Author: Srinivas_Murthy

ನ್ಯೂಜ್ ಡೆಸ್ಕ್:ಪ್ರಿಯತಮೆಯೊಂದಿಗೆ ವಿವಾಹಕ್ಕೆ ಅಡ್ಡಿಪಡಿಸಿದ ಎಂದು ಪ್ರಿಯತಮೆಯ ತಂದೆಯ ಮೇಲೆ ಪಾಗಲ್ ಪ್ರೇಮಿ ಗುಂಡು ಹಾರಿಸಿರುವ ಘಟನೆ ನಡೆದಿದೆ.ಇದರಿಂದ ಪ್ರಿಯತಮೆಯ ತಂದೆ ರೇವಂತ್ ಆನಂದ್ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೈದರಾಬಾದ್ ನಗರದಲ್ಲಿ ನಡೆದಿದೆ.ಘಟನೆಯ ವಿವರಕ್ಕೆ ಹೋದರೆ ಹೈದರಾಬಾದ್ ನಗರದ ಅಂಬರ್ ಪೇಟೆಯ ಭಾಗದ ಬಲ್ವಿಂದರ್ ಸಿಂಗ್ (25) ಹಾಗೂ ಸರೂರ್ನಗರ ವ್ಯಾಪ್ತಿಯ ವೆಂಕಟೇಶ್ವರ ಕಾಲೋನಿಯ ಯುವತಿ (23) ಕೆಲ ದಿನಗಳಿಂದ ಪ್ರಿತಿಸುತ್ತಿದ್ದರು.ವಿಷಯ ತಿಳಿದುಕೊಂಡ ಯುವತಿ ತಂದೆ ಇದನ್ನು ವಿರೋಧಿಸಿ ಯುವತಿಯನ್ನು ಅಮೆರಿಕಕ್ಕೆ ಕಳುಹಿಸಿದ್ದಾರೆ ಇದನ್ನು ತಿಳಿದುಕೊಂಡ ಪ್ರೇಮಿ ಬಲ್ವಿಂದರ್ ಸಿಂಗ್ ಬಾಲಕಿಯ ತಂದೆ ರೇವಂತ್ ಆನಂದ್ ಜತೆ ವಾಗ್ವಾದಕ್ಕೆ ಇಳಿದಿದ್ದಾನೆ. ಮಾತಿಗೆ ಮಾತು ಬೆಳದಿದೆ ತನ್ನೊಂದಿಗೆ ತಂದಿದ್ದ ಏರ್ ಗನ್ ನಿಂದ ಯುವತಿ ತಂದೆ ರೇವಂತ್ ಆನಂದ್ ಮೇಲೆ ಗುಂಡು ಹಾರಿಸಿದ್ದಾನೆ.ಗುಂಡು ರೇವಂತ್ ಆನಂದ್ ಕಣ್ಣಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದಾರೆ. ರೇವಂತ್ ಆನಂದ್ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.…

Read More

ನ್ಯೂಜ್ ಡೆಸ್ಕ್:NVIDIA ವಿಶ್ವದ ಅತ್ಯಂತ ದುಬಾರಿ ಬಹುರಾಷ್ಟ್ರೀಯ ಸಾಫ್ಟ್ ವೇರ್ ಕಂಪನಿಯ CEO ಜೆನ್ಸನ್ ಹುವಾಂಗ್ ವಾಚ್ ಧರಿಸುವುದಿಲ್ಲ. ಅದಕ್ಕೆ ಕಾರಣವನ್ನು ಅವರು ಸಹ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ನಮ್ಮ ಕಂಪನಿಯ ಉದ್ಯೋಗಿಗಳನ್ನು ಕೇಳಿ ನಮ್ಮಲ್ಲಿ ದೀರ್ಘಾವಧಿ ಯೋಜನೆಗಳು ಯಾವುದು ಇರುವುದಿಲ್ಲ. ನಾವೇನಿದ್ದರು ವರ್ತಮಾನದತ್ತ(ongoing process) ದೃಷ್ಟಿ ಹರಿಸುವುದು ನಮ್ಮ ಮುಖ್ಯ ಕಾರ್ಯಸೂಚಿಯಾಗಿದೆ. ಈ ರೀತಿಯಾದ ಆಲೋಚನೆಯೊಂದಿಗೆ ನಾನು ಗಡಿಯಾರವನ್ನು ಧರಿಸುವುದಿಲ್ಲ ಎಂದಿರುತ್ತಾರೆ. ಇದೊಂದು ಸಾಫ್ಟ್‌ವೇರ್ ಮತ್ತು ಫ್ಯಾಬ್ಲೆಸ್ ಕಂಪನಿಯಾಗಿದ್ದು, ಗ್ರಾಫಿಕ್ಸ್ ಪ್ರೊಸೆಸಿಂಗ್ ಯೂನಿಟ್‌ಗಳು (ಜಿಪಿಯುಗಳು), ಡೇಟಾ ಸೈನ್ಸ್ ಮತ್ತು ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್‌ಗಾಗಿ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್‌ಫೇಸ್‌ಗಳು (ಎಪಿಐಗಳು), ಹಾಗೆಯೇ ಮೊಬೈಲ್ ಕಂಪ್ಯೂಟಿಂಗ್ ಮತ್ತು ಆಟೋಮೋಟಿವ್‌ಗಾಗಿ ಚಿಪ್ ಯೂನಿಟ್‌ಗಳಲ್ಲಿ (ಎಸ್‌ಒಸಿಗಳು) ಸಿಸ್ಟಮ್ ಅನ್ನು ವಿನ್ಯಾಸಗೊಳಿಸುತ್ತದೆ ಮತ್ತು ಪೂರೈಸುತ್ತದೆ.ಎಂದಿರುತ್ತಾರೆ.

Read More

ನ್ಯೂಜ್ ಡೆಸ್ಕ್: ಬಂಗಾಳ ಕೊಲ್ಲಿಯಲ್ಲಿ ಹವಾಮಾನ ವೈಪರೀತ್ಯದಿಂದ ವಾಯುಭಾರ ಕುಸಿತವಾಗಿ ಏರ್ಪಡುವ ವಾತವರಣದ ಹಿನ್ನಲೆಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೇರಿಯಲ್ಲಿ ನವೆಂಬರ್ 14ರ ವರೆಗೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ ಕೆಲವೊಂದು ಕಡೆ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.ಕರ್ನಾಟಕದ ಕೋಲಾರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹೇಳಿದೆ.ಕರ್ನಾಟಕದ ಕೋಲಾರ ಜಿಲ್ಲೆ ಸೇರಿದಂತೆ ಚಿಕ್ಕಬಳ್ಳಾಪುರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯನಗರ, ಯಾದಗಿರಿಜಿಲ್ಲೆಗಳಲ್ಲಿ ಮಳೆಯಾಗಲಿದೆ.ಆಂಧ್ರದ ಅನ್ನಮಯ್ಯ,ಚಿತ್ತೂರು ಮತ್ತು ತಿರುಪತಿ,ಸೀಮಾ,ನೆಲ್ಲೂರು ಹಾಗು ಕಾಕಿನಾಡ ಜಿಲ್ಲೆಗಳಲ್ಲಿ ನಾಳೆಯಿಂದಲೆ ಮಳೆಯಾಗಲಿದೆ ಎಂದು ತಿಳಿಸಿದೆ. ಮಳೆಯ ಹಿನ್ನೆಲೆಯಲ್ಲಿ ಜನರು ಜಾಗೃತರಾಗಿರಲು ಅಲ್ಲಿನ ಸರ್ಕಾರ ಸೂಚಿಸಿದೆ.ಕರ್ನಾಟಕದಲ್ಲಿ ತಾಪಮಾನ ಕಡಿಮೆಯಾದಂತೆ ಬೆಳಗ್ಗೆ ಮತ್ತು ಸಂಜೆ…

Read More

ಚಿಂತಾಮಣಿ: ಚಿಂತಾಮಣಿ-ಶಿಡ್ಲಘಟ್ಟ ರಸ್ತೆಯಲ್ಲಿ ಚಿಂತಾಮಣಿ ನಗರ ವ್ಯಾಪ್ತಿಯ ತಿಮ್ಮಸಂದ್ರದ ವಾರ್ಡ್ ನಂ31 ಮೋರಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.ಸುಮಾರು 45 ರಿಂದ 50 ವರ್ಷ ವಯಸ್ಸುಳ್ಳ ವ್ಯಕ್ತಿಯ ಶವವಾಗಿದ್ದು ಮೊರಿಯಲ್ಲಿ ಕಂಡು ಸ್ಥಳೀಯರು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ಮುಟ್ಟಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಶವವನ್ನು ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದು.ಮೃತ ವ್ಯಕ್ತಿ ವಿಷ ಕುಡಿದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು ಪೊಲೀಸರ ತನಿಖೆಯಿಂದ ಸತ್ಯಾಸತ್ಯೆ ಹೊರಬರಬೇಕಿದೆ.

Read More

ಚಿಂತಾಮಣಿ: ಕನ್ನಡ ಭಾಷೆ ಜೀವನದ ಭಾಷೆಯಾಗಬೇಕು ಇದಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಸದಾ ನೆರವಾಗುತ್ತದೆ ಗಡಿಭಾಗದ ಶಾಲೆಗಳಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳಲ್ಲಿ ಮತ್ತು ಜನರಲ್ಲಿ ಕನ್ನಡ ಭಾಷೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಕಸಾಪ ಮಾಡುತ್ತಿದೆ ಎಂದು ಚಿಂತಾಮಣಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ವಿ. ಶ್ರೀನಿವಾಸನ್ ಹೇಳಿದರು.ಅವರು ಗಂಜಿಗುಂಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿಂತಾಮಣಿ ಗೆಳೆಯರ ಬಳಗದ ವತಿಯಿಂದ ಪ್ರತಿ ವರ್ಷದಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಭವಿಷ್ಯಕ್ಕೆ ನೆರವು ನೀಡುವ ನಿಟ್ಟಿನಲ್ಲಿ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.ಎಲ್ಲಾ ಭಾಷೆಗಳ ಬಗ್ಗೆ ಗೌರವ ಇರಲಿ ಆದರೆ ಬದುಕಿನ ಭಾಷೆ ಕನ್ನಡವನ್ನು ಪ್ರೀತಿಸಿ ಗೌರವಿಸಿ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಮುಖ್ಯಶಿಕ್ಷಕಿ ವಿ.ವೆಂಕಟರತ್ನಮ್ಮ ಮಾತನಾಡಿ ಮಕ್ಕಳಲ್ಲಿನ ಪ್ರತಿಭೆಯನ್ನು ಹೊರತೆಗೆಯಲು ಇದು ಉತ್ತಮವಾದ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮಗಳನ್ನು ಗಡಿಭಾಗದಲ್ಲಿ ಆಯೋಜನೆ ಮಾಡುತ್ತಿರುವ ಚಿಂತಾಮಣಿ ಗೆಳೆಯರ ಬಳಗದ ಎಲ್ಲರಿಗೂ ಅಭಿನಂದನೆಗಳನ್ನು ಹೇಳಿದರು.ಮಾಧ್ಯಮ ಪ್ರತಿನಿಧಿ…

Read More

ನ್ಯೂಜ್ ಡೆಸ್ಕ್:ಕ್ಷಮಿಸಿ ಅಪ್ಪ ಅಮ್ಮನನ್ನು ಕೊಂದು ಬಿಟ್ಟೆ ! ಅಪ್ಪನೊಂದಿಗೆ ಒರ್ವ ಮಗ ಹೀಗೆಂದು ಹೇಳಿದಾಗ ಯಾವ ತಂದೆ ಏನು ಮಾಡಲು ಸಾಧ್ಯ ವಿದೇಶಕ್ಕೆ ಹೋಗುವುನಿದ್ದ ಮಗನಿಗೆ ಬುದ್ಧಿ ಹೇಳಿದ ತಾಯಿಗೆ ಚಾಕು ಹಾಕಿದ ದುರುಳನ ಕಥೆಯಿದು.ದೆಹಲಿಯ ಆಗ್ನೇಯ ಭಾಗಾದ ಬದರ್‌ಪುರದಲ್ಲಿ 50 ವರ್ಷದ ಮಹಿಳೆಯನ್ನು ಆಕೆಯ ಮಗ ಚಾಕುವಿನಿಂದ ಇರಿದು ಕೊಂದಿದ್ದಾನೆ ಈ ದುಷ್ಕೃತ್ಯ ಆತಂಕಕಾರಿಯಾಗಿದ್ದು ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಅಕೆಯ ಗಂಡ ಆಸ್ಪತ್ರೆ ಸೇರಿಸಿದರು ಆಕೆ ಉಳಿಯಲಿಲ್ಲ.ಆಸ್ಪತ್ರೆ ಸಿಬ್ಬಂದಿ ಪರಿಸ್ಥಿತಿಯನ್ನು ಗಮನಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಅಲ್ಲಿಗೆ ಬಂದ ಪೊಲೀಸ್ ತಂಡ ಪ್ರಾಥಮಿಕ ಮಾಹಿತಿ ಪಡೆದು ಘಟನೆ ನಡೆದ ಜೈತ್ ಪುರಕ್ಕೆ ತೆರಳಿದ್ದಾರೆ ಅಲ್ಲಿ ಪರಿಸ್ಥಿತಿ ನೋಡಿದ ಪೊಲೀಸರಿಗೆ ಅಚ್ಚರಿಯ ವಿಷಯಗಳು ಬೆಳಕಿಗೆ ಬಂದಿವೆ. 31 ವರ್ಷದ ಕೃಷ್ಣಕಾಂತ್ ತನ್ನ ತಾಯಿಯನ್ನು ಚಾಕುವಿನಿಂದ ಹಲವಾರು ಬಾರಿ ಇರಿದು ಕೊಂದಿದ್ದಾನೆ ನಂತರ ತಂದೆ ಸುರ್ಜಿತ್ ಗೆ ಫೋನ್ ಮಾಡಿ ಮನೆಗೆ ಬರುವಂತೆ ಹೇಳಿದ್ದಾನೆ, ತಂದೆ ಬಂದಾಗ ಕೃಷ್ಣಕಾಂತ್ ಕ್ಷಮಿಸಿ ಅಪ್ಪಾ…

Read More

ನ್ಯೂಜ್ ಡೆಸ್ಕ್:ಅಂಗನವಾಡಿ ನೌಕರರನ್ನು ಮತ್ತು ಸಿಬ್ಬಂದಿಯನ್ನು ಖಾಯಂ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಗುಜರಾತ್ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.ನಾಲ್ಕನೇ ದರ್ಜೆ ಗುತ್ತಿಗೆ ನೌಕರರಿಗೂ ₹15 ಸಾವಿರ ಸಂಬಳ ನೀಡಲಾಗುತ್ತಿದ್ದು, ಇನ್ನು ಅಂಗನವಾಡಿ ಸಿಬ್ಬಂದಿಗಳಿಗೆ ₹5-10 ಸಾವಿರ ಗೌರವಧನ ನೀಡಲಾಗುತ್ತಿದೆ ಎಂದು 1983 ಮತ್ತು 2010 ರ ನಡುವೆ ಕೇಂದ್ರದ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ (ICDS) ಯೋಜನೆಯಡಿಯಲ್ಲಿ ನೇಮಕಗೊಂಡ AWW ಗಳು ಮತ್ತು AWH ಗಳು ಸಲ್ಲಿಸಿದ ಅರ್ಜಿಗಳ ಮೇಲೆ ನ್ಯಾಯಾಲಯವು ತನ್ನ ತೀರ್ಪು ನೀಡಿದೆ.10 ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡಿದರೂ, ದಿನಕ್ಕೆ ಆರು ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡಿದರೂ ಯಾವುದೇ ಪ್ರಯೋಜನವಾಗದೆ ಗೌರವಧನವಾಗಿ ಅತ್ಯಲ್ಪ ಮೊತ್ತವನ್ನು ನೀಡಲಾಗಿದೆ ಎಂದು ತಮ್ಮ ಮನವಿಯಲ್ಲಿ ತಿಳಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಇದರೊಂದಿಗೆ ಪೀಠವು ಅವರನ್ನು ಸರ್ಕಾರಿ ಸೇವೆಗೆ ತರಬೇಕು ಮತ್ತು ವೇತನ ಶ್ರೇಣಿಯ ಬಗ್ಗೆ ನಮೂದಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಿದೆ.

Read More

ಶ್ರೀನಿವಾಸಪುರ:ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ಕರ್ನಾಟಕ ಹೊಂದಿದೆ ಎಂದು ವಿಷನ್ ಇಂಡಿಯಾ ಶಾಲೆಯ ಮುಖ್ಯಸ್ಥ ಡಾ.ವೇಣುಗೋಪಾಲ್ ಹೇಳಿದರು ಅವರು ಇಂದು ತಾಲೂಕಿನ ರೋಣೂರು ಕ್ರಾಸ್ ನಲ್ಲಿರುವ ವಿಷನ್ ಇಂಡಿಯಾ ಶಾಲಾ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕನ್ನಡದ ನೆಲದಲ್ಲಿ ಆಡಳಿತ ನಡೆಸಿದ ಸಾಮ್ರಾಜ್ಯಗಳು ಕನ್ನಡವನ್ನು ಆಡಳಿತ ಭಾಷೆಯನ್ನಾಗಿಸಿಕೊಂಡಿದ್ದವು,ಈ ನೆಲದಲ್ಲಿ ತತ್ತ್ವಜ್ಞಾನಿಗಳು,ಕವಿಗಳು ಆರಂಭಿಸಿದ ಭಾಷಾ ಹಾಗು ಸಾಹಿತ್ಯ ಪರಂಪರೆ ಇಂದಿನವರಿಗೂ ಉಳಿದು,ಬೆಳೆದು ಬಂದಿದೆ ಎಂದರು.ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಪೊಲೀಸ್ ಇನ್ಸಪೇಕ್ಟರ್ ಮಹಮದ್ ಗೊರವನಕೊಳ್ಳ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಕೋರಿ ಕರ್ನಾಟಕದ ನೆಲದಲ್ಲಿ ಭಾಷೆ, ಸಂಸ್ಕೃತಿ ಉಳಿದು, ಬೆಳೆದು ಬರುತ್ತಿದೆ. ಆಚಾರ ವಿಚಾರದಲ್ಲಿ ವೈವಿಧ್ಯತೆ ಇದ್ದರೂ ಭಾಷ ನೆಲಗಟ್ಟಿನಲ್ಲಿ ವಿವಿಧತೆಯಲ್ಲಿ ಏಕತೆ ಎನ್ನುವಂತೆ ಭಾಷ ಸೌಹಾರ್ದತೆಯನ್ನು ಕಾಪಾಡಿಕೊಂಡು ಬಂದಿದ್ದೇವೆ ಹೊರಗಿನಿಂದ ಬರುವರಿಗೆ ಕನ್ನಡದ ಭಾಷೆ ನಾವು ಕಲಿಸಬೇಕು ಎಂದರು.ಕ್ಷೇತ್ರ ಶಿಕ್ಷ ಣಧಿಕಾರಿ ಲಕ್ಷ್ಮಯ್ಯ.ಬಿಜೆಪಿ ತಾಲೂಕು ಅಧ್ಯಕ್ಷ ರೋಣೂರುಚಂದ್ರು,VIP ಶಾಲೆಯ ಮುಖ್ಯೋಪಾದ್ಯಯೆ ತಬಸಮ್,ಶಿಕ್ಷಕ ವೇಣುಗೋಪಾಲ್,ಶಿವಣ್ಣ ಮುಂತಾದವರು ಇದ್ದರು. ವರದಿ:ನಂಬಿಹಳ್ಳಿಸುರೇಶ್

Read More

ನ್ಯೂಜ್ ಡೆಸ್ಕ್:ತೆಲಂಗಾಣ ರಾಜ್ಯದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಆರೋಗ್ಯವಂತರಾಗಿ ಬದುಕಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಸಿಎಂ ರೇವಂತ್ ಪ್ರಧಾನಿಗೆ ಧನ್ಯವಾದ ತಿಳಿಸಿದ್ದಾರೆ.ವಿದ್ಯಾರ್ಥಿ ದಸೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆತೆಲಂಗಾಣದ ವಿಭಜಿತ ಮಹಬೂಬ್ ನಗರ ಜಿಲ್ಲೆಯಲ್ಲಿ ಸಿಎಂ ರೇವಂತ್ ರೆಡ್ಡಿ ಕಾಲೇಜು ದಿನಗಳಲ್ಲಿಯೇ ನಾಯಕರಾಗಿ ಹೊರಹೊಮ್ಮಿದ್ದರು. ನಂತರದಲ್ಲಿ ರಾಜಕೀಯ ಪ್ರವೇಶಿಸಿದ ಅವರಿಗೆ 2006 ರಲ್ಲಿ ಜಿಲ್ಲಾಪಂಚಾಯಿತಿ ಸ್ಥಾನಕ್ಕೆ ಸ್ಪರ್ದಿಸಲು ಯಾವ ಪಕ್ಷದವರು ಟಿಕೆಟ್ ನೀಡದ ಹಿನ್ನಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ZPTC ಸ್ಪರ್ದಿಸಿ ವಿಜೇತರಾದರು ನಂತರ 2007 ರಲ್ಲಿ MLC ಯಾಗಿ ಸಂಚಲನಾತ್ಮಕವಾಗಿ ಗೆಲವು ಸಾಧಿಸಿದರು ನಂತರ, ಅವರು ಚಂದ್ರಬಾಬು ನಾಯಕತ್ವ ಮೆಚ್ಚಿ ತೆಲಗುದೇಶಂ ಪಕ್ಷಕ್ಕೆ ಸೇರ್ಪಡೆಯಾದರು ಮತ್ತು ತೆಲಂಗಾಣ ಪಕ್ಷದ ಘಟಕದ ಅಧ್ಯಕ್ಷರಾದರು. ನಂತರದ ರಾಜಕೀಯ ಬೆಳವಣಿಗೆಯಲ್ಲಿ ತೆಲಂಗಾಣ ರಾಜ್ಯ ಉದ್ಭವಾದ ನಂತರ ತಮ್ಮ ರಾಜಕೀಯ ಅಸ್ತಿತ್ವ ಉಳಸಿಕೊಳ್ಳಲು ಅವರು ಕಾಂಗ್ರೆಸ್ ಸೇರಿ ಟಿಪಿಸಿಸಿ ಅಧ್ಯಕ್ಷ ಸ್ಥಾನ…

Read More

ನ್ಯೂಜ್ ಡೆಸ್ಕ್:ಮಹಿಳೆಯರ ಬಟ್ಟೆಗಳನ್ನು ಪುರುಷರು ಹೊಲಿಯಬಾರದು ಎಂದು ಉತ್ತರಪ್ರದೇಶ ರಾಜ್ಯದ ಮಹಿಳಾ ಆಯೋಗ ಹೇಳಿದೆ. ಪುರುಷರು ಹೊಲಿದರೆ bad touch ಕಾಯ್ದೆಗೆ ಬರುತ್ತದೆ ಎಂದಿರುವ ಆಯೋಗ, ಮಹಿಳೆಯರ ಬಟ್ಟೆಯ ಅಳತೆಯನ್ನು ಮಹಿಳೆಯರೇ ತೆಗೆದುಕೊಳ್ಳಬೇಕು ಮತ್ತು ಟೈಲರಿಂಗ್ ಅಂಗಡಿಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಆದೇಶಿಸಿದೆ.ಮಹಿಳೆಯರ ತಲೆ ಕೂದಲನ್ನು ಸಹ ಪುರುಷರು ಕತ್ತರಿಸದೆ ಮಹಿಳೆಯರೆ ಕತ್ತರಿಸಬೇಕು ಎಂಬ ಪ್ರಸ್ತಾವನೆಯನ್ನು ಉತ್ತರಪ್ರದೇಶ ಸರ್ಕಾರಕ್ಕೆ ಸಲ್ಲಿಸಿದೆ. ಮಹಿಳೆಯರನ್ನು bad touch ನಿಂದ ರಕ್ಷಿಸಲು ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ.

Read More