ಶ್ರೀನಿವಾಸಪುರ:-ಕೇಂದ್ರ ಸರ್ಕಾರ ಆದಿ ಜಾಂಭವಂತ ಜಯಂತಿಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಘೋಷಣೆ ಮಾಡುವಂತೆ ಎಂದು ಮಾದಿಗ ದಂಡೋರ ಸಂಘಟನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ದೇವರಾಜ್ ಒತ್ತಾಯಿಸಿರುತ್ತಾರೆ.ಅವರು ಶ್ರೀನಿವಾಸಪುರದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಆಯೋಜಿಸಿದ್ದ ಶ್ರೀ ಆದಿ ಜಾಂಭವಂತಸ್ವಾಮಿ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆದಿ ಜಾಂಭವಂತ ತಮ್ಮ ಹಿರಿತನ ಹಾಗೂ ಸಮದೃಷ್ಟಿಯಿಂದ ಸಮಾಜದ ಎಲ್ಲ ವರ್ಗದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರ ಸ್ಮರಣೆಯಿಂದ ಮಾನವ ಇತಿಹಾಸದ ದರ್ಶನವಾಗುತ್ತದೆ ಎಂದರು.ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸಬೇಕು. ಸದಾಶಿವ ಆಯೋಗದ ವರದಿಯನ್ನು ತಕ್ಷಣ ಜಾರಿಗೆ ತರಬೇಕು. ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಈಗಾಗಲೆ ಅತ್ಯಂತ ಹಿಂದುಳಿದಿರುವ ಈ ಸಮುದಾಯ ಇನ್ನಷ್ಟು ಕಷ್ಟ-ಕೋಟಲೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.ಸಂಘಟನೆಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ರಾಮು ಮಾತನಾಡಿ, ಮಾದಿಗ ಸಮುದಾಯ ಶೈಕ್ಷಣಿಕವಾಗಿ ಮುಂದೆ ಬರಬೇಕು. ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಪ್ರೋತ್ಸಾಹ ನೀಡಬೇಕು. ಶಿಕ್ಷಣ ಇಲ್ಲದೆ ಸಂಘಟನೆ ಹಾಗೂ ಹೋರಾಟ ಸಾಧ್ಯವಾಗುವುದಿಲ್ಲ.…
Author: admin
ಸಿಬ್ಬಂದಿಯೇ ಇಲ್ಲ ಕಚೇರಿ ಬಿಕೋ ಎನ್ನುತ್ತಿದೆಕನಿಷ್ಟ ಸಿಮ್ ಪಡೆಯಲು ಸಾದ್ಯವಾಗದ ಸ್ಥಿತಿ ಬಿ.ಎಸ್.ಎನ್.ಎಲ್ ಗ್ರಾಹಕರದು ಶ್ರೀನಿವಾಸಪುರ:-ಇಲ್ಲಿನ ಬಿ.ಎಸ್.ಎನ್.ಎಲ್ (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ಕಚೇರಿಯಲ್ಲಿ ಒಂದಿಬ್ಬರೇ ಸಿಬ್ಬಂದಿ ಕಾರ್ಯನಿರ್ವಹಿತ್ತಿದ್ದು ಈಗ ಅದರಲ್ಲೂ ಒಬ್ಬರನ್ನು ಚಿಂತಾಮಣಿಗೆ ವರ್ಗಾಯಿಸಿದ್ದರೆ ಉಪ ವಿಭಾಗದ ಅಭಿಯಂತರ ಅವರನ್ನು ಮುಳಬಾಗಿಲು-ಶ್ರೀನಿವಾಸಪುರಕ್ಕೆ ಜವಬ್ದಾರಿ ನೀಡಿರುತ್ತಾರಂತೆ ಇದರಿಂದಾಗಿ ಇಲ್ಲಿ ಇಲಾಖಾ ಸಿಬ್ಬಂದಿಯ ಸಂಖ್ಯೆ ಕೇವಲ ಒರ್ವ ಮಹಿಳೆ ಇದ್ದಾರೆ ಯಾವುದೆ ಸೇವೆ ಪಡೆಯಲು ಅಥಾವ ಇನ್ಯಾವುದೆ ತಾಂತ್ರಿಕ ಸಮಸ್ಯೆ ಕುರಿತಾಗಿ ಬಿ.ಎಸ್.ಎನ್.ಎಲ್ ಕಚೇರಿಗೆ ಗ್ರಾಹಕ ಹೋದರೆ ಕನಿಷ್ಠ ಮಾಹಿತಿ ಕೊಡುವುವರು ಇಲ್ಲದಂತಾಗಿದೆ ಈಗಿರುವ ಮಹಿಳಾ ಸಿಬ್ಬಂದಿಗೆ ಯಾವುದರಲ್ಲೂ ಪರಿಣಿತಿ ಇಲ್ಲ ಗ್ರಾಹಕ ಏನೇ ಕೇಳಿದರು ಸಾರ್ ಇಲ್ಲ ಬಂದನಂತರ ಹೇಳುತ್ತೇನೆ ಎನ್ನುತ್ತಾರೆ ಇನ್ನೂ ಇರುವ ಔಟ್ ಸೋರ್ಸಿಂಗ್ ಉದ್ಯೋಗಿಗಳು ಕಚೇರಿ ವಿಷಯ ನಮಗೇನು ಗೊತ್ತಿಲ್ಲ ಸಾರ್ ಎನ್ನುತ್ತಾರೆ ಜೊತೆಗೆ ಅವರಿಗೆ ಇದುವರಿಗೂ ಸಂಬಳ ನೀಡಿಲ್ಲವಂತೆ. ಖಾಸಗಿ ಟೆಲಿಕಾಂ ಸಂಸ್ಥೆಗಳು ಮೂಲಭೂತಸೌಕರ್ಯಗಳು ಇಲ್ಲದೆ ಏನೆಲ್ಲ ಸೇವೆಗಳನ್ನು ಒದಗಿಸುತ್ತಿರುವ ಈ ಕಾಲದಲ್ಲಿ ಸ್ವಂತ ಕಟ್ಟಡ…
ಭಾರತದ ಅನೇಕ ರಾಜ್ಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು ಹೊಸ ರೂಪಾಂತರಿಯಿಂದಾಗಿ ಅಲ್ಲ,ಬದಲಾಗಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಹೆಚ್ಚೆಚ್ಚು ಜನರನ್ನು ಸೇರಿಸಿ ನಡೆಸುತ್ತಿರುವ ಮದುವೆ,ಪಾರ್ಟಿ ಹಾಗು ಸಮಾರಂಭಗಳಿಂದ ಹರಡುತ್ತಿದೆ ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ. ನ್ಯೂಜ್ ಡೆಸ್ಕ್: ಕೋವಿಡ್ ಸಂಬಂದ ಕೇಂದ್ರ ತಂಡ ರಾಜ್ಯಗಳಾದ್ಯಂತ ಸುತ್ತಾಡಿ ಅದ್ಯಯನ ನಡೆಸಿದ್ದು ಸಂಗ್ರಹಿಸಿರುವ ವಿಷಯದ ಅಧಾರದಲ್ಲಿ ಪ್ರತಿಕ್ರಿಯೆ ಮತ್ತು ವರದಿ ನೀಡಿದ ನಂತರ ಈ ಬಗ್ಗೆ ಸ್ಪಷ್ಟ ಚಿತ್ರಣ ಕಂಡುಬರಲಿದಿಯಂತೆ, ಮದುವೆ, ಪಾರ್ಟಿಗಳಿಂದಾಗಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದೆ ಎಂದು ಅನಿಸುತ್ತಿದೆ ಎಂದು ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ ವಿ ಕೆ ಪೌಲ್ ಹೇಳುತ್ತಾರೆ.ಇತ್ತೀಚಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳು ವಿಪರೀತ ಏರಿಕೆಯಾಗಿದ್ದು ಕೊರೋನಾ ರೂಪಾಂತರದ ಪಾತ್ರ ಇದರಲ್ಲಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುತ್ತಾರೆ. ಭಾರತದಲ್ಲಿ ಒಟ್ಟು ಕೋವಿಡ್ ಪ್ರಕರಣಗಳಲ್ಲಿ ಸದ್ಯ ಸಕ್ರಿಯ ಕೇಸುಗಳು ಶೇಕಡಾ 1.51ರಷ್ಟಿದ್ದು ಗುಣಮುಖ ಹೊಂದುತ್ತಿರುವವರ ಸಂಖ್ಯೆ ಶೇಕಡಾ 97ರಷ್ಟಿದೆ. ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ…
ಶ್ರೀ ಸಿತಾರಾಮರ ಕಲ್ಯಾಣೋತ್ಸವದಲ್ಲಿ ವೈ.ಆರ್.ಎಸ್.ಪ್ರಕಾಶ್ ಮತ್ತು ರಮೇಶಕುಮಾರ್ ದಂಪತಿಗಳು ಶ್ರೀನಿವಾಸಪುರ:ಲೋಕ ಕಲ್ಯಾಣಾರ್ಥ ನಡೆಯುವಂತ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.ಇಂತಹ ಕಾರ್ಯಗಳಿಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಮಾಜಿ ಸ್ಪೀಕರ್ ಹಾಗು ಶಾಸಕ ರಮೇಶಕುಮಾರ್ ಹೇಳಿದರು ಅವರು ಇಂದು ಪಟ್ಟಣದ ಶ್ರೀ ವರದ ಬಾಲಾಂಜನೇಯ ಕ್ಷೇತ್ರದಲ್ಲಿ ಆರ್ಯ ವೈಶ್ಯ ಮಂಡಳಿಯವರು ನೂತನವಾಗಿ ನಿರ್ಮಾಣ ಮಾಡಿರುವಂತ ಶ್ರೀ ಮಾರುತಿ ಸಭಾ ಭವನ ಲೋಕಾರ್ಪಣೆ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಹೋಮ ಹವನ ಪೂಜಾ ಕಾರ್ಯಕ್ರಮಗಳಲ್ಲಿ ಅವರು ಪತ್ನಿ ಸಮೇತ ಕಾರ್ಯಕ್ರಮಗಳು ನಡೆಯುವ ವರಿಗೂ ಪಾಲ್ಗೋಂಡಿದ್ದರು ಈ ಸಂದರ್ಭದಲ್ಲಿ ಮಾತನಾಡಿದರು,ಕಾರ್ಯಕ್ರಮದ ಅಂಗವಾಗಿ ನಡೆದ ಶ್ರೀ ಸಿತಾರಾಮರ ಕಲ್ಯಾಣೋತ್ಸವದಲ್ಲಿ ಕಂಕಣ ಕಟ್ಟಿಕೊಂಡು ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ವೈ.ಆರ್.ಎಸ್.ಪ್ರಕಾಶ್ ಮತ್ತು ರಮೇಶಕುಮಾರ್ ದಂಪತಿಗಳು ಪೂಜೆಗೆ ಕುಳತಿದ್ದರು. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ವೈ.ಎ.ನಾರಯಣಸ್ವಾಮಿ,ವರದಾ ಇನೋವೆಟಿವ್ ಸಂಸ್ಥೆ ಮುಖ್ಯಸ್ಥ ಲಯನ್ ಹರಿಪ್ರಸಾದ್, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ರಾಜೇಂದ್ರಪ್ರಸಾದ್.ಕೊಚಿಮುಲ್ ಮಾಜಿ ಅಧ್ಯಕ್ಷ ಬೇಟಪ್ಪ,ಮಾವು ಮಂಡಳಿ ಮಾಜಿ ಅಧ್ಯಕ್ಷ ದಳಸನೂರುಗೋಪಾಲಕೃಷ್ಣ,ಉದ್ಯಮಿ ಕೃಷ್ಣೇಗೌಡ,ಪುರಸಭೆ…
ಆಧುನಿಕವಾದ ಸುಸಜ್ಜಿತ ಅಡುಗೆ ಕೋಣೆ,ದೀಪಾಲಂಕರಕೃತವಾದ ಸುಂದರವಾದ ಸಭಾಭವನ ಶ್ರೀನಿವಾಸಪುರ: ಶ್ರೀನಿವಾಸಪುರ ಪಟ್ಟಣದ ಶ್ರೀ ವರದಬಾಲಾಂಜನೇಯ ದೇವಾಲಯದ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವಂತ ಶ್ರೀ ಮಾರುತಿ ಸಭಾ ಭವನ ಮಾರ್ಚ 03 ರಂದು ಬುಧವಾರ ಲೋಕಾರ್ಪಾಣೆಗೊಳ್ಳಲಿದೆ. ಶ್ರೀ ವರದ ಬಾಲಾಂಜನೇಯ ಸ್ವಾಮಿ ಸೇವಾ ಟ್ರಸ್ಟ್ ಹಾಗು ಶ್ರೀ ಆರ್ಯವೈಶ್ಯ ಮಂಡಳಿ ಟ್ರಸ್ಟ್ ಸೇರಿ ಆಧುನಿಕತೆಯ ತಂತ್ರಜ್ಞಾನ ಅಳವಡಿಸಿಕೊಂಡು ಅಚ್ಚುಕಟ್ಟಾಗಿ ನಿರ್ಮಾಣ ಮಾಡಿರುವಂತ ಸಭಾ ಭವನವಾಗಿದ್ದು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಶ್ರೀ ಆರ್ಯವೈಶ್ಯ ಮಂಡಳಿ ಟ್ರಸ್ಟ್ ಅಧ್ಯಕ್ಷರಾದ ವೈ.ಆರ್.ಎಸ್ ಪ್ರಕಾಶ್ ತಿಳಿಸಿರುತ್ತಾರೆ.ಎರಡು ದಿನಗಳ ಕಾಲ ನಡೆಯುವಂತ ವಿಶೇಷ ಹೋಮ,ಹವನ ಹಾಗು ಪೂಜಾ ಕಾರ್ಯಕ್ರಮಗಳ ಮೂಲಕ ಸಭಾ ಭವನವನ್ನು ಲೋಕಾರ್ಪಣೆ ಮಾಡಲಿದ್ದು ಕಾರ್ಯಕ್ರಮದ ಅಂಗವಾಗಿ ಬುಧವಾರ ಶ್ರೀ ಸೀತಾಮರ ಕಲ್ಯಾಣೋತ್ಸವ ಏರ್ಪಡಿಸಿರುತ್ತಾರೆ. ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಶಾಸಕ ರಮೇಶಕುಮಾರ್,ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ರವಿಶಂಕರ್,ಮಾಜಿ ಶಾಸಕ ವೆಂಕಟಶಿವಾರೆಡ್ಡಿ, ಲೋಕಸಭೆ ಸದಸ್ಯ ಮುನಿಸ್ವಾಮಿ, ಲೋಕಸಭೆ ಮಾಜಿ ಸದಸ್ಯ ಮುನಿಯಪ್ಪ, ವಿಧಾನಪರಿಷತ್ ಸದಸ್ಯ ವೈ.ಎ.ನಾರಯಣಸ್ವಾಮಿ ಹಾಗು ವಿಧಾನಪರಿಷತ್ ಮಾಜಿ ಸದಸ್ಯ…
ಕೋಲಾರ: ಗ್ರಾಮಗಳಲ್ಲಿ ದೇವಾಲಯ ನಿರ್ಮಾಣ ಮಾಡುವುದರಿಂದ ಗ್ರಾಮಗಳಲ್ಲಿ ಸೌಹಾರ್ದತೆ ಮತ್ತು ಧಾರ್ಮಿಕತೆ ಅರಿವು ಮೂಡುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಚಂದ್ರಶೇಕರ್ ತಿಳಿಸಿದರು. ಅವರು ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕಿರುವಾರ ಗ್ರಾಮದ ಶ್ರೀರಾಮ ದೇವಾಲಯದ ನಿರ್ಮಾಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಿಡುಗಡೆಯಾಗಿರುವ 1.5 ಲಕ್ಷದ ಚೆಕ್ ವಿತರಿಸಿ ಮಾತನಾಡಿದರು, ದೇವಾಲಯ ನಿರ್ಮಾಣ ಮಾಡುವುದು ಪುಣ್ಯ ಕಾರ್ಯಗಳಲ್ಲಿ ಒಂದಾಗಿದ್ದು ಶ್ರದ್ಧಾ ಭಕ್ತಿಯಿಂದ ಧಾರ್ಮಿಕ ಕಾರ್ಯಗಳನ್ನು ಮಾಡುವದರಿಂದ ಭಗವಂತನ ಅನುಗ್ರಹ ಪಡೆದು ಆರೋಗ್ಯ, ಐಶ್ವರ್ಯ ಮತ್ತು ಮನಃ ಶಾಂತಿಯಯನ್ನು ಕರಿಣಿಸುತ್ತಾನೆ ಎಂದರು.ಧಾರ್ಮಿಕ ಕೇಂದ್ರಗಳಾಗಿರುವ ದೇವಾಲಯಗಳು ಗ್ರಾಮೀಣ ಜನರ ಮನಸ್ಸಿಗೆ ನೆಮ್ಮದಿ ತರುವಂತಾಗಿದೆ. ಹಿರಿಯರು ದೇವಾಲಯಗಳಿಗೆ ಆದ್ಯತೆ ನಿಡಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಧಾರ್ಮಿಕ ಶ್ರದ್ಧೆ ಜೀವಂತವಾಗಿದೆ ಅವುಗಳನ್ನು ಉಳಸಿಕೊಂಡು ಹೊಗುವಂತ ಜವಾಬ್ದಾರಿ ಈಗಿನ ಪಿಳಿಗೆಯ ಮೇಲಿದೆ ಎಂದು ಹೇಳಿದರು.ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸ್ವಸ್ಥ ಸಮಾಜ ನಿರ್ಮಾಣ,ಸಮುದಾಯ ಆಭಿವೃದ್ಧಿ ಸಮುದಾಯ ಭವನ ಹಾಲು ಉತ್ಪಾದಕರ…
ಶ್ರೀನಿವಾಸಪುರ:ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ 234 ರಲ್ಲಿ ಸಂಜೆ ಮುಬ್ಬುಗತ್ತಲಿನಲ್ಲಿ ಪುಂಡರು ನಡೆಸುತ್ತಿರುವ ಬೈಕ್ ವೀಲಿಂಗ್ ನಿಂದಾಗಿ ಚಿಂತಾಮಣಿ ರಸ್ತೆ ಮೂಲಕ ಗ್ರಾಮಗಳಿಗೆ ಹೋಗುವಂತ ದ್ವಿಚಕ್ರವಾಹನ ಸವಾರರೂ ಭಯಬೀತರಾಗಿದ್ದಾರೆ ಸಂಜೆ ಮಬ್ಬು ಗತ್ತಲಲ್ಲಿ ಕರ್ಕಶ ಶಬ್ದದೊಂದಿಗೆ ಐದಾರು ದ್ವಿಚಕ್ರವಾಹನಗಳೊಂದಿಗೆ ಬರುವಂತ ಪುಂಡರು ಕೇಕೆ ಹಾಕುತ್ತ ನಡು ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡುತ್ತ ರಸ್ತೆ ಸವಾರರಿಗೆ ಪ್ರಾಣ ಭಿತಿ ಉಂಟುಮಾಡುತ್ತಿದ್ದಾರೆ.ಶ್ರೀನಿವಾಸಪುರದ ಕಡೆಯಿಂದ ಚಿಂತಾಮಣಿ ರಸ್ತೆಯಲ್ಲಿ ಹೆದ್ದಾರಿ 234 ರಲ್ಲಿ ವೀಲಿಂಗ್ ಮಾಡುತ್ತಾರೆ ಅದಲ್ಲದೆ ನಂಬಿಹಳ್ಳಿ ರಸ್ತೆ ಹಾಗೆ ಕೋಲಾರ ರಸ್ತೆ ಯಿಂದ ಚಿಂತಾಮಣಿ ರಸ್ತೆಗೆ ಬರುವಂತ ಹೊರವಲಯದ ರಿಂಗ್ ರಸ್ತೆಯಲ್ಲೂ ಪುಂಡರು ಅಬ್ಬರಿಸುತ್ತ ವೀಲಿಂಗ್ ಸಂಜೆ ಹೊತ್ತಲ್ಲಿ ನಡೆಯುತ್ತಿರುತ್ತದೆ ಈ ಬಗ್ಗೆ ಶ್ರೀನಿವಾಸಪುರ ಪೋಲಿಸರಿಗೆ ಮಾಹಿತಿ ಇದ್ದರು ಅವರು ಪುಂಡರ ವಿರುದ್ದ ಕ್ರಮ ಜರುಗುಸುತ್ತಿಲ್ಲ ಎನ್ನುತ್ತಾರೆ ರಸ್ತೆಯಲ್ಲಿ ಒಡಾಡುವಂತ ದ್ವಿಚಕ್ರವಾಹನ ಸವಾರರು,ವೀಲಿಂಗ್ ಮಾಡುವಂತ ಪುಂಡರ ದ್ವಿಚಕ್ರವಾಹನ ಸವಾರನ ನಿಯಂತ್ರಣ ತಪ್ಪಿ ದಾರಿಯಲ್ಲಿ ಸಾಗುವಂತ ದ್ವಿಚಕ್ರವಾಹನ ಸಾವರರ ಮೇಲೆ ಬಿದ್ದು ಅಥಾವ ಡಿಕ್ಕಿ…
ಶ್ರೀನಿವಾಸಪುರ: ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕಚೇರಿಯ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕಾಲಹರಣ ಮಾಡುವುದನ್ನು ಬಿಟ್ಟು, ರೈತರ ಮದ್ಯೆ ಹೋಗಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ಆರ್.ಶಂಕರ್ ತೋಟಗಾರಿಕೆ ಅಧಿಕಾರಿಗಳಿಗೆ ತೀಕ್ಷಣವಾಗಿ ಸೂಚಿಸಿದಲ್ಲದೆ ಅಧಿಕಾರಿಗಳ ವಿರುದ್ದ ಗರಂ ಆಗಿ ಹೇಳಿದರು.ಅವರು ತಾಲ್ಲೂಕಿನ ಹೊಗಳಗೆರೆ ತೋಟಗಾರಿಕೆ ಮತ್ತು ಸಂಶೋಧನಾ ಹಾಗು ವಿಸ್ತೀರಣಾ ಕೇಂದ್ರದಲ್ಲಿ ಗೇರು ಬೆಳೆ ಸಂಬಂದ ಅಧಿಕ ಇಳುವರಿಗಾಗಿ ವೈಜ್ಞಾನಿಕ ಪದ್ದತಿ ಅಳವಡಿಸಿಕೊಳ್ಳಲು ತೋಟಗಾರಿಕೆ ಬೆಳೆಗಾರರಿಗೆ ಶನಿವಾರ ಏರ್ಪಡಿಸಿದ್ದ ತರಬೇತಿ ಕಾಯ್ರಕಮ ಉದ್ಘಾಟಿಸಿ ಮಾತನಾಡಿದರು.ಕಾಲಕ್ಕೆ ಅನುಗುಣವಾಗಿ ತಕ್ಕ ಬೆಳೆಗಳನ್ನು ಬೆಳೆಯುವ ಬಗ್ಗೆ ರೈತರಿಗೆ ಅರಿವು ಮೂಡಿಸುವ ಅವಶ್ಯಕತೆ ಇದೆ ರೈತರ ವಿಚಾರದಲ್ಲಿ ಚಿಂತನ ಮಂಥನ ಅಗಬೇಕು. ರೈತರು ಯಾವ ವಿಜ್ಞಾನಿಗೂ ಕಡಿಮೆಯಿಲ್ಲ. ಸರಿಯಾದ ರೀತಿ ತರಬೇತಿ ನೀಡಿದರೆ ಅವರು ಸಹ ಹೊಸ ಹೊಸ ಸಂಶೋಧನೆ ಮಾಡಿ ಇತರೆ ರೈತರಿಗೆ ಮಾದರಿಯಾಗಿ ಮಾರ್ಗದರ್ಶನ ನೀಡುತ್ತಾರೆ ಎಂದರು.ಶ್ರೀನಿವಾಸಪುರದಲ್ಲಿ ಮಾವು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಇಲ್ಲಿಗೆ…
ಶ್ರೀನಿವಾಸಪುರ ಠಾಣೆ ಇದುವರಿಗೂ ಸಬ್ ಇನ್ಸ್ ಪೇಕ್ಟರ್ ಹುದ್ದೆ ಅಧಿಕಾರಈಗ ಪೋಲಿಸ್ ಇನ್ಸ್ ಪೇಕ್ಟರ್ ಹುದ್ದೆಯ ಅಧಿಕಾರಿ ಕಾರ್ಯನಿರ್ವಹಣೆ ಶ್ರೀನಿವಾಸಪುರ:-ಶ್ರೀನಿವಾಸಪುರ ಪೋಲಿಸ್ ಠಾಣೆ ಉನ್ನಥಿಕೃತಗೊಂಡಿದ್ದು ನೂತನ ಠಾಣಾಧಿಕಾರಿಯಾಗಿ ಪೋಲಿಸ್ ನೀರಿಕ್ಷಕ ರವಿಕುಮಾರ್ ಅಧಿಕಾರ ಸ್ವೀಕರಿಸಿರುತ್ತಾರೆ.ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ಇದುವರಿಗೂ ಸಬ್ ಇನ್ಸೆಪೇಕ್ಟರ್ ಹುದ್ದೆಯ ಅಧಿಕಾರಿಗಳು ಠಾಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು ಈಗ ಠಾಣೆ ಉನ್ನಥಿಕೃತ ವಾಗಿರುವುದರಿಂದ ವೃತ್ತನೀರಿಕ್ಷಕ ಮಟ್ಟದ ಅಧಿಕಾರಿ ಪೋಲಿಸ್ ನೀರಿಕ್ಷಕ(ಇನ್ಸ್ ಪೇಕ್ಟರ್) ಹುದ್ದೆಯ ಅಧಿಕಾರಿ ಠಾಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದು ಇವರ ಅಧಿಕಾರ ವ್ಯಾಪ್ತಿಯಲ್ಲಿ ಸುಮಾರು ಇಬ್ಬರು ಸಬ್ ಇನ್ಸೆಪೇಕ್ಟರ್ ಗಳು ಕಾರ್ಯನಿರ್ವಹಿಸಲಿದ್ದಾರೆ.ನೂತನ ಠಾಣಾಧಿಕಾರಿ ಪೋಲಿಸ್ ನೀರಿಕ್ಷಕ ರವಿಕುಮಾರ್ ವ್ಯಾಪ್ತಿಯಲ್ಲಿ ಕಸಬಾ,ಯಲ್ದೂರು, ಪೂರ್ತಿ ಹೋಬಳಿ ಮತ್ತು ರೋಣೂರು ಹೋಬಳಿಯ ಕೆಲಗ್ರಾಮಗಳು ಸೇರಿದಂತೆ 174 ಗ್ರಾಮಗಳು ಮತ್ತು ಪಟ್ಟಣ ಸೇರುತ್ತದೆ.ಹಿಂದಿನ ಪೋಲಿಸ್ ವೃತ್ತ ನೀರಿಕ್ಷಕ ರಾಘವೇಂದ್ರಪ್ರಕಾಶ್ ಅಧಿಕಾರ ವ್ಯಾಪ್ತಿಯ ಅಡಿಯಲ್ಲಿ ಗೌವನಿಪಲ್ಲಿ ಮತ್ತು ರಾಯಲ್ಪಾಡು ಪೋಲಿಸ್ ಠಾಣೆಗಳು ಕಾರ್ಯನಿರ್ವಹಿಸಲಿವೆ. ವರದಿ: ಚ.ಶ್ರೀನಿವಾಸಮೂರ್ತಿ
ಕೋಲಾರ:-ಪತ್ರಿಕಾ ವೃತ್ತಿಯಲ್ಲಿ ನಿಷ್ಠೂರತೆಯನ್ನು ಯಾವತ್ತಿಗೂ ಕೊಳ್ಳಬಾರದು ಇದರಿಂದ ವೃತ್ತಿ ಕ್ರಿಯಶೀಲತೆಯನ್ನು ಕಳೆದು ಕೊಂಡಂತಾಗುತ್ತದೆ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವನಂದ ತಗಡೂರು ಹೇಳಿದರು ಅವರು ಕೋಲಾರದ ಪತ್ರಕರ್ತರ ಭವನದಲ್ಲಿ ಹವಾನಿಯಂತ್ರಿತ ಮಿನಿಸಭಾಂಗಣದ ಉದ್ಘಾಟನೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರುಪತ್ರಕರ್ತರು ಸಮಾಜಮುಖಿಯಾಗಿರಬೇಕು, ಸಮಾಜದಲ್ಲಿನ ರೋಗಕ್ಕೆ ವೈದ್ಯರಾಗಿರಬೇಕು ಎಂದು ಹೇಳಿದರು.ಕೋವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಪತ್ರಿಕೆಗಳಿಗೆ 56 ಕೋಟಿ ಜಾಹಿರಾತು ಬಾಕಿ ಹಣ ಬಿಡುಗಡೆ ಮಾಡಿಸಿದ್ದೇವೆ, ಕೋವಿಡ್‌ನಿಂದ ಸಾವನ್ನಪ್ಪಿದ್ದ ಪತ್ರಕರ್ತರ 23 ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಕೊಡಿಸಲಾಗಿದೆ, ಎಲ್ಲಾ ಪತ್ರಕರ್ತರಿಗೂ ಆಯುಷ್ಮಾನ್ ಆರೋಗ್ಯ ಕಾರ್ಡ್ಡ್ ನೀಡಲು ಸರ್ಕಾರನ್ನು ಒಪ್ಪಿಸಲಾಗಿದೆ ಎಂದರು.ಭಾರತಕ್ಕೆ ಮಾದರಿಯಾದ ಕರ್ನಾಟಕದ ವಿಧಾನಸೌಧ ಕಟ್ಟಡ ನಿರ್ಮಾಣ ಕಾಲದಲ್ಲಿ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಮೇಸ್ತ್ರೀಯಂತೆ ಕೆಲಸ ಮಾಡಿದರೂ ಟೀಕಗಳು ತಪ್ಪಲಿಲ್ಲ, ಅದೇ ರೀತಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿ.ಮುನಿರಾಜು ಅವರು ಪ್ರಾಮಣಿಕವಾಗಿ ಕಾರ್ಯನಿರ್ವಹಿಸಿದ್ದರೂ ಟೀಕೆ ಅಪಸ್ವರಗಳು ಬರುವುದು ಸಹಜ ಅದನ್ನು ಪರಿಗಣಿಸಬೇಡಿ ಎಂದು ಹೇಳಿದರು. ಅತ್ಯಾಧುನಿಕ ಭವನ ನಿರ್ಮಾಣಕ್ಕೆ…