Author: Srinivas_Murthy

ಶ್ರೀನಿವಾಸಪುರ:ಪೋಲಿಸರೆಂದು ನಂಬಿಸಿ ವೃದ್ಧೆಯ ಮಾಂಗಲ್ಯ ಸರ ಅಪಹರಿಸಿರುವ ಘಟನೆ ಪಟ್ಟಣದ ಜನಬಿಡದಿ ವೃತ್ತ ಆಗಿರುವ ಪವನ್ ಆಸ್ಪತ್ರೆ ಬಳಿ ನಡೆದಿದೆ.ಕಲ್ಲೂರು ಗ್ರಾಮದ ವೃದ್ದೆ ವೆಂಕಟಲಕ್ಷ್ಮಮ್ಮ ಮನೆಗೆ ಸರಕು ಖರೀದಿಸಲು ಆಸ್ಪತ್ರೆ ವೃತ್ತದ ಬಳಿ ನಡೆದು ಹೋಗುತ್ತಿರುವಾಗ ಅಪರಿಚಿತರು ವೆಂಕಟಲಕ್ಷ್ಮಮ್ಮನನ್ನು ಪರಿಚಿತರಂತೆ ಮಾತನಾಡಿ ಕಳ್ಳತನಗಳು ಹೆಚ್ಚಾಗುತ್ತಿವೆ ಮಾಂಗಲ್ಯ ಸರ ತೆಗೆದು ಬ್ಯಾಗ್ ನಲ್ಲಿ ಇಟ್ಟು ಕೊಳ್ಳಿ ಎಂದು ವೃದ್ದೆ ಕತ್ತಿನಲ್ಲಿದ್ದ ಬಂಗಾರದ ಸರವನ್ನು ತೆಗಿಸಿ ಬ್ಯಾಗ್ ನಲ್ಲಿ ಇಡಿಸಲು ಸಹಾಯ ಮಾಡುವರಂತೆ ಮಾಡಿ ಸರವನ್ನು ಎಗರಿಸಿದ್ದಾರೆ, ಇದಾದ ನಂತರ ಬ್ಯಾಗಲ್ಲಿ ಬಂಗಾರದ ಸರ ಇರುವುದನ್ನು ಖಾತ್ರಿ ಪಡಿಸಿಕೊಳ್ಳಲು ವೃದ್ದೆ ಪರಿಚಯಸ್ಥರ ಅಂಗಡಿ ಬಳಿ ಹೋಗಿ ಬ್ಯಾಗ್ ತಗೆದು ನೋಡಿದಾಗ ಮಾಂಗಲ್ಯ ಸರ ಇಲ್ಲದನ್ನು ನೋಡಿ ಗಾಭರಿಯಾಗಿದ್ದಾರೆ ಕೂಡಲೆ ಪರಿಚಯಸ್ಥರ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶ್ರೀನಿವಾಸಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ವೃದ್ದೆ ಹೇಳುವಂತೆ ಪೊಲೀಸರೆಂದು ನಂಬಿಸಿ ಪರಿಚಯಸ್ಥರಂತೆ ನಟಿಸಿ ನಾನು ಧರಿಸಿದ್ದ 40ಗ್ರಾಂ ಮಾಂಗಲ್ಯ ಚೈನು…

Read More

ಶ್ರೀನಿವಾಸಪುರ:ಆಕಸ್ಮಿಕ ಬೆಂಕಿ ತಗುಲಿ ಟನ್ ಗಟ್ಟಲೆ ಹಳೆ ಪ್ಲಾಸ್ಟಿಕ್ ಇದ್ದ ಗುಜರಿ ಅಂಗಡಿ ಧಗಧಗನೇ ಹೊತ್ತಿ ಉರಿದ ಘಟನೆ ಶ್ರೀನಿವಾಸಪುರ ಪಟ್ಟಣದಲ್ಲಿ ಮಂಗಳವಾರ ತಡ ಸಂಜೆ ಸುಮಾರು 9 ಗಂಟೆ ರಾತ್ರಿಯಲ್ಲಿ ನಡೆದಿದೆ.ಶ್ರೀನಿವಾಸಪುರ ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಹಳೆ ಮಾವಿನಕಾಯಿ ಮಂಡಿ ಮುಂಬಾಗದಲ್ಲಿ ಜಾವೀದ್ ಪಾಷ ಎನ್ನುವರಿಗೆ ಸೇರಿದ ಹಳೆಯ ಪ್ಲಾಸ್ಟಿಕ್ ಗೋದಾಮು ಇದ್ದು ಅಲ್ಲೆ ನಾನಾ ರೀತಿಯ ಹಳೆಯ ಗುಜರಿ ಸಾಮಾನುಗಳನ್ನು ತಗೆದುಕೊಳ್ಳುತ್ತಿದ್ದ ಅಂಗಡಿ ಇತ್ತು ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ಇಡೀ ಅಂಗಡಿಗೆ ವ್ಯಾಪಿಸಿ ಗೋದಾಮು ಬೆಂಕಿಗೆ ಆಹುತಿಯಾಗಿದೆ. ಬೆಂಕಿ ಕೆನ್ನಾಲಿಗೆಗೆ ಗೋದಾಮಿನಲ್ಲಿದ್ದ ಲಕ್ಷಾಂತರ ಮೌಲ್ಯದ ಪ್ಲಾಸ್ಟಿಕ್ ರೀಸೈಕ್ಲಿಂಗ್ ಉಪಕರಣಗಳು ಮಿಷನರಿಗಳು ಸುಟ್ಟು ಭಸ್ಮವಾಗಿವೆ.‌ಅಗ್ನಿಶಾಮಕ ದಳದ ಹರ ಸಾಹಸಸ್ಥಳಕ್ಕೆ 3 ಅಗ್ನಿಶಾಮಕ ವಾಹನಗಳ 10 ಕ್ಕೂ ಹೆಚ್ಚು ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದು ವೀಪರಿತವಾದ ಗಾಳಿ ಇದ್ದ ಹಿನ್ನಲೆಯಲ್ಲಿ ಅಗ್ನಿ ಜ್ವಾಲೆ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಎರಡು ಗಂಟೆಗಳ ಕಾಲ…

Read More

ನ್ಯೂಜ್ ಡೆಸ್ಕ್:ಆಂಧ್ರದ ಚಿತ್ತೂರು ಜಿಲ್ಲೆಯ ವೆಂಕಟಗಿರಿ ಕೋಟ (ವಿ.ಕೋಟ) ಮಂಡಲ ಕೇಂದ್ರ ಮುಳಬಾಗಿಲು ನಗರಕ್ಕೆ ಇಪ್ಪತೈದು ಕೀ.ಮಿ ದೂರದ ಊರು ಮಂಡಲ ಕೇಂದ್ರದಲ್ಲಿ ನಡೆದ ಸಣ್ಣ ಜಗಳ ಬಿರುಗಾಳಿಯಾಗಿ ಮಾರ್ಪಟ್ಟಿದೆ. ಪರಿಸ್ಥಿತಿ ಉದ್ವಿಗ್ನಗೊಂಡಿದ್ದರಿಂದ ಪೊಲೀಸರು ವಿ.ಕೋಟ ಪಟ್ಟಣದಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದಾರೆ.ಅಂಗಡಿ, ವ್ಯಾಪಾರ ಕೇಂದ್ರಗಳು ಶಿಕ್ಷಣ ಸಂಸ್ಥೆಗಳು ಸೇರಿದಂತೆ ಸರ್ಕಾರಿ ಕಚೇರಿಗಳು ಮುಚ್ಚಲಾಗಿದೆ ಚಿತ್ತೂರು ಜಿಲ್ಲಾಧಿಕಾರಿ ಸುಮಿತ್ ಕುಮಾರ್ ಹಾಗೂ ಎಸ್ಪಿ ಮಣಿಕಂಠ ಚಂದೋಲು ವಿ.ಕೋಟದಲ್ಲಿ ವಾಸ್ತವ್ಯ ಹೂಡಿ ಕಾಲಕಾಲಕ್ಕೆ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.ಬಿಗುವಿನ ವಾತಾವರಣ ನಿರ್ಮಾಣವಾಗಿರುವ ವಿ.ಕೋಟೆ ಪಟ್ಟಣದಲ್ಲಿ ಶಾಂತಿ ಸಭೆಗಳನ್ನು ಕರೆದ ಜಿಲ್ಲಾಡಳಿತ ಎರಡು ಕಡೆಯವರಾನ್ನು ಸಮಾಧಾನ ಪಡೆಸುವಂತ ಕೆಲಸವನ್ನು ಮಾಡುತ್ತಿದೆ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲು ಅಧಿಕಾರಿಗಳು ಎರಡೂ ಕಡೆಯ ಜನರನ್ನು ಕರೆದು ಶಾಂತಿ ಸಭೆಗಳ ಮೂಲಕ ಮಾತುಕತೆ ನಡೆಸುತ್ತಿದ್ದಾರೆ. CREATOR: gd-jpeg v1.0 (using IJG JPEG v62), quality = 82 CREATOR: gd-jpeg v1.0 (using IJG JPEG v62), quality = 82 ಸೋಮವಾರ…

Read More

ನ್ಯೂಜ್ ಡೆಸ್ಕ್:ಅಧಿಕಾರಿಗಳ ಅಕ್ರಮಕ್ಕೆ ಕೊನೆ ಮೊದಲು ಇಲ್ಲದಂತಾಗಿದೆ ನರೇಗಾ ಯೊಜನೆಯ ಅಡಿಯಲ್ಲಿ ಪ್ರಕೃತಿಯಲ್ಲೂ ಹಣ ಲಪಟಾಯಿಸುವ ದಂದೆ ಚಾಮರಾಜನಗರದಲ್ಲಿ ನಡದಿದೆ ಎನ್ನಲಾಗಿದ್ದು ಪರಿಸರ ಪ್ರೇಮಿಯೊಬ್ಬ ಸ್ವಯಂ ಬೆಳಸಿದ್ದ ಗಿಡಗಳಿಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(MGNREGA)ಯಲ್ಲಿ 1.87 ಲಕ್ಷ ಹಣ ಮಾಡಿಕೊಂಡಿರುವ ಘಟನೆ ನಡೆದಿದೆ ಎನ್ನಲಾಗಿದೆ.ಪರಿಸರ ಪ್ರೇಮಿ ವೆಂಕಟೇಶ್ ಎನ್ನುವರು ಕಷ್ಟಪಟ್ಟು ಬಿಸಿಲಲ್ಲಿ ಬೆವರು ಸುರಿಸಿ ಸಸಿಗಳನ್ನು ನಟ್ಟಿದ್ದರು ಆದನ್ನು ಮನರೇಗಾದಡಿ ಅಧಿಕಾರಿಗಳು ಬಂಡವಾಳ ಮಾಡಿಕೊಂಡಿದ್ದಾರೆ. ಮನರೇಗಾದಡಿ ಅಕ್ರಮ ನಡೆಯಬಾರದೆಂದು ಹಲವು ಕಟ್ಟುಪಾಡುಗಳನ್ನು ರೂಪಿಸಲಾಗಿದೆ.ಇದರ ನಡುವೆಯೂ ಅಕ್ರಮ ನಡೆಯುತ್ತಿವೆ ಎಂಬುದಕ್ಕೆ ಈ ನಿದರ್ಶನವೇ ಸಾಕ್ಷಿಯಾಗಿದೆ.ಚಾಮರಾಜನಗರ ಹೊರ ವಲಯದ ಬೇಡರಪುರ ಬಳಿಯ ವಿಶ್ವವಿದ್ಯಾಲಯದ ಬಳಿಯ ರಸ್ತೆ ಬದಿ ಹಾಗೂ ಆವರಣದಲ್ಲಿ ಸುಮಾರು 400 ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಣೆ ಮಾಡಿದ್ದರು ಇದನ್ನು ಸಾಮಾಜಿಕ ಅರಣ್ಯ ವಲಯದ ಅಧಿಕಾರಿಗಳು 2024-25 ರ ಸಾಲಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಎಂದು ತೋರಿಸಿ ನರೇಗಾ (MGNREGA) ಯೋಜನೆಯಲ್ಲಿ 1.87 ಲಕ್ಷ ರೂ ಎಂದು…

Read More

ಚಿಂತಾಮಣಿ:ಚಿಂತಾಮಣಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸರ್ಕಾರಿ ನೌಕರರ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ರಾಜ್ಯಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿಶಿವಪ್ರಸಾದ್ ದೀಪ ಬೆಳಗಿಸಿ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಕನ್ನಡ ಭಾಷೆ ಸಮೃದ್ಧವಾದ ಭಾಷೆ ಸಾಹಿತ್ಯದಲ್ಲಿ ಆಳವಾಗಿ ಬೇರೂರಿದೆ,ತಾಲೂಕು ಕಸಾಪ ನೂತನ ಪದಾಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕನ್ನಡ ಕಟ್ಟುವ ಕೆಲಸ ಮಾಡುವಂತೆ ಕರೆ ಇತ್ತರು.ಚಿಕ್ಕಬಳ್ಳಾಪುರ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಕೋಡಿರಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಚಿಂತಾಮಣಿ ಸಾಹಿತ್ಯ ಲೋಕಕ್ಕೆ ಉತ್ತಮ ಸಾಹಿತಿಗಳು,ಬರಹಗಾರನ್ನು ನೀಡಿದೆ ಇದು ಹೀಗೆ ಮುಂದುವರಿಯಬೇಕು ಇದಕ್ಕಾಗಿ ಇಲ್ಲಿ ಇನ್ನೂ ಹೆಚ್ಚಿನ ರಿತಿಯಲ್ಲಿ ಕನ್ನಡದ ಕೆಲಸಗಳು ಆಗಬೇಕು ಇದಕ್ಕೆ ಶೈಕ್ಷಣಿಕ ವ್ಯವಸ್ಥೆಯ ಸಹಕಾರ ಪಡೆದು ಉತ್ತಮ ಕನ್ನಡ ಸೇವೆಯನ್ನು ನಾವೆಲ್ಲರೂ ಕೂಡಿ ಮಾಡೊಣ ಎಂದರು.ನಿಕಟ ಪೂರ್ವ ಅಧ್ಯಕ್ಷ ಎಂ ಎ ಪ್ರಕಾಶ್ ನೂತನ ಅಧ್ಯಕ್ಷ ಶ್ರೀನಿವಾಸನ್.ಎನ್.ವಿ ಅವರಿಗೆ ಕಸಾಪ ಧ್ವಜ ಹಸ್ತಾಂತರ ಮಾಡಿ ಶುಭ ಹಾರೈಸಿದರು.ಕನ್ನಡಾಂಬೆಯ ಸೇವೆಯನ್ನು ಎಲ್ಲರೂ ಸೇರಿ ಒಗ್ಗಟ್ಟಿನಿಂದ ಮಾಡೋಣ…

Read More

ನ್ಯೂಜ್ ಡೆಸ್ಕ್:ಪ್ರಪಂಚದ ಅತ್ಯಂತ ಶ್ರೀಮಂತ ದೇವಸ್ಥಾನ ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ವಿಶ್ವ ಪ್ರಸಿದ್ಧ, ಹಿಂದೆಲ್ಲ ತಿರುಪತಿ ಪ್ರಸಾದ ಎಂದರೆ ತುಪ್ಪದ ಘಮಲು ಅಸ್ವಾಧಿಸುತ್ತ ಕಣ್ಣಿಗೊತ್ತಿಕೊಂಡು ಸೇವನೆ ಮಾಡುವುದು ಆಸ್ತಿಕರ ಮಾತು.ಇಂತಹ ಲಡ್ಡುಗೆ ಬಳಸುತ್ತಿದ್ದ ತುಪ್ಪ ಕರ್ನಾಟಕದ ಹೆಮ್ಮೆಯ ರೈತಾಪಿ ಜನರು ಉತ್ಪಾಧಿಸುವ ಹಾಲಿನಿಂದ ತಯಾರಿಸುವ ನಂದಿನಿ ತುಪ್ಪ ಅಗಿತ್ತು ನಂತರದ ಬೆಳವಣಿಗೆಯಲ್ಲಿ ಕಡಿಮೆ ಮೊತ್ತಕ್ಕೆ TTD ಬೋರ್ಡ್ ಗೆ ತುಪ್ಪ ಮಾರಾಟ ಮಾಡಲು ಕರ್ನಾಟಕ ಹಾಲು ಮಹಾಮಂಡಲಿ ಒಪ್ಪಿರಲಿಲ್ಲ ಇದನ್ನೆ ನೆಪ ಮಾಡಿಕೊಂಡ ಅಂದಿನ ತಿರುಮಲ-ತಿರುಪತಿ ದೇವಾಲಯದ ಆಡಳಿತ ಮಂಡಳಿಯವರು ನಂದಿನಿ ತುಪ್ಪ ತಿರಸ್ಕರಿಸಿ ದೂರದ ಉತ್ತರಪ್ರದೇಶದ ಪ್ರೀಮಿಯರ್ L-1 ಮತ್ತು ಆಲ್ಫಾ ಕಂಪನಿ L-2 ಅಡಿಯಲ್ಲಿ ತುಪ್ಪವನ್ನು ಪೂರೈಸಲು ಒಪ್ಪಂದ ಮಾಡಿಕೊಂಡು ಟೆಂಡರ್ ಪ್ರಕ್ರಿಯೆಯಲ್ಲಿ ನಂದಿನಿ ಸಂಸ್ಥೆ ಪಾಲ್ಗೊಳ್ಳಲು ಅವಕಾಶ ನೀಡದೆ ಯೋಜಿತವಾಗಿ ಅಂದಿನ TTD ಬೋರ್ಡ್ ಅಧಿಕಾರಿಗಳು ನಂದಿನಿ ತುಪ್ಪವನ್ನು ದೂರ ಇಟ್ಟಿದ್ದರು.ಇದು ಮುಂದೆ ಆಂಧ್ರ ರಾಜಕೀಯದಲ್ಲೂ ಹಾಗು ಕರ್ನಾಟಕ ರಾಜಕೀಯದಲ್ಲೂ ದೊಡ್ದಮಟ್ಟದಲ್ಲಿ ಚರ್ಚೆಯಾಗಿ ಅರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿತ್ತು.ಸಾಮನ್ಯ…

Read More

ಶ್ರೀನಿವಾಸಪುರ:ಏಳ ಬಳಕೆ ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ನೀರಾಕರಿಸಿ ಶ್ರೀನಿವಾಸಪುರ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಪುರಸಭೆ ಅಧ್ಯಕ್ಷ ಬಿ.ಆರ್. ಭಾಸ್ಕರ್ ಕೋರಿದರುಅವರು ಪುರಸಭಾ ಸಭಾಂಗಣದಲ್ಲಿ ಶ್ರೀನಿವಾಸಪುರ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಕಡಿಮೆ ಉಪಯುಕ್ತತೆ ಮತ್ತು ಪರಿಸರ ಮೇಲೆ ಹೆಚ್ಚಿನ ಪ್ರತಿಕೂಲ ಪರಿಣಾಮ ಬೀರುತ್ತಿರುವ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕುರಿತು ಸರ್ಕಾರ ಅದೇಶಿಸಿದ್ದು ಈ ನಿಯಮ ಎಲ್ಲರೂ ಪಾಲಿಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಜೀವನ ಸಾಗಿಸಲು ಮುಂದಾಗೋಣ ಪ್ಲಾಸ್ಟಿಕ್‌ನಿಂದ ಆಗುತ್ತಿರುವ ದುಷ್ಪರಿಣಾಮಗಳು ಮುಂದಿನ ಪೀಳಿಗೆ ಅನುಭವಿಸುವ ಸಮಸ್ಯೆಗಳ ಕುರಿತಂತೆ ಹೇಳಿದ ಅವರು ಪುರಸಭೆ ಅಧಿಕಾರಿಗಳು ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿ ಮಾಲೀಕರಿಗೆ ಅನೇಕ ಬಾರಿ ದಂಡವನ್ನು ವಿಧಿಸಿದರೂ ಸಹ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಸಭೆಯಲ್ಲಿದ್ದ ವ್ಯಾಪಾರಸ್ಥರ ಬಳಗ ತಮ್ಮ ಬಳಿ ಇರುವ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಲು ದಿನಾಂಕ ಸೆಪ್ಟಂಬರ್ 5 ತನಕ ಕಾಲಾವಕಾಶ ನೀಡಬೇಕೆಂದು…

Read More

ನೂಜ್ ಡೆಸ್ಕ್:ಮೇಘಸ್ಪೋಟದ ಮಳೆಯಿಂದಾಗಿ ಗುಜರಾತ್ ರಾಜ್ಯ ತತ್ತರಿಸಿದೆ ಜನಜೀವನ ಅಸ್ತವ್ಯಸ್ತವಾಗಿದ್ದು ಸುಮಾರು ಮೂವತ್ತು ಮಂದಿ ಕಣ್ಮರೆಯಾಗಿದ್ದು ಹಲವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.ಗುಜರಾತ್​ನ ಅನೇಕ ಭಾಗದಲ್ಲಿ ಭಾರೀ ಮಳೆ ಆಗುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅಲ್ಲದೆ, ಮುಂದಿನ ಎರಡು ದಿನ ಕೂಡ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗುಜಾರತ್​ನ ನವಸಾರಿ ಮತ್ತು ವಲ್ಸದ್​ ಜಿಲ್ಲೆಗಳಲ್ಲಿ ತಗ್ಗು ಪ್ರದೇಶದಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲಾಗುತ್ತದೆ 18 ಸಾವಿರಕ್ಕೂ ಅಧಿಕ ಮಂದಿಯನ್ನು ಪ್ರವಾಹ ಪೀಡಿತ ಸ್ಥಳದಿಂದ ಸುರಕ್ಷಿತ ತಾಣಕ್ಕೆ ರವಾನಿಸಲಾಗಿದ್ದು, ಸುಮಾರು 11 ಜಿಲ್ಲೆಗಳಲ್ಲಿ ವರುಣನ ಅಬ್ಬರ ಮುಂದುವರಿಯುವ ಲಕ್ಷಣ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.ಊರುಗಳಲ್ಲಿ ನೀರು ನುಗ್ಗಿದ್ದು ರಸ್ತೆಗಳು ನದಿ ನಾಲೆಗಳಂತಾಗಿದೆ ಮೋರ್ಬಿ, ವಡೋದರಾ, ಭರೂಚ್, ಜಾಮ್‌ ನಗರ, ಅರಾವಳಿ, ಪಂಚಮಹಲ್, ದ್ವಾರಕಾ ಮತ್ತು ದಂಗ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.ಆನಂದ್‌ ಜಿಲ್ಲೆಯಲ್ಲಿ ಆರು, ಅಹಮದಾಬಾದ್‌ನಲ್ಲಿ…

Read More

ಬೆಂಗಳೂರು:ಯುವಕನೊಬ್ಬ ತನ್ನ ಪ್ರೇಮಿಯನ್ನು ದ್ವಿಚಕ್ರವಾಹನದ ಪೆಟ್ರೋಲ್ ಟ್ಯಾಂಕ್ ಮೇಲೆ ಕುರಿಸಿಕೊಂಡು ವಾಹನ ಚಲಾಯಿಸುತ್ತ ಅಸಹ್ಯಕರವಾಗಿ ಜಾಲಿ ರೈಡ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಇದು ನಡೆದಿರುವುದು ಬೆಂಗಳೂರಿನ ಯಲಹಂಕ ರೇವಾ ಕಾಲೇಜು ಕ್ಯಾಂಪಸ್ ರಸ್ತೆಯಲ್ಲಿ ಘಟನೆ ನಡೆದಿದ್ದು ಪ್ರೇಮಿಗಳ ಜಾಲಿರೈಡನ್ನು ಹಿಂಬದಿ ಬೈಕ್ ಸವಾರ ಮೊಬೈಲ್ನಲ್ಲಿ ಸೆರೆಹಿಡಿದು ನಂತರ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ.ರೇವಾ ಕಾಲೇಜು ಕ್ಯಾಂಪಸ್ ರಸ್ತೆಯಲ್ಲಿ ನಡೆದಿರುವ ರೈಡ್ ನಲ್ಲಿ ಯುವಕ ತನ್ನ ಪ್ರೇಮಿಯನ್ನು ಹಿಂದುಮುಂದಾಗಿ ಕುರಿಸಿಕೊಂಡು ಮತ್ತಿನಲ್ಲಿ ತೆಲಾಡುತ್ತ ರೋಮಾ೦ಚನಕಾರಿಯಾಗಿ ಪ್ರಣಯ ಚೇಷ್ಟೆಗಳನ್ನು ಮಾಡಿಕೊಂಡು ಅಪಾಯಕರವಾಗಿ ಬೈಕ್ ರೈಡ್ ಮಾಡಿದ್ದಾಗಿ ಹೇಳಲಾಗುತ್ತಿದೆ.ಘಟನೆ ಯಲಹಂಕ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದಾಗಿ ಈ ಹಿಂದೆ ಹೆಬ್ಬಾಳದಲ್ಲೂ ಇಂತಹದೆ ಘಟನೆಯ ನಂತರವು ಪ್ರೇಮಿಗಳು ಅಸಭ್ಯಕರವಾಗಿ ಜಾಲಿ ರೈಡ್ ಮಾಡಿದ್ದು ಆ ಯುವಕನನ್ನು ಅರೆಸ್ಟ್ ಮಾಡಲಾಗಿತ್ತು.

Read More

ಶ್ರೀನಿವಾಸಪುರ:ಟೆಂಪೋ ಟ್ರಾವಲರ್ ಹಾಗು ಕಾರಿನ ನಡುವೆ ನಡೆದ ಬೀಕರ ರಸ್ತೆ ಅಪಘಾತದಲ್ಲಿ ಮೂರು ಮಂದಿ ಸಾವನಪ್ಪಿದ್ದು ಟೆಂಪೋ ಟ್ರಾವಲರ್ ನಲ್ಲಿದ್ದ 12 ಮಂದಿ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.ಅಪಘಾತ ಬೆಂಗಳೂರು-ಮದನಪಲ್ಲಿ ರಸ್ತೆಯಲ್ಲಿ ದಂಡುಪಾಳ್ಯ ಗೇಟ್ ಬಳಿ ಶ್ರೀನಿವಾಸಪುರ ತಾಲೂಕಿನ ಗಡಿಯಂಚಿನಲ್ಲಿ ಬುಧವಾರ ಸಂಜೆ ನಡೆದಿದ್ದು ಆಂಧಪ್ರದೇಶದ ಬಾಯಿಕೊಂಡದಲ್ಲಿ ಪೂಜೆ ಮುಗಿಸಿ ಚಿಂತಾಮಣಿ ಕಡೆಗೆ ಬರುತ್ತಿದ್ದ ಟೆಂಪೋ ಟ್ರಾವಲರ್ ಹಾಗು ಮದನಪಲ್ಲಿಗೆ ಹೋರಟಿದ್ದ ಸ್ಯಾಂಟ್ರೊ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ ಕಾರಿನಲ್ಲಿದ್ದ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಶ್ರೀಕಾಂತ್, ಶ್ರೀನಿವಾಸಲು, ಪುಷ್ಪ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಅಪಘಾತ ಪ್ರಕರಣ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಅಪಘಾತ ಬೀಕರತೆ ಕೀ.ಮಿ ಗಟ್ಟಲೆ ಟ್ರಾಫಿಕ್ ಜಾಮ್ವಾಹನಗಳ ಮುಖಾಮುಖಿ ಡಿಕ್ಕಿಯಾದ ಬೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಶವಗಳನ್ನು ಹೊರತಗೆಯಲು ಸಾಧ್ಯವಾಗದ ಹಿನ್ನಲೆಯಲ್ಲಿ ಜೆಸಿಬಿ ತರಸಿ ನುಜ್ಜುಗುಜ್ಜಾಗಿದ್ದ ಕಾರಿನ ಬಾಗಿಲುಗಳನ್ನು ಕಿತ್ತು ಹರಸಾಹಸ ಪಟ್ಟು ಮೃತ ದೇಹಗಳನ್ನು ಹೊರಗೆ ತಗೆದಿದ್ದು, ಇದರಿಂದಾಗಿ ಮದನಪಲ್ಲಿ ಹೈವೆ ರಸ್ತೆಯಲ್ಲಿ…

Read More