Author: Srinivas_Murthy

ನ್ಯೂಜ್ ಡೆಸ್ಕ್:ಅಂಗನವಾಡಿ ನೌಕರರನ್ನು ಮತ್ತು ಸಿಬ್ಬಂದಿಯನ್ನು ಖಾಯಂ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಗುಜರಾತ್ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.ನಾಲ್ಕನೇ ದರ್ಜೆ ಗುತ್ತಿಗೆ ನೌಕರರಿಗೂ ₹15 ಸಾವಿರ ಸಂಬಳ ನೀಡಲಾಗುತ್ತಿದ್ದು, ಇನ್ನು ಅಂಗನವಾಡಿ ಸಿಬ್ಬಂದಿಗಳಿಗೆ ₹5-10 ಸಾವಿರ ಗೌರವಧನ ನೀಡಲಾಗುತ್ತಿದೆ ಎಂದು 1983 ಮತ್ತು 2010 ರ ನಡುವೆ ಕೇಂದ್ರದ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ (ICDS) ಯೋಜನೆಯಡಿಯಲ್ಲಿ ನೇಮಕಗೊಂಡ AWW ಗಳು ಮತ್ತು AWH ಗಳು ಸಲ್ಲಿಸಿದ ಅರ್ಜಿಗಳ ಮೇಲೆ ನ್ಯಾಯಾಲಯವು ತನ್ನ ತೀರ್ಪು ನೀಡಿದೆ.10 ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡಿದರೂ, ದಿನಕ್ಕೆ ಆರು ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡಿದರೂ ಯಾವುದೇ ಪ್ರಯೋಜನವಾಗದೆ ಗೌರವಧನವಾಗಿ ಅತ್ಯಲ್ಪ ಮೊತ್ತವನ್ನು ನೀಡಲಾಗಿದೆ ಎಂದು ತಮ್ಮ ಮನವಿಯಲ್ಲಿ ತಿಳಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಇದರೊಂದಿಗೆ ಪೀಠವು ಅವರನ್ನು ಸರ್ಕಾರಿ ಸೇವೆಗೆ ತರಬೇಕು ಮತ್ತು ವೇತನ ಶ್ರೇಣಿಯ ಬಗ್ಗೆ ನಮೂದಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಿದೆ.

Read More

ಶ್ರೀನಿವಾಸಪುರ:ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ಕರ್ನಾಟಕ ಹೊಂದಿದೆ ಎಂದು ವಿಷನ್ ಇಂಡಿಯಾ ಶಾಲೆಯ ಮುಖ್ಯಸ್ಥ ಡಾ.ವೇಣುಗೋಪಾಲ್ ಹೇಳಿದರು ಅವರು ಇಂದು ತಾಲೂಕಿನ ರೋಣೂರು ಕ್ರಾಸ್ ನಲ್ಲಿರುವ ವಿಷನ್ ಇಂಡಿಯಾ ಶಾಲಾ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕನ್ನಡದ ನೆಲದಲ್ಲಿ ಆಡಳಿತ ನಡೆಸಿದ ಸಾಮ್ರಾಜ್ಯಗಳು ಕನ್ನಡವನ್ನು ಆಡಳಿತ ಭಾಷೆಯನ್ನಾಗಿಸಿಕೊಂಡಿದ್ದವು,ಈ ನೆಲದಲ್ಲಿ ತತ್ತ್ವಜ್ಞಾನಿಗಳು,ಕವಿಗಳು ಆರಂಭಿಸಿದ ಭಾಷಾ ಹಾಗು ಸಾಹಿತ್ಯ ಪರಂಪರೆ ಇಂದಿನವರಿಗೂ ಉಳಿದು,ಬೆಳೆದು ಬಂದಿದೆ ಎಂದರು.ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಪೊಲೀಸ್ ಇನ್ಸಪೇಕ್ಟರ್ ಮಹಮದ್ ಗೊರವನಕೊಳ್ಳ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಕೋರಿ ಕರ್ನಾಟಕದ ನೆಲದಲ್ಲಿ ಭಾಷೆ, ಸಂಸ್ಕೃತಿ ಉಳಿದು, ಬೆಳೆದು ಬರುತ್ತಿದೆ. ಆಚಾರ ವಿಚಾರದಲ್ಲಿ ವೈವಿಧ್ಯತೆ ಇದ್ದರೂ ಭಾಷ ನೆಲಗಟ್ಟಿನಲ್ಲಿ ವಿವಿಧತೆಯಲ್ಲಿ ಏಕತೆ ಎನ್ನುವಂತೆ ಭಾಷ ಸೌಹಾರ್ದತೆಯನ್ನು ಕಾಪಾಡಿಕೊಂಡು ಬಂದಿದ್ದೇವೆ ಹೊರಗಿನಿಂದ ಬರುವರಿಗೆ ಕನ್ನಡದ ಭಾಷೆ ನಾವು ಕಲಿಸಬೇಕು ಎಂದರು.ಕ್ಷೇತ್ರ ಶಿಕ್ಷ ಣಧಿಕಾರಿ ಲಕ್ಷ್ಮಯ್ಯ.ಬಿಜೆಪಿ ತಾಲೂಕು ಅಧ್ಯಕ್ಷ ರೋಣೂರುಚಂದ್ರು,VIP ಶಾಲೆಯ ಮುಖ್ಯೋಪಾದ್ಯಯೆ ತಬಸಮ್,ಶಿಕ್ಷಕ ವೇಣುಗೋಪಾಲ್,ಶಿವಣ್ಣ ಮುಂತಾದವರು ಇದ್ದರು. ವರದಿ:ನಂಬಿಹಳ್ಳಿಸುರೇಶ್

Read More

ನ್ಯೂಜ್ ಡೆಸ್ಕ್:ತೆಲಂಗಾಣ ರಾಜ್ಯದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಆರೋಗ್ಯವಂತರಾಗಿ ಬದುಕಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಸಿಎಂ ರೇವಂತ್ ಪ್ರಧಾನಿಗೆ ಧನ್ಯವಾದ ತಿಳಿಸಿದ್ದಾರೆ.ವಿದ್ಯಾರ್ಥಿ ದಸೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆತೆಲಂಗಾಣದ ವಿಭಜಿತ ಮಹಬೂಬ್ ನಗರ ಜಿಲ್ಲೆಯಲ್ಲಿ ಸಿಎಂ ರೇವಂತ್ ರೆಡ್ಡಿ ಕಾಲೇಜು ದಿನಗಳಲ್ಲಿಯೇ ನಾಯಕರಾಗಿ ಹೊರಹೊಮ್ಮಿದ್ದರು. ನಂತರದಲ್ಲಿ ರಾಜಕೀಯ ಪ್ರವೇಶಿಸಿದ ಅವರಿಗೆ 2006 ರಲ್ಲಿ ಜಿಲ್ಲಾಪಂಚಾಯಿತಿ ಸ್ಥಾನಕ್ಕೆ ಸ್ಪರ್ದಿಸಲು ಯಾವ ಪಕ್ಷದವರು ಟಿಕೆಟ್ ನೀಡದ ಹಿನ್ನಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ZPTC ಸ್ಪರ್ದಿಸಿ ವಿಜೇತರಾದರು ನಂತರ 2007 ರಲ್ಲಿ MLC ಯಾಗಿ ಸಂಚಲನಾತ್ಮಕವಾಗಿ ಗೆಲವು ಸಾಧಿಸಿದರು ನಂತರ, ಅವರು ಚಂದ್ರಬಾಬು ನಾಯಕತ್ವ ಮೆಚ್ಚಿ ತೆಲಗುದೇಶಂ ಪಕ್ಷಕ್ಕೆ ಸೇರ್ಪಡೆಯಾದರು ಮತ್ತು ತೆಲಂಗಾಣ ಪಕ್ಷದ ಘಟಕದ ಅಧ್ಯಕ್ಷರಾದರು. ನಂತರದ ರಾಜಕೀಯ ಬೆಳವಣಿಗೆಯಲ್ಲಿ ತೆಲಂಗಾಣ ರಾಜ್ಯ ಉದ್ಭವಾದ ನಂತರ ತಮ್ಮ ರಾಜಕೀಯ ಅಸ್ತಿತ್ವ ಉಳಸಿಕೊಳ್ಳಲು ಅವರು ಕಾಂಗ್ರೆಸ್ ಸೇರಿ ಟಿಪಿಸಿಸಿ ಅಧ್ಯಕ್ಷ ಸ್ಥಾನ…

Read More

ನ್ಯೂಜ್ ಡೆಸ್ಕ್:ಮಹಿಳೆಯರ ಬಟ್ಟೆಗಳನ್ನು ಪುರುಷರು ಹೊಲಿಯಬಾರದು ಎಂದು ಉತ್ತರಪ್ರದೇಶ ರಾಜ್ಯದ ಮಹಿಳಾ ಆಯೋಗ ಹೇಳಿದೆ. ಪುರುಷರು ಹೊಲಿದರೆ bad touch ಕಾಯ್ದೆಗೆ ಬರುತ್ತದೆ ಎಂದಿರುವ ಆಯೋಗ, ಮಹಿಳೆಯರ ಬಟ್ಟೆಯ ಅಳತೆಯನ್ನು ಮಹಿಳೆಯರೇ ತೆಗೆದುಕೊಳ್ಳಬೇಕು ಮತ್ತು ಟೈಲರಿಂಗ್ ಅಂಗಡಿಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಆದೇಶಿಸಿದೆ.ಮಹಿಳೆಯರ ತಲೆ ಕೂದಲನ್ನು ಸಹ ಪುರುಷರು ಕತ್ತರಿಸದೆ ಮಹಿಳೆಯರೆ ಕತ್ತರಿಸಬೇಕು ಎಂಬ ಪ್ರಸ್ತಾವನೆಯನ್ನು ಉತ್ತರಪ್ರದೇಶ ಸರ್ಕಾರಕ್ಕೆ ಸಲ್ಲಿಸಿದೆ. ಮಹಿಳೆಯರನ್ನು bad touch ನಿಂದ ರಕ್ಷಿಸಲು ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ.

Read More

ಸಿನಿಡೆಸ್ಕ್:ಸಿನಿಮಾ ರಂಗವೆ ಹಾಗೆ ನಟಿ-ನಟರ ಬದುಕಿನಲ್ಲಿ ಸರಸ-ವಿರಸ-ಪ್ರೇಮ-ವಿರಹ-ವೇದನೆ-ವಿಚ್ಛೇದನ ಇವೆಲ್ಲವೂ ಸಾಮಾನ್ಯ ಇಂದು ಜೊತೆ ಜೊತೆಯಲ್ಲಿ ಓಡಾಡ, ಮರು ದಿನವೇ ವಿಚ್ಛೇದನ ಮಾಮೂಲಿಯಂಬಂತಾಗಿದೆ ಕೆಲವರು ವಯಸ್ಸಲ್ಲದ ವಯಸ್ಸಿನಲ್ಲಿ ಮದುವೆಯಾಗಿ ಎಲ್ಲರನ್ನು ನಿಬ್ಬೇರಗಾಗಿಸುತ್ತಾರೆ. ಟ್ರೋಲಿಗರ ಬಾಯಿಗೆ ಆಹಾರವೂ ಆಗುತ್ತಾರೆ. ಇದಕ್ಕೆ ಸ್ಪಷ್ಟ ಉದಾಃರಣೆ ಎಂದರೆ ಮಲಯಾಳಂ ಕಿರುತೆರೆ ನಟ ಕ್ರಿಸ್ ವೇಣುಗೋಪಾಲ್ ಮತ್ತು ನಟಿ ದಿವ್ಯಾ ಶ್ರೀಧರ್ ಮದುವೆಯಾದ್ದಾರೆ. ಮೊನ್ನೆಯಷ್ಟೇ ಗುರುವಾಯೂರು ದೇವಸ್ಥಾನದಲ್ಲಿ ಕ್ರಿಸ್ ವೇಣುಗೋಪಾಲ್ ಮತ್ತು ದಿವ್ಯಾ ಶ್ರೀಧರ್ ಸಪ್ತಪದಿಯನ್ನು ತುಳಿದು ಹೊಸ ಬದುಕನ್ನು ಕಟ್ಟಿಕೊಂಡಿದ್ದಾರೆ. ಇವರಿಬ್ಬರ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹದ್ದು ಮೀರಿದ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಇಬ್ಬರ ನಡುವಿನ ವಯಸ್ಸಿನ ಅಂತರ ಒಂದು ಕಾರಣ ಅನ್ನುವುದಾದರೆ ಹಣ, ಅಂತಸ್ತು ಮತ್ತು ದೈಹಿಕ ಸುಖ ಎಂದು ಕಾರಣ ನೀಡಿ ಚರ್ಚೆ ಮಾಡುತ್ತಿದ್ದಾರೆ.ಮಲಯಾಳಂ ಕಿರುತೆರೆಯಲ್ಲಿ ಖಳನಾಯಕಿಯ ಪಾತ್ರದಲ್ಲಿ ಖ್ಯಾತರಾದ ದಿವ್ಯಾಶ್ರೀಧರ್ ತಮ್ಮದೇ ಛಾಪು ಮೂಡಿಸಿರುವ ಅಂದಗಾತಿ ಆಕೆ ತಮ್ಮ ಮೊದಲ ಪತಿಯಿಂದ ಇಬ್ಬರು ಮಕ್ಕಳನ್ನು ಪಡೆದಿದ್ದು ಕಾರಣಾಂತರಗಳಿಂದ ಪತಿಯಿಂದ ದೂರವಾಗಿದ್ದ ದಿವ್ಯಾ…

Read More

ನ್ಯೂಜ್ ಡೆಸ್ಕ್:ಇತ್ತೀಚೆಗೆ ನಡೆದ ಅಮೇರಿಕಾದ ಚುನಾವಣೆಯಲ್ಲಿ ತೆಲುಗಿನ ಖ್ಯಾತ ನಟ ಬಾಲಕೃಷ್ಣ ಹೆಸರು ನಮೂದಿಸಿ ಮತ ಚಲಾಯಿಸಿದ್ದಾರೆ ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ನಂದಮೂರಿ ಯುವರತ್ನ ಬಾಲಕೃಷ್ಣ (ಬಾಲಕೃಷ್ಣ) ಅವರನ್ನು ತೆಲುಗು ಜನರೆಲ್ಲ ಪ್ರೀತಿಯಿಂದ ಕರೆಯುವುದು ಜೈ ಬಾಲಯ್ಯ ಎಂದು ಈ ಬಾಲಯ್ಯ ಹೆಸರನ್ನು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲೂ ಅಲ್ಲಿನ ಮತದಾನದ ಹಕ್ಕು ಪಡೆದವನೊಬ್ಬ ಮತಪತ್ರದಲ್ಲಿ ನಮೂದಿಸಿ ಅಭಿಮಾನಿಯೊಬ್ಬ ತನ್ನ ಅಭಿಮಾನವನ್ನು ಮೆರೆದಿದ್ದಾನೆ ಈ ಬ್ಯಾಲೆಟ್ ಪೇಪರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ವ್ಯಾಪಕ ಟೀಕೆಅಮೇರಿಕಾ ಅಧ್ಯಕ್ಷ ಚುನಾವಣೆ ಬ್ಯಾಲೆಟ್ ಪೇಪರನಲ್ಲಿ ಬಾಲಯ್ಯ ಹೆಸರು ಬರೆದಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು ಮೌಲ್ಯಯುತ ಮತವನ್ನು ದುರ್ಬಳಕೆ ಮಾಡಿಕೊಂಡಿದ್ದ ಬಗ್ಗೆ ಕೆಲವರು ಪ್ರಶ್ನಿಸುತ್ತಿದ್ದಾರೆ. ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಅಣಕ ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ ಹಾಕಿದವರ ವಿರುದ್ಧ ಪ್ರಕರಣ ದಾಖಲಿಸಿ ಅಮೆರಿಕದ ಪೌರತ್ವ ರದ್ದುಪಡಿಸಿದರೆ ಮತದ ಮೌಲ್ಯ ಗೊತ್ತಾಗುತ್ತದೆ. ಎನ್ನುವ ಮಾತು ಕೇಳಿಬರುತ್ತಿದೆ.

Read More

ನ್ಯೂಜ್ ಡೆಸ್ಕ್: ಶ್ರೀನಿವಾಸಪುರದ ಹಾಲಿ ಹಾಗು ಮಾಜಿ ಶಾಸಕರು ಚನ್ನಪಟ್ಟಣ ಉಪಚುನಾವಣೆಯಲ್ಲಿ ಚುನಾವಣಾ ಕ್ಯಾಂಪೈನ್ ಗಾಗಿ ರೌಂಡ್ಸ್ ಹೋಗಿದ್ದಾರೆ.ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕೋಡಂಬಳ್ಳ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಜೋತೆಗೂಡಿ ಚುನಾವಣೆ ಪ್ರಚಾರ ಮಾಡಿದ ಅವರು ತಾವು ಕೋಲಾರಕ್ಕೆ ಕೆ.ಸಿ.ವ್ಯಾಲಿ ತಂದದ್ದ ಬಗ್ಗೆ ಹೇಳಿ ನಿಮ್ಮ ಸ್ಥಳೀಯ ವ್ಯಕ್ತಿ ಯೋಗೇಶ್ವರ್ ನಿಮ್ಮೂರ ಕೆರೆಗಳಿಗೆ ನೀರು ತುಂಬಿಸಿದ್ದಾನೆ ಆತನ ಶ್ರಮಕ್ಕೆ ಗೌರವ ನೀಡಲು ಆತನನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿ ಎಂದು ಮತ ಯಾಚಿಸಿದರು.ಇವರೊಂದಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ,ಮಾಲೂರು ಶಾಸಕ ನಂಜೇಗೌಡ,ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಮೇಕಲನಾರಯಣಸ್ವಾಮಿ,ಸಂತೋಷರೆಡ್ಡಿ ಸೇರಿದಂತೆ ಹಲವರು ಇದ್ದರು. ಹಾಲಿ ಶಾಸಕ ವೆಂಕಟಶಿವಾರೆಡ್ಡಿ ಸಹ ಚನ್ನಪಟ್ಟಣ ಉಪಚುನಾವಣೆಯಲ್ಲಿ NDA ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿ ಮಾತನಾಡಿ ಚನ್ನಪಟ್ಟಣ ಕ್ಷೇತ್ರದಲ್ಲಿ ದೇವೇಗೌಡರ ದೂರದೃಷ್ಟಿಯಿಂದ ಚನ್ನಪಟ್ಟಣ ಸಸ್ಯಶಾಮಲವಾಗಿದೆ ಅವರ ಸೇವೆಯನ್ನು ಇಲ್ಲಿನ ಜನ ಮರೆಯಬಾರದು, ಕೇಂದ್ರ ಸಚಿವರಾಗಿರುವ…

Read More

ನ್ಯೂಜ್ ಡೆಸ್ಕ್:ಎಣ್ಣೆ ಪಾರ್ಟಿಯಲ್ಲಿನ ಖರ್ಚು ಭಾಗಮಾಡಿಕೊಳ್ಳುವಾಗ ವ್ಯತ್ಯಾಸ ಆಗಿ ಕಡಿಮೆ ಹಣ ಕೊಟ್ಟಿದ್ದಲ್ಲದೆ ಸೋದರಮಾವನನ್ನು ಬಡಿದು ಸಾಯಿಸಿರುವ ಘಟನೆ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ನಡೆದಿದೆ. ಮಾವ ಮನೋಜ್ ಹಾಗು ಅವನ ಸೋದರಳಿಯ ಧರಮ್ ಠಾಕೂರ್ ಸೇರಿ ಡಿಯೋರಿ ತಪಾರಿಯಾ ಎಂಬ ಗ್ರಾಮದಲ್ಲಿ ಎಣ್ಣೆ ಹಾಗು ಚಿಕನ್ ಪಾರ್ಟಿ ಮಾಡಿದ್ದಾರೆ ನಂತರ ಒಟ್ಟು ಲೆಕ್ಕದಲ್ಲಿ ಖರ್ಚು ಸಮಭಾಗ ಹಂಚಿಕೊಳ್ಳುವಾಗ ಇಬ್ಬರ ನಡಿವೆ ಜಗಳ ಆಗಿದೆ ನೀನು ಕಡಿಮೆ ಹಣ ಕೊಟ್ಟಿರುವುದಾಗಿ ಮನೋಜ್ ಖ್ಯಾತೆ ತಗೆದಿದ್ದಾನೆ ಇದಕ್ಕೆ ಧರಮ್ ಠಾಕೂರ್ ಆಕ್ಷೆಪ ವ್ಯಕ್ತಪಡಿಸಿದ್ದಾನೆ ಇಬ್ಬರು ಕೈ ಕೈ ಮೀಲಾಯಿಸಿಕೊಂಡು ಜಗಳ ಮಾಡಿಕೊಂಡಿದ್ದಾರೆ ಕುಪಿತಗೊಂಡ ಧರಮ್ ಠಾಕೂರ್ ತನ್ನ ಮಾವ ಮನೋಜ್‌ ನನ್ನು ಕೋಲಿನಿಂದ ಹೊಡೆದು ಕೊಂದಿದ್ದಾನೆ.

Read More

ಶ್ರೀನಿವಾಸಪುರ:ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಮಹಿಳೆಯೊಬ್ಬಳ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕು ಕಸಬಾ ಹೋಬಳಿ ಪಾಳ್ಯ ಗ್ರಾಮದಲ್ಲಿ ನಡದಿದೆ.ಕೊಲೆಯಾದ ಮಹಿಳೆಯನ್ನು ಗ್ರಾಮದ ಶ್ರೀರಾಮರೆಡ್ಡಿ ಎಂಬುವರ ಪತ್ನಿ ರೂಪಾ (38) ಎಂದು ಗುರುತಿಸಲಾಗಿದೆ.ಸೋಮವಾರ ಮಧ್ಯಾಹ್ನ ರೂಪಾ ಹಸು ಮೇಯಿಸಲು ಹೋದವರು ಮುಸ್ಸಂಜೆಯಾದರು ಮನೆಗೆ ವಾಪಸ್ಸು ಬಾರದ ಹಿನ್ನಲೆ ಕುಟುಂಬಸ್ಥರು ಗ್ರಾಮದ ಸುತ್ತಮುತ್ತಲು ಹುಡುಕಾಡಿದಾಗ ಗ್ರಾಮದ ಹೊರವಲಯದ ಚುರುವುನಹಳ್ಳಿಗೆ ಹೋಗುವ ದಾರಿಯಲ್ಲಿನ ಕೆರೆ ಕಾಲುವೆ ಬಳಿ ರೂಪಾ ರಕ್ತದ ಮಡವಿನಲ್ಲಿ ಶವವಾಗಿ ಬಿದ್ದಿರುವುದು ಪತ್ತೆಯಾಗಿದೆ ಕುಟುಂಬದವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಶ್ರೀನಿವಾಸಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ಇತ್ತು ಪರಿಶೀಲನೆ ನಡೆಸಿದ್ದಾರೆ, ಮೊಬೈಲ್ ಕಾಲ್ ತನಿಖೆ ಒಳಪಡಿಸಿದಾಗ ಕೊಲೆ ಆರೋಪಿ ಸುಳಿವು ಸಿಕ್ಕಿದೆ ಗ್ರಾಮದ ಆನಂದಪ್ಪ ಎಂಬುದನ್ನು ಪತ್ತೆ ಹಚ್ಚಿದ್ದಾರೆ ಪೋಲಿಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಮೃತ ಮಹಿಳೆಯೊಂದಿಗೆ ಅಕ್ರಮ ಸಂಬಂಧದ ಇದ್ದ ವಿಚಾರ ಬೆಳಕಿಗೆ ಬಂದಿದೆ. ಕೊಲೆಯಾದ ಮಹಿಳೆ ಹಾಗು ಆರೋಪಿ ನಡುವೆ…

Read More

ಶ್ರೀನಿವಾಸಪುರ:ಕಾರು ಹಾಗೂ ದ್ವಿಚಕ್ರವಾಹನ ನಡುವೆ ನಡೆದ ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಕೋಡಿಚೆರವು ನಾರಯಣಸ್ವಾಮಿ(65) ಸ್ಥಳದಲ್ಲಿ ಮೃತಪಟ್ಟಿರುತ್ತಾರೆ.ಶ್ರೀನಿವಾಸಪುರ-ಕೋಲಾರ ರಸ್ತೆಯ ಚಲ್ದಿಗಾನಹಳ್ಳಿ ಕ್ರಾಸ್ ನಲ್ಲಿ ಸೋಮವಾರ ಸಂಜೆ ಅಪಘಾತ ನಡೆದಿದ್ದು ಮೃತ ನಾರಯಣಸ್ವಾಮಿ ಕುಂಬಾರ ಸಮಾಜದ ಮುಖಂಡರು,ಕೊಡಿಚೆರುವು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹಾಗು ಜೆಡಿಎಸ್ ಮುಖಂಡ ಜೋತೆಗೆ ಮಾಜಿ ಸಂಸದ ಹಾಲಿ ಮಂತ್ರಿ ಕೆ.ಹೆಚ್.ಮುನಿಯಪ್ಪ ನವರ ಆಪ್ತರಾಗಿದ್ದರು.ಅಪಘಾತದಲ್ಲಿ ಕಾರು ಹಾಗೂ ದ್ವಿಚಕ್ರ ಎರಡು ವಾಹನಗಳು ಸಂಪೂರ್ಣ ಜಕಂ ಗೊಂಡಿದ್ದು ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೋಂಡಿದ್ದಾರೆ ಶ್ರೀನಿವಾಸಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More