ಕೋಲಾರ:ಲಂಚ ಪಡೆಯುತ್ತಿದ್ದ ಬಂಗಾರಪೇಟೆ CDPO ಎಸಿಬಿ ಬಲೆಗೆ ಬಿದ್ದಿದ್ದಾರೆ. ಬಂಗಾರಪೇಟೆ ಅಂಗನವಾಡಿ ಇಲಾಖೆಯ ಶಿಷು ಅಭಿವೃದ್ಧಿ ಯೋಜನಾಧಿಕಾರಿ ಹಾಗು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಾಲೂಕು ಅಧಿಕಾರಿ ಸಿಡಿಪಿಒ ರೂಪಾ ತಮ್ಮ ಕಚೇರಿಯಲ್ಲಿ ಟೆಂಡರ್ ಗುತ್ತಿಗೆ ನೀಡುವ ಸಂಬಂದ ಕಾವೇರಿ ಎಂಟರ್ಪ್ರೈಸ್ ಎನ್ನುವರಿಗೆ 10 ಸಾವಿರಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದು ಮೊದಲ ಕಂತಿನಲ್ಲಿ 7 ಸಾವಿರ ಪಡೆದು, ಬಾಕಿ ಇದ್ದ 3 ಸಾವಿರವನ್ನು ಇಂದು ಪಡೆಯುತ್ತಿರುವಾಗ ಎಸಿಬಿ ಬಲೆಗೆ ಬಿದ್ದಿರುತ್ತಾರೆ.ಎಸಿಬಿ ಡಿವೈಎಸ್ಪಿ ಸುಧೀಂದ್ರ ನೇತೃತ್ವದಲ್ಲಿ ನಡೆದ ದಾಳಿ ಮಾಡಿದ್ದು ಸಿಡಿಪಿಒ ಮಹಿಳಾ ಅಧಿಕಾರಿ ರೂಪಾ ರನ್ನು ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸ್ತಿದ್ದಾರೆ. ವರದಿ:ಹರ್ಷವರ್ಧನ್
Author: admin
ಕಾಣಿಪಾಕಂ: ಆಂಧ್ರ ಪ್ರದೇಶ ಚಿತ್ತೂರು ಜಿಲ್ಲೆಯ ಪ್ರಸಿದ್ದ ಪುಣ್ಯಕ್ಷೇತ್ರವಾದ ಕಾಣಿಪಾಕಂ ಶ್ರೀವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯದ ಆಡಳಿತ ವ್ಯಾಪ್ತಿಯಲ್ಲಿರುವ ಶ್ರೀ ಮರಗದಬಿಂಕದೇವಿ ಸಮೇತ ಶ್ರೀ ಮಣಿಕಂಠೇಶ್ವರ ದೇವಸ್ಥಾನದಲ್ಲಿ ನಿರಂತರ ಚಂಡಿ ಹೋಮಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಇವೊ ವೆಂಕಟಸುರೇಶಬಾಬು ವಿದ್ವಕ್ತವಾಗಿ ಚಾಲನೆ ನೀಡಿರುತ್ತಾರೆ. ದೇವಾಲಯದ ಅರ್ಚಕ ಸ್ವಾಮಿಗಳು ವೈದಿಕ ರಿತ್ಯ ವೇದಪಂಡಿತರ ಮಾರ್ಗದರ್ಶದಲ್ಲಿ ಶಾಸ್ತ್ರೋಕ್ತವಾಗಿ ಹೋಮ ನಡೆಸಿ ಪೂರ್ಣಾಹುತಿ ನೆರವೇರಿಸಿದರು. ಭಕ್ತಾದಿಗಳು ಚಂಡಿ ಹೋಮದಲ್ಲಿ ಪಾಲ್ಗೊಂಡು ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಅಧಿಕಾರಿಗಳು ಕೋರಿರುತ್ತಾರೆ. ಆಷಾಡ ಹುಣ್ಣಿಮೆ ಶ್ರೀ ಮರಗದಬಿಂಕ ದೇವಿಗೆ ಶಾಕಾಂಬರಿ(ತರಕಾರಿ)ಅಲಂಕಾರಕಾಣಿಪಾಕಂ ಶ್ರೀ ಮಣಿಕಂಠೇಶ್ವರ ದೇವಸ್ಥಾನದ ಅಮ್ಮನವರಾದ ಶ್ರೀ ಮರಗದಬಿಂಕ ದೇವಿಗೆ ಶಾಕಾಂಬರಿ ಅಲಂಕಾರ ಮಾಡಲಾಗಿತ್ತು. ಶ್ರೀ ಮಣಿಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಆಷಾಢ ಹುಣ್ಣಿಮೆ ನಿಮಿತ್ತ ದೇವಿಗೆ ಶಾಕಾಂಬರಿ ಅಲಂಕಾರ ಮಾಡಿದಲ್ಲದೆ ದೇವಾಲಯವನ್ನು ವಿವಿಧ ರೀತಿಯ ತರಕಾರಿಗಳಿಂದ ಸುಂದರವಾಗಿ ಅಲಂಕರಿಸಲಾಗಿದ್ದು ಶ್ರೀ ಮರಗದಾಂಬಿಕಾ ದೇವಿ ಹಾಗೂ ದೇವಾಲಯದ ಅವರಣದಲ್ಲಿ ನೆಲೆ ನಿಂತಿರುವ ಶ್ರೀ ದುರ್ಗಾದೇವಿಗೂ ವಿವಿಧ ಬಗೆಯ ತರಕಾರಿ ಹಾಗೂ ಹಣ್ಣುಗಳಿಂದ…
ಶ್ರೀನಿವಾಸಪುರ: ಅಕ್ರಮವಾಗಿ ರಕ್ತಚಂದನ ಗೋಸಾಕಾಣಿಕೆ ಗೋ ಕಳ್ಳತನ, ಗಾಂಜ ಡ್ರಗ್ಸ್ ಕಾನೂನು ಭಾಹಿರವಾಗಿ ಅಂತರಾಜ್ಯ ಹಾಗು ಅಂತರ್ ಜಿಲ್ಲಾ ಮಟ್ಟದಲ್ಲಿ ಇನ್ನಿತರೆ ಅಕ್ರಮ ಸಾಗಾಣಿಕೆಗಳನ್ನು ತಡೆಯುವುದು, ಅಬ್ಕಾರಿ ಕಾಯ್ದೆ, ಅಪರಿಚಿತ ಮೃತದೇಹಗಳ ಮಾಹಿತಿ ಹಂಚಿಕೆ, ವಾರೆಂಟ್ ಇರುವಂತ ಅಸಾಮಿಗಳ ಪತ್ತೆಗೆ ಸಹಕಾರ, ಕಾಣೆಯಾದವರ ಕುರಿತಾಗಿ ಪತ್ತೆಹಚ್ಚಲು ಪರಸ್ಪರ ಸಹಕಾರ, ಹಾಗು ಸಾಗಾಣಿಕೆ ಚಟುವಟಿಕೆಗಳನ್ನು ತಡೆಯಲು ಕರ್ನಾಟಕ ಮತ್ತು ಆಂಧ್ರ ಪೋಲಿಸರು ಜಂಟಿಯಾಗಿ ಕಾರ್ಯಚರಣೆ ನಡೆಸುವುದಾಗಿ ಕೋಲಾರ ಪೋಲಿಸ್ ವರಿಷ್ಠಾಧಿಕಾರಿ ದೇವರಾಜ್ ಹೇಳಿದರು ಅವರು ತಾಲೂಕಿನ ಹೊಗಳಗೆರೆ ತೋಟಗಾರಿಕೆ ಭವನದಲ್ಲಿ ನಡೆದ ಅಂತರಾಜ್ಯ ಪೋಲಿಸ್ ಅಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದ ಗಡಿದಾಟುವ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಅವರು ಅಂತರ್ಜಿಲ್ಲೆ ಹಾಗು ಅಂತರರಾಜ್ಯ ಪೋಲಿಸರ ನಡುವೆ ಸಮನ್ವಯತೆ ಮತ್ತು ಪರಸ್ಪರ ಸಹಕಾರ ಅಗತ್ಯ ಇದಕ್ಕಾಗಿ ಇಂದು ಕೋಲಾರ ಜಿಲ್ಲೆಯ ಗಡಿಯಾಚಗೆ ಬರುವಂತ ಆಂಧ್ರಪ್ರದೇಶದ ಅನ್ನಮಯ್ಯ ಹಾಗು ಚಿತ್ತೂರು ಜಿಲ್ಲೆ ಚಿಕ್ಕಬಳ್ಳಾಪುರ ಜಿಲ್ಲೆಗಳ ಮತ್ತು ಕೆಜಿಎಫ್ ಭಾಗದ ಪೋಲಿಸ್ ಅಧಿಕಾರಿಗಳು ಪಾಲ್ಗೋಂಡಿದ್ದರು. ಕೋಲಾರ ಪೋಲಿಸ್ ವರಿಷ್ಠಾಧಿಕಾರಿ ದೇವರಾಜ್…
ನ್ಯೂಜ್ ಡೆಸ್ಕ್:2023 ರ ಚುನಾವಣೆಗೆ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಳೆದವಾರ ಭೇಟಿ ಮಾಡಿದ್ದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಕೈ ಪಕ್ಷದ ಹಿರಿಯ ಮುಖಂಡರಾದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೃಷ್ಣಬೈರೇಗೌಡ, ಮಾಜಿ ಸಚಿವ ಶಿವಶಂಕರ ರೆಡ್ಡಿ ಶಾಸಕರಾದ ಶ್ರೀನಿವಾಸಗೌಡ, ವಿ ಮುನಿಯಪ್ಪ,ಶರತ್ ಬಚ್ಚೇಗೌಡ, MLC ಗಳಾದ ನಸೀರ್,ಅನಿಲ್ ಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದ ಗೌಡ,ಚಿಂತಾಮಣಿ ಸುಧಾಕರ,ಕೊತ್ತೂರುಮಂಜುನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಹಾಗು ಪ್ರಮುಖ ದಲಿತ ಮುಖಂಡರು ಸಹ ಭಾಗಿಯಾಗಿ ಕಳೆದ ವಾರ ಮನವಿ ಮಾಡಿದ್ದರು.ಕೋಲಾರದಲ್ಲಿ ಸ್ಪರ್ಧೆಸುವಂತೆ ಆಹ್ವಾನ ನೀಡಿದ್ದರು ಇವರ ಮನವಿಗೆ ಸ್ಫಂದನೆ ನೀಡಿದ್ದ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದ ಮತದಾರರ ಅಭಿಪ್ರಾಯ ಪಡೆದು ಕ್ಷೇತ್ರದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವೆ ಎಂದಿದ್ದರು.ರಮೇಶ್ ಕುಮಾರ್ ನಿಯೋಗ ಭೇಟಿಯಾದ ನಂತರ ಕೋಲಾರದಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ಕೋಲಾರ ನಗರ ಸಭೆ ಅಧ್ಯಕ್ಷರು ಮತ್ತು ಜಿಲ್ಲಾ ಕುರುಬ ಸಮುದಾಯದ ಅನೇಕ ಮುಖಂಡರು ಪ್ರಮುಖ ನಾಯಕರು ಮನವಿ ಸಲ್ಲಿಸಿ ಸಿದ್ದರಾಮಯ್ಯ…
ಚಿಂತಾಮಣಿ:ಚಿಂತಾಮಣಿ ನಗರದ ಬಾಲಕರ ಪದವಿ ಪಿಯು ಕಾಲೇಜು ಇತಿಹಾಸ ಉಪನ್ಯಾಸಕ ಹಾಗು ಶ್ರೀನಿವಾಸಪುರ ತಾಲೂಕು ಪಾಳ್ಯಗ್ರಾಮದ ಮೂಲದ ಮುನಿರೆಡ್ಡಿ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.4 ರಿಂದ 16 ನೇಶತಮಾನದವರಿಗಿನ ಕೋಲಾರ ಜಿಲ್ಲೆಯ ಶಾಸನಗಳಲ್ಲಿ ದಾನ ದತ್ತಿ ಮತ್ತು ಕೆರೆಗಳ ಒಂದು ಅಧ್ಯಯನ ಕುರಿತಾಗಿ ಬೆಂಗಳೂರು ವಿಶ್ವ ವಿದ್ಯಾಲಯದ ಪರಿಗಣಿಸಲ್ಪಟ ಮಾರ್ಗದರ್ಶಕ ಇತಿಹಾಸ ವಿಭಾಗದ ಡಾ.ಎನ್.ಶೇಖ್ ಮಸ್ತಾನ್ ನೇತೃತ್ವದಲ್ಲಿ ಮುನಿರೆಡ್ಡಿ ಅವರು ಸಂಶೋಧನ ಮಹಾ ಪ್ರಭಂದವನ್ನು ಮಂಡಿಸಿದ್ದರು ಚಿಂತಾಮಣಿ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಮತ್ತು ನಿವೃತ್ತ ನೌಕರರು ಉಪನ್ಯಾಸಕರು ವಿವಿಧ ಸಂಘಟನೆಗಳು ಮುನಿರೆಡ್ಡಿಯವರನ್ನು ಅಭಿನಂದಿಸಿರುತ್ತಾರೆ. ಸೌಮ್ಯ ಸ್ವಭಾವದ ವಿಚಾರವಂತ ಮುನಿರೆಡ್ಡಿ ಅವರ ಸಾಧನೆಗೆ ಅರ್ಹ ಗೌರವ ಸಂದಿದೆ ಎಂದು ಕಾಲೇಜು ವಿದ್ಯಾರ್ಥಿಗಳ ಪೋಷಕರು ಹಾಗು ಸಾರ್ವಜನಿಕರು ಅಭಿನಂದನೆ ತಿಳಿಸಿದ್ದಾರೆ
ನ್ಯೂಜ್ ಡೆಸ್ಕ್:2023 ವಿಧಾನ ಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯವನ್ನು ಮತ್ತೆ ಗೆಲ್ಲಲೇ ಬೇಕು ಎಂದು ಬಿಜೆಪಿ ಹೈಕಮಾಂಡ್ ರಾಜಕೀಯ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದ್ದು ಇದರ ಅನ್ವಯ ರಾಜ್ಯ ಬಿಜೆಪಿ ಸಚಿವರ ಕಾರ್ಯವೈಖರಿ ಶೈಲಿ ಬದಲಿಸಿ ಆಡಳಿತಕ್ಕೆ ಚುರುಕು ಮುಟ್ಟಿಸುವ ಪ್ರಯತ್ನಕ್ಕೆ ಬಿಜೆಪಿ ಹೈಕಮಾಂಡ್ ಪ್ರಯತ್ನದಲ್ಲಿದೆ ಎನ್ನಲಾಗುತ್ತಿದೆ .ಸಿಎಂ ಬೊಮ್ಮಾಯಿ ಕಾರ್ಯ ವೈಖರಿಯ ವೇಗಕ್ಕೆ ತಕ್ಕಂತೆ ಹಲವು ಸಚಿವರು, ಇಲಾಖೆಗಳು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸದಿರುವ ಬಗ್ಗೆ ಸರಕಾರ ಹಾಗೂ ಪಕ್ಷದಲ್ಲೇ ಅಸಮಾಧಾನವಿದೆ. ಇದೇ ರೀತಿ ಮುಂದುವರಿದರೆ ಮುಂಬರುವ ಚುನಾವಣೆಯಲ್ಲಿ ದೊಡ್ಡ ಬೆಲೆ ತೆರಬೇಕಾದೀತು ಎಂಬ ಆತಂಕ ಬಿಜೆಪಿ ಹೈಕಮಾಂಡಿಗಿದೆ ಈ ಹಿನ್ನಲೆಯಲ್ಲಿ ಸಚಿವರು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುವಂತೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ.ಇನ್ನೊಂದೆಡೆ ಕೇಂದ್ರದ ಹಲವು ಸಚಿವರು ನಿಯಮಿತವಾಗಿ ರಾಜ್ಯ ಪ್ರವಾಸ ಕೈಗೊಂಡು ಕೇಂದ್ರದ ಯೋಜನೆಗಳ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸಿ ಅವರಿಂದ ಜನಾಭಿಪ್ರಾಯ ಸಂಗ್ರಹಿಸುವ ಪ್ರಯತ್ನಕ್ಕೆ ಕಾರ್ಯತಂತ್ರ ರೂಪಿಸಲಾಗುತ್ತಿದೆ ಕೇಂದ್ರ ಬಿಜೆಪಿ ನಾಯಕರ ಭೇಟಿ ಜತೆಗೆ ರಾಜ್ಯ ಸರಕಾರದ…
ಶ್ರೀನಿವಾಸಪುರ: ಧಾರ್ಮಿಕ ಕಾರ್ಯಕ್ರಮಗಳು ಮನಸ್ಸಿಗೆ ನೆಮ್ಮದಿ ನೀಡುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ ಹೇಳಿದರು. ಅವರು ತಾಲೂಕಿನ ಅರಕೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಕೊದಂಡರಾಮ ದೇವಾಲಯದ 48 ದಿನಗಳ ಮಂಡಲ ಪೂಜೆ ಹಾಗು ಶ್ರೀ ಸೀತಾರಾಮರ ಕಲ್ಯಾಣೊತ್ಸವ ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದ ಅವರು ಮಾತನಾಡಿ ದೇವಾಲಯ ಮತ್ತು ಧರ್ಮವು ನಮ್ಮ ಗ್ರಾಮೀಣ ಜನ ಜೀವನದ ಅವಿಭಾಜ್ಯ ಅಂಗವಾಗಿವೆ. ಧರ್ಮ ಮತ್ತು ಧಾರ್ಮಿಕ ಕಾರ್ಯಕ್ರಮ ಜೀವನದ ಸಾರ್ಥಕತೆಗೆ ದಾರಿದೀಪ ಎನ್ನಬಹುದಾಗಿದ್ದು ಇಂದಿನ ಒತ್ತಡದ ಬದುಕಿನಲ್ಲಿ ದೇವರು ಮತ್ತು ಅಧ್ಯಾತ್ಮ ಮಾರ್ಗದಲ್ಲಿ ಸಾಗಲು ಹೋಮ ಹವನ ಪೂಜೆ ಹಾಗೂ ಧ್ಯಾನದಿಂದ ಭಗವಂತನ ಅನುಗ್ರಹ ಪಡೆಯಬಹುದು ಎಂದರು.ಶ್ರೀನಾಗನಾಥೇಶ್ವರ ದೇವಾಲಯದ ಧರ್ಮದರ್ಶಿ ರಮೇಶ್ ಬಾಬು ಮಾತನಾಡಿ ಗ್ರಾಮೀಣ ದೇವಾಲಯಗಳು ಧಾರ್ಮಿಕ ಹಾಗು ಸಾಂಸೃತಿಕ ಕೇಂದ್ರಗಳಾಗಿ ಜನರ ನಡುವಿನ ಸೌಹಾರ್ದತೆ ಮತ್ತು ಸಾಮರಸ್ಯ ಜೀವನಕ್ಕೂ ಸಹಕಾರಿಯಾಗಲಿದೆ ಎಂದರು.ಈ ಸಂದರ್ಭದಲ್ಲಿ ದೇವಾಲಯದ ನಿರ್ಮಾಣಕ್ಕೆ ಸಹಕಾರ ನೀಡಿದ ಸೇವಾಕರ್ತರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಮಂಡಳಿ ಮುಖ್ಯಸ್ಥ ವೈ…
ಶ್ರೀನಿವಾಸಪುರ:-ಸರ್ಕಾರಿ ಶಾಲೆ ಕಾಲೇಜುಗಳ ವಿಧ್ಯಾರ್ಥಿಗಳು ಉನ್ನತ ಪದವಿಗಳನ್ನು ಅಲಂಕರಿಸಿ ಸಮಾಜದ ಶ್ರೇಯಸ್ಸಿಗೆ ದುಡಿಯುತ್ತಿದ್ದಾರೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಸಣ್ಣೀರಯ್ಯ ಹೇಳಿದರು ಅವರು ತಮ್ಮ ಕಾಲೇಜಿನಲ್ಲಿ 2020-21 ನೇ ಸಾಲಿನಲ್ಲಿ ವಿಜ್ಞಾನ ವಿಭಾಗದಲ್ಲಿ ಓದಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಮಿಸ್ಬಾ ತಪಸ್ಸುಮ್ ಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಸರ್ಕಾರಿ ವಿದ್ಯಾಸಂಸ್ಥೆಗಳು ಇತರೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಡಿಮೆ ಇಲ್ಲದಂತೆ ಉತ್ತಮ ರೀತಿಯಲ್ಲಿ ಭೋದನಾ ವ್ಯವಸ್ಥೆ ಶೈಕ್ಷಣಿಕ ಸೌಲಭ್ಯಗಳು ಹಾಗು ಇತರೆ ಮೂಲಭೂತ ಸೌಕರ್ಯಗಳು ನೀಡುತ್ತಿದೆ ಇದನ್ನು ವಿದ್ಯಾರ್ಥಿಗಳು ಬಳಸಿಕೊಂಡು ಶೈಕ್ಷಣಿಕವಾಗಿ ಸಾಧನೆ ಮಾಡುವ ಮೂಲಕ ಸಮಾಜದಲ್ಲೂ ಉನ್ನತ ವ್ಯಕ್ತಿತ್ವ ಸ್ಥಾನ ಗೌರವ ಪಡೆಯುವಂತೆ ಹೇಳಿದರು.ವಿಙ್ಞಾನ ಉಪನ್ಯಾಸಕ ಚಿನ್ನಪ್ಪರೆಡ್ಡಿ ಮಾತನಾಡಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ಚಿನ್ನದ ಪದಕ ಪಡೆದಿರುವುದು ಹೆಮ್ಮೆಯ ವಿಷಯ ರಸಾಯನಶಾಸ್ತ್ರದಲ್ಲಿ 100 ಅಂಕಗಳನ್ನು ಪಡೆದಿರುವ ಆಕೆಯ ಸಾಧನೆ ಇತರೆ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಬೇಕು ಎಂದ ಅವರು ಚಿನ್ನದ ಪದಕ ಪಡೆದ ಆಕೆಯ ಶೈಕ್ಷಣಿಕ…
ಕೋಲಾರ: ಪೋಲಿಸರು ಗಲಭೆ ಕೊರರಿಗೆ ಕಳ್ಳರಿಗೆ ವಂಚಕರಿಗೆ ಲಾಠಿ ಹಿಡಿದು ಬಾರಿಸಿ ಬುದ್ದಿ ಹೇಳುವುದೋ ಕಾನೂನು ಬಗ್ಗೆ ಪಾಠಮಾಡುವುದು ಸಾಮನ್ಯ ಆದರೆ ಕೋಲಾರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ಲಾಠಿ ಪಕ್ಕಕ್ಕಿಟ್ಟು ಚಾಕಪಿಸ್ ಹಿಡಿದು ಮೇಷ್ಟು ಸ್ಥಾನದಲ್ಲಿ ನಿಂತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಜೀವಶಾಸ್ತ್ರದ ಪಾಠ ಮಾಡಿದ್ದಾರೆ.ಕೋಲಾರ ತಾಲ್ಲೂಕಿನ ವೇಮಗಲ್ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಿಕ್ಷಕ ಗೆಳೆಯರ ಬಳಗದ ವತಿಯಿಂದ ಎಫ್ಸನ್ ಕಂಪನಿ ಕೊಡುಗೆಯಾಗಿ ನೀಡಿರುವ ಲಕ್ಷಕ್ಕೂ ಹೆಚ್ಚು ನೋಟ್ ಪುಸ್ತಕ ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅವರು ಕಾರ್ಯಕ್ರಮದ ನಂತರ ಶಾಲ ಕೋಣೆಯೊಂದಕ್ಕೆ ಪ್ರವೇಶಿಸಿದರು ಅಲ್ಲಿ ಬೋರ್ಡ್ ಮೇಲೆ ಸೂಕ್ಷ್ಮ ಜೀವಿಗಳ ಉಪಯೋಗಗಳ ಶೀರ್ಷಿಕೆ ಇದ್ದುದನ್ನು ಕಂಡು ಕೆಲ ಹೊತ್ತು ವಿಙ್ಞಾದ ವಿಷಯದ ಕುರಿತಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು ನಂತರ ಕೂಡಲೇ ಚಾಕ್‌ಪೀಸ್ ಹಿಡಿದು ಸುಮಾರು 20 ನಿಮಿಷ ಪಾಠ ಮಾಡಿದರು. ಪೊಲೀಸ್ ಅಧಿಕಾರಿಯಾಗುವ ಮುನ್ನ ಐದು ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ…
ಶ್ರೀನಿವಾಸಪುರ:-ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯುಡುಗೆ ಶ್ರೀನಿವಾಸಪುರದಲ್ಲಿ ತೆಲಗುದೆಶಂ ಹಾಗು ನಂದಮೂರಿ ಕುಟುಂಬದ ಅಭಿಮಾನಿಗಳು ಘನ ಸ್ವಾಗತ ನೀಡಿದರು.ಆಂಧ್ರದ ಮದನಪಲ್ಲಿ ನಗರದಲ್ಲಿ ಇಂದು ಬುಧವಾರ ಆಯೋಜಿಸಿದ್ದ ತೆಲಗುದೇಶಂ ಪಕ್ಷದ ರಾಜಂಪೇಟ ಲೋಕಸಭಾ ಕ್ಷೇತ್ರ ಮಟ್ಟದ ಸಮಾವೇಶ ಮಿನಿಮಹಾನಾಡು ಹಾಗು ಬಾರಿ ಬಹಿರಂಗ ಸಭೆ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೈದರಾಬಾದ್ ನಿಂದ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿ ನಂತರ ರಸ್ತೆಮಾರ್ಗದಲ್ಲಿ ವಿಜಯಪುರ ಬೈಪಾಸ್,ಹೆಚ್ ಕ್ರಾಸ್,ಮಾಡಿಕೆರೆ ಕ್ರಾಸ್ ತಾಲೂಕಿನ ತಾಡಿಗೊಳ್ ಕ್ರಾಸ್ ಮೂಲಕ ಮದನಪಲ್ಲಿಗೆ ತೆರಳುತ್ತಿದ್ದ ಅವರಿಗೆಶ್ರೀನಿವಾಸಪುರ ತಾಲೂಕು ಕೋಡಿಪಲ್ಲಿ ಪಂಚಾಯಿತಿ ವ್ಯಾಪ್ತಿಯ ಕೊಂಡಾಮರಿ ಬಳಿಯ ಕಲ್ಲುಕ್ವಾರಿ ಮಾಲಿಕ ಹಾಗು ಮದನಪಲ್ಲಿ ವಿಧಾನಸಭಾ ಕ್ಷೇತ್ರದ ತೆಲಗುದೇಶಂ ಪಕ್ಷದ ಅಭ್ಯರ್ಥಿ ಅಕಾಂಕ್ಷಿಯಾಗಿರುವ ಜಯರಾಮ ನಾಯ್ಡು ತಮ್ಮ ಅನುಯಾಯಿಗಳೊಂದಿಗೆ ತಾಡಿಗೊಳ್ ಕ್ರಾಸ್(ಪೈ ಕ್ರಾಸ್) ಬಳಿ ಚಂದ್ರಬಾಬು ನಾಯುಡು ಅವರಿಗೆ ದೊಡ್ಡದಾದ ಗಜಗಾತ್ರದ ಸೇಬಿನ ಹಾರ ಹಾಕಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ದೊಡ್ದ ಸಂಖ್ಯೆಯಲ್ಲಿ ಶ್ರೀನಿವಾಸಪುರ ತಾಲೂಕಿನ ಯುವಕಾಂಗ್ರೆಸ್ ಕಾರ್ಯಕರ್ತರು ಜಯರಾಮ ನಾಯ್ಡುಗೆ ಸಾತ್ ನೀಡಿದರು. ಈ…