ಕಾಣಿಪಾಕಂ:ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪ್ರಸಿದ್ಧ ವಿನಾಯಕ ದೇವಾಲಯ ಇರುವ ಕಾಣಿಪಾಕಂ ನಲ್ಲಿ ವೈಷ್ಣವ ದೇವಾಲಯ ಸಹ ಇದೆ ಶ್ರೀ ವರದರಾಜಸ್ವಾಮಿ ದೇವಸ್ಥಾನ ಇಲ್ಲಿ ಮಂಗಳವಾರ ಹುಣ್ಣಿಮೆ ಗರುಡಸೇವೆ ಉತ್ಸ್ವ ನಡೆಯಿತು. ಬೆಳಿಗ್ಗೆ ವರದರಾಜಸ್ವಾಮಿ ಮೂಲ ವಿಗ್ರ್ಹಹಕ್ಕೆ ಅಭಿಷೇಕ ಮಾಡಿ ವಿಶೇಷ ಪೂಜೆಗಳನ್ನು ಮಾಡಿದರು. ನಂತರ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ವ್ರತ ಆಚರಿಸಲಾಯಿತು ರಾತ್ರಿಗೆ ಶ್ರೀ ವರದರಾಜಸ್ವಾಮಿ, ಶ್ರೀದೇವಿ ಮತ್ತು ಭೂದೇವಿ ಅವರೊಂದಿಗೆ ವಿಗ್ರಹಗಳನ್ನು ಗರುಡ ವಾಹನದ ಮೇಲೆ ಇರಿಸಿ, ಪ್ರಾಕಾರೋತ್ಸವವನ್ನು ಮಾಡಿದರು. ಭಗವಾನ್ ಗರುಡನ ದರ್ಶನ ಪಡೆಯಲು ನೂರಾರು ಭಕ್ತರು ಸೇರಿದ್ದರು. ದೇವಾಲಯದ ಇವೊ ವೆಂಕಟೇಶ್, ಅಧೀಕ್ಷಕ ಕೊಡಂಡಪಾಣಿ, ದೇವಾಲಯದ ತನಿಖಾಧಿಕಾರಿಗಳಾದ ರಮೇಶ್ ಮತ್ತು ಕಿಶೋರ್ ಕುಮಾರ್ ರೆಡ್ಡಿ ಮುಂತಾದವ್ರು ಭಾಗವಹಿಸಿದ್ದರು.
Author: admin
ನ್ಯೂಜ್ ಡೆಸ್ಕ್:-ಪವನ್ ಕಲ್ಯಾಣ್ ನಟನೆಯ ಬಹು ನೀರಿಕ್ಷಿತ ಚಿತ್ರ ‘ವಕಿಲ್ ಸಾಬ್’ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದಾರಂತೆ’ವಕಿಲ್ ಸಾಬ್’ ಚಿತ್ರದಲ್ಲಿ ಪವರ್‌ಸ್ಟಾರ್ ಪವನ್ ಕಲ್ಯಾಣ್ ವಕೀಲರಾಗಿ ಶೀರ್ಷಿಕೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪವನ್ ಕಲ್ಯಾಣ್ ಈ ಚಿತ್ರದಲ್ಲಿ ತಮ್ಮ ಪಾತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಇದನ್ನು ಚಲನಚಿತ್ರ ಘಟಕ ಅಧಿಕೃತವಾಗಿ ಘೋಷಿಸಿದೆ. ಚಿತ್ರದ ಯೂನಿಟ್ ಸದಸ್ಯರು ಪವನ್ ಕಲ್ಯಾಣ್ ಜೋಗೆ ತಗೆಸಿಕೊಂಡಿರುವ ಫೋಟೋಗಳನ್ನು ಬಿಡುಗಡೆ ಮಾಡಿದೆ. ಬಾಲಿವುಡ್ ಚಿತ್ರ ‘ಪಿಂಕ್’ ಚಿತ್ರದ ರಿಮೇಕ್ ಆಗಿ ತಯಾರಾಗುತ್ತಿರುವ ‘ವಕಿಲ್ ಸಾಬ್’ ಚಿತ್ರದಲ್ಲಿ ಪವನ್ ಜೋತೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದರೆ, ಅಂಜಲಿ ಮತ್ತು ನಿವೇದ ಥಾಮಸ್ ಮುಖ್ಯ ಪಾತ್ರದಲ್ಲಿದ್ದಾರೆ. ಈ ಚಿತ್ರವನ್ನು ವೇಣು ಶ್ರೀರಾಮ್ ನಿರ್ಮಿಸುತ್ತಿದ್ದು, ದಿಲ್ ರಾಜು ಮತ್ತು ಬೊನೀ ಕಪೂರ್ ನಿರ್ಮಿಸುತ್ತಿದ್ದಾರೆ. ಈ ವರ್ಷ ಮೇ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ಈ ಚಿತ್ರ ಕೋವಿಡ್ ಪರಿಣಾಮದಿಂದಾಗಿ ವಿಳಂಬವಾಗಿದೆ. ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದ್ದು, ಹೊಸ ವರ್ಷದ ಆರಂಭದಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡುವ ಸಾಧ್ಯತೆ ಇದೆ…
ಶ್ರೀನಿವಾಸಪುರ:- ಧಾರ್ಮಿಕ ಕಾರ್ಯಕ್ರಮಗಳಿಂದಾಗಿ ಸಮಾಜದಲ್ಲಿ ಸಾಮರಸ್ಯದ ಭಾವನೆ ಮೂಡುತ್ತದೆ ಮತ್ತು ಶ್ರದ್ಧಾ ಭಕ್ತಿಯಿಂದ ಆಧ್ಯಾತ್ಮಿಕವಾಗಿ ಭಗವಂತನ ಸೇವೆಯಲ್ಲಿ ತೊಡಗಿಸಿಕೊಂಡರೆ ಅನುಗ್ರಹದ ಜೋತೆಗೆ ಒತ್ತಡದ ಜೀವನಕ್ಕೆ ಮುಕ್ತಿ ದೊರೆತು ಮನಃ ಶಾಂತಿ ಪಡೆಯಲು ಸಹಕಾರಿಯಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು. ಅವರು ಶ್ರೀನಿವಾಸಪುರ ತಾಲೂಕಿನ ಪ್ರಖ್ಯಾತ ಪುಣ್ಯಕ್ಷೇತ್ರವಾದ ರೋಣೂರಿನ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ ನಂತರದಲ್ಲಿ ನಡೆಯುವ ಗರುಡೋತ್ಸವದಲ್ಲಿ ತಮ್ಮ ತಾಯಿ ಹಾಗು ಪತ್ನಿಯೊಂದಿಗೆ ಭಾಗವಹಿಸಿದ್ದ ಅವರು ಮಾತನಾಡಿದರು. ಆಧುನಿಕ ವ್ಯವಸ್ಥೆಯಲ್ಲಿ ನಾವೇಲ್ಲರೂ ಒತ್ತಡದ ಜೀವನ ನಡೆಸುತ್ತಿದ್ದೇವೆ. ಮನಸ್ಸಿಗೆ ಶಾಂತಿ ನೆಮ್ಮದಿ ಇಲ್ಲದಂತಾಗಿದೆ. ನಮ್ಮ ಮನಸ್ಸು ಹಗುರವಾಗಲು ಸಮಾಧಾನ ಜೀವನ ಸಾಗಿಸಲು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅವಶ್ಯವಿದೆ ಎಂದರು.ಭಗವಂತನ ಉತ್ಸವ ಕಾರ್ಯಕ್ರಮ ನಮ್ಮ ಕುಟುಂಬಸ್ಥರು ಪಾರಂಪರಿಕವಾಗಿ ನಡೆಸುಕೊಂಡು ಬಂದಿದ್ದು ನಾವು ಸಹ ಭಗವಂತನ ಕಾರ್ಯದಲ್ಲಿ ತೊಡಗಿಸಿಕೊಂಡು ಹೋಗುತ್ತಿರುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ತಾಲೂಕು ಅಧ್ಯಕ್ಷ ಅಶೋಕರೆಡ್ಡಿ, ಕಾಂಗ್ರೆಸ್ ಮುಖಂಡ ರೋಣೂರು ಚಂದ್ರಶೇಖರ್, ತಾಲೂಕು…
ಸಿನಿಮಾ ಶೈಲಿಯಲ್ಲಿ ಶಾಸಕನೊಬ್ಬ ತಮ್ಮ ಹಿಂಬಾಲಕರೊಂದಿಗೆ ಮಾಜಿ ಶಾಸಕನ ಮನೆಗೆ ಹೋಗಿ ಅಲ್ಲಿದ್ದವರ ಮೇಲೆ ಹಲ್ಲೆ ನಡೆಸಿರುವ ಘಟನೆ ಆಂಧ್ರಪ್ರದೇಶದ ತಾಡಪತ್ರಿ ಪಟ್ಟಣದಲ್ಲಿ ನಡೆದಿರುತ್ತದೆ.ಮಾಜಿ ಶಾಸಕನ ಮನೆಯಲ್ಲಿ ಹಾಲಿ ಶಾಸಕ ಕುಳಿತಿದ್ದ ಎನ್ನಲಾದ ಸೋಫಾ ಅನ್ನು ರಸ್ತೆಗೆಸೇದು ಸುಟ್ಟು ಹಾಕಿದರಂತೆ .ನ್ಯೂಸ್ ಡೆಸ್ಕ್: ಅಂಧ್ರಪ್ರದೇಶದ ಅನಂತಪುರ ಜಿಲ್ಲೆ ಸೇರಿದಂತೆ ರಾಯಲಸೀಮೆ ಭಾಗದಲ್ಲಿ ಫ್ಯಾಕ್ಷನ್ ರಾಜಕೀಯಕ್ಕೆ ಹೆಸರುವಾಸಿ ಎಲ್ಲವನ್ನೂ ರಾಜಕೀಯ ದೃಷ್ಠಿ ಕೋನದಿಂದ ನೋಡುವುದು ರಾಜಕೀಯದೊಂದಿಗೆ ತಾಳೆಹಾಕಿಕೊಂಡು ದಾಳಿ ಪ್ರತಿದಾಳಿ ನಡೆಸುವುದು ಇಲ್ಲಿ ಸಾಮಾನ್ಯ ಯಾರಿಗೂ ಯಾರು ಕಡಿಮೆ ಇರುವುದಿಲ್ಲ ಎಲ್ಲವೂ ಫಾಕ್ಷನ್ ಹೋಡೆದಾಟಗಳೇ ಹಾಗೆಯೇ ಗುರುವಾರ ಅನಂತಪುರ ಜಿಲ್ಲೆಯ ತಾಡಿಪತ್ರಿ ಪಟ್ಟಣದಲ್ಲಿ ಎರಡು ರಾಜಕೀಯ ಕುಟುಂಬಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ನಡೆದ ಸಂಭಾಷಣೆ ಹಾಲಿ ಶಾಸಕ ಪೆದ್ದರೆಡ್ಡಿ ಹಾಗು ಮಾಜಿ ಶಾಸಕ ಜೆಸಿ ಪ್ರಭಾಕರರೆಡ್ಡಿ ನಡುವೆ ಯುದ್ಧದ ವಾತಾವರಣವನ್ನೇ ಸೃಷ್ಠಿಸಿದಿಯಂತೆ, ಶಾಸಕ ಕೇತಿರೆಡ್ಡಿ ಪೆದ್ದಾರೆಡ್ಡಿಮಾಜಿ ಶಾಸಕ ಜೆಸಿ ಪ್ರಭಾಕರಡ್ಡಿ ತಾಡಪತ್ರಿಯ ಯೈ.ಸಿ.ಪಿ ಪಕ್ಷದ ಹಾಲಿ ಶಾಸಕ ಕೇತಿರೆಡ್ಡಿ ಪೆದ್ದಾರೆಡ್ಡಿ ತನ್ನ ರಾಜಕೀಯ…
ಕಾಂಗ್ರೆಸ್ ಪಕ್ಷಕ್ಕೆ ಮತ್ತು ಮುಖಂಡರಿಗೆ ಧನ್ಯವಾದ ತಿಳಿಸಿರುವ ನವೀನ್ಡಾ.ಸುಧಾಕರ್ ಅವರ ಪೊಲಟಿಕಲ್ ಅಪರೇಷನ್ ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಪ್ರಭಾವಿ ಕಾಂಗ್ರೆಸ್ ಮುಖಂಡ,ಪಂಚಗಿರಿ ವಿದ್ಯಾಸಂಸ್ಥೆಗಳ ಅಧಿಪತಿ, ಮೆಗಾಸ್ಟಾರ್ ಚಿರಂಜೀವಿ ಹಾಗು ಪವರ್ ಸ್ಟಾರ್ ಪವನ್ ಕಲ್ಯಾಣ್ ರವರುಗಳ ಪರಮಾಪ್ತ ಕೆ.ವಿ ನವೀನ್ ಕಿರಣ್ ಅವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ ಸುಧಾಕರ್ ಸಮ್ಮುಖದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾದ ಕೆ ವಿ ನವೀನ್ ಕಿರಣ್, ಸಿಎಂ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿರುವ ಕೆ.ವಿ.ನವೀನ್ ಕಿರಣ್, ತನ್ನ ಹಿತೈಷಿಗಳ ಹಾಗೂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಬಿ.ಜೆ.ಪಿ ಸೇರ್ಪಡೆಯಾಗಿರುವುದಾಗಿ ಹೇಳಿರುತ್ತಾರೆ.ಸಿಎಂ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದು ಬಿಜೆಪಿ ಪಕ್ಷ ಸೇರ್ಪಡೆ ಅಧಿಕೃತವಾಗಿದೆ. ಇನ್ನೂ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಎದುರಾಳಿಯಾಗಿ ಸ್ಪರ್ದಿಯಾಗಿದ್ದ ನವೀನ್ ಕಿರಣ್ ಸೋಲು ಅನುಭವಿಸಿದ್ರು. ಅಂದಿನಿಂದ ರಾಜಕೀಯವಾಗಿ ಸುಧಾಕರ್ ಅವರನ್ನು ರಾಜಕೀಯವಾಗಿ ವಿರೋಧಿಸುತ್ತಿದ್ದ…
ಬೆಂಗಳೂರು:-ಹೊಸ ರೂಪಾಂತರ ವೈರಸ್ ತಡೆಗಟ್ಟಲು ಕರ್ನಾಟಕ ಸರ್ಕಾರ ಡಿಸೆಂಬರ್ 23 ಬುಧವಾರದಿಂದ, 2021 ರ ಜನವರಿ 2 ರವರೆಗೆ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಜಾರಿ ಮಾಡಿದೆ.ಜನವರಿ 2 ರಂದು ಬೆಳಿಗ್ಗೆ 6 ಗಂಟೆಗೆ ಕರ್ಫ್ಯೂ ಅಂತ್ಯಗೊಳ್ಳುತ್ತದೆ. ಈ ಸಂದರ್ಭದಲ್ಲಿ 4 ಕ್ಕೂ ಹೆಚ್ಚು ಜನರು ಸಾರ್ವಜನಿಕ ಸ್ಥಳದಲ್ಲಿ ಗುಂಪುಗೂಡಬಾರದು.ಸರ್ಕಾರದ ಮಾರ್ಗಸೂಚಿ ಸಂಜೆ ಬಿಡುಗಡೆ ಮಾಡುವುದಾಗಿ ಹೇಳಿದೆ.ಕೇಂದ್ರ ಸರ್ಕಾರ ಮತ್ತು ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಮಾಲೋಚಿಸಿದ ನಂತರ ಹೊಸ ಕೋವಿಡ್-19 ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿರುತ್ತಾರೆ.ಬ್ರಿಟನ್ ದೇಶ ಸೇರಿದಂತೆ ಪಾಶ್ಚ್ಯಮಾತ್ಯ ದೇಶಗಳಲ್ಲಿ ಕಂಡುಬಂದಿರುವ ಹೊಸ ವಿದದ ಕೋವಿಡ್ -19 ತಳಿ ಹರಡುವ ಬಗ್ಗೆ ಹೆಚ್ಚುತ್ತಿರುವ ಆತಂಕಗಳಿಂದ ಸರ್ಕಾರ ರಾತ್ರಿ ಕರ್ಫ್ಯೂ ವಿಧಿಸುವ ತಿರ್ಮಾನಕ್ಕೆ ಬಂದಿರುವುದಾಗಿ ಹೇಳಲಾಗುತ್ತಿದೆ. ಕರ್ಫ್ಯೂ ಸಂದರ್ಭದಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕುಶಾಲಾ ಮತ್ತು ಕಾಲೇಜುಗಳನ್ನು ಜನವರಿ 10 ರಿಂದ 10 ನೇ ತರಗತಿ ಮತ್ತು ದ್ವಿತೀಯ ವರ್ಷದ ಪಿಯುಸಿ (12 ನೇ ತರಗತಿ) ವಿದ್ಯಾರ್ಥಿಗಳಿಗೆ ತೆರೆಯಲಾಗುವುದು,…
ವರ್ಕ್ ಫ್ರಮ್ ಹೋಂ ನಿಂದ ಕುಳಿತಲ್ಲೆ ಕುಳಿತು ಕಾರ್ಯನಿರ್ವಹಿಸುವ ಯುವಕರಿಗೆ ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಹೆಚ್ಚಿನ ಮಂದಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ, ಇಂತಹ ಸಮಯದಲ್ಲಿ ದೇಹ ಚಟುವಟಿಕೆಯಿಂದಿರದ ಕಾರಣ ತೂಕ ಹೆಚ್ಚುವ ಸಾಧ್ಯತೆಯಿರುತ್ತದೆ, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಸೇರಿದಂತೆ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದಾರೆ ಇದರಿಂದ ದೇಹ ಹೆಚ್ಚು ಚಟುವಟಿಕೆಯಿಂದ ಇರಲು ಸಾದ್ಯವಾಗದೆ ಕುಳಿತಲ್ಲೆ ಕುಳತಿದ್ದರೆ ತೂಕ ಹೆಚ್ಚುವ ಸಾಧ್ಯತೆಯಿತೆ ಇದೆ ಎನ್ನಲಾಗುತ್ತಿದೆ. ಇದು ಆರೋಗ್ಯಕ್ಕೆ ಮಾರಕ ಎಂದಿರುತ್ತಾರೆ. ಇಂತಹ ಸಂದರ್ಭದಲ್ಲಿ ಕುಳಿತಲ್ಲೇ ಕೆಲಸ ಮಾಡುವ ಜನ ಊಟದ ಬಗ್ಗೆ ಅಸಡ್ಡೆ ತೋರುತ್ತಾರೆ ಹೆಚ್ಚು ಕುರುಕಲು ತಿಂಡಿ ಜಿಂಘ್ ಫುಡ್ ಗೆ ಮೊರೆ ಹೋಗುವುದರಿಂದ ಪೌಷ್ಠಿಕ ಆಹಾರದ ಕೊರತೆಯಿಂದ ಅನಾರೋಗ್ಯಕ್ಕೆ ಈಡಾಗುತ್ತಾರೆ ಮಾಂಸಖಂಡಗಳಲ್ಲಿ ಸೆಳೆತ ಮತ್ತು ಮೂಳೆಗಳ ತೂಕ ಕಡಿಮೆಯಾಗುವ ಸಾಧ್ಯತೆಯಿದೆ ಎನ್ನುತ್ತಾರೆ.ಊಟದ ನೀಯಮ ಯಾರು ಉಲ್ಲಂಘಿಸಬಾರದು ಸಮಯಕ್ಕೆ ಬೆಳಗಿನ ಉಪಹಾರ ಮಧ್ಯಾನ್ಹದ ಊಟ…
ನ್ಯೂಜ್ ಡೆಸ್ಕ್:-ಗೇರುಬೀಜ ಅಥಾವ ಗೋಡಂಬಿ ಒಣ ಫಲಗಳಲ್ಲಿ ಅತ್ಯುತ್ತಮವಾದ ಫಲವಾಗಿದೆ. ಇದರಲ್ಲಿ ನಮ್ಮ ಆರೋಗ್ಯವನ್ನು ವೃದ್ಧಿಸುವ ಹಲವಾರು ರೀತಿಯ ಗುಣಗಳು ಇದೆ ಹೇರಳವಾಗಿ ಕೊಬ್ಬಿನಂಶ, ಪ್ರೋಟೀನ್, ವಿಟಮಿನ್-ಇ, ಸೋಡಿಯಂ, ಮೆಗ್ನೆಶಿಯಂ, ಪೊಟ್ಯಾಷಿಯಂ, ಪೋಷಕ ಸತ್ವಗಳು ಅಡಕವಾಗಿವೆ. ಇದರಿಂದಾಗಿ ಹೃದಯ ಆರೋಗ್ಯ, ಗಟ್ಟಿಮುಟ್ಟಾದ ಎಲುಬು, ನರಮಂಡಲ ಮತ್ತು ಕ್ಯಾನ್ಸರ್ ನಂತಹ ರೋಗಗಳಿಂದ ರಕ್ಷಣೆ ನೀಡುತ್ತದೆ. ಹೃದಯದ ಆರೋಗ್ಯ: ಹೃದಯದ ಆರೋಗ್ಯಕ್ಕೆ ಗೋಡಂಬಿ ತುಂಬಾನೇ ಸಹಾಯಕಾರಿ. ಗೋಡಂಬಿಯಲ್ಲಿ ದೇಹಕ್ಕೆ ಅಗತ್ಯವಿರುವ ಉತ್ತಮ ಕೊಬ್ಬು ಅಡಕವಾಗಿದೆ. ಇದರಿಂದಾಗಿ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಅಂಶಗಳನ್ನು ಕಡಿಮೆ ಮಾಡಿ ಹೃದಯ ಕಾಯಿಲೆಗಳನ್ನು ತಡೆಯುತ್ತದೆ. ಇದರ ಸೇವನೆಯಿಂದಾಗಿ ಹೃದಯದ ಸ್ನಾಯುಗಳು ಬಲಗೊಳ್ಳುತ್ತದೆ. ಪ್ರತಿದಿನ 3-4 ಗೋಡಂಬಿ ಸೇವನೆ ಉತ್ತಮ ಆರೋಗ್ಯಕ್ಕೆ ಅಡಿಪಾಯ. ಮೂಳೆ ಆರೋಗ್ಯ: ಗೋಡಂಬಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಗ್ನೆಶಿಯಂ ಅಂಶವು ಇರುವುದರಿಂದ ಮೂಳೆಗಳ ಆರೋಗ್ಯಕ್ಕೆ ಉತ್ತಮವಾಗಿದೆ. ದೇಹಕ್ಕೆ ಅಗತ್ಯವಿರುವ ಮೆಗ್ನೆಶಿಯಂ, ಪೊಟ್ಯಾಷಿಯಂ ಒದಗಿಸಿ, ಗಟ್ಟಿಮುಟ್ಟಾದ ಎಲುಬಿನ ಬೆಳವಣಿಗೆಗೆ ಸಹಕಾರಿಯಾಗಿದೆ. ನರಗಳ ಶಕ್ತಿ ವರ್ಧಕ: ನರಗಳಲ್ಲಿ ಕ್ಯಾಲ್ಸಿಯಂನ ಅಧಿಕ…
ನ್ಯೂಸ್ ಡೆಸ್ಕ್:-ಆಂಧ್ರಪ್ರದೇಶ ಬಿಜೆಪಿ ಅಧ್ಯಕ್ಷ ಸೋಮುವಿರ್ರಾಜು ಸೋಮವಾರ ಕೋಲಾರದ ಬಿಜೆಪಿ ಮಾಜಿ ಅಧ್ಯಕ್ಷ ಲಕ್ಷ್ಮಯ್ಯ ಅವರನ್ನು ಬೆಂಗಳೂರು ನಿವಾಸದಲ್ಲಿ ಭೇಟಿಯಾಗಿ ತಿರುಪತಿ ಪಾರ್ಲಿಮೆಂಟ್ ಬೈ ಎಲೆಕ್ಷನ್ ಕುರಿತಾಗಿ ಚರ್ಚೆ ನಡೆಸಿರುತ್ತಾರೆ.ಮೂಲತಃ ಸಂಘ ಪರಿವಾರದ ಹಿನ್ನಲೆಯ, ಹಿಂದುಳಿದ ಕಾಪು ಸಮುದಾಯದ ರಾಜಕೀಯ ನಾಯಕ ದೆಹಲಿ ವಲಯದಲ್ಲಿ ಪ್ರಭಾವಿ ಹೊಂದಿರುವ ಆಂಧ್ರಪ್ರದೇಶದ ಬಿಜೆಪಿ ರಾಜ್ಯಧ್ಯಕ್ಷ ಸೋಮುವಿರ್ರಾಜು ತಮ್ಮ ಹಳೇಯ ಸ್ನೇಹಿತ ಕೋಲಾರದ ಹಿಂದುಳಿದ ಮುಖಂಡ ಲಕ್ಷ್ಮಯ್ಯ ಅವರನ್ನು ಭೇಟಿಯಾಗಿರುತ್ತಾರೆ.ಲಕ್ಷ್ಮಯ್ಯ ಅವರನ್ನು ಅವರ ಬೆಂಗಳೂರು ನಿವಾಸದಲ್ಲಿ ಭೇಟಿಯಾಗಿ ತಿರುಪತಿ ಲೋಕಸಭೆ ಉಪಚುನಾವಣೆ ಸಂಬಂಧ ಚರ್ಚಿಸಿದರು ಎನ್ನಲಾಗಿದೆ.ಇತ್ತಿಚಿಗಷ್ಟೆ ತಿರುಪತಿ ಲೋಕಸಭೆಯ ಯೈಎಸ್ ಆರ್ ಪಕ್ಷದ ಸದಸ್ಯ ಬಲ್ಲಿದುರ್ಗಾಪ್ರಸಾದ್ ಅನಾರೋಗ್ಯದಿಂದ ಮೃತ ಪಟ್ಟ ಹಿನ್ನಲೆಯಲ್ಲಿ ಚುನಾವಣೆ ಆಯೋಗ ತಿರುಪತಿ ಲೋಕಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಿಸಿದೆ ಈ ಕ್ಷೇತ್ರಕ್ಕೆತಿರುಪತಿ ಸೇರಿದಂತೆ ನೆಲ್ಲೂರು ಜಿಲ್ಲೆಯ ನಾಲ್ಕು ಹಾಗು ಚಿತ್ತೂರು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳು ಒಳಪಡುತ್ತದೆ. ಈ ಭಾಗದ ಬಹುತೇಕರು ಬೆಂಗಳೂರಿನಲ್ಲಿ ನಾನಾ ರೀತಿಯಲ್ಲಿ ಉದ್ಯಮಿಗಳಾಗಿದ್ದಾರೆ ಇವರನ್ನು ಭೇಟಿ ಮಾಡುವ…
ಕೆಲಸ ಮಾಡದ ಗ್ರಾಮ ಪಂಚಾಯ್ತಿ ಸದಸ್ಯರುಹಣ ಚೆಲ್ಲಿ ಗೆಲ್ಲುತ್ತಿದ್ದ ಸದಸ್ಯರು..!ಭಿಕ್ಷುಕನನ್ನು ನಿಲ್ಲಿಸಿ ಸಡ್ಡು ಹೊಡೆದ ಯುವಕರು..! ನ್ಯೂಸ್ ಡೆಸ್ಕ್:- ಕನ್ನಡ ಖ್ಯಾತ ಚಿತ್ರ ನಟ ಡಾ.ವಿಷ್ಣುವರ್ಧನ್ ಅಭಿನಯದ ಸಿಂಹಾದ್ರಿಯ ಸಿಂಹ ಚಲನಚಿತ್ರದ ಪ್ರೇರಣೆಗೊಂಡಿರುವ ನಂಜನಗೂಡು ತಾಲ್ಲೂಕಿನ ಹುಳಿಮಾವು ಪಂಚಾಯ್ತಿ ವ್ಯಾಪ್ತಿಯ ಬೊಕ್ಕಹಳ್ಳಿ ಗ್ರಾಮದ ಯುವಕರು ಭಿಕ್ಷುಕರೊಬ್ಬರನ್ನು ಗ್ರಾಮ ಪಂಚಾಯ್ತಿ ಚುನಾವಣಾ ಅಖಾಡದಲ್ಲಿ ಕಣಕ್ಕಿಳಿಸಿದ್ದಾರೆ. ಗ್ರಾಮದ ನಿವಾಸಿ ಅಂಕನಾಯಕ ಎಂಬುವರಿಂದ ನಾಮಪತ್ರ ಸಲ್ಲಿಕೆ ಮಾಡಿಸಿರುತ್ತಾರೆ. ಅಭ್ಯರ್ಥಿ ವಿಕಲ ಚೇತನರಾಗಿದ್ದು ಊರೂರು ತಿರುಗುತ್ತಾ, ಬಸ್ ನಿಲ್ದಾಣ ಮತ್ತು ಇತರಡೆ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿದ್ದರು. ಕೆಲಸ ಮಾಡದಿದ್ದರೂ ಹಣ ನೀಡಿ ಚುನಾವಣೆ ಗೆಲ್ಲುತ್ತಿದ್ದ ಹಿಂದಿನ ಸದಸ್ಯ ಈ ಬಾರಿ ಹಣ ನೀಡಿ ಮತ ಪಡೆಯಲು ಸಾಧ್ಯವಾಗಬಾರದೂ ಎಂದು ಬಿಕ್ಷಕನನ್ನು ಚುನಾವಣೆಗೆ ನಿಲ್ಲಿಸಿ ನಾವೂ ಹಣ ಪಡೆಯದೆ ಇವರನ್ನೇ ಗೆಲ್ಲಿಸಲು ಪ್ರಯತ್ನ ನಡೆಸಿದ್ದೇವೆ ಎಂದು ಯುವಕರು ತಿಳಿಸಿದ್ದಾರೆ. ಅಂಕನಾಯಕರಿಗೆ ಪ್ರತಿಸ್ಪರ್ಧಿಯಾಗಿ ಮತ್ತೊಬ್ಬರು ಸ್ಪರ್ಧೆ ಮಾಡಿದ್ದಾರೆ. ಇದೇ ಡಿಸೆಂಬರ್ 27 ರಂದು ಹುಳಿಮಾವು ಗ್ರಾಮ ಪಂಚಾಯಿತಿಗೆ ಚುನಾವಣೆ…