ಕೋಲಾರ: ಕೋಲಾರದ ನರಸಾಪುರ ಘಟಕದಲ್ಲಿ ಕಾರ್ಮಿಕರ ದಾಂಧಲೆ ಪ್ರಕರಣದ ನಂತರ ಎಚ್ಚೆತ್ತುಕೊಂಡಿರುವ ವಿಸ್ಟ್ರಾನ್ ಸಂಸ್ಥೆ ತಪ್ಪು ಕಂಡುಬಂದಿರುವುದರಿಂದ ಸಂಸ್ಥೆಯ ಭಾರತದ ಉಸ್ತುವಾರಿದ್ದ ಉಪಾಧ್ಯಕ್ಷನನ್ನು ವಜಾ ಮಾಡಲಾಗಿದಿಯಂತೆ.ಮಾನವಸಂಪನ್ಮೂಲ ಸಂಸ್ಥೆಯ ಗುತ್ತಿಗೆದಾರರಿಂದ ಆದ ತಪ್ಪುಗಳನ್ನು ತಿದ್ದಿಕೊಳ್ಳಲು ಮುಂದಾಗಿರುವ ಸಂಸ್ಥೆಯು, ಕಾರ್ಮಿಕರ ಕ್ಷಮೆ ಕೋರಿದೆ. ಗುತ್ತಿಗೆದಾರರು ಮಾಡಿರುವ ವ್ಯತ್ಯಸಗಳಿಂದ ಕೆಲ ಕಾರ್ಮಿಕರಿಗೆ ಸಕಾಲಕ್ಕೆ ಸರಿಯಾಗಿ ವೇತನ ಪಾವತಿಯಾಗದೆ ಇರುವುದು ತನಿಖೆ ವೇಳೆ ಕಂಡು ಬಂದಿದೆ ಇದಕ್ಕಾಗಿ ಕಂಪನಿ ವತಿಯಿಂದ ವಿಷಾದಿಸುತ್ತದೆ. ಹಾಗು ಕಾರ್ಮಿರ ಕ್ಷಮೆ ಕೋರಿದೆ. ಅನ್ಯಾಯಕ್ಕೊಳಗಾದ ಎಲ್ಲಾ ಕಾರ್ಮಿಕರಿಗೆ ತಕ್ಷಣ ಪರಿಹಾರ ಒದಗಿಸುವುದು ಸಂಸ್ಥೆಯ ಪ್ರಧಾನ ಆದ್ಯತೆಯಾಗಿದೆ. ಇದಕ್ಕಾಗಿ ಅಗತ್ಯ ಕ್ರಮಗಳನ್ನು ತ್ವರಿಗತಿಯಲ್ಲಿ ಕೈಗೊಳ್ಳಲಾಗುತ್ತಿದೆ,ಎಂದು ಪ್ರಕಟಣೆಯಲ್ಲಿ ವಿಸ್ಟ್ರಾನ್ ತಿಳಿಸಿದೆ.ಕಾರ್ಮಿಕರಿಗೆ ಕರೆ ಮಾಡಿ ಎಷ್ಟು ತಿಂಗಳಿಂದ ವೇತನ ಬಾಕಿಯಿದೆ, ಎಷ್ಟು ಬಾಕಿಯಿದೆ ಎಂಬ ಮಾಹಿತಿಯನ್ನು ಸಂಸ್ಥೆ ಪಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.ವ್ಯವಹಾರ ಸ್ಥಗಿತಗೊಳಿಸಿದ ಆ್ಯಪಲ್‌ಕಾರ್ಮಿಕರಿಗೆ ಸಮರ್ಪಕವಾಗಿ ವೇತನ ನೀಡದಿರುವುದು ಸಾಬೀತಾದ ಹಿನ್ನೆಲೆಯಲ್ಲಿ ವಿಸ್ಟ್ರಾನ್ ಸಂಸ್ಥೆ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವವರೆಗೆ ಯಾವುದೇ ರೀತಿಯ ಹೊಸ ಗುತ್ತಿಗೆ ನೀಡುವುದಿಲ್ಲವೆಂದು…
Author: admin
ತಿರುಮಲ(ಆಂಧ್ರಪ್ರದೇಶ): ಕಲಿಯುಗದ ಪ್ರತ್ಯಕ್ಷ ದೇವ ವೈಕುಂಠದ ತಿರುಮಲ ಶ್ರೀ ವೆಂಕಟೇಶ್ವರನ ದರುಶನಕ್ಕೆ ಭಕ್ತರ ಸಂಖ್ಯೆ ಶನಿವಾರ ಸಾಧಾರಣವಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ದೇವಾಲಯದ ಆಡಳಿತ ಮಂಡಳಿ ಸೀಮಿತ ಸಂಖ್ಯೆಯ ಭಕ್ತರಿಗೆ ದೇವರ ದರುಶನಕ್ಕೆ ಅವಕಾಶ ನೀಡುತ್ತಿದೆ. ಶನಿವಾರ 37,370 ಭಕ್ತರು ನಿನ್ನೆ ಶ್ರೀನಿವಾಸನ ದರುಶನ ಪಡೆದರು ಹುಂಡಿ ಆದಾಯ 2.23 ಕೋಟಿ ರೂ. ಶೇಖರಣೆಯಾಗಿದ್ದು, 14,858 ಭಕ್ತರು ಭಗವಂತನಿಗೆ ತಲೆ ಕೂದಲು ಅರ್ಪಿಸಿರುವುದಾಗಿ ದೇವಾಲಯ ಅಡಳಿತ ಮಂಡಳಿ ಹೇಳಿದೆ.
ಕನ್ನಡ ಚಲನ ಚಿತ್ರ ನಿರ್ಮಾಪಕ ರಮೇಶ್ ರೆಡ್ಡಿ ಕನ್ನಡ ಸಿನಿಮಾ ರಂಗದಲ್ಲಿ ಸದಭಿರುಚಿ ನಿರ್ಮಾಪಕರಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ.ಉತ್ತಮ ಕಥಾ ಹಂದರದ ನಾತಿಚರಾಮಿ ಸೇರಿದಂತೆ ಹಲವಾರು ಸಿನಿಮಾಗಳನ್ನು ನಿರ್ಮಿಸಿರುವ ರಮೇಶರೆಡ್ಡಿ ಮೂಲತಃ ಕೋಲಾರ ಜಿಲ್ಲೆಯ ನಂಗಲಿಯ ದೊಡ್ಡಗೊಲ್ಲಹಳ್ಳಿಯವರು,ವೃತ್ತಿಯಲ್ಲಿ ಗಾರೆ ಕೆಲಸದ ಗುತ್ತಿಗೆದಾರಾಗಿದ್ದ ಇವರು ಇನ್ಫೋಸಿಸ್ ಸುಧಾಮೂರ್ತಿಯವರ ಕೃಪಾಶಿರ್ವಾದದಿಂದ ಬೆಂಗಳುರಿನಲ್ಲಿ ಬೆಳೆದು ನಿಂತಿದ್ದಾರಂತೆ. ಸಾಂದರ್ಭಿಕ ಚಿತ್ರ ರಮೇಶ್ ರೋರಿಂಗ್ ಸ್ಟಾರ್ ಶ್ರೀಮುರುಳಿ ಕಾಂಬಿನೇಷನ್ ನಲ್ಲಿ ಹೊಸ ಚಿತ್ರ ಆರಂಭವಾಗಲಿದ್ದು,ಶ್ರೀಮುರುಳಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಧಿೃಕೃತವಾಗಿ ಘೋಷಣೆ ಮಾಡಿದ್ದಾರೆ.ಸೂರಜ್ ಪ್ರೊಡಕ್ಷನ್ ಅಡಿಯಲ್ಲಿ ಇದು ಏಳನೇ ಸಿನಿಮಾವಾಗಿದೆ, ಈ ಹಿಂದೆ ಪಡ್ಡೆಹುಲಿ, ನಾತಿಚರಾಮಿ ಸಿನಿಮಾಗಳು ನಿರ್ಮಾಣವಾಗಿದ್ದವು, ಇನ್ನೂ ರಮೇಶ್ ಅರವಿಂದ್ ನಿರ್ದೇಶನದ 100, ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಸಿನಿಮಾಗಳು ಇನ್ನೂ ರಿಲೀಸ್ ಆಗಬೇಕಾಗಿದೆ.ಇದೇ ಮೊದಲ ಬಾರಿಗೆ ನಟ ಮುರುಳಿ ಮತ್ತು ನಿರ್ಮಾಪಕ ರಮೇಶ್ ರೆಡ್ಡಿ ಮೊದಲ ಬಾರಿಗೆ ಒಂದಾಗುತ್ತಿದ್ದಾರೆ. ಇದೊಂದು ಬೃಹತ್ ಬಜೆಟ್ ಸಿನಿಮಾವಾಗಿದೆ, ಕಥೆಗೆ ನ್ಯಾಯ ಒದಗಿಸುವ ನಿರ್ದೇಶಕನಿಗಾಗಿ ಹುಡುಕಾಟ ನಡೆದಿದೆ, ಶ್ರೀಮುರುಳಿ ಪಾತ್ರವೇ ಚಿತ್ರಕ್ಕೆ…
ಮುಲಕಲೆಚೆರುವು:- ಅದೊಂದು ಸಣ್ಣ ಹಳ್ಳಿ. ಮುಂಜಾನೆ ಹೊತ್ತಿ ಉರಿಯುತ್ತಿರುವ ಬೆಂಕಿ ಜ್ವಾಲೆಯೊಂದಿಗೆ ಯುವತಿಯೊಬ್ಬಳು ನರಳುತ್ತ ಮನೆಯೊಂದರಿಂದ ಹೋರ ಬರುತ್ತಾಳೆ ಅದೇ ಮನೆಯಲ್ಲಿ ಮೂರು ನಾಯಿಗಳು, ಬೆಕ್ಕು ಮತ್ತು 30 ಕೋಳಿಗಳು ವಿಷಪ್ರಾಷನದಿಂದ ಸಾವನ್ನಪ್ಪಿವೆ. ಈ ಮನ ಕಲಕುವ ಘಟನೆ ನಡೆದಿರುವುದು ಚಿಂತಾಮಣಿ ಮತ್ತು ಶ್ರೀನಿವಾಸಪುರ ತಾಲೂಕಿನ ಗಡಿಯಾಚಗಿನ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮುಲಕಲೆಚೇರುವು ಮಂಡಲದ ಸೋಮಪಲ್ಲೆ ಪಂಚಾಯಿತಿ ವ್ಯಾಪ್ತಿಯ ಗುಟ್ಟುಕಿಂದಪಲ್ಲೆ ಗ್ರಾಮದಲ್ಲಿ,ಎಲ್ಲವೂ ಸರಿಯಾಗಿದ್ದರೆ ಈ ತಿಂಗಳ 25 ರಂದು ಮದುವೆಯಾಗಿ ಮತ್ತೊಬ್ಬರ ಜೀವನದಲ್ಲಿ ಪ್ರವೇಶಿಸಬೇಕಾದ ಮಧುಮಗಳು ಸುಮತಿ ಜೀವ ತೆತ್ತಿದ್ದಾಳೆ. ಸುಮತಿ ಬೆರೋಬ್ಬನನ್ನು ಮದುವೆಯಾಗುತ್ತಿದ್ದಾನೆ ಎಂದು ಸುಮತಿ ಸ್ವಂತ ಅಕ್ಕನ ಗಂಡ ಭಾವ ವೆಂಕಟೇಶ್ ಅಸೂಯೆಯಿಂದ ಕೃತ್ಯ ಎಸಗಿದ್ದು ಆಕೆ ಮಲಗಿದ್ದಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುತ್ತಾನೆ ಮನೆಯಲ್ಲಿ ಜಾನುವಾರಗಳಿಗೆ ವಿಷವಿಕ್ಕಿದ್ದಾನೆ ಇದರಿಂದ ಮದುವೆ ಸಂಭ್ರಮದಲ್ಲಿರಬೇಕಾದ ಸುಮತಿ ಕುಟುಂಬ ದುರಂತದಲ್ಲಿ ಮುಳುಗಿದೆ. ಈ ಘಟನೆಯಿಂದ ಒಮ್ಮೆಲೆ ಗ್ರಾಮಸ್ಥರು ಭಯಭೀತರಾಗಿದ್ದು. ಸ್ಥಳೀಯರು ಪೂರ್ಣ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಒತ್ತಾಯಿಸಿರುತ್ತಾರೆ.
ದಾಂದಲೆ ಕುರಿತು ತನಿಖೆ ಅರಂಭಸಾವಿರಾರು ಐಫೋನ್‌ಗಳು ಲೂಟಿ?440 ಕೋಟಿ ನಷ್ಟಸೈಬರ್ ಪೋಲಿಸರಿಂದ ತನಿಖೆಲೂಠಿಯಾದ ಐ ಫೋನ್ ಉಪಯೋಗಕ್ಕೆ ಬಾರದು ಎನ್ನಲಾಗುತ್ತಿದೆ! ಕೋಲಾರ:-ಆ್ಯಪಲ್ ಐ–ಫೋನ್ ತಯಾರಿಸುವ ಬಹುರಾಷ್ಟ್ರೀಯ ವಿಸ್ಟ್ರಾನ್ ಕಂಪನಿಯಲ್ಲಿ ಗುತ್ತಿಗೆ ಆಧಾರದಲ್ಲಿ ಸುಮಾರು 10 ಸಾವಿರ ಕಾರ್ಮಿಕರನ್ನ ನೇಮಿಸಿಕೊಂಡಿತ್ತು. ಕಾರ್ಮಿಕರನ್ನು ನೇಮಕ ಮಾಡಿಕೊಂಡಿದ್ದ ಮಾನವ ಸಂಪನ್ಮೂಲ ಏಜೆನ್ಸಿಗಳು ಕಾರ್ಮಿಕರ ಕಷ್ಟದ ಸಂಬಳದ ಹಣವನ್ನು ಸಮರ್ಪಕವಾಗಿ ನೀಡದೆ ತೊಂದರೆ ನೀಡಿದ ಪರಿಣಾಮ ಕಾರ್ಮಿಕರು ಗಲಭೆ ಸೃಷ್ಠಿಸಲು ಕಾರಣವಾಗಿದೆ ಎನ್ನುವ ಆರೋಪ ಕೇಳಿಬಂದಿದೆ.ಸದ್ಯ ತೈವಾನ್ ಮೂಲದ ವಿಸ್ಟ್ರಾನ್ ಇನ್ಫೋಕಾಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.ಕಾರ್ಖಾನೆಯ ಆವರಣದಲ್ಲಿ ಶನಿವಾರ ನಡೆದ ದಾಂದಲೆಯ ನಂತರ ಉತ್ಪಾದನೆ ಚಟುವಟಿಕೆ ಸ್ಥಗಿತಗೊಳಿಸಿದ ಕಾರಣ 10 ಸಾವಿರ ಕಾರ್ಮಿಕರ ಭವಿಷ್ಯ ಅತಂತ್ರವಾಗಿದೆ.ಕೋಲಾರದ ನರಸಾಪುರದ ಕೈಗಾರಿಕ ಪ್ರದೇಶದಲ್ಲಿರುವ ವಿಸ್ಟ್ರಾನ್ ಐ ಫೋನ್ ಘಟಕದಲ್ಲಿ ಕಾರ್ಮಿಕರ ದಾಂದಲೆಯಿಂದ ಸುಮಾರು 437 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.ಸಂಸ್ಥೆಯು ದಾಂದಲೆಯ ಸಮಯದಲ್ಲಿ ಐಫೋನ್‌ಗಳ ಲೂಟಿ ಸಹ ಆಗಿದೆ ಎನ್ನಲಾಗುತ್ತಿದೆ. ಇದೆಲ್ಲದರ ಬಗ್ಗೆನಷ್ಟದ…
ಕೈವಾರ(ಚಿಂತಾಮಣಿ):-ಮನುಷ್ಯ ಉಸಿರಾಟ ನಡಿಸಿದಂತೆ ಪ್ರತಿಕ್ಷಣ ಆತ್ಮಚಿಂತನೆಯನ್ನು ಮಾಡಿಕೊಳ್ಳುವ ಅಗತ್ಯ ಇದೆ ಎಂದು ತಿರುಪತಿ ತಿರುಮಲ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ್ ನ ವಿಶೇಷಾಧಿಕಾರಿ ಆನಂದತೀರ್ಥಚಾರ್ಯರು ಹೇಳಿದರು ಅವರು ಕೈವಾರದ ಶ್ರೀಯೋಗಿನಾರೇಯಣ ಮಠದಲ್ಲಿ ಆಯೋಜಿಸಲಾಗಿದ್ದ ಇಂದಿನ ಸಮಾಜಕ್ಕೆ ಆತ್ಮಚಿಂತನೆಯ ಅವಶ್ಯಕತೆ ಎಂಬ ಚಿಂತನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚಿಂತನಾ ಕಾರ್ಯಕ್ರಮ ಉದ್ಘಾಟನೆ ಮಾನವರಲ್ಲಿ ಚಿಂತನೆ ಬಹಳ ಅಗತ್ಯವಾಗಿದೆ. ಮಗು ಹಸಿವಾದಾಗ ತನ್ನ ತಾಯಿಯನ್ನು ಸ್ಮರಿಸುತ್ತಲೇ, ಚಿಂತಿಸುತ್ತದೆ. ತಾಯಿ ಕಂಡಕ್ಷಣ ಅದರ ಹಸಿವು ಮಾಯವಾಗುತ್ತದೆ. ಮಗುವಿಗೆ ಇಷ್ಟು ಚಿಂತನೆ ಇದೆ ಎಂದಾದ ಮೇಲೆ ಇನ್ನು ಜ್ಞಾನವನ್ನು ಪಡೆದ ಮಾನವರಿಗೆ ಇನ್ನೆಷ್ಟು ಚಿಂತನೆ ಇರಬೇಕು. ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರವಿದ್ದೇ ಇರುತ್ತದೆ. ನಶಿಸಿಹೋಗುವ ಶರೀರವನ್ನು ನಂಬದೆ, ಎಂದಿಗೂ ಶಾಶ್ವತವಾಗಿರುವ ಆತ್ಮದ ಚಿಂತನೆಯನ್ನು ಮಾಡಬೇಕು. ಮಹಾಭಾರತದ ಕೊನೆಯಲ್ಲಿ ಕುಂತಿಯು ಶ್ರೀಕೃಷ್ಣನನ್ನು ಕಂಡು ನನಗೆ ಯಾವಾಗಲೂ ಕಷ್ಟಗಳನ್ನೇ ನೀಡು ಏಕೆಂದರೆ ಕಷ್ಟವಿದ್ದಾಗ ಮಾತ್ರ ನಿನ್ನ ದರ್ಶನವಾಗುತ್ತದೆ. ಕಷ್ಟವಿದ್ದರೂ ಸರಿ ನಿನ್ನ ದರ್ಶನ ನನಗೆ ಮುಖ್ಯ ಎನ್ನುತ್ತಾಳೆ. ಈ ರೀತಿಯಾಗಿ ಭಕ್ತಿಯು…
ಶ್ರೀನಿವಾಸಪುರ: ಶ್ರೀನಿವಾಸಪುರದಲ್ಲೂ ಸಾರಿಗೆ ಸಂಸ್ಥೆ ನೌಕರರು ಪ್ರತಿಭಟನೆಗೆ ಮುಂದಾಗಿದ್ದು ಸಾರಿಗೆ ಘಟಕದ ಮುಂಬಾಗದಲ್ಲಿ ಶಾಮಿಯಾನ ಹಾಕಿ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ.ನಾವು ವಿನಮ್ರವಾಗಿ ಸರ್ಕಾರಕ್ಕೆ ವಿನಂತಿ ಮಾಡುತ್ತಿದ್ದೆವೇ ದಯವಿಟ್ಟು ನಮ್ಮನ್ನು ಸರ್ಕಾರಿ ನೌಕರರು ಎಂದು ಪರಗಣಿಸಿ ಎಂದು ಬೊರ್ಡ್ ಗಳನ್ನು ಕುತ್ತಿಗೆಗೆ ತಗುಲಿಸಿಕೊಂಡು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದಾರೆ.ಪ್ರತಿಭಟನೆಯಲ್ಲಿ ಮಹಿಳಾ ನೌಕರರು ಪಾಲ್ಗೋಂಡಿದ್ದರು.
ಶ್ರೀನಿವಾಸಪುರ:ಕಿಡಿಗೇಡಿಗಳು ಹಾಕಿದ ಬೆಂಕಿಗೆ ಮೊಬೈಲ್ ಅಂಗಡಿಗಳ ಸೈನ್ ಬೋರ್ಡ್ ಸೇರಿದಂತೆ ನಾಮಫಲಕಳು ವಿದ್ಯತ್ ತಂತಿಗಳು ಸುಟ್ಟು ಕರಕಲಾಗಿರುವ ಘಟನೆ ಶ್ರೀನಿವಾಸಪುರ ಪಟ್ಟಣದ ಜೆ.ಸಿ.ರಸ್ತೆಯ ಪುರಸಭೆ ವಾಣಿಜ್ಯ ಮಳಿಗೆಗಳಲ್ಲಿರುವ ರಜನಿ ಮೋಬೈಲ್ ಅಂಗಡಿಯಲ್ಲಿ ನಡೆದಿದ್ದು ಅದೃಷವತ್ ಪ್ರಾಣ ಹಾನಿಯಂತಹವು ನಡೆದಿಲ್ಲ ಸಮಯಕ್ಕೆ ಅಗ್ನಿ ಶಾಮಕ ದಳ ಕಾರ್ಯಚರಣೆ ನಡೆಸಿದ ಪರಿಣಾಮ ದೊಡ್ದ ಮಟ್ಟದ ನಷ್ಟ ಸಹ ಆಗಿರುವುದಿಲ್ಲ.ಜೆ.ಸಿ.ರಸ್ತೆಯಲ್ಲಿರುವ ಪುರಸಭೆ ವಾಣಿಜ್ಯ ಮಳಿಗೆಗಳಲ್ಲಿ ಮಹಡಿ ಏರಲು ಇರುವಂತ ಮೆಟ್ಟಿಲ ಕೆಳಗೆ ಹಣ್ಣುಗಳ ಅಂಗಡಿಯ ಮರದ ಟೆಬಲ್ ಕೆಳಗೆ ಕೂತಿರುವ ಕಿಡಿಗೇಡಿಗಳು ಶನಿವಾರ ತಡ ರಾತ್ರಿ ಚಳಿಕಾಯಿಸಲು ಬೆಂಕಿಹಾಕಿದ್ದು ನಂತರ ಅದನ್ನು ನಿರ್ಲಕ್ಷಿಸಿ ಹೋಗಿದ್ದಾರೆ ಉರಿಯುತ್ತಿದ್ದ ಬೆಂಕಿ ರಜನಿ ಮೊಬೈಲ್ ಅಂಗಡಿಯ ಪ್ಲಾಸ್ಟಿಕ್ ಸೈನ್ ಬೋರ್ಡ್ ಗೆ ತಾಕಿ ಅಂಗಡಿ ಮುಂದಿನ ಎಲ್ಲಾ ಪ್ಲಾಸಟಿಕ್ ಬೋರ್ಡ್ ಗಳು ಸುಟ್ಟಿದೆ ಅಲ್ಲೆ ಹಾದು ಹೋಗಿರುವ ಬೆಸ್ಕಾಂ ಮೈನ್ ವಿದ್ಯತ್ ತಂತಿಗೂ ಹೊತ್ತಿಕೊಂಡು ಸುಟ್ಟಿದೆ ಎಂದು ಹೇಳಲಾಗಿದ್ದು ತಡ ರಾತ್ರಿಯಲ್ಲಿ ಬೆಂಕಿ ದೃಶ್ಯ ಕಂಡವರು ಅಗ್ನಿಶಾಮಕ ದಳಕ್ಕೆ ಮಾಹಿತಿ…
ಟೊರೆಂಟೋ ಚಲನಚಿತ್ರೋತ್ಸವ: ಮೀರಾ ನಾಯರ್ ಗೆ ‘ಟಿಐಎಫ್ಎಫ್’ ಪ್ರಶಸ್ತಿ ಗರಿಟೊರೆಂಟೋ ಚಲನಚಿತ್ರೋತ್ಸವ: ಮೀರಾ ನಾಯರ್ ಗೆ ‘ಟಿಐಎಫ್ಎಫ್’ ಪ್ರಶಸ್ತಿ ಗರಿಟೊರೆಂಟೋ ಚಲನಚಿತ್ರೋತ್ಸವ: ಮೀರಾ ನಾಯರ್ ಗೆ ‘ಟಿಐಎಫ್ಎಫ್’ ಪ್ರಶಸ್ತಿ ಗರಿಟೊರೆಂಟೋ ಚಲನಚಿತ್ರೋತ್ಸವ: ಮೀರಾ ನಾಯರ್ ಗೆ ‘ಟಿಐಎಫ್ಎಫ್’ ಪ್ರಶಸ್ತಿ ಗರಿಟೊರೆಂಟೋ ಚಲನಚಿತ್ರೋತ್ಸವ: ಮೀರಾ ನಾಯರ್ ಗೆ ‘ಟಿಐಎಫ್ಎಫ್’ ಪ್ರಶಸ್ತಿ ಗರಿಟೊರೆಂಟೋ ಚಲನಚಿತ್ರೋತ್ಸವ: ಮೀರಾ ನಾಯರ್ ಗೆ ‘ಟಿಐಎಫ್ಎಫ್’ ಪ್ರಶಸ್ತಿ ಗರಿಟೊರೆಂಟೋ ಚಲನಚಿತ್ರೋತ್ಸವ: ಮೀರಾ ನಾಯರ್ ಗೆ ‘ಟಿಐಎಫ್ಎಫ್’ ಪ್ರಶಸ್ತಿ ಗರಿ
ತನ್ನ ಸ್ವಂತ ಮನೆಯನ್ನೇ ದೋಚಿ ಪರಾರಿಯಾದ ತಮಿಳು ನಟಿ!ತನ್ನ ಸ್ವಂತ ಮನೆಯನ್ನೇ ದೋಚಿ ಪರಾರಿಯಾದ ತಮಿಳು ನಟಿ!ತನ್ನ ಸ್ವಂತ ಮನೆಯನ್ನೇ ದೋಚಿ ಪರಾರಿಯಾದ ತಮಿಳು ನಟಿ!ತನ್ನ ಸ್ವಂತ ಮನೆಯನ್ನೇ ದೋಚಿ ಪರಾರಿಯಾದ ತಮಿಳು ನಟಿ!ತನ್ನ ಸ್ವಂತ ಮನೆಯನ್ನೇ ದೋಚಿ ಪರಾರಿಯಾದ ತಮಿಳು ನಟಿ!ತನ್ನ ಸ್ವಂತ ಮನೆಯನ್ನೇ ದೋಚಿ ಪರಾರಿಯಾದ ತಮಿಳು ನಟಿ!ತನ್ನ ಸ್ವಂತ ಮನೆಯನ್ನೇ ದೋಚಿ ಪರಾರಿಯಾದ ತಮಿಳು ನಟಿ!ತನ್ನ ಸ್ವಂತ ಮನೆಯನ್ನೇ ದೋಚಿ ಪರಾರಿಯಾದ ತಮಿಳು ನಟಿ!