Author: Srinivas_Murthy

ಶ್ರೀನಿವಾಸಪುರ:ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮ ಸಡಗರದಿಂದ ನಡೆಯುತ್ತಿದೆ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡಿಗರಿಗೆ ಕನ್ನಡದಲ್ಲೇ ಶುಭಕೋರಿ ರಾಜ್ಯೋತ್ಸವ ಅತ್ಯಂತ ವಿಶೇಷವಾದ ಸಂದರ್ಭವಾಗಿದ್ದು, ಇದು ಕರ್ನಾಟಕದ ಅನುಕರಣೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗುರುತಿಸುತ್ತದೆ ಎಂದು ಹೇಳಿದ್ದಾರೆ.ಇದು ಪ್ರಧಾನಿಯವರ ಸೌಹಾರ್ದತೆ ಇಂತಹುದರಲ್ಲಿ ಸಂಭ್ರಮದಿಂದ ಆಚರಿಸಬೇಕಾಗಿದ್ದ ಕನ್ನಡ ರಾಜ್ಯೋತ್ಸವ ಶ್ರೀನಿವಾಸಪುರದಲ್ಲಿ ಕಳಾಹೀನವಾಗಿದ್ದು ಇಲ್ಲಿನ ಕನ್ನಡಾಭಿಮಾನಿಗಳು ತಾಲೂಕು ಆಡಳಿತದ ವಿರುದ್ದ ಸಿಡಿದೆದ್ದು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಅಧ್ಯಕ್ಷ ತಾಲೂಕು ತಹಶೀಲ್ದಾರ್ ಧೋರಣೆಯನ್ನು ತೀವ್ರವಾಗಿ ವಿರೋಧಿಸಿ ವೇದಿಕೆಯಿಂದ ಹೋರನಡೆದ ಘಟನೆ ಇಂದು ಬಾಲಕೀಯ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಇಂದು ನಡೆಯಿತು.ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಂಪ್ರದಾಯದಂತೆ ರಾಷ್ಟ್ರೀಯ ಧ್ವಜದ ಜೋತೆಗೆ ಕನ್ನಡ ಭಾವುಟ ಹಾರಿಸುವುದು ಇಲ್ಲಿನ ಸಂಪ್ರದಾಯ ಇದನ್ನು ಮುರಿದ ತಾಲೂಕು ಆಡಳಿತ ರಾಷ್ಟ್ರೀಯ ಧ್ವಜ ಮಾತ್ರ ಹಾರಿಸಿ ಕನ್ನಡ ಭಾವುಟ ಹಾರಿಸದೆ ನಿರ್ಲಕ್ಷಿಸಿದದ್ದಲ್ಲದೆ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀಭುವನೇಶ್ವರಿ ಭಾವಚಿತ್ರ ಕೂಡ ಪ್ರಷ್ಠಾಪಿಸದೆ…

Read More

ನ್ಯೂಜ್ ಡೆಸ್ಕ್:ದೀಪಾವಳಿ ಸಂಭ್ರಮಿಸಬೇಕು ಎಂದು ಪಟಾಕಿ ತಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಪಟಾಕಿ ಸಿಡಿದು ಒರ್ವ ಸಾವನಪ್ಪಿ ಆರು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಆಂಧ್ರದಲ್ಲಿ ನಡೆದಿದೆ.ಆಂಧ್ರದ ಏಲೂರಿನಲ್ಲಿ ನಡೆದ ಪಟಾಕಿ ಸ್ಫೋಟದ ಘಟನೆ ಅಗಿದ್ದು ಹೇಗೆ ಎಂದರೆ ಬೈಕ್‌ನಲ್ಲಿ ಪಟಾಕಿ ಸಾಗಿಸುತ್ತಿದ್ದಾಗ ಘಟನೆ ಸಂಭವಿಸಿದೆ. ಏಕಾಏಕಿ ನಡೆದ ಸ್ಪೋಟಕದಿಂದ ಜನರಲ್ಲಿ ಭಯದ ವಾತವರಣ ಉಂಟಾಗಿದ್ದು ಏನಾಯಿತು ಎಂದು ತಿಳಿಯದೆ ಸ್ಥಳೀಯರು ಕೆಲಕಾಲ ಗೊಂದಲಕ್ಕೆ ಸಿಲುಕಿದರು. ಕೊನೆಗೆ ಪಟಾಕಿ ಸಿಡಿದ ವಿಷಯ ತಿಳಿದ ಜನರು ನಿರಾತಂಕ ವ್ಯಕ್ತಪಡಿಸಿದರು. ಸುಧಾಕರ್ ಎಂಬ ವ್ಯಕ್ತಿ ಪಟಾಕಿ ಖರೀದಿಸಿ ಅದನ್ನು ಬೈಕನಲ್ಲಿ ಮನೆಗೆ ತಗೆದುಕೊಂಡು ಹೋಗುತ್ತಿದ್ದಾನೆ ಈ ಸಂದರ್ಬದಲ್ಲಿ ಸಾಗುತ್ತಿದ್ದ ಬೈಕ್ ರಸ್ತೆಯಲ್ಲಿ ಆಯಾತಪ್ಪಿ ರಸ್ತೆ ಗುಂಡಿಗೆ ಬಿದ್ದಿದೆ ಬೈಕ್ ಬಿದ್ದ ರಭಸಕ್ಕೆ ಬೈಕ್ ನೊಂದಿಗೆ ಇಟ್ಟುಕೊಂಡಿದ್ದ ಪಟಾಕಿ ಸ್ಪೋಟಗೊಂಡಿದೆ. ಬಾರಿ ಸದ್ದುಮಾಡುವ ಅಟಂಬಾಂಬು ಪಟಾಕಿ ಬಾರಿ ಸದ್ದಿನೊಂದಿಗೆ ಸ್ಫೋಟಗೊಂಡಿದೆ ಸ್ಫೋಟದಲ್ಲಿ ಸುಧಾಕರ್ ಅವರ ದೇಹ ಛಿದ್ರವಾಗಿದ್ದು ಸ್ಫೋಟದ ಪ್ರಮಾಣವನ್ನು ಊಹಿಸಬಹುದಾಗಿದೆ.

Read More

ಚಿಂತಾಮಣಿ: ಚಿಂತಾಮಣಿ ನಗರದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಸಂಬಂದಿಸಿದಂತೆ ಶೀಘ್ರದಲ್ಲೇ ಮಂಜೂರಾತಿ ನೀಡಲಾಗುವುದು ಎಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.ಅವರು ಚಿಂತಾಮಣಿ ನಗರ ಹೊರವಯಲದ ಚಿಂತಾಮಣಿ-ಶಿಡ್ಲಘಟ್ಟ ರಸ್ತೆಯ ಕೋನಪಲ್ಲಿ ಬಳಿ ಸುಮಾರು 5.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ನೂತನ ಸಾರಿಗೆ ಇಲಾಖೆ RTO ಕಟ್ಟಡ ಲೋಕಾರ್ಪಣೆ ಮಾಡಿ ಮಾತನಾಡಿದರುಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯ ಸಾರಿಗೆ ಸಂಸ್ಥೆಗೆ ನೂತನವಾಗಿ 6400 ಬಸ್ ಖರೀದಿ,9 ಸಾವಿರ ಸಿಬ್ಬಂದಿ ನೇಮಕಾತಿ,1 ಸಾವಿರ ಮಂದಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲಾಗಿದೆ.ಕಳೆದ 4 ವರ್ಷಗಳ ಬಿಜೆಪಿ ಆಡಳಿತಾವಧಿಯಲ್ಲಿ ಒಂದೂ ಬಸ್ ಖರೀದಿ ಆಗಿರಲಿಲ್ಲ.14 ಸಾವಿರ ಜನ ಸಿಬ್ಬಂದಿ ನಿವೃತ್ತಿ ಹೊಂದಿದ್ದರೂ ನೇಮಕಾತಿ ಮಾಡಿರಲಿಲ್ಲ. ಅನುಕಂಪದ ಆಧಾರ ಯೋಜನೆಯನ್ನೂ ಯಾರಿಗೂ ಉದ್ಯೋಗ ನೀಡಿರಲಿಲ್ಲ ಎಂದು ದೂರಿದರು.ಶಕ್ತಿ ಯೋಜನೆಯ ನಂತರ ರಾಜ್ಯದಲ್ಲಿ ಪ್ರತಿನಿತ್ಯ 20 ಲಕ್ಷ ಜನರು ಸಂಚರಿಸುತ್ತಿದ್ದಾರೆ.ಬಸ್ ಗಳ ಖರೀದಿ, ಸಿಬ್ಬಂದಿಯ ನೇಮಕಾತಿ ನಡೆಯುತ್ತಿದೆ. ವಿವಿಧೆಡೆ ಪ್ರಾದೇಶಿಕ ಸಾರಿಗೆ ಕಚೇರಿಗಳನ್ನು…

Read More

ಕೋಲಾರ:ದೀಪಾವಳಿ ಸಂದರ್ಭದಲ್ಲಿ ಪಟಾಕಿ ಮಾರಾಟ ಮಾಡುವವರು ಕಡ್ಡಾಯವಾಗಿ ಸರ್ಕಾರ ಸೂಚಿಸಿರುವ ನಿಯಮಗಳನ್ನು ಪಾಲಿಸಬೇಕು ಎಂದು ಕೋಲಾರ ಜಿಲ್ಲಾ ಎಸ್ಪಿ ನಿಖಿಲ್ ಸೂಚಿಸಿದ್ದಾರೆ ಹಾಗೆ ಪಟಾಕಿ ಸುಡುವಂತ ಮಕ್ಕಳ ಬಗ್ಗೆ ಪೋಷಕರು ಹೆಚ್ಚಿನ ನಿಗಾ ವಹಿಸಿ ಮಕ್ಕಳ ಕುರಿತಾಗಿ ಕಾಳಜಿ ವಹಿಸುವಂತೆ ಹೇಳಿದ್ದಾರೆ.ಬೆಳಕಿನ ಹಬ್ಬ ದೀಪಾವಳಿ ಎಷ್ಟು ಬೆಳಕು ಮತ್ತು ಆನಂದವನ್ನು ತರುತ್ತದೋ ಹೆಚ್ಚರ ತಪ್ಪಿದರೆ ಕುಟುಂಬಗಳಲ್ಲಿ ದುಃಖ ಮನೆ ಮಾಡುತ್ತದೆ ಆದ್ದರಿಂದ ಪಟಾಕಿಯನ್ನು ಸುಡುವರು ಹಾಗು ಮಾರುವಂತವರು ಹೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.

Read More

ನ್ಯೂಜ್ ಡೆಸ್ಕ್:ಮಾಧ್ಯಮ ಸಂಸ್ಥೆಯ ಮುಖ್ಯಸ್ಥ ಬಿ.ಆರ್.ನಾಯ್ಡು(72) ಅವರನ್ನು ತಿರುಮಲ ತಿರುಪತಿ ದೇವಸ್ಥಾನದ ಅಧ್ಯಕ್ಷರನ್ನಾಗಿ ಆಂಧ್ರಪ್ರದೇಶ ಸರ್ಕಾರ ಘೋಷಿಸಿದೆ.ಇವರೊಂದಿಗೆ 23 ಸದಸ್ಯರ ಆಡಳಿತ ಮಂಡಳಿಯನ್ನು ಸಹ ಪ್ರಕಟಿಸಿದೆ. ಆಂಧ್ರ ಸರ್ಕಾರ ಬುಧವಾರ ಹೊರಡಿಸಿರುವ ತಿರುಮಲ ತಿರುಪತಿ ದೇವಸ್ಥಾನದ ನೂತನ ಆಡಳಿತ ಮಂಡಳಿಯಲ್ಲಿ ಆಂಧ್ರದವರು 11 ಮಂದಿ ಇದ್ದು ಅವರಲ್ಲಿ ನಾಲ್ವರು ಶಾಸಕರಿದ್ದಾರೆ, ತೆಲಂಗಾಣದಿಂದ ಐವರು, ಕರ್ನಾಟಕದ ಮೂವರು,ತಮಿಳುನಾಡಿನ ಇಬ್ಬರು,ಗುಜರಾತ್ ಮತ್ತು ಮಹಾರಾಷ್ಟ್ರದಿಂದ ತಲಾ ಒಬ್ಬರಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನೊಂದು ಸ್ಥಾನವನ್ನು ಬಿಜೆಪಿಯಿಂದ ಮತ್ತೊಂದು ಹೆಸರು ಪ್ರಸ್ತಾಪವಾಗಬೇಕಿದ್ದು ಅಲ್ಲಿಂದ ಹೆಸರು ಬಂದರೆ ತಕ್ಷಣ ಆ ಸದಸ್ಯನನ್ನೂ ನೇಮಕ ಮಾಡಲಾಗುವುದು ಎಂದಿರುತ್ತಾರೆ.ಈ ಬಾರಿ ಟಿಟಿಡಿ ಆಡಳಿತ ಮಂಡಳಿ ಸದಸ್ಯರಲ್ಲಿ ಅರ್ಧದಷ್ಟು ಸ್ಥಾನವನ್ನು ಇತರೆ ರಾಜ್ಯಗಳಿಗೂ ಅವಕಾಶ ಕಲ್ಪಿಸಿದೆ.ನೂತನ ಆಡಳಿತ ಮಂಡಳಿ ಸದಸ್ಯರು ಇವರೆಟಿಟಿಡಿ ನೂತನ ಸದಸ್ಯರಲ್ಲಿ ಆಂಧ್ರಪ್ರದೇಶದ ಕೋಟಾದಲ್ಲಿ ಜಗ್ಗಂಪೇಟೆ ಶಾಸಕ ಜ್ಯೋತುಲಾ ನೆಹರು,ಮಡಕಶಿರಾ ಶಾಸಕ ಎಂ.ಎಸ್.ರಾಜು, ಕೊವ್ವೂರು ಶಾಸಕಿ ಪ್ರಶಾಂತಿ ರೆಡ್ಡಿ,ಕೇಂದ್ರಸರ್ಕಾರದ ಮಾಜಿ ಸಚಿವೆ ಪನಬಾಕ ಲಕ್ಷ್ಮಿ, ಸೇರಿದಂತೆ ಜಾಸ್ತಿ ಪೂರ್ಣ ಸಾಂಬಶಿವರಾವ್, ನನ್ನಪನೇನಿ…

Read More

ನ್ಯೂಜ್ ಡೆಸ್ಕ್: ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲ್ ನಲ್ಲಿದ್ದ ನಟ ದರ್ಶನ್‌ ಅವರಿ​ಗೆ ಇಂದು ಹೈಕೋರ್ಟ್ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು ಈ ವಿಚಾರವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆ ನೀಡಿ ದರ್ಶನ್ ಅವರು ನನಗೆ ತುಂಬಾ ಆಪ್ತರಾಗಿದ್ದು ಅವರಿಗೆ ಜಾಮೀನು ಸಿಕ್ಕಿರುವುದು ನನಗೆ ಖುಷಿಯಾಗಿದೆ ಎಂದು ತಿಳಿಸಿದ್ದಾರೆ.ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಚುನಾವಣೆ ಕ್ಯಾಂಪೈನ್ ನಲ್ಲಿರುವ ಸಚಿವ ಜಮೀರ್ ಅಹ್ಮದ್ ಖಾನ್ ಇಂದು ಮಾಧ್ಯಮಗಳೊಂದಿಗೆ ಮಾತನಾಡಿ ನ್ಯಾಯಾಲಯದಲ್ಲಿ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದೆ ಎಂದು ಗೊತ್ತಾಯಿತು. ಅವರು ನನ್ನ ಆಪ್ತರು. ಆತ್ಮೀಯರಾಗಿರುವ ಕಾರಣಕ್ಕೆ ಜಾಮೀನು ಸಿಕ್ಕಿರುವುದು ಸಹಜವಾಗಿಯೇ ಖುಷಿ ತಂದಿದೆ. ಅವರ ಆರೋಗ್ಯ ವಿಚಾರಿಸುತ್ತೇನೆ. ಅಲ್ಲದೆ ಈ ಘಟನೆಗೂ ಮುನ್ನ ಆಗಾಗ ಭೇಟಿಯಾಗುತ್ತಿದ್ದೆವು ಎಂದು ಹೇಳಿದರು.ಇದೆ ವೇಳೆ ಉಪಚುನಾವಣೆ ಕುರಿತಂತೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಇಡೀ ರಾಜ್ಯವನ್ನು ಅಭಿವೃದ್ಧಿ ಮಾಡಿದ್ದಾರೆ. ಆದರೆ ಬೊಮ್ಮಾಯಿ ರಾಜ್ಯ ಇರಲಿ, ತಮ್ಮ ಕ್ಷೇತ್ರವನ್ನೂ ಸಹ ಅಭಿವೃದ್ಧಿ ಮಾಡಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ…

Read More

ಶ್ರೀನಿವಾಸಪುರ:ಸರ್ಕಾರಿ ನೌಕರರ ಸಂಘದ ಸೋಮವಾರ ನಡೆದ ಶಿಕ್ಷಕರ ಕ್ಷೇತ್ರದ ಚುನಾವಣೆ ಯಾವುದೇ ಸಾರ್ವತ್ರಿಕ ಚುನಾವಣೆಗಳಿಗೂ ಕಡಿಮೆ ಇಲ್ಲದಂತೆ ಅಭ್ಯರ್ಥಿಗಳು ಮತದಾರರನ್ನು ನಾನಾ ರೀತಿಯಲ್ಲಿ ಕಸರತ್ತು ನಡೆಸಿ ಮತಯಾಚಿಸುತ್ತಿದ್ದರು.ತಾಲೂಕಿನ 24 ಇಲಾಖೆ ವ್ಯಾಪ್ತಿಯಲ್ಲಿ 32 ಸ್ಥಾನಗಳಿಗೆ 27 ಸ್ಥಾನಗಳ ಅವಿರೋಧ ಅಯ್ಕೆಯಾಗಿದ್ದು ಇದರಲ್ಲಿ ಪ್ರಮುಖ ಇಲಾಖೆಗಳಾದ ಆರೋಗ್ಯ ಇಲಾಖೆಯಿಂದ 4 ಕಂದಾಯ ಇಲಾಖೆಯಲ್ಲಿ 3 ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 2 ಭೂಮಾಪನ ಇಲಾಖೆಯಲ್ಲಿ 2 ಸೇರಿದಂತೆ ಉಳಿದ ಎಲ್ಲಾ ಇಲಾಖೆಯಿಂದ ತಲಾ ಒಬ್ಬರು ಅಯ್ಕೆಯಾಗಿದ್ದಾರೆ. ಕೆಲ ಇಲಾಖೆಗಳಲ್ಲಿ ನೌಕರರು ಕನಿಷ್ಠ ಸಂಖ್ಯೆಯಲ್ಲೂ ಇಲ್ಲದ ಕಾರಣ ಕೆಲವೊಂದು ಇಲಾಖೆಗಳ ಜೋತೆ ಸೇರಿಸಿ ಪ್ರತಿನಿಧಿಗಳನ್ನು ಅಯ್ಕೆ ಮಾಡಿಕೊಳ್ಳಲಾಗಿದೆ.ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ,ಪ್ರೌಢಶಾಲಾ ಶಿಕ್ಷಕರ ಸಂಘದ ಹಾಗು ಬಿಇಒ ಕಚೇರಿ ನೌಕರರ ಸಂಬಂದಿಸಿದಂತೆ ಅಭ್ಯರ್ಥಿಗಳು ಚುನಾವಣೆಗೆ ಮುಂದಾಗಿದ್ದು ಇದರಲ್ಲಿ ಪ್ರೌಡಶಾಲೆ ಶಿಕ್ಷಕರ ಕ್ಷೇತ್ರದಲ್ಲಿ 160 ಮತದಾರರಿದ್ದು ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದರೆ,ಕ್ಷೇತ್ರ ಶಿಕ್ಷಣ ಇಲಾಖೆ ಕಚೇರಿಯಲ್ಲಿ 14 ಮತದಾರಲ್ಲಿ ಒಮ್ಮತ ಇಲ್ಲದೆ ಒಂದು ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು…

Read More

ನ್ಯೂಜ್ ಡೆಸ್ಕ್:ಹಿರಿಯ ನಾಗರಿಕರ ಆರೋಗ್ಯ ವೃದ್ಧಿಸುವಂತಹ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಾಗಿದ್ದು ದೇಶದ ಹಿರಿಯ ನಾಗರಿಕರಿಗೆ ಇಂಥದ್ದೊಂದು ಶುಭಸುದ್ಧಿಗೆ ಅನುಮೋದನೆ ನೀಡಿದ್ದಾರೆ.ದೇಶದ 70 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ ಉತ್ತಮ ಆರೋಗ್ಯ ಸೌಲಭ್ಯಗಳು ಸಿಗಲಿ ಎಂಬ ಉದ್ದೇಶದಿಂದ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB PM-JAY) ಅನ್ನು ಔಪಚಾರಿಕವಾಗಿ ಪ್ರಧಾನಿ ಮೋದಿ ಅವರು ಪ್ರಾರಂಭಿಸಲಿದ್ದಾರೆ. ಆರ್ಥಿಕ ವ್ಯವಸ್ಥೆಯನ್ನು ಪರಿಗಣಿಸದೆ 70 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ ಆರೋಗ್ಯ ಸೌಲಭ್ಯಗಳು ಸಿಗಬೇಕು ವಾರ್ಷಿಕವಾಗಿ ರೂ.5 ಲಕ್ಷದವರೆಗೆ ಮೌಲ್ಯದ ಪ್ರಯೋಜನವನ್ನು ಪಡೆಯಬಹುದಾಗಿದ್ದು 29 ಸಾವಿರಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ AB-PMJAYಸೇವೆ ಲಭ್ಯವಿದೆ. ಅರ್ಹ ಅಭ್ಯರ್ಥಿಗಳು PMJAY ಪೋರ್ಟಲ್ ಅಥವಾ ಆಯುಷ್ಮಾನ್ ಭಾರತ್ ಆಪ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.

Read More

ನ್ಯೂಜ್ ಡೆಸ್ಕ್: ಚನ್ನಪಟ್ಟಣ ಉಪಚುನಾವಣೆ ರಾಜ್ಯದಲ್ಲಿ ಅಲ್ಲ ಇಡೀ ದೇಶದ ಗಮನ ಸೇಳೆದು ದೇಶಾದ್ಯಂತ ಸದ್ದು ಮಾಡುತ್ತಿದೆ. ಸ್ವಕ್ಷೇತ್ರದಲ್ಲಿ ಮಗನನ್ನು ಗಲ್ಲಿಸಿಕೊಳ್ಳಲು ಪಣ ತೊಟ್ಟಿರುವ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಭಾನುವಾರ ಪತ್ನಿ ಸೊಸೆ ಮೊಮ್ಮಗನೊಂದಿಗೆ ಹಾಸನಾಂಬೆ ದರ್ಶನ ಪಡೆದರು.ಪುತ್ರ ನಿಖಿಲ್​ ಚನ್ನಪಟ್ಟಣದಲ್ಲಿ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಮಾಡಿದರು.ಹಾಸನಾಂಬೆಗೆ ಪೂಜೆಯ ನಂತರ ಕುಮಾರಸ್ವಾಮಿ ಕುಟುಂಬ ಸಮೇತ ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಸಿದ್ದೇಶ್ವರ ಸ್ವಾಮಿ ಬಲಭಾಗದಿಂದ ಹೂ ಪ್ರಸಾದ ಸಿಕ್ಕಿದೆ ಇದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರಿಗೆ ಶುಭ ಸೂಚನೆ ಎಂಬ ಕುತೂಹಲಕಾರ ವಿಚಾರ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.ಹಿಂದೂ ಸಂಪ್ರದಾಯದ ಪದ್ಧತಿಗಳಲ್ಲಿ ದೇವರ ಪೂಜೆ ನಡೆಯುವ ವೇಳೆ ಪ್ರಾರ್ಥಿಸುವಾಗ ಅಕಸ್ಮಾತಾಗಿ ದೇವರ ಮೂರ್ತಿಯ ಬಲಗಡೆಯಿಂದ ಹೂವು ಬಿದ್ದರೆ ಶುಭ ಶಕುನ ಹಾಗೂ ಮನಸಲ್ಲಿ ಬೇಡಿಕೊಂಡಿರುವ ಇಚ್ಛೆ ನೇರವೇರುತ್ತದೆ ಎಂಬುದು ನಂಬಿಕೆ ಇದೆ ಅನುಭವ ಹೆಚ್ ಡಿ ಕುಮಾರಸ್ವಾಮಿ ಅಗಿದ್ದು ಸಿದ್ದೇಶ್ವರ ಸ್ವಾಮೀಜಿ ಬಳಿ ನಿಖಿಲ್ ಗೆಲುವಿಗಾಗಿ ಪ್ರಾರ್ಥಿಸಿಕೊಂಡ…

Read More

ನ್ಯೂಜ್ ಡೆಸ್ಕ್: ತಿರುಮಲ ಬೆಟ್ಟಕ್ಕೆ ನಡೆದು ಹೋಗುವಂತ ಭಕ್ತರಲ್ಲಿ ಹೃದಯ ಸಂಬಂಧಿ ಖಾಯಿಲೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ 60 ವರ್ಷ ಮೇಲ್ಪಟ್ಟ ಭಕ್ತರಿಗೆ ಟಿಟಿಡಿ ವಿಶೇಷ ಸೂಚನೆಗಳನ್ನು ನೀಡಿದೆ. ಬಿಪಿ, ಅಸ್ತಮಾ, ಮೂರ್ಛೆ, ಸಂಧಿವಾತ ಇರುವವರು ನಡೆದು ಬೆಟ್ಟ ಹತ್ತಿಕೊಂಡು ಬಾರದಂತೆ ಸೂಚಿಸಲಾಗಿದೆ. ಸಮುದ್ರ ಮಟ್ಟದಿಂದ ಎತ್ತರದಲ್ಲಿರುವುದರಿಂದ ಆಮ್ಲಜನಕದ ಮಟ್ಟವು ಕಡಿಮೆಯಾಗಿದ್ದು ಮೇಲೆ ತಿಳಿಸಿರುವ ಸಮಸ್ಯೆಗಳು ಇದ್ದವರು 1500 ಮೆಟ್ಟಿಲುಗಳು,ಗಾಳಿಗೋಪುರ ಮತ್ತು ಭಾಷ್ಯಕಾರ್ಯ ಪ್ರದೇಶದಗಳಲ್ಲಿ ವೈದ್ಯಕೀಯ ಸೇವೆಗಳನ್ನು ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

Read More