸಾದ್ಯವಾಗುವುದಿಲ್ಲ ಎನ್ನುತ್ತಿದ್ದಂತೆ ಸಭೆಯಲ್ಲಿದ್ದ ವಿರೋಧ ಪಕ್ಷದ ಜೆಡಿಎಸ್ ಸದಸ್ಯರು ಪ್ರತಿಭಟನೆಗೆ ಮುಂದಾದರು ಇದನ್ನು ಕಾಂಗ್ರೆಸ್ ವಿರೋಧಿಸಿದಾಗ ಸಭೆಯಲ್ಲಿ ಗದ್ದಲದ ವಾತವರಣ ನಿರ್ಮಾಣವಾಯಿತು ನಂತರದಲ್ಲಿ ಅಧ್ಯಕ್ಷೆ ಲಲಿತಾ ಶ್ರೀನಿವಾಸ್ ಪುರಸಭೆಗೆ ಮಧ್ಯಾನ್ಹ 1 ಗಂಟೆಗೆ ಆಗಮಿಸಿ ಸಭೆ ಮಾಡಲು ಮುಂದಾದಾಗ ಜೆಡಿಎಸ್ ಸದಸ್ಯರು ಸಭೆ ನಡೆಯಬಾರದು ಎಂದು ಪಟ್ಟು ಹಿಡಿದರು ಇದನ್ನು ಕಾಂಗ್ರೆಸ್ ಸದಸ್ಯರು ವಿರೋಧಿಸಿದಾಗ ಎರಡು ಕಡೆಯವರಿಂದ ಮಾತಿಗೆ ಮಾತು ಬೆಳೆದು ಟೆಬಲ್ ತಳ್ಳಾಡಿ ವೈಯುಕ್ತಿಕವಾಗಿ…
ಶ್ರೀನಿವಾಸಪುರ: ಪೇ ಸಿ ಎಂ (PYA CM) ಅಂದ್ರೆ ಪೇ ಟೂ ಕಾಂಗ್ರೆಸ್ ಮೇಡಂ (PAY TO CONGRESS MADAMA) ಎಂದು ಕಾಂಗ್ರೆಸ್ ಮುಖಂಡರ ವಿರುದ್ದ ವಿಧಾನಪರಿಷತ್ ಮುಖ್ಯ ಸಚೇತಕ ಯೈ.ಎ.ನಾರಯಣಸ್ವಾಮಿ ಹೇಳಿದರು. ಅವರು ಶ್ರೀನಿವಾಸಪುರ ತಾಲೂಕಿನ ಯಚ್ಚನಹಳ್ಳಿಯಲ್ಲಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿಕಾಂಗ್ರೆಸ್ ನವರು 57 ವರ್ಷಗಳಿಂದ ಖಜಾನೆಯನ್ನು ಲೂಠಿ ಮಾಡಿ ಜೇಬು ತುಂಬಿಸಿಕೊಂಡು ಹಣವನ್ನು ಹೈಕಮಾಂಡ್ ಖಜಾನೆ ತುಂಬಿಸುವ ಕೆಲಸ ಮಾಡಿದ್ದಾರೆ ಹಲವಾರು ಯೋಜನೆಗಳಲ್ಲಿ 100 ರೂಪಾಯಿ ಸ್ಕಿಂ ನಲ್ಲಿ 15 ರೂಪಾಯಿ ಮಾತ್ರ ಗ್ರಾಮೀಣ ಜನತೆಗೆ ಸಿಗುತಿತ್ತು ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿಯೇ ಹೇಳಿಕೆ ನೀಡಿದ್ದರು,ಇತ್ತಿಚಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಾರ್ಯಕ್ರಮವೊಂದರಲ್ಲಿ 4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡದ್ದಿವೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ ಜನತೆಯೇ ತಿರ್ಮಾನ ಮಾಡಬೇಕು ಯಾವ ಪಕ್ಷದವರು ಹೇಗೆ ಕಮಿಷನ್ ತಗೊಂಡು ದುಡ್ಡು ಮಾಡಿದ್ದಾರೆ ಅನ್ನುವುದನ್ನು ಅವರೇ ಒಪ್ಪಿಕೊಂಡಿದ್ದಾರೆ ಇಂತಹವರು ಜನಸಾಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ದ ಕೀಳು ಮಟ್ಟದ ಆರೋಪ ಮಾಡುತ್ತಾರೆ ಎಂದು…
ಶ್ರೀನಿವಾಸಪುರ: ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಮಾರಕವಾಗಿದೆ ಕಳೆದ 40 ವರ್ಷಗಳಿಂದ ಇಲ್ಲಿನ ಜನರನ್ನು ಮೋಸಮಾಡಿ ರಾಜಕೀಯ ಮಾಡಿಕೊಂಡು ಬರಲಾಗುತ್ತಿದೆ ಜನರ ಬದುಕಿಗೆ ಸಾಮಾಜಿಕ ಆರ್ಥಿಕ ಬದ್ರತೆ ಒದಗಿಸಲು ಸಾದ್ಯವಾಗದ ರಾಜಕಾರಣ ನಡೆಯುತ್ತಿದೆ ಎಂದು ಗುಂಜೂರುಶ್ರೀನಿವಾಸರೆಡ್ದಿ ವಿಷಾದ ವ್ಯಕ್ತಪಡಿಸಿದರು.ಅವರು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಮುದುವಾಡಿ ತಾಲೂಕುಪಂಚಾಯಿತಿ ಕ್ಷೇತ್ರದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗು ಜೆಡಿಎಸ್ ಪಕ್ಷದ ಪ್ರಭಾವಿ ಯುವ ಮುಖಂಡ ಮಂಜುನಾಥ್ ಹಾಗು ಗಟ್ಟಹಳ್ಳಿ ವಿಶ್ವನಾಥ್ ಅವರನ್ನು ತಮ್ಮ ಬಣಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು. ಮಹಿಳೆಯರಿಗೆ ಕೌಶಲ್ಯ ಆಧಾರಿತ ಸ್ವಾಲಂಬನೆ ಬದುಕು ಕಟ್ಟಿಕೊಡಬೇಕಾದ ಇಲ್ಲಿನ ಆಡಳಿತಾರೂಡ ರಾಜಕಾರಣಿ ಡಿಸಿಸಿ ಬ್ಯಾಂಕ್ ಸಾಲ ನಿಡುತ್ತೇನೆ ಎಂದು ಜನರನ್ನು ಸೇರಿಸಿ ಮತಯಾಚಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಾನು ಯಾವುದೇ ಕಾರಣಕ್ಕೂ ಕ್ಷೇತ್ರ ಬಿಟ್ಟು ಹೋಗುವನಲ್ಲ ಇಲ್ಲಿನ ರಾಜಕೀಯಕ್ಕೆ ಹೊಸ ಆಯಾಮ ನೀಡಲು ಬಂದಿರುವುದಾಗಿ ಸ್ಪಷ್ಟ ಪಡಿಸಿದರು. ಗುಂಜೂರುಶ್ರೀನಿವಾಸರೆಡ್ದಿ ಬಣ ಸೇರ್ಪಡೆಯಾದ ಮಂಜುನಾಥ ಮಾತನಾಡಿ ಕ್ಷೇತ್ರದಲ್ಲಿ ನಾಯಕತ್ವದ ಕೊರತೆ ಇದೆ ಇದುವರಿಗೂ ನಡೆಯುತ್ತಿದ್ದ ಸಾಂಪ್ರದಾಯಿಕ ರಾಜಕಾರಣಕ್ಕೆ…
ನ್ಯೂಜ್ ಡೆಸ್ಕ್:ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಮೇರುನಟ ಕನ್ನಡಿಗರು ಮರೆಯದಮಾಣಿಕ್ಯ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜನುಮದಿನ ಸೆಪ್ಟೆಂಬರ್ 18 ರಂದು, ಅವರ ಜನುಮದಿನವನ್ನು ವಿನೂತನವಾಗಿ ಆಚರಿಸಲು ಅವರ ಅಭಿಮಾನಿಗಳು ಸಿದ್ದತೆ ಮಾಡಿಕೊಂಡಿದ್ದಾರೆ.ಡಾ.ವಿಷ್ಣುವರ್ಧನ್ ಅವರ ಡೈಲಾಗ್ಸ್, ಖದರ್ ಲುಕ್, ಕೈ ಎತ್ತಿ ಖಡ್ಗ ತಿರುಗುಸುತ್ತಿದ್ದ ಶೈಲಿ, ಅವರ ಡ್ಯಾನ್ಸ್ ಇಂದಿಗೂ ಕರುನಾಡಿನ ಚಿತ್ರರಸಿಕರು ಇನ್ನೂ ಮರೆತಿಲ್ಲ ಕಣ್ಣ ಮುಂದೆ ಹಾಗೆಯೇ ಇದೆ.ಡಾ.ವಿಷ್ಣುವರ್ಧನ್ ಅವರು ಸಿನಿಮಾರಂಗಕ್ಕೆ ಬಂದು ಇದೇ ವರ್ಷದ ಡಿಸೆಂಬರ್ 29 ರಂದು 50 ವರ್ಷಗಳಾಗಲಿದೆ. ಅದೇ ರೀತಿ ಇದೇ ತಿಂಗಳ 18 ರಂದು ವಿಷ್ಣುವರ್ಧನ್ ಅವರ ಹುಟ್ಟು ಹಬ್ಬವಿದೆ.72 ವರ್ಷದ ಜಯಂತೋತ್ಸವ ಆಚರಿಸುವ ನಿಟ್ಟಿನಲ್ಲಿ ಈ ಎರಡು ಸಂಭ್ರಮವನ್ನು ಸಡಗರ ಸಂಭ್ರಮದಿಂದ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.ಸೆಪ್ಟೆಂಬರ್ 18ರಂದು ಬೆಂಗಳೂರಿನಲ್ಲಿರುವ ಡಾ.ವಿಷ್ಣು ಪುಣ್ಯಭೂಮಿಯ ಬಳಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ನಿರೀಕ್ಷೆಯಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸಾಕಷ್ಟು ಪ್ರಚಾರ ನಡೆದಿದೆ. ಡಾ.ವಿಷ್ಣುವರ್ಧನ್ 72 ನೇ ಜಯಂತೋತ್ಸವ ಕಟೌಟ್ ಜಾತ್ರೆ ಕುರಿತು ವಿಷ್ಣು…