Author: Srinivas_Murthy

ಶ್ರೀನಿವಾಸಪುರ:ಶ್ರೀನಿವಾಸಪುರ ತಾಲ್ಲೂಕು ಜೆ ತಿಮ್ಮಸಂದ್ರ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದ  ನಾಗೇಶ್ ರೆಡ್ಡಿ ರಾಜಿನಾಮೆ ನೀಡಿ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆದು ಕಲ್ಲೂರು ಗ್ರಾಮಪಂಚಾಯಿತಿ  ಸದಸ್ಯ ಶಂಕರರೆಡ್ಡಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.  ಜೆ ತಿಮ್ಮಸಂದ್ರ ಗ್ರಾಮ ಪಂಚಾಯತಿಯಲ್ಲಿ ಒಟ್ಟು 17 ಸದಸ್ಯರಿದ್ದು ಜೆಡಿಎಸ್ 13 ಹಾಗು ಕಾಂಗ್ರೇಸ್ 4 ಸದಸ್ಯರಿದ್ದು ಜೆಡಿಎಸ್  ಅಭ್ಯರ್ಥಿಯಾಗಿ ಬೆಂಗಳೂರಿನ ಉದ್ಯಮಿ ಶಂಕರರೆಡ್ಡಿ ಜೆಡಿಎಸ್ ಹಾಗು ಕಟಾರಮುದ್ದಲಪಲ್ಲಿ ಸದಸ್ಯೆ ಬಂಡಾಯ ಜೆಡಿಎಸ್ ಅಭ್ಯರ್ಥಿಯಾಗಿ ರತ್ನಮ್ಮ ನಾಮಪತ್ರ ಸಲ್ಲಿಸಿದ್ದರು.ಕೊನೆಯ ಹಂತದವರಿಗೂ ಇಬ್ಬರಲ್ಲಿ ಯಾರಬ್ಬರೂ ನಾಮಪತ್ರ  ಹಿಂಪಡೆಯದ ಹಿನ್ನೆಲೆಯಲ್ಲಿ ಅಧಿಕಾರಿ ರಾಜೇಶ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಿಸಿದರು ನಂತರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ  ಗೌಪ್ಯ ಮತದಾನ ನಡೆಸಲಾಗಿ ಜೆಡಿಎಸ್ ಬಂಡಾಯ ಅಭ್ಯರ್ಥಿ ರತ್ನಮ್ಮ 6 ಮತಗಳನ್ನು ಜೆಡಿಎಸ್  ಶಂಕರ್ ರೆಡ್ಡಿ  10 ಮತಗಳನ್ನು ಪಡೆದು ಜಯಶೀಲರಾಗಿರುತ್ತಾರೆ.ಅಭಿವೃದ್ಧಿಗೆ ಆದ್ಯತೆ  ನೂತನವಾಗಿ ಅಧ್ಯಕ್ಷರಾದ ಶಂಕರ್ ರೆಡ್ಡಿ ಮಾತನಾಡಿ ಪಂಚಾಯಿತಿ ಅಭಿವೃದ್ಧಿಗೆ  ಪಕ್ಷಾತೀತವಾಗಿ ಕಾರ್ಯನಿರ್ವಹಿಸುತ್ತೆನೆ.ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಪ್ರಥಮ ಆದ್ಯತೆ ನೀಡುವ ಮೂಲಕ…

Read More

ಚಿಂತಾಮಣಿ:ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರನೊಬ್ಬ ಸಾವನಪ್ಪಿರುವ ಘಟನೆ ನಡೆದಿದೆ ಎಂದು ಆಂಧ್ರದ ಪಿಟಿಎಂ, ಎಸ್ ಐ ನರಸಿಂಹ ತಿಳಿಸಿದ್ದಾರೆ. ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಪಿಟಿಎಂ ಮಂಡಲ ವ್ಯಾಪ್ತಿಯ ಮಲ್ಲೇಲ ಗ್ರಾಮದ ಚೆನ್ನರಾಯುನಿಪಲ್ಲಿ ಎಂಬಲ್ಲಿ ಟ್ರ್ಯಾಕ್ಟರ್ ಅತಿವೇಗ ಹಾಗು ಅಜಾಗ್ರತೆಯ ಚಾಲನೆ ಮಾಡಿದ ಪರಿಣಾಮ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಕರ್ನಾಟಕ ರಾಜ್ಯದ ಚಿಂತಾಮಣಿ ತಾಲೂಕು ಚಿಲಕಲನೇರ್ಪು ಗ್ರಾಮದ ರೈತ ರಾಮಾಂಜಿ (48) ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

Read More

ಶ್ರೀನಿವಾಸಪುರ:ಸರ್ಕಾರಿ ಕಾರ್ಯಕ್ರಮಗಳಿಗೆ ಬಾರದೆ ನಿರ್ಲಕ್ಷ್ಯ ಧೋರಣೆ ತೊರುವಂತ ಸರ್ಕಾರದ ಅಧಿಕಾರಿಗಳು ಯಾರೆ ಇರಲಿ ಅಂತಹವರು ತಾಲೂಕು ಬಿಟ್ಟು ತೊಲಗಿ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತೀವ್ರಧಾಟಿಯಲ್ಲಿ ಎಚ್ಚರಿಕೆ ನೀಡಿದರು ಅವರು ಕನಕ ಸಮುಧಾಯ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಮತ್ತು ತಾಲೂಕು ಕುರುಬ ಸಂಘದಿಂದ ಆಯೋಜಿಸಿದ್ದ ಕನಕದಾಸರ 537 ನೇ ಜಯಂತೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕನಕದಾಸರು ಮನುಕುಲದ ಹಿತಕ್ಕಾಗಿ ಜೀವನವನ್ನೆ ಮುಡುಪಾಗಿಟ್ಟವರು ಸಂತ ಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರ ಬದುಕು ಇಂದಿನ ಸಮಾಜಕ್ಕೆ ಆದರ್ಷ ಇಂತಹ ಸಂತನ ಕಾರ್ಯಕ್ರಮ ಆಯೋಜಿದ್ದರೆ ಕಾರ್ಯಕ್ರಮದಿಂದ ದೂರ ಉಳಿಯುವಂತ ಸರ್ಕಾರಿ ಅಧಿಕಾರಿಗಳ ಧೋರಣೆಯಿಂದ ಕಾರ್ಯಕ್ರಮದಲ್ಲಿ ಜನರೆ ಇಲ್ಲದಂತ ಪರಿಸ್ಥಿತಿ ಎರ್ಪಟ್ಟಿದೆ ಎಂದ ಅವರು ಅಧಿಕಾರಿಗಳದು ಅತಿಯಾಯಿತು ನಿಮಗೆ ತಾಲೂಕಿನ ಜನರು ಬೇಕಿಲ್ಲ ಅನ್ನುವುದಾದರೆ ನೀವು ತಾಲೂಕಿನಲ್ಲಿ ಇರುವುದು ಬೇಡ ಎಂದು ಏರು ಧ್ವನಿಯಲ್ಲಿ ಹೇಳಿದರು.ಕನಕದಾಸರ ಜಯಂತಿ ಕಾರ್ಯಕ್ರಮ ಖಾಸಗಿ ಕಾರ್ಯಕ್ರಮ ಅಲ್ಲ ಸರ್ಕಾರದ ಕಾರ್ಯಕ್ರಮ ಇಲ್ಲಿ ಸರ್ಕಾರಿ ಶೀಷ್ಟಾಚಾರದಂತೆ ಎಲ್ಲಾ ಇಲಾಖೆ ಅಧಿಕಾರಿಗಳು…

Read More

ಶ್ರೀನಿವಾಸಪುರ: ತಾಲೂಕು ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮತ್ತು ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಿಕ್ಷಕ ಭೈರೇಗೌಡ ಚುನಾಯಿತರಾಗಿದ್ದಾರೆ.ತಮ್ಮ ಸಮೀಪದ ಪ್ರತಿಸ್ಪರ್ಧಿಗಿಂತ 13 ಮತಗಳ ಅಂತರದಿಂದ ಚುನಾಯಿತರಾಗಿದ್ದು, ಖಜಾಂಚಿಯಾಗಿ ಕೈಗಾರಿಕಾ ತರಬೇತಿ ಇಲಾಖೆಯಎಂ.ಎಂ.ವೆಂಕಟೇಶ್ ಹಾಗು ರಾಜ್ಯ ಪರಿಷತ್ ಸ್ಥಾನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೆಂಕಟರೆಡ್ಡಿ ಅವಿರೋಧವಾಗಿ ಅಯ್ಕೆಯಾಗಿದ್ದಾರೆ.ಸರಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಜರುಗಿದ ಚುನಾವಣೆಯಲ್ಲಿ ಶಿಕ್ಷಕ ಭೈರೇಗೌಡ ಚುನಾಯಿತರಾದ ಬಗ್ಗೆ ಚುನಾವಣಾಧಿಕಾರಿ ತಿಪ್ಪಣ್ಣ ಘೋಷಣೆ ಮಾಡುತ್ತಿದ್ದಂತೆ ಭೈರೇಗೌಡರ ಆಪ್ತರು ಸಹದ್ಯೋಗಿಗಳು ನೌಕರರ ಭವನದ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಭೈರೇಗೌಡ ಮಾತನಾಡಿ ನಾನು ಚುನಾವಣೆ ಕಣದಲ್ಲೆ ಉಳಿಯಬಾರದು ಎಂದು ಷಡ್ಯಂತರ ರೂಪಿಸಿದ್ದರು ಅದನೆಲ್ಲ ಬೇಧಿಸಿ ಭರ್ಜರಿ ಜಯಬೇರಿ ಬಾರಿಸಿದೆ ನಂತರ ಈಗ ಅಧ್ಯಕ್ಷ ಸ್ಥಾನವನ್ನು ಸ್ನೇಹಿತರು ಹಿತೈಶಿಗಳು ಸಹದ್ಯೋಗಿ ಮಿತ್ರರ ಸಹಕಾರದಿಂದ ಗೆದ್ದಿರುವುದಾಗಿ ಹೇಳಿದ ಅವರು ಅಧ್ಯಕ್ಷ ಸ್ಥಾನಕ್ಕೆ ಗೌರವ ಬರುವ ನಿಟ್ಟಿನಲ್ಲಿ…

Read More

ಶ್ರೀನಿವಾಸಪುರ:ಸಾಂಪ್ರದಾಯಿಕ ಹಿಂದೂ ಪಂಚಾಂಗದ ಪ್ರಕಾರ ಕಾರ್ತಿಕ ಪೂರ್ಣಿಮೆಯು ಅತ್ಯಂತ ಶ್ರೇಷ್ಠವಾದ ದಿನವಾಗಿ ಪರಿಗಣಿಸಿ ಮಾಹಾ ಕಾರ್ತಿಕ ಎಂದು ಕರೆಯಲಾಗುವುದು.ಧಾರ್ಮಿಕವಾಗಿ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠತೆಯನ್ನು ಪಡೆದುಕೊಂಡಿದ್ದು ವಿಶೇಷವಾಗಿ ಶಿವನಿಗೆ ಮೀಸಲಾದ ದಿನ ಎಂದು ಹೇಳಲಾಗುತ್ತದೆ ಈ ಹಿನ್ನಲೆಯಲ್ಲಿ ಶ್ರೀನಿವಾಸಪುರ ಪಟ್ಟಣದ ಶ್ರೀ ಲಕ್ಷ್ಮೀನೃಸಿಂಹ ಸ್ವಾಮಿ ಆವರಣದಲ್ಲಿ ಭಕ್ತಸಮೂಹ ಗಿರಿಜಾ ಕಲ್ಯಾಣ ಮಹೋತ್ಸವವನ್ನು ಆಯೋಜಿಸಿದ್ದರು. ದೇವಾಲಯದ ಆವರಣದಲ್ಲಿ ಅಲಂಕರಿಸಿ ಸ್ಥಾಪಿಸಿದ್ದ ವೇದಿಕೆಯಲ್ಲಿ ಶ್ರೀನಿಲಕಂಟೇಶ್ವರ ಹಾಗೂ ಪಾರ್ವತಿದೇವಿ ಉತ್ಸವಮೂರ್ತಿಗಳನ್ನು ವಿಧಿವಿಧಾನಗಳಂತೆ ಅರ್ಚಕರು ಪ್ರತಿಷ್ಟಾಪಿಸಿದ್ದು ದೇವಾಲಯದಲ್ಲಿ ಕಲ್ಯಾಣ ಸಡಗರ ಕಳೆಗಟ್ಟಿತ್ತು ,ಮಂಗಳ ವಾದ್ಯಗೋಷ್ಠಿ, ಸಪ್ತ ನಾದಸ್ವರದೊಂದಿಗೆ ಮೆರುಗು ಹೆಚ್ಚಿಸಿತು.ಕಲ್ಯಾಣೋತ್ಸವದ ವೈಭೋಗವನ್ನು ಕಣ್ತುಂಬಿಕೊಳ್ಳಲು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು, ದೇವಾಲಯ ವಿದ್ಯುತ್‌ ದೀಪಾಲಂಕೃತಗೊಂಡು ಕಂಗೊಳಿಸುತಿತ್ತು. ಕಲ್ಯಾಣೋತ್ಸವ ನಿರ್ವಿಘ್ನವಾಗಿ ಸಾಗಲು ಪ್ರಾತಃಕಾಲ ಮಹಾಗಣಪತಿ ಪೂಜೆ ಸಲ್ಲಿಸಲಯಿತು.ಬೆಳಗ್ಗೆ ಮೂಲದೇವರ ಪ್ರಾರ್ಥನೆ ನೆರವೇರಿಸಲಾಯಿತು ನಂತರ ದೇವಾಲಯದ ಆವರಣದಲ್ಲಿ ಶ್ರೀಗಣಪತಿ,ನವಗ್ರಹ ಶ್ರೀಲಕ್ಷ್ಮೀನೃಸಿಂಹ ಹೋಮ ಹವನ ನೇರವೇರಿಸಲಾಯಿತು ನಂತರ ಶ್ರೀ ಸತ್ಯನಾರಯಣಸ್ವಾಮಿ ವ್ರತ ನಡೆದ ನಂತರ ಸಂಜೆ ಶುಭ ಮುಹೂರ್ತದಲ್ಲಿ ಜೊವಲರಿ ಮುರಳಿಕೃಷ್ಣ ಅವರ…

Read More

ಶ್ರೀನಿವಾಸಪುರ:ಬೆಂಗಳೂರಿನ ಜಿಕೆವಿಕೆಯಲ್ಲಿ ಇಂದಿನಿಂದ ಆರಂಭವಾದ ಕೃಷಿ ಮೇಳಕ್ಕೆ ಶ್ರೀನಿವಾಸಪುರದ ರೈತರು ತೆರಳಲು ದಿಗವಪಲ್ಲಿ ರಾಜಾರೆಡ್ದಿ,ನಿಲಟೂರುಚಂದ್ರಶೇಖರೆಡ್ದಿ ಹಾಗು ಪ್ರಶಾಂತರೆಡ್ದಿ ನೇತೃತ್ವದಲ್ಲಿ RCS ಮಂಡಿ ವತಿಯಿಂದ ಬಸ್ ವ್ಯವಸ್ಥೆ ಮಾಡಲಾಗಿತ್ತು.ನೂರಕ್ಕೂ ಹೆಚ್ಚು ಜನ ರೈತರನ್ನು ಶ್ರೀನಿವಾಸಪುರದಿಂದ ಎರಡು KSRTC ಬಸ್ಸುಗಳಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆರಂಬವಾದ ಕೃಷಿ ಮೇಳ-2024 ಕ್ಕೆ ಕರೆದುಕೊಂಡು ಹೋಗಿದ್ದರು.ಕೃಷಿ ಮೇಳಕ್ಕೆ ಹೋಗಿದ್ದ ರೈತಾಪಿ ಜನರಿಗೆ ಬೆಳಗಿನ ಉಪಹಾರ ಊಟದ ವ್ಯವಸ್ಥೆ ಮಾಡಿದ್ದ ವ್ಯವಸ್ಥಾಪಕರು ಸಂಜೆ ಚಿಕ್ಕಬಳ್ಳಾಪುರದ ಇಶಾ ಫೌಂಡೇಶ್ ಕರೆದುಕೊಂಡು ಹೋಗಿದ್ದರು.ಕೃಷಿ ಮೇಳ-2024 ಹವಾಮಾನ ಚತುರ ಡಿಜಿಟಲ್ ಕೃಷಿ ಎಂಬ ಘೋಷವಾಕ್ಯದಡಿ ಕೃಷಿ ಮೇಳ ಉದ್ಘಾಟನೆ ಮಾಡಲಾಗಿದ್ದು ಇಂದಿನಿಂದ (ನವೆಂಬರ್ 14) ನವೆಂಬರ್ 17 ರ ತನಕ ನಾಲ್ಕು ದಿನಗಳ ಕಾಲ ನಡೆಯುವಕೃಷಿ ಮೇಳದಲ್ಲಿ 2024ರ ವರ್ಷದಲ್ಲಿ ಕೃಷಿಯಲ್ಲಿ ಸಾಧನೆಗೈದ ಯುವ ರೈತ ಹಾಗೂ ಯುವ ರೈತ ಮಹಿಳೆಯರಿಗೆ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.ತಂತ್ರಜ್ಞಾನಗಳ ಪ್ರದರ್ಶನಕೃಷಿ ಡ್ರೋನ್,ರೊಬೊಟ್‌ ಕೃಷಿ ಯಂತ್ರ,ಮಲ್ಟಿಸ್ಪೆಕ್ಟ್ರಲ್‌ ಡ್ರೋನ್,ಸ್ವಯಂಚಾಲಿತ ಬೂಮ್‌…

Read More

ನ್ಯೂಜ್ ಡೆಸ್ಕ್:ತುಳಸಿ ಗಬ್ಬಾರ್ಡ್ ಸದ್ಯ ವಿಶ್ವಾದ್ಯಂತ ಸೋಷಿಯಲ್​ ಮೀಡಿಯಾಗಳಲ್ಲಿ ಹಾಗು ಸರ್ಚ್ ಇಂಜಿನಲ್ಲಿ ಹುಡುಕಲಾಗುತ್ತಿರುವ ಹೆಸರು ಈಕೆ ಅಮೆರಿಕದ ರಾಷ್ಟ್ರೀಯ ಗುಪ್ತಚರ (National Intelligence) ವಿಭಾಗದ ನಿರ್ದೇಶಕಿ ಈಕೆ ಮೂಲ ಭಾರತ ಅಲ್ಲ ಭಾರತದಲ್ಲಿ ಯಾವುದೆ ಸಂಪರ್ಕವೂ ಇಲ್ಲ ಸಂಬಂಧವೂ ಇಲ್ಲ ಆದರೆ ಈಕೆ ಹಿಂದು.ಅಮೆರಿಕದ ಮೊದಲ ಹಿಂದೂ ಸಂಸದೆ ಈ ಮೊದಲು ಡೆಮಾಕ್ರಟಿಕ್ ಪಕ್ಷದಲ್ಲಿದ್ದು 2022 ರಲ್ಲಿ ರಿಪಬ್ಲಿಕನ್‌ ಪಕ್ಷ ಸೇರಿದ ಇವರು ಡೊನಾಲ್ಡ್‌ ಟ್ರಂಪ್‌ ಅವರನ್ನು ಅಧ್ಯಕ್ಷ ಸ್ಪರ್ಧೆಗೆ ಅನುಮೋದಿಸಿದ್ದರು.ಹೇಗೆ ಈಕೆ ಹಿಂದುತುಲಸಿ ಗಬ್ಬಾರ್ಡ್ ಗೂ ಹಿಂದೂ ಧರ್ಮಕ್ಕೂ ಏನು ಸಂಬಂಧ ಎನ್ನುವುದಾದರೆ,43 ವರ್ಷದ ತುಳಸಿ ಅಮೆರಿಕಾದ ಸಮೋವಾ ಎನ್ನುವ ದ್ವೀಪದಲ್ಲಿ ಗಬ್ಬಾರ್ಡ್ ದಂಪತಿಗಳಿಗೆ ನಾಲ್ಕನೇ ಮಗಳಾಗಿ ಜನಿಸಿದರು ಅವರಿಗೆ ಎರಡು ವರ್ಷ ವಯಸ್ಸು ಇದ್ದಾಗ ತುಳಸಿ ಕುಟುಂಬ ಸಮೋವಾದಿಂದ ಹವಾಯಿ ದ್ವೀಪ ಸಮೂಹಕ್ಕೆ ವಲಸೆ ಹೋಗುತ್ತಾರೆ. ಇವರ ತಂದೆ ಕ್ರಿಶ್ಚಿಯನ್ ಆದರೂ,ಹಿಂದೂವಾಗಿ ಮತಾಂತರಗೊಂಡರು. ಅಷ್ಟೇ ಅಲ್ಲದೇ, ತಮ್ಮ ಎಲ್ಲಾ ಮಕ್ಕಳಿಗೂ ಹಿಂದೂ ಹೆಸರುಗಳನ್ನೇ ನಾಮಕರಣ ಮಾಡುತ್ತಾರೆ ಮನೆಯಲ್ಲಿ…

Read More

ನ್ಯೂಜ್ ಡೆಸ್ಕ್:ಕಾಶಿ ಸೇರಿದಂತೆ ವಿವಿಧ ಯಾತ್ರೆ ಹೋಗುವ ರಾಜ್ಯದ ಭಕ್ತರಿಗೆ ನೀಡುತ್ತಿರುವ ಸಹಾಯಧನವನ್ನು ಭಾರತದ ಪ್ರಸಿದ್ಧ ಯಾತ್ರ ಸ್ಥಳವಾದ ಜಮ್ಮು ಕಾಶ್ಮೀರದಲ್ಲಿನ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡುವ ರಾಜ್ಯದ ಭಕ್ತರಿಗೆ ತಲಾ 5,000 ರೂನಂತೆ ನೀಡುವುದಾಗಿ ಮುಜರಾಯಿ ಇಲಾಖೆ ಘೋಷಿಸಿದೆ.ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದಂತ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.ಸಭೆಯಲ್ಲಿ ಇತರೆ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು ಸರ್ಕಾರದ ಬಹುಮಹಡಿಗಳ ಕಟ್ಟಡ(ಎಂಎಸ್ ಬಿಲ್ಡಿಂಗ್) ಎದುರು ಇರುವ ಮುಜರಾಯಿ ಇಲಾಖೆಗೆ ಸೇರಿದ 3/4 ಎಕರೆ ಜಾಗದಲ್ಲಿ 10 ಕೋಟಿ ರೂ ವೆಚ್ಚದಲ್ಲಿ ‘ಧಾರ್ಮಿಕ ಸೌಧ’ ನಿರ್ಮಿಸಲು ಇಲಾಖೆ ತೀರ್ಮಾನ,120 ವರ್ಷಗಳಷ್ಟು ಹಳೆಯದಾದ ಮೈಸೂರಿನ ಸಂಸ್ಕೃತ ಮಹಾರಾಜ ಕಾಲೇಜಿನ ಸಂಸ್ಥೆಯ ಸಂಪೂರ್ಣ ಜೀರ್ಣೋದ್ಧಾರಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡುವ ಕೂರಿತು ತೀರ್ಮಾನ ಸೇರಿದಂತೆರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದ ಆಸ್ತಿಯ ಸರ್ವೇ. ಒತ್ತುವರಿ ತೆರವುಗೊಳಿಸಿ ದಾಖಲೆ ನೀಡುವುದು.ಅವಧಿ ಮುಗಿಯುವ 14 ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ…

Read More

ಶ್ರೀನಿವಾಸಪುರ:ಶ್ರೀನಿವಾಸಪುರ-ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೀಸಗಾನಹಳ್ಳಿ-ಅರಕೇರಿ ಗೇಟ್ ನಡುವೆ ಮ್ಯಾಂಗೋವ್ಯಾಲಿ ಹೋಟೆಲ್ ಬಳಿ ರಸ್ತೆಯಲ್ಲಿ ಕೆಟ್ಟುನಿಂತ ಟಿಪ್ಪರ್ ಲಾರಿಗೆ ಹಿಂದಿನಿಂದ ಕಂಟೈನರ್ ಲಾರಿ ಬಡಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಇಂದು ನಡೆದಿದೆ.ಮುಂಜಾನೆ 5 ಗಂಟೆ ಸಮಯದಲ್ಲಿ ನಡೆದಿರುವ ಅಪಘಾತದಲ್ಲಿ ಮೃತ ಪಟ್ಟಿರುವ ವ್ಯಕ್ತಿಯನ್ನು ಶ್ರೀನಿವಾಸಪುರ ತಾಲೂಕಿನ ಶಿವಪುರದ ಬಾಬು(40)ಎಂದು ಗುರುತಿಸಲಾಗಿದೆ.ಮುಂಜಾನೆ ನಸುಕಿನಲ್ಲಿ ಮುಳಬಾಗಿಲು ಕಡೆಯಿಂದ ಬಂದಂತ ಟಿಪ್ಪರ್ ಲಾರಿ ರಸ್ತೆಯಲ್ಲಿ ಕೆಟ್ಟುನಿಂತಿದ್ದು ಅದನ್ನು ರೀಪೇರಿ ಮಾಡಲು ಶಿವಪುರದ ಬಾಬು ಹಾಗು ಸಹಾಯಕ ಮುನೀಂದ್ರಬಾಬು ಲಾರಿ ಇಳಿದು ರಿಪೇರಿ ಮಾಡುತ್ತಿದ್ದರು ಈ ಸಂದರ್ಭದಲ್ಲಿ ಮುಳಬಾಗಿಲು ಕಡೆಯಿಂದ ಅತಿ ವೇಗವಾಗಿ ಬಂದಂತ ಕಂಟೈನರ್ ಲಾರಿ ನಿಂತಿದ್ದ ಟಿಪ್ಪರ್ ಲಾರಿಗೆ ಹಿಂದಿನಿಂದ ಡಿಕ್ಕಿ ಹೋಡದಿದೆ ಹೋಡೆದ ರಭಸಕ್ಕೆ ನಿಂತಿದ್ದ ಟಿಪ್ಪರ್ ಮುಂದೆ ಚಲಿಸಿ ಪಕ್ಕಕ್ಕೆ ಉರಳಿ ಬಿದಿದೆ ರಸ್ತೆಯಲ್ಲಿ ರಿಪೇರಿ ಮಾಡುತ್ತಿದ್ದ ಶಿವಪುರದ ಬಾಬು ತಲೆ ಮೇಲೆ ಲಾರಿ ಹರಿದಿದ್ದು ಸ್ಥಳದಲ್ಲೆ ಬಾಬು ಮೃತ ಪಟ್ಟಿರುತ್ತಾನೆ.ಸಹಾಯಕನಾಗಿದ್ದ ಮುನೀಂದ್ರಬಾಬು ಕಾಲುಗಳ ಮೇಲೆ ಟಿಪ್ಪರ್ ಹರಿದ ಪರಿಣಾಮ ಎರಡು ಕಾಲುಗಳು…

Read More

ನ್ಯೂಜ್ ಡೆಸ್ಕ್:ಪ್ರಿಯತಮೆಯೊಂದಿಗೆ ವಿವಾಹಕ್ಕೆ ಅಡ್ಡಿಪಡಿಸಿದ ಎಂದು ಪ್ರಿಯತಮೆಯ ತಂದೆಯ ಮೇಲೆ ಪಾಗಲ್ ಪ್ರೇಮಿ ಗುಂಡು ಹಾರಿಸಿರುವ ಘಟನೆ ನಡೆದಿದೆ.ಇದರಿಂದ ಪ್ರಿಯತಮೆಯ ತಂದೆ ರೇವಂತ್ ಆನಂದ್ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೈದರಾಬಾದ್ ನಗರದಲ್ಲಿ ನಡೆದಿದೆ.ಘಟನೆಯ ವಿವರಕ್ಕೆ ಹೋದರೆ ಹೈದರಾಬಾದ್ ನಗರದ ಅಂಬರ್ ಪೇಟೆಯ ಭಾಗದ ಬಲ್ವಿಂದರ್ ಸಿಂಗ್ (25) ಹಾಗೂ ಸರೂರ್ನಗರ ವ್ಯಾಪ್ತಿಯ ವೆಂಕಟೇಶ್ವರ ಕಾಲೋನಿಯ ಯುವತಿ (23) ಕೆಲ ದಿನಗಳಿಂದ ಪ್ರಿತಿಸುತ್ತಿದ್ದರು.ವಿಷಯ ತಿಳಿದುಕೊಂಡ ಯುವತಿ ತಂದೆ ಇದನ್ನು ವಿರೋಧಿಸಿ ಯುವತಿಯನ್ನು ಅಮೆರಿಕಕ್ಕೆ ಕಳುಹಿಸಿದ್ದಾರೆ ಇದನ್ನು ತಿಳಿದುಕೊಂಡ ಪ್ರೇಮಿ ಬಲ್ವಿಂದರ್ ಸಿಂಗ್ ಬಾಲಕಿಯ ತಂದೆ ರೇವಂತ್ ಆನಂದ್ ಜತೆ ವಾಗ್ವಾದಕ್ಕೆ ಇಳಿದಿದ್ದಾನೆ. ಮಾತಿಗೆ ಮಾತು ಬೆಳದಿದೆ ತನ್ನೊಂದಿಗೆ ತಂದಿದ್ದ ಏರ್ ಗನ್ ನಿಂದ ಯುವತಿ ತಂದೆ ರೇವಂತ್ ಆನಂದ್ ಮೇಲೆ ಗುಂಡು ಹಾರಿಸಿದ್ದಾನೆ.ಗುಂಡು ರೇವಂತ್ ಆನಂದ್ ಕಣ್ಣಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದಾರೆ. ರೇವಂತ್ ಆನಂದ್ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.…

Read More