ನ್ಯೂಜ್ ಡೆಸ್ಕ್:ವಿಧಾನಸಭೆ ಚುನಾವಣೆಗೆ ಕೋಲಾರ ಅವಿಭಜಿತ ಕಾಂಗ್ರೆಸ್ ಮುಖಂದರು ಈಗಲಿಂದಲೇ ಪೂರ್ವತಯಾರಿ ನಡೆಸುತ್ತಿದ್ದಾರೆ ಚುನಾವಣೆ ಇನ್ನು 9-10 ತಿಂಗಳು ಬಾಕಿ ಇರುವಾಗಲೆ ವಿಶೇಷವಾಗಿ ಕೋಲಾರ ಲೋಕಸಭಾ ವ್ಯಾಪ್ತಿಯ ಕಾಂಗ್ರೆಸ್ ಶಾಸಕರು,ಮುಖಂಡರು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕೋಲಾರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿಸಲು ರೂಪುರೇಷೆ ಸಿದ್ದಪಡಿಸಿ ಅವರಿಗೆ ಸ್ಪರ್ದೆಗೆ ಆಹ್ವಾನ ನೀಡಿದ್ದಾರೆ.ಕೋಲಾರ-ಚಿಕ್ಕಬಳ್ಳಾಪುರ ಹಾಗು ಹೋಸಕೋಟೆ ಕಾಂಗ್ರೆಸ್ ಶಾಸಕರು ಮುಖಂಡರು ಇಂದು ಮಂಗಳವಾರ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತನಾಡಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೋಲಾರ ಕ್ಷೇತ್ರದಿಂದ ಸ್ಪರ್ದಿಸುವಂತೆ ಅಹ್ವಾನ ನೀಡಿರುವ ಬಗ್ಗೆ ಕೇಳಿಬಂದಿದೆ.ಇದಕ್ಕೆ ಸ್ಪಂದಿಸಿರುವ ಸಿದ್ದರಾಮಯ್ಯ ಬೆಂಗಳೂರು ಜಿಲ್ಲೆಗಳಲ್ಲಿ ಒಂದು ಕ್ಷೇತ್ರದಿಂದ ಸ್ಪರ್ಧೆ ಮಾಡಲು ಆಲೋಚಿಸಿದ್ದೆನೆ. ಬಾದಾಮಿ ಕ್ಷೇತ್ರದ ಜನ ನನ್ನ ಮೇಲೆ ನಂಬಿಕೆಯಿಟ್ಟು ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಮೈಸೂರು ಜಿಲ್ಲೆಯ ಚಾಮುಂಡಿಕ್ಷೇತ್ರದ ಜನರು ಸಹ ಕರೆಯುತ್ತಿದ್ದಾರೆ. ಇದರಿಂದಾಗಿ ನಾನು ಇದುವರೆಗೂ ಯಾವುದೇ ನಿರ್ಣಯಕೈಗೊಂಡಿಲ್ಲ…
Author: admin
ಶ್ರೀನಿವಾಸಪುರ:-ಮದನಪಲ್ಲಿಯಲ್ಲಿ ನಾಳೆ ಜುಲೈ 6 ಬುಧವಾರ ನಡೆಯಲಿರುವ ತೆಲಗುದೇಶಂ ಪಕ್ಷದ ಕ್ಷೇತ್ರಮಟ್ಟದ ಸಮಾವೇಶ ಹಾಗು ಬಹಿರಂಗ ಸಭೆ,ಮಿನಿಮಹಾನಾಡು ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯುಡು ಭಾಗವಹಿಸುತ್ತಿದ್ದು ಅವರು ನಾಳೆ ವಿಜಯವಾಡ ನಗರದಿಂದ ಬೆಂಗಳೂರು ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಗಮಿಸಿ ನಂತರ ಮಧ್ಹಾನಃ ಸುಮಾರು 2 ಗಂಟೆಗೆ ರಸ್ತೆಮಾರ್ಗದ ಮೂಲಕ ಹೆಚ್ ಕ್ರಾಸ್,ಮಾಡಿಕೆರೆ ಕ್ರಾಸ್ ತಾಲೂಕಿನ ತಾಡಿಗೊಳ್ ಕ್ರಾಸ್ ಮೂಲಕ ಮದನಪಲ್ಲಿಗೆ ತೆರಳಲಿದ್ದಾರೆ.ಆಂಧ್ರದ ರಾಯಸೀಮೆಯ ಹೆಬ್ಬಾಗಿಲು ಆಗಿರುವ ಆಂಧ್ರಪ್ರದೇಶದ ರಾಜಂಪೇಟ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮದನಪಲ್ಲಿಯಲ್ಲಿ ನಡೆಯಲಿರುವ ತೆಲಗು ದೇಶಂ ಕಾರ್ಯಕ್ರಮದಲ್ಲಿ ಶ್ರೀನಿವಾಸಪುರ ತಾಲೂಕು ಕೋಡಿಪಲ್ಲಿ ಪಂಚಾಯಿತಿ ವ್ಯಾಪ್ತಿಯ ಕೊಂಡಾಮರಿ ಬಳಿಯ ಕಲ್ಲುಕ್ವಾರಿ ಮಾಲಿಕ ಹಾಗು ಮದನಪಲ್ಲಿ ವಿಧಾನಸಭಾ ಕ್ಷೇತ್ರದ ತೆಲಗುದೇಶಂ ಪಕ್ಷದ ಅಭ್ಯರ್ಥಿ ಅಕಾಂಕ್ಷಿಯಾಗಿರುವ ಜಯರಾಮ ನಾಯ್ಡು ತಾಡಿಗೊಳ್ ಕ್ರಾಸ್(ಪೈ ಕ್ರಾಸ್) ಬಳಿ ಚಂದ್ರಬಾಬು ನಾಯುಡು ಅವರಿಗೆ ದೊಡ್ಡ ಮಟ್ಟದ ಸ್ವಾಗತ ಕೋರುವ ಮೂಲಕ ಕರ್ನಾಟಕದಲ್ಲೂ ತಮ್ಮ ಹವಾ ಇರುವುದನ್ನು ಆಂಧ್ರದ ಮಾಜಿ ಸಿಎಂ ಗೆ…
ಮದನಪಲ್ಲಿ: ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ಪ್ರಖ್ಯಾತ ಪುಣ್ಯಕ್ಷೇತ್ರ ಬೋಯಕೊಂಡ ಗಂಗಮ್ಮ ದೇವಾಲಯ ಭಾನುವಾರ ಭಕ್ತರಿಂದ ತುಂಬಿ ತುಳುಕಾಡಿದೆ. ಆಷಾಡ ಮಾಸದ ಹಿನ್ನೆಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಕ್ತರು ದರುಶನಕ್ಕೆ ಬಂದಿದ್ದಾರೆಂದು ದೇವಾಲಯದ ಅಧಿಕಾರಿಗಳು ಹೇಳುತ್ತಾರೆ.ಆಷಾಡದ ಮೊದಲ ಭಾನುವಾರ ಗಂಗಮ್ಮನನ್ನು ವಿಶೇಷವಾಗಿ ಚಿನ್ನಾಭರಣ ಮತ್ತು ಪುಷ್ಪಗಳಿಂದ ಅಲಂಕರಿಸಿ, ಭಕ್ತರ ದರುಶನಕ್ಕೆ ಏರ್ಪಾಡು ಮಾಡಲಾಗಿತ್ತು ಆಂಧ್ರ ತೆಲಂಗಾಣ ತಮಿಳುನಾಡು ಮತ್ತು ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಹಿನ್ನಲೆಯಲ್ಲಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದರುಶನ ಪಡೆದರು.ಸಾಮಾನ್ಯ ದಿನಗಳಲ್ಲಿ ಬೆಳಗ್ಗೆ 7 ಗಂಟೆಗೆ ಅಮ್ಮನ ದರ್ಶನ ಆರಂಭವಾಗುತ್ತದೆ ಅದರೆ ಇಂದು ಆಷಾಡದ ಭಾನುವಾರದ ಹಿನ್ನಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ಬೆಳಗ್ಗೆ 5 ಗಂಟೆಗೆ ದರ್ಶನ ಆರಂಭವಾಯಿತು,ಸಂಜೆ 5 ಗಂಟೆಯವರೆಗೂ ಭಕ್ತರ ದಟ್ಟಣೆ ಮುಂದುವರಿದಿತ್ತು. ಸುಮಾರು 40 ಸಾವಿರಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದ್ದು ವಿವಿಧ ಸೇವಾ ಟಿಕೆಟ್ ಗಳ ಮೂಲಕ ಒಂದೇ ದಿನದಲ್ಲಿ ರೂ.10.50 ಲಕ್ಷ ಆದಾಯ ಸಂಗ್ರಹವಾಗಿದೆ. ದೇಗುಲದ ಅಧ್ಯಕ್ಷ…
ಶ್ರೀನಿವಾಸಪುರ:ತಾಲೂಕಿನಲ್ಲಿ ಕಲ್ಲುಕ್ವಾರಿ ಹೊಂದಿರುವ ಪ್ರಭಾವಿ ವ್ಯಕ್ತಿಯೊಬ್ಬ ಆಂಧ್ರದ ಮದನಪಲ್ಲಿಯಲ್ಲಿ ಶಾಸಕನಾಗಲು ಪೈಪೋಟಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.ಶ್ರೀನಿವಾಸಪುರ ತಾಲೂಕು ತಾಡಿಗೊಳ್ ಗೆಟ್ ನಿಂದ ಗೌವನಿಪಲ್ಲಿ ರಸ್ತೆಯ ಕೊಡಿಪಲ್ಲಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕೊಂಡಾಮರಿ ಗ್ರಾಮದ ಬಳಿ ಎರಡು ದಶಕಗಳ ಹಿಂದೆ ಕಲ್ಲುಕ್ವಾರಿ ನಡೆಸಲು ಬಂದಂತ ಶ್ರೀರಾಮನೆನಿ ಜಯರಾಮ ನಾಯ್ಡು ಇಂದು ಪ್ರಭಾವಿ ವ್ಯಕ್ತಿಯಾಗಿ ಬೆಳೆದಿದ್ದಾರೆ. ಮೂಲತಃ ಹಳೇ ಚಿತ್ತೂರು ಜಿಲ್ಲೆಯ ಪುಲಿಚರ್ಲ ಗ್ರಾಮದವರಾದ ಜಯರಾಮ ನಾಯ್ಡು ಕಲ್ಲುಕ್ವಾರಿ ನಡೆಸಲು ಕ್ವಾರಿ ನಡೆಸುವ ಬಗ್ಗೆ ಅನುಭವ ಇರುವಂತ ಬೆಂಗಳೂರಿನ ಷಣ್ಮುಗ ಎನ್ನುವ ವ್ಯಕ್ತಿಯ ಸಹಾಯದಿಂದ ಶ್ರೀನಿವಾಸಪುರ ತಾಲೂಕಿನಲ್ಲಿ ಕಲ್ಲುಕ್ವಾರಿ ಪರವಾನಗಿ ಪಡೆದು ಶ್ರೀನಿವಾಸಪುರ ತಾಲೂಕಿನ ಸ್ಥಳೀಯ ರಾಜಕೀಯ ಮುಖಂಡರ ಸಹಕಾರದಿಂದ ಕ್ವಾರಿ ನಡೆಸುತ್ತಿದ್ದು ಗೆದ್ದೇತ್ತಿನ ಬಾಲ ಹಿಡಿದವರಂತೆ ಅಯಾ ಸಂದರ್ಭದ ಅನುಸಾರವಾಗಿ ಸ್ಥಳೀಯವಾಗಿ ಅಧಿಕಾರದಲ್ಲಿರುವಂತ ಲೊಕಲ್ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ನಾಯ್ಡು ಪ್ರಭಾವಿಯಾಗಿ ಬೆಳೆಯುತ್ತ ಹೋದ ನಂತರ ತನ್ನ ವ್ಯಾಪಾರ ವ್ಯವಹಾರಗಳನ್ನು ಬೆಂಗಳೂರಿನವರಿಗೂ ವಿಸ್ತರಿಸುತ್ತ ಬೆಳೆದಿದ್ದು ರಾಜಕೀಯವಾಗಿ ಒಂದು ಕೈ ನೋಡೇ ಬಿಡೋಣ ಎಂಬಂತೆ ರಾಜಕೀಯದಲ್ಲೂ…
ಶ್ರೀನಿವಾಸಪುರ: ನಾವು ಮಾಡಿರುವಂತ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಯಾರೆ ಸೇರ್ಪಡೆಯಾದರೂ ಅವರನ್ನು ಪಕ್ಷಕ್ಕೆ ಆತ್ಮೀಯವಾಗಿ ಸ್ವಾಗತಿಸುತ್ತೇನೆ ಪಕ್ಷದಲ್ಲಿ ಅವರನ್ನು ಗೌರವಿತವಾಗಿ ನಡೆಸಿಕೊಳ್ಳುತ್ತೇವೆ ಎಂದು ಶಾಸಕ ರಮೇಶ್ ಕುಮಾರ್ ಹೇಳಿದರು ಅವರು ಇಂದು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಪುರಸಭೆ ಅಧ್ಯಕ್ಷೆ ಲಲಿತಾ ಶ್ರೀನಿವಾಸ್ ಅವರನ್ನು ಪಕ್ಷಕ್ಕೆ ಸೇರ್ಪಡೆಮಾಡಿಕೊಂಡು ಮಾತನಾಡಿದರು.ಯಾವುದೇ ಅಧಿಕಾರದ ಆಮಿಷ ಷರತ್ತುಗಳನ್ನು ವಿಧಿಸದೆ ಪಕ್ಷಕ್ಕೆ ಬಂದಿರುವ ಅವರು ನಮ್ಮ ಜನಪರ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಹೆಣ್ಣುಮಗಳು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಆತ್ಮಿಯವಾಗಿ ಸ್ವಾಗತ ಕೋರಿದ್ದೇನೆ ಆಕೆಗೆ ನಮ್ಮ ಪಕ್ಷದ ಕಾರ್ಯಕರ್ತರು ಹಿತೈಷಿಗಳು ಸಹಕಾರ ನೀಡುವ ಮೂಲಕ ಆಕೆಯನ್ನು ಬೆಂಬಲಿಸೋಣ ಎಂದರು.ಪಟ್ಟಣದ ಅಭಿವೃದ್ದಿಗೆ ವಿಶೇಷವಾಗಿ ಚಿಂತನೆ ಮಾಡುತ್ತಿದ್ದೇನೆ ಪಟ್ಟಣದಲ್ಲಿ ರವಿಂದ್ರ ಕಲಾಕ್ಷೇತ್ರ ದಂತ ಸಾಂಸೃತಿಕ ಭವನ ನಿರ್ಮಿಸುವ ಉದ್ದೇಶ ಹೊಂದಿದ್ದು ಇದಕ್ಕಾಗಿ ಗೌರಿಬಿದನೂರಿನಲ್ಲಿರುವ ಕಲಾಭವನ ಮಾದರಿಯಲ್ಲಿ ವಿಶಾಲವಾದ ಭವನ ನಿರ್ಮಿಸುವುದಾಗಿ ಹೇಳಿದರು.ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಪುರಸಭೆ ಅಧ್ಯಕ್ಷೆ ಲಲಿತಾ ಶ್ರೀನಿವಾಸ್ ಮಾತನಾಡಿ ಶಾಸಕ…
ಶ್ರೀನಿವಾಸಪುರ: ಪ್ರಪಂಚ ಪ್ರಸಿದ್ದ ಮಾವಿನ ನಗರಿ ಶ್ರೀನಿವಾಸಪುರದಲ್ಲಿ ದಾಖಲೆ ಪ್ರಾಮಾಣದ ಧರದಲ್ಲಿ ತೋತಾಪುರಿ ಮಾವಿನಕಾಯಿ ಮಾರಾಟವಾಗಿದೆ.ಇದೊಂದು ಐತಿಹಾಸಿಕ ದಾಖಲೆ ಎನ್ನುತ್ತಾರೆ ಇಲ್ಲಿನ ಮಾವಿನ ಮಂಡಿ ವ್ಯಾಪರಸ್ಥರು. ಕೆಜಿಗೆ 47/-ಧರದಲ್ಲಿ ದಾಖಲೆ ಪ್ರಮಾಣಕ್ಕೆ ಮಾರಾಟವಾಗಿರುವ ಬಗ್ಗೆ ಮಾವು ಬೆಳೆಗಾರರೇ ಆಶ್ಚರ್ಯ ಭರಿತರಾಗಿದ್ದಾರೆ. ಮಾವಿನ ಸುಗ್ಗಿ ಬಹುತೇಕ ಮುಗಿಯುತ್ತ ಬಂದಿದೆ ಈ ಸಮಯದಲ್ಲಿ ಅಳಿದುಳಿದ ತೋತಾಪುರಿ ಮಾವಿನ ಕಾಯಿ ಒಂದು ಟನ್ ಇದ್ದರೆ ಅರ್ದಲಕ್ಷಕ್ಕೆ ಮಾರಬಹುದಾಗಿದೆ!ತೋತಾಪುರಿ(ಬೆಂಗಳೂರ ಕಾಯಿ) ಕೇವಲ ಮಾವಿನ ತಿರಳು(ಜ್ಯೂಸ್) ತಗೆಯಲು ಹಣ್ಣು ಸಂಸ್ಕರಣ ಘಟಕ ಜ್ಯೂಸ್ ಫ್ಯಾಕ್ಟರಿಗೆ ಮಾತ್ರ ಬಳಕೆಯಾಗುವ ತಳಿ ಇದನ್ನು ತಿನ್ನಲು ಯಾರು ಮುಂದಾಗುವುದಿಲ್ಲ ಖರಿದಿ ಮಾಡುವುದು ಕಡಿಮೆ ಪ್ರಮಾಣ ಅಂತಹ ಕಾಯಿ ಆರಂಭದಲ್ಲಿ ಕೆಜಿಗೆ ಧರ 10 ರಿಂದ 12 ರೂಪಾಯಿ ಮಾತ್ರ ಇತ್ತು ನಂತರದಲ್ಲಿ ಪ್ರತಿದಿನ ಕೆಜಿಗೆ 1 ರಿಂದ 2 ರೂಪಾಯಿಗೆ ಏರಿಕೆಯಾಗುತ್ತ ಬಂದಿತು ಆರಂಭದಲ್ಲಿ ತೋಟಗಳ ವ್ಯಾಪಾರಸ್ಥರು 10 ರಿಂದ 12 ಧರಕ್ಕೆ ಮಾರಾಟವಾಗುತ್ತಿದ್ದನ್ನು ಕಂಡು ಬೆಚ್ಚಿ ಬಿದ್ದಿದ್ದರು ನಂತರ ಏರಿಕೆಯಾಗುತ್ತಿದ್ದಂತೆ ಶಾಕ್…
ನ್ಯೂಜ್ ಡೆಸ್ಕ್: ಕೋಲಾರ ಮೀಸಲು ಲೋಕಸಭಾ ವ್ಯಾಪ್ತಿಯಲ್ಲಿನ ಮಾಜಿ ಶಾಸಕರಾಗಿರುವ ಇಬ್ಬರು ಪ್ರಭಾವಿ ಯುವ ರಾಜಕಾರಣಿಗಳು ಇಂದು ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಯಾಗಿದ್ದಾರೆ.ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಚಿಂತಾಮಣಿಯ ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ಅವರು ಇಂದು ದೇಹಲಿಯಲ್ಲಿ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಯಾಗಿರುವುದು ಕೋಲಾರ ರಾಜಕೀಯ ವಲಯದಲ್ಲಿ ಇದೊಂದು ವಿಶೇಷ ಚರ್ಚೆಗೆ ಗ್ರಾಸವಾಗಿದೆ.ಕೋಲಾರ ಲೋಕಸಭಾ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತ ಒಳರಾಜಕೀಯದಿಂದ ಬೆಸೆತ್ತ ಚಿಂತಾಮಣಿ ಸುಧಾಕರ್ ಕಾಂಗ್ರೆಸ್ ಪಕ್ಷದಿಂದ ಅಂತರ ಕಾದುಕೊಂಡು ದೂರ ಉಳಿದು ಎರಡು ಚುನಾವಣೆಯನ್ನು ಎದುರಿಸಿ ಸೋಲು ಅನುಭವಿಸಿದ್ದರು.ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸೇರ್ಪಡೆ ಕುರಿತಾಗಿ ಉದಾಸೀನರಾಗಿದ್ದರು ರಾಜ್ಯ ಕಾಂಗ್ರೆಸ್ ಮುಖಂಡರ ಮಾತಿಗೂ ಸೊಪ್ಪುಹಾಕದೆ ದೂರ ಉಳಿದ ಅವರು ಕಾಂಗ್ರೆಸ್ ಸೇರ್ಪಡೆಯಾಗಬೇಕಾದರೆ ಕೋಲಾರ ಲೋಕಸಭಾ ವ್ಯಾಪ್ತಿಯಲ್ಲಿ ಪಕ್ಷಕ್ಕೆ ಆಗಿರುವ ತೊಂದರೆ ಇಲ್ಲಿನ ಪಕ್ಷ ವಿರೋಧಿ ಬೆಳವಣಿಗಳನ್ನು ಎಐಸಿಸಿ ವರಿಷ್ಠರ ಗಮನಕ್ಕೆ ತಂದು ಆ ನಂತರ ಮುಂದುವರಿಯುವುದಾಗಿ ಹೇಳಿದ್ದರು,ಇದಕ್ಕೆ ಸುಧಾಕರ್…
ನ್ಯೂಜ್ ಡೆಸ್ಕ್:ಮುಖದ ಕಾಂತಿಹೆಚ್ಚಿಸಲು ಮತ್ತು ಮುಖದ ಮೇಲಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ತೆಂಗಿನ ಎಣ್ಣೆ ಹೇಗೆಲ್ಲಾ ಉಪಯೋಗವಾಗುತ್ತದೆ ತೆಂಗಿನ ಎಣ್ಣೆ ತ್ವಚೆಯ ಸೌಂದರ್ಯಕ್ಕೂ ಉತ್ತಮ ಸಹಕಾರಿಯಾಗಿದೆತೆಂಗಿನ ಎಣ್ಣೆಯಲ್ಲಿ ಫ್ಯಾಟಿ ಆಸಿಡ್ ಅಂಶ ಹೆಚ್ಚಾಗಿರುವ ಜೊತೆಗೆ ವಿಟಮಿನ್ ಈ ಅಂಶಅಪಾರವಾಗಿ ಕಂಡುಬರುತ್ತದೆ. ಹಾಗಾಗಿ ಇದೊಂದು ಅತ್ಯದ್ಭುತ ಸ್ಕಿನ್ ಮಾಯಿಸ್ಚರೈಸರ್ ಎಂದೇ ಹೇಳಬಹುದು.ಒಣ ಚರ್ಮದ ಸಮಸ್ಯೆಗೆ ತೆಂಗಿನ ಎಣ್ಣೆ ಮೊದಲ ಆಯ್ಕೆಯಾಗಿ ಉಪಯೋಗಿಸುವುದು ಉತ್ತಮ ಚರ್ಮದ ಭಾಗದಲ್ಲಿ ವಾಸಿಮಾಡುವ ಪ್ರಕ್ರಿಯೆಯಿಂದ ಹಿಡಿದು ತೇವಾಂಶವನ್ನು ನಿರ್ವಹಣೆ ಮಾಡಿ ನಿರ್ಜಲೀಕರಣದ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುತ್ತದೆ.ತೆಂಗಿನ ಎಣ್ಣೆ ನಿಮ್ಮ ಚರ್ಮದ ಮೇಲೆ ಅತ್ಯದ್ಭುತ ತಂತ್ರಗಾರಿಕೆಯ ವಿಧಾನದಲ್ಲಿ ಕಾರ್ಯನಿರ್ವಹಿಸಲಿದೆ ಚರ್ಮದ ಮೃದುತ್ವವನ್ನು ಹೆಚ್ಚಿಸುತ್ತದೆ ಜೊತೆಗೆ ಮುಖದಲ್ಲಿನ ಮೊಡವೆ ಕಲೆಗಳನ್ನು ನಿವಾರಣೆ ಮಾಡಿ ನೈಸರ್ಗಿಕವಾದ ಕಾಂತಿ ಒದಗಿಸುತ್ತದೆ.ಗಲ್ಲದ ಮೇಲೆ,ಕೆನ್ನೆಯ ಮೇಲೆ ತೆಂಗಿನ ಎಣ್ಣೆಯನ್ನು ನಯವಾಗಿ ಹಚ್ಚಿದರೆ.ಮೊಡವೆ ಅಥಾವ ಗುಳ್ಳೆಗಳನ್ನು ಹೋಗಲಾಡಿಸುವುದರೊಂದಿಗೆ ಚರ್ಮದ ಹೊಳಪು ಹೆಚ್ಚಾಗುತ್ತದೆ.ಮನೆಯಿಂದ ಹೊರಹೋಗುವ ಸಂದರ್ಭದಲ್ಲಿ ಸೂರ್ಯನ ತೀಕ್ಷ್ಣವಾದ ಕಿರಣಗಳಿಂದ ಚರ್ಮದ ಮೃದುತ್ವ ಮತ್ತು ಸೂಕ್ಷ್ಮಚರ್ಮವನ್ನು ರಕ್ಷಿಸಿಕೊಳ್ಳಲು ಚರ್ಮದ ಮೇಲೆ ಸನ್ಸ್ಕ್ರೀನ್…
ನ್ಯೂಜ್ ಡೆಸ್ಕ್:ಬಹಳಷ್ಟು ಜನರಿಗೆ ಪ್ರತಿ ದಿನ ಮಲ ವಿಸರ್ಜನೆ(ಲೆಟ್ರಿನ್) ಸಮರ್ಪಕವಾಗಿ ಆಗದೆ ಕಷ್ಟ ಅನುಭವಿಸುತ್ತಿರುತ್ತಾರೆ.ಕೆಲವರಿಗೆ ಬೆಳಗಿನ ಮಲ ವಿಸರ್ಜನೆ ಇನ್ನೊಂದು ಸಮಯಕ್ಕೆ ಬದಲಾಯಿಸಿಕೊಂಡು ಹೋಗಿರುತ್ತದೆ, ಇನ್ನು ಕೆಲವರಿಗೆ ವಿಪರೀತ ಹೊಟ್ಟೆ ನೋವು ಕಾಡಿ ನಂತರ ಬಾತ್ರೂಮ್ ಕಡೆಗೆ ಮುಖ ಮಾಡುವ ಹಾಗೆ ಆಗುತ್ತದೆ.ಇದೆಲ್ಲವನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳಲು ಸಂಕೋಚ ಪಡುವ ಜನ ವೈದ್ಯರ ಹತ್ತಿರ ಹೋಗಲು ಹಿಂದೇಟು ಹಾಕುವಂತವರು ಇದ್ದಾರೆ.ಕೆಲವರಿಗೆ ನಿತ್ಯದ ಜೀವನ ಪ್ರಾರಂಭವಾಗುವುದು ತಮ್ಮ ನಿತ್ಯಕರ್ಮ ಮುಗಿಸಿದ ನಂತರವೇ. ಒಂದು ವೇಳೆ ಯಾವುದೋ ಕಾರಣದಿಂದ ಈ ಪ್ರಕ್ರಿಯೆ ತಪ್ಪಿ ಹೋದರೆ, ಇಡೀ ದಿನ ಏನೋ ಕಳೆದುಕೊಂಡಂತೆ ಯಾವ ಕೆಲಸದ ಮೇಲೂ ಆಸಕ್ತಿ ತೋರದೆ ಜಡತ್ವ(ಗಿಡ್ಡಿನೆಸ್) ಅನುಭವಿಸುತ್ತಾರೆ.ಹಾಗಾದರೆ ಸರಾಗವಾಗಿ ಮಲ ವಿಸರ್ಜನೆ ಆಗದೇ ಇದ್ದರೆ ಅದಕ್ಕೆ ಕಾರಣಗಳು ಏನಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುವುದು ಸಹಜ ಮಲಬದ್ಧತೆಯ ಸಮಸ್ಯೆ ಎದುರಿಸುತ್ತಿರುವವರಿಗೆ ಇದಕ್ಕೆ ಪರಿಹಾರ ಏನು ಹೇಗೆ ಎಂಬ ಕುತುಹಲ ಜೋತೆಗೆ ಇನ್ನೇನು ಎಂಬ ಕೋಲಾಹಲ ಸಹ ಏರ್ಪಾಡಾಗಿರುತ್ತದೆ.ಈ ಸಮಸ್ಯೆಗೆ ಕಾರಣಗಳೇನು?ಮಲ…
ನ್ಯೂಜ್ ಡೆಸ್ಕ್: ಹುತ್ತದ ಮಣ್ಣು ಪ್ರಕೃತಿಯಲ್ಲಿನ ಸೃಷ್ಟಿ ಈ ಮಣ್ಣನ್ನು ರೋಗಗಳಿಗೆ ಮದ್ದಾಗಿ ಬಳಸಬಹುದು ಎಂದು ನಾಟಿ ವೈದ್ಯರುಗಳು ಸಾಬಿತುಪಡಿಸಿರುತ್ತಾರೆ.ಹುತ್ತದ ಮಣ್ಣಿನ ವೈದ್ಯವನ್ನು ಸರಳವಾಗಿ ಮನೆಯಲ್ಲೇ ಮಾಡಿಕೊಳ್ಳಬಹುದಾಗಿದೆ.ಹುತ್ತದ ಮಣ್ಣು ಕೀಲು ನೋವಿನ ಪರಿಹಾರಕ್ಕೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದಿಯಂತೆ ಹುತ್ತದ ಮಣ್ಣಿಗೆ ಪುಡಿ ಮಾಡಿದ ಬೆಲ್ಲ(ಹಳೆ ಕಾಲದ ಮುದ್ದೆ ಬೆಲ್ಲ ಉತ್ತಮ) ಹುಣಸೆ ಹಣ್ಣಿನ ನೀರು ಜೇನು ತುಪ್ಪ ಒಂದೇರಡು ಕಾಳು ಮೆಣಸಿನ ಪುಡಿ ಮತ್ತು ಅರಿಶಿಣ ಸೇರಿಸಿ ನೀರು ಹಾಕಿ ಲೇಪನ ಮಾಡುವಷ್ಟರ ಮಟ್ಟಿಗೆ ಬಿಸಿಮಾಡಿದ ನಂತರ ನೋವು ಇರುವ ಜಾಗಕ್ಕೆ ಬೆಚ್ಚಗಿರುವಂತೆ/ಸ್ವಲ್ಪ ಬಿಸಿ ಇರುವಂತೆ ದಿನಕ್ಕೆ ಒಂದೆರಡು ಬಾರಿ ಲೇಪನ ಮಾಡಿದರೆ ನೋವಿಗೆ ಪರಿಹಾರ ಕಾಣಬಹುದು ಎಂದು ನಾಟಿ ವೈದ್ಯರ ಅಭಿಪ್ರಾಯ.ಚರ್ಮರೋಗಗಳಿಗೂ ಸಹಕಾರಿಚರ್ಮರೋಗಕ್ಕೂ ಹುತ್ತದ ಮಣ್ಣನ್ನು ಬಳಸಬಹುದು. ಸೋರಿಯಾಸಿಸ್ ಗೂ ಕೂಡ ಪರಿಹಾರ ನೀಡುತ್ತದೆ ಹುತ್ತದ ಮಣ್ಣು, ಹುತ್ತದ ಮಣ್ಣನ್ನು ನುಣುಪಾಗಿ ಪುಡಿಮಾಡಿ ಇದನ್ನು ಗೋಮೂತ್ರದಲ್ಲಿ(ವಿಶೇಷವಾಗಿ ನಾಟಿ ಹಸುವಿನ ಗಂಜಲ)ಕಲಸಿ ಸೋರಿಯಾಸಿಸ್ ಇಲ್ಲವೇ ಇತರೆ ಚರ್ಮರೋಗ ಹರಡಿರುವ ಜಾಗಕ್ಕೆ…