ಚಿರಂಜಿವಿ ನಟನೆಯ ಬಹು ನೀರಿಕ್ಷಿತ ಗಾಡ್ ಫಾದರ್ಸಿನಿಮಾದಲ್ಲಿ ಚಿರಂಜಿವಿ ಜೊತೆ ಸಲ್ಮಾನ್ ಖಾನ್ ಡ್ಯಾನ್ಸ್ತಾರ್ ಮಾರ್ ಥಕ್ಕರ್ ಡ್ಯಾನ್ಸ್ ಕಂಪೋಸರ್ ಪ್ರಭುದೇವಬಹು ತಾರಾಗಣದ ಸಿನಿಮಾ ನ್ಯೂಜ್ ಡೆಸ್ಕ್:ಮೆಗಾಸ್ಟಾರ್ ಚಿರಂಜೀವಿ ಮತ್ತು ನಿರ್ದೇಶಕ ಮೋಹನ್ ರಾಜಾ ಕಾಂಬಿನೇಷನ್‌ನಲ್ಲಿ ‘ಗಾಡ್‌ಫಾದರ್’ ಚಿತ್ರ. ಅಕ್ಟೋಬರ್ 5 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು ಬಿಡುಗಡೆಯ ಸಮಯ ಹತ್ತಿರವಾಗುತ್ತಿದ್ದಂತೆ ಚಿರಂಜಿವಿ ಅಭಿಮಾನಿಗಳಲ್ಲಿ ಕಾತುರ ಹೆಚ್ಚಾಗುತ್ತಿದೆ. ಚಿತ್ರತಂಡದ ಪ್ರಚಾರದಲ್ಲಿ ನಿರತರಾಗಿದ್ದು ಇತ್ತೀಚೆಗೆ ಚಿತ್ರದ ನಾಯಕಿನಟಿ ನಯನತಾರಾ ಅವರ ಫಸ್ಟ್ ಲುಕ್ ಪೊಸ್ಟರ್ ಬಿಡುಗಡೆ ಮಾಡಿದ ನಿರ್ಮಾಪಕರು ಸೋಮವಾರ ಸತ್ಯ ದೇವ್ ಅವರ ಫಸ್ಟ್ ಲುಕ್ ಮತ್ತು ಅವರ ಪಾತ್ರದ ಹೆಸರನ್ನು ಬಹಿರಂಗಪಡಿಸಿದ್ದಾರೆ. ಸತ್ಯದೇವ್ ಪಾತ್ರದ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಚಿತ್ರದಲ್ಲಿ ಚಿರಂಜಿವಿ ಮತ್ತು ಸಲ್ಮಾನ್ ಖಾನ್ ಒಟ್ಟಿಗೆ ಡ್ಯಾನ್ಸ್ ಮಾಡಿರುವ ತಾರ್ ಮಾರ್ ಥಕ್ಕರ್ ಮಾರ್…….. ಹಾಡಿನ ಪ್ರೋಮೋ ಹೊರಬಂದಿದೆ. ಇವರಿಬ್ಬರೂ ಜೊತೆಯಾಗಿ ನಟಿಸಿದ್ದು.. ಹಾಡಿನಲ್ಲಿ ಒಟ್ಟಿಗೆ ಕುಣಿಯುವುದು.. ಮೆಗಾ ಅಭಿಮಾನಿಗಳಿಗೆ ಮೆಮೊರಿಬಲ್ ಉಣಬಡಿಸಿದಂತಿರುತ್ತದೆ ಎನ್ನಲಾಗುತ್ತಿದೆ ಈ ಪ್ರೋಮೋದಲ್ಲಿ ಇಬ್ಬರ ಕೆಮಿಸ್ಟ್ರಿ…
Author: admin
ಶ್ರೀನಿವಾಸಪುರ:ಶ್ರೀನಿವಾಸಪುರ ತಾಲ್ಲೂಕು ಆವಲಕುಪ್ಪ ಗ್ರಾಮದ ಬಳಿ ಸೆಪ್ಟೆಂಬರ್ 9 ವ್ಯಕ್ತಿಯೊಬ್ಬನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಮೃತ ವ್ಯಕ್ತಿ ಪಾತಪಲ್ಲಿ ಗ್ರಾಮದ ಅಪ್ಪಿರೆಡ್ಡಿ (45) ಎಂದು ಖಾತ್ರಿಯಾಗಿತ್ತು ಈ ಸಂಭಂದ ಶ್ರೀನಿವಾಸಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು ಅದಕ್ಕೂ ಮುಂಚಿತವಾಗಿ ಕೊಲೆಯಾದ ವ್ಯಕ್ತಿ ಕುರಿತಾಗಿ ಸೆಪ್ಟಂಬರ್ 7 ರಂದು ವ್ಯಕ್ತಿ ಕಾಣೆಯಾಗಿರುವುದಾಗಿ ದೂರುದಾಖಲಾಗಿತ್ತು ಇದರಿಂದಾಗಿ ನಾಪತ್ತೆಯಾಗಿದ್ದ ಅಪ್ಪಿರೆಡ್ಡಿ ಕೊಲೆಯಾದ ಬಗ್ಗೆ ಕುರಿತಾಗಿ ಶ್ರೀನಿವಾಸಪುರ ಪೋಲಿಸರು ನಾನಾ ರೀತಿಯಲ್ಲಿ ತನಿಖೆ ನಡೆಸಿ ಅಪ್ಪಿರೆಡ್ಡಿಯನ್ನು ಹತ್ಯೆ ಮಾಡಿದ ಕೊಲೆಗಡಕರನ್ನು 3-4 ದಿನಗಳ ಅಂತರದಲ್ಲಿ ಪತ್ತೆ ಹಚ್ಚಿರುತ್ತಾರೆ. ಮೃತ ಅಪ್ಪಿರೆಡ್ಡಿಯ ಸ್ನೇಹಿತರಾದ ಆಲಂಬಗಿರಿ ಗ್ರಾಮದ ಮಂಜುನಾಥ್ ಬಿನ್ ರೆಡ್ಡೆಪ್ಪ ಹಾಗೂ ಮಂಜುನಾಥ್ ಬಿನ್ ನರಸಿಂಹಯ್ಯ ಎನ್ನುವರೇ ಕೊಲೆಮಾಡಿದ್ದು ಸೆಪ್ಟೆಂಬರ್ 6ರಂದು ಅಪ್ಪಿರೆಡ್ಡಿಯನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಪಟ್ಟಣದ ಹೋಟೆಲ್ ನಲ್ಲಿ ಊಟ ಮಾಡಿ ನಂತರ ಮದ್ಯ ಸೇವಿಸಿ ಅವಲಕುಪ್ಪದ ಹತ್ತಿರ ಅಮಾನಿಕೆರೆಯ ರಾಜಕಾಲುವೆಯ ಹತ್ತಿರ ನಿರ್ಜನ ಪ್ರದೇಶಕ್ಕೆ ಕರೆದೊಯಿದು ಸುತ್ತಿಗೆಯಿಂದ ಹೋಡೆದು ಸಾಯಿಸಿ ಆತನ ಬಳಿ ಇದ್ದ…
ನ್ಯೂಜ್ ಡೆಸ್ಕ್:ಎರಡು ಬಾರಿ ಮೂಂದುಡಿದ್ದ ಬಿಜೆಪಿ ಜನೋತ್ಸವ ಸಮಾರಂಭ ಮೂರನೆ ಬಾರಿಗೆ ಜನಸ್ಪಂದನಯಾಗಿ ಯಶಸ್ವಿಯಾಗಿದೆ ಜೊತೆಗೆ ಯಶ್ಶಸ್ಸಿನ ಪೂರ್ತಿ ಕ್ರೆಡಿಟ್ ಆರೋಗ್ಯ ಸಚಿವ ಡಾ.ಸುಧಾಕರ್ ದಕ್ಕಿದೆ!ಮೊದಲು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಿಂದಾಗಿ ಮೂಂದೂಡಲಾಯಿತು ಇದಾದ ನಂತರ ಎರಡನೇ ಬಾರಿಗೆ ಸಚಿವ ಉಮೇಶ್ ಕತ್ತಿ ನಿಧನದ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿದ್ದ ಜನೋತ್ಸವ ಕಾರ್ಯಕ್ರಮಕ್ಕೆ ಹೆಸರು ಬದಲಿಸಿ ಜನಸ್ಪಂದನ ಎಂದು ನಾಮಕರಣ ಮಾಡಿ ಅಂತು ಇಂತು ಮೂರನೆ ಬಾರಿಗೆ ಕಾರ್ಯಕ್ರಮವನ್ನು ಸೆ 10 ರಂದು ಶನಿವಾರ ದೊಡ್ಡಬಳ್ಳಾಪುರದಲ್ಲಿ ಯಶಸ್ವಿಯಾಗಿ ಮುಗಿದಿದೆ.ಇಡೀ ಕಾರ್ಯಕ್ರಮವನ್ನು ಹೆಗಲ ಮೇಲೆ ಹೊತ್ತು ಸಾಗಿದ್ದ ಸಚಿವ ಡಾ.ಸುಧಾಕರ್ ಅವರ ಸಂಘಟನಾ ಶಕ್ತಿಯನ್ನು ಕಣ್ಣಾರೆ ಕಂಡ ರಾಜ್ಯ ಬಿಜೆಪಿಯೇ ಅಲ್ಲ ಕೇಂದ್ರ ಮುಖಂಡರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮ ಸಾಂಗವಾಗಿ ನೆರವೇರಲು ಸಚಿವರು ಗಣಪತಿ ಹೋಮವನ್ನೂ ಸಹ ಮಾಡಿದ್ದರು.ಎಲ್ಲಾ ಜವಾಬ್ದಾರಿ ಹೊತ್ತ ಬಾಹುಬಲಿ ಡಾ.ಸುಧಾಕರ್ಹಳೇಯ ಮೈಸೂರು ಪ್ರಾಂತ್ಯವಾದ ಕೋಲಾರ ಚಿಕ್ಕಬಳ್ಳಾಪುರ ಭಾಗಗಳಲ್ಲಿ ಬಿಜೆಪಿಗೆ ಅಂತಹ ನೆಲಗಟ್ಟು ಇಲ್ಲ ಇಂತಹ ನೆಲದಲ್ಲಿ ಬಿಜೆಪಿಗೆ ಜನ ಸೇರಿಸುವುದು…
ಶ್ರೀನಿವಾಸಪುರ:ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಇಂದು ಕೊಳೆತ ಶವವಾಗಿ ಕಾಡಿನಲ್ಲಿ ಪತ್ತೆಯಾಗಿದ್ದು ಮೃತ ವ್ಯಕ್ತಿಯನ್ನು ತಾಲೂಕಿನ ಪಾತಪಲ್ಲಿ ಗ್ರಾಮದ ಗೆಟ್ ಬಳಿ ಅಂಗಡಿ ನಡೆಸುತ್ತಿರುವ ಅಪ್ಪಿರೆಡ್ಡಿ (45) ಎಂದು ಗುರುತಿಸಲಾಗಿದೆ.ತಾಲ್ಲೂಕಿನ ಆವಲಕುಪ್ಪ ಗ್ರಾಮದ ನಿರ್ಜನ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದ್ದು ಆವಲಕುಪ್ಪ ಗ್ರಾಮದ ಕೆಲವರು ಮಳೆಗಾಲದಲ್ಲಿ ಕಾಡಿನಲ್ಲಿ ಸಿಗುವ ಹಣಬೆ ಹುಡುಕುತ್ತ ಹೋದಾಗ ಮೃತ ದೇಹ ಪತ್ತೆಯಾಗಿದೆ ಗ್ರಾಮಸ್ಥರು ತಕ್ಷಣ ಶ್ರೀನಿವಾಸಪುರ ಪೋಲಿಸರಿಗೆ ಮಾಹಿತಿ ತಿಳಿಸಿರುತ್ತಾರೆ.ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ನಾಪತ್ತೆಯಾದ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಿದಾಗ ಸೆಪ್ಟಂಬರ್ 7 ರಂದು ತಾಲ್ಲೂಕಿನ ಪಾತಪಲ್ಲಿ ಗ್ರಾಮದ ಅಪ್ಪಿರೆಡ್ಡಿ (45) ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕುರಿತಂತೆ ಪೋಲಿಸರು ಅನುಮಾನಿಸಿ ಕೂಡಲೇ ಅಪ್ಪಿರೆಡ್ಡಿ ಕುಟುಂಬಸ್ಥರನ್ನು ಕರಿಸಿ ಪರಿಶೀಲನೆ ನಡೆಸಿದಾಗ ಮೃತದೇಹ ಅಪ್ಪಿರೆಡ್ಡಿಯದು ಎಂದು ಕುಟುಂಬಸ್ಥರು ಖಚಿತ ಪಡಿಸಿದ ಹಿನ್ನಲೆಯಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿರುತ್ತಾರೆ.ದ್ವಿಚಕ್ರ ವಾಹನ ರೋಣೂರಿನ ಬಳಿ ಪತ್ತೆ.ಅಪ್ಪಿರೆಡ್ಡಿ (45) ಮೃತ ದೇಹ ತಾಲ್ಲೂಕಿನ…
ಶ್ರೀನಿವಾಸಪುರ:ಏಷ್ಯಾಕಪ್ ಟಿ.20 ಪಂದ್ಯಾವಳಿಗಳಲ್ಲಿ ಭಾರತ ತಂಡದ ವಿರುದ್ದ ಪಾಕಿಸ್ತಾನ ವಿಜಯ ಸಾಧಿಸಿರುವುದನ್ನು ಬೆಂಬಲಿಸಿಪಾಕಿಸ್ತಾನ ಪರ ಘೋಷಣೆ ಹಾಕಿ ವ್ಯಾಟ್ಸಾಪ್ ಸ್ಟೆಟಸನಲ್ಲಿ ಪ್ರಚಾರ ಮಾಡಿದ್ದ ಮೂವರ ವಿರುದ್ದ ಶ್ರೀನಿವಾಸಪುರ ಪೋಲಿಸರು ದೂರು ದಾಖಲಿಸಿ ಒರ್ವನನ್ನು ಬಂಧಿಸಿರುತ್ತಾರೆ. ಶ್ರೀನಿವಾಸಪುರ ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾದ ಮುನ್ಸೂರ್ ಉಲ್ಲಾ,ಸುಹೇಲ್ ಪಾಷಾ,ತೊಹಿದ್ ಪಾಷಾ,ಎಂಬುವರ ವಿರುದ್ದ FIR ದಾಖಲಾಗಿದೆ ಇದರಲ್ಲಿ ಓರ್ವನನ್ನ ಬಂಧಿಸಲಾಗಿದೆ.ಈ ಪ್ರಕರಣಕ್ಕೆ ಸಂಬಂದಿಸಿದಂತೆ ಪಟ್ಟಣದ ನಿವಾಸಿ ರಾಮಾಂಜಿ ಎನ್ನುವರು ಸೆಪ್ಟೆಂಬರ್ 6 ರಂದು ಮೂವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಶ್ರೀನಿವಾಸಪುರ ಠಾಣೆಯಲ್ಲಿ ದೂರು ನೀಡಿದ್ದರು, ಪೊಲೀಸ್ ಇನ್ಸೆಪೇಕ್ಟರ್ ನಾರಯಣಸ್ವಾಮಿ ಮೂವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದರು ಇವರಲ್ಲಿ ಒರ್ವನನ್ನು ಬಂಧಿಸಿದ್ದು ಇನ್ನಿಬ್ಬರು ಪರಾರಿಯಾಗಿರುತ್ತಾರೆ. ವರದಿ :ಸುರೇಶ್ ನಂಬಿಹಳ್ಳಿ
ಶ್ರೀನಿವಾಸಪುರ:- ಜಮೀನು ವಿವಾದಕ್ಕೆ ಸಂಬಂದಿಸಿದಂತೆ ಎರಡು ಗುಂಪುಗಳು ಸಾರ್ವಜನಿಕವಾಗಿ ಹಾಡು ಹಗಲೆ ಮಚ್ಚು, ದೊಣ್ಣೆ, ರಾಡ್ ಗಳಿಂದ ಬಡಿದಾಡಿಕೊಂಡಿದ್ದಾರೆ ಈ ಸಮಯದಲ್ಲಿ ಹಲವರ ತಲೆಗೆ ಪೆಟ್ಟಾಗಿ ಗಾಯಗೊಂಡು ರಕ್ತ ಸುರಿಯುತ್ತಿದ್ದ ದೃಶ್ಯ ಸ್ಥಳೀಯ ಜನರನ್ನು ಬೆಚ್ಚಿ ಬಿಳಿಸಿರುವಂತ ಘಟನೆ ಭಾನುವಾರ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿರುತ್ತದೆ.ಪಟ್ಟಣದ ವೇಣು ಶಾಲೆಯ ಮುಂಬಾಗದಲ್ಲಿ ಘಟನೆ ನಡೆದಿದ್ದು ಘಟನೆಯಲ್ಲಿ ಹಲ್ಲೆಗೊಳಗಾಗಿರುವ ನಾಲ್ಕು ಮಂದಿ ಪೈಕಿ ಕೆ.ಎಸ್.ಆರ್.ಟಿ.ಸಿ ಕಂಡೇಕ್ಟರ್ ವೇಣು ಮತ್ತು ಇತರರು ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿಸ್ಥೆ ಪಡೆಯುತ್ತಿದ್ದಾರೆ.ತಾಲೂಕಿನ ಮೀಸಗಾನಹಳ್ಳಿ ಗ್ರಾಮದಲ್ಲಿ ಜಮೀನು ತಕರಾರಿಗೆ ಸಂಭಂದಿಸಿದಂತೆ ಒಂದೇ ಸಮುದಾಯದ ಕೃಷ್ಣಪ್ಪ ಮತ್ತು ಗಂಗರಾಜು ಎಂಬ ಎರಡು ಕುಟುಂಬಗಳ ನಡುವೆ ರಸ್ತೆ ವಿಚಾರದಲ್ಲಿ ನ್ಯಾಯ ಪಂಚಾಯಿತಿಗಳು ನಡೆದು ಇತ್ಯರ್ಥವಾಗದ ಹಿನ್ನಲೆಯಲ್ಲಿ ಇಂದು ಪಟ್ಟಣದಲ್ಲಿ ಕೂತು ಮಾತನಾಡುವ ಬಗ್ಗೆ ತಿರ್ಮಾನಿಸಲಾಗಿತ್ತು ಅದರಂತೆ ಇಂದು ಎರಡು ಕಡೆಯವರು ಕೂತು ಮಾತನಾಡುತ್ತಿರುವಾಗ ಎರಡು ಕಡೆಯವರ ನಡುವೆ ಒಮ್ಮತ ಮೂಡದೆ ಮಾತಿನ ಚಕಮುಖಿ ನಡೆದಿದೆ ನಂತರ ಕೈ ಕೈ ಮೀಲಾಯಿಸುವ ಹಂತ ತಲುಪಿದ್ದು ಎರಡು…
ತುಮಕೂರು:ತೂಮಕೂರು ಜಿಲ್ಲೆಯ ಪ್ರಮುಖ ರಾಜಕಾರಣಿಗಳಾದ ಕುಣಿಗಲ್ ಮಾಜಿ ಶಾಸಕ ಹಾಗು ತುಮಕೂರು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮತ್ತು ನೇಕಾರ ಸಮಾಜದ ಪ್ರಭಾವಿ ನಾಯಕ ಹಾಗು ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯಧ್ಯಕ್ಷ ಎಂ.ಡಿ.ಲಕ್ಷ್ಮೀನಾರಯಣ್ ಕಾಂಗ್ರೆಸ್ಸನ್ನು ತೊರೆಯುವ ಬಗ್ಗೆ ಕಾಂಗ್ರೆಸ್ ಮುಖಂಡರ ಬಳಿ ನೇರವಾಗಿ ಪ್ರಸ್ತಾಪಿಸಿ ನಂತರ ರಾಜಿನಾಮೆ ನೀಡಿದ್ದಾರೆ. ಮುದ್ದಹನುಮೇಗೌಡ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸುತ್ತಿರುವುದು ಮುದ್ದಹನುಮೇಗೌಡ ಬೆಂಗಳೂರುಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದು ಭೇಟಿ ಮಾಡಿ ಪಕ್ಷ ತೊರೆಯುವ ಕುರಿತಾಗಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.ಪಕ್ಷತ್ಯಜಿಸುವ ಕುರಿತಾಗಿ ರಾಜಿನಾಮೆ ಕೊಟ್ಟ ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಮುದ್ದಹನುಮೇಗೌಡ ಕಾಂಗ್ರೆಸ್ ತ್ಯಜಿಸಿ 2023ರ ವಿಧಾನಸಭೆ ಚುನಾವಣೆಯಲ್ಲಿ ಕುಣಿಗಲ್ ಕ್ಷೇತ್ರದಿಂದ ಸ್ಪರ್ದಿಸುವುದಾಗಿ ಹೇಳಿದ್ದಾರೆ.ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ರಣದೀಪ್ ಸಿಂಗ್ ಸುರ್ಜೇವಾಲ ದೂರವಾಣಿ ಕರೆ ಮಾಡಿ ಪಕ್ಷದಲ್ಲೇ ಇರುವಂತೆ ಹೇಳಿದ್ದರು. ನಂತರದಲ್ಲಿ ಏನನ್ನೂ ಮಾತನಾಡಿಲ್ಲ ನಾನು ಯಾರ ಬಗ್ಗೆಯೂ…
ಶ್ರೀನಿವಾಸಪುರ: ಕಳೆದ ಮೂರು ನಾಲ್ಕು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಹೋಳೂರು ಹೊಬಳಿಯ ವ್ಯಾಪ್ತಿಯಲ್ಲಿ ನೀರು ನುಗ್ಗಿ ಅನಾಹುತವಾಗಿದೆ ಹೋಳೂರು ಗ್ರಾಮದ ರಾಜಕಾಲುವೆ ಒತ್ತುವರಿಯಿಂದಾಗಿ ಮಳೆ ನೀರು ಗ್ರಾಮಕ್ಕೆ ನುಗ್ಗಿ ಅನಾಹುತವಾಗಿದ್ದರೆ, ಮುದುವಾಡಿ ಕೆರೆಯ ಕೊಡಿಹರಿದು ಬೆಳ್ಳಂಬರಿ ಗ್ರಾಮದ ಸಂಪರ್ಕ ಸೇತುವೆ ಮಟ್ಟ ಮೀರು ನೀರು ಹರಿದಿದ್ದು ಇದರಿಂದಾಗಿ ಬೆಳೆ ಹಾನಿಯಾಗಿದೆ ರೈತ ಸಂಕಷ್ಟಕ್ಕೆ ಈಡಾದರೆ ಗಟ್ಟಹಳ್ಳಿ ಗ್ರಾಮದ ಊರ ಮದ್ಯದ ಕಾಲುವೆ ನಿರ್ಮಾಣದ ಸಂದರ್ಭದಲ್ಲಿ ವ್ಯತ್ಯಾಸವಾಗಿದ್ದು ಇದರಿಂದಾಗಿ ಕಾಲುವೆಯಲ್ಲಿ ಹರಿಯಬೇಕಾಗಿದ್ದ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಸಾರ್ವಜನಿಕರು ತೊಂದರೆ ಅನುಭವಿಸಿದ್ದಾರೆ. ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಭೇಟಿ ಪರಶೀಲನೆಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಇಂದು ಮಳೆ ಅನಾಹುತ ಗ್ರಾಮಗಳಿಗೆ ತೆರಳಿ ಅಗಿರುವ ಸಮಸ್ಯೆಗಳ ಕುರಿತಾಗಿ ಪರಶೀಲನೆ ನಡೆಸಿದರು ಈ ಸಂದರ್ಭದಲ್ಲಿ ಹೋಳೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾರಯಣಸ್ವಾಮಿ ಹಾಗು ಜೆ.ಇ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಆಗಿರುವ ಅನಾಹುತಗಳಿಗೆ ಪಂಚಾಯಿತಿ ವತಿಯಿಂದ ತಾತ್ಕಾಲಿಕ ಪರಿಹಾರ ಕೈಗೊಳ್ಳುವಂತೆ ಸೂಚಿಸಿದರು. ತಾಲೂಕು…
ಶ್ರೀನಿವಾಸಪುರ: ಪಟ್ಟಣದ ವೆಂಕಟೇಶ್ವರ ಬಡಾವಣೆಯಲ್ಲಿ ಆಚರಿಸಲಾಗಿತ್ತಿದ್ದ ಗಣೇಶೋತ್ಸವಕ್ಕೆ ಈ ವರ್ಷ 25 ನೇ ವರ್ಷದ ಸಂಭ್ರಮ,ನಿನ್ನೆ ಮೊನ್ನೆ ಕಾಲಿ ನಿವೇಶನಗಳಲ್ಲಿ ಶ್ರೀ ವಿನಾಯಕ ಸೇವಾ ಸಮಿತಿ ಹೆಸರಿನಲ್ಲಿ ಗಣೇಶ ಕೂರಿಸಿ ಉತ್ಸವ ಆಚರಿಸುತ್ತಿದ್ದ ಮಾಜಿ ಪುರಸಭೆ ಸದಸ್ಯ ಕೆ.ವಿ.ಮಂಜು ಮತ್ತು ಯುವ ಸ್ನೇಹಿತರ ತಂಡ ಕಾರ್ಯಕ್ಕೆ ಇವತ್ತು ಇಪ್ಪತೈದು ವಸಂತಗಳ ಬೆಳ್ಳಿಹಬ್ಬದ ಸಂಭ್ರದಲ್ಲಿ ರಜತ ಮಹೋತ್ಸವ ಆಚರಿಸುತ್ತಿದೆ, ಈ ಬಾರಿ ಸುಮಾರು 14 ಅಡಿ ಎತ್ತರದ ಬಾರಿ ಗಾತ್ರದ ದರ್ಬಾರ್ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.ಅಂದು ಯುವಕರಷ್ಟೆ ಒಗ್ಗೂಡಿ ಪ್ರಾರಂಭಿಸಿದ ಬೆಳ್ಳಿಹಬ್ಬದ ಸಂಭ್ರಮದ ಗಣೇಶೋತ್ಸವದ ಬಹುತೇಕ ಮುಂದಾಳುಗಳು ಇಂದು ಮದ್ಯವಯಸ್ಕರಾಗಿದ್ದಾರೆ, ಇಂದಿನ ಪೀಳಿಗೆಯ ಯುವಕರ ಜೊತೆಗೂಡಿ ಮದ್ಯವಯಸ್ಕ ಮುಖಂಡರು ಆಗಸ್ಟ್ 31 ಬುಧವಾರ ಗಣೇಶ ಹಬ್ಬದ ದಿನದಂದು ಸಂಜೆ 25 ನೇ ವರ್ಷದ ಗಣೇಶೋತ್ಸವಕ್ಕೆ ಚಾಲನೆ ನೀಡಿದರು.ಐದು ದಿನಗಳ ಗಣೇಶೋತ್ಸವ ಭಾನುವಾರ ವಿಸರ್ಜನೆಐದು ದಿನಗಳ ಕಾಲ ನಡೆಯುವ ವೆಂಕಟೇಶ್ವರ ಬಡಾವಣೆ ಗಣೇಶೋತ್ಸವದಲ್ಲಿ ಪ್ರತಿದಿನ ಸಂಜೆ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ವಿಶೇಷವಾಗಿ ಎರಡನೇಯ ದಿನವಾದ ಸೆಪ್ಟೆಂಬರ್…
ನ್ಯೂಜ್ ಡೆಸ್ಕ್: ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಮುನಿಯಪ್ಪ ಕಾಂಗ್ರೆಸ್ ಗೆ ಗುಡ್ ಬೈ ಹೇಳುವ ವದಂತಿ ಪುಂಕಾನು ಪುಂಕವಾಗಿ ಹರಡುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಪಕ್ಷ ಅವರ ಮನವೊಲಿಕೆ ಕಸರತ್ತು ನಡೆಸುತ್ತಿದೆ ಇದರ ಆರಂಭ ಎನ್ನುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಕೆಎಚ್ ಮುನಿಯಪ್ಪ ಅವರನ್ನು ಅವರ ಸಂಜಯ್ ನಗರದ ಮನೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.ಬಿಬಿಎಂಪಿ ಚುನಾವಣೆ ನೆಪದಲ್ಲಿ ಬೆಂಗಳೂರಿಗೆ ಆಗಮಿಸಿರುವ ಸುರ್ಜೇವಾಲಾ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬಿಬಿಎಂಪಿ ಚುನಾವಣಾ ಪ್ರಣಾಳಿಕೆ ಸಭೆಯ ನಂತರ ನೇರವಾಗಿ ಮುನಿಯಪ್ಪ ಅವರ ನಿವಾಸಕ್ಕೆ ತೆರಳಿದರು.ತೀರಾ ಇತ್ತಿಚಿಗಷ್ಟೆ ಮುನಿಯಪ್ಪ ಅವರು ಕರ್ನಾಟಕ ಸರ್ಕಾರದ ಪ್ರಭಾವಿ ಸಚಿವ ಡಾ.ಸುಧಾಕರ್ ಅವರ ಜೊತೆಗೂಡಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾದ ಹಿನ್ನಲೆಯಲ್ಲಿ ಮಾಜಿ ಕೇಂದ್ರ ಸಚಿವರು ಬಿಜೆಪಿಗೆ ಸೇರುತ್ತಾರೆ ಎಂಬ ಊಹಾಪೋಹಗಳು ಕೇಳಿ ಬರುತ್ತಿದೆ ಈ ಹಿನ್ನಲೆಯಲ್ಲಿ ರಣದೀಪ್ ಸಿಂಗ್…