Author: admin

ಸುಮಾರು 2 ಕಿ.ಮೀ.ದೂರ ಶವ ಹೊತ್ತು ನಡೆದ ಮಹಿಳಾ ಪೋಲಿಸ್ ಅಧಿಕಾರಿ ನ್ಯೂಜ್ ಡೆಸ್ಕ್:-ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಅನಾಥ ಶವವನ್ನು ಸ್ಟ್ರೆಚರ್​ ಮೇಲಿಟ್ಟುಕೊಂಡು ಸುಮಾರು 2 ಕಿ.ಮೀ. ದೂರ ನಡೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ಮಾಡಿರುವ ಘಟನೆ ಆಂಧ್ರಪ್ರದೇಶದ,ಉತ್ತರಾಂಧ್ರ ಪ್ರದೇಶವಾದ ಕರಾವಳಿ ಪ್ರಾಂತ್ಯದ ಶ್ರೀಕಾಕುಳುಂ ಜಿಲ್ಲೆಯ ಪಲಾಸ-ಕಾಶಿಬುಗ್ಗ ಪುರಸಭೆ ವ್ಯಾಪ್ತಿಯ ಅಡವಿ ಕೊತೂರ್​​ ಬಳಿ ನಡೆದಿರುತ್ತದೆ. ಈ ಪ್ರದೇಶದ ಕೃಷಿ ಭೂಮಿಯಲ್ಲಿ ಅನಾಥ ಶವೊಂದು ಇದೆ ಎಂಬ ಮಾಹಿತಿಯೊಂದಿಗೆ ಸ್ಥಳಕ್ಕೆ ಹೋದ ಕಾಶಿಬುಗ್ಗ ಠಾಣಾಧಿಕಾರಿ ಎಸ್.ಐ ಕೊತ್ತಶಿರಿಷ,ಎರಡು ದಿನಗಳಿಂದ ಹೊಲದಲ್ಲೇ ಬಿದ್ದಿದ್ದ ವ್ಯಕ್ತಿಯ ಮೃತದೇಹವನ್ನು ಸ್ಥಳಿಯವಾಗಿ ಯಾರೊಬ್ಬರೂ ಶವ ಕೂಡ ಸಾಗಿಸುವ ಕೆಲಸ ಮಾಡಿರಲಿಲ್ಲ. ಶವದ ವಿಚಾರದಲ್ಲಿ ಸ್ಥಳಿಯರು ಪೋಲಿಸ್ ಅಧಿಕಾರಿಗೂ ಸಹಕಾರ ನೀಡದ ಹಿನ್ನಲೆಯಲ್ಲಿ ಎಸ್.ಐ ಕೊತ್ತಶಿರಿಷ ವ್ಯಕ್ತಿಯೊಬ್ಬರ ಸಹಾಯ ಪಡೆದು ಅನಾಥ ಶವವನ್ನು ಸ್ಟೆಚ್ಚರ್ ಮೇಲೆ ಇಟ್ಟು ಅದನ್ನು ಸ್ವತಃ ತಮ್ಮ ಬುಜದ ಮೇಲೆ ಇಟ್ಟುಕೊಂಡು ತಾವೇ ಹೊತ್ತೊಯ್ದಿದ್ದಾರೆ. ಬಳಿಕ ಅಂತ್ಯಸಂಸ್ಕಾರ ಮಾಡುವ ಜಾಗಕ್ಕೆ ಹೊಯ್ದು ಅಲ್ಲಿ ಸ್ಥಳಿಯ…

Read More

ಚಿಂತಾಮಣಿ:-ಮನೆಯಿಲ್ಲದೆ ರಸ್ತೆ ಬದಿ ತಂಗುದಾಣದಲ್ಲಿ ಆಶ್ರಯ ಪಡೆದಿದ್ದ ಚಿಂತಾಮಣಿ ತಾಲ್ಲೂಕಿನ ನಲ್ಲರಾಳ್ಳಪಲ್ಲಿ ಗ್ರಾಮದ ಪರಿಶಿಷ್ಟ ವರ್ಗದ ನಿರಾಶ್ರಿತ ಕುಟುಂಬಕ್ಕೆ ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿ ಆರ್.ಲತಾ ಆಶ್ರಯ ಯೋಜನೆಯಲ್ಲಿ ಮನೆ ಮಂಜೂರು ಮಾಡಿಸಿ ಸದ್ಯಕ್ಕೆ ವಾಸಿಸಲು ಬಾಡಿಗೆ ಮನೆ ಕೊಡಿಸಿರುವ ಅಪರೂಪದ ಘಟನೆ ನಡೆದಿದೆ. ಅಧಿಕಾರಿಗಳಿಗೆ ಸೂಚಿಸುತ್ತಿರುವ ಜಿಲ್ಲಾಧಿಕಾರಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ನಲ್ಲರಾಳ್ಳಪಲ್ಲಿ ಗ್ರಾಮದ ತಾಯಿ ಹಾಗೂ ಮೂರು ಜನ ಹೆಣ್ಣು ಮಕ್ಕಳು, ವಸತಿ ಆಸರೆ ಇಲ್ಲದೆ ಹಲವಾರು ತಿಂಗಳಿನಿಂದ ರಸ್ತೆ ಬದಿಯ ಬಸ್ ತಂಗುದಾಣದಲ್ಲಿ ಆಶ್ರಯ ಪಡೆದಿದ್ದರು ಈ ಬಗ್ಗೆ ಮಾಧ್ಯಮಗಳಿಂದ ಮಾಹಿತಿ ಪಡೆದ ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿ ಆರ್.ಲತ ಅವರು ನಿರಾಶ್ರಿತ ಮಂಜುಳ ಮತ್ತು ಆಕೆಯ ಮಕ್ಕಳನ್ನು ಭೇಟಿಯಾಗಲು ಚಿಂತಾಮಣಿಗೆ ಆಗಮಿಸಿ ನಿರಾಶ್ರಿತರನ್ನು ಚಿಂತಾಮಣಿಯ ಪ್ರವಾಸಿ ಮಂದಿರಕ್ಕೆ ಕರೆಯಿಸಿಕೊಂಡು ಸಮಸ್ಯೆಯನ್ನು ಆಲಿಸಿ, ಆಶ್ರಯ ಯೋಜನೆಯಡಿ ಶೀಘ್ರವಾಗಿ ಮನೆ ನಿರ್ಮಾಣ ಮಾಡಲು ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿರುತ್ತಾರೆ,ಜೊತೆಗೆ ಸದರಿ ಕುಟುಂಬ ತಾತ್ಕಾಲಿಕವಾಗಿ ಉಳಿದುಕೊಳ್ಳಲು ಬಾಡಿಗೆ ಮನೆಯ ವ್ಯವಸ್ಥೆಯನ್ನು ಸಹ…

Read More

ಕೋಲಾರ: ರಾಮನ ಮಂದಿರ ಕಟ್ಟಲು ಹೊರಟವರಿಗೆ, ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಮಾಜಿ ಸ್ಪೀಕರ್ ಹಾಗು ಶ್ರೀನಿವಾಸಪುರದ ಶಾಸಕ ರಮೇಶ್ ಕುಮಾರ್ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಅವರು ಕೋಲಾರ ತಾಲ್ಲೂಕಿನ ಸುಗಟೂರು ಸೊಸೈಟಿ ಆಶ್ರಯದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನ ವತಿಯಿಂದ ರೈತರಿಗೆ 1.97 ಕೋಟಿ ರೂ ಶೂನ್ಯ ಬಡ್ಡಿಯ ಕೆಸಿಸಿ ಸಾಲ ವಿತರಿಸಿ ಮಾತನಾಡಿದರು.ಉಪವಾಸ ಕೂತ ರೈತವರಿಗೆ ಊಟ ಕೊಡಲು ನೀಡಲು ಆಗದವರು ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದಾರೆ,ಅವರಿಗೆ ರೈತನ ಕಷ್ಟ ಕಾರ್ಪಣ್ಯಗಳು ಅರ್ಥ ಆಗಬೇಕಲ್ಲ, ರಾಮಮಂದಿರ ನಿರ್ಮಾಣ ಮಾಡಲು ಹೊರಟಿದ್ದಾರೆ.ಕೃಷಿಕರಿಗೆ ಬೇಕಿರುವುದು ರಾಮಮಂದಿರವಲ್ಲ.ಪ್ರತಿ ಹಳ್ಳಿಯಲ್ಲೂ ಈಗಾಗಲೇ ಹಿರಿಯರು ಕಟ್ಟಿರುವ ರಾಮಮಂದಿರಗಳು ಇವೆ ಜೊತೆಗೆ ಈ ನೆಲದ ದೇವತೆಗಳಾದ ಗಂಗಮ್ಮ, ಮಾರೆಮ್ಮ ದೇವಸ್ಥಾನಗಳು ಗ್ರಾಮ ಗ್ರಾಮಗಳಲ್ಲೂ ಇದ್ದಾವೆ ಎಂದ ಅವರು ಉಪವಾಸ ಇರೋವವನಿಗೆ ಊಟ ಬೇಡ, ಊರಿಗೊಂದು ಶಾಲೆ ಬೇಡ,ಕಾಯಿಲೆ ಬಂದೋನಿಗೆ ಔಷದಾನೂ ಬೇಡ ಕೇವಲ ರಾಮಮಂದಿರ ಕಟ್ಟಿದರೆ ಸಾಕು ಎನ್ನುವಂತವರಿಗೆ ದೇಶ ಆಳಲು ಬಿಟ್ಟಿದ್ದೇವೆ ರೈತರಿಗೆ ಗೌರವ…

Read More

ರೈತ ಹೋರಾಟವನ್ನು ದುಷ್ಕರ್ಮಿಗಳು ದುರ್ಬಳಿಕೆ ಮಾಡಿಕೊಂಡರಪ್ರತ್ಯೇಕತಾವಾದಿ ಖಲಿಸ್ತಾನ್‌ ಸಂಘಟನೆ ಭಾಗಿಯಾಗಿರುವ ಶಂಖೆ!ನಡು ರಸ್ತೆಯಲ್ಲೇ ಪೊಲೀಸರ ಮೇಲೆ ಟ್ರ್ಯಾಕ್ಟರ್‌ ನುಗ್ಗಿಸಿ ಬೆದರಿಕೆರೈತರ ಟ್ರ್ಯಾಕ್ಟರ್‌ ರ್‍ಯಾಲಿ ವೇಳೆ ಹಿಂಸಾಚಾರದಲ್ಲಿ ಗಾಯಗೊಂಡ 83 ಪೊಲೀಸರುಕೇಂದ್ರ ಗೃಹ ಸಚಿವ ಅಮಿತ್‌ ಶಾ ತುರ್ತು ಸಭೆ ಹೆಚ್ಚು ಪೋಲಿಸರ ನಿಯೋಜನೆಗೆ ಸೂಚನೆಕೆಂಪು ಕೋಟೆಯ ಮೇಲೆ ಇತರೆ ಧ್ವಜ ಹಾರಿಸಿದ ಘಟನೆಧ್ವಜ ವಿವಾದ ಕೃತ್ಯಕ್ಕೆ ವ್ಯಾಪಕ ಜನಾಕ್ರೋಶ ನ್ಯೂಜ್ ಡೆಸ್ಕ್:ನೂತನ ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದಿಲ್ಲಿ ಬಳಿ ರೈತ ಸಂಘಟನೆಗಳು ನಡೆಸುತ್ತಿದ್ದ ಹೋರಾಟ ಮಂಗಳವಾರ ವ್ಯಾಪಕ ಹಿಂಸಾಚಾರಕ್ಕೆ ದಾರಿಯಾಗಿದೆ. ಶಾಂತಿಯುತ ಹೋರಾಟ ಅರಾಜಕತೆಯ ಹಾದಿಗೆ ತಿರುಗಿದೆ. ಇದರೊಂದಿಗೆ ಕಳೆದ 60 ದಿನಗಳಿಂದ ಕಾಯ್ದುಕೊಂಡು ಬರಲಾಗಿದ್ದ ಶಾಂತಿ ಮಂತ್ರ ಒಂದೇ ದಿನದಲ್ಲಿ ದಾರಿ ತಪ್ಪಿ ಗಂಭಿರತೆಯನ್ನು ಕಳೆದುಕೊಂಡು,ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ. ಹೋರಾಟದ ಮುಂಚೂಣಿಯಲ್ಲಿದ್ದ ರೈತ ಮುಖಂಡರು ದಿಲ್ಲಿಯ ಹಿಂಸಾಚಾರದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಹೋರಾಟ ಹಾದಿ ತಪ್ಪಿದೆ ಎಂದು ನೋವು ಬೇಸರ ತೋಡಿಕೊಂಡಿದ್ದಾರಂತೆ,ರೈತರ ನಡುವೆ ಸಮಾಜಘಾತುಕ ಶಕ್ತಿಗಳು ಹಿಂಸಾಚಾರಕ್ಕೆ…

Read More

ಕೇಜ್ರಿವಾಲ್ ತಂದಿರುವ ಬದಲಾವಣೆ ಎಲ್ಲಾ ರಾಜ್ಯಗಳಲ್ಲೂ ಆಗಬೇಕುನಾನೂ ಒಬ್ಬ ಆಮ್ ಆದ್ಮಿ ಎಂದಿರುವ ರಮೇಶ್ ಕುಮಾರ್ ಬೆಂಗಳೂರು:ಆರೋಗ್ಯ ಸಚಿವನಾಗಿದ್ದಾಗ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಆಮ್ ಆದ್ಮಿ ಸರ್ಕಾರ ಪ್ರಾರಂಭಿಸಿರುವ ಮೊಹಲ್ಲಾ ಕ್ಲಿನಿಕ್‌‌,ಸರ್ಕಾರಿ ಶಾಲೆಗಳ ಕಾರ್ಯವೈಖರಿ ಕಂಡು ಆಶ್ಚರ್ಯಚಕಿತನಾದೆ, ಸಾಮಜಿಕ ಬದಲಾವಣೆಗಾಗಿ ಹಾಗು ಜನಸಾಮನ್ಯರಿಗೆ ಮೂಲಭುತ ಸೌಕರ್ಯ ಒದಗಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಗೆದುಕೊಂಡಿರುವ ಕ್ರಾಂತಿಕಾರಕ ಬದಲಾವಣೆಗಳನ್ನು ನೋಡಿ ಅವರ ದೊಡ್ಡ ಅಭಿಮಾನಿಯಾದೆ ಜೊತೆಗೆ ಅವರ ಕಾರ್ಯಕ್ರಮಗಳ ಅನುಸರಣೆಗೆ ಮುಂದಾದೆ ಎಂದು ಶಾಸಕ ಹಾಗು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು. ಅವರು ಬೆಂಗಳೂರು ನಗರದ ಶಾಂತಿನಗರದ ಬಸಪ್ಪ ರಸ್ತೆಯಲ್ಲಿ ಇರುವ ಆಮ್ ಆದ್ಮಿ ಕ್ಲಿನಿಕ್ ಕಾರ್ಯವೈಖರಿ ವೀಕ್ಷಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ರಮೇಶ್ ಕುಮಾರ್ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿ ಜನತೆ ಒಂದೇ ಒಂದು ಬಾರೀ ಅವಕಾಶ ಕೊಟ್ಟರು. ಈ ಅವಕಾಶವನ್ನು ಅವರು,ಜನಪರ ಸೇವೆ ಮಾಡುವುದಕ್ಕೆ ಬಳಸಿಕೊಂಡರು.ಕೇಜ್ರಿವಾಲ್ ಅವರು ಆರೋಗ್ಯ,ಶಿಕ್ಷಣ,ಉಚಿತ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲ…

Read More

ವಿದ್ಯಾವಂತ ಕುಟುಂಬ ಮೂಢನಂಬಿಕೆಗೆ ಬಲಿಯಾದ ಕಥೆಮೌಢ್ಯಕ್ಕೆ ಮಕ್ಕಳನ್ನೆ ನರಬಲಿ ಕೊಟ್ಟ ಪಾಪಿಷ್ಠ ತಂದೆ-ತಾಯಿಮರುಹುಟ್ಟು ಪಡೆಯಲು ಈ ಕೃತ್ಯ ಎಸಗಲಾಗಿದಿಯಂತೆಸಹೋದರಿಯರು ಅತೀಂದ್ರಿಯ ಶಕ್ತಿಗಳ ಕುರಿತಾಗಿ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರಂತೆ! ಮದನಪಲ್ಲಿ: ಆಂದ್ರ ಪ್ರದೇಶದ ಚಿತ್ತೂರುಜಿಲ್ಲೆಯ ಮದನಪಲ್ಲಿಯ ಪುರುಷೋತ್ತಮ್ ನಾಯ್ಡು ಮತ್ತು ಪದ್ಮಜಾ ಮಾಸ್ಟರ್ ಡಿಗ್ರಿಗಳನ್ನು ಪಡೆದ ವಿದ್ಯಾವಂತ ದಂಪತಿಗಳು,ತಾಯಿಯಂತೂ ಗೋಲ್ಡ್ ಮೆಡಲಿಸ್ಟ್,ಅವರಿಗೆ ಇಬ್ಬರು ಪ್ರತಿಭಾವಂತ ಪುತ್ರಿಯರು ಇಬ್ಬರು ಪುತ್ರಿಯರು ಉನ್ನತ ವಿದ್ಯಾಬ್ಯಾಸ ಮಾಡಿರುವರು, ಈ ಇಬ್ಬರು ಪುತ್ರಿಯರನ್ನು ಹೆತ್ತ ಪೋಷಕರೆ ಮೂಢನಂಬಿಕೆಯಿಂದ ಮನೆಯಲ್ಲೆ ಕ್ಷುದ್ರ ಪೂಜೆ ನಡೆಸಿ ಬಲಿ ಹೆಸರಿನಲ್ಲಿ ಮಕ್ಕಳನ್ನು ಹತ್ಯೆ ಮಾಡಿರುವ ದಾರುಣ ಘಟನೆ ಭಾನುವಾರ ರಾತ್ರಿ ನಡೆದಿರುತ್ತದೆ. ಪದ್ಮಜಾ ಮದನಪಲ್ಲಿಯ ಶಿಕ್ಷಕರ ಕಾಲೋನಿಯ ಶಿವನಗರಲ್ಲಿ ದುರಂತಮಯವಾಗಿ ಸಾವಿಗಿಡಾಗಿರುವ ಇಬ್ಬರು ಸಹೋದರಿಯರ ಪೋಷಕರಾದ ತಂದೆ ಮಲ್ಲೂರು ಪುರುಷೋತ್ತಮನಾಯುಡು ಸರ್ಕಾರಿ ಮಹಿಳಾ ಪದವಿ ಕಾಲೇಜು ಉಪ ಪ್ರಾಂಶುಪಾಲ,ಅವರ ಪತ್ನಿ ಪದ್ಮಜಾ ಖಾಸಗಿ ಶಾಲೆಯೊಂದರಲ್ಲಿ ಪ್ರಾಂಶುಪಾಲೆಯಾಗಿದ್ದಾರೆ, ನಾಲ್ಕು ಜನರಿದ್ದ ಕುಟುಂಬದಲ್ಲಿ ಸಹೋದರಿಯರ ಹತ್ಯೆಯಿಂದ ಮದನಪಲ್ಲಿ ನಗರ ಆಘಾತಗೊಂಡಿದೆ. ದುರಂತದಿಂದ ಸಾವಿಗಿಡಾದ ಆ ಇಬ್ಬರು ಹೆಣ್ಣು…

Read More

ಸ್ವಾತ್ಯಂತ್ರ ಪೂರ್ವದಲ್ಲಿ ಬ್ರಿಟಿಷರ ಆಳಿಕೆಯಲ್ಲಿ ನಿರ್ಮಾಣವಾದ ಕಟ್ಟಡಆಡಳಿತ ವ್ಯವಸ್ಥೆಯ ಸಂಪೂರ್ಣ ನಿರ್ಲಕ್ಷ್ಯ ಪಾಳು ಬಿಳುತ್ತಿದೆಸ್ವಚ್ಚತೆ ಸಂರಕ್ಷಣೆ ಇಲ್ಲದೆ ಕುಸಿಯುತ್ತಿರುವ ಐತಿಹಾಸಿಕ ಕಟ್ಟಡಕಟ್ಟಡ ದುರಸ್ಥಿಯಾದರೆ ಇಲಾಖೆಗಳಿಗೆ ಆಶ್ರಯ ಸಿಗುತ್ತದೆಕಟ್ಟಡ ಉಳಿದರೆ ಮುಂದಿನ ಪೀಳಿಗೆಗೆ ಸ್ಮಾರಕವಾಗಿ ಉಳಿಯುತ್ತದೆ. ಶ್ರೀನಿವಾಸಪುರ:-ಪ್ರಪಂಚ ಪ್ರಸಿದ್ದ ಮಾವಿನ ನಗರಿ ಶ್ರೀನಿವಾಸಪುರದ ಐತಿಹಾಸಿಕ ಹಳೇ ತಾಲೂಕು ಕಚೇರಿಯಲ್ಲಿದ್ದ ಟ್ರಜರಿ ಆಫಿಸ್ ಕೊಠಡಿ ಇವತ್ತು ಪಬ್ಲಿಕ್ ಟಾಯಿಲೆಟ್(ಸಾರ್ವಜನಿಕರ ಮೂತ್ರಾಲಯ) ಆಗಿದೆ ಸ್ವಾತಂತ್ರ್ಯ ಪೂರ್ವದಲ್ಲಿ ಅಂದಾಜು 1920 ಬ್ರಿಟಿಶ್ ಆಳ್ವಿಕೆಯಲ್ಲಿ ನಿರ್ಮಾಣವಾಗಿದ್ದ ವಿಶೇಷ ವಿನ್ಯಾಸದ ವಿಶಾಲವಾದ ಹೆಂಚಿನ ಕಟ್ಟಡದಲ್ಲಿ ಎರಡು ಹಾಲ್ ಗಳು ಎತೇಚ್ಚವಾಗಿ ಕಟ್ಟಡದ ಒಳಗೆ ಬೆಳಕು ಬರುವಂತೆ ವಿನ್ಯಾಸಮಾಡಲಾದ ಕಿಟಕಿಗಳು ಇವೆ,ಈ ಕಟ್ಟಡದ ಈಶಾನ್ಯ ದಿಕ್ಕಿನಲ್ಲಿ ಟ್ರಜರಿ ಆಫಿಸ್ ಇತ್ತು ಹಾಗು ತಹಶೀಲ್ದಾರ್ ಕಚೇರಿ ಸೇರಿದಂತೆ ಹಲವಾರು ಇಲಾಖೆಗಳು ಈ ಕಟ್ಟಡದಲ್ಲಿತ್ತು, ಮಿನಿವಿಧಾನ ಸೌದ ನಿರ್ಮಾಣವಾದ ನಂತರ ಬಹುತೇಕ ಇಲಾಖೆಗಳು ಅಲ್ಲಿಗೆ ಶಿಫ್ಟ್ ಆದ ಹಿನ್ನಲೆಯಲ್ಲಿ ಹಳೇ ತಾಲೂಕು ಕಚೇರಿ ಬಹುತೇಕ ಕಾಲಿಯಾಗಿದೆ ಈಗ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ ಅನ್ಯತಿಕ…

Read More

ದೇಣಿಗೆ ನೀಡಿರುವ ತಾರೆಯರುಬಾಲಿಹುಡ್ ನಟ ಅಕ್ಷಯ್ ಕುಮಾರ್ಪವರ್ ಸ್ಟಾರ್ ಪವನ್ ಕಲ್ಯಾಣ್ಕನ್ನಡ ನವರಸ ನಾಯಕ್ ಜಗ್ಗೇಶ್ಬಹುಭಾಷೆ ತಾರೆ ಪ್ರಣಿತಾ ಸುಭಾಷ್ ನ್ಯೂಜ್ ಡೆಸ್ಕ್:ರಾಮಂದಿರ ನಿರ್ಮಾಣಕ್ಕೆ ದೇಶಾದ್ಯಂತ ಭವ್ಯ ಬೆಂಬಲ ವ್ಯಕ್ತವಾಗುವುದರ ಜೊತೆಗೆ ದೇಣಿಗೆ ಸಂಗ್ರಹ ಕಾರ್ಯ ಕೂಡ ಜೋರಾಗಿ ನಡೆಯುತ್ತಿದೆ.ಈಗಾಗಲೇ ಖ್ಯಾತ ರಾಜಕಾರಣಿಗಳು, ಗಣ್ಯರು, ಸಿನಿಮಾ ತಾರೆಯರು,ಉದ್ಯಮಿಗಳು ಹಿಡಿದು ಜನಸಾಮಾನ್ಯರ ವರಿಗೂ ರಾಮನ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿದ್ದಾರೆ. ಇದಕ್ಕೆ ತೆಲುಗು ಪವರ್ ಸ್ಟಾರ್ ಹಾಗು ತೆಲಗು ನೆಲದ ರಾಜಕಾರಣಿ ಜನ ಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಕೂಡ ಕೈ ಜೋಡಿಸಿದ್ದು ಮಂದಿರ ನಿರ್ಮಾಣಕ್ಕಾಗಿ 30 ಲಕ್ಷ ರೂ. ದೇಣಿಗೆ ನೀಡಿದ್ದಾರೆ.ಪವನ್ ಕಲ್ಯಾಣ್ ಶುಕ್ರವಾರ (ಜ.22) ರಂದು 30 ಲಕ್ಷ ರೂ.ಗಳ ಚೆಕ್ ಅನ್ನು ಅಯೋಧ್ಯ ರಾಮ ಮಂದಿರ ನಿರ್ಮಾಣಕ್ಕಾಗಿ ನೀಡಿದ್ದಾರೆ. ಆಂಧ್ರದ ಬಿಜೆಪಿ ಮುಖಂಡ ಹಾಗು ಮಾಜಿ ಸಚಿವ ಕಾಮಿನೇನಿ ಶ್ರೀನಿವಾಸ್ ಅವರ ಸಮ್ಮುಖದಲ್ಲಿ ಚೆಕ್ ಅನ್ನು ಮಂದಿರ ನಿರ್ಮಾಣಕ್ಕೆ ಸಂಬಂಧಪಟ್ಟವರಿಗೆ ಹಸ್ತಾಂತರಿಸಿದ್ದಾರೆ. ಪವನ್ ಕಲ್ಯಾಣ್ ಅವರ ಸಿಬ್ಬಂದಿಗಳ…

Read More

ನ್ಯೂಜ್ ಡೆಸ್ಕ್:-ಮಾರ್ಚ ತಿಂಗಳಿನಿಂದ ಹಳೇ ರೂ.100 ಮುಖಬೆಲೆಯ ನೋಟು ಸ್ಥಗಿತಗೊಳಿಸಿ ವಾಪಸ್ಸು ಪಡೆಯುವ ನಿರ್ಧಾರಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧಾರ ಮಾಡಿರುವುದಾಗಿ ಹೇಳಲಾಗಿದೆ. ದಿನಗಳಲ್ಲಿ ರೂ.100 ಮುಖಬೆಲೆಯ ಹೊಸ ಸರಣಿಯ ನೋಟುಗಳನ್ನು ಜನತೆಯಲ್ಲಿ ಚಲಾವಣೆಯಲ್ಲಿ ಇರುವಂತೆ ವ್ಯವಸ್ಥೆ ಮಾಡುವ ಉದ್ದೇಶದಿಂದ ಹಳೆಯ ಸರಣಿ ಎಲ್ಲಾ ನೋಟುಗಳನ್ನು ಹಿಂಪಡೆಯುವ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಲಾಗಿದೆಮಂಗಳೂರಿನ ದಕ್ಷಿಣ ಕನ್ನಡದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕಿಂಗ್ ಭದ್ರತಾ ಸಮಿತಿ ಮತ್ತು ನಗದು ನಿರ್ವಹಣಾ ಸಮಿತಿ ಸಬೆಯಲ್ಲಿ ಆರ್’ಬಿಐ ಸಹಾಯಕ ಮಹಾಪ್ರಬಂಧಕ ಬಿ.ಎಂ.ಮಹೇಶ್ ಮಾತನಾಡುವಾಗ ತಿಳಿಸಿದ್ದಾರೆ. ಹಳೆಯ ಸರಣಿ 100 ನೋಟುಹೊಸ ಸರಣಿಯ 100 ನೋಟು ಹಳೆಯ ನೋಟುಗಳಂತೆ ಕಾಣುವ ಖೋಟಾನೋಟುಗಳು ಸಹ ಹೆಚ್ಚು ಚಲಾವಣೆಯಲ್ಲಿದೆ ಈ ಎಲ್ಲಾ ಕಾರಣಗಳಿಗಾಗಿ ರೂ.100ರ ಮುಖಬೆಲೆಯ ಹಳೆಯ ಸೀರಿಸ್ ನ ನೋಟುಗಳನ್ನು ಹಿಂಪಡೆಯಲಾಗುತ್ತಿದೆ. ಹಳೆಯ ಸೀರಿಸ್ ಹೊಂದಿರುವ 100ರ ಕರೆನ್ಸಿ ನೋಟುಗಳನ್ನು ಮಾರ್ಚ್ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಹಿಂಪಡೆಯುವ ನಿರ್ಧಾರಕ್ಕೆ ಬರಲಾಗಿದೆ. ಕಳೆದ 6 ವರ್ಷಗಳಿಂದ…

Read More

ತುಮಕೂರು: ಕೊರೊನಾ ಲಸಿಕೆ ಕುರಿತಾಗಿ ಹಲವಾರು ಪ್ರಶ್ನೆಗಳ ಹುಟ್ಟುತ್ತಿರುವಾಗ ಲಸಿಕೆ ಪಡೆದವರಂತೆ ಸರ್ಕಾರಿ ವೈದ್ಯಾಧಿಕಾರಿ ನಾಟಕ ಮಾಡಿರುವಂತ ಪ್ರಕರಣ ತುಮಕೂರಿನಲ್ಲಿ ನಡೆದಿದೆ.ಜಿಲ್ಲಾ ವೈದ್ಯಾಧಿಕಾರಿ ಮತ್ತು ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ರಜನಿ ಲಸಿಕೆ ಪಡೆದಂತೆ ನಾಟಕಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.ಕೊರೊನಾ ಸೋಂಕು ತಡೆಯಲು ಸರಕಾರ ಬಿಡುಗಡೆ ಮಾಡಿರುವ ಕೊರೊನಾ ವ್ಯಾಕ್ಸಿನ್ ಅನ್ನು ಡಿಎಚ್‌ಒ ನಾಗೇಂದ್ರಪ್ಪ, ಸರ್ಕಾರಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ರಜನಿಯವರು ಲಸಿಕೆ ತೆಗೆದುಕೊಳ್ಳುವ ನಾಟಕ ಆಡಿರುವ ವಿಚಾರ ಸಾರ್ವಜನಿಕವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ.ಜ.16ರಂದು ತುಮಕೂರು ಜಿಲ್ಲೆಯಲ್ಲಿ ಪ್ರಥಮವಾಗಿ ಕೊರೊನಾ ವಾರಿಯರ್ಸ್ ಗೆ ವ್ಯಾಕ್ಸಿನ್ ನೀಡುವ ಕಾಯ್ರಕ್ರಮಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಅದ್ಧೂರಿಯಾಗಿ ಚಾಲನೆ ನೀಡಲಾಗಿತ್ತು. ಇದೇ ವೇಳೆ ಡಿಎಚ್‌ಒ ಡಾ.ನಾಗೇಂದ್ರಪ್ಪ ಅವರು ಇಂಜೆಕ್ಷನ್ ತುಂಬಿದ ಸೂಜಿಯನ್ನು ಚುಚ್ಚಿಕೊಳ್ಳುತ್ತಿರುವಂತೆ ಪೋಸ್ ನೀಡಿದ್ದು ಬಿಟ್ಟರೆ ಅವರು ಲಸಿಕೆ ತಗೆದುಕೊಂಡಿಲ್ಲ ಎನ್ನಲಾಗಿದೆ.ಆದರೆ ಈ ಆರೋಪವನ್ನು ನಿರಾಕರಿಸಿರುವ ಡಿಹೆಚ್ಓ ನಾಗೇಂದ್ರಪ್ಪ ಅವರು, ನಾನು ಲಸಿಕೆ ಹಾಕಿಸಿಕೊಂಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.…

Read More