ನ್ಯೂಜ್ ಡೆಸ್ಕ್: ನಟಸಿಂಹ ನಂದಮೂರಿ ಬಾಲಕೃಷ್ಣ ತಮ್ಮ ಅಭಿಮಾನಿಗಳ ವಿಚಾರದಲ್ಲಿ ವಿಶೇಷ ಆಪ್ಯಾಯತೆ ಅನುಕಂಪ ತೋರಿಸುವುದರಲ್ಲಿ ಅವರಿಗೆ ಅವರೇ ಸಾಠಿ ಎನ್ನುತ್ತಾರೆ ಅಭಿಮಾನಿಗಳು ಅವರು ಅಭಿಮಾನಿಗಳನ್ನು ಗದರುತ್ತಾರೆ ಹಾಗೆ ಆಪ್ಯಾಯತೆಯಿಂದ ನಡೆಸಿಕೊಳ್ಳುತ್ತಾರೆ ಎಂದು ಬಾಲಕೃಷ್ಣ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ನಟಸಿಂಹಂ ನಂದಮೂರಿ ಬಾಲಯ್ಯಬಾಬು ಎಂದು ಅಭಿಮಾನದಿಂದ ಅಭಿಮಾನಿಗಳಿಂದ ಕರೆಸಿಕೊಳ್ಳುವ ಬಾಲಕೃಷ್ಣ ಇತ್ತೀಚೆಗೆ ಬಾಬುಗೆ ಕೊರೊನಾ ಸೋಂಕು ತಗುಲಿದ್ದು, ಚಿತ್ರದ ಶೂಟಿಂಗ್‌ಗೆ ಬ್ರೇಕ್ ಸಿಕ್ಕಿದೆ. ಆದರೆ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆದಿದ್ದ ಕೊರೊನಾದಿಂದ ಚೇತರಿಸಿಕೊಂಡು ಮತ್ತೆ ಶೂಟಿಂಗ್‌ಗೆ ಬಿಝಿಯಾಗಿದ್ದಾರೆ.ಆಂಧ್ರದ ರಾಯಲಸೀಮಾ ಪ್ರದೇಶ ಕರ್ನೂಲ್ ನಗರದಲ್ಲಿ ಯುವ ನಿರ್ದೇಶಕ ಗೋಪಿಚಂದ್ ಮಲಿನೇನಿ ನಿರ್ದೇಶನದಲ್ಲಿ ಇನ್ನೂ ಹೆಸರಿಡದ “NBK 107” ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಬಾಲಯ್ಯ ರಾಯಲಸೀಮಾ ಫ್ಯಾಕ್ಷನ್ ಹಿನ್ನಲೆಯಲ್ಲಿ ಸಾಗುವ ಕಥೆ ಆಧರಿಸಿದ ಸಿನಿಮಾ ಸನ್ನಿವೇಶಗಳನ್ನು ರಾಯಲಸೀಮಾ ಪ್ರದೇಶಗಳಲ್ಲಿ ಶೂಟಿಂಗ್ ಮಾಡಲಾಗುತ್ತಿದೆ ಕರ್ನೂಲ್ ನಗರದಲ್ಲಿ ಪ್ರಖ್ಯಾತಿ ಹೋಂದಿರುವ ಕೊಂಡರೆಡ್ಡಿ ಕೋಟೆ, ಪ್ರದೇಶ ಮೌರ್ಯ ಹೋಟೆಲ್ ಆಲಂಪುರ.. ಯಾಗಂಟಿ.. ಕೊಮ್ಮಲಚೆರುವು, ಪುಡಿಚರ್ಲ.. ಓರ್ವಕಲ್ಲು..…
Author: admin
ಶ್ರೀನಿವಾಸಪುರ: ಆಯೋದ್ಯ ನಗರದ ಶಿವಾಚರ‍್ಯ ನಗರ್ತ ವೈಶ್ಯ ಸಂಘದ 2022-25 ನೇ ಸಾಲಿನ ಆಡಳಿತ ಮಂಡಳಿ ಕೇಂದ್ರ ಸ್ಥಾನದ ನಿರ್ದೇಶಕರ ಚುನಾವಣೆಯಲ್ಲಿ ಶ್ರೀನಿವಾಸಪುರ ಕ್ಷೇತ್ರದಿಂದ ಬಿ.ಶಿವಕುಮಾರ್ ಅಲಿಯಾಸ್ ಕಪಾಲಿಶಿವು ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ.ಚುನಾಯಿತ ನಿರ್ದೇಶಕ ಶಿವಕುಮಾರ್ ಮಾತನಾಡಿ ನನ್ನ ಗೆಲವಿಗೆ ಶ್ರಮಿಸಿದ ನಮ್ಮ ಸಮುದಾಯದ ಹಿರಿಯರು ಮಾತೆಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ ಅವರು ಸಮುದಾಯದ ಬಹುತೇಕ ಕುಟುಂಬಗಳು ವ್ಯಾಪಾರದಿಂದಲೇ ಜೀವನ ನಡೆಸುವರಾಗಿದ್ದು ಅವರ ಅಭಿವೃದ್ದಿಗೆ ಮತ್ತು ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವುದಾಗಿ ಹೇಳಿದರು. ಮಹಿಳಾ ಸಬಲೀಕರಣಕ್ಕಾಗಿ ಸಮಾಜದ ಕೇಂದ್ರ ಸಂಘದಿಂದ ಸಿಗುವಂತ ಸೌಲ್ಯಭಗಳನ್ನು ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಸೌಲಭ್ಯಗಳನ್ನು ಸಕಾಲದಲ್ಲಿ ಸಿಗುವಂತೆ ಶ್ರಮಿಸುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಸಂಘದ ಮಾಜಿ ನಿರ್ದೇಶಕ ಗೀರಿಶ್, ಮುಖಂಡರಾದ ಕಪಾಲಿಮೋಹನ್, ಬೆಂಗಳೂರುಮುರಳಿಕೃಷ್ಣ, ರಾಜಶೇಖರ್,ಕಪಾಲಿಮಂಜು,ಅಡಿಕೆ ಹರೀಶ್,ನವೀನ್,ಅನಿಲ್ ಕುಮಾರ್,ರಾಮಲಿಂಗಪ್ಪ,ಮಂಜುನಾಥ್, ನಗರ್ತ ಮಹಿಳಾ ಸಂಘದ ಮುಖಂಡರಾದ ಪುಷ್ಪಮ್ಮ,ಭಾರತಿ,ದೇವಿಕಾ, ಚಂದ್ರಕಲಾ,ಅಮುದಾ ಮುಂತಾದವರು ಇದ್ದರು.
ಶ್ರೀನಿವಾಸಪುರ:ಪಂಚಾಯಿತಿ ವ್ಯಾಪ್ತಿಯ ನಿವೇಶನಕ್ಕೆ ಸಂಬಂದಪಟ್ಟಂತೆ ಇ-ಖಾತೆ ಮಾಡಿಕೊಡಲು ಗ್ರಾಮಸ್ಥನಿಂದ ಲಂಚ ಪಡೆಯುತ್ತಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(PDO) ಎಸಿಬಿ ಪೋಲಿಸರ ಬಲೆಗೆ ಬಿದ್ದಿದ್ದಾನೆ.ತಾಲೂಕಿನ ಲಕ್ಷ್ಮೀಪುರ ಪಂಚಾಯಿತಿಯ ವೆಂಕಟರಾಜು ಎನ್ನುವ ವ್ಯಕ್ತಿ ತನ್ನ ತಂದೆ ಮುನಿವೆಂಕಟಪ್ಪ ಮತ್ತು ಸುಶೀಲಮ್ಮ ತಾಯಿ ಹೆಸರಲ್ಲಿದ್ದ ಗ್ರಾಮದ ವ್ಯಾಪ್ತಿಯ ಕಾಲಿ ನಿವೇಶನಗಳ ಇ-ಖಾತೆ ಮಾಡಿಕೊಡುವ ಸಂಬಂದ ಮಾರ್ಚ ತಿಂಗಳಲ್ಲಿ ಅರ್ಜಿ ಸಲ್ಲಿಸಿದ್ದರು ಆದರೆ ಅರ್ಜಿಗೆ ಇದುವರಿಗೂ ಯಾವುದೇ ಸ್ವೀಕೃತಿ ಸಹ ನೀಡದೆ ಪಿಡಿಒ ಸತಾಯಿಸುತ್ತಿದ್ದು ಈ ಸಂಬಂದ ಅರ್ಜಿದಾರನ ತಂದೆ ಖುದ್ದು ಪಿಡಿಒ ಶಂಕರಪ್ಪ ಅವರನ್ನು ಭೇಟಿ ಮಾಡಿ ವಿಚಾರಿಸಿದಾಗ ಪಿಡಿಒ ಇ-ಖಾತ ಮಾಡಲು 15 ಸಾವಿರ ಡಿಮ್ಯಾಂಡ್ ಮಾಡಿದ್ದು ಇದಕ್ಕೆ ಅರ್ಜಿದಾರ ಮುನಿವೆಂಕಟಪ್ಪ ತಕ್ಷಣ ಸ್ಥಳದಲ್ಲಿಯೇ 2 ಸಾವಿರ ಹಣವನ್ನು ನೀಡಿರುತ್ತಾರೆ ಉಳಿದ ಹಣ 13 ಸಾವಿರ ತಂದು ಹಣ ತಂದುಕೊಡುವುದಾಗಿ ಹೇಳಿದ್ದು, ಈ ಬಗ್ಗೆ ಅರ್ಜಿದಾರ ಮುನಿವೆಂಕಟಪ್ಪನ ಮಗ ವೆಂಕಟ್ರಾಜು ಜುಲೈ 14 ರಂದು ಕೋಲಾರದ ಎಸಿಬಿ ಪೋಲಿಸರಿಗೆ ದೂರು ನೀಡಿರುತ್ತಾರೆ ಅದರಂತೆ ಉಳಿದ…
ಶ್ರೀನಿವಾಸಪುರ:ಶ್ರೀನಿವಾಸಪುರ ಕ್ಷೇತ್ರಕ್ಕೆ ಹಿಡಿದಿರುವ ಶನಿ ಹೋಗಿ ಗುರು ಬರಬೇಕು ಎಂದರೆ ಇಲ್ಲಿನ ಶಾಸಕರು ಮನೆ ದಾರಿ ಹಿಡಿಯಬೇಕು ಆಗ ಕ್ಷೇತ್ರಕ್ಕೆ ಒಳ್ಳೆಯ ದಿನಗಳು ಬರಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು ಅವರು ಸೋಮವಾರ ಪಟ್ಟಣದ ಮಾರುತಿ ಸಭಾ ಭವನದಲ್ಲಿ ಬಿಜೆಪಿ ಜನೊತ್ಸವ ಕಾರ್ಯಕ್ರಮದ ತಾಲೂಕು ಬಿಜೆಪಿ ಕಾರ್ಯಕರ್ತರೊಂದಿಗೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಈ ಕ್ಷೇತ್ರ ನನಗೆ ವಿಶೇಷ ಇಲ್ಲಿ ಒಳ್ಳೆಯವರು ಶಾಸಕರಾಗಿದ್ದಾರೆ ಕೆಟ್ಟವರು ಶಾಸಕರಾಗಿದ್ದಾರೆ ಈಗ ಕ್ಷೇತ್ರದಲ್ಲಿ ಒಳ್ಳೆಯವರು ಇಲ್ಲ ಎಂದು ಶಾಸಕ ರಮೇಶ್ ಕುಮಾರ್ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ಅವರ ವಿರುದ್ದ ವಾಗ್ದಾಳಿ ನಡೆಸಿದ ಸಚಿವರು ಮಾಡಿರುವ ಅಕ್ರಮ ಆಸ್ತಿಗಳ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರ ಮುಂದೆ ಒಪ್ಪಿಕೊಂಡಿದ್ದಾರೆ ಅವರ ಮಾತುಗಳ ಅಧಾರದಲ್ಲಿ ಅವರು ಮಾಡಿರುವ ಅಕ್ರಮಗಳ ತನಿಖೆಯಾಗಲಿ, ಭ್ರಷ್ಟಾಚಾರವನ್ನು ಬಹಿರಂಗವಾಗಿ ಒಪ್ಪಿಕೊಂಡಿರುವ ವ್ಯಕ್ತಿ ಹೇಳೋದು ಒಂದು ಮಾಡೋದು ಇನ್ನೊಂದು ಇದು ಅವರ ಗುಣ ಲಕ್ಷಣ ಉಳ್ಳ ಇಂತಹ ವ್ಯಕಿಯನ್ನು ನಾನು ಎಲ್ಲೂ ಕಂಡಿಲ್ಲ ನೀವು ಯಾವುದೇ ಕಾರಣಕ್ಕೂ…
ಶ್ರೀನಿವಾಸಪುರ:ಭಾರತೀಯ ಜನತಾ ಪಕ್ಷದ ಪ್ರಭಾವಿ ಮಂತ್ರಿ ಡಾ.ಕೆ.ಸುಧಾಕರ್ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲು ಶ್ರೀನಿವಾಸಪುರಕ್ಕೆ ಆಗಮಿಸಿದರೆ ಅವರನ್ನು ಸ್ವಾಗತಿಸಲು ಬಿಜೆಪಿ ಕಾರ್ಯಕರ್ತರು ಇರಬೇಕಾಗಿದ್ದ ಜಾಗದಲ್ಲಿ ಹಾರತುರಾಯಿ, ಪಟಾಕಿ ಹಿಡಿದುಕೊಂಡ ಜೆಡಿಎಸ್ ಕಾರ್ಯಕರ್ತರೊಂದಿಗೆ ಸ್ವತಃ ಕೋಲಾರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ವೆಂಕಟಶಿವಾರೆಡ್ಡಿ ಮತ್ತು ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿಯವರೇ ನಿಂತು ಸ್ವಾಗತಿಸಿದರು.ಇಂದು ಶ್ರೀನಿವಾಸಪುರದಲ್ಲಿ ನಡೆದ ಬಿಜೆಪಿ ಜನೋತ್ಸವ ಪೂರ್ವಭಾವಿ ಸಭೆಯಲ್ಲಿ ಪಾಲ್ಗೋಳ್ಳಲು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿಧಾನಪರಿಷತ್ ಮುಖ್ಯಸಚೇತಕ ವೈ.ಎ.ನಾರಯಣಸ್ವಾಮಿ,ಮಾಜಿ ಶಾಸಕ ವರ್ತೂರ್ ಪ್ರಕಾಶ್, ಸೇರಿದಂತೆ ಹಲವು ಮಾಜಿ ಶಾಸಕರು ಇತರೆ ಮುಖಂಡರು ಆಗಮಿಸಿದ್ದರು.ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಇದ್ದ ಕಾರು ಪಟ್ಟಣದ ಇಂದಿರಾಭವನ್ ವೃತ್ತಕ್ಕೆ ಅಗಮಿಸುತ್ತಿದ್ದಂತೆ ದೊಡ್ಡಮಟ್ಟದಲ್ಲಿದ್ದ ಜೆಡಿಎಸ್ ಕಾರ್ಯರ್ತರು ಸುಧಾಕರ್ ಅವರಿಗೆ ಜೈಕಾರ ಕೂಗಿ ಹಾರ ತುರಾಯಿಗಳನ್ನು ಹಾಕಿ ಪಟಾಕಿ ಸಿಡಿಸಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಹಿರಿಯ ರಾಜಕಾರಣಿ,ಮಾಜಿ ಶಾಸಕ ಕೋಲಾರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ವೆಂಕಟಶಿವಾರೆಡ್ಡಿ ಅವರು ಸ್ವತಃ ನಿಂತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಗೆ ಶಾಲು ಹೊದಿಸಿ…
ಶ್ರೀನಿವಾಸಪುರ: ಶ್ರೀನಿವಾಸಪುರದಲ್ಲಿ ನಡೆಯುತ್ತಿರುವ ಅರಾಜಕತೆ ರಾಜಕೀಯಕ್ಕೆ ಇತಿಶ್ರೀ ಹಾಡಬೇಕು ಎಂದು ಕ್ಷೇತ್ರದ ಜನತೆ ನಿರ್ಧಾರ ಮಾಡಿದ್ದಾರೆ ಇದಕ್ಕಾಗಿ ನನಗೆ ರಾಜಕೀಯ ಶಕ್ತಿ ತುಂಬಲು ಮುಂದಾಗಿರುವುದಾಗಿ ಗುಂಜೂರು ಶ್ರೀನಿವಾಸರೆಡ್ಡಿ ಹೇಳಿದರು ಅವರು ಇಂದು ಭಾನುವಾರ ಹಳೇಪೇಟೆಯ ವಿವಿದ ಸಮಾಜಗಳ ಯುವಕರನ್ನು ಮತ್ತು ವಿವಿಧ ಪಕ್ಷಗಳ ಮುಖಂಡರನ್ನು ತಮ್ಮ ಬಣಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.ಗುಂಜೂರು ಶ್ರೀನಿವಾಸರೆಡ್ಡಿಯೊಂದಿಗೆ ಗುರುತಿಸಿಕೊಂಡಿರುವ ಕಾಂಗ್ರೆಸ್ ಮುಖಂಡ ಪೆದ್ದರೆಡ್ಡಿರಾಜೇಂದ್ರಪ್ರಸಾದ್ ಮಾತನಾಡಿ ನಾನು ಈಗಲೂ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೀನಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ತಮ್ಮ ಸ್ವಂತ ಆಸ್ತಿ ಅಂತ ತಿಳಿದಕೊಂಡಿರುವ ಕೆಲವರು ಪಕ್ಷದಲ್ಲಿನ ನಮ್ಮಂತ ನಿಷ್ಠಾವಂತರನ್ನು ಕಡೆಗಣಿಸಿ ಕೋಮುಶಕ್ತಿಗಳನ್ನು ಬೆಳೆಸುತ್ತಿದ್ದಾರೆ ಇದರಿಂದ ಬೆಸೆತ್ತ ನಾವು ಅವರ ಧೊರಣೆಗಳನ್ನು ಖಂಡಿಸಿ ಜಾತ್ಯಾತೀತ ಶಕ್ತಿಗಳನ್ನು ಬಲ ಪಡಿಸುವ ಉದ್ದೇಶದಿಂದ ಗುಂಜೂರು ಶ್ರೀನಿವಾಸರೆಡ್ಡಿ ಅವರಿಗೆ ರಾಜಕೀಯ ಶಕ್ತಿ ತುಂಬಲು ಮುಂದಾಗಿರುವುದಾಗಿ ಹೇಳಿದರು.ಪುರಸಭೆ ಮಾಜಿ ಅಧ್ಯಕ್ಷ ಬಿ.ಎಲ್.ಸೂರ್ಯನಾರಯಣ್ ಮಾತನಾಡಿ ಜೆಡಿಎಸ್ ಪಕ್ಷದ ಕಾರ್ಯಕರ್ತನಾದ ನಾನು ಮತ್ತು ನನ್ನ ಕೆಲ ಸ್ನೇಹಿತರು ಇವತ್ತು ಗುಂಜೂರು ಶ್ರೀನಿವಾಸರೆಡ್ಡಿಯವರೊಂದಿಗೆ ಅಧಿಕೃತವಾಗಿ ಗುರುತಿಸಿಕೊಳ್ಳುತ್ತಿದ್ದು ಮುಂದಿನ…
ಶ್ರೀನಿವಾಸಪುರ: ಅಕ್ರಮವಾಗಿ ಗಾಂಜಾ ಮಾರಾಟ ಮಾಡ್ತಿದ್ದ ವ್ಯಕ್ತಿಯೊಬ್ನನ್ನು ಶ್ರೀನಿವಾಸಪುರ ಅಬಕಾರಿ ಅಧಿಕಾರಿಗಳು ಬಂಧಸಿರುತ್ತಾರೆ.ಆಂಧ್ರದ ಅನ್ನಮಯ್ಯ ಜಿಲ್ಲೆಯ ಚಂಬಕೂರಿಗೆ ಹೊಂದಿಕೊಂಡಿರುವ ಗಡಿಯಂಚಿನ ಗ್ರಾಮವಾದ ತಾಲೂಕಿನ ಪುಲಗುರುಕೊಟೆ ಗ್ರಾಮದ ವೆಂಕಟರಮಣಪ್ಪ ಎಂಬುವನನ್ನು ಬಂದಿಸಿದ ಅಬಕಾರಿ ಅಧಿಕಾರಿಗಳು ಸುಮಾರು 50 ಸಾವಿರ ಮೌಲ್ಯದ 1 ಕೆಜಿಗಿಂತಲೂ ಹೆಚ್ಚಿನ ತೂಕದ ಗಾಂಜಾ ವಶಕ್ಕೆ ಪಡೆದುಕೊಂಡಿರುತ್ತಾರೆ.ವೆಂಕಟರಮಣಪ್ಪ ಆಂಧ್ರದಿಂದ ಗಾಂಜಾ ತಂದು ಇಲ್ಲಿ ಮಾರಾಟ ಮಾಡುತಿದ್ದ ಎಂದು ಹೇಳಲಾಗಿದ್ದು ಅಬಕಾರಿ ಅಧಿಕಾರಿ ರೋಹಿತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿರುತ್ತಾರೆ.ಅರೋಪಿಯನ್ನ ಅಧಿಕಾರಿಗಳು ನ್ಯಾಯಾಲಯಕ್ಕೆ ಒಪ್ಪಿಸಿರುತ್ತಾರೆ.ಶ್ರೀನಿವಾಸಪುರ ಪಟ್ಟಣದ ವ್ಯಾಪ್ತಿಯಲ್ಲೂ ಅಕ್ರಮ ಗಾಂಜ ವ್ಯವಹಾರ ನಡೆಯುತ್ತಿರುವ ಬಗ್ಗೆ ಇತ್ತಿಚಿಗೆ ಅಬಕಾರಿ ಅಧಿಕಾರಿಗಳು ಕೆಲವರನ್ನು ಕರೆದೊಯಿದು ವಿಚಾರಣೆಗೆ ಒಳಪಡಿಸಿದ ಬಗ್ಗೆ ಹೇಳುತ್ತಾರೆ.ಕಳೆದ ಕೆಲವು ದಿನಗಳ ಹೊಂದೆ ಮುಳಬಾಗಿಲು ತಾಲೂಕಿನಲ್ಲೊಂದು ನಡೆದ ಅಕ್ರಮ ಗಾಂಜಾ ವ್ಯವಹಾರದಲ್ಲಿ ಅಲ್ಲಿನ ಅಬಕಾರಿ ಅಧಿಕಾರಿಗಳು ದಂಪತಿಯನ್ನು ಬಂದಿಸಿದ್ದು ಅವರ ನೀಡಿದ ಮಾಹಿತಿಯಂತೆ ತಾಲೂಕಿನ ಪುರ್ನಪಲ್ಲಿ ಗ್ರಾಮದ ವ್ಯಕ್ತಿಯನ್ನು ಕರೆದೊಯಿದು ವಿಚಾರಣೆ ನಡೆಸಿರುತ್ತಾರೆ.
ನ್ಯೂಜ್ ಡೆಸ್ಕ್:ಆಂಧ್ರ ಪ್ರದೇಶದ ಪ್ರಖ್ಯಾತ ಪುಣ್ಯಕ್ಷೇತ್ರವಾಗಿ ಪ್ರಸಿದ್ದಿ ಪಡೆದು ರಾಹುಕೇತು ಪೂಜೆಗೆ ಖ್ಯಾತಿ ಪಡೆದಿರುವ ಶ್ರೀ ಪ್ರಸೂನಾಂಬಿಕಾ ದೇವಿ ಸಮೇತ ಶ್ರೀಕಾಳಹಸ್ತೀಶ್ವರ ದೇವಾಲಯ ಶಾತವಾಹನರು,ಪಲ್ಲವವರು,ಚೋಳರು ಮತ್ತು ವಿಜಯನಗರ ಸಾಮ್ರಾಜ್ಯಗಳ ಭಾಗವಾಗಿದ್ದು ಶಾತವಾಹನರ ಆಳ್ವಿಕೆಯ ಕಾಲದಲ್ಲಿ ಬಹುಶಃ ಇಲ್ಲಿ ಮರಮುಟ್ಟುಗಳಿಂದ ಚಿಕ್ಕ ಗುಡಿಯೊಂದನ್ನು ನಿಲ್ಲಿಸಿ, ಲಿಂಗವನ್ನು ಸ್ಥಾಪಿಸಿದ್ದಿರಬಹುದು ಎಂದು ಹೇಳಲಾಗಿದ್ದು ಕಾಲಾಂತರದಲ್ಲಿ ಕಾಳಹಸ್ತಿ ತೊಂಡಮಂಡಲದ ಪಲ್ಲವರ ಅಧೀನಕ್ಕೆ ಬಂತು. ವಾಸ್ತು ಮತ್ತು ಶಿಲ್ಪಶೈಲಿಯ ಆಧಾರದ ಮೇಲೆ ಪಲ್ಲವರ ಕಾಲದಲ್ಲಿ ಪ್ರಥಮವಾಗಿ ಶಿಲೆಗಳಿಂದ ಈ ದೇವಾಲಯದ ಕೆಲವು ಭಾಗಗಳು ನಿರ್ಮಿತವಾಗಿರಬಹುದು ಎಂದು ಅಂದಾಜಿಸಲಾಗಿದ್ದು, ಚೋಳರ ಕಾಲದಲ್ಲಿ ಯಾದವರಾಯ ನರಸಿಂಹದೇವ ಕಾಳಹಸ್ತಿಯ ದೇವಾಲಯಕ್ಕೆ ವಿಶೇಷ ಕೊಡುಗೆಯಿತ್ತುದಾಗಿ ತಿಳಿದು ಬರುತ್ತದೆ. ವಿಜಯನಗರದ ಕೃಷ್ಣದೇವರಾಯನ ಕಾಲದಲ್ಲಿ ಕಾಳಹಸ್ತಿಯ ದೇವಾಲಯ ವಿಶೇಷವಾಗಿ ಅಭಿವೃದ್ಧಿ ಹೊಂದಿತು. ಈತ ದೇವಾಲಯದ ಭವ್ಯವಾದ ಹಾಗೂ ಇಂದಿಗೂ ಪ್ರಸಿದ್ಧವಾಗಿರುವ ಗಾಳಿ ಗೋಪುರವನ್ನೂ ನೂರ್ಕಾಲು ಮಂಟಪವನ್ನೂ 1516ರಲ್ಲಿ ಕಟ್ಟಿಸಿದ. ಅವನ ಅನಂತರ ಆಳಿದ ಅಚ್ಯುತರಾಯನ ಪಟ್ಟಾಭಿಷೇಕ ಇಲ್ಲಿ ನಡೆಯಿತೆಂದು ಹೇಳಲಾತ್ತದೆ. ಅಚ್ಯುತರಾಯನ ಹೆಸರಿನ ಮಂಟಪವೊಂದನ್ನು ಅವನೇ ಕಟ್ಟಿಸಿದನೆಂದು…
ಶ್ರೀನಿವಾಸಪುರ: ತಾಲೂಕು ವಕ್ಕಲಿಗ ಸಮಾಜದ ಅಭಿವೃದ್ದಿಗೆ ಸಮಾಜದ ಹಿರಿಯರ ಮಾರ್ಗದರ್ಶನ ಪಡೆದು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ತಾಲೂಕು ಒಕ್ಕಲಿಗರ ಸಂಘದ ನೂತನ ಅಧ್ಯಕ್ಷ ಕೆ.ಎನ್.ವೇಣುಗೋಪಾಲ್@ಸ್ಟೂಡಿಯೋವೇಣು ಹೇಳಿದರು.ಅವರು ನೂತನ ಅಧ್ಯಕ್ಷರಾದ ನಂತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಮಿತಿಯ ಸಭೆಯಲ್ಲಿ ಪಾಲ್ಗೋಂಡು ಮಾತನಾಡಿದರು.ತಾಲ್ಲೂಕಿನಲ್ಲಿ ವಕ್ಕಲಿಗ ಸಮಾಜದ ಅಭಿವೃದ್ಧಿ ದೃಷ್ಠಿಯಿಂದ ಸಮುದಾಯಭವನ, ಕಲ್ಯಾಣಮಂಟಪ, ವಿದ್ಯಾರ್ಥಿಗಳಿಗಾಗಿ ಬಾಲಕರ ಹಾಗು ಬಾಲಕಿಯರಿಗಾಗಿ ಪ್ರತ್ಯಕ ಹಾಸ್ಟಲ್‌ಗಳನ್ನು ನಿರ್ಮಾಣ ಮಾಡುವ ಬಗ್ಗೆ ಯೋಜನೆಯಿದೆ ಮತ್ತು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದಿರುವಂತವರ ಅಭಿವೃದ್ಧಿಗಾಗಿ ವಿಶೇಷ ಯೋಜನೆ ರೂಪಿಸಲಾಗುವುದು ಎಂದರು.ನಿಕಟಪೂರ್ವ ಒಕ್ಕಲಿಗರ ಸಂಘದ ಅಧ್ಯಕ್ಷ ನಿಲಟೂರು ಚಿನ್ನಪ್ಪರೆಡ್ಡಿ ಮಾತನಾಡಿ ತಾಲ್ಲೂಕಿನ ಹೆಚ್ಚಿನ ಸಂಖ್ಯೆಯಲ್ಲಿ ವಕ್ಕಲಿಗ ಸಮಾಜದವರು ಇದ್ದೀವಿ ಸಮುಧಾಯ ಭವನ ಹಾಗು ವಿದ್ಯಾರ್ಥಿಗಳಿಗೆ ಹಾಸ್ಟಲ್ ನಿರ್ಮಾಣ ಮಾಡಲು ನಮಗೆ ಇದುವರಿಗೂ ನೀವೇಶನ ಪಡೆಯಲು ಸಾಧ್ಯವಾಗಿಲ್ಲ ನಾನು ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಕೆಂಪೇಗೌಡ ಜಂಯತಿ ಆಚರಣೆ ಸಂದರ್ಭದಲ್ಲಿ ಶಾಸಕರು ಸಮುದಾಯ ಭವನಕ್ಕೆ ನಿವೇಶನ ನೀಡುವುದಾಗಿ ಭರವಸೆ ನೀಡಿದ್ದರು ಆದರೆ ಇದುವರಿಗೂ ಈಡೇರಿಲ್ಲ ಹಾಗಾಗಿ ಅದನ್ನು ಪಡೆಯಲು ಸರ್ಕಾರದ…
ಶ್ರೀನಿವಾಸಪುರ:ಶ್ರೀನಿವಾಸಪುರದಲ್ಲಿ ಅಭಿವೃದ್ದಿ ಅನ್ನುವುದು ಮರಿಚಿಕೆಯಾಗಿದೆ ಗದ್ದಲ ಗಲಾಟೆ ಇವುಗಳ ನಡುವೆ ಇಲ್ಲಿನ ರಾಜಕೀಯ ನಾಲ್ಕು ದಶಕಗಳನ್ನು ಕಳೆದು ಕೊಂಡಿದೆ ಎಂದು ಗುಂಜೂರು ಶ್ರೀನಿವಾಸರೆಡ್ಡಿ ವಿಷಾದ ವ್ಯಕ್ತಪಡಿಸಿದರು ಅವರು ಪಟ್ಟಣದ ಗಫಾರ್ ಖಾನ್ ಮೊಹಲ್ಲಾದಲ್ಲಿ ಕಾಂಗ್ರೆಸ್ ತೊರೆದ ಪಟೇಲ್ ಹೋಟೆಲ್ ಮಾಲಿಕ ಪಟೇಲ್ ಸೈಯದ್ ಷಫೀವುಲ್ಲಾ ಮತ್ತು ಸಂಗಡಿಗರನ್ನು ತಮ್ಮ ಬಣಕ್ಕೆ ಸೇರ್ಪಡೆಮಾಡಿಕೊಂಡು ಮಾತನಾಡಿದ ಅವರು ಕ್ಷೇತ್ರದಲ್ಲಿ ಯುವಕರು ನಿರುದ್ಯೋಗಿಗಳಾಗಿದ್ದಾರೆ ಅವರಿಗೆ ಬದುಕು ಕಲ್ಪಿಸುವ ಕನಿಷ್ಠ ಕಾರ್ಯಕ್ರಮ ರೂಪಿಸುವಲ್ಲಿ ಇಲ್ಲಿನ ರಾಜಕೀಯ ಮುಖಂಡರಿಗೆ ಇಚ್ಛಾಶಕ್ತಿ ಇಲ್ಲ ಈ ಜನರ ಪ್ರಿತಿ ವಿಶ್ವಾಸ ಗಳಿಸುವ ಕುರಿತಾಗಿ ಯೋಚಿಸದೆ ಹುಲಿ ಹುಲಿ ಎಂದು ಬೊಂಬೆ ಹುಲಿಯನ್ನು ತೊರಿಸಿ ಜನರನ್ನು ಯಾಮಾರಿಸಿ ಬೆದರಿಸಿ ರಾಜಕೀಯ ಮಾಡಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು.ಪುರಸಭೆ ಮಾಜಿ ಸದಸ್ಯ ಮೊಹ್ಮದ್ ಆಲಿ ಮಾತನಾಡಿ ನಾವು ಪ್ರಾಮಾಣಿಕವಾಗಿ ರಮೇಶ್ ಕುಮಾರ್ ಅವರನ್ನು ನಮ್ಮ ರಾಜಕೀಯ ಶಕ್ತಿ ಎಂದು ನಂಬಿ ಬೆಂಬಲಿಸುತ್ತ ಬಂದಿದ್ದೇವು ಅವರ ಚುನಾವಣೆ ಸಂದರ್ಭದಲ್ಲಿ ಕೋಮುಸೌರ್ಹಾದತೆ ಕುರಿತಾಗಿ ಮಾತನಾಡುವ ಅವರು ಲೋಕಸಭೆ ಚುನಾವಣೆಯಲ್ಲಿ…