ನ್ಯೂಜ್ ಡೆಸ್ಕ್:ಅಮೆರಿಕದಲ್ಲಿ ಸೊಳ್ಳೆ ಕಡಿತದಿಂದ ‘ಈಸ್ಟರ್ನ್ ಎಕ್ವೈನ್ ಎನ್ಸೆಫಾಲಿಟಿಸ್’ ಎಂಬ ವೈರಸ್ ಸೋಂಕಿಗೆ ಒಳಗಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ದೇಶದ ಆಡಳಿತವು ಎಚ್ಚೆತ್ತುಕೊಂಡಿದ್ದು ಮ್ಯಾಸಚೂಸೆಟ್ಸ್, ವರ್ಮೊಂಟ್ ಮತ್ತು ಇತರ ಪ್ರದೇಶಗಳಲ್ಲಿ ಸರ್ಕಾರ ಹೈ ಅಲರ್ಟ್ ಘೋಷಿಸಿದೆ,ಸೊಳ್ಳೆಗಳಿಂದ ಈ ಸೋಂಕು ಹರಡುವ ಹಿನ್ನೆಲೆಯಲ್ಲಿ ಜನರಿಗೆ ಸ್ಪ್ರೇಗಳನ್ನು ನೀಡುತ್ತಿದ್ದು, ಟ್ರಕ್‌ಗಳ ಮೂಲಕವೂ ಸ್ಪ್ರೇ ಸಿಂಪಡಣೆ ಮಾಡಲಾಗುತ್ತಿದೆ. ಪ್ಲೇಮೌತ್ ಸೇರಿದಂತೆ ಹಲವು ಕೌಂಟಿಗಳಲ್ಲಿ ಈಗಾಗಲೇ ಸ್ಪ್ರೇ ಸಿಂಪಡಣೆ ಮಾಡಲಾಗಿದೆ.ಅನಧಿಕೃತ ಲಾಕ್‌ಡೌನ್ ಅನ್ನು ಜಾರಿಗೊಳಿಸಲಾಗುತ್ತಿದೆ. ಉದ್ಯಾನವನಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಹೆಲಿಕಾಪ್ಟರ್ ಮೂಲಕ ಔಷಧ ಸಿಂಪಡಿಸಲಾಗುತ್ತಿದೆ. ಈ ವೈರಸ್ ಸೋಂಕಿತರಲ್ಲಿ ಜ್ವರ, ಅತಿಸಾರ ಮತ್ತು ತಲೆನೋವಿನಂತಹ ಲಕ್ಷಣಗಳು ಕಂಡುಬರುತ್ತವೆ. ಅದಕ್ಕೆ ಸದ್ಯಕ್ಕೆ ಲಸಿಕೆ ಇಲ್ಲ ಎನ್ನಲಾಗಿದೆ.
Author: Srinivas_Murthy
ಬೆಂಗಳೂರು:ರಾಜಕೀಯ ಚುನುವಾಣೆಗಷ್ಟೆ ಮೀಸಲು ಉಳಿದಂತೆ ನಂಟಸ್ಥನ ಮಾಡಲು ರಾಜಕೀಯ ಪಕ್ಷಗಳ ಮುಖಂಡರ ನಡುವಿನ ಪಕ್ಷ ರಾಜಕೀಯ ಅಡ್ಡಿಯಾಗಲಾರದು ಎಂಬುದಕ್ಕೆ ಬೇರೆ-ಬೇರೆ ಪಕ್ಷಗಳಲ್ಲಿ ಇರುವಂತ ಕರ್ನಾಟಕದ ಬಹಳಷ್ಟು ರಾಜಕಾರಣಿಗಳು ನಂಟಸ್ಥನ ಬೆಳೆಸಿಕೊಂಡಿದ್ದಾರೆ ಆ ಸಾಲಿಗೆ ಈಗ ಹೊಸ ಸೇರ್ಪಡೆ ಕೋಲಾರದ ಉಸ್ತುವಾರಿ ಸಚಿವ ಹಾಗು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾನಸ ಪುತ್ರ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹಾಗು ಬಿಜೆಪಿ ಪಕ್ಷದ ಪ್ರಭಾವಿ ಮುಖಂಡ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪರಮಾಪ್ತ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಆರ್. ವಿಶ್ವನಾಥ್ ನಂಟರಾತ್ತಿದ್ದಾರೆ.ಎಸ್. ಆರ್. ವಿಶ್ವನಾಥ್ ಅವರ ಪುತ್ರಿ ಅಪೂರ್ವ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ಪುತ್ರ ಸಂಜಯ್ ನಿಶ್ಚಿತಾರ್ಥ ಕಾರ್ಯಕ್ರಮ ಬೆಂಗಳೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಇಂದು ನಡೆಯಿತು.ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸೇರಿದಂತೆ ಸಿದ್ದರಾಮಯ್ಯ ಸಂಪುಟದ ಬಹುತೇಕ ಸಚಿವರು,ಶಾಸಕರು ಹಲವಾರು ರಾಜಕೀಯ ನಾಯಕರು,ಗಣ್ಯರು ಹಾಗು ವಿಶೇಷವಾಗಿ ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ…
ನ್ಯೂಜ್ ಡೆಸ್ಕ್:ವೈರಲ್ ಜ್ವರಗಳು ಹೆಚ್ಚಾಗುತ್ತಿದ್ದು, ರಸ್ತೆ ಬದಿಯ ಆಹಾರ ಪದಾರ್ಥಗಳಿಂದ ದೂರವಿರಿ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಪಾನಿಪುರಿ ಸಿರಿತಿಂಡಿಗಳು ಸೇರಿದಂತೆ ರಸ್ತೆ ಬದಿಯ ತಿಂಡಿಗಳನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಟೈಫಾಯಿಡ್,ಗಿಯಾರ್ಡಿಯಾಸಿಸ್ (ನೀರಿನ ಭೇದಿ), ಎಚ್ ಪೈಲೋರಿ (ಹೊಟ್ಟೆಯ ಉರಿಯೂತ, ಜೀರ್ಣಾಂಗದಲ್ಲಿ ಹುಣ್ಣುಗಳು), ಶಿಗೆಲ್ಲೋಸಿಸ್ (ಸ್ನಿಗ್ಧತೆಯ ರಕ್ತಸಿಕ್ತ ಅತಿಸಾರ), ಕಾಲರಾ, ಎಂಟಮೀಬಾ, ವೈರಲ್ ಅತಿಸಾರ ಮತ್ತು ವಾಂತಿ ಮುಂತಾದ ಸಾಂಕ್ರಾಮಿಕ ರೋಗಗಳು ಕಾಡುತ್ತದೆ ಎಂದಿರುತ್ತಾರೆ.ಸ್ವಯಂ ಚಿಕಿತ್ಸೆ ಅಪಾಯಕಾರಿಜ್ವರ ಬಂದಾಗ ಕೆಲವರು ವೈದ್ಯರ ಬಳಿ ಹೋಗದೆ ಸ್ವಯಂ ವೈದ್ಯರಾಗಿ ಆ್ಯಂಟಿಬಯಾಟಿಕ್ ಮಾತ್ರೆಗಳನ್ನು ಸೇವಿಸಿ ಸ್ವ-ಚಿಕಿತ್ಸೆಯಲ್ಲಿ ಆಸಕ್ತಿ ತೋರಿಸುತ್ತಾರೆ.ಇದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಸ್ವಯಂ-ಆಡಳಿತದ ಪ್ರತಿಜೀವಕಗಳು ವೈರಸ್ ಅನ್ನು ಕೊಲ್ಲಲು ಸಾಧ್ಯವಿಲ್ಲ. ಅನಾವಶ್ಯಕವಾಗಿ ಆ್ಯಂಟಿಬಯೋಟಿಕ್‌ಗಳನ್ನು ತೆಗೆದುಕೊಳ್ಳುವುದರಿಂದ ಹೊಟ್ಟೆ ಸಂಬಂದಿತ ಖಾಯಿಲೆಗಳು ಬರುತ್ತವೆ ಕರುಳಿನ ಬ್ಯಾಕ್ಟೀರಿಯಾವನ್ನು ನಾಶಪಡಿಸು ಅವಕಾಶ ಇರುತ್ತದೆ ಆಮ್ಲೀಯತೆಯನ್ನು ಉಂಟುಮಾಡಬಹುದು.ಒಮ್ಮೊಮ್ಮೆ ಲಿವರ್ ಮತ್ತು ಕಿಡ್ನಿಗಳಿಗೆ ಹಾನಿಯಾಗುತ್ತದೆ.
ಶ್ರೀನಿವಾಸಪುರ: ಕಾಯಿಲೆಗಳಿಂದ ನರಳುವಂತ ಎಷ್ಟೊ ರೋಗಿಗಳಿಗೆ ಸಮಯಕ್ಕೆ ರಕ್ತ ಸಿಗದೆ ಜೀವ ಕಳೆದುಕೊಳ್ಳುವಂತ ಪರಿಸ್ಥಿತಿ ಇದೆ, ಇಂತಹವರನ್ನು ಬದುಕಿಸಲು ಆರೋಗ್ಯವಂತರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತಧಾನ ಮಾಡುವಂತೆ ಖ್ಯಾತ ಪ್ರಸೂತಿ ತಜ್ಞರಾದ ಡಾ.ಚಂದ್ರಕಳಾ ಶ್ರೀನಿವಾಸನ್ ಕರೆ ಇತ್ತರು.ಇಂದು ಶ್ರೀನಿವಾಸಪುರ ಪಟ್ಟಣದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ದಿವಂಗತ ಎಂ.ಶ್ರೀನಿವಾಸನ್ ರವರ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ನನ್ನ ಪತಿ ಕೌನ್ಸಿಲರ್ ಎಂ.ಶ್ರೀನಿವಾಸ್‌ರವರು ಸಮಾಜ ಮುಖಿಯಾಗಿ ದಮನಿತರ ಧ್ವನಿಯಾಗಿದ್ದರು ಎಲ್ಲಾ ವರ್ಗದ ಜನರ ಬೆಂಬಲ ಪಡೆದಿದ್ದರು ಅವರ ಹೆಸರಿನಲ್ಲಿ ಅಭಿಮಾನಿಗಳು ಆಯೋಜಿಸಿರುವ ರಕ್ತಧಾನ ಕಾರ್ಯ ಶ್ಲಾಘನೀಯ ಎಂದರು.ಈ ಸಂದರ್ಭದಲ್ಲಿ ತಾಲೂಕಿನ ಕೊಪ್ಪವಾರಿಪಲ್ಲಿ ಮಂಜುನಾಥ ಕಟ್ಟಡಕಾರ್ಮಿಕನಾಗಿದ್ದು ಕಾರ್ಯನಿರ್ವಹಣೆ ಸಂದರ್ಭದಲ್ಲಿ ಮೃತಪಟ್ಟಿದ್ದು ಅವರಿಗೆ ಸರ್ಕಾರದಿಂದ ಬಿಡುಗಡೆಯಾದ 7.25 ಲಕ್ಷ ಪರಿಹಾರ ಹಣವನ್ನು ಕುಟುಂಬದವರಿಗೆ ನೀಡಲಾಯಿತು.ರಕ್ತಧಾನ ಕಾರ್ಯಕ್ರಮಕ್ಕೂ ಮುಂಚಿತವಾಗಿ ಎಂ.ಶ್ರೀನಿವಾಸನ್ ಅಭಿಮಾನಿಗಳು ಹಾಗು ಕುಟುಂಬದವರು ಶ್ರೀನಿವಾಸನ್ ಸಮಾದಿಗೆ ಪೂಜೆ ಸಲ್ಲಿಸಿ,ಮುಳಬಾಗಿಲು ವೃತ್ತದಿಂದ ಶ್ರೀನಿವಾಸನ್ ರವರ ಬಾವಚಿತ್ರವನ್ನು ಪಲ್ಲಕ್ಕಿಯಲ್ಲಿ ಜಾನಪದ ತಂಡಗಳೊಂದಿಗೆ ಮೆರವಣಿಗೆ ಮೂಲಕ ಕರೆತಂದು…
ಶ್ರೀನಿವಾಸಪುರ:ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೈತಿಕ ಬೆಂಬಲ ನೀಡುವ ಉದ್ದೇಶದಿಂದ ಬೆಂಗಳೂರಿನಲ್ಲಿ ಇಂದು ಆಯೋಜಿಸಿದ್ದ ಪ್ರತಿಭಟನೆಗೆ ಶ್ರೀನಿವಾಸಪುರ ತಾಲೂಕು ಕುರುಬ ಸಂಘದ ಮುಖಂಡರು ಹಾಗು ಹಿಂದುಳಿದ ವರ್ಗಗಳ ಒಕ್ಕೂಟದ ಕಾರ್ಯಕರ್ತರು ಬೆಂಗಳೂರಿಗೆ ತೆರಳಿದ್ದರು.ಮೂಡಾ ಹಗರಣಕ್ಕೆ ಸಂಬಂದಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಸೂಚನೆ ಕೊಟ್ಟಿರುವ ಹಿನ್ನಲೆ ಸಿಎಂ ಸಿದ್ದರಾಮಯ್ಯ ಪರ ನಾವಿದ್ದೇವೆಂಬ ಸಂದೇಶ ಸಾರಲು ಇಂದು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿರುವ ಬೃಹತ್ ಪ್ರತಿಭಟನೆಯನ್ನು ಪಾಲ್ಗೋಳ್ಳಲು ಶ್ರೀನಿವಾಸಪುರ ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ಕಾರ್ಯಕರ್ತರು ಭಾಗವಹಿಸಿದ್ದರು,ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ವೇಮಣ್ಣ, ಹಿಂದೂಳಿದ ಒಕ್ಕೂಟದ ಅಧ್ಯಕ್ಷ ವೇಣುಗೋಪಾಲ್, ಕಾರ್ಯದರ್ಶಿ ಕೆ.ವಿ.ಮಂಜುನಾಥ್, ಎಸ್.ಎಂ.ನಾರಾಯಣಸ್ವಾಮಿ, ಸೋಮಶೇಖರ್, ರಾಮಕೃಷ್ಣ, ಅನ್ನಪೂರ್ಣೇಶ್ವರಿ ಬಾಬು ಮುಂತಾದವರು ಇದ್ದರು.
ನ್ಯೂಜ್ ಡೆಸ್ಕ್:ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿರುವ ಯುವತಿಯೊಬ್ಬಳು ಕೌನ್ ಬನೇಗಾ ಕರೋಡ್ KBC ಪತಿಯಲ್ಲಿ ಭಾಗವಹಿಸಿ .50 ಲಕ್ಷ ರೂಪಾಯಿ ಬಹುಮಾನವನ್ನು ಗೆದ್ದಿದ್ದಾರೆ. ರಾಜಸ್ಥಾನದ ನರೇಷಿ ಮೀನಾ 2018 ರ ಎಸ್‌ಐ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ಆಕೆಗೆ ಬ್ರೈನ್ ಟ್ಯೂಮರ್ ಇರುವುದು ಪತ್ತೆಯಾಗಿದೆ.ಚಿಕಿತ್ಸೆಗಾಗಿ ಆಕೆ ರೂಪಾಯಿ ರೂಪಾಯಿ ಕೂಡಿಡುತ್ತಿದ್ದ ಆಕೆ,ಇತ್ತೀಚೆಗೆ ನಡೆದ KBC ಶೋನಲ್ಲಿ ಭಾಗವಹಿಸಿ 50 ಲಕ್ಷ ರೂಪಾಯಿಗಳನ್ನು ತನ್ನದಾಗಿಸಿಕೊಂಡಿದ್ದಾಳೆ,ಆನಾರಗ್ಯದ ಸಂಕಷ್ಟದಲ್ಲೂ ಛಲ ಬಿಡದ ನರೇಷಿ ಮೀನಾ KBC ಶೋ ನಲ್ಲಿ ಭಾಗವಹಿಸಿದ್ದನ್ನು ಮೆಚ್ಚಿದ KBC ಶೋ ನಡೆಸುವ ಅಮಿತಾಭ್ ಅವರು ಆಕೆಯ ಚಿಕಿತ್ಸೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ರೈಲ್ವೇ ಕೋಚ್ ಗೆ ಮೀಸಲಿಟಿದ್ದ ಜಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ರೈತರ ಜಮೀನು ತಂಟೆಗೆ ಬರಬೇಡಿ ಶ್ರೀನಿವಾಸಪುರ:ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ಹಾಗಿದ್ದರೆ ಹಿಂದೆ ರೈಲ್ವೇ ಕೋಚ್ ಫ್ಯಾಕ್ಟರಿ ಮಾಡಲು ಗುರುತಿಸಿದ್ದ ಜಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿ ಇಲ್ಲವಾದರೆ ನಮ್ಮ ಕಂದಾಯ ಜಮೀನುಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವುದು ಬೇಡ ಎಂದು ಯದರೂರು ಭಾಗದ ರೈತರು ಒತ್ತಾಯಿದರು.ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ.ಬೇಟಪ್ಪ ಹಾಗು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶ್ಯಾಗತ್ತೂರು ಸುಧಾಕರ್ ನೇತೃತ್ವದಲ್ಲಿ ಯದರೂರು ಅರಕೇರಿ ಭಾಗದ ರೈತರು ಇಂದು ಸೋಮವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಎನ್.ಜಿ.ಬೇಟಪ್ಪ ಮಾತನಾಡಿ ಖಾಸಗಿ ಕೈಗಾರಿಕೆಗಳನ್ನು ಸ್ಥಾಪಿಸುವ ಗುಜರಾತ್ ಮಾರ್ವಾಡಿಗಳಿಗೆ ಫಲವತ್ತಾದ ಕೃಷಿ ಜಮೀನು ಬಿಟ್ಟುಕೊಟ್ಟರೆ ರೈತ ಸರ್ವನಾಶವಾಗುತ್ತಾನೆ ನಾವು ಬೆಳೆದಿರುವಂತ ಮಾವು, ರೇಷ್ಮೆ,ಹೂವಿನ ಬೇಸಾಯ ಅನ್ಯಾಯವಾಗಿ ಹೋಗುತ್ತದೆ ಜ್ಮೀನು ಇಲ್ಲ ಎಂದರೆ ಹೈನುಗಾರಿಕೆ ಇಲ್ಲವಾಗಿ ಹಾಲು ಉತ್ಪಾದನೆ ಕುಸಿದು ರೈತರು ಆರ್ಥಿಕವಾಗಿ ದಿವಾಳಿಯಾಗುತ್ತಾರೆ,ಖಾಸಗಿ ಕೈಗಾರಿಕೆಗಳ ಸ್ಥಾಪನೆಯಿಂದ ಅನಕೂಲಕ್ಕಿಂತ ಅನಾನುಕೂಲ ಹೆಚ್ಚಾಗಿರುತ್ತದೆ.ಕರ್ನಾಟಕ ಕೈಗಾರಿಕ ಪ್ರದೇಶಾಭಿವೃದ್ಧಿ ಮಂಡಳಿ ಖಾಸಗಿ ಕೈಗಾರಿಕಾ ಬಂಡವಾಳಗಾರ ನಡುವೆ…
ಶ್ರೀನಿವಾಸಪುರ: ಅರಕೇರಿಯ ಶ್ರೀಕೋದಂಡರಾಮಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಪೂಜೆ ಹವನ ಶ್ರೀರಾಮತಾರಕ ಹೋಮ ಹಾಗು ಶ್ರೀ ಸಿತಾರಾಮ ಕಲ್ಯಾಣೋತ್ಸವ ಹಮ್ಮಿಕೊಳ್ಳಲಾಗಿತ್ತು.ದೇವಾಲಯದ ಪ್ರಧಾನ ಪೊಷಕರಾದ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ ಕುಟುಂಬದವರಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ವೈಖಾನಸ ನಿಪುಣ ಯಲ್ದೂರುಶೇಷಾದ್ರಿ ನಡೆಸಿಕೊಟ್ಟರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಶ್ರೀ ರಾಮತಾರಕ ಹೋಮ ಹಾಗು ಶ್ರೀ ಸಿತಾರಾಮ ಕಲ್ಯಾಣೋತ್ಸವ ನಡೆಸುವುದರಿಂದ ಶ್ರೀರಾಮಚಂದ್ರ ಸ್ವಾಮಿ ಅನುಗ್ರಹ ಸಿದ್ದಿಸುತ್ತದೆ ಸುಖ, ಸಮೃದ್ಧಿ ಪ್ರಾಪ್ತಿ ಹಾಗು ಕುಟುಂಬದಲ್ಲಿ ಒಗ್ಗಟ್ಟು ಮೂಡುತ್ತದೆ. ಸೀತಾಮಾತೆ ಪೂಜೆಯಿಂದ ಸಂಸಾರದಲ್ಲಿರುವ ಭಿನ್ನಾಭಿಪ್ರಾಯಗಳು ಮನಸ್ತಾಪಗಳು ದೂರವಾಗುತ್ತವೆ. ಲಕ್ಷ್ಮಣನ ಪೂಜೆಯಿಂದ ಕುಟುಂಬಕ್ಕೆ ಭಗವಂತ ಶ್ರೀರಾಮನ ರಕ್ಷಣೆ ದೊರೆಯುತ್ತದೆ.ಭರತನ ಪೂಜೆಯಿಂದ ಕುಟುಂಬದಲ್ಲಿ ನ್ಯಾಯ ನೀತಿ ನೆಲೆಸುತ್ತದೆ. ಶತ್ರುಘ್ನನ ಪೂಜೆಯಿಂದ ಸೋದರರ ನಡುವೆ ಉತ್ತಮ ಅನ್ಯೋನ್ಯತೆ ಕಂಡುಬರುತ್ತದೆ. ಶ್ರೀ ಆಂಜನೇಯ ಸ್ವಾಮಿಯ ಪೂಜೆಯಿಂದ ಶತ್ರುಗಳು ಮಿತ್ರರಾಗಿ ಬದಲಾಗುತ್ತಾರೆ. ಶತ್ರುಗಳಿಂದ ಉಂಟಾಗುತ್ತಿರುವ ತೊಂದರೆ ಸಂಪೂರ್ಣ ನೀವಾರಣೆಯಾಗುತ್ತದೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಶಾಸಕ ವೆಂಕಟಶಿವಾರೆಡ್ಡಿ,ಬೆಂಗಳೂರಿನ ಉದ್ಯಮಿ ರಾಮಾಂಜನೇಯ,ಡೈರಿ ಸೆಕ್ರೆಟರಿ ಶ್ರೀನಿವಾಸಯ್ಯಶೆಟ್ಟಿ,ಗ್ರಾಮದ…
ಶ್ರೀನಿವಾಸಪುರ:ತಾಲೂಕಿನ ಯುವಜನತೆಯ ಭವಿಷ್ಯತ್ ದೃಷ್ಟಿಯಲ್ಲಿ ಇಟ್ಟುಕೊಂಡು ತಾಲ್ಲೂಕಿನಲ್ಲಿ ಕೈಗಾರಿಕಾ ವಲಯಗಳ ಸ್ಥಾಪನೆಗೆ ಮುಂದಾಗಿದ್ದು ಇದಕ್ಕೆ ಯದರೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಸಹಕರಿಸಬೇಕೆಂದು ಶಾಸಕ ಜಿ. ಕೆ. ವೆಂಕಟಶಿವಾರೆಡ್ಡಿ ಕರೆ ನೀಡಿದರು.ಅವರು ತಾಲೂಕಿನ ಯದರೂರು ಗ್ರಾಮದಲ್ಲಿ ಯದರೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರ ಜೊತೆ ಸಭೆ ನಡೆಸಿ ಮಾತನಾಡಿ ನಮ್ಮ ತಾಲೂಕಿನ ಯುವಕರು ಉದ್ಯೋಗ ಆರಿಸಿ ಬೆಂಗಳೂರು ಇತರಡೆ ವಲಸೆ ಹೋಗುತ್ತಿರುವುದು ಮುಂದೆ ತಾಲೂಕಿನಲ್ಲಿ ಯಾವ ಪರಿಸ್ಥಿತಿ ನಿರ್ಮಾಣ ಆಗುತ್ತದೋ ಗೊತ್ತಿಲ್ಲ ಅದನ್ನು ತಡೆದು ಯುವಕರು ತಮ್ಮ ಭವಿಷ್ಯತ್ ಇಲ್ಲೆ ರೂಪಿಸಿಕೊಳ್ಳಲಿ ಎಂಬ ಉದ್ದೇಶ ಇಟ್ಟುಕೊಂಡು ತಾಲೂಕಿನಲ್ಲಿ ಎರಡು ಕಡೆ ಕೈಗಾರಿಕೆಗಳ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ ಇದಕ್ಕೆ ಕೆಲ ಪಟ್ಟಭದ್ರರು ವಿರೋಧ ವ್ಯಕ್ತಪಡಿಸುವ ಮಾತುಗಳನ್ನು ಆಡುತ್ತಿದ್ದು ಅಂತಹವರ ಮಾತುಗಳನ್ನು ನಂಬಬೇಡಿ ಅವರು ನಿಮ್ಮನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದು ಮೊನ್ನೆ ರೈತರ ಸಭೆ ಮಾಡಿದವರು ತಮ್ಮ ಜಮೀನುಗಳನ್ನು ಭದ್ರಮಾಡಿಕೊಳ್ಳಲು ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಇಂತಹ ನಯವಂಚಕರ ಮಾತಿಗೆ ಯಾರು ಮರುಳಾಗಬಾರದೆಂದು ವಿನಂತಿಸಿದರು.ನಾನು…
ನ್ಯೂಜ್ ಡೆಸ್ಕ್:ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕೂಲಿ’ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ರಜನಿ ಜೊತೆ ತೆರೆ ಹಂಚಿಕೊಳ್ಳುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ ಎಂದಿದ್ದಾರೆ. ಅವರೊಂದಿಗೆ ತೆಗೆಸಿಕೊಂಡ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಎದುರು ಉಪ್ಪಿ ಅಬ್ಬರ ಹೇಗಿರುತ್ತದೆ ಅನ್ನೋ ಕುತೂಹಲ ಕೂಡ ಜನರಲ್ಲಿ ಇದೆ ಇಲ್ಲಿವರೆಗೂ ಕೂಲಿ ಸಿನಿಮಾದಲ್ಲಿ ಉಪ್ಪಿ ಇದ್ದಾರೆ ಅನ್ನೋ ಸುದ್ದಿ ಕೇವಲ ಸೋಷಿಯಲ್ ಮೀಡಿಯಾದಲ್ಲಿಯೇ ಗಿರಿ ಗೀಟ್ಲೆ ಹೊಡೆಯುತಿತ್ತು ಈಗ ಹೊರಬಿದ್ದಿದೆ. ಸನ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರವನ್ನು ಲೋಕೇಶ್ ಕನಕರಾಜ್ ನಿರ್ದೇಶಿಸುತ್ತಿದ್ದು, ಅನಿರುದ್ಧ್ ಸಂಗೀತ ಸಂಯೋಜನೆ ಮಾಡಿದ್ದಾರೆ.