ನ್ಯೂಜ್ ಡೆಸ್ಕ್:- ತೆಲಗು ಭಾಷಿಕರ ಆತ್ಮಗೌರವದ ಸಂಕೇತವಾಗಿ ಸ್ಥಾಪಿತವಾದ ತೆಲುಗುದೇಶಂ ಪಕ್ಷವನ್ನು ಈಗಿನ ಟ್ರೆಂಡ್ ನಂತೆ ಹಿಂದು ಧಾರ್ಮಿಕ ಅಜೆಂಡದಲ್ಲಿ ಪಕ್ಷವನ್ನು ಮುನ್ನೆಡೆಸುವ ನಿರ್ಧಾರಕ್ಕೆ ಬಂದಂತಿದೆ.ತೆಲುಗುದೇಶಂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಅವರು ತಮ್ಮ ನಾಲ್ಕು ದಶಕಗಳ ಸುದೀರ್ಘ ರಾಜಕೀಯ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಹಿಂದುತ್ವದ ರಾಜನೀತಿ ಮೂಲಕ ಪಕ್ಷ ಮುನ್ನೆಡಿಸಲು ಮುಂದಾಗಿದ್ದಾರೆ.ರಾಜಕೀಯ ಪರಿಸ್ಥಿತಿಯಲ್ಲಿ ಸಕ್ರಿಯವಾಗಿ ಉಳಿಯಬೇಕಾದರೆ ಇಂತಹ ಬದಲಾವಣೆ ಅನಿವಾರ್ಯ ಎಂಬುದನ್ನು ನಾಯ್ಡು ಮನಗಂಡಿದ್ದಾರೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.ಆಂಧ್ರಪ್ರದೇಶದಲ್ಲಿ ವೈ.ಎಸ್.ಜಗನ್ ಮೋಹನ ರೆಡ್ಡಿ ಮುಖ್ಯಮಂತ್ರಿಯಾದ ಬಳಿಕ ದೇವಾಲಯಗಳ ಮೇಲೆ ನಡೆಯುತ್ತಿರುವ ಆಕ್ರಮಣ, ಮೂರ್ತಿ ಧ್ವಂಸ,ವಿಗ್ರಹಗಳ ಕಳ್ಳತನ, ರಥಗಳಿಗೆ ಬೆಂಕಿ, ಕ್ರೈಸ್ತ ಧರ್ಮಕ್ಕೆ ಮತಾಂತರ ಸರ್ಕಾದ ಮಂತ್ರಿಗಳ ಹಿಂದು ವಿರೋದಿ ಧೋರಣೆ ಸೇರಿದಂತೆ ಹಲವಾರು ವಿಚಾರಗಳನ್ನು ಮುಂದಿಟ್ಟುಕೊಂಡು ನಾಯ್ಡು ಅವರು ಜಗನ್ ವಿರುದ್ಧ ಆಕ್ರಮಣಕಾರಿ ಹೋರಾಟಕ್ಕೆ ಇಳಿದಿದ್ದಾರೆ. ಜಗನ್ ಅಧಿಕಾರಕ್ಕೆ ಬಂದ ಬಳಿಕ ಅಂದರೆ 2019ರಿಂದ ಈಚೆಗೆ ರಾಜ್ಯದಲ್ಲಿ 100ಕ್ಕೂ ಹೆಚ್ಚು ದೇವಾಲಯಗಳ ಮೇಲೆ ದಾಳಿ ನಡೆದಿದೆ,…
Author: admin
ನ್ಯೂಜ್ ಡೆಸ್ಕ್:-ಕನ್ನಡದ ಕಿರುತೆರೆಯ ಸರಿಗಮಪ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದ ಸಂಜಿತ್ ಹೆಗ್ಡೆ ತಮ್ಮ ಗಾಯನ ಪ್ರತಿಭೆಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಬಹುತೇಕ ದಕ್ಷಿಣ ಭಾರತದ ಗಾಯಕನಾಗಿ ಹೊರಹೊಮ್ಮಿದ್ದಾರೆ. ಗಾಯಕ ಇದೀಗ ನಟನಾಗಿ ಹೊಸ ಪಯಣ ಆರಂಭಿಸಿದ್ದು, ಖ್ಯಾತ ನಟಿ ಶ್ರುತಿ ಹಾಸನ್ ಜೊತೆ ನಟಿಸಿರುವುದು ವಿಶೇಷನೆಟ್‌ಫ್ಲಿಕ್ಸ್‌ನ ಮೊದಲ ತೆಲುಗು ಸಿನಿಮಾದಲ್ಲಿ ಸಂಜಿತ್ ಹೆಗ್ಡೆ ಶ್ರುತಿಹಾಸನ್ ಜೊತೆಗೆ ನಟಿಸಿರುವ ‘ಪಿಟ್ಟ ಕತಲು’ ಮೊದಲ ನೆಟ್‌ಫ್ಲಿಕ್ಸ್ ಒರಿಜಿನಲ್ ತೆಲುಗು ಸಿನಿಮಾ ಆಗಿದೆ.ಈ ಹಿಂದೆ ಇನ್ನಾವುದೇ ತೆಲುಗು ಸಿನಿಮಾಕ್ಕೆ ನೆಟ್‌ಫ್ಲಿಕ್ಸ್ ಬಂಡವಾಳ ಹೂಡಿರಲಿಲ್ಲ. ನಾಲ್ಕು ಮಂದಿ ನಿರ್ದೇಶಕರು ನಾಲ್ಕು ಕತೆಗಳನ್ನು ಸಂಕಲನವಾಗಿ ನಿರ್ದೇಶಿಸಿದ್ದಾರೆ.ಹಿಂದಿಯಲ್ಲಿ ಇತ್ತಿಚಿಗೆ ವೆಬ್ ಸಿರಿಸ್ ಸರಣಿಯಲ್ಲಿ ಸಿನಿಮಾಗಳು ಯಶಸ್ವಿಯಾಗುತ್ತಿದ್ದು 2018 ರಲ್ಲಿ ಅಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ‘ಲಸ್ಟ್ ಸ್ಟೋರಿಸ್ ಎಂಬ ವೆಬ್ ಸರಣಿಯನ್ನು ತೆಲುಗಿನಲ್ಲಿ ‘ಪಿಟ್ಟ ಕಥಲು’ ಹೆಸರಿನಲ್ಲಿ ರೀಮೇಕ್ ಮಾಡಲಾಗುತ್ತಿದೆ. ಒಟ್ಟು ನಾಲ್ಕು ಕಥೆಗಳನ್ನು ಹೊಂದಿರುವ ಈ ಸರಣಿಯನ್ನು ತೆಲುಗಿನ ನಾಲ್ಕು ಜನ ನಿರ್ದೇಶಕರಾದ ವಿಶೇಷವೆಂದರೆ,…
ನಿಮ್ಮಿಂದಾಗದು ಎಂದು ಹಾಸ್ಯ ಮಾಡಿವರ ಮುಂದೆಯೇ ಸರಣಿ ಗೆದ್ದು ಬೀಗಿದ ಭಾರತ. ಇಡಿ ವಿಶ್ವ ಭಾರತದ ತಂಡದ ಆಟವನ್ನು ಮನಸಾರೆ ಮೆಚ್ಚಿ ಹೊಗಳಿದೆ. ಟೀಂ ಇಂಡಿಯಾ ಅನುಭವಿಸಿದ ನೋವು, ಅವಮಾನ ಒಂದಾ.. ಎರಡಾ..! ನ್ಯೂಜ್ ಡೆಸ್ಕ್:-ಆಸ್ಟ್ರೇಲಿಯಾ ವಿರುದ್ದದ 4ನೇ ಮತ್ತು ಅಂತಿಮ ಟೆಸ್ಟ್ ನಲ್ಲಿ ಪ್ರವಾಸಿ ಭಾರತ ತಂಡ ಪ್ರಬಲ ಆಸ್ಟ್ರೇಲಿಯಾ ತಂಡವನ್ನು 3 ವಿಕೆಟ್ ಗಳ ಅಂತರದಲ್ಲಿ ಸೋಲಿಸಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ. ಬ್ರಿಸ್ಬೇನ್ ನಲ್ಲಿನ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 3 ವಿಕೆಟ್‌ಗಳ ಅಂತರದಲ್ಲಿ ಮಣಿಸಿದ ಭಾರತ ತಂಡ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 2–1 ಅಂತರದಿಂದ ಕೈ ವಶ ಮಾಡಿಕೊಂಡು, ಆಸ್ಟ್ರೇಲಿಯಾ ಎಸೆದಿದ್ದ ಸವಾಲಿಗೆ ಭಾರತ ತಂಡ ಸಮರ್ಥವಾಗಿ ಆಟ ಆಡುವ ಮೂಲಕ ಗೆಲವು ಸಾಧಿಸಿ ಗೆದ್ದು ಬೀಗಿತು. ಅಂತಿಮ ದಿನವಾದ ಇಂದು ಆರಂಭದಲ್ಲೇ ಭಾರತ ಆಘಾತ ಎದುರಿಸಿತು. ರೋಹಿತ್ ಶರ್ಮಾ ಕೇವಲ 7 ರನ್ ಗಳಿಸಿ ಔಟ್ ಆದರು. ಬಳಿಕ ಜೊತೆಗೂಡಿದ…
ಕೋಲಾರ: ಮಾಹಿತಿ ಹಕ್ಕು ಕಾರ್ಯಕರ್ತ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಸಕಾಲದಲ್ಲಿ ಮಾಹಿತಿ ನೀಡದ ಶ್ರೀನಿವಾಸಪುರ ತಾಲೂಕು ದಳಸನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಗೆ ರಾಜ್ಯ ಮಾಹಿತಿ ಹಕ್ಕು ಆಯೋಗ 10 ಸಾವಿರ ರೂ.ಗಳ ದಂಡ ವಿಧಿಸಿ ದಂದದ ಮೊತ್ತವನ್ನು ಅಧಿಕಾರಿ ವೇತನದಲ್ಲಿ ಕಡಿತಗೊಳಿಸುವಂತೆ ಆದೇಶಿಸಿದೆ.ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ 14ನೇ ಹಣಕಾಸು ಯೋಜನೆಯಡಿಯಲ್ಲಿ ಬಿಡುಗಡೆಯಾಗಿರುವ ಅನುದಾನದ ಮಾಹಿತಿಯನ್ನು ನೀಡುವಂತೆ ಶ್ರೀನಿವಾಸಪುರದ ಮಾಹಿತಿ ಹಕ್ಕು ಕಾರ್ಯಕರ್ತ ಶಬ್ಬೀರ್ ಅಹ್ಮದ್ ದಿನಾಂಕ 08/11/2017 ರಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಕಲಂ 6(1)ರ ಅಡಿಯಲ್ಲಿ ಆರ್ಜಿ ಸಲ್ಲಿಸಿದ್ದರು.ಪಿಡಿಒ ಈ ಅರ್ಜಿಯನ್ನು ನಿರ್ಲಕ್ಷಿಸಿದ್ದರು. ಈ ಕುರಿತು ಶಬ್ಬೀರ್ ಅಹಮ್ಮದ್ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು.ಮೇಲ್ಮನವಿ ಪ್ರಾಧಿಕಾರದ ಆದೇಶವನ್ನು ದಳಸನೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಲಿಸಿರಲಿಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು ಪ್ರತಿವಾದಿಯು ಸತತವಾಗಿ ಆಯೋಗದ ವಿಚಾರಣೆಗಳಿಗೆ ಸೊಕ್ತವಾದ ಕಾರಣಗಳಿಲ್ಲದೆ ಗೈರು ಹಾಜರಾಗಿರುತ್ತಾರೆ.ಅರ್ಜಿದಾರರಿಗೆ ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 7(1)ರನ್ವಯ ನಿಗಧಿತ…
ಘಟನೆ ಗುಜರಾತ್’ನ ಸೂರತ್ ನಗರದ ಕೊಸಂಬಾದಲ್ಲಿ ನಡೆದಿದೆ.ಚಾಲಕನ ನಿಯಂತ್ರಣ ತಪ್ಪಿದ್ದ ಟ್ರಕ್ ಫುಟ್ ಬಾತ್ ಹತ್ತಿದೆ.ಘಟನೆಯಲ್ಲಿ 15 ಮಂದಿ ಕಾರ್ಮಿಕರು ಸಾವನಪ್ಪಿರುತ್ತಾರೆ. ನ್ಯೂಜ್ ಡೆಸ್ಕ್: ಗುಜರಾತ್ ರಾಜ್ಯದ ಸೂರತ್ ನಗರದ ಕೊಸಂಬಾದಲ್ಲಿ ರಣ ಭೀಕರ ಅಪಘಾತ ನಡೆದಿದ್ದು.ರಸ್ತೆಯಲ್ಲಿ ಸಾಗುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಪಾದಚಾರಿ ಮಾರ್ಗಕ್ಕೆ(ಪುಟ್ ಬಾತ್) ನುಗ್ಗಿದ್ದು, ಅಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಟ್ರಕ್ ಹರಿದು 15 ಮಂದಿ ಕಾರ್ಮಿಕರು ಸಾವನಪ್ಪಿದ್ದು ಉಳಿದಂತೆ 6 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ನಸುಕಿನಲ್ಲಿ ನಡೆದಿದೆ.ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಸಾವನ್ನಪ್ಪಿದ್ದ ಎಲ್ಲರೂ ಕಾರ್ಮಿಕರಾಗಿದ್ದು, ರಾಜಸ್ಥಾನ ಮೂಲದವರು ಎಂದು ಹೇಳಲಾಗಿದೆ.ಸಂತಾಪ ಸೂಚಿಸಿರುವ ಪ್ರಧಾನಿ ಮೋದಿಘಟನೆ ಕುರಿತಾಗಿ ಪ್ರತಿಕ್ರಿಯಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಸೂರತ್ ಟ್ರಕ್ ಅಪಘಾತದಲ್ಲಿ ಹಲವು ಜನರು ಸಾವನ್ನಪ್ಪಿರುವುದು ದುರಂತ. ಮೃತರ ಕುಟುಂಬಸ್ಥರಿಗೆ ಘಟನೆ ಕುರಿತಾಗಿ ತೀವ್ರ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.…
ಶ್ರೀನಿವಾಸಪುರ: ಮಾತೃ ಭಾಷೆ ಹೃದಯದ ಭಾಷೆಯಾಗಿದ್ದು, ಯಾವುದೇ ಸಂದರ್ಭದಲ್ಲಿ ಅದನ್ನು ಮರೆಯಲು ಸಾಧ್ಯವಿಲ್ಲ. ಆಡುವ ಭಾಷೆ ಸಾಮಾನ್ಯ ವ್ಯಕ್ತಿಗೆ ತಲುಪಬೇಕಾಗುತ್ತದೆ ಅಕ್ಷರ ಬಳಕೆ ಇಲ್ಲದ ಕಾಲದಲ್ಲೂ ಸರಳವಾದ ಜನಪದ ಸಾಹಿತ್ಯ ಜನರ ಮನಸ್ಸಿಗೆ ಮುದ ನೀಡಿತ್ತು ಎಂದು ಶಾಸಕ ರಮೇಶಕುಮಾರ್ ಹೇಳಿದರು.ಅವರು ತಾಲ್ಲೂಕಿನ ಹೋಬಳಿ ಕೇಂದ್ರವಾದ ರೋಣೂರಿನ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಶ್ರೀನಿವಾಸಪುರ ತಾಲ್ಲೂಕು ೧೧ ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಆಡಳಿತದಲ್ಲಿ ಸರಳವಾದ ಕನ್ನಡ ಬಳಕೆಯಾಗಬೇಕು. ಅಗತ್ಯ ಇರುವ ಕಡೆ ಇಂಗ್ಲೀಷ್ ಪದ ಬಳಕೆ ತಪ್ಪಲ್ಲ ಎಂದ ಅವರು ಭಾಷೆ ಮನುಕುಲದ ವಿಶಿಷ್ಟ ಕೊಡುಗೆಯಾಗಿದೆ, ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದೆ ನಿಜವಾದ ಭಾಷೆ, ಭಾಷೆಯ ಮೂಲ ಸ್ಥಾನ ತಾಯಿ, ತಾಯಿ ಭಾಷೆ ಕಲಿಸುತ್ತಾಳೆ, ಅದುವೆ ಮಾತೃಭಾಷೆ ಬದಲಾದ ವ್ಯವಸ್ಥೆಯಲ್ಲಿ ತಾಲ್ಲೂಕಿನಲ್ಲಿ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇಲ್ಲಿನ ಜನರ ಆಡುಭಾಷೆಯಾಗಿದ್ದ ತೆಲುಗು ಭಾಷೆಯ ಪ್ರಭಾವ ಕ್ರಮೇಣ ಕಡಿಮೆಯಾಗುತ್ತಿದೆ. ಈ ಭಾಗದಲ್ಲಿ ಕನ್ನಡ…
ನ್ಯೂಜ್ ಡೆಸ್ಕ್ : ಗೋವಾದಲ್ಲಿ ಇಂದು ಪ್ರಾರಂಭವಾದ ಅಂತಾರಾಷ್ಟ್ರೀಯ ಚಿತ್ರೋತ್ಸವ ಕಾರ್ಯಕ್ರಮವನ್ನು ಕಿಚ್ಚ ಸುದೀಪ್ ಉದ್ಘಾಟಿಸಿ ಕನ್ನಡದಲ್ಲಿ ಮಾತು ಆರಂಭಿಸುವ ಮೂಲಕ ಅಪರೂಪದಲ್ಲಿ ಅಪರೂಪದ ಅವಕಾಶವನ್ನು ಪಡೆದುಕೊಂಡಿದ್ದಾರೆ. ಪ್ರಮುಖ ಅಂಶಗಳುಗೋವಾ ಚಿತ್ರೋತ್ಸವಕ್ಕೆ ಮುಖ್ಯ ಅತಿಥಿ ಕರುನಾಡ ಚರ್ಕವರ್ತಿಪಣಜಿಯಲ್ಲಿ ನಡೆದ ಉದ್ಘಾಟನಾ ಸಮಾರಂಭಕನ್ನಡದಲ್ಲೇ ಮಾತು ಆರಂಭಿಸಿದ ಕಿಚ್ಚ ಸುದೀಪ್‌ಜ.16ರಿಂದ ಜ.24ರವರೆಗೆ ನಡೆಯುವ ಚಿತ್ರೋತ್ಸವ ಪ್ರತಿಷ್ಠಿತ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ (IFFI) 51ನೇಯದು ಜ.16ರಿಂದ ಆರಂಭವಾಗಿದ್ದು, ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಕನ್ನಡದ ಹೆಮ್ಮೆಯ ನಟ ಕಿಚ್ಚ ಸುದೀಪ್ ಭಾಗವಹಿಸಿದ್ದಾರೆ. ಹಲವು ದೇಶ, ಭಾಷೆಗಳ ಸಿನಿಮಾಸಕ್ತರು ನೆರೆದಿದ್ದ ಆ ಕಾರ್ಯಕ್ರಮದ ವೇದಿಕೆಯಲ್ಲಿ ಕನ್ನಡಲ್ಲಿ ಮಾತು ಪ್ರಾರಂಭಿಸುವ ಮೂಲಕ ವಿಶೇಷ ಗಮನ ಸೇಳದಿದ್ದಾರೆ ಪ್ರತಿಯೊಬ್ಬರಿಗೂ ಕನ್ನಡ ಚಿತ್ರರಂಗದ ಪರವಾಗಿ ಹಾಗೂ ಕರ್ನಾಟಕದ ಪರವಾಗಿ ಈ ಕಿಚ್ಚನಿಂದ ನಮಸ್ತೆ’ ಎಂದು ಕನ್ನಡದಲ್ಲಿಯೇ ಹೇಳುವ ಮೂಲಕ ಸುದೀಪ್ ಮಾತು ಆರಂಭಿಸಿದರು. ಆ ಮೂಲಕ ಅವರು ಮಾತೃಭಾಷೆ ಮೇಲೆ ತಮಗೆ ಇರುವ ಅಭಿಮಾನವನ್ನು ಮೆರೆದಿದ್ದಾರೆ. ಚಿಕ್ಕದಾಗಿ ಚೊಕ್ಕದಾಗಿ ತಮ್ಮ ಮಾತುಗಳನ್ನು…
ನ್ಯೂಜ್ ಡೆಸ್ಕ್: ಕೆಜಿಎಫ್ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಟಾಲಿವುಡ್ ಸ್ಟಾರ್ ಬಾಹುಬಲಿ ಖ್ಯಾತಿಯ ಪ್ರಭಾಸ್ ಕಾಂಬಿನೇಷನ್ ನ ಬಹುನಿರೀಕ್ಷೆಯ “ಸಲಾರ್” ಸಿನಿಮಾ ಮುಹೂರ್ತ ಶುಕ್ರವಾರ ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ನೆರವೇರಿದೆ.ಮುಹೂರ್ತ ಕಾರ್ಯಕ್ರಮದಲ್ಲಿ ಸಲಾರ್ ಸಿನಿಮಾ ತಂಡದವರಾದ ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್, ಪ್ರಭಾಸ್ ಮತ್ತು ವಿಶೇಷ ಅತಿಥಿ ಯಶ್ ಸೇರಿದಂತೆ ರಾಜ್ಯದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಭಾಗವಹಿಸಿದ್ದರು. ‘ಕೆಜಿಎಫ್ʼ ಎಂಬ ಪ್ಯಾನ್ ಇಂಡಿಯಾ ಸಿನಿಮಾ ತೆಗೆದು ಕನ್ನಡ ಚಿತ್ರರಂತದತ್ತ ಇತರೆ ಭಾಷೆಯ ನಿರ್ಮಾಪಕರು ಪ್ರೇಕ್ಷರು ತಿರಿಗಿ ನೋಡುವಂತ ಸಿನಿಮಾವನ್ನು ನಿರ್ಮಾಣ ಮಾಡಿದ ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ಅವರು ನಿರ್ಮಿಸುತ್ತಿರುವ ಹಾಗೂ ಅದೇ “ಕೆಜಿಎಫ್ʼ ಚಿತ್ರವನ್ನು ನಿರ್ದೇಶಿಸಿ ಮೊದಲ ಟೀಸರ್‌ನಿಂದಲೇ ಜಗತ್ತಿನ ಎಲ್ಲ ದಾಖಲೆಗಳನ್ನು ಬ್ರೇಕ್ ಮಾಡಿರುವ ಪ್ರಶಾಂತ್ ನೀಲ್ ನಿರ್ದೇಶನದ “ಸಲಾರ್ʼ ಚಿತ್ರಕ್ಕೆ ರಾಮಾನಾಯ್ಡು ಸ್ಟುಡಿಯೋದಲ್ಲಿ ಚಾಲನೆ ನೀಡಲಾಯಿತು.ಬೆಳಗ್ಗೆ 11 ಗಂಟೆಗೆ ಸರಿಯಾಗಿ ಮುಹೂರ್ತದ ಪೂಜೆ ನೆರವೇರಿತು. ಚಿತ್ರದ ನಾಯಕ ಪ್ರಭಾಸ್, ತೆಲುಗು ಮತ್ತು…
ಶ್ರೀನಿವಾಸಪುರ:-ಸಂಕ್ರಾಂತಿಯಂದು ಕಾಟಮರಾಯುಡು ದೇವಾಲಯದ ಬಯಲಿನಲ್ಲಿ ಹಚ್ಚುವ ಕಿಚ್ಚಿನ ಬಳಿ ಕೃಷಿಕರು ತಾವು ಸಾಕುವ ಜಾನುವಾರಗಳನ್ನು ತಂದು ಪೂಜಿಸಿದರೆ ಜಾನುವಾರಗಳ ವಂಶಾಭಿವೃದ್ಧಿಯಾಗುತ್ತದೆ ಎಂದು ಕೃಷಿಕರ ನಂಬಿಕೆ ಅದರಂತೆ ರೈತರು ಪಟ್ಟಣದ ಮುಳಬಾಗಿಲು ರಸ್ತೆಯ ಹೊಗಳಗೆರೆ ತಿರುವಿನಲ್ಲಿರುವ ಕಾಟಮರಾಯುಡು ದೇವಾಲದ ಬಯಲಿನಲ್ಲಿ ಹಾಕಲಾಗಿದ್ದ ಕಿಚ್ಚು ಬೆಂಕಿ (ಹತ್ತಿರ) ಪ್ರತಿ ವರ್ಷದಂತೆ ಈ ವರ್ಷವು ತಮ್ಮ ಜಾನುವಾರುಗಳನ್ನು ತಂದು ಪೂಜಿಸಿಕೊಂಡು ನಂತರ ಕಾಟಮರಾಯಡು ಪಟಕ್ಕೆ ಪೂಜೆ ಸಲ್ಲಿಸಿದರು. ಇದು ಇಲ್ಲಿನ ಸಂಪ್ರದಾಯ ಎನ್ನುತ್ತಾರೆ ಕಾಟಮರಾಯುಡು ದೇವಾಲಯದ ವಂಶಪಾರಂಪರ್ಯ ಅರ್ಚಕ ಕುಟುಂಬದ ಅಪ್ಪೂರೊಳ್ಳು ರಾಜು,ಅವರು ಮಾತನಾಡಿ ಹಿಂದೆ ದೇವಾಲಯದ ಬಳಿ ದೊಡ್ಡ ಮಟ್ಟದಲ್ಲಿ ಕಿಚ್ಚು ಹಾಕಲಾಗುತಿತ್ತು ಜಾನುವಾರಗಳನ್ನು ವಿಶೇಷವಾಗಿ ಹಸು ಎತ್ತುಗಳನ್ನು ಸ್ವಚ್ಚಗೊಳಿಸಿ ಶೃಂಗರಿಸಿ ತಂದು ಕಾಟಮಯಾಯುಡು ವಿಗ್ರಹಕ್ಕೆ ಪೂಜಿಸಿ ನಂತರ ಅವುಗಳನ್ನು ಬೆಂಕಿಯಲ್ಲಿ ಹಾಯಿಸಿಕೊಂಡು ಹೋಗುತ್ತಿದ್ದರು ಬದಲಾದ ವ್ಯವಸ್ಥೆಯಲ್ಲಿ ಜಾನುವಾರಗಳ ಸಂಖ್ಯೆ ಕಡಿಮೆಯಾಗುತ್ತಿದೆ ಬೆರಳಿಣಿಕೆಯಷ್ಟು ಸಂಖ್ಯೆಯಲ್ಲಿ ಹಸು,ಎತ್ತುಗಳನ್ನು ಮಾತ್ರ ಕರೆತಂದು ಪೂಜಿಸಿಕೊಂಡು ಹೋಗುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಅರ್ಚಕ ಅಪ್ಪೂರೊಳ್ಳು ಶ್ರೀರಾಮಪ್ಪ, ಕುಟುಂಬದ ಸದಸ್ಯರು, ಹರಿಶ್,ಕೊಲಮಿಮಂಜು, ನರಸಿಂಹ,…
ನ್ಯೂಜ್ ದೆಸ್ಕ್:- ಸುಗ್ಗಿಯ ಸಂಭ್ರಮ ಸಂಕ್ರಾಂತಿಗೆ ನಟ ದರ್ಶನ್ ಜನತೆಗೆ ಮತ್ತು ಅಭಿಮಾನಿಗಳಿಗೆ ಶುಭ ಕೋರಿದ್ದಾರೆ.“2021ರ ಮೊದಲನೆಯ ಹಬ್ಬ ಸಂಕ್ರಾಂತಿ ಸಮೃದ್ಧಿಯ ಸಂಕೇತ. ಎಲ್ಲರ ಮನೆ-ಮನೆಗೂ ಎಳ್ಳು ಬೆಲ್ಲ ಬೀರಿ ಸಂತಸ ಹಂಚಿಕೊಳ್ಳುವ ಸಮಯ.ಕಳೆದ ವರ್ಷದ ಸಂಭ್ರಮಗಳನ್ನು ಕಸಿದುಕೊಂಡಿದ್ದ ಕೊರೋನಾ ದೂರವಾಗಿ ಸಂಕ್ರಾಂತಿಯಿಂದ ಎಲ್ಲರ ಬಾಳಲ್ಲೂ ಹೊಸ ಹುರುಪು, ಉತ್ಸಾಹ ಮೂಡಲಿ ಎಂದು ಆಶಿಸುತ್ತೇನೆ. ಸಮಸ್ತ ನಾಡಿನ ಜನತೆಗೆ ಮಕರ ಸಂಕ್ರಾಂತಿಯ ಹಾರ್ಧಿಕ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ. ದರ್ಶನ್ ಅಭಿನಯದ ಅಭಿಮಾನಿಗಳ ಬಹು ನೀರಿಕ್ಷಿತ ರಾಬರ್ಟ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಶಿವರಾತ್ರಿಗೆ ಮಾರ್ಚ್ 11ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ದರ್ಶನ್ ಫೇಸ್ ಬುಕ್ ಲೈನ್ ನಲ್ಲಿ ಘೋಷಿಸಿದ್ದರು.