Author: Srinivas_Murthy

ಶ್ರೀನಿವಾಸಪುರ ತಾ.ಯದರೂರು ಕಂದಾಯ ವೃತ್ತದಲ್ಲಿ ಉದ್ದೇಶಿತ ಕೈಗಾರಿಕೆ ಬೆರೆಡೆಗೆ ವರ್ಗಾಯಿಸಿ ಬೇಟಪ್ಪ ನೇತೃತ್ವದ ರೈತರ ಅಗ್ರಹ ಕೋಲಾರ:ಶ್ರೀನಿವಾಸಪುರ ತಾಲೂಕಿನ ಯದರೂರು ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕೈಗಾರಿಕಾ ವಲಯವನ್ನು ಬೇರೆ ಕಡೆಗೆ ವರ್ಗಾಯಿಸುವಂತೆ ಒತ್ತಾಯಿಸಿ, ಯದರೂರು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಯದರೂರು ಭಾಗದ ರೈತರು ಗ್ರಾಮಸ್ಥರು ಜಿಲ್ಲಾಧಿಕಾರಿ ಆಕ್ರಂಪಾಷರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ ಬ್ಯಾಟಪ್ಪ ಮಾತನಾಡಿ, ಶ್ರೀನಿವಾಸಪುರ ತಾಲೂಕಿನ ಎದರೂರು ಗ್ರಾಮಗಳ ಸರ್ವೆ ನಂಬರ್ ಸುಮಾರು ಒಂದು ಸಾವಿರದ 273 ಎಕರೆ 24ವರೆ ಗುಂಟೆಯ ಜಮೀನಿನ ಮಾಲೀಕರು ಕುಟುಂಬದವರ ಹಲವಾರು ದಶಕಗಳಿಂದ ಕೃಷಿ ವಲಯವನ್ನು ನಂಬಿಕೊಂಡು ಜೀವನ ಮಾಡುತ್ತಿದ್ದಾರೆ.ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆಯಲ್ಲಿ, ರೈತರ ಹೆಸರಿನ ಜಮೀನನ್ನು ಭೂ ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಈ ಭಾಗದ ರೈತರು ಜಮೀನುಗಳಲ್ಲಿ ರೇಷ್ಮೆ ಟೊಮೆಟೊ, ಹೈನುಗಾರಿಕೆ ತೋಟಗಾರಿಕೆ ಮತ್ತು ಪುಷ್ಪಕೃಷಿ ಮಾಡುತ್ತ ಇದ್ದು ಇಂತಹ ಫಲವತ್ತಾದ ಜಮೀನುಗಳನ್ನು ಕೈಗಾರಿಕೆ…

Read More

ನ್ಯೂಜ್ ಡೆಸ್ಕ್: ನಕಲಿ ದಾಖಲೆ ಸೃಷ್ಟಿಸಿ ಹಿಂದೂ ಹೆಸರಲ್ಲಿ ದಾವಣಗೆರೆಯಲ್ಲಿ ಅಕ್ರಮವಾಗಿ ವಾಸ ಮಾಡುತ್ತಿದ್ದ ಪಾಕಿಸ್ತಾನ ಮೂಲದ ಕುಟುಂಬವನ್ನು ಬಂಧಿಸಲಾಗಿದೆ ಹಿಂದುಗಳ ಹೆಸರಿಟ್ಟುಕೊಂಡು ದಾವಣಗೆರೆಯ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.ಫಾತಿಮಾ ಅಲ್ಲಿನ ಅಲ್ತಾಫ್ ಎಂಬಾತನೊಂದಿಗೆ ವಿವಾಹವಾಗಿದ್ದಳು. ಉಳಿದಂತೆ, ಮೊಹಮ್ಮದ್ ಹನೀಫ್ ಪಾಕಿಸ್ತಾನದವನಾಗಿರುವ ಹನೀಫ್ ಮತ್ತು ಅವನ ಸೊಸೆ, ಮಗಳು, ಅಳಿಯನನ್ನೂ ಬಂಧಿಸಲಾಗಿದೆ.ರಶೀದ್ ಅಲಿ ಸಿದ್ದಿಕಿ ಎಂಬಾತನ ಮಾವ ಮೊಹಮ್ಮದ್ ಹನೀಫ್ ಬೆಂಗಳೂರಿನಲ್ಲಿ ಸೆರೆ ಸಿಕ್ಕಿರುವ ಪ್ರಮುಖ ಆರೋಪಿಯಾಗಿದ್ದು, ಸಿದ್ದಿಕಿ ಮೊಹಮ್ಮದ್ ಯಾಸಿನ್ (ಪುತ್ರ), ಜೈನಾಬಿ ನೂರ್ (ಸೊಸೆ), ಫಾತಿಮಾ (ಮಗಳು), ಅಲ್ತಾಫ್ ಬಂಧಿತ ಆರೋಪಿಗಳಾಗಿದ್ದಾರೆ.ಬೆಂಗಳೂರಲ್ಲಿ ಬಂಧನಕಳೆದ ಆರು ವರ್ಷಗಳಿಂದ ನಕಲಿ ಗುರುತಿನೊಂದಿಗೆ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಪ್ರಜೆ ಆತನ ಪತ್ನಿ ಮತ್ತು ಇತರ ಇಬ್ಬರನ್ನು ಭಾನುವಾರ ಬೆಂಗಳೂರಿನ ಜಿಗಣಿ ಪೋಲಿಸರು ಬಂಧಿಸಿದ್ದರು, ಪ್ರಾಥಮಿಕ ವಿಚಾರಣೆಯ ಪ್ರಕಾರ, ಪಾಕ್ ಪ್ರಜೆ ಪತ್ನಿ ಬಾಂಗ್ಲಾದೇಶದವರಾಗಿದ್ದು ಢಾಕಾದಲ್ಲಿ ವಿವಾಹವಾಗಿದ್ದರು.2014ರಲ್ಲಿ ದೆಹಲಿಗೆ ಬಂದಿದ್ದ ದಂಪತಿಗಳು ನಂತರ 2018ರಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಬಂಧಿತ…

Read More

ನ್ಯೂಜ್ ಡೆಸ್ಕ್:ಅಪಾರ್ಟ್‌ಮೆಂಟ್‌ ವೊಂದರಲ್ಲಿ ವಾಸವಿದ್ದ ಮಹಿಳೆಯೊಬ್ಬರಿಗೆ ಇಬ್ಬರು ಕಳ್ಳರು ಚಾಕು ತೋರಿಸಿ ಆಭರಣಗಳನ್ನು ದೋಚಿ ನಂತರ 27 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿರುತ್ತದೆ.ಭುವನೇಶ್ವರದ ಮೈತ್ರಿ ವಿಹಾರ್‌ನಲ್ಲಿ ಸೆಪ್ಟೆಂಬರ್ 30 ರಂದು ಮುಂಜಾನೆ 2 ಗಂಟೆ ಸುಮಾರಿಗೆ ಈ ಅಪರಾಧ ಘಟನೆ ನಡೆದಿದ್ದು ಪೊಲೀಸರು ಪಡೆದಿರುವ ದೂರಿನ ಪ್ರಕಾರ, ಮಹಿಳೆ ವಾಸವಿದ್ದ ಅಪಾರ್ಟ್‌ಮೆಂಟ್‌ ಬಂದಿರುವ ಕಳ್ಳರು ಚಾಕು ತೋರಿಸಿ ಮೊದಲು ಆಕೆಯ ಆಭರಣಗಳು ಮತ್ತು ಮೊಬೈಲ್ ಫೋನ್ ಅನ್ನು ದೋಚಿದ್ದಾರೆ ಮತ್ತು ನಂತರ ಸಹಾಯಕ್ಕಾಗಿ ಕಿರುಚಿದರೆ 2 ವರ್ಷದ ಮಗಳನ್ನು ಕೊಲ್ಲುವುದಾಗಿ ಬೆದರಿಸಿ ಮಹಿಳೆಯರನ್ನು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಮಹಿಳೆ ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, 10 ದಿನಗಳ ಹಿಂದೆಯಷ್ಟೇ ಫ್ಲಾಟ್‌ಗೆ ತೆರಳಿದ್ದಳು ಎಂದು ಪೊಲೀಸರು ಹೇಳುತ್ತಾರೆ.ಮನೆಗೆ ಹೋಗಲು ಕಳ್ಳರು ಬಿದಿರಿನ ಕಂಬಗಳನ್ನು ಬಳಸಿ ಕಟ್ಟಡವನ್ನು ಪ್ರವೇಶಿಸಿರಬಹುದು ಎಂದು ಅವರು ಶಂಕಿಸಿದ್ದಾರೆ. ಅಪರಾಧಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು…

Read More

ಶ್ರೀನಿವಾಸಪುರ:ತಾಲೂಕಿನ ಹೊದಲಿ ಗ್ರಾಮದ ನಿವಾಸಿ ರೇಷ್ಮೆ ಇಲಾಖೆ ಅಧಿಕಾರಿ ಎನ್.ಶ್ರೀನಿವಾಸಯ್ಯ ರವರ ಮಗ ಎಸ್.ವೇಣುಕುಮಾರ್ ಅವರು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ. ತೋಟಗಾರಿಕೆ ವಿಶ್ವವಿದ್ಯಾನಿಲಯ ಸಹ ಪ್ರಾದ್ಯಪಕರಾದ ಎ.ಎಂ.ನಡಾಫ್ ಮಾರ್ಗದರ್ಶನದಲ್ಲಿ ಎಸ್.ವೇಣುಕುಮಾರ್ ಮಂಡಿಸಿದ ಕೀಟಶಾಸ್ತ್ರ ಪ್ರಬಂಧಕ್ಕೆ ಡಾಕ್ಟರೇಟ್ ಪುರಸ್ಕಾರ ಮಾಡಿದೆ. ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ನಡೆದ ಘಟಿಕೊತ್ಸವ ಕಾರ್ಯಕ್ರಮದಲ್ಲಿ ಉಪಕುಲಪತಿ ವಿಷ್ಣುವರ್ಧನ್ ಹಾಗು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ರವರು ಡಾಕ್ಟರ್ ಆಪ್ ಫಿಲಾಸಫಿ(PHD)ಪದವಿಯನ್ನು ಎಸ್.ವೇಣುಕುಮಾರ್ ಗೆ ನೀಡಿರುತ್ತಾರೆ.

Read More

ನ್ಯೂಜ್ ಡೆಸ್ಕ್:ಮಹಾರಾಷ್ಟ್ರ ಸರ್ಕಾರ ಗೋವನ್ನು ‘ರಾಜ್ಯ ಮಾತಾ’ ಎಂದು ಘೋಷಿಸಿ ಆದೇಶ ಹೊರಡಿಸಿದೆ. ಭಾರತೀಯ ಸಂಪ್ರದಾಯದಲ್ಲಿ ಗೋವಿನ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಗುರುತಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ. ಕೃಷಿಯಲ್ಲಿ ಹಸುವಿನ ಸಗಣಿ ಬಳಸುವುದರಿಂದ ಆಹಾರದಲ್ಲಿ ಪೋಷಕಾಂಶಗಳು ಸೇರುತ್ತವೆ ಎಂದು ವ್ಯಾಖ್ಯಾನಿಸಲಾಗಿದೆ.ಚುನಾವಣೆ ಹೊತ್ತಿನಲ್ಲಿ ನಿರ್ಧಾರಮಹಾರಾಷ್ಟ್ರದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಸದ್ಯದಲ್ಲಿ ಚುನಾವಣಾ ದಿನಾಂಕವೂ ಘೋಷಣೆಯಾಗಲಿರುವ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಸೋಮವಾರ ಗೋವನ್ನು ‘ರಾಜ್ಯ ಮಾತೆ’ ಎಂದು ಘೋಷಿಸಿ ಆದೇಶ ಹೊರಡಿಸಿದ್ದು ಭಾರತೀಯ ಸಂಪ್ರದಾಯದಲ್ಲಿ ಗೋವುಗಳ ಸಾಂಸ್ಕೃತಿಕ ಮಹತ್ವವನ್ನು ಉಲ್ಲೇಖಿಸಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.ಇನ್ನು ರಾಜ್ಯ ಮಾತೆ ಎಂದು ಘೋಷಿಸಿದ ಅಧಿಕೃತ ಆದೇಶದಲ್ಲಿ, ಏಕನಾಥ್ ಶಿಂಧೆ ನೇತೃತ್ವದ NDAಸರ್ಕಾರ ಹಸು ಭಾರತೀಯ ಸಂಪ್ರದಾಯದ ಪ್ರಮುಖ ಭಾಗವಾಗಿದೆ ಮತ್ತು ಪ್ರಾಚೀನ ಕಾಲದಿಂದಲೂ ಗೋವಿಗೆ ಆಧ್ಯಾತ್ಮಿಕ, ವೈಜ್ಞಾನಿಕ ಮತ್ತು ಸಾಮಾಜಿಕ-ಆರ್ಥಿಕ ಮಹತ್ವವಿದೆ ಎಂದು ಹೇಳಲಾಗಿದೆ.ಭಾರತದಾದ್ಯಂತ ಕಂಡುಬರುವ ವಿವಿಧ ತಳಿಯ ಹಸುಗಳನ್ನು ಎತ್ತಿ ತೋರಿಸಿರುವ ಮಹಾರಾಷ್ಟ್ರ ಸರ್ಕಾರವು…

Read More

ಅತಿಯಾಗಿ ಉಪ್ಪು ಸೇವನೆ ರಕ್ತದೊತ್ತಡ ಹೆಚ್ಚುತ್ತದೆ ಹೃದಯ ಕಾಯಿಲೆ,ಪಾರ್ಶ್ವವಾಯು ಕಿಡ್ನಿ ಸಮಸ್ಯೆ ಕಾಡುತ್ತದೆ ನ್ಯೂಜ್ ಡೆಸ್ಕ್:ವಿಶ್ವ ಆರೋಗ್ಯ ಸಂಸ್ಥೆ ದಿನಕ್ಕೆ 1 ಟೀಚಮಚ ಉಪ್ಪನ್ನು ಮಾತ್ರ ಶಿಫಾರಸು ಮಾಡುತ್ತದೆ. ಅದಕ್ಕಿಂತ ಹೆಚ್ಚು ತಿಂದರೆ ರಕ್ತದೊತ್ತಡ ಹೆಚ್ಚಾಗಬಹುದು ಎಂದು ಎಚ್ಚರಿಸಿದೆ. ಇದು ಹೃದ್ರೋಗ ಮತ್ತು ಪಾರ್ಶ್ವವಾಯುವಿಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಲಾಗುತ್ತದೆ.ಉಪ್ಪು ಇಲ್ಲದೆ ಊಟ ರುಚಿಸುವುದಿಲ್ಲ ಆದರೆ ಉಪ್ಪು ಹಿತ ಮಿತವಾಗಿ ಸೇವನೆ ಮಾಡಬೇಕು ಅತಿಯಾಗಿ ಸೇವಿಸಿದರೆ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚುತ್ತದೆ,ಅದು ಹೆಚ್ಚಾದರೆ ಸಾಕಷ್ಟು ಸಮಸ್ಯೆಗಳು ಕಾಡಬಹುದಾಗಿದೆ.ಮುಖ್ಯವಾಗಿ ರಕ್ತದೊತ್ತಡ,ಹೃದಯದ ಕಾಯಿಲೆ ಮತ್ತು ಕಿಡ್ನಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಉಪ್ಪಿನಾಂಶವನ್ನು ಮಿತವಾಗಿ ಬಳಸಿದರೆ ತುಂಬಾ ಒಳ್ಳೆಯದು ಎಂದು ಅಹಾರ ತಜ್ಞರು ಅಭಿಪ್ರಾಯ ಪಡುತ್ತಾರೆ.ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಸೇವನೆ ಮಾಡಿದರೆ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ ಪದೇ ಪದೇ ನೀರು ಕುಡಿಯಬೇಕು ಎಂದು ಅನಿಸುತ್ತದೆ ಅತಿಯಾದ ಬಾಯಾರಿಕೆ ಆಗುತ್ತಲಿರುತ್ತದೆ,ದೇಹದಲ್ಲಿ ಅತಿಯಾದ ನೀರು ಶೇಖರಣೆಯಾದರೆ ಹೊಟ್ಟೆಉಬ್ಬರ ಉಂಟಾಗುತ್ತದೆ ಹೊಟ್ಟೆ ಉಬ್ಬರದಿಂದ ಹೊಟ್ಟೆಯಲ್ಲಿ ಬಿಗಿತ್ವ ಉಂಟಾಗುವುದು.ಶಿಫಾರಸು ಮಾಡಲಾದ ಮಿತಿಗೆ…

Read More

ನ್ಯೂಜ್ ಡೆಸ್ಕ್:ತಿರುಮಲ-ತಿರುಪತಿ ದೇವಾಲಯದ ಪ್ರಸಾದ ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪ ಬಳಸಿದ್ದಾರೆ ಎಂಬ ಸುದ್ದಿ ದೇಶಾದ್ಯಂತ ಸಂಚಲನ ಮೂಡಿಸಿದ್ದು ಇದರ ಅನ್ವಯ ಆಂಧ್ರಪ್ರದೇಶದ ಡೆಪ್ಯೂಟಿ ಸಿಎಂ ಪವನ್ ಕಲ್ಯಾಣ್ ಅವರು ಗುಂಟೂರು ಜಿಲ್ಲೆಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ 11 ದಿನಗಳ ಪ್ರಾಯಶ್ಚಿತ್ತ ದೀಕ್ಷೆ ತಗೆದುಕೊಂಡಿದ್ದರು.ವೆಂಕಟೇಶ್ವರನ ಸನ್ನಿಧಾನದಲ್ಲಿ ದೀಕ್ಷೆ ತರೆಯಲಿದ್ದಾರೆ.ಪವನ್ ಕಲ್ಯಾಣ್ ಅಕ್ಟೋಬರ್ 2 ರಂದು ಸಂಜೆ 4 ಗಂಟೆಗೆ ತಿರುಪತಿ ರೇಣಿಗುಂಟಾ ವಿಮಾನ ನಿಲ್ದಾಣವನ್ನು ತಲುಪಿ ಅಲ್ಲಿಂದ ಸಂಜೆ 5 ಗಂಟೆಗೆ ರಸ್ತೆ ಮೂಲಕ ಅಲಿಪಿರಿಗೆ ತೆರಳಿ ಅಲ್ಲಿಂದ ಮೆಟ್ಟಿಲು ಮಾರ್ಗವಾಗಿ ತಿರುಮಲಕ್ಕೆ ನಡೆದುಕೊಂಡು ರಾತ್ರಿ 9 ಗಂಟೆಗೆ ತಿರುಮಲ ತಲುಪಿ ಅಂದು ರಾತ್ರಿ ತಿರುಮಲ ಬೆಟ್ಟದಲ್ಲಿ ತಂಗಲಿದ್ದಾರೆ. ಮರುದಿನ ಅಂದರೆ ಅಕ್ಟೋಬರ್ 3 ರಂದು ಬೆಳಿಗ್ಗೆ ಶ್ರೀವಾರಿ ದರ್ಶನದ ನಂತರ ದೀಕ್ಷೆಯನ್ನು ತೆರೆಯಲಿದ್ದಾರೆ.ನಂತರ ಸಂಜೆ ತಿರುಪತಿ ಮಹಾನಗರದಲ್ಲಿ ನಡೆಯುವ ವಾರಾಹಿ ಸಭೆಯಲ್ಲಿ ಪವನ್ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ತಿರುಮಲ ಲಡ್ಡು ಕಲಬೆರಕೆ ಕುರಿತ ಟೀಕೆಗಳ ಬಗ್ಗೆ ಮಾತನಾಡ ಬಹುದು…

Read More

ಡಿಗ್ರಿ ಹಾಸ್ಟಲ್ ನಿರ್ವಹಣೆ ಇಲ್ಲದೆ ದನದ ಕೊಟ್ಟಿಗೆಯಂತಾಗಿದೆ ಮೇಲ್ವಿಚಾರಕ ಪತ್ತೆ ಇಲ್ಲ ಶ್ರೀನಿವಾಸಪುರ:ಪಟ್ಟಣದ ಸರ್ಕಾರಿ ಪದವಿ ಹಾಸ್ಟಲ್ ನಿರ್ಹಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಅಸಡ್ಡೆ ತೋರುತ್ತಿದ್ದಾರೆ ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಗರಂ ಆಗಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರನ್ನು ದೂರವಾಣಿ ಮೂಲಕ ತರಾಟೆಗೆ ತಗೆದುಕೊಂಡರು.ಇಂದು ಭಾನುವಾರ ಉಪಲೋಕಾಯುಕ್ತ ಬಿ.ವೀರಪ್ಪ ಮತ್ತು ಎಸ್.ಪಿ ಧನಂಜಯ್ ಡಿ.ವೈ.ಎಸ್.ಪಿ ಸೂರ್ಯನಾರಯಣ್ ತಂಡ ಅವರು ಶ್ರೀನಿವಾಸಪುರದ ಸರ್ಕಾರಿ ಪದವಿ ಹಾಸ್ಟಲ್ ಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಬಗ್ಗೆ ಕೆಂಡಾಮಂಡಲವಾದರು, ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದ ಅವರು ಇಂತಹ ವಾತವರಣದಲ್ಲಿ ವಿದ್ಯಾರ್ಥಿಗಳು ವಾಸ ಮಾಡಲು ಯೋಗ್ಯವಾಗಿಲ್ಲ ಇಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲ ಅಡುಗೆ ಕೋಣೆಯಲ್ಲಿ ಸ್ವಚ್ಚತೆ ಇಲ್ಲ ಕಟ್ಟಡದ ಕಾಂಪೌಂಡಿಗೆ ಗೇಟ್ ಹಾಳಾಗಿದ್ದರು ಸರಿ ಮಾಡಿಸಲು ಅಧಿಕಾರಿಗಳು ಮುಂದಾಗಿಲ್ಲ ಹಾಸ್ಟಲ್ ಮೇಲ್ವಿಚಾರಕ ನಾಪಪತ್ತೆ ಆಗಿದ್ದಾನೆ ದನಗಳ ಕೊಟ್ಟಿಗೆಯಂತಿದೆ ಇಲ್ಲಗಳ ನಡುವೆ ಮಕ್ಕಳು ವಿದ್ಯಾಭ್ಯಾಸ ಮಾಡುವಂತ ಶೋಚನೀಯ ಪರಿಸ್ಥಿತಿ ಇದೆ ಇದಕ್ಕೆ…

Read More

ಬೆಂಗಳೂರು:ದಶಕಗಳ ಕನಸಾಗಿದ್ದ ಗ್ರಾಮೀಣ ಬಸ್ ಪಾಸ್ ಸೌಲಭ್ಯವನ್ನು ಜಾರಿಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕಾವೇರಿಯಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗ ಅಭಿನಂದನೆ ಸಲ್ಲಿಸಿತು.ಈ ಸಂದರ್ಭದಲ್ಲಿ ಮಾತನಾಡಿದ‌ ಮುಖ್ಯಮಂತ್ರಿ ಬಸ್ ಪಾಸ್ ಬಗ್ಗೆ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಮಾತು ಕೊಟ್ಟಿದ್ದೆ. ಅದರಂತೆ ನಿಮ್ಮ ಬೇಡಿಕೆ ಈಡೇರಿಸಿ ಜಾರಿಗೆ ನೀಡಿದ್ದೇನೆ. ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ರಾಜ್ಯ ಘಟಕದ ರಾಜ್ಯ ಖಜಾಂಚಿ ವಾಸುದೇವ ಹೊಳ್ಳ, ಬೆಂಗಳೂರು ನಗರ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಟಿವಿ9 ರಾಜಕೀಯ ವಿಭಾಗ ಮುಖ್ಯಸ್ಥ ಪ್ರಮೋದ್ ಶಾಸ್ತ್ರಿ, ನ್ಯೂಸ್18 ರಾಜಕೀಯ ಬ್ಯೂರೋ ಮುಖ್ಯಸ್ಥ ಚಿದಾನಂದ ಪಟೇಲಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕೆ.ವಿ.ಪ್ರಭಾಕರ್ ಗೆ ಸನ್ಮಾನಬಸ್ ಪಾಸ್ ಸೌಲಭ್ಯವನ್ನು ದೊರಕಿಸಿ ಕೊಡಲು ಸಹಕರಿಸಿದ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರನ್ನೂ ಕೆಯುಡಬ್ಲೂಜೆ ಸನ್ಮಾನಿಸಿತು

Read More

ಬೆಂಗಳೂರು:ಬೆಂಗಳೂರು ನಗರದ ಹೊರವಲಯ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹಲವು ದಿನಗಳಿಂದ ಸಾರ್ವಜನಿಕವಾಗಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.ಕೆಲ ದಿನಗಳ ಹಿಂದೆ ಚಿರತೆಯೊಂದು ಹೆದ್ದಾರಿ ಕ್ರಾಸ್ ಮಾಡುತ್ತಿರುವ ದೃಶ್ಯ ಸೆರೆಯಾಗಿತ್ತು. ಇದರೊಂದಿಗೆ ಐಟಿಬಿಟಿಗೆ ಖ್ಯಾತಿ ಪಡೆದು ಹಲವಾರು ಸಾಫ್ಟ್‌ವೇರ್ ಸಂಸ್ಥೆಗಳು ಇರುವ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸ್ಥಳೀಯರು ಹಾಗೂ ಟೆಕ್ಕಿಗಳು ಆತಂಕಕ್ಕೆ ಒಳಗಾಗಿದ್ದರು.ಚಿರತೆ ಓಡಾಟದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಕ್ಯಾಮರಾಗಳನ್ನ ಅಳವಡಿಸಿ ಚಿರತೆ ಓಡಾಟದ ಬಗ್ಗೆ ನಿಗಾ ವಹಿಸಿದ್ದರು.ಕ್ಯಾಮೆರಾದಲ್ಲಿ ಹಲವು ಕಡೆಗಳಲ್ಲಿ ಚಿರತೆ ಓಡಾಟ ಕಂಡು ಬಂದಿದ್ದು ಅದರ ಜಾಡು ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿ ಮೂರು ಬೋನ್ ಗಳನ್ನ ಇಟ್ಟು ಸೆರೆಗೆ ಕಾರ್ಯಾಚರಣೆ ನಡೆಸಿದ್ದರು. ಎಲೆಕ್ಟ್ರಾನಿಕ್ ಸಿಟಿಯ ಎಲಿಪ್ಯಾಡ್ ಜಾಗದಲ್ಲಿ ಹೆಚ್ಚಾಗಿ ಓಡಾಡುತ್ತಿದ್ದ ಚಿರತೆ, ಅಲ್ಲಿ ನಿರ್ಜನ ಪ್ರದೇಶದಲ್ಲಿಯೇ ಹೆಚ್ಚಾಗಿ ಬಿಡುಬಿಟ್ಟಿರುವುದು ಖಚಿತವಾಗಿ ಎಲಿಪ್ಯಾಡ್ ಜಾಗದಲ್ಲಿ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ.ಬೋನಿಗೆ ಬಿದ್ದಿರುವ ಚಿರತೆಗೆ ಐದು ವರ್ಷದ…

Read More