Author: admin

ಶ್ರೀನಿವಾಸಪುರ:- ಶ್ರೀನಿವಾಸಪುರವನ್ನು ನಾಲ್ಕುದಶಕಗಳಿಂದ ಪ್ರತಿನಿಧಿಸುತ್ತಿರುವ ಇಲ್ಲಿನ ಸಂಪ್ರದಾಯಿಕ ಎದುರಾಳಿ ರಾಜಕಾರಣಿಗಳಾದ ಸ್ವಾಮಿ-ರೆಡ್ಡಿ ತಾಲೂಕಿನ ಅಭಿವೃದ್ದಿಗೆ ಶೂನ್ಯ ಎಂದು ಕೋಲಾರದ ಸಂಸದ ಮುನಿಸ್ವಾಮಿ ಶ್ರೀನಿವಾಸಪುರದ ಹಾಲಿ ಮತ್ತು ಮಾಜಿ ಶಾಸಕರ ವಿರುದ್ದ ಪರೋಕ್ಷವಾಗಿ ಆರೋಪ ಮಾಡಿದರು. ಇಷ್ಟು ವರ್ಷಗಳಿಂದ ಕ್ಷೇತ್ರ ಪ್ರತಿನಿಧಿಸುತ್ತಿರುವರು ಇಲ್ಲಿಗೆ ಯಾವುದೇ ಉನ್ನತ ಮಟ್ಟದ ಶೈಕ್ಷಣಿಕ ಸಂಸ್ಥೆಗಳಾಗಲಿ ಕಾರ್ಖಾನೆಗಳಾಗಲಿ, ಗುಣಮಟ್ಟದ ಆಸ್ಪತ್ರೆ ಇಲ್ಲ ಯಾವುದೆ ಕಾರ್ಯಕ್ರಮ ತಾರದೆ ಜನಸಾಮಾನ್ಯರಿಗೆ ಅನಕೂಲ ಅಗುವಂತ ಶಾಶ್ವತ ಅಭಿವೃದ್ದಿಗಳನ್ನು ಮಾಡದೆ ಇರುವುದು ವಿಷಾದನೀಯ ಎಂದರು. ಅವರು ಪಟ್ಟಣದಲ್ಲಿ ಇಂದು ಭಾನುವಾರ ತಡ ಸಂಜೆ ಜನೋತ್ಸವ ಕಾರ್ಯಕ್ರಮ ಕುರಿತಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆ ಉದ್ಗಾಟಿಸಿ ಮಾತನಾಡಿದರು.ಕಾಂಗ್ರೆಸ್ ಪಕ್ಷದಲ್ಲಿ ವ್ಯವಸ್ಥಿತವಾಗಿ ದಲಿತರನ್ನು ತುಳಿಯಲಾಗುತ್ತಿದೆ ಎಂದು ಆರೋಪಿಸಿದ ಅವರು ಮಾಜಿ ಉಪಮುಖ್ಯಂತ್ರಿ ಡಾ.ಪರಮೇಶ್ವರ್ ಹಾಗು ಹಿರಿಯ ದಲಿತ ನಾಯಕ ಖರ್ಗೆ ಅವರುಗಳನ್ನು ಸೋಲಿಸಿದವರು ಯಾರು ಎಂದು ಪ್ರಶ್ನಿಸಿದರು.ಯಾರು ಎನೇ ಮಾತನಾಡಿದರು ಕೆ.ಸಿ.ವ್ಯಾಲಿ ಯೋಜನೆಯ ಎರಡನೆ ಹಂತದಲ್ಲಿ ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಹಣ ಬಿಡುಗಡೆ ಮಾಡಿದ್ದುಬಿಜೆಪಿ ಸರ್ಕಾರ ಸಾಧನೆ…

Read More

ನ್ಯೂಜ್ ಡೆಸ್ಕ್: ಹುಡಗಿರಿಗಾಗಿ ಹುಡುಗರು ಬಡಿದಾಡಿಕೊಳ್ಳುವುದು ಸಾಮಾನ್ಯ ಆದರೆ ಇಲ್ಲಿ ಜೆಸ್ಟ್ ಫಾರ್ ಚೇಂಜ್ ಒರ್ವ ಹುಡುಗನಿಗಾಗಿ ಇಬ್ಬರು ಹುಡುಗಿಯರು ಸಾರ್ವಜನಿಕವಾಗಿ ನಡಿ ಬಸ್ಟಾಂಡಿನಲ್ಲಿ ಜಗಳವಾಡಿ ಬಡಿದಾಡಿಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆಇದು ಕೇಳಲು ವಿಚಿತ್ರ ಎನಿಸಿದರೂ ನಡೆದಿರುವುದು ನಿಜ ಇತ್ತೀಚೆಗಷ್ಟೇ ಬಾಯ್ ಫ್ರೆಂಡ್‌ನ ವಿಚಾರವಾಗಿ ಇಬ್ಬರು ಹುಡುಗಿಯರು ಜಗಳವಾಡುತ್ತಿರುವ ದೃಶ್ಯಗಳು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಚಿತ್ರಣವಾಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಮಹಾರಾಷ್ಟ್ರದ ಪೈಥಾನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪೈಥಾನ್ ನಗರದ ಬಸ್ ನಿಲ್ದಾಣದಲ್ಲಿ ನಡೆದ ಈ ಘಟನೆಯಲ್ಲಿ ಬಡಿದಾಡಿಕೊಂಡ ಬಾಲಕಿಯರಿಬ್ಬರನ್ನೂ ಪೊಲೀಸರು ಕರೆದೊಯ್ದು ಕೌನ್ಸೆಲಿಂಗ್ ನೀಡುವ ಮೂಲಕ ಬುದ್ದಿ ಹೇಳಿ ಬಿಡುಗಡೆಗೊಳಿಸಿದ್ದಾರೆ. ಪೊಲೀಸರ ಪ್ರಕಾರ, ಯುವತಿಯೊಬ್ಬಳು ಯುವಕನೊಂದಿಗೆ ಬಸ್ ನಿಲ್ದಾಣಕ್ಕೆ ಬಂದಿದ್ದಾಳೆ ಈ ವಿಷಯ ತಿಳಿದ ಮತ್ತೊಬ್ಬ ಹದಿಹರೆಯದ ಯುವತಿ ಅದೇ ಯುವಕನಿಗಾಗಿ ಬಸ್ ನಿಲ್ದಾಣಕ್ಕೆ ಬರುತ್ತಾಳೆ ಯುವಕ ಮತ್ತೊಬ್ಬ ಯುವತಿಯೊಂದಿಗೆ ಇರುವುದನ್ನು ನೋಡಿ ಕೋಪಗೊಂಡ ಆಕೆ ಬಾಯ್ ಫ್ರೆಂಡ್ ಜೊತೆಗಿದ್ದ ಯುವತಿಯ ವಿರುದ್ದ ಜಗಳ ಕಾಯ್ದಿದ್ದಾಳೆ ಪರಸ್ಪರ…

Read More

ನ್ಯೂಜ್ ಡೆಸ್ಕ್:-ಸತ್ಯದ ದೇವರು ಎಂದೇ ಖ್ಯಾತರಾಗಿರುವ ಆಂಧ್ರದ ಚಿತ್ತೂರು ಜಿಲ್ಲೆಯ ಪುರಾತನವಾದ ಕಾಣಿಪಾಕಂ ಶ್ರೀ ವರಸಿದ್ದಿ ವಿನಾಯಕ ದೇವಾಲಯ ವಾಸ್ತು ಶೈಲಿಯಲ್ಲಿ ಪುನರ್ ನಿರ್ಮಾಣ ಮಾಡಿದ್ದು ಭಾನುವಾರ ಲೋಕಾರ್ಪಣೆಗೊಂಡಿತು.ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಎಂಡೊಮೆಂಟ್ ಇಲಾಖೆಗೆ ಸೇರಿದ ಕಾಣಿಪಾಕಂ ವರಸಿದ್ದಿ ವಿನಾಯಕ ದೇವಸ್ಥಾನವನ್ನು ಧಾನಿಗಳ ನೆರವಿನಿಂದ ಸುಮಾರು 10 ಕೋಟಿ ವೆಚ್ಚದಲ್ಲಿ ಪಲ್ಲವ ಹಾಗು ವಿಜಯನಗರ ಸಾಮ್ರಾಜ್ಯದ ಶೈಲಿಯ ವಾಸ್ತುಶಿಲ್ಪದಂತೆ ಪುನಃ ನಿರ್ಮಾಣಮಾಡಲಾಗಿದ್ದು ಭಾನುವಾರ ಅರ್ಚಕರ ವೈದಿಕ ಮಂತ್ರ ಘೋಷಣೆಗಳ ನಡುವೆ ಚತುರ್ಥವೇದ ಹೋಮ,ಮಹಾ ಪೂರ್ಣಾಹುತಿ ಮತ್ತು ಕಳಸೋದ್ಭವ ಹಾಗು ವಿಮಾನ ಗೋಪುರ ಮತ್ತು ಧ್ವಜಸ್ತಂಭಕ್ಕೆ ಮಹಾಕುಂಭಾಭಿಷೇಕವನ್ನು ಶುಭ ಮುಹೂರ್ತದೊಂದಿಗೆ ನೆರವೇರಿಸಿ ದೇವಾಲಯವನ್ನು ಲೋಕಾರ್ಪಾಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ದೇವಾಲಯದ ಅಭಿವೃದ್ದಿಗೆ ಪೂರಕವಾಗಿ ಮೂಲಭುತ ಸೌಕರ್ಯಗಳ ಹಲವು ಅಭಿವೃದ್ಧಿ ಕಾರ್ಯಗಳಾದ ₹ 5 ಕೋಟಿ ಮೌಲ್ಯದ ಲಡ್ಡುತಯಾರಿಕೆಗೆ ಅತ್ಯಾಧುನಿಕ ಅಡಿಗೆಮನೆ, ಭಕ್ತರು ಉಳಿದುಕೊಳ್ಳಲು ₹12 ಕೋಟಿ ವೆಚ್ಚದಲ್ಲಿ ವಿನಾಯಕ ಸದನಂ ವಸತಿ ನಿಲಯ, ₹ 9 ಕೋಟಿ ವೆಚ್ಚದಲ್ಲಿ ಬೃಹತ್ ಕಲ್ಯಾಣ ಮಂಟಪಗಳು;…

Read More

ಶ್ರೀನಿವಾಸಪುರ:ಗಂಗಾ ಕಲ್ಯಾಣ ಯೋಜನೆಯ ಸಮಿತಿಗೆ ಆಯಾ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರಗತಿ ಪರಿಶೀಲನೆ ನಡೆಸಬೇಕಾಗಿತ್ತು, ಆದರೆ ಇಷ್ಟು ವರ್ಷಗಳಿಂದ ಇದುವರೆವಿಗೂ ಒಂದು ಜಿಲ್ಲೆಯಲ್ಲಿಯೂ ಪ್ರಗತಿ ಪರಿಶೀಲನೆ ನಡೆಸಿರಲಿಲ್ಲ ನಾನು ಗಂಗಾ ಕಲ್ಯಾಣ ಯೋಜನೆಯ ಸದನ ಸಮಿತಿಯ ಅಧ್ಯಕ್ಷನಾದ ನಂತರ ಪ್ರತಿ ಜಿಲ್ಲೆಯಲ್ಲಿಯೂ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಿ ಯೋಜನೆಯಲ್ಲಿ ಆಗಿದ್ದ ಲೋಪಗಳನ್ನು ಎತ್ತಿ ಹಿಡಿದು ಸರ್ಕಾರಕ್ಕೆ ವರದಿ ಸಲ್ಲಿಸಿ ಸರಿಪಡಿಸುವ ಕೆಲಸ ಮಾಡಿರುವುದಾಗಿ ವಿಧಾನ ಪರಿಷತ್ ಮುಖ್ಯ ಸಚೇತಕ ವೈ.ಎ ನಾರಾಯಣಸ್ವಾಮಿ ತಿಳಿಸಿದರು.ಶ್ರೀನಿವಾಸಪುರ ತಾಲ್ಲೂಕಿನ ಅವರ ಸ್ವಗ್ರಾಮವಾದ ಯಚ್ಚನಹಳ್ಳಿ ಗ್ರಾಮದಿಂದ ಕಂಬಾಲಪಲ್ಲಿ ಗ್ರಾಮಕ್ಕೆ 50 ಲಕ್ಷ ವೆಚ್ಚದಲ್ಲಿ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಸ್ವತಂತ್ರ ಬಂದು 75 ವರ್ಷಗಳಾದರೂ ಯಚ್ಚನಹಳ್ಳಿ ಮತ್ತು ಕಂಬಾಲಪಲ್ಲಿಗೆ ಸಂಪರ್ಕ ರಸ್ತೆ ಇರಲಿಲ್ಲ ಕಾಲುದಾರಿಯ ಪ್ರಯಾಣ ಇತ್ತು, ಕಂದಾಯ ಇಲಾಖೆಯಿಂದ ಸರ್ವೇ ಮಾಡಿಸಿ ರಸ್ತೆ ನಿರ್ಮಾಣಕ್ಕೆ ಬಿಜೆಪಿ ಸರ್ಕಾರದಿಂದ ಹಣಮಂಜೂರು ಮಾಡಿಸಲಾಗಿದೆ ಈ ರಸ್ತೆ ನಿರ್ಮಾಣವಾದರೆ ಈ ಭಾಗಗಳಲ್ಲಿನ ರೈತರ…

Read More

ನೂತನವಾಗಿ ಕಾಣಿಪಾಕಂ ದೇವಾಲಯ ನಿರ್ಮಾಣಶ್ರೀ ಕಾಳಹಸ್ತಿ ದೇವಸ್ಥಾನದ ಶೈಲಿಯಲ್ಲಿ ನಿರ್ಮಾಣಪಲ್ಲವ ಹಾಗು ವಿಜಯನಗರ ವಾಸ್ತುಶಿಲ್ಪದ ಪರಿಕಲ್ಪನೆಆಂಧ್ರ ಮೂಲದ ಎನ್ ಆರ್ ಐ ಗಳು ದಾನಿಗಳು ನ್ಯೂಜ್ ಡೆಸ್ಕ್:ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುರಾತನವಾದ ಐತಿಹಾಸಿಕ ಪುಣ್ಯಕ್ಷೇತ್ರವಾದ ಕಾಣಿಪಾಕಂ ಸ್ವಯಂ ಉದ್ಭವ ಶ್ರೀ ವರಸಿದ್ದಿ ವಿನಾಯಕ ಸ್ವಾಮಿ ದೇವಸ್ಥಾನವನ್ನು ಭಕ್ತರಿಗೆ ಅನಕೂಲವಾಗುವ ರಿತಿಯಲ್ಲಿ ನೂತನವಾಗಿ ಪಲ್ಲವ ಹಾಗು ವಿಜಯನಗರ ವಾಸ್ತುಶಿಲ್ಪದಂತೆ ಶ್ರೀ ಕಾಳಹಸ್ತಿ ದೇವಸ್ಥಾನದ ಶೈಲಿಯಲ್ಲಿ ಪುನರ್ನಿರ್ಮಾಣಮಾಡಲಾಗಿದ್ದು ಈ ತಿಂಗಳ 21 ದಂದು ಭಾನುವಾರ ನೂತನ ದೇವಾಲಯ ಲೋಕಾರ್ಪಣೆಯಾಗಲಿದೆ. ತೀರಾ ಇಕ್ಕಾಟ್ಟಾದ ಮುಖಮಂಟಪದ ಮೂಲಕ ಭಕ್ತರು ಗರ್ಬಗುಡಿಯ ಬಳಿ ಹೋಗಿ ದರ್ಶನ ಪಡೆಯುತ್ತಿದ್ದು ಇದರಿಂದ ಭಕ್ತರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದರು ಈ ಹಿನ್ನಲೆಯಲ್ಲಿ ಭಕ್ತರ ಅನಕೂಲಕ್ಕಾಗಿ ಅಮೇರಿಕಾದ ಬೊಸ್ಟನ್ ನಲ್ಲಿ ನೆಲೆಸಿರುವ ಗಾಯಿತ್ರಿದೇವಿ ಮತ್ತು ಐಕರವಿ ಹಾಗು ಜಾನಕಿ ಮತ್ತು ಗುತ್ತಿಕೊಂಡಶ್ರೀನಿವಾಸ್ ದಂಪತಿಗಳು ಇವರು ಮೂಲ ಆಂಧ್ರದವರು ದೇವಸ್ಥಾನದ ಪುನರ್ ನಿರ್ಮಾಣದ ದಾನಿಗಳಾಗಿ ಸುಮಾರು 10 ಕೋಟಿಗೂ ಹೆಚ್ಚು ದೇಣಿಗೆ ನೀಡುವ ಮೂಲಕ ಮೂಶಿಕ…

Read More

ಶ್ರೀನಿವಾಸಪುರ: ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಅವರ ಇನೋವಾ ಕಾರು ಬೈಕ್ ಸವಾರನಿಕೆ ಡಿಕ್ಕಿ ಹೋಡೆದ ಪರಿಣಾಮ ವ್ಯಕ್ತಿಯೋಬ್ಬ ಸಾವನಪ್ಪಿರುವ ಘಟನೆ ತಾಲೂಕಿನ ಚಿಂತಾಮಣಿ ರಸ್ತೆಯ ಪಾತಪಲ್ಲಿ ಬಳಿ ಬಳಿ ನಡೆದಿರುತ್ತದೆ.ಮೃತ ವ್ಯಕ್ತಿಯನ್ನು ಪಾತಪಲ್ಲಿ ಗ್ರಾಮದ ಕಾಂಗ್ರೆಸ್ ಮುಖಂಡರಾಗಿದ್ದ ದಿವಂಗತ ಗುಡಿರೆಡ್ದಿ ಸಹೋದರ ರಾಜಣ್ಣ(62)ಎಂದು ಗುರುತಿಸಲಾಗಿದೆ ಮೃತ ವ್ಯಕ್ತಿ ದ್ವಿಚಕ್ರ ವಾಹನದಲ್ಲಿ ರಸ್ತೆ ದಾಟುತ್ತಿರುವಾಗ ಅತಿ ವೇಗದಿಂದ ಬಂದಂತ ಇನೋವಾಕಾರು ಡಿಕ್ಕಿಯಾಗಿದೆ ಈ ಸಂದರ್ಭದಲ್ಲಿ ಇನೊವಾಕಾರಿನಲ್ಲಿ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಇದ್ದು ಅವರು ಶ್ರೀನಿವಾಸಪುರದಿಂದ ಚಿಂತಾಮಣಿಗೆ ತೆರಳುತ್ತಿದ್ದಾಗ ಅಪಘಾತ ವಾಗಿದ್ದು ಈ ಬಗ್ಗೆ ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲೆ ಪ್ರಕರಣ ದಾಖಲಾಗಿದೆ.ಅಪಘಾತ ವಾಗುತ್ತಿದ್ದಂತೆ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಕಾರಿನಲ್ಲಿದ್ದ ಡಾ.ವೇಣುಗೋಪಾಲ್ ಅಲ್ಲೆ ಇದ್ದು ಮೃತ ವ್ಯಕ್ತಿಯ ಕುಟುಂಬಕ್ಕೆ ಸ್ವಾಂತಾನ ಹೇಳಿ ಪಂಚನಾಮೆ ಅಗುವ ವರಿಗೂ ಪಾತಪಲ್ಲಿಯಲ್ಲೆ ಉಳಿದಿದ್ದರು. ರಾಷ್ಟ್ರೀಹೆದ್ದಾರಿ ಇಲಾಖೆ ನಿರ್ಲಕ್ಷ್ಯ!ಶ್ರೀನಿವಾಸಪುರ-ಚಿಂತಾಮಣಿ ನಡುವಿನ ರಸ್ತೆ ರಾಷ್ಟ್ರೀಯ ಹೆದ್ದಾರಿ 234ರಲ್ಲಿ ಇತ್ತಿಚಿಗೆ…

Read More

ಪತ್ರಿಕೊದ್ಯದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿ ಇಳಿ ವಯಸ್ಸಿನಲ್ಲಿರುವ ಹಿರಿಯ ಚೆತನಗಳನ್ನು ಅವರ ಮನೆಯಂಗಳಗಳದಲ್ಲಿ ಅವರನ್ನು ಗೌರವಿಸುವಂತ ಆಂದೋಲನಕ್ಕೆ KUWJಮುಂದಾಗಿದ್ದು ಜಿಲ್ಲಾ ಮಟ್ಟದಲ್ಲಿ ತಾಲೂಕುಮಟ್ಟದಲ್ಲಿ 75 ವರ್ಷಗಳನ್ನು ಪೊರೈಸಿರುವಂತವರನ್ನು ಗುರುತಿಸಿ ಗೌರವಿಸಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದ್ದಾರೆ ನ್ಯೂಜ್ ಡೆಸ್ಕ್: ಮುದ್ರಣ ಮಾಧ್ಯಮ ಅತ್ಯಂತ ಶ್ರೇಷ್ಠವಾದದ್ದು. ಅದರ ಮೌಲ್ಯ ಕುಸಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಇಂದಿನ ಪೀಳಿಗೆಯ ಪತ್ರಕರ್ತರ ಮೇಲಿದೆ ಎಂದು ಹಿರಿಯ ಪತ್ರಕರ್ತರ ಹಾಗು ಜನಪ್ರಗತಿ’ಯ ಸಂಪಾದಕರಾಗಿದ್ದ ಕಲ್ಲೆ ಶಿವೋತ್ತಮರಾವ್ ಅವರು ಅಭಿಪ್ರಾಯಪಟ್ಟರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಸ್ವಾತಂತ್ರ್ಯೋತ್ಸವದ ಅಮೃತೋತ್ಸವದ ಅಂಗವಾಗಿ ಪತ್ರಿಕೋದ್ಯಮದ ಹಿರಿಯರ ಮನೆಯ ಅಂಗಳದಲ್ಲೇ ಅವರನ್ನು ಗೌರವಿಸುವಂತ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಸರಣಿಯ ಮೊದಲ ಕಾರ್ಯಕ್ರಮವಾಗಿ ಕಲ್ಲೆ ಶಿವೋತ್ತಮ ರಾವ್ ಅವರನ್ನು ಬೆಂಗಳೂರಿನ ಅವರ ಯಲಹಂಕ ನಿವಾಸದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಕಲ್ಲೆ ಶಿವೋತ್ತಮ ರಾವ್ ಮುದ್ರಣವಾಗುವುದು ಒಂದು ದಾಖಲೆಯಿದ್ದಂತೆ. ಹಾಗಾಗಿ ಓದುಗರಿಗೆ ಅದರ ಮೇಲೆ ನಂಬಿಕೆ…

Read More

ಚಿಂತಾಮಣಿಯ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಮತ್ತು ಶ್ರೀನಿವಾಸಪುರದ ಮಾಜಿ ಶಾಸಕ ವೆಂಕಟಶಿವಾರೆಡ್ದಿ ಮದ್ಯೆ ಟಾಕ್ ಫೈಟ್ (ಮಾತಿನ ಯುದ್ದ) ನಡೆದಿದೆ ಇಬ್ಬರು ಒಬ್ಬರನ್ನೊಬ್ಬರು ವೈಯುಕ್ತಿಕವಾಗಿ ದೂಷಿಸಿಕೊಂಡಿದ್ದಾರೆ ಇಬ್ಬರ ನಡುವೆ ಎರಡು ದಶಕದ ವಯಸ್ಸಿನ ಅಂತರ ಇದ್ದರು ಒಬ್ಬರಿಗೊಬ್ಬರು ಯಾರಿಗೆ ಯಾರು ಕಡಿಮೆ ಇಲ್ಲ ಎಂಬಂತೆ ಪರಸ್ಪರವಾಗಿ ಬಹಿರಂಗವಾಗಿ ವಿರುದ್ದ ಹೇಳಿಕೊಟ್ಟು,ಕೊಂಡಿದ್ದಾರೆ! ಶ್ರೀನಿವಾಸಪುರ:ಶ್ರೀನಿವಾಸಪುರದಲ್ಲಿ ಇತ್ತಿಚಿಗೆ ನಡೆದ ಕಾಂಗ್ರೆಸ್ ಪಕ್ಷದ ಸ್ವಾತಂತ್ರ್ಯ ಅಮೃತಮಹೋತ್ಸವದ ಕಾರ್ಯಕ್ರಮದಲ್ಲಿ ಶಾಸಕ ರಮೇಶ್ ಕುಮಾರ್ ಪರವಾಗಿ ಕಾರ್ಯಕ್ರಮದಲ್ಲಿ ಬೆಂಬಲಿಸಿ ಭಾಗವಹಿಸಿದ್ದ ಚಿಂತಾಮಣಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಕಾರ್ಯಕ್ರಮದ ಸಭಾವೇದಿಕೆಯಲ್ಲಿ ಮಾತನಾಡಿ ರಮೇಶ್ ಕುಮಾರ್ ಅವರನ್ನು ಹೋಗಳಿ ಮೆಚ್ಚಿಸುವ ಆವೇಶದಲ್ಲಿ ಶ್ರೀನಿವಾಸಪುರದ ಮಾಜಿ ಶಾಸಕ ವೆಂಕಟಶಿವಾರೆಡ್ಡಿಯನ್ನು ತೀವ್ರವಾಗಿ ಚುಚ್ಚಿ ಮಾತನಾಡಿದ್ದು ಎಲ್ಲಡೆ ವೈರಲ್ ಆಗಿದೆ ಕಳೆದ ನಾಲ್ಕು ದಶಕಗಳಿಂದ ಎರಡು ಟಗರುಗಳ ನಡುವೆ ಫೈಟ್ ನಡಿತಿತ್ತು ಈಗ ಅದ್ಯಾವುದೋ ಟಗರಿಗೆ ವಯಸ್ಸಾಗಿದೆ ಗೌವನಿಪಲ್ಲಿ ಸಂತೆಯಲ್ಲೂ ಅದನ್ನು ಕೊಳ್ಳೊರಿಲ್ಲದೆ ಆಗೋಗಿದೆ ವಯಸ್ಸಾಗಿರುವ ಟಗರಿಗೆ ಒಡಾಡಲು ಸಾದ್ಯವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ ಅವರು ತೆಲಗನಲ್ಲಿ ಮಾತನಾಡಿ…

Read More

ಲಿಮ್ಕಾ ದಾಖಲೆ ಮಾಡುವಷ್ಟು ದೊಡ್ಡದಾದ ರಾಷ್ಟ್ರಧ್ವಜಕೋಲಾರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಹಾರಟಪ್ರತಿ ತಾಲೂಕಿನಲ್ಲೂ ಬೈಕ್ ರ್‍ಯಾಲಿದೇವರಾಯಸಮುದ್ರ ಬೆಟ್ಟಕ್ಕೆ ಲೇಸರ್ ಲೈಟ್ ಕೋಲಾರ: ಕೋಲಾರ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ದೇಶದಲ್ಲಿಯೇ ಅತಿ ದೊಡ್ಡ ವಿಸ್ತಿರ್ಣದ ತ್ರಿವರ್ಣ ಧ್ವಜವನ್ನು ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಅಂಗವಾಗಿ ಹಾರಿಸುವ ಮೂಲಕ ಲಿಮ್ಕಾ ದಾಖಲೆ ನಿರ್ಮಿಸಲಾಗುವುದು ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರುನಗರದ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಆಗಿರುವ ಹಿನ್ನಲೆಯಲ್ಲಿ ಅದ್ದೂರಿಯಿಂದ ಆಗಸ್ಟ್ 15 ಸ್ವಾತಂತ್ರ್ಯೊತ್ಸವ ಆಚರಣೆಗೆ ಸಿದ್ಧತೆ ನಡೆಸಲಾಗಿದೆ ಕ್ರೀಡಾಂಗಣದಲ್ಲಿ ಶಾಲಾ ಮಕ್ಕಳು ಸೇರಿದಂತೆ 2 ಸಾವಿರ ಜನರಿಂದ ಈ ಬೃಹತ್ ಧ್ವಜ ಹಾರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ನರಸಾಪುರ ಕೈಗಾರಿಕಾ ಕೇಂದ್ರದಲ್ಲಿ 200 ×600 ಅಡಿ ವಿಸ್ತೀರ್ಣದ ಧ್ವಜ ತಯಾರಿಸಲಾಗುತ್ತಿದ್ದು ಧ್ವಜ 1.2 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದ್ದು, 12,800 ಮೀಟರ್ ಬಟ್ಟೆ ಬಳಸಲಾಗಿದೆ ಇಡೀ ಕ್ರೀಡಾಂಗಣದಗಲಕ್ಕೆ ಧ್ವಜ ಇರುತ್ತದೆ ಎಂದರು.ಕ್ರೀಡಾಂಗಣಕ್ಕೆ ಬರುವ 15 ಸಾವಿರ ಶಾಲಾ ಮಕ್ಕಳಿಗೆ ತ್ರಿವರ್ಣ…

Read More

ಶ್ರೀನಿವಾಸಪುರ:ಸಣ್ಣ ಸಣ್ಣ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರಗಳು ಕಾಳಜಿ ವಹಿಸಿ ಅಂತಹ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದರೆ ಸಮಾಜದಲ್ಲಿ ಮೂಲಭೂತವಾಗಿ ಕಡೆಗಣಿಸಲ್ಪಟ್ಟಿರುವ ಸಣ್ಣ ಸಣ್ಣ ಸಮುದಾಯಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ ಹೇಳಿದರು.ಅವರು ಪಟ್ಟಣದ ನಗರೇಶ್ವರ ದೇವಾಯಲದಲ್ಲಿ ಆಯೋದ್ಯ ನಗರದ ಶಿವಚಾರ‍್ಯ ನಗರ್ತ ವೈಶ್ಯ ಸಂಘದ ಕೇಂದ್ರ ಸಮಿತಿಗೆ ಶ್ರೀನಿವಾಸಪುರ ಕ್ಷೇತ್ರದಿಂದ ನಿರ್ದೇಶಕರಾಗಿ ಆಯ್ಕೆಯಾಗಿರುವ ಬಿ.ಶಿವಕುಮಾರ್ ಅವರನ್ನು ಸನ್ಮಾನಿಸಿ ಮಾತನಾಡಿದರು.ಸಣ್ಣ ಪುಟ್ಟ ಸಮುದಾಯಗಳ ವೃತ್ತಿಯಾಗಿದ್ದ ಸಣ್ಣ ವ್ಯಾಪಾರ, ವೃತ್ತಿ ಕೌಶಲ್ಯದ ಬದುಕಿಗೆ ಕಾಲದ ಅಣತಿಯ ಜಾಗತಿಕರಣ ಮತ್ತು ಉದಾರಿಕರಣದ ಹೊಡೆತ ಬಿದ್ದಿದೆ ಆ ಸಮುದಾಯಗಳ ಕುಟುಂಬಗಳು ಇನ್ನಿಲ್ಲದ ಸಮಸ್ಯೆಗಳನ್ನು ಅನುಭವಿಸುತ್ತಿವೆ ಇಂತಹ ಸಮುದಾಯಗಳ ಅಭಿವೃದ್ದಿಗೆ ಸರ್ಕಾರಗಳು ವಿಶೇಷ ಕಾಳಜಿ ವಹಿಸಿ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕಾರ್ಯಕ್ರಮಗಳನ್ನು ರೂಪಿಸಬೇಕು ಈ ಬಗ್ಗೆ ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಕೊಡುವಂತ ಅಭಿವೃದ್ಧಿ ಕುರಿತಾದ ವಾಗ್ದಾನಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸುವಂತೆ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಂಘದ ಮಾಜಿ ನಿರ್ದೇಶಕ ಗೀರಿಶ್,…

Read More