Author: Srinivas_Murthy

ಶ್ರೀನಿವಾಸಪುರ: ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಚಂಡಮಾರುತದಿಂದ ಕಳೆದ ಎರಡು ದಿನಗಳಿಂದ ಸುರುಯುತ್ತಿರುವ ಧಾರಾಕಾರ ಮಳೆಯಿಂದಾಗಿ ತಾಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ ಜನ ಸಾಕಪ್ಪ ಮಳೆ ಎನ್ನುವಂತಾಗಿದೆ. ಮಳೆಯಿಂದ ಮರಗಳು ಹಾಗೂ ಮರದ ಟೊಂಗೆಗಳು ಧರೆಗುರುಳಿವೆ ತಾಡಿಗೋಳ್ ಕ್ರಾಸ್ ನಲ್ಲಿ ಕಡಪಾ-ಬೆಂಗಳೂರು ಹೆದ್ದಾರಿಯಲ್ಲಿ ಬುಧವಾರ ಮುಂಜಾನೆ 11 ಕೆ.ವಿ ವಿದ್ಯುತ್ ಕಂಬ ರಸ್ತೆ ಬದಿ ಧರೆಗೆ ಬಿದ್ದಿದೆ ವಿದ್ಯುತ್ ತಂತಿ ನಡು ರಸ್ತೆಯಲ್ಲಿ ಬಿದ್ದಿದ್ದು ಸದೃಶಾವತ್ ಯಾವುದೇ ಅನಾಹುತ ಆಗಿಲ್ಲ ಘಟನೆ ಆಗುತ್ತಿದ್ದಂತೆ ಸ್ಥಳೀಯರು ಬೆಸ್ಕಾಂ. ಅಧಿಕಾರಿಗಳಿಗೆ ಪೋನ್ ಮೂಲಕ ಕರೆ ಮಾಡಿ ವಿದ್ಯುತ್ ಸರಬರಾಜು ನಿಲ್ಲಿಸಿದ್ದಾರೆ. ಬೆಂಗಳೂರು-ಕಡಪಾ ನೂರಾರು ವಾಹನಗಳು ಸಂಚರಿಸುತ್ತವೆ. ವಿದ್ಯುತ್ ಕಂಬ ಉರುಳಿ ಬಿದ್ದಾಗ ಜನತೆ ಎಚ್ಚೆತ್ತುಕೊಳ್ಳದೆ ಹೋಗಿದ್ದಾರೆ ಬಾರಿ ಅನಾಹುತ ಆಗುತ್ತಿತ್ತು ಎನ್ನುತ್ತಾರೆ. ವರುಣನ ಆರ್ಭಟಕ್ಕೆ ತಾಲ್ಲೂಕಿನ ಬದ್ದಿಪಲ್ಲಿ ಪೆದ್ದೂರು ಸೇರಿದಂತೆ ಸಾಕಷ್ಟು ಕಡೆ ಬೆಳೆ ಹಾನಿಯಾಗಿದ್ದು ರೈತರು ಕಂಗಾಲಾಗಿದ್ದಾರೆ.ಕಟಾವಿಗೆ ಬಂದಿರುವ ಬತ್ತ ನೀರು ಪಾಲಾಗಿದೆ ಆದಾಯದ ನಿರೀಕ್ಷೆಯಲ್ಲಿದ್ದ ಟೊಮೊಟೊ ಬೆಳೆ ಸಹ ಹಾಳಾಗಿ ಕೊಯ್ಲಿಗೆ ಬಂದಿದ್ದ ಟೊಮೊಟೊ ನೆಲಕ್ಕೆ…

Read More

ರಾಜಕೀಯ ಪಕ್ಷಗಳು ಘೋಷಿಸುವ ಉಚಿತ ಯೋಜನೆ ಕುರಿತಾಗಿ ಕೇಂದ್ರ ಸರ್ಕಾರಕ್ಕೆ,ಚುನಾವಣೆ ಆಯೋಗಕ್ಕೆ ನೋಟಿಸ್ ಜಾರಿ ನೂಜ್ ಡೆಸ್ಕ್:ಚುನಾವಣಾ ಪೂರ್ವದಲ್ಲಿ ರಾಜಕೀಯ ಪಕ್ಷಗಳು ನೀಡುವ ಉಚಿತ ಭರವಸೆಗಳನ್ನು ಲಂಚ ಎಂದು ಪರಿಗಣಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಮನವಿಯ ಮೇರೆಗೆ, ಕೇಂದ್ರ ಸರ್ಕಾರಕ್ಕೆ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಲಾಗಿದೆ.ಉಚಿತ ಭರವಸೆಗಳನ್ನು ನೀಡುವುದನ್ನು ನಿಷೇಧಿಸಲು ತಕ್ಷಣದ ಮತ್ತು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಈ ನೋಟಿಸ್ ಜಾರಿ ಮಾಡಿದ್ದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಕೇಂದ್ರ ಮತ್ತು ಚುನಾವಣಾ ಸಮಿತಿಗೆ ನೋಟಿಸ್ ಜಾರಿಗೊಳಿಸಿದೆ ಇದರೊಂದಿಗೆ ಇದಕ್ಕೆ ಸಂಬಂದಪಟ್ಟ ಬಾಕಿ ಇರುವ ಪ್ರಕರಣಗಳೊಂದಿಗೆ ಅರ್ಜಿಯೊಂದಿಗೆ ಸೇರ್ಪಡೆ ಮಾಡಿದೆ.ಉಚಿತ ಭರವಸೆ ನೀಡುವ ರಾಜಕೀಯ ಪಕ್ಷಗಳ ವಿರುದ್ಧ ತಕ್ಷಣದ ಮತ್ತು ಕಠಿಣ ಕ್ರಮ ಕೈಗೊಳ್ಳುವಂತೆ ಚುನಾವಣೆ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕರ್ನಾಟಕ ನಿವಾಸಿ ಶಶಾಂಕ್ ಜೆ ಶ್ರೀಧರ…

Read More

ನ್ಯೂಜ್ ಡೆಸ್ಕ್: ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಮಾಹನಗರದಲ್ಲಿ ಗ್ಯಾಂಗ್ ಸ್ಟಾರ್ ಗಳು ಬಿಟ್ಟುಬಿಡದಂತೆ ಒಂದಲ್ಲ ಒಂದು ರೀತಿಯಲ್ಲಿ ಮುಂಬೈನಲ್ಲಿನ ಸೆಲೆಬ್ರಿಟಿಗಳು,ಬಾಲಿವುಡ್ ಸೆಲೆಬ್ರಿಟಿಗಳನ್ನು ಕಾಡುವುದು ರಾಜಕೀಯ ಮುಖಂಡರನ್ನು ಉದ್ಯಮಿಗಳನ್ನು ಟಾರ್ಗೆಟ್ ಮಾಡುತ್ತ ಬೆದರಿಕೆಗಳು ಒಡ್ಡುತ್ತ ಅವರ ನೆಮ್ಮದಿಯನ್ನು ಹಾಳು ಮಾಡುತ್ತಲೇ ಇರುವುದು ಇಲ್ಲಿ ಸಾಮನ್ಯ ಎನ್ನಬಹುದು.D ಗ್ಯಾಂಗ್ ದಾವೂದ್ ಇಬ್ರಾಹಿಂ ಹಿಡಿತ ಕಡಿಮೆಯಾಗುತ್ತಿರುವ ಸಮಯದಲ್ಲಿ ಅಂಡರ್ ವರ್ಲ್ಡ್ ಮೇಲೆ ಹಿಡಿತ ಸಾಧಿಸಲು ಹೊಸ ಹೆಸರು ಮುನ್ನಲೆಗೆ ಬಂದಿದೆ ಸದ್ಯ ದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವುದು ಹೊಸ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಎನ್ನುವ ಖತರ್ನಾಕ್ ಹೆಸರು.NCP ಮುಖಂಡ ಬಾಬಾ ಸಿದ್ದಿಕಿ ಹತ್ಯೆಮಹಾರಾಷ್ಟ್ರದ NCP ಪಕ್ಷದ ಮುಖಂಡ ಬಾಬಾ ಸಿದ್ದಿಕಿಯನ್ನು ಗುಂಡೇಟು ಹೊಡೆದು ಹತ್ಯೆ ಮಾಡಿದ್ದು ಈ ಹತ್ಯೆ ಇಡೀ ದೇಶವನ್ನು ತಲ್ಲಣ ಗೊಳಿಸಿದೆ ಸಲ್ಮಾನ್‌ ಖಾನ್‌ ಜೊತೆ ನಂಟು ಹೊಂದಿದ್ದಕ್ಕೆ ಬಾಬಾ ಸಿದ್ದಿಕಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಹತ್ಯೆ ಹೊಣೆಯನ್ನು ಕುಖ್ಯಾತ ಪಾತಕಿ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ ಹೊತ್ತುಕೊಂಡಿದೆ. ಅಂದಾಜಿಗೂ ನಿಲುಕದ ರೀತಿ…

Read More

Helth Desk:ಸೀತಾಫಲ ಪೋಷಕಾಂಶ ಉಳ್ಳ ಹಲವಾರು ರೀತಿಯ ಕಾಯಿಲೆಗಳನ್ನು ಗುಣಪಡಿಸುವ ಔಷಧೀ ಗುಣಗಳನ್ನ ಹೊಂದಿರುತ್ತದೆ.ಚಳಿಗಾಲದಲ್ಲಿ ಹೆಚ್ಚು ಸಿಗುವಂತ ಇದರ ಎಲೆಗಳು, ತೊಗಟೆ ಮತ್ತು ಬೇರು ಎಲ್ಲವನ್ನೂ ರೋಗಗಳನ್ನ ತಡೆಗಟ್ಟಲು ಬಳಸಲಾಗುತ್ತದೆ.ಇತ್ತೀಚೆಗೆ,ಕೆಲವು ತಜ್ಞರು ತಮ್ಮ ಎಲೆಗಳು ಮಧುಮೇಹವನ್ನ ನಿಯಂತ್ರಿಸುವ ಹಾಗು ದೇಹದ ತೂಕ ಕಡಿಮೆ ಮಾಡುವ ಗುಣವನ್ನು ಹೊಂದಿವೆ ಎಂದು ಹೇಳಲಾಗುತ್ತಿದೆ.ಚಳಿಗಾಲದಲ್ಲಿ ಸಿಗುವ ಸೀತಾಫಲಚಳಿಗಾಲ ಪ್ರಾರಂಭವಾದಾಗ ಪ್ರಾಕೃತಿಕವಾಗಿ ಸಿಗುವಂತ ಸೀತಾಫಲವನ್ನ ತಿನ್ನಲು ಎಲ್ಲರೂ ಅಸೆ ಪಡುವುದು ಸಹಜ ೦ ಆದಾಗ್ಯೂ,ಮಧುಮೇಹ ಹೊಂದಿರುವ ಜನರು ಸೀತಾಫಲವನ್ನ ತಿನ್ನಬಾರದು ಎಂದು ಕೆಲ ಆಹಾರ ತಜ್ಞರು ಅಭಿಪ್ರಾಯ ಪಡುತ್ತಾರೆ.ಪ್ರಸ್ತುತ ದಿನದಲ್ಲಿ ಮಧುಮೇಹದಿಂದ ಜನ ದೊಡ್ಡಮಟ್ಟದಲ್ಲಿ ಬಳಲುತ್ತಿದ್ದಾರೆ ಎಂದು ಹಲವು ಅಧ್ಯಯನಗಳಲ್ಲಿ ಪ್ರಸ್ತಾಪಿಸಲಾಗಿದೆ ಇದಕ್ಕೆ ಬಿಡುವಿಲ್ಲದ ಜೀವನ ಶೈಲಿ ಬದಲಾದ ಆಹಾರ ಪದ್ಧತಿಯಿಂದ ಬಹುತೇಕ ಎಲ್ಲಾ ವಯಸ್ಸಿನವರನ್ನು ಮಧುಮೇಹ ಬೀಡದೆ ಕಾಡುತ್ತಿರುವುದು ಸಾಮಾನ್ಯ.ಹಲವು ಔಷಧಿ ಗುಣಗಳು ಇದೆಆ್ಯಂಟಿಆಕ್ಸಿಡೆಂಟ್‌’ಗಳು, ಕ್ಯಾರಟೆನಾಯ್ಡ್‌’ಗಳು, ಫ್ಲೇವನಾಯ್ಡ್‌’ಗಳು, ವಿಟಮಿನ್ ಸಿ, ಬಿ6, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಫೈಬರ್ ಈ ಕಲ್ಲಂಗಡಿಯಲ್ಲಿ ಹೆಚ್ಚು. ಆದರೆ ಮಧುಮೇಹದಿಂದ…

Read More

ಬೆಂಗಳೂರು:ಕಲರ್ಸ್ ಕನ್ನಡ ವಾಹಿನಿಯಲ್ಲಿ ಖ್ಯಾತ ಚಲನಚಿತ್ರ ನಟ ಸುದೀಪ್ ಅವರು ನಿರೂಪಣೆ ಮಾಡುತ್ತಿರುವ ಬಿಗ್ ಬಾಸ್ ಸಿಸನ್ 11 ಶೊನಲ್ಲಿ ಸ್ವರ್ಗ-ನರಕದ ಪರಿಕಲ್ಪನೆ ಇದೆ ಇಲ್ಲಿ ಭಾಗವಹಿಸುತ್ತಿರುವ ಮಹಿಳೆಯರು ಮತ್ತು ಪುರುಷ ಸ್ಪರ್ಧಿಗಳನ್ನು ಜೈಲಿನ ರೂಪದಲ್ಲಿರುವ ಬಂಧಿಖಾನೆಯಂತಹ ಕೊಠಡಿಯಲ್ಲಿ ಅಕ್ರಮ ಬಂಧನದಲ್ಲಿ ಇರಿಸಿರುವಂತೆ ನೂರಾರು ಕ್ಯಾಮರಾಗಳಲ್ಲಿ ಚಿತ್ರಿಸಲಾಗುತ್ತಿದೆ ಇಲ್ಲಿ ನರಕದಲ್ಲಿರುವ ಸ್ಪರ್ಧಿಗಳಿಗೆ ಗಂಜಿಯನ್ನು ಮಾತ್ರ ಆಹಾರವಾಗಿ ನೀಡಲಾಗುತ್ತಿತ್ತು ಇದು ನಾಗರಿಕರಿಗೆ ಪೌಷ್ಟಿಕ ಆಹಾರವನ್ನು ಕೊಡದಿರುವುದು ಅಪರಾಧವಾಗುತ್ತದೆ,ಸ್ವರ್ಗದ ಸ್ಪರ್ಧಿಗಳು ಬಾತ್ರೂಮ್‌ಗೆ ಹೋಗಲು ಅನುಮತಿ ತೆಗೆದುಕೊಳ್ಳಬೇಕಾದ ಬಗ್ಗೆ ಶೋನಲ್ಲಿ ತೊರಿಸಲಾಗಿದ್ದು ಇದು ಶೌಚಾಲಯ ಉಪಯೋಗಿಸಲು ಬಲವಂತಕ್ಕೆ ಒಳಪಡಿಸದಂತಾಗುತ್ತದೆ ಇದು ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ದೈಹಿಕ ಭಾದೆ ತೀರಿಸಿಕೊಳ್ಳಲು ಮತ್ತೊಬ್ಬರ ಅನುಮತಿ ಪಡೆದುಕೊಳ್ಳುವುದು ಮಹಿಳೆಯರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ, ಮತ್ತು ಭಾರತದ ನಾಗರಿಕರನ್ನು ಖಾಸಗಿ ವ್ಯಕ್ತಿಗಳು ಬಂಧನದಲ್ಲಿರಿಸುವ ಹಕ್ಕನ್ನು ಹೊಂದಿರುವುದಿಲ್ಲ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ರಾಮನಗರ ಪೊಲೀಸರಿಗೆ ಪತ್ರ ಬರೆದಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಬಿಗ್ ಬಾಸ್ ಶೋ ಚಿತ್ರಕರಣವಾಗುತ್ತಿರುವ ಜಾಗಕ್ಕೆ…

Read More

ಚಿಂತಾಮಣಿ:ಚಿಂತಾಮಣಿ ನಗರದಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ ವಾರ್ಡ್ ನಂ:24ರ ನಾರಸಿಂಹಪೇಟೆಯಲ್ಲಿ ಪ್ರತಿವರ್ಷದಂತೆ ನಾರಸಿಂಹಪೇಟೆ ಯುವಕರ ಬಳಗದ ವತಿಯಿಂದ ನವರಾತ್ರಿ ಅಂಗವಾಗಿ ವಿಶೇಷವಾಗಿ ಶ್ರೀ ದರ್ಗಾಮಾತೆಯನ್ನು ಪ್ರತಿಷ್ಠಾಪನೆ ಮಾಡಿ ಒಂಬತ್ತು ದಿನಗಳಿಂದ ಶ್ರದ್ಧಾ ಭಕ್ತಿಯಿಂದ ಪೂಜಿಸಿ ಪುನಿತರಾಗಿ ನವರಾತ್ರಿ ಸಂಭ್ರಮಿಸಿದ್ದು ಕಾರ್ಯಕ್ರಮ ಎಲ್ಲರ ಗಮವನ್ನು ಸೆಳೆಯಿತು. ಸಂಸದ ಶಾಸಕರು ಭಾಗಿ. ನಾರಸಿಂಹ ಪೇಟೆಯ ಶ್ರೀ ದುರ್ಗಾ ದೇವಿಗೆ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಕೋಲಾರದ ಸಂಸದ ಮಲ್ಲೇಶ್ ಬಾಬು, ಶ್ರೀನಿವಾಸಪುರ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ಚಿಂತಾಮಣಿ ಮಾಜಿ ಶಾಸಕ ಜೆ.ಕೆ ಕೃಷ್ಣಾರೆಡ್ಡಿ ಬಿಜೆಪಿ ಮುಖಂಡ ವೇಣುಗೋಪಾಲ್ ಭಾಗವಹಿಸಿ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ರಾಜ್ಯದಲ್ಲಿ ಉತ್ತಮ ಮಳೆ ಬೆಳೆ ಆಗಿ ಜನತೆ ಸಂತೃಪ್ತಿಯ ಜೀವನ ನಡೆಸುವಂತಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಂತೋಷ್,ಶ್ರೀನಿವಾಸ್,ಪ್ರಶಾಂತ್, ವೇಣು,ಶಿವರಾಜ್,ಶಿವಸಾಗರ್, ಶ್ರೀಕಾಂತ್, ಪವನ್, ಚಂದು, ಆಕಾಶ್, ಶಿವಾಜಿ,ಸುಮನ್ ಶೆಟ್ಟಿ.ಮಹೇಶ್ ಬೈ, ಗುಡೇ ಶ್ರೀನಿವಾಸ,ಮುಖಂಡರಾದ ಚಾಂದ್ ಪಾಷ,ಅಪ್ಸರ ಪಾಷಾ,ಯೂನಸ್ ಪಾಷಾ,ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Read More

ಕೋಲಾರ: ಕೋಲಾರ ನಗರದಲ್ಲಿ ವಿಜಯದಶಮಿ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ಸ್ವಯಂ ಸೇವಕರು ಪಥ ಸಂಚಲನ ನಡೆಸಿಕೊಟ್ಟರು. ಕೋಲಾರ ನಗರದ ಕಠಾರಿ ಪಾಳ್ಯದ ಕನಕ ಬಾಸ್ಕೆಟ್ ಬಾಲ್ ಗ್ರೌಂಡ್ ನಿಂದ ದಂಡ ಹಿಡಿದ ಗಣವೇಶ ಧಾರಿ ಸ್ವಯಂ ಸೇವಕರಿಂದ ಆಕರ್ಷಕ ಪಥ ಸಂಚಲನ ನಗರದ ಪ್ರಮುಖ ರಸ್ತೆಗಳಲ್ಲಿ ಹಿಂದುತ್ವದ ಬಲ ರಾಷ್ಟ್ರೀಯ ಶಕ್ತಿ ಅನ್ನೋ ಘೋಷ ವಾಕ್ಯದಡಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.ಆರ್ ಎಸ್ ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರಕ್ ಗುರು ಪ್ರಸಾದ್, ಮಾಜಿ ಸಂಸದ ಎಸ್.ಮುನಿಸ್ವಾಮಿ.ಪ್ರಮುಖ ವಕೀಲ ನಟರಾಜಬಾಬು ಸೇರಿದಂತೆ ಹಲವು ಅರ್ ಎಸ್ ಎಸ್ ನಾಯಕರು ಗಣವೇಶ ಧರಿಸಿ ಭಾಗಿಯಾಗಿದ್ದರು.ಗಣವೇಷಧಾರಿಗಳ ಪಥ ಸಂಚಲನ ಬರುತ್ತಿದ್ದಂತೆ ದಾರಿಯುದ್ದಕ್ಕೂ ಸಾರ್ವಜನಿಕರು ಹೂಮಳೆ ಗೈದು ಸ್ವಾಗತಿಸಿದರು.ಪಥಸಂಚಲನದ ಹಿನ್ನಲೆಯಲ್ಲಿ ಕೋಲಾರ ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್, ಏರ್ಪಡಿಸಿದ್ದರು.ಭದ್ರತೆಗೆ ದೊಡ್ದಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

Read More

ಬೆಂಗಳೂರು:ಇತ್ತಿಚಿಗೆ ಬೆಂಗಳೂರಿನಲ್ಲಿ ಉತ್ತರ ಭಾರತೀಯರ ದೌರ್ಜನ್ಯ ಹೆಚ್ಚುತ್ತಿದೆ ಮೊನ್ನೆ ಬಿಟಿಎಸ್ ಕಂಡೆಕ್ಟರ್ ಗೆ ಉತ್ತರ ಭಾರತೀಯನೊಬ್ಬ ಚಾಕುವಿನಿಂದ ತಿವಿದಿರುವ ಘಟನೆ ನಡೆದ ಬೆನ್ನಲ್ಲೆ ಕಬ್ಬನ್ ಪಾರ್ಕ್ ನಲ್ಲಿ ಪೋಟೋ ತೆಗೆಯುವಾಗ ಅಡ್ಡ ಬಂದ ಎಂದು ವ್ಯಕ್ತಿಯೊಬ್ಬನನ್ನು ಉತ್ತರ ಭಾರತೀಯನೊಬ್ಬ ರಕ್ತ ಬರುವಂತೆ ಹಲ್ಲೆ ಮಾಡಿರುವ ಅಮಾನವೀಯ ಘಟನೆ ನಡೆದಿದ್ದು ಅದು ತಡವಾಗಿ ಬೆಳಕಿಗೆ ಬಂದಿದೆ ಈ ಸಂಬಂದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಕಳೆದ ಸೆ.29ರಂದು ಮಧ್ಯಾಹ್ನ 3.30ಕ್ಕೆ ಹೆಚ್ HAL ಡಿಫೆನ್ಸ್ ವಿಭಾಗದಲ್ಲಿ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುವ ರವಿಕಿರಣ್ ಎಂಬುವರು ಕಬ್ಬನ್ ಪಾರ್ಕ್ ಗೆ ತೆರಳಿದ್ದು ಅವರಷ್ಟಕ್ಕೆ ಅವರು ನಡೆದು ಹೋಗುತ್ತಿದ್ದಂತ ವೇಳೆಯಲ್ಲೇ ಉತ್ತರ ಭಾರತ ಮೂಲಕ ವ್ಯಕ್ತಿಯೊಬ್ಬ ಪೋಟೋ ತೆಗೆದುಕೊಳ್ಳುತ್ತಿದ್ದ ಅಲ್ಲಿಯೇ ರವಿಕಿರಣ್ ಹೋಗಿದ್ದಾರೆ ಇದಕ್ಕೆ ಪೋಟೋ ತೆಗೆಯುವಾಗ ಅಡ್ಡ ಬರ್ತೀಯ ಎಂದು ಗಲಾಟೆ ಶುರುವಾಗಿದೆ. ಕಬ್ಬನ್ ಪಾರ್ಕ್ ಏನು ನಿಮ್ಮಪ್ಪಂದ ಎಂಬುದಾಗಿ ಇಬ್ಬರ ನಡುವೆ ಮಾತಿಗೆ ಚಕಮುಅಕಿ ನಡೆದಿದೆ ನಂತರ ಫೋಟೋ ತಗೆಯುತ್ತಿದ್ದ ಉತ್ತರ…

Read More

ನ್ಯೂಜ್ ಡೆಸ್ಕ್:ಭೂಮಿ ಮೇಲೆ ಒಂದು ಕೀ.ಮಿ ಉದ್ದ ಎನ್ನಬಹುದಾದನ್ನು ಎತ್ತರದ ಕಟ್ಟಡವನ್ನು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ‘ಜೆಡ್ಡಾ ಎಕನಾಮಿಕ್ ಟವರ್ಸ್’ ಎಂಬ ಹೆಸರಿನಲ್ಲಿ 1,007 ಮೀಟರ್ ಎತ್ತರದ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಇದು 157 ಮಹಡಿಗಳನ್ನು ಮತ್ತು 59 ಲಿಫ್ಟ್‌ಗಳನ್ನು ಹೊಂದಿದೆ. ಐಷಾರಾಮಿ ಅಪಾರ್ಟ್‌ಮೆಂಟ್‌ಗಳು, ಹೋಟೆಲ್‌ಗಳು ಮತ್ತು ಕಚೇರಿಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ 15 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ. ಇದು ಐಫೆಲ್ ಟವರ್, ಲೋಖಂಡ್ವಾಲಾ ಮಿನರ್ವಾ ಟ್ವರಗಳಿಗಿಂತ 3 ಪಟ್ಟು ಎತ್ತರ ಮತ್ತು ಎಂಪೈರ್ ಸ್ಟೇಟ್ ಕಟ್ಟಡದ ಎರಡು ಪಟ್ಟು ಎತ್ತರವಾಗಿರುತ್ತದೆ. ಈ ಹಿಂದೆ ಕಾಮಗಾರಿ ಸ್ಥಗಿತಗೊಂಡು ಮತ್ತೆ ಆರಂಭವಾಗಿದೆ.

Read More

ಮೈಸೂರು:ಮೂರು ದಿನಗಳ ಕಾಲ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯುಧ ಪೂಜೆ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದ್ದ ಅವರು ಈ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ ಸುದೀರ್ಘಕಾಲದಿಂದ ರಾಜಕೀಯದಲ್ಲಿ ಇರಲು ತಾಯಿ ಚಾಮುಂಡೇಶ್ವರಿ ಆಶಿರ್ವಾದದಿಂದ ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ರಾಜಕೀಯದಲ್ಲಿ ವೈರಿಗಳು ಹಾಗು ಹಿತೈಷಿಗಳು ಅಭಿಮಾನಿಗಳೂ ಇರುತ್ತಾರೆ, ರಾಜಕೀಯದಲ್ಲಿ ತೆಗಳುವವರು, ಹೊಗಳುವವರು ಇರುತ್ತಾರೆ.ಪ್ರಜಾಪ್ರಭುತ್ವದಲ್ಲಿ ಎಲ್ಲರೂ ನನ್ನನ್ನು ಸಹಮತಿಸಲೇ ಬೇಕೆಂಬ ಭಾವನೆ ನನಗಿಲ್ಲ. ಒಟ್ಟಾರೆ ಪ್ರಜಾಪ್ರಭುತ್ವದಲ್ಲಿ ಆರೋಗ್ಯಕರ ಚರ್ಚೆ, ಟೀಕೆಗಳು ನಡೆದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದರು.ನಾಡಿನ ಜನರಿಗೆ ದಸರಾ ಹಬ್ಬದ ಶುಭಾಶಯಗಳು ತಿಳಿಸಿದ ಅವರು ನಾಳೆ ನಡೆಯುವ ಜಂಬೂಸವಾರಿಯಲ್ಲಿ ಭಾಗವಹಿಸುತ್ತೇನೆ. ಸುಧೀರ್ಘವಾಗಿ ಹೆಚ್ಚು ಬಾರಿ ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡುತ್ತಿದ್ದೇನೆ. ನಾಡಿನ ಜನರ ಹಾಗೂ ದೇವರ ಆಶೀರ್ವಾದದಿಂದ ಪುಷ್ಪಾರ್ಚನೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಸದಾ ಇರುತ್ತದೆನನ್ನ ಮೇಲೆ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಸದಾ ಇರುತ್ತದೆ. ಜನರು ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅದಕ್ಕೆ ಇಷ್ಟೊಂದು ಬಾರಿ…

Read More