ಶ್ರೀನಿವಾಸಪುರ:ಭಾರತ ದೇಶ ಬ್ರಿಟಿಷರ ದಾಸ್ಯದಿಂದ ಬಿಡುಗಡೆಯಾಗಿ ಸ್ವಾತಂತ್ರ್ಯೋತ್ಸಗೊಂಡು 75ನೇ ವರ್ಷದ ಅಮೃತಮಹೋತ್ಸವ ಆಚರಿಸುತ್ತಿರುವುದರ ಹಿನ್ನಲೆಯಲ್ಲಿ ತ್ಯಾಗ ಬಲಿದಾನದ ಸ್ವಾತಂತ್ರ್ಯ ಸಂಗ್ರಾಮದ ನೆನಪಿನಲ್ಲಿ ಸ್ವಾತಂತ್ರ್ಯ ಹೋರಾಟಗಾರನ್ನು ನೆನಪಿಸುಕೊಳ್ಳುವ ದೃಷ್ಠಿಯಿಂದ ತಾಲೂಕು ಆಡಳಿತ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕುಟುಂಬಸ್ಥರನ್ನು ಅವರಿರುವ ಸ್ಥಳಕ್ಕೆ ತೆರಳಿ ಗೌರವಿಸಿರುತ್ತಾರೆ.ತಹಶೀಲ್ದಾರ್ ಶೀರಿನಾತಾಜ್ ತಮ್ಮ ಅಧಿಕಾರಿಗಳೊಂದಿಗೆ ಶ್ರೀನಿವಾಸಪುರ ಪಟ್ಟಣದ ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ ವೆಂಕಟಪ್ಪಶೆಟ್ರ ಸೊಸೆ ಹಾಗು ಸ್ವಾತಂತ್ರ್ಯ ಹೋರಾಟಗಾರ ಹಾಗು ಪ್ರಜಾಚಳವಳಿಯ ಹೋರಾಟಗಾರ ದಿವಂಗತ ಚಂದ್ರಯ್ಯಶೆಟ್ಟಿಯವ ಧರ್ಮಪತ್ನಿ ವನಜಾಕ್ಷಮ್ಮ ಅವರನ್ನು ಅವರ ಸ್ವಗೃಹದಲ್ಲಿ ಭೇಟಿಯಾಗಿ ರಾಷ್ಟ್ರ ಧ್ವಜ ನೀಡಿ ಸನ್ಮಾನಿಸಿರುತ್ತಾರೆ. ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಶೀರಿನಾತಾಜ್ ರಾಯಲ್ಪಾಡು ಹೋಬಳಿಯಲ್ಲಿ ಅತಿ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರು ಇದ್ದು ಅವರೆಲ್ಲ ನಿಧನ ಹೊಂದಿರುವ ಹಿನ್ನಲೆಯಲ್ಲಿ ಅವರ ಪತ್ನಿಯರನ್ನು ಗೌರವಿಸಲಾಗಿದ್ದು 75ನೇ ವರ್ಷಗಳು ಕಳೆದ ಸ್ವಾತಂತ್ರ್ಯೋವಕ್ಕೆ ಈಗ ಅಮೃತಮಹೋತ್ಸ ಆಚರಣೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಎಲ್ಲರ ಕರ್ತವ್ಯ ಎಂದರು. ಈ ಸಂದರ್ಭದಲ್ಲಿ ಕಸಬಾ ರೆವಿನ್ಯೂ ಇನ್ಸೆಪೆಕ್ಟರ್ ಮುನಿರೆಡ್ಡಿ ನಾಗರಾಜ್,ವಿವೇಕ್ ಎಸ್ ಶೆಟ್ಟಿ ಮುಂತಾದವರು…
Author: admin
ಶ್ರೀನಿವಾಸಪುರ:ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುತ್ತಿರುವ ಸಾಲ ವಿತರಣೆಯ ಕಾರ್ಯಕ್ರಮದಿಂದ ರಾಜಕೀಯ ಲಾಭ ಪಡೆದುಕೊಳ್ಳಲಾಗಿತ್ತಿದೆ ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಆರೋಪಿಸಿದರು ಅವರು ಇಂದು ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಬುಧವಾರ ಶ್ರೀನಿವಾಸಪುರ ಪಟ್ಟಣದಲ್ಲಿ ಶಾಸಕ ರಮೇಶ್ ಕುಮಾರ್ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕ್ ವತಿಯಿಂದ ಕಸಬಾ ಹೋಬಳಿಯ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಮಾಡಿದ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿದ ಅವರು ಸಾಲ ವಿತರಣೆ ಮಾಡಲು ನಮ್ಮ ಅಭ್ಯಂತರ ಇಲ್ಲ ಸಾಲ ನೀಡಿ ಅದನ್ನು ರಾಜಕೀಯವಾಗಿ ಬಳಸಿಕೊಳುವುದಕ್ಕೆ ನಮ್ಮ ವಿರೋಧ ಇದೆ ಎಂದರು.ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕ್ ವತಿಯಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುತ್ತಿರುವ ಸಾಲ ಕೇಂದ್ರ ಸರ್ಕಾರದ ನಬಾರ್ಡ ಬ್ಯಾಂಕ್ ಹಣ ಅದನ್ನು ತಂದು ಸ್ವಂತ ಹಣ ಎನ್ನುವಂತೆ ನಿಯಮಾವಳಿಗಳನ್ನು ಗಾಳಿಗೆ ತೂರಿ ರಾಜಕೀಯ ಭಾಷಣ ಮಾಡಿ ಜನರಿಗೆ ಮರಳು ಮಾತುಗಳನ್ನು ಹೇಳಿ ರಾಜಕೀಯ ಲಾಭಕ್ಕೆ ಮುಂದಾಗಿರುವುದನ್ನು ಖಂಡಿಸುತ್ತೇವೆ ಎಂದರು.ಸೊಸೈಟಿಗಳಲ್ಲಿ ರಾಜಕೀಯ ಲೆಕ್ಕಾಚಾರದ ಅಕ್ರಮಗಳುತಾಲೂಕಿನ ಹಲವಾರು ಕೋ ಆಪರೇಟಿವ್…
ಶ್ರೀನಿವಾಸಪುರ: ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ಆಯಾ ಶಾಲೆಗಳ ಹಳೇಯ ವಿಧ್ಯಾರ್ಥಿಗಳು ಸಹಕಾರ ನೀಡುವ ಮೂಲಕ ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುವಂತೆ ಶ್ರೀರಂಗಪಟ್ಟಣದ ಪ್ರಥಮ ದರ್ಜೆ ಕಾಲೇಜು ಪ್ರಾದ್ಯಾಪಕ ಡಾ.ಶಿವಪ್ರಸಾದ್ ಹೇಳಿದರು ಅವರು ತಮ್ಮ ಸ್ವಗ್ರಾಮವಾದ ತಾಲೂಕಿನ ನಂಬಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಡಶಾಲೆಯಲ್ಲಿ ಓದಿದ ಹಳೇಯ ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡಿರುವಂತವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಸರ್ಕಾರಿ ಶಾಲೆಗಳನ್ನು ಉಳಸಿಕೊಳ್ಳುವಂತ ಆಂದೋಲನ ಎಲ್ಲಡೆ ಇದೆ,ಗ್ರಾಮೀಣ ಭಾಗದಲ್ಲಿ ಇದು ಪರಿಣಾಮಕಾರಿಯಾಗಿ ಜಾರಿಯಗಲು ಎಲ್ಲರ ಸಹಕಾರ ಬೇಕಿರುತ್ತದೆ ಎಂದರು.ಸನ್ಮಾನ ಸ್ವೀಕರಿಸಿದ ಚಿಂತಾಮಣಿಯ ಉಪನ್ಯಾಸಕ ಡಾ.ಮುನಿರೆಡ್ದಿ ಮಾತನಾಡಿ ಸಾಧನೆ ಸುಲಭದ ಮಾತಲ್ಲ, ಸಾಧನೆಯ ಹಾದಿಯಲ್ಲಿ ಬರುವ ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ಗುರಿ ತಲುಪುವವನೆ ನಿಜವಾದ ಸಾಧಕನಾಗುತ್ತಾನೆ ಇದು ಇತರರಿಗೆ ಪ್ರೇರಣೆ ಆಗಬೇಕು. ನಮ್ಮ ಸಾಧನೆ ಕಂಡು ಇತರರೂ ಸಂತಸ ಪಡಬೇಕು.ನಾವೂ ಸಹ ಹೀಗೆ ಸಾಧಿಸಬೇಕು ಎಂಬ ಛಲ ಅವರಲ್ಲಿ ಹುಟ್ಟಬೇಕು ಎಂದರು.ಕೋಲಾರದ ಎಸ್.ಎನ್.ಆರ್ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ಎಸ್.ವಿ.ಮಂಜುನಾಥ್…
ಶ್ರೀನಿವಾಸಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಕೃಷಿ ಕಾಯ್ದೆಗಳು ಮತ್ತು ಕೃಷಿ ಉತ್ಪನ್ನಗಳ ಮೇಲಿನ ಜಿಎಸ್ಟಿ ಹಾಗು ಜನ ಸಾಮಾನ್ಯರು ಬಳಸುವ ದಿನ ನಿತ್ಯದ ವಸ್ತುಗಳ ಮೇಲೆನ ಜಿಎಸ್ಟಿ ಹಿಂಪಡೆಯ ಬೇಕು ಎಂದು ರೈತ ಹಾಗು ಕಾರ್ಮಿಕ ಮುಖಂಡ ಪಾತಕೋಟ ನವೀನ್ ಕುಮಾರ್ ಅಗ್ರಹಿಸಿದರು.ಅವರು ಮಾತನಾಡಿ ರೈತ ವಿರೋಧಿ ಕೃಷಿ ಕಾಯ್ದೆಗಳು ಮತ್ತು ಕೃಷಿ ಉತ್ಪನ್ನಗಳ ಮೇಲಿನ ಜಿಎಸ್ಟಿ ಹಿಂಪಡೆಯಬೇಕು ಎಂದು ಉತ್ತಾಯಿಸಿ ಆಂದೋಲನ ಪ್ರಾರಂಭಿಸಿದ್ದು ಅದರಂತೆ ತಾಲ್ಲೂಕಿನ ನೆಲವಂಕಿ ಹೋಬಳಿಯ ಲಕ್ಷ್ಮೀಪುರದಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದರು.ರೈತ ವಿರೋದಿ ಆಡಳಿತ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿತಿಗಳಿಂದ ರೈತರು ಜನಸಾಮಾನ್ಯರು ನರಳುವಂತಾಗಿದೆ ಎಂದು ದೂರಿದರು ಜನಸಾಮನ್ಯರ ಅನಕೂಲಕ್ಕಾಗಿ ಯಾವುದೆ ಅಜೆಂಡ ಇಲ್ಲದೆ ಸರ್ಕಾರಗಳನ್ನು ನಡೆಸುತ್ತಿದ್ದಾರೆ ಮಿತಿಮೀರಿದ ತೆರೆಗಳನ್ನು ವಿಧಿಸುತ್ತಿರುವುದರಿಂದ ರಾಜ್ಯ ಹಾಗು ಕೇಂದ್ರ ಸರ್ಕಾರಗಳ ವಿರುದ್ದ ಜನಾಕ್ರೋಶ ವ್ಯಕ್ತವಾಗುತ್ತಿದೆ ಎಂದರು.ಮುಖಂಡ ವೀರಪ್ಪರೆಡ್ಡಿ ಮಾತನಾಡಿ ಕೇಂದ್ರ ಸರ್ಕಾರ ಕೃಷಿ ಸಾಂಪ್ರದಾಯಿಕ ಪರಿಕಲ್ಪನೆಗೆ ಕೊಳ್ಳಿ ಇಟ್ಟಿದೆ ಎಂದು ಆರೋಪಿಸಿದರು ನೆಲವಂಕಿ…
ನ್ಯೂಜ್ ಡೆಸ್ಕ್: ಸಪ್ತಸಾಗರಳಾಚಗಿನ ಅಮೆರಿಕದ ಹುಡುಗನೊಂದಿಗೆ ಆಂಧ್ರದ ಹುಡುಗಿಗೆ ಮದುವೆಯಾಗಿದೆ ಇಂತಹದೊಂದು ಕುತೂಹಲಕಾರಿ ಮದುವೆ..!ತಿರುಪತಿಯಲ್ಲಿ ನಡೆದಿದ್ದು ಆಂಧ್ರದ ಹರ್ಷವಿ ಮತ್ತು ಅಮೇರಿಕಾದ ಫ್ರಾಂಕ್ ಮದುವೆಯಾಗಿರುವ ದಂಪತಿ ಹರ್ಷವಿ ಮತ್ತು ಫ್ರಾಂಕ್ ಇಬ್ಬರೂ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವುದರಿಂದ ಪ್ರತಿದಿನ ಮಾತನಾಡಿಕೊಳ್ಳುತ್ತಿದ್ದರು. ಹೀಗೆ ಇಬ್ಬರ ಅಭಿಪ್ರಾಯಗಳು ಒಂದಾಗಿದ್ದು ಅವರು ಒಬ್ಬರನ್ನೊಬ್ಬರು ಇಷ್ಟಪಡಲು ನಿರ್ಧರಿಸಿದ್ದಾರೆ ಇನ್ನೇನಿದೆ ಲವ್ ಇನ್ ಅಮೇರಿಕಾ ಕಥೆ ಶುರುವಾಗಿದೆ, ಪ್ರೀತಿಗೆ ಜಾತಿ, ಧರ್ಮ, ಪ್ರಾದೇಶಿಕತೆ ಯಾವುದು ಬೇಕಿಲ್ಲ ಎಂದು ಎರಡು ಮನಸ್ಸುಗಳು ತಮ್ಮ ಭಾವನೆಗಳನ್ನು ಹಂಚಿಕೊಂಡು ತೊರಿಸಿದೆ.ಪ್ರೀತಿಗೆ ಪರಸ್ಪರ ನಂಬಿಕೆ ಇದ್ದರೆ ಸಾಕು ಪ್ರೇಮಾಂಕುರ ಗಟ್ಟಿಯಾಗುತ್ತದೆ ಎನ್ನುವಂತಾಗಿದೆ. ಸಾಮಾನ್ಯವಾಗಿ ಅಮೇರಿಕಾ ಹೋದ ಹುಡುಗ ವಾಪಸ್ಸಾಗುವುದಿಲ್ಲ ಅಲ್ಲೆ ಬಿಳಿ ಹೆಂಡ್ತಿನ ಕಟ್ಟಿಕೊಳ್ತಾನೆ ಎನ್ನುವ ಮಾತು ಕೆಲ ಕುಟುಂಬಗಳಲ್ಲಿ ಕೇಳಿಬರುವುದು ಸಹಜ ಆದರೆ ಇಲ್ಲಿ ಊಹೆ ಉಲ್ಟಾ ಆಗಿದೆ. ಕೆಲಸದ ನಿಮಿತ್ತ ಅಮೇರಿಕಾಕ್ಕೆ ಹೋದ ಆಂಧ್ರದ ಹುಡುಗಿ ಅಲ್ಲಿಂದ ತನ್ನ ಹೆತ್ತವರಿಗೆ ಅಳಿಯನನ್ನು ಕರೆದುಕೊಂಡು ಬಂದಿದ್ದಾಳೆ ಆರಂಬದಲ್ಲಿ ಹುಡುಗಿಯೆ ಪ್ರೇಮ ಕಥೆಗೆ ಆಕೆಯ…
ಶನಿವಾರ ತಡರಾತ್ರಿ ಜೆಎನ್‌ಆರ್ ಬಸ್ ಟ್ರ್ಯಾಕ್ಟರ್‌ಗೆ ಡಿಕ್ಕಿಬಸ್ ನಲ್ಲಿದ್ದ 20ಕ್ಕೂ ಹೆಚ್ಚು ಜನರಿಗೆ ಗಾಯ,ಇಬ್ಬರ ಸ್ಥಿತಿ ಚಿಂತಾಜನಕ ಒಬ್ಬ ಸ್ಥಳದಲ್ಲೇ ಸಾವು. ಮದನಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ಶ್ರೀನಿವಾಸಪುರ:ಕರ್ನಾಟಕ-ಆಂಧ್ರದ ಗಡಿಯ ಬೆಂಗಳೂರು-ಮದನಪಲ್ಲಿ ರಸ್ತೆಯಲ್ಲಿ ಆಂಧ್ರದ ಗಡಿಗೆ ಹತ್ತಿರ ಇರುವ ಕರ್ನಾಟಕದ ಹಕ್ಕಿಪಿಕ್ಕಿ ಕಾಲೋನಿ ಗೆಟ್ ಬಳಿಯ ಅರಣ್ಯ ಪ್ರದೇಶದ ರಾಯಲ್ಪಾಡು ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಬೆಂಗಳೂರಿನಿಂದ ಬರುತ್ತಿದ್ದ JNR 4 ಸಿಂಗಲ್ ಖಾಸಗಿ ಬಸ್ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ.ಈ ಅಪಘಾತದಲ್ಲಿ ಬಸ್ ನಲ್ಲಿದ್ದ ಸುಮಾರು 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಇಬ್ಬರು ಪರಿಸ್ಥಿತಿ ಚಿಂತಾಜನಕವಾಗಿದೆ ಒರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ, ಮೃತ ವ್ಯಕ್ತಿ ಬಿಹಾರ ಮೂಲದ ಕಾರ್ಮಿಕ ಜವಹರ್ ಮುನ್ನಿ (45) ಎಂದು ಗುರುತಿಸಲಾಗಿದೆ.ಅಪಘಾತವಾದ ಸ್ಥಳ ಆಂಧ್ರಗಡಿಗೆ ಹೊಂದಿಕೊಂಡಿರುವ ಅರಣ್ಯಪ್ರದೇಶದವಾಗಿದ್ದು ಮೊಬೈಲ್ ನೆಟ್ ವರ್ಕ ಸಿಗದೆ ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು ಹರ ಸಾಹಸ ಪಟ್ಟಿರುತ್ತಾರೆ.ಗಾಯಾಳುಗಳನ್ನು ಆಂಧ್ರದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ಆಸ್ಪತ್ರೆ…
ಶ್ರೀನಿವಾಸಪುರ:ಕೋಲಾರ-ಶ್ರೀನಿವಾಸಪುರ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ಸಾಗಿಸುತಿದ್ದ 21 ಕೆಜಿ ಗಾಂಜಾವನ್ನು ಶ್ರೀನಿವಾಸಪುರ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡು ಕೋಲಾರ ಮೂಲದ ವ್ಯಕ್ತಿಯನ್ನು ಬಂಧಿಸಿರುತ್ತಾರೆ.ಶ್ರೀನಿವಾಸಪುರ ತಾಲೂಕಿನ ವಳಗೆರನಹಳ್ಳಿ ಬಳಿ ಗಾಂಜಾ ವಶಕ್ಕೆ ಪಡೆದುಕೊಂಡಿರುವ ಪೋಲಿಸರು ಗಾಂಜಾ ಸಾಗಿಸುತ್ತಿದ್ದ ನೂರ್ ಪಾಷಾ ನನ್ನು ಬಂಧಿಸಿರುತ್ತಾರೆ. ಆರೋಪಿಯಿಂದ 21 ಕೆಜಿ ತೂಕದ, 10 ಲಕ್ಷ ಬೆಲೆ ಬಾಳುವ ಗಾಂಜಾ, ಕೃತ್ಯಕ್ಕೆ ಬಳಸಿದ ಸ್ಕೂಟರ್ ಅನ್ನು ವಶಕ್ಕೆ ತಗೆದುಕೊಂಡಿದ್ದಾರೆ.ರೇಷ್ಮೆ ವ್ಯಾಪಾರಿಯ ಗಾಂಜ ದಂದೆ?ಆರೋಪಿ ನೂರ್ ಪಾಷಾ ಕೋಲಾರ ನಗರದ ಟವರ್ ನಿವಾಸಿಯಾಗಿರುವ ಮೂಲತಃ ರೇಷ್ಮೆ ಕಾರ್ಮಿಕನಾಗಿದ್ದು ಗಾಂಜವನ್ನು ಆಂಧ್ರದ ವಿಶಾಕಪಟ್ಟಣಂ ನಿಂದ ತಂದು ಇಲ್ಲಿ ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ.ಕೋಲಾರ ಜಿಲ್ಲಾ ಎಸ್.ಪಿ ದೇವರಾಜ್ ಮಾರ್ಗದರ್ಶನದಲ್ಲಿ ಮುಳಬಾಗಿಲು ಪ್ರಭಾರೆ ಡಿ.ವೈ.ಎಸ್.ಪಿ ಮುರಳಿಧರ್ ಸೂಚನೆಯಂತೆಶ್ರೀನಿವಾಸಪುರ ಪೊಲೀಸ್ ಠಾಣೆ ಇನ್ಸೆಪೆಕ್ಟರ್ ನಾರಯಣಸ್ವಾಮಿ ನೇತೃತ್ವದಲ್ಲಿ ದಾಳಿ ನಡೆದಿದ್ದು ದಾಳಿಯಲ್ಲಿ ಶ್ರೀನಿವಾಸಪುರ ಅಪರಾಧ ವಿಭಾಗದ ಎ.ಎಸ್.ಐ ಅಮೀದ್ ಖಾನ್, ಸಿಬ್ಬಂದಿ ಮಂಜುನಾಥ್,ಸುರೇಶ್, ವೆಂಕಟಾಚಲಪತಿ, ರಾಮಚಂದ್ರ, ಷಫಿಉಲ್ಲಾ,ಸಂದೀಪ್,ರಿಜ್ವಾನ್,ಸುಬಾನ್ ಮುಂತಾದವರು ಪಾಲ್ಗೋಂಡಿದ್ದರು.ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ…
ಶ್ರೀನಿವಾಸಪುರ: ಸಂಪೂರ್ಣವಾಗಿ ಎಲೆಕ್ಟ್ರಾನಿಕ್ಸ್ ಗೃಹೋಪಯೋಗಿ ವಸ್ತುಗಳು, ಮೊಬೈಲ್ಸ್, ಲ್ಯಾಪ್ ಟಾಪ್ ಮತ್ತು ಸೋಪಾ ಸೇರಿದಂತೆ ಫರ್ನಿಚರ್ ಶೋರೂಂ ಶ್ರೀನಿವಾಸಪುರ ಪಟ್ಟಣದಲ್ಲಿ ಪ್ರಾರಂಭವಾಗಿದೆ.ಎಲ್ಲವೂ ಒಂದೇ ಸೂರಿನಡಿಯಲ್ಲಿ ಸಿಗುವಂತೆ, “ಶುಭಂ ದಿ ಎಲೆಕ್ಟ್ರಾನಿಕ್ ಶಾಪ್” ಎಂಬ ಸಂಸ್ಥೆ ಸ್ಥಳೀಯ ಸಾಯಿ ರಜನಿ ಮಾರ್ಕೇಟಿಂಗ್ ಪಾಲುದಾರಿಕೆಯೊಂದಿಗೆ ಬೃಹದಾಕಾರವಾದ ಎಲೆಕ್ಟ್ರಾನಿಕ್ ಅಂಗಡಿ ತೆರೆದಿದೆ. ಇಂದು ಅಧಿಕೃತ ಪೂಜೆಯೊಂದಿಗೆ ಶ್ರೀನಿವಾಸಪುರ ಪಟ್ಟಣದ ಮಹತ್ಮಾಗಾಂಧಿ ರಸ್ತೆಯ ಬಾಲಕೀಯರ ಕಾಲೇಜು ಮುಂಬಾಗದಲ್ಲಿ ಪ್ರಾರಂಭವಾಗಿದ್ದು, ಶ್ರೀನಿವಾಸಪುರದ ಇತಿಹಾಸದಲ್ಲೇ ಅತಿ ದೊಡ್ಡದಾದ ಎಲೆಕ್ಟ್ರಾನಿಕ್ ಅಂಗಡಿ ಎಂದು ಹೇಳುತ್ತಾರೆ ಸಾಯಿ ರಜನಿ ಮಾರ್ಕೇಟಿಂಗ್ ಮಾಲಿಕ ಬದರಿನಾಥ್, ದಿಎಲೆಕ್ಟ್ರಾನಿಕ್” ಶಾಪ್ ಸಂಸ್ಥೆ ಕಳೆದ 28 ವರ್ಷಗಳಿಂದ ತನ್ನದೆ ಆದ ಬ್ರಾಂಡ್ ಇಮೇಜ್ ಇಟ್ಟುಕೊಂಡು ಗ್ರಾಹಕರಿಗೆ ಗುಣಮಟ್ಟದ ಎಲೆಕ್ಟ್ರಾನಿಕ್ಸ್ ಗೃಹೋಪಯೋಗಿ ವಸ್ತುಗಳು ಸೇರಿದಂತೆ ಮೊಬೈಲ್ಸ್, ಲ್ಯಾಪ್ ಟಾಪ್ ಮತ್ತು ಸೋಪಾ ಸೇರಿದಂತೆ ಫರ್ನಿಚರ್ ಗಳನ್ನು ನೀಡುತ್ತ ಭಾರತದ ಅತಿ ದೊಡ್ಡ ಎಲೆಕ್ಟ್ರಾನಿಕ್ ಗ್ರಾಹಕ ವಿತರಣ ಜಾಲ ಹೊಂದಿರುವ ಸಂಸ್ಥೆ ಶ್ರೀನಿವಾಸಪುರದಲ್ಲಿ ಸಾಯಿ ರಜನಿ ಮಾರ್ಕೇಟಿಂಗ್ ಸಹಯೋಗದೊಂದೊಗೆ ಸಂಪೂರ್ಣವಾದ ಎಲೆಕ್ಟ್ರಾನಿಕ್…
ನ್ಯೂಜ್ ಡೆಸ್ಕ್:ಎರಡು ದಿನಗಳ ಹಿಂದೆ ಮಧ್ಯರಾತ್ರಿ ಸಮಯದಲ್ಲಿ ತಿರುಮಲ ಬೆಟ್ಟದಲ್ಲಿ ಕರಡಿಯೊಂದು ಅಬ್ಬರಿಸಿದೆ. ಶ್ರೀ ವೆಂಕಟೇಶ್ವರ ಮ್ಯೂಸಿಯಂ ಹಿಂಭಾಗದ ಕಾಡಿನಿಂದ ಬಂದ ಕರಡಿ ಜಿಂದಾಲ್ ಅತಿಥಿ ಗೃಹದ ಬಳಿ ಒಡಾಡಿರುವುದನ್ನು ಕಂಡ ಅತಿಥಿ ಗೃಹದ ಸಿಬ್ಬಂದಿ ಭಯದಿಂದ ಒಳಗೆ ಓಡಿಹೋಗಿದ್ದಾರೆ ನಂತರ ಬಾರಿ ಶಬ್ದಗಳನ್ನು ಮಾಡಿದ ಹಿನ್ನಲೆಯಲ್ಲಿ ಕರಡಿ ಅರಣ್ಯದ ಕಡೆ ಓಡಿ ಹೋಗಿದಿಯಂತೆ, ಕರೋನಾ ಲಾಕ್ಡೌನ್ ಸಂದರ್ಭದಲ್ಲಿ ಪ್ರಾರಂಭವಾದ ತಿರುಮಲ ಬೆಟ್ಟದಲ್ಲಿ ಹಾಗು ಮೆಟ್ಟಿಲು ಮಾರ್ಗವಾಗಿ ಹತ್ತಿಕೊಂಡು ಹೋಗುವ ದಾರಿಯಲ್ಲಿ ಇತ್ತಿಚಿಗೆ ಕಾಡು ಪ್ರಾಣಿಗಳು ಹಾಗು ಮೃಗಗಳು ಜನರ ಕಣ್ಣಿಗೆ ಕಾಣಿಸುವುದು ಶುರುವಾಗಿದ್ದೇ ಶುರುವಾಗಿದ್ದು ಇತ್ತಿಚಿಗೆ ಸಾಮನ್ಯವಾಗುತ್ತಿದೆ, ತೀರಾ ಇತ್ತಿಚಿಗೆ ಕಾಲು ದಾರಿಯಲ್ಲಿ ಬಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡು ನಡೆದು ಹೋಗುತ್ತಿದ್ದ ಬಕ್ತರನ್ನು ಅತಂಕಕ್ಕೆ ಈಡುಮಾಡಿತ್ತು.ಆಂಧ್ರ-ತಮಿಳುನಾಡು ಗಡಿಯಲ್ಲಿ ಅನೆ ದಾಳಿ ಒರ್ವ ಸಾವುತಮಿಳುನಾಡು-ಆಂಧ್ರ ರಾಜ್ಯಗಳ ಗಡಿ ಭಾಗದ ಓಎನ್ ಕೊತ್ತೂರ್ ಬಳಿ ಆನೆ ದಾಳಿಗೆ ತಮಿಳುನಾಡಿನ ನಿವಾಸಿ ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡಿದ್ದಾನೆ. ಕರ್ನಾಟಕದ ಗಡಿಗೂ ಸಮೀವೆ ಇರುವ ತಮಿಳುನಾಡಿನ ವೇಪನಪಲ್ಲೆ…
ಶ್ರೀನಿವಾಸಪುರ: ತಾಲೂಕಿನ ರೋಣೂರು ಕ್ರಾಸನಲ್ಲಿರುವ ಖ್ಯಾತ ಶಾಲೆ ವಿಷನ್ ಇಂಡಿಯಾ ಪಬ್ಲೀಕ್ ಶಾಲೆಯಲ್ಲಿ ಸೆಂಟ್ರಲ್ ಬೋರ್ಡ ಆಫ್ ಸೆಕೆಂಡರಿ ಎಡುಕೇಷನ್ ಸಂಸ್ಥ್ತೆ(ಸಿಬಿಎಸ್.ಸಿ) ಯಲ್ಲಿ ನೊಂದಾಯಿತ ಸಂಸ್ಥೆಯಾಗಿದ್ದು 2021-2022 ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಧಾನೆ ಮಾಡಿರುವುದಾಗಿ ಶಾಲೆಯ ಕಾರ್ಯದರ್ಶಿ ಡಾ.ಕವಿತಾ ತಿಳಿಸಿದರು. ಅವರು ತಮ್ಮ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ 10 ನೇತರಗತಿ ಸಿ.ಬಿ.ಎಸ್.ಸಿ ವಿದ್ಯಾರ್ಥಿಗಳು ಶೇ%100 ಪಲಿತಾಂಶ ಸಾಧಿಸಿ ಶಾಲೆಗೆ ಉತ್ತಮ ಹೆಸರು ತಂದಿರುತ್ತಾರೆ ಎಂದು ತಿಳಿಸಿದರು. ಪರಿಕ್ಷೇಗೆ ಕುಳತಿದ್ದ 31 ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀðಣರಾಗಿರುತ್ತಾರೆ ರಕ್ಷಿತಾ ಎಂಬ ವಿದ್ಯಾರ್ಥಿ 500 ಕ್ಕೆ 486 ಅಂಕ ಗಳಿಸಿ ತಾಲೂಕಿಗೆ ಪ್ರಥಮ ಮತ್ತು ಕೋಲಾರ ಜಿಲ್ಲೆಗೆ ದ್ವೀತಿಯ ಸ್ಥಾನ ಗಳಿಸಿರುತ್ತಾಳೆ ಉಳಿದಂತೆ 8 ವಿದ್ಯಾರ್ಥಿಗಳು ಅತ್ಯನುತ್ತ ಶ್ರೇಣಿಯಲ್ಲಿ ಪಾಸಾಗಿದ್ದರೆ ಇನ್ನು 8 ವಿದ್ಯಾರ್ಥಿಗಳು ಉನ್ನತ ಮತ್ತು 12 ವಿದ್ಯಾರ್ಥಿಗಳು ಪ್ರಥಮದರ್ಜೆ ಹಾಗು ಮೂವರು ವಿದ್ಯಾರ್ಥಿಗಳು ದ್ವೀತಿದರ್ಜೆಯಲ್ಲಿ ಪಾಸಾಗಿದ್ದು ವಿದ್ಯಾರ್ಥಿಗಳ ಸಾಧನೆ ಇತರೆ ವಿಧ್ಯಾರ್ಥಿಗಳಿಗೆ ಆದರ್ಶವಾದರೆ ಪಾಠ ಮಾಡಿದ…