ತಿರುಮಲ: ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ತಿರುಮಲ ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸಂಕ್ರಾಂತಿ ಮುನ್ನಾ ದಿನವಾದ ಬುಧವಾರ ತಿರುಮಲ ಶ್ರೀನಿವಾಸನನ್ನು ದರ್ಶನ ಮಾಡಲು 34,768 ಭಕ್ತರು ಭೇಟಿ ನೀಡಿದ್ದು, 13,462 ಭಕ್ತರು ತಲೆ ಮುಡಿ ನೀಡಿರುತ್ತಾರೆ,ಹುಂಡಿ ಆದಾಯ ರೂ. 2.63 ಕೋಟಿ ರೂ ಎಂದು ಟಿಟಿಡಿ ಅಧಿಕಾರಿಗಳು ಹೇಳಿರುತ್ತಾರೆ. ಇಂದಿಗೆ ವೆಂಕಟೇಶ್ವರನ ಸನ್ನಿಧಾನದಲ್ಲಿ ಧನುರ್ಮಾಸದ ಪೂಜೆಗಳು ಕೊನೆಗೊಳ್ಳುತ್ತವೆ. ಈ ಹಿನ್ನಲೆಯಲ್ಲಿ ದೇವಸ್ಥಾನದಲ್ಲಿ ಶುಕ್ರವಾರದಿಂದ ಮುಂಜಾನೆ ನಡೆಯುವಂತ ಸೇವೆಗಳಾದ ಸುಪ್ರಭಾತ ಸೇವೆ ಪುನರಾರಂಭಗೊಳ್ಳಲಿದ್ದು, ಶುಕ್ರವಾರ ಗೋದಾದೇವಿ ಪರಿಣಯೋತ್ಸವ ಮತ್ತು ಪಾರ್ವತಿಮಾತೆ ಹಬ್ಬವು ನಡೆಯಲಿದೆ ಎಂದು .ಟಿಟಿಡಿ ಇಒ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಕಳೆದ ತಿಂಗಳು ಡಿಸೆಂಬರ್ 16 ರಂದು ಧನುರ್ಮಸ ಪೂಜೆ ಪ್ರಾರಂಭವಾದ ಹಿನ್ನಲೆಯಲ್ಲಿ ಸುಪ್ರಭಾತ ಸೇವೆ ಬದಲಿಗೆ ಗೋದಾ ತಿರುಪ್ಪವಾಯಿ ಪಠಣ ಪ್ರಾರಂಭ ಮಾಡಲಾಗಿತ್ತು.
Author: admin
ನ್ಯೂಜ್ ಡೆಸ್ಕ್:ಸಚಿವ ಸ್ಥಾನದಿಂದ ಕೈಬಿಡಲಾಗಿರುವ ಕೋಲಾರದ ಉಸ್ತುವಾರಿ ಹಾಗು ಅಬ್ಕಾರಿ ಸಚಿವ ಮುಳಬಾಗಿಲು ಕ್ಷೇತ್ರದ ಶಾಸಕ ಎಚ್ ನಾಗೇಶ್ ಅವರನ್ನು ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲಾಗಿದೆ. ನೀಡಲಾಗಿದೆ.ಜೊತೆಗೆ ಅದ್ಯಕ್ಷ ಸ್ಥಾನಕ್ಕೆ ಸಂಪುಟ ದರ್ಜೆಯ ಸ್ಥಾನಮಾನವನ್ನು ನೀಡಲಾಗಿದೆ. ಸಚಿವ ಸ್ಥಾನ ಕೈ ತಪ್ಪಿರುವ ಹಿನ್ನಲೆಯಲ್ಲಿ ಅಸಮಧಾನ ಗೋಂಡಿರುವ ನಾಗೇಶ್ ಅವರನ್ನು ಸದ್ಯಕ್ಕೆ ತೃಪ್ತಿ ಪಡಿಸುವ ತಂತ್ರ ಎನ್ನಲಾಗುತ್ತಿದೆ.ಬುಧವಾರ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುತ್ತಿರುವ ಸಂಬಂದ 7 ಮಂದಿ ನೂತನ ಸಚಿವರಾಗಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು.ಈ ಹಿನ್ನೆಲೆ ಅಬಕಾರಿ ಖಾತೆ ನಿರ್ವಹಿಸುತ್ತಿದ್ದ ಸಚಿವ ಎಚ್ ನಾಗೇಶ್ ಅವರಿಂದ ಸಿಎಂ ಬಿಎಸ್ ಯಡಿಯೂರಪ್ಪ ರಾಜೀನಾಮೆ ಪಡೆದಿದ್ದರು.ರಾಜಿನಾಮೆ ನೀಡಿದ ನಂತರ ಅವರು ಪ್ರತಿಕ್ರಿಯಿಸಿ ಸಚಿವ ಸ್ಥಾನಕ್ಕೆ ಸಮಾನಾಂತರವಾದ ಹುದ್ದೆ ನೀಡುತ್ತಾರಂತೆ. ಸಿಎಂ ಮಾತಿಗೆ ಬೆಲೆಕೊಟ್ಟು ನಾನು ರಾಜಿನಾಮೆ ನೀಡುತ್ತಿದ್ದೇನೆ ಎಂದು ರಾಜಿನಾಮೆ ಪ್ರಸಹನವನ್ನು ಸಮರ್ಥಿಸಿಕೊಂಡಿದ್ದರು.ಸಂಪುಟದಿಂದ ಕೈಬಿಟ್ಟ ಹಿನ್ನಲೆಯಲ್ಲಿಯೇ ಈಗ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ಎಚ್ ನಾಗೇಶ್‌ಗೆ ನೀಡಲಾಗಿದೆ. ಇನ್ನು ನಿಗಮದ…
ನ್ಯೂಸ್ ಡೆಸ್ಕ್: ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭಗೊಂಡಿದೆ ಮುಖ್ಯಮಂತ್ರಿ ಯಡಿಯೂರಪ್ಪ ಫೋನ್ ಮಾಡಿ ಅಧಿಕೃತ ಆಹ್ವಾನ ನೀಡಿದ್ದಾರೆ ಎನ್ನುವ ಲಿಸ್ಟ್ ನಲ್ಲಿ ಸುಳ್ಯದ ಶಾಸಕ ಎಸ್.ಅಂಗಾರ, ಉಮೇಶ್ ಕತ್ತಿ, ಎಂಟಿಬಿ ನಾಗರಾಜ್ ಹಾಗೂ ಸಿ.ಪಿ ಯೋಗೇಶ್ವರ್‌ಗೆ ಸಚಿವ ಸ್ಥಾನ ಫಿಕ್ಸ್ ಆಗಿದ್ದು,ಶಾಸಕ ಅಂಗಾರ ಅವರಿಗೆ ಸಿಎಂ ಬಿಎಸ್‌ವೈ ಮಂಗಳವಾರ ರಾತ್ರಿ ಫೋನ್ ಮಾಡಿ ದೃಢಪಡಿಸಿದ್ದಾರೆ ಎನ್ನಲಾಗಿದೆ.ಸಿ.ಪಿ ಯೋಗೇಶ್ವರ್ ಅವರಿಗೂ ಯಡಿಯೂರಪ್ಪ ಕರೆ ಮಾಡಿದ್ದಾರಂತೆ ಇದನ್ನು ಯೋಗೇಶ್ವರ್ ಅವರೆ ಮಾಧ್ಯಮಗಳಿಗೆ ದೃಡಪಡಿಸಿರುವುದಾಗಿ ಹೇಳಲಾಗಿದೆ. ಇನ್ನು ಉಮೇಶ್ ಕತ್ತಿ ಅವರಿಗೂ ಬಿಎಸ್‌ವೈ ಬುಧವಾರ ಸಂಜೆ ಫೋನ್ ಮಾಡಿ ಬೆಂಗಳೂರಿಗೆ ಬರುವಂತೆ ಆಹ್ವಾನ ನೀಡಿದ್ದಾರಂತೆ.ಮತ್ತೋರ್ವ ಶಾಸಕ ಎಂಟಿಬಿ ನಾಗರಾಜ್‌ಗೂ ಸಚಿವ ಸ್ಥಾನ ಅಧಿಕೃತಗೊಂಡಿದೆ ಎನ್ನಲಾಗಿದೆ.ಬುಧವಾರ ಮಧ್ಯಾಹ್ಮ 3.50 ಕ್ಕೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಸಿಎಂ ಬಿಎಸ್ ಯಡಿಯೂರಪ್ಪ ಅವರು ಹೇಳಿರುವಂತೆ 7 ಅಥವಾ 8 ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಲಾಗುತ್ತದೆ. ಆದರೆ ಇದುವರೆಗೆ ಕೇವಲ ನಾಲ್ಕು ಮಂದಿ ಹೆಸರು ಮಾತ್ರ ಅಧಿಕೃತಗೊಂಡಿದ್ದು,…
ತೆಲಗು ಕಿರುತೆರೆ ನಿರೂಪಕ ಪ್ರದೀಪ್ ಹೀರೋ ಆಗಿ ನಟಿಸಿರುವ ಸಿನಿಮಾ’ನೀಲಿ ನೀಲಿ ಆಕಾಶಂ..’ ಹಾಡು ಸೂಪರ್,ಡೂಪರ್ ಹಿಟ್ಕನ್ನಡದ ನಿರ್ಮಾಪಕ ಹಾಗು ನಾಯಕಿ ನಟಿ “ನೀಲಿ ನೀಲಿ ಆಕಾಶಂ ಇದ್ದಾಂ ಅನುಕುನ್ನಾ” ಹಾಡು ಸಾಮಾಜಿಕ ಜಾಲತಾಣದಲ್ಲಿ ಅದರಲ್ಲೂ ವಿಶೇಷವಾಗಿ ಯೂ ಟ್ಯೂಬ್‌ನಲ್ಲಿ ಭಾರಿ ಸದ್ದು ಮಾಡಿದ ಹಾಡು, ಅನೂಪ್ ರುಬೆನ್ಸ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಹಾಡಾಗಿದ್ದು, ತೆಲಗಿನ, “30 ರೋಜುಲ್ಲೋ ಪ್ರೇಮಿಂಚಡಂ ಎಲಾ?” ಸಿನಿಮಾದ್ದು. ತೆಲುಗಿನ ಕಿರುತೆರೆಯಲ್ಲಿ ನಿರೂಪಕನಾಗಿ ಗಮನಸೆಳೆದಿರುವ ಪ್ರದೀಪ್ ಮಾಚಿರಾಜು ಈ ಸಿನಿಮಾ ಮೂಲಕ ನಾಯಕನಾಗಿ ಅಭಿನಯಿಸಿದ್ದು ನಾಯಕಿಯಾಗಿ ಕನ್ನಡದ ನಟಿ ಅಮೃತಾ ಐಯ್ಯರ್ ನಟಿಸಿದ್ದಾರೆ. ಎಲ್ಲವು ಸರಿಯಾಗಿದಿದ್ದರೆ ಕಳೆದ ಮಾರ್ಚ್‌ನಲ್ಲೇ ಸಿನಿಮಾ ತೆರೆಗೆ ಬರಬೇಕಿತ್ತು. ಲಾಕ್‌ಡೌನ್‌ನಿಂದಾಗಿ ಸಾಧ್ಯವಾಗಲಿಲ್ಲ. ಈಗ ಸಿನಿಮಾವನ್ನು ತೆರೆಗೆ ತರಲು ನಿರ್ಮಾಪಕರು ಪ್ಲ್ಯಾನ್ ಮಾಡಿಕೊಂಡಿದ್ದು, ಬಹುಶಃ ಜನವರಿ 29ಕ್ಕೆ ತೆರೆಕಾಣಲಿದಿಯಂತೆ.ದಾಖಲೆ ಬರೆದ ನೀಲಿ ನೀಲಿ ಆಕಾಶಂ ಹಾಡುಇನ್ನು, ಈ ಚಿತ್ರದ ‘ನೀಲಿ ನೀಲಿ ಆಕಾಶಂ..’ ಹಾಡು ದೊಡ್ಡ ದಾಖಲೆಯನ್ನೇ ಬರೆದಿದೆ. ಇದುವರೆಗೂ 22 ಕೋಟಿಗೂ…
ರಾಂಕಿಂಗ್‍ಸ್ಟಾರ್ ಯಶ್ ರಾಖಿಭಾಯ್ ಹುಟ್ಟುಹಬ್ಬದ ಮುನ್ನ ದಿನ ಬಿಡುಗಡೆಗೊಂಡ ಕೆಜಿಎಫ್ 2 ಸಿನಿಮಾದ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ದಾಖಲೆ ಮಾಡಿದೆ. 35ನೆ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಾಂಕಿಂಗ್ ಸ್ಟಾರ್ ಯಶ್‍ಗೆ ಇದು ಬೊಂಬಾಟ್ ಉಡುಗೊರೆ ಎನ್ನುತ್ತಾರೆ ಸಿನಿಮಾ ಮಂದಿ. ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್ ಅಬ್ಬರಕ್ಕೆ ಯೂಟ್ಯೂಬ್ ನಲ್ಲಿ ಇತರೆ ಭಾಷೆಗಳ ಸಿನಿಮಾಗಲ ದಾಖಲೆಗಳನೆಲ್ಲ ಧೂಳಿಪಟಮಾಡಿದೆ. KGF-2 ಟೀಜರ್ ಬಿಡುಗಡೆಯಾದ 18 ಗಂಟೆಗಳಲ್ಲೇ 5 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆ ಮಾಡಿರುತ್ತಾರೆ ಇದೊಂದು ಸರ್ವಕಾಲಿಕ ವಿಶ್ವದಾಖಲೆ ಎನ್ನಲಾಗಿದೆ.ನಟ ಯಶ್ ಜನ್ಮದಿನದ ಹಿಂದಿನ ದಿನ್ ಕೆಜಿಎಫ್ 2 ಚಿತ್ರದ ಟೀಸರ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ನಿರ್ಮಿಸಿದೆ.ವಿಶೇಷವೆಂದರೆ ಅತ್ಯಂತ ಕಡಿಮೆ ಅವಧಿಯಲ್ಲಿ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ಮೆಚ್ಚುಗೆ/ಲೈಕ್ಸ್ ಪಡೆದ ವಿಶ್ವದ ಮೊದಲ ಟೀಸರ್ ಎಂಬ ಹೆಗ್ಗಳಿಕೆಗೆ ಕೆಜಿಎಫ್ 2 ಸಿನಿಮಾದ ಟೀಸರ್ ದಾಖಲೆಮಾಡಿದೆ.ಕೆಜಿಎಫ್ ಚಾಪ್ಟರ್ 2 ಟೀಸರ್ ಇಂದೇ ಬಿಡುಗಡೆ,…
ಬೆಂಗಳೂರು:-2023ರ ವಿಧಾನಸಭಾ ಚುನಾವಣೆ ಗೆಲ್ಲಲು ಜೆಡಿಎಸ್ ಪಕ್ಷವನ್ನು ಬಲಗೊಳಿಸಲು ಸಂಘಟನಾತ್ಮಕವಾಗಿ ಕಾರ್ಯತಂತ್ರ ರೂಪಿಸಲು ಹೋರಟಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅದಕ್ಕಾಗಿ ಈಗಿನಿಂದಲೇ ಪಕ್ಷವನ್ನು ಬಲಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಪಕ್ಷದಲ್ಲಿ ಈಗಿರುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸಿ ಸಂಕ್ರಾಂತಿ ಬಳಿಕ ಹೊಸ ರೂಪದಲ್ಲಿ ಪಕ್ಷ ಸಂಘಟನೆ ತರುತ್ತಾರಂತೆ.ಪಕ್ಷವನ್ನು ಬಲಗೊಳಿಸುವ ಹಾಗು ಕಾರ್ಯಕರ್ತರಲ್ಲಿ ವಿಶ್ವಾಸ ತುಂಬುವ ಸಲುವಾಗಿ ಪ್ರಮುಖ ಕಾರ್ಯಕರ್ತರಲ್ಲಿ ಹಾಗು ಮುಖಂಡರೊಂದಿಗೆ ಕುಮಾರಸ್ವಾಮಿ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ.ಜೋತೆಗೆ ಕಾರ್ಯಕರ್ತರ ಸಲಹೆ, ಅಹವಾಲುಗಳನ್ನು ಕೇಳುತ್ತಿದ್ದಾರೆ.ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಿರಿಯ ನಾಯಕರು ಸಭೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ.ಸಂಕ್ರಾಂತಿ ವೇಳೆಗೆ 8 ರಿಂದ 10 ಮುಖಂಡರನ್ನು ಒಳಗೊಂಡ ಕೋರ್ ಕಮಿಟಿಯನ್ನು ರಚನೆ ಮಾಡಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.ವೈಯಕ್ತಿಕವಾಗಿ ನಾನಾಗಲಿ, ತಂದೆಯವರಾಗಲಿ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ. ಸಭೆಯಲ್ಲಿ ಚರ್ಚೆ ಮಾಡಿದ ಬಳಿಕ ಒಮ್ಮತದ ನಿರ್ಧಾರ ಕೈಗೊಳ್ಳಲಾಗುವುದು, ಪಕ್ಷವನ್ನು ಬಲಗೊಳಿಸಲು ವಿಭಾಗವಾರು, ಜಾರಿವಾರು ತಂಡಗಳನ್ನು ರಚನೆ…
ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅಬ್ಬರಿಸಿದ ಸಚಿವ ಮಾಧುಸ್ವಾಮಿಕೊರೊನಾ,ನೀತೆ ಸಂಹಿತೆ ಎಂಬ ಕಾರಣಗಳನ್ನು ನೀಡಿ ವ್ಯವಸ್ಥೆ ಜಡಗಟ್ಟಿಸಿದ್ದಾರೆಕೆಲಸ ಮಾಡೋದನ್ನೇ ಮರೆತಿದ್ದಾರೆ ಎಂದು ಕೂಗಾಡಿದ ಸಚಿವ ಮಾಧುಸ್ವಾಮಿಸಂಜೆ ವೇಳೆಗೆ ಕ್ಷಮೆಯಾಚನೆ ಮಾಡಿದ್ದಾರೆ. ತುಮಕೂರು:-ತುಮಕೂರು ವಿಭಾಗದ ಪಂಚಾಯಿತ್ ರಾಜ್ ಇಂಜನಿರಿಂಗ್ ವಿಭಾಗದ ಎಇಇ ವಿರುದ್ಧ ಗರಂ ಆದ ಮಾಧುಸ್ವಾಮಿಯವರು, ನೀನು ಕೆಲಸ ಮಾಡದಿದ್ದರೂ ನಿನ್ನ ರಕ್ಷಣೆಗೆ ನಿಲ್ಲುವ ಸೀರೆ ಸುತ್ತುವ ಆ ಕೃಷ್ಣ ಯಾರು? ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಅಲ್ಲದೆ, ಜಾಡಿಸಿ ಒದ್ದರೆ ಎಲ್ಲಿಗೆ ಹೋಗಿ ಬೀಳುತ್ತೀಯಾ ಗೊತ್ತಾ ನೀನೀಗಾ…? ರಾಸ್ಕಲ್ ಕತ್ತೆ ಕಾಯೋಕೆ ಇಲ್ಲಿಗೆ ಬಂದಿದ್ದೀಯಾ? ಏನ್ ತಿಳ್ಕೊಂಡಿದ್ದೀರಾ ನಾವು…? ರೆಸಲ್ಯೂಷನ್ ಮಾಡ್ಸಿ ಸಸ್ಪೆಂಡ್ ಮಾಡ್ಸಿ ಈ ನನ್ಮಕ್ಕಳನ್ನ ಎಂದು ಕೂಗಾಡಿದ್ದಾರೆಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಕೊರೊನಾ, ನೀತಿ ಸಂಹಿತೆ ಹೆಸರಲ್ಲಿ ಅಧಿಕಾರಿಗಳು ಜಡಗಟ್ಟಿದ್ದಾರೆ. ಜಿಲ್ಲೆಯ ಪಿಆರ್‌ಐಡಿ ವಿಭಾಗದ ಅಧಿಕಾರಿಗಳು ಕೆಲಸ ಮಾಡುವುದನ್ನೇ ಮರೆತಿದ್ದಾರೆ. ಸಭೆ ನಡೆಯುವುದಿಲ್ಲ ಎಂಬ ಉದಾಸೀನತೆ ತಾಳಿರುವ ಅಧಿಕಾರಿಗಳು ಜಿಲ್ಲೆಯಲ್ಲಿ ಒಂದೇ ಒಂದು ಕಾಮಗಾರಿಯನ್ನೂ ಸಮರ್ಪಕವಾಗಿ ಮಾಡಿಲ್ಲ. ಯಾರು…
ಶ್ರೀ ಮನ್ನಾನಾರಯಣನ ದಶಾವತಾರದಲ್ಲಿ ಕೂರ್ಮಾವತಾರ ಎರಡನೆಯ ಅವತಾರಅಮೆಯ ಮೂರ್ತಿಯನ್ನು ಪೂಜಿಸುವುದರಿಂದ ಅಭಿಷ್ಟೆಗಳು ಈಡೇರುವುದು ಎಂಬ ನಂಬಿಕೆ ಆಮೆಯ ವಿಗ್ರಹವನ್ನು ತಂದು ಮನೆಯಲ್ಲಿ ಇಟ್ಟು ಪೂಜಿಸಿದರೆ ಸಕಲ ಕಷ್ಟಗಳು ನಿವಾರಣೆಯಾಗಿ ಉತ್ತಮ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ಹೇಳಲಾಗಿದೆ.ಸಾಮಾನ್ಯವಾಗಿ ಎಲ್ಲರೂ ಬಯಸುವುದು ಅಯೂರಾರೋಗ್ಯ,ಐಶ್ವರ್ಯ,ಸುಖ ಶಾಂತಿ ನೆಮ್ಮದಿಯಿಂದ ಜೀವನ ಮಾಡಬೇಕು ಎನ್ನುವುದು ಸಹಜ ಇದೆಲ್ಲವನ್ನು ಪಡೆಯಬೇಕು ಎನ್ನುವರು ಮನೆಯಲ್ಲಿ ಆಮೆಯ ವಿಗ್ರಹವನ್ನು ಇಟ್ಟು ಪೂಜಿಸಿದರೆ ಎಲ್ಲವನ್ನು ಪಡೆಯಬಹುದು ಎನ್ನುತ್ತಾರೆ ಜ್ಯೋತಿಷ್ಯರು.ಆಮೆಯನ್ನು ವಿಷ್ಣುವಿನ ಅವತಾರ ಎಂದೇ ಹೇಳುತ್ತಾರೆ ಆಮೆಯನ್ನು ಮನೆಯಲ್ಲಿ ಇಡುವುದರಿಂದ ಲಕ್ಷ್ಮಿಯ ಆವಾಹನೆ ಆಗುತ್ತದೆ ಇದು ಲಕ್ಷ್ಮಿಯನ್ನು ಆಕರ್ಷಿಸುತ್ತದೆ ಬಹಳಷ್ಟು ವಾಡಿಕೆ ಆದ್ದರಿಂದ ನೀವು ಮನೆಯಲ್ಲಿ ಆಮೆಯ ಪ್ರತಿಮೆಯನ್ನುಯಾವಾಗಲೂ ತರಬಾರದು ಆಮೆಯ ಪ್ರತಿಮೆಯನ್ನು ಗುರುವಾರದ ದಿನ ಮನೆಗೆ ತರಬೇಕು ನಂತರ ಅದನ್ನು ಅಕ್ಕಿಯ ಒಳಗೆ ಮುಚ್ಚಿಟ್ಟು ಮರು ದಿನ ಅಂದ್ರೆ ಶುಕ್ರವಾರ ಬೆಳ್ಳಗೆ ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡಿ ಶುದ್ದ ಧರಿಸಿ ನಂತರ ದೇವರ ಕೋಣೆ ಅಥವ ನಿಗದಿತ ಸ್ಥಳದಲ್ಲಿ ಒಂದಿಷ್ಟು ಅಕ್ಕಿ ಹಾಕಿ…
ನ್ಯೂಸ್ ಡೆಸ್ಕ್:-ಬ್ರಹ್ಮಾನಂದಂ ಈ ಹೆಸರು ತೆಲಗು ಸಿನಿಮಾ ಪರದೆಯ ಮೇಲೆ ಬ್ರಹ್ಮಾಂಡವಾದ ಹೆಸರು ಪರದೆಯ ಮೇಲೆ ಪ್ರತ್ಯಕ್ಷ್ಯವಾದರೆ ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಷ್ಟು ನಗುತ್ತಾರೆ ಮೂರು ದಶಕಗಳಿಂದ ತೆಲುಗು ಚಿತ್ರ ಪ್ರೇಕ್ಷಕರನ್ನು ಹಾಸ್ಯ ಸಾಗರದಲ್ಲಿ ಮುಳುಗಿಸುತ್ತಿರುವ ಹಾಸ್ಯಬ್ರಹ್ಮ, ಬ್ರಹ್ಮಾನಂದಂ,ಅವರ ಹಾಸ್ಯ ನೋಡಿದವರಿಗೆ ಮಾನಸಿಕ ನೆಮ್ಮದಿ ಸಿಗುತ್ತಂತೆ ಇಂತ ಹಾಸ್ಯಚರ್ಕವರ್ತಿಯಲ್ಲಿ ಇನ್ನೊಬ್ಬ ಕಲಾವಿದ ಇದ್ದಾನೆ ಅನ್ನುವುದು ಸಾಕಷ್ಟು ಜನರಿಗೆ ತಿಳಿದಿಲ್ಲ ಆ ವ್ಯಕ್ತಿ ಕುಂಚವನ್ನು ಬಳಸಿದರೆ .. ರವಿವರ್ಮವನ್ನು ಮೀರಿಸುವಷ್ಟು ಜೀವಂತ ಕಲಾಪ್ರತಿಮೆ ಅರಳುತ್ತದೆ, ಸಮಯ ಸಿಕ್ಕಾಗಲೆಲ್ಲಾ ಚಿತ್ರಕಲೆಯನ್ನು ರಚಿಸುವ ಅವರು ನಟರಾಗುವ ಮೊದಲು ಉತ್ತಮ ವರ್ಣಚಿತ್ರಕಾರರಾಗಬೇಕೆಂದು ಬಯಸಿದ್ದರಂತೆ ನಟರಾದಾ ನಂತರ ಕುಂಚಕಲೆಯನ್ನು ಹವ್ಯಾಸವಾಗಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.ಗಿನ್ನೆಸ್ ದಾಖಲೆಯ ಹಾಸ್ಯನಟ ಪ್ರೇಕ್ಷಕರನ್ನು ನಗಿಸಲು ಮೂರು ದಶಕಗಳಿಗಿಂತಲೂ ಹೆಚ್ಚು ಸಮಯವನ್ನು ಕಳೆದಿರುವ ಅವರಿಗೆ ಲಾಕ್‌ಡೌನ್ ಒಂದು ದೈವದತ್ತವಾಗಿ ಒದಗಿ ಬಂದು ಅವರಲ್ಲಿನ ಅದ್ಭುತವಾದ ಚಿತ್ರಕಾರನನ್ನು ಹೊರ ಬರಲು ಉತ್ತಮ ಅವಕಾಶ ಸಿಕ್ಕಿ ಅನೇಕ ಕಲಾಕೃತಿಗಳು ಅವರ ಕುಂಚದಿಂದ ಹೊರಬಂದಿದೆಯಂತೆ. ಅಲ್ಲು ಅರ್ಜುನ್, ಮತ್ತು ರಾಣಾಗೆ ಉಡುಗೊರೆ!ಚಲನಚಿತ್ರ ನಾಯಕರಾದ…
ಶ್ರೀನಿವಾಸಪುರ:ಕೋವಿಡ್ ಲಾಕ್‌ಡೌನ್ ಬಳಿಕ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ರೈಲು ಸೇವೆಯು ಜನವರಿ 4 ಸೋಮವಾರ ದಿಂದ ಆರಂಭವಾಗಿದೆ. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಾದು ಹೋಗುವ ರೈಲು ವಿಭಜಿತ ಕೋಲಾರ ಜಿಲ್ಲೆಗೆ ಕೊಂಡಿಯಾಗಿದೆ ಎನ್ನಬಹುದು ಹಾಗು ಜಿಲ್ಲೆಯ ಜನತೆಗೆ ಕಡಿಮೆ ದರದಲ್ಲಿ ಸಾರಿಗೆ ಪ್ರಯಾಣ ಪಡೆಯಬಹುದಾಗಿದೆ. ಕೋವಿಡ್ ಮುಂಜಾಗ್ರತೆ ದೃಷ್ಟಿಯಿಂದ ಕಳೆದ ಮಾರ್ಚ್‌ನಲ್ಲಿ ದೇಶದ್ಯಾಂತ ರೈಲು ಸೇವೆ ಸ್ಥಗಿತ ಗೋಳಿಸಲಾಗಿತ್ತು ಅದರಲ್ಲೂ ಪ್ಯಾಸಿಂಜರ್ ರೈಲುಗಳ ಸಂಚಾರ ಸಂಪೂರ್ಣವಾಗಿ ನಿಲ್ಲಿಸಲಾಗಿತ್ತು.ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಮೂಲಕ ಸಂಚಾರ ಮಾಡುವ ರೈಲು ಬಂಗಾರಪೇಟೆ,ಕೋಲಾರ,ಶ್ರೀನಿವಾಸಪುರ, ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ದೇವನಹಳ್ಳಿ, ನಂತರ ನೂತನವಾಗಿ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಿರುವ ರೈಲ್ವೇ ಸ್ಟೇಷನ್, ಯಲಹಂಕ ಮೂಲಕ ಯಶವಂತಪುರ ರೈಲ್ವೇ ಸ್ಟೇಷನ್ ತಲುಪಲಿದೆ ಮೊದಲು ಇದೇ ರೈಲು ಬೆಂಗಳೂರು ಮೆಜಸ್ಟಿಕ್ ರೈಲ್ವೆ ನಿಲ್ದಾಣ ನಂತರ ರಾಮನಗರ, ಚನ್ನಪಟ್ಟಣದವರಿಗೂ ಹೋಗುತ್ತಿದ್ದಾರು ಈಗ ಯಶವಂತಪುರ ವರಿಗೂ ಮಾತ್ರ ಹೋಗಲಿದೆ ಮುಂದಿನ ದಿನಗಳಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ(ಮೆಜಸ್ಟಿಕ್) ಸಂಚಾರ ಮಾಡುತ್ತದೆ ಎಂದು ರೈಲ್ವೆ ಇಲಾಖೆ…