Author: Srinivas_Murthy

ಶ್ರೀನಿವಾಸಪುರ:ಹುಚ್ಚು ನಾಯಿಯೊಂದು 10 ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ತಾಲೂಕಿನ ರೋಣೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡದಿರುತ್ತದೆ.ತಾಲೂಕಿನ ರೋಣೂರು ಪಂಚಾಯಿತಿ ವ್ಯಾಪ್ತಿಯ ಚಿಕ್ಕತಿಮ್ಮನಹಳ್ಳಿ,ರೆಡ್ಡಂಪಲ್ಲಿ, ಕೋಟಪಲ್ಲಿ, ಲೋಜರಪಲ್ಲಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಒಡಾಡಿರುವ ಹುಚ್ಚು ನಾಯಿ ದಾರಿಹೋಕ ಮಹಿಳೆಯರು,ವೃದ್ಧರು ಸೇರಿದಂತೆ ಹಲವರನ್ನು ಕಚ್ಚಿ ಗಾಯಗೊಳಿಸಿದ್ದು ಗಾಯಗೊಂಡವರು ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿದಗ ಹಿನ್ನಲೆಯಲ್ಲಿ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಚಿಕ್ಕತಿಮ್ಮನಹಳ್ಳಿ ರೆಡ್ಡಿ, ಲೋಜರಪಲ್ಲಿ ತಿಪ್ಪಮ್ಮ 70, ರೆಡ್ಡಂಪಲ್ಲಿ ಗೀತಮ್ಮ50, ಕೋಟಪಲ್ಲಿ ಮುನಿಯಪ್ಪರಿಗಂತೂ ತೀವ್ರವಾಗಿ ಕಚ್ಚಿ ಗಾಯಗೊಳಿಸಿದೆ ಎನ್ನುತ್ತಾರೆ,ಈ ಬಗ್ಗೆ ಗ್ರಾಮಸ್ಥರು ಮಾತನಾಡಿ ಒಂದೆನಾಯಿ ಎಲ್ಲಾ ಗ್ರಾಮಗಳಲ್ಲೂ ದಾಳಿಮಾಡಿದ್ದು ದಿನೆದಿನೆ ಗ್ರಾಮಗಳಲ್ಲಿ ನಾಯಿಗಳ ಉಳಪಟ ಹೆಚ್ಚುತ್ತಿದ್ದು ಸಂಜೆ ಮಬ್ಬುಗತ್ತಲಿನಲ್ಲೂ ಒಡಾಡಲು ಹೆದರುವಂತ ಪರಿಸ್ಥಿತಿ ನಿರ್ಮಾಣವಾಗಿದೆ,ದ್ವಿಚಕ್ರವಾಹನದಲ್ಲಿ ಹೋಗುವಾಗ ನಾಯಿಗಳ ಹಿಂಡು ದಾಳಿ ಮಾಡುತ್ತವೆ ಎಂದು ಹೇಳುತ್ತಾರೆ. ಗ್ರಾಮಸ್ಥರು ಜಾಗೃತರಾಗಿರಿ ಇವೊಹುಚ್ಚು ನಾಯಿ ದಾಳಿ ವಿಚಾರದಲ್ಲಿ ತಾಲೂಕು ಪಂಚಾಯಿತಿ ಇವೋ ರವಿ vcsnewz.comಗೆ ಪ್ರತಿಕ್ರಿಯೆ ನೀಡಿ ಹುಚ್ಚುನಾಯಿ ದಾಳಿ ವಿಚಾರದಲ್ಲಿ…

Read More

ಶ್ರೀನಿವಾಸಪುರ:ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಶ್ರೀನಿವಾಸಪುರ ತಾಲೂಕು ಘಟಕಕ್ಕೆ 2024-29ನೇ ಸಾಲಿಗೆ 5 ವರ್ಷದ ಅವಧಿಗೆ ಆಕ್ಟೋಬರ್ 28 ರಂದು ಚುನಾವಣೆ ನಡೆಯಲಿದ್ದು,ತಾಲೂಕಿನ 24 ಇಲಾಖೆ ವ್ಯಾಪ್ತಿಯಲ್ಲಿ 32 ಸ್ಥಾನಗಳಿಗೆ 27 ಸ್ಥಾನಗಳ ಅವಿರೋಧ ಅಯ್ಕೆಯಾಗಿದ್ದು ಇದರಲ್ಲಿ ಪ್ರಮುಖ ಇಲಾಖೆಗಳಾದ ಆರೋಗ್ಯ ಇಲಾಖೆಯಿಂದ 4 ಕಂದಾಯ ಇಲಾಖೆಯಲ್ಲಿ 3 ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 2 ಭೂಮಾಪನ ಇಲಾಖೆಯಲ್ಲಿ 2 ಸೇರಿದಂತೆ ಉಳಿದ ಎಲ್ಲಾ ಇಲಾಖೆಯಿಂದ ತಲಾ ಒಬ್ಬರು ಅಯ್ಕೆಯಾಗಿದ್ದಾರೆ. ಕೆಲ ಇಲಾಖೆಗಳಲ್ಲಿ ನೌಕರರು ಕನಿಷ್ಠ ಸಂಖ್ಯೆಯಲ್ಲೂ ಇಲ್ಲದ ಕಾರಣ ಕೆಲವೊಂದು ಇಲಾಖೆಗಳ ಜೋತೆ ಸೇರಿಸಿ ಪ್ರತಿನಿಧಿಗಳನ್ನು ಅಯ್ಕೆ ಮಾಡಿಕೊಳ್ಳಲಾಗಿದೆ.ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ,ಪ್ರೌಢಶಾಲಾ ಶಿಕ್ಷಕರ ಸಂಘದ ಹಾಗು ಬಿಇಒ ಕಚೇರಿ ನೌಕರರ ಸಂಬಂದಿಸಿದಂತೆ ಅಭ್ಯರ್ಥಿಗಳು ಚುನಾವಣೆಗೆ ಮುಂದಾಗಿದ್ದು ಇದರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 677 ಮತದಾರರಿದ್ದು 9 ಜನ ಶಿಕ್ಷಕರು ಮೂರು ತಂಡಗಳಾಗಿ(ಪ್ಯಾನಲ್) ಅಭ್ಯರ್ಥಿಗಳಾಗಿ ಕಣದಲ್ಲಿದ್ದು ಚುನಾವಣೆ ಕಣ ರಂಗೇರಿದೆ ಹೈಓಲ್ಟೇಜ್ ಕಣವಾಗಿ ಮಾರ್ಪಟ್ಟಿದೆ ಎನ್ನುವ ಮಾತು…

Read More

ನ್ಯೂಜ್ ಡೆಸ್ಕ್:ಗಂಟಲಲ್ಲಿ ದೋಸೆ ಸಿಕ್ಕಿಹಾಕಿಕೊಂಡು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಆಶ್ಚರ್ಯಕರ ಘಟನೆ ತೆಲಂಗಾಣ ರಾಜ್ಯದ ನಾಗರ್ ಕರ್ನೂಲ್ ಜಿಲ್ಲೆಯ ಕಲ್ವಕುರ್ತಿಯಲ್ಲಿ ನಡೆದಿದೆ. ಕಲ್ವಕುರ್ತಿಯ 41 ವರ್ಷದ ವೆಂಕಟಯ್ಯ ಎಂಬಾತನಿಗೆ ಮದ್ಯ ಸೇವಿಸುವ ಅಭ್ಯಾಸವಿದೆ ಎಂದಿನಂತೆ ಮದ್ಯ ಸೇವಿಸಿದ್ದಾನೆ ನಂತರ ಊಟಕ್ಕೆ ಕೂತಿದ್ದಾನೆ ಊಟಕ್ಕೆ ದೋಸೆ ಮಾಡಿದ್ದು ಅದನ್ನು ತಿನ್ನುವಾಗ ದೋಸೆ ಗಂಟಲಲ್ಲಿ ಸಿಕ್ಕಿಕೊಂಡಿದೆ ಉಸಿರಾಡಲು ಸಾಧ್ಯವಾಗಿಲ್ಲ. ಪ್ರಜ್ಞಾಹೀನನಾಗಿದ್ದಾನೆ ಕೂಡಲೇ ಸ್ಥಳಿಯ ಆಸ್ಪತ್ರೆಗೆ ಸಾಗಿಸಿರುತ್ತಾರೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಮೊನ್ನೆ ಕೇರಳದಲ್ಲಿ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಇಡ್ಲಿ ತಿನ್ನುವಾಗ ಉಸಿರುಗಟ್ಟಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ.ಮೃದುವಾದ ದೋಸೆ ಮತ್ತು ಇಡ್ಲಿ ತಿನ್ನುವಾಗ ಪ್ರಾಣಕ್ಕೆ ಸಂಚಕಾರ ತರುವುದು ಅಂದರೆ ಶಾಕಿಂಗ್ ವಿಚಾರ ಎನ್ನುತ್ತಾರೆ.

Read More

ಚಿಂತಾಮಣಿ:ಚಿಂತಾಮಣಿ ನಗರದಲ್ಲಿ ಮಂಗಳವಾರ ಮಧ್ಯಾನಃ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಆರ್ಭಟದ ಮಳೆಯಿಂದ ಹಳ್ಳ-ಕೊಳ್ಳ ಚರಂಡಿಗಳಲ್ಲಿ ನೀರು ತುಂಬಿ ಹರಿಯುತ್ತಿದ್ದ ದೃಶ್ಯ ಎಲ್ಲಡೆ ಕಂಡು ಬಂತು.ಕುಂಬದ್ರೋಣವಾಗಿ ಸುರಿದ ಮಳೆಗೆ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.ರಸ್ತೆ ಕಾಲುವೆ ವ್ಯತ್ಯಾಸ ಇಲ್ಲದೆ ನೀರು ರಸ್ತೆ ಮೆಲೆ ಹರಿದಿದ್ದರಿಂದ ಒಡಾಡಲು ಜನ ಪರದಾಡಿದ್ದಾರೆ ನಗರದ ಬಹುತೇಕ ರಸ್ತೆಗಳು ಜಲಾವೃತವಾಗಿದ್ದು ರಸ್ತೆ ಮೆಲೆ ಜುಳು ಜುಳು ಎಂದು ನೀರು ಹರಿದು ಬಂದಿದೆ, ಜಲಾವೃತವಾದ ರೇಷ್ಮೇ ಗೂಡು ಮಾರುಕಟ್ಟೆರಾಮಕುಂಟೆ ರಸ್ತೆಯಲ್ಲಿನ ರೇಷ್ಮೆಗೂಡು ಮಾರುಕಟ್ಟೆ ಸಂಪೂರ್ಣ ಜಲಾವೃತಗೊಂಡು ಗೂಡು ಹರಾಜಿಗೆ ತಂದಿದ್ದ ರೈತರು ತಮ್ಮ ಗೂಡಿನ ಮೂಟೆಗಳನ್ನು ನೀರಿನಿಂದ ಕಾಪಾಡಲು ಹೈರಾಣವಾಗಿ ಕೊನೆಗೆ ತಗಡಿನ ಹರಾಜು ಕಟ್ಟೆ ಏರಿ ಗೂಡುಮೂಟೆಗಳನ್ನು ಹೊತ್ತುಕೊಂಡು ನಿಂತಿದ್ದಾರೆ.ಬೆಟ್ಟಗಳಿಂದ ಹರಿದು ಬಂದ ನೀರು ಟ್ಯಾಂಕ್ ಬಂಡ್ ರಸ್ತೆ ಮೂಲಕ ರಾಯಲ್ ಸರ್ಕಲ್ ಕಿಶೋರ್ ಸ್ಕೂಲ್ ಮುಂಭಾಗದ ರಸ್ತೆಗಳಲ್ಲಿ ಧಾರಕಾರವಾಗಿ ನದಿ ನಾಲೆಗಳಂತೆ ರಸ್ತೆ ಮೇಲೆ ಹರಿದುಕೊಂಡು ಸುಮಾ ನರ್ಸಿಂಗ್ ಹೋಂ ಪ್ರದೇಶ ಸೇರಿದಂತೆ ಮಳೆ…

Read More

ಈರುಳ್ಳಿಕೃಷ್ಣಾರೆಡ್ಡಿಯವರ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು ಹಣ ಕಳ್ಳತನ ಚಿಂತಾಮಣಿ: ಚಿಂತಾಮಣಿ ನಗರದ ಸೂಣ್ಣಶೆಟ್ಟಹಳ್ಳಿ ಬಡಾವಣೆಯಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು ಹಣ ದೋಚಿಕೊಂಡು ಹೋಗಿದ್ದ ಖತರ್ನಾಕ್ ಕಳ್ಳನನ್ನು ಬಂದಿಸುವಲ್ಲಿ ಚಿಂತಾಮಣಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ 1 ಲಕ್ಷ 80 ಸಾವಿರಾರು ರೂ.ಹಣ ಜಪ್ತಿ ಮಾಡಲಾಗಿದೆ.ಎರಡು ತಿಂಗಳ ಹಿಂದೆ ಅಂದರೆ ಜುಲೈ 15 ರಂದು ಚಿಂತಾಮಣಿಯ ಈರುಳ್ಳಿಕೃಷ್ಣಾರೆಡ್ಡಿ ಅವರು ಕೆನರಾಬ್ಯಾಂಕ್ ನಲ್ಲಿ ಹಣ ಡ್ರಾಮಾಡಿಕೊಂಡು ನಗರದ ಸೊಣ್ಣಶೇಟ್ಟಿಹಳ್ಳಿ ಬಡಾವಣೆಯ ಯಾಜ್ಞವಲ್ಕ ದೇವಾಲಯ ಬಳಿ ಕಾರನ್ನು ನಿಲ್ಲಿಸಿ ದೇವಾಲಯಕ್ಕೆ ಹೋಗಿ ಬರುವಷ್ಟರಲ್ಲಿ ಕಾರಿನ ಗ್ಲಾಸ್ ಒಡೆದು ಕಾರಿನಲ್ಲಿ ಇಟ್ಟಿದ್ದ 5 ಲಕ್ಷ ಹಣವನ್ನು ಕಳ್ಳತನ ಮಾಡಲಾಗಿತ್ತು ಈ ಬಗ್ಗೆ ಹಣ ಕಳೆದುಕೊಂಡ ಈರುಳ್ಳಿಕೃಷ್ಣಾರೆಡ್ಡಿ ಚಿಂತಾಮಣಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು ಈ ಮೇರೆಗೆ ಕಳ್ಳತನದ ಜಾಡು ಹಿಡಿದು ಹೋರಟ ಪೋಲಿಸರು ಚಿಕ್ಕಬಳ್ಳಾಪುರ ಜಿಲ್ಲಾ ಎಸ್.ಪಿ, ಕುಶಲ್‌ ಚೌಕ್ಸಿ,ಎ.ಎಸ್.ಪಿ ರಾಜಾ ಇಮಾಮ್ ಖಾಸಿಂ, ಚಿಂತಾಮಣಿ ಉಪವಿಭಾಗದ ಡಿವೈ.ಎಸ್.ಪಿ.ಮುರಳೀಧರ ಮಾರ್ಗದರ್ಶನದಲ್ಲಿ ಚಿಂತಾಮಣಿ ನಗರ ಪೊಲೀಸ್ ಠಾಣೆಯ…

Read More

ಶ್ರೀನಿವಾಸಪುರ:ಪೋಲಿಸ್ ಬೀಗಿ ಬಂದೋಬಸ್ತಿನಲ್ಲಿ ಒತ್ತುವರಿಯಾಗಿದ್ದ ಸ್ಮಶಾನದ ಜಾಗವನ್ನು ಕಂದಾಯ ಇಲಾಖೆ ಅಧಿಕಾರಿಗಳು ತೆರವು ಮಾಡಿಸಿರುತ್ತಾರೆ.ತಾಲ್ಲೂಕಿನ ಕಸಬಾ ಹೋಬಳಿ ಕೇತಗಾನಹಳ್ಳಿ ಗ್ರಾಮದ ಸರ್ವೇ ನಂ.79 ರಲ್ಲಿ 1 ಎಕರೆ 32 ಗುಂಟೆ ಜಮೀನು ಸಾರ್ವಜನಿಕರ ಸ್ಮಶಾನಕ್ಕೆ ಮೀಸಲಿಡಲಾಗಿದ್ದು ಇದನ್ನು ಕೆಲ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದರು ಈ ಬಗ್ಗೆ ತೆರವುಗೊಳಿಸಿಕೊಡುವಂತೆ ಕೇತಗಾನಹಳ್ಳಿ ಗ್ರಾಮಸ್ಥರು ಜಿಲ್ಲಾಡಳಿತ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿ ಹೈರಾಣವಾಗಿದ್ದರು ಆದರೂ ಬೆಂಬಡದೆ ಗ್ರಾಮಸ್ಥರು ಹೆಬ್ಬಟ ಪಂಚಾಯತಿ ಸದಸ್ಯ ಅನಂತ್ ಸಹಕಾರದೊಂದಿಗೆ ಸ್ಮಶಾನ ಜಾಗವನ್ನು ಗುರುತಿಸಿಕೊಡುವಂತೆ ಕಂದಾಯ ಇಲಾಖೆಗೆ ಮನವಿ ಮಾಡಿದ ಮೇರೆಗೆ ಸ್ಪಂದಿಸಿದ ತಾಲೂಕು ಆಡಳಿತ ಕಂದಾಯ ಅಧಿಕಾರಿಗಳಾದ ಡೆಪ್ಯೂಟಿ ತಹಶೀಲ್ದಾರ್ ನಂಜುಂಡಪ್ಪ, ಕಸಬಾ ರೆವಿನ್ಯೂ ಇನ್ಸಪೆಕ್ಟರ್ ಮುನಿರೆಡ್ಡಿ ಸರ್ವೆ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕ ಸ್ಮಶಾನಕ್ಕೆ ಸಂಬಂದಿಸಿದ ಜಾಗ ಗುರುತಿಸಿ ಗ್ರಾಮಸ್ಥರೆಗೆ ಅನಕೂಲ ಮಾಡಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಚಲ್ದಿಗಾನಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಗದೀಶ್ ಹಾಗು ಸಿಬ್ಬಂದಿ ಸ್ಮಶಾನದ ಜಾಗವನ್ನು ಜೆಸಿಬಿ ಮೂಲಕ ಗಿಡಗಂಟಿಗಳನ್ನು ತೆರವುಗೊಳಿಸಿ…

Read More

ಶ್ರೀನಿವಾಸಪುರ:ಅರಣ್ಯ ಇಲಾಖೆ ಅಧಿಕಾರಿಗಳು ತೆರವು ಮಾಡಿದ್ದರು ಎನ್ನಲಾದ ರೈತರು ಉಳುಮೆ ಮಾಡುತ್ತಿದ್ದ ಜಮೀನಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಗಿಡನಾಟಿ ಮಾಡಲು ಮುಂದಾದಾಗ ರೈತಾಪಿ ಕುಟುಂಬದ ಸದಸ್ಯರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ತಳ್ಳಾಟ ನೂಕಾಟ ನಡೆದ ಘಟನೆ ತಾಲೂಕಿನ ಕೋಟಬಲ್ಲಪಲ್ಲಿ ಗ್ರಾಮದ ಬಳಿ ನಡೆಯಿತು ಈ ಸಂದರ್ಭದಲ್ಲಿ ಒರ್ವ ರೈತ ಮಹಿಳೆ ಅಯಾತಪ್ಪಿ ಕೆಳಗೆ ಬಿದ್ದು ಅಸ್ವಸ್ತರಾಗಿದ್ದು ತಕ್ಷಣ ಸ್ಥಳೀಯರು 108 ಅಂಬುಲೆನ್ಸ್ ಕರೆಸಿ ಅಸ್ಪತ್ರೆಗೆ ಸಾಗಿಸಿದರು. ಜಮೀನು ನಮ್ಮದು ರೈತರ ಆಕ್ರೋಶನಾವು ಉಳುಮೆ ಮಾಡುತ್ತಿದ್ದ ಜಾಗ ನಮ್ಮದು ಎಂದು ರೈತರು ಘೋಷಣೆಗಳನ್ನು ಕೂಗುತ್ತ ನಾವು ಬೆಳೆದಿದ್ದ ಮಾವು ಇತರೆ ಬೆಳೆಗಳನ್ನು ತೆರವು ಮಾಡಿ ನಮಗೆ ಅನ್ಯಾಯ ಮಾಡಿ ಈಗ ಸಸಿ ನೆಡಲು ಮುಂದಾಗಿರುವ ಅರಣ್ಯ ಇಲಾಖೆ ಅಕ್ರಮ ನಡೆಸುತ್ತಿದೆ ಇದು ರೈತರ ಭೂಮಿ ಅರಣ್ಯ ಇಲಾಖೆ ಸಸಿ ನೆಡಲು ಬಿಡುವದಿಲ್ಲವೆಂದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿದ ರೈತರು ಪ್ರಾಣವನ್ನು ಬಿಡುತ್ತೇವೆ ಭೂಮಿಯನ್ನು ಬಿಡುವದಿಲ್ಲವೆಂದು ಪ್ರತಿಭಟಿಸಿದರು.…

Read More

ಪ್ರೀತ್ಸೇ ಪ್ರೀತ್ಸೇ ಎಂದು ಕಾಟಕೊಡುತ್ತಿದ್ದ ಯುವಕನ ಹುಚ್ಚಾಟಕ್ಕೆ ಬೆಸತ್ತ ವಿದ್ಯಾರ್ಥಿನಿ ಕಾಲೇಜು ಮಹಡಿಯಿಂದು ಜಿಗಿದು ಅತ್ಮಹತ್ಯೆ ಚಿತ್ರದುರ್ಗ:ಪ್ರೀತ್ಸೇ ಪ್ರೀತಿಸು ಎಂದು ಕಾಡುತ್ತಿದ್ದ ಯುವಕನ ಕಾಟ ತಾಳಲಾರದೆ ಮನನೊಂದ ವಿದ್ಯಾರ್ಥಿನಿ ಕಾಲೇಜು ಕಟ್ಟಡದ ಮೇಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿಯನ್ನು ಚಳ್ಳಕೆರೆ ಮೆದೆಹಳ್ಳಿ ನಿವಾಸಿಆಗಿದ್ದ ಪ್ರೇಮಾ(18) ಎಂದು ಗುರುತಿಸಲಾಗಿದ್ದು ಚಿತ್ರದುರ್ಗ ನಗರದ ಡಾನ್ ಬೋಸ್ಕೋ ಕಾಲೇಜಿನಲ್ಲಿ ಪ್ರಥಮ ಬಿಎಸ್ಸಿ ಪದವಿ ವ್ಯಾಸಾಂಗ ಮಾಡುತ್ತಿದ್ದು ಇಂದು ಕಟ್ಟಡದ ಮೇಲಿನಿಂದ ಬಿದ್ದು ಪ್ರೇಮಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬೆಳಗ್ಗೆ ಮಗಳು ಕಾಲೇಜಿಗೆ ಹೋಗಿ ಫೋನ್ ಮಾಡಿ ಕಾಲೇಜು ತಲುಪಿದೆ ಎಂದು ಕರೆ ಮಾಡಿ ಹೇಳಿದ್ದಾಳೆ ಇದಾದ ಕೆಲ ಕ್ಷಣಗಳಲ್ಲೇ ನಿಮ್ಮ ಮಗಳು ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ ಅಂತಾ ಕಾಲೇಜು ಕಡೆಯಿಂದ ಫೋನ್ ಬಂದಿದೆ ಹುಡುಗ ನೋರ್ವ ನಿತ್ಯ ಮಗಳಿಗೆ ಪ್ರೀತಿ‌ ಮಾಡುವಂತೆ ಪೀಡುಸುತ್ತಿದ್ದನಂತೆ. ಅಲ್ಲದೇ ವಾಟ್ಸಾಪ್​ ನಲ್ಲಿ ನಿತ್ಯವೂ ಚಾಟಿಂಗ್ ಮಾಡಿ ಕಿರಿಕಿರಿ ನೀಡುತ್ತಿದ್ದನಂತೆ ಇತ್ತಿಚಿಗೆ ಇವನ ಕಾಟ ಹೆಚ್ಚಾದ…

Read More

ನ್ಯೂಜ್ ಡೆಸ್ಕ್:ತೆಲಂಗಾಣ ರಾಜ್ಯದಲ್ಲಿ ಅಪರೂಪದ ವಿಚಾರವೊಂದು ಬೆಳಕಿಗೆ ಬಂದಿದೆ ಅದೇನಪ್ಪ ಅಂದರೆ ತಾಯಿ ಮತ್ತು ಮಗಳು ಇಬ್ಬರೂ ಒಟ್ಟಿಗೆ ಸರ್ಕಾರಿ ಸೇವೆಗೆ ಸೇರಿದ್ದಾರೆ ಬಹುಶಃ ಈ ವಿಚಾರ ಅಪರೂಪದಲ್ಲಿ ಅಪರೂಪ ಎನ್ನಬಹುದು ತೆಲಂಗಾಣ ರಾಜ್ಯದ ಪೆದ್ದಪಲ್ಲಿ ಜಿಲ್ಲೆಯ ಮಂಥಿನಿ ಮಂಡಲದ ರಾಮಕೃಷ್ಣಾಪುರ ಗ್ರಾಮದ ಸಿಂಗರೇಣಿ ಕಾಲೋನಿಯಯಲ್ಲಿ ಸಣ್ಣ ಉದ್ಯೋಗದ ರಮೇಶ್ ಅವರ ಕುಟುಂಬದ ಇಬ್ಬರಿಗೆ ಎರಡು ಸರ್ಕಾರಿ ಕೆಲಸಗಳು ಒಂದೆ ದಿನ ಸಿಕ್ಕಿದೆ ಆ ಕುಟುಂಬದಲ್ಲಿ ಇಂದು ಹಬ್ಬದ ವಾತವರಣ ಮನೆ ಮಾಡಿದೆ ರಮೇಶ್ ಹೆಂಡತಿ ಪದ್ಮಾಗೆ ಉಪನ್ಯಾಸಕಿಯಾಗಿ ಕೆಲಸ ಸಿಕ್ಕಿದರೆ ಅಕೆಯ ಮಗಳು ಅಲೇಖ್ಯಗೆ ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉದ್ಯೋಗ ಸಿಕ್ಕಿದೆ.ಮದುವೆಯಾಗಿ ಒದುವುದನ್ನೆ ಬಿಟ್ಟಿದ್ಯಾಕೆರಮೇಶ ಅವರ ಪತ್ನಿ ಪದ್ಮ ಅವರನ್ನು ಅವರ ತವರು ಮನೆಯವರು ಹತ್ತನೆ ತರಗತಿ ಮುಗಿಸಿದ ತಕ್ಷಣ ಮದುವೆ ಮಾಡಿ ಗಂಡನ ಮನೆಗೆ ಸಾಗಹಾಕಿದ್ದರು, ಗಂಡನ ಮನೆಗೆ ಬಂದ ಪದ್ಮ ಮದುವೆಯ ನಂತರ ವಿದ್ಯಾಭ್ಯಾಸ ನಿಲ್ಲಿಸಿದರು, ನಂತರ ಪತಿ ರಮೇಶ ಅವರ ಪ್ರೋತ್ಸಾಹದಿಂದ ಮತ್ತೆ ವಿದ್ಯಾಭ್ಯಾಸ…

Read More

ಶ್ರೀನಿವಾಸಪುರ:ಪಟ್ಟಣದ ತಾಲೂಕು ಕಚೇರಿ ಮುಂಬಾಗದಿಂದ ಆರಂಭವಾದ ಮೆರವಣಿಗೆಗೆ ಅದ್ಧೂರಿ ಚಾಲನೆ ನೀಡಲಾಯಿತು.ಮೆರವಣಿಗೆಯಲ್ಲಿ ಡೊಳ್ಳು,ಮೇಳ, ತಮಟೆ ಸದ್ದಿಗೆ ತಾಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ವಾಲ್ಮೀಕಿ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಬಂಧುಗಳು ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ಪ್ರತಿ ಹಳ್ಳಿಯಿಂದಲೂ ವಾಲ್ಮೀಕಿ ಭಾವಚಿತ್ರ ಇರುವ ಪಲ್ಲಕ್ಕಿಗಳು ಹಾಗು ಯುವಕ ಸಂಘದ ಪದಾಧಿಕಾರಿಗಳು ಪ್ಲೆಕ್ಸ್‌ಗಳನ್ನು ಕಟ್ಟಿಕೊಂಡು ತಂಡೋಪ ತಂಡವಾಗಿ ಆಗಮಿಸುವ ಮೂಲಕ ಮೆರವಣಿಗೆಗೆ ಮೆರಗು ಹೆಚ್ಚಿಸಿದರು.ಮೆರವಣಿಗೆಯಲ್ಲಿ ಡಿ.ಜೆ. ಸೌಂಡ್ ಸದ್ದು ಮಾಡಿದರೆ ಯುವಕರು ಒಗ್ಗೂಡಿ ಹೆಜ್ಜೆಹಾಕುತ್ತ ಮೆರವಣಿಗೆಯಲ್ಲಿ ಪಾಲ್ಗೊಂಡು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.ಮೆರವಣಿಗೆ ನಂತರ ಸ್ಟೇಡಿಯಂನಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

Read More