ನೂಜ್ ಡೆಸ್ಕ್:ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ದಿನೇ ದಿನೇ ರಂಗೇರುತ್ತಿದ್ದು, ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಶನಿವಾರ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು,ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಿಡಿಪಿ ಅಧಿಕಾರಕ್ಕೆ ಬಂದರೆ ಉಚಿತ 200 ಯೂನಿಟ್ ವಿದ್ಯುತ್ ನೀಡುವುದಾಗಿ ಮತ್ತು ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದಾರೆ.ಜೊತೆಗೆ ಆರ್ಟಿಕಲ್ 370 ಮತ್ತು 35ಎ ರದ್ದತಿಗೆ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಪುನಃಸ್ಥಾಪಿಸಲು ಕೆಲಸ ಮಾಡುತ್ತೆವೆ ಕಾಶ್ಮೀರಿ ವಿದ್ವಾಂಸರನ್ನು ಗೌರವಯುತವಾಗಿ ರಾಜ್ಯಕ್ಕೆ ಕರೆತಂದು ಅವರಿಗೆ ಡಬಲ್ ಬೆಡ್ ರೂಂ ಮನೆಗಳನ್ನು ನಿರ್ಮಿಸಿಕೊಡಲಾಗುತ್ತದೆ ಎಂದು ಹೇಳಿದ್ದಾರೆ. ಅಜೆಂಡಾ ಇಲ್ಲದೆ ಮೈತ್ರಿ ಇಲ್ಲವಿಧಾನಸಭೆ ಚುನಾವಣೆಗೆ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿದ ಅವರು ಎರಡೂ ಪಕ್ಷಗಳು ಯಾವುದೇ ಅಜೆಂಡಾ ಹೊಂದಿಲ್ಲ ಮತ್ತು ಕೇವಲ ಸೀಟು ಹಂಚಿಕೊಂಡು ಅಧಿಕಾರಕ್ಕೆ ಬರುವುದಷ್ಟೇ ಮೈತ್ರಿ ಉದ್ದೇಶ. ತಮ್ಮ ಪಕ್ಷವು ಯಾವುದೇ…
Author: Srinivas_Murthy
ಐದು ಜನ ಸದಸ್ಯರು ಗೈರು ಸಂಖ್ಯಾ ಬಲವಿದ್ದರು ಅಧ್ಯಕ್ಷ ಸ್ಥಾನ ಕಳೆದುಕೊಂಡ ಜೆಡಿಎಸ್ ಶ್ರೀನಿವಾಸಪುರ:ಪುರಸಭೆಯ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾದರೆ ಉಪಾಧ್ಯಕ್ಷ ಸ್ಥಾನ ಜೆಡಿಎಸ್ ಅಬ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.ಶ್ರೀನಿವಾಸಪುರ: ಪುರಸಭೆ ಅಧ್ಯಕ್ಷ ಹಾಗು ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್.ಭಾಸ್ಕರ್ ಅಧ್ಯಕ್ಷರಾಗಿ ಚುನಾಯಿತರಾದರೆ,ಉಪಾಧ್ಯಕ್ಷ ಸ್ಥಾನದಲ್ಲಿ ಜೆಡಿಎಸ್ ಅಬ್ಯರ್ಥಿ ಸುನಿತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಒಟ್ಟು 23 ಸಂಖ್ಯಾಬಲದ ಪುರಸಭೆಯಲ್ಲಿ ಕಾಂಗ್ರೇಸ್ 8 ಸದಸ್ಯರು ಜೆಡಿಎಸ್ 11 ಸದಸ್ಯರು,ಪಕ್ಷೇತರರು 4 ಸದಸ್ಯರಿದ್ದರು ಇವರಲ್ಲಿ ಕಳೆದ ಬಾರಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ಮೂವರು ಪಕ್ಷೇತರ ಅಬ್ಯರ್ಥಿಗಳು ಕಾಂಗ್ರೆಸ್ ಪರವಾಗಿ ಘೋಷಿಸಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೆ ಮತ್ತೊರ್ವ ಸದಸ್ಯ ಜೆಡಿಎಸ್ ಗೆ ಘೋಷಿಸಿದ್ದರು. ಜೆಡಿಎಸ್ ಏಳು ಸದಸ್ಯರು ಗೈರು!ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಎಂ.ಭಾಸ್ಕರ್ ಹಾಗು ಜೆಡಿಎಸ್ ಅಭ್ಯರ್ಥಿಯಾಗಿ ಬಿ.ವೆಂಕಟರೆಡ್ಡಿ ಸ್ಪರ್ದಿಸಿದ್ದರು.ಕಾಂಗ್ರೆಸ್ ಅಭ್ಯರ್ಥಿ ಬಿ.ಎಂ.ಭಾಸ್ಕರ್ ಪರವಾಗಿ 11 ಸದಸ್ಯರು ಬೆಂಬಲಿಸಿದರೆ ಜೆಡಿಎಸ್ ಅಭ್ಯರ್ಥಿ ಬಿ.ವೆಂಕಟರೆಡ್ಡಿ ಪರವಾಗಿ ಏಳು ಸದಸ್ಯರು…
ಶ್ರೀನಿವಾಸಪುರ :ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಮಾಜದಲ್ಲಿ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಜನರ ಬದುಕು ಹಸನಾಗಲು ನಿಸ್ವಾರ್ಥವಾಗಿ ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ಮಾದರಿ ರೈತ ಶಂಕರರೆಡ್ಡಿ ಹೇಳಿದರು ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಅಡ್ಡಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿಮೋರಪಲ್ಲಿಯ ಲಕ್ಕಮ್ಮನಕೆರೆ 2023 – 24 ನೇ ಸಾಲಿನ 669 ನೇ ನಮ್ಮೂರು ನಮ್ಮ ಕೆರೆ ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.ಧರ್ಮಸ್ಥಳ ಸಂಸ್ಥೆ ಬಡ ಹಾಗು ಮದ್ಯಮವರ್ಗದವರ ಬಗ್ಗೆ ಕಾಳಜಿ ವಹಿಸಿ ಸೇವಾಮನೋಭಾವದಿಂದ ಕೆಲಸ ಮಾಡುತ್ತಿದೆ ಎಂದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮಾತನಾಡಿ ರಾಜ್ಯದೆಲ್ಲೆಡೆ ಮುಂಗಾರು ಉತ್ತಮವಾಗಿ ಆಗುತ್ತಿದ್ದು ದಕ್ಷಿಣ ಒಳನಾಡು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಿದೆ ತಕ್ಕ ಮಟ್ಟಿಗೆ ಕೆರೆಗಳು ತುಂಬಿ ಕೃಷಿ ಚಟುವಟಿಕೆಗಳಿಗೆ ನೀರು ಬಳಕೆಯಾಗುತ್ತಿರುವುದು ಉತ್ತಮ ವಾತವರಣ ನಿರ್ಮಾಣ ಆಗಿದೆ ಎಂದರು.ರಾಜ್ಯದಲ್ಲಿ ಇನ್ನು ಹಲವು ಜಿಲ್ಲೆಗಳಲ್ಲಿ ಮಳೆ ಅಭಾವ…
ಬ್ಯಾಟಪ್ಪ ನೇತೃತ್ವದಲ್ಲಿ ರೈತರ ಸಭೆ ಶ್ಯಾಗತ್ತೂರು ಸುಧಾಕರ್ ಭಾಗಿ ಕೈಗಾರಿಕೆ ಸ್ಥಾಪನೆಯಿಂದ ಅನಾನುಕೂಲ ಶ್ರೀನಿವಾಸಪುರ:ಖಾಸಗಿ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲ ಮಾಡಿಕೊಡಲು ಕರ್ನಾಟಕ ಕೈಗಾರಿಕ ಪ್ರದೇಶಾಭಿವೃದ್ಧಿ ಮಂಡಳಿ ರೈತರ ಜಮೀನು ಭೂಸ್ವಾಧೀನ ಮಾಡಿಕೊಳ್ಳಲು ನಾವು ಬಿಡುವುದಿಲ್ಲ ಎಂದು ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ.ಬೇಟಪ್ಪ ಹೇಳಿದರು.ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶ್ಯಾಗತ್ತೂರು ಸುಧಾಕರ್ ಹಾಗು ಶ್ರೀನಿವಾಸಪುರ ತಾಲೂಕಿನ ಯದರೂರು ಭಾಗದ ರೈತರೊಂದಿಗೆ ಬುಧವಾರ ಸಮಾಲೋಚನೆ ಸಭೆ ನಡೆಸಿ ಮಾತನಾಡಿದ ಅವರು ಖಾಸಗಿ ಕೈಗಾರಿಕೆಗಳಿಗೆ ಕೃಷಿ ಜಮೀನು ಬಿಟ್ಟುಕೊಟ್ಟರೆ ರೈತ ಸಂಸ್ಕೃತಿ ನಾಶವಾಗುತ್ತದೆ ರೈತರು ಬೆಳೆದಿರುವಂತ ಮಾವು, ರೇಷ್ಮೆ,ಹೈನುಗಾರಿಕೆ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಇದರಿಂದ ರೈತರು ಆರ್ಥಿಕವಾಗಿ ಹಾಗು ಸಾಮಾಜಿಕವಾಗಿ ಕುಂಠಿತರಾಗಿ ಕೃಷಿ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದರು.ಕೈಗಾರಿಕೆ ಸ್ಥಾಪನೆಯಿಂದ ಅನಾನುಕೂಲ ಹೆಚ್ಚುತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶ್ಯಾಗತ್ತೂರು ಸುಧಾಕರ್ ಮಾತನಾಡಿ ಕೈಗಾರಿಕೆಗಳ ಸ್ಥಾಪನೆಯಿಂದ ಅನುಕೂಲಗಳಿಗಿಂತ ಅನಾನುಕೂಲಗಲೇ ಹೆಚ್ಚಾಗಿದ್ದು ಸರ್ಕಾರ ಒಂದು ಸಲ ಈ ಭಾಗದ ಜಮೀನುಗಳನ್ನು ಭೂ ಸ್ವಾಧೀನ…
ಶ್ರೀನಿವಾಸಪುರ: ಯಲ್ದೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಗಳಾಂಭ ವರ್ಗಾವಣೆಗೆ ಅಗ್ರಹಿಸಿ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗು ಸಾರ್ವಜನಿಕರು ಎರಡು ದಿನಗಳ ಕಾಲ ನಡೆಸಿದ ಪ್ರತಿಭಟನೆ ಹಿನ್ನಲೆಯಲ್ಲಿ ಅವರನ್ನು ವರ್ಗಾವಣೆ ಮಾಡಲು ಮೇಲಧಿಕಾರಿಗಳಿಗೆ ಶಿಫಾರಸ್ಸು ಮಾಡುವುದಾಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎ.ಎನ್ ರವಿ ಭರವಸೆ ನೀಡಿರುತ್ತಾರೆ.ಶ್ರೀನಿವಾಸಪುರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರವಾಗಿ ಭೌಗೋಳಿಕವಾಗಿ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಗುರುತಿಸಿರುವ ಯಲ್ದೂರು ಗ್ರಾಮ ಪಂಚಾಯಿತಿ, ಅಲ್ಲಿನ ಪಂಚಾಯಿತಿ ಸದಸ್ಯರು ಹೇಳುವಂತೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾಗಿರುವ ಮಂಗಳಾಂಭ ವರ್ಗಾವಣೆಯಾಗಿ ಬಂದಾಗಿನಿಂದಲೂ ಪಂಚಾಯಿತಿ ಸದಸ್ಯರೊಂದಿಗೆ ಸೌಹಾರ್ದತೆ ಕಾಪಾಡಿಕೊಳ್ಳದ ಕಾರಣ ಪಂಚಾಯಿತಿ ಅಭಿವೃದ್ಧಿ ವಿಚಾರವಾಗಿ ನಿತ್ಯವೂ ಕಿತ್ತಾಟ ಸಾಮಾನ್ಯವಾಗಿತ್ತು ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸಮಸ್ಯಯಾಗಿತ್ತು ಈಗ ಇದು ಪಂಚಾಯಿತಿ ಅಭಿವೃದ್ಧಿ ವರ್ಗಾವಣೆಯಾದರೆ ಮಾತ್ರ ಸಮಸ್ಯೆ ನೀವಾರಣೆಯಾಗುತ್ತದೆ ಎಂದು ಸಾರ್ವಜನಿಕರು ಅಗ್ರಹಿಸುವವರಿಗೆ ಬಂದು ತಲುಪಿದೆ.ಕಳೆದ ಎರಡು ದಿನಗಳಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾದ್ಯಕ್ಷ ಹಾಗು ಸದಸ್ಯರು ಮತ್ತು ಸಾರ್ವಜನಿಕರು ಪಂಚಾಯಿತಿ ಕಚೇರಿ ಮುಂಬಾಗದಲ್ಲಿ ಪೆಂಡಾಲ್ ಹಾಕಿಕೊಂಡು…
ನ್ಯೂಜ್ ಡೆಸ್ಕ್:ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಪ್ರತಿ 30 ಸೆಕೆಂಡಿಗೆ ಒಬ್ಬರು ಸಾವನ್ನಪ್ಪುತ್ತಿದ್ದಾರೆ ಎಂದು ಸಮೀಕ್ಷೆಗಳು ಹೇಳಿತ್ತಿವೆ ಕಣ್ಣಿಗೆ ಕಾಣದ ಅಗೋಚರ ರೂಪದಲ್ಲಿ ಪ್ಲಾಸ್ಟಿಕ್ ಮನುಷ್ಯರ ದೇಹವನ್ನು ಪ್ರವೇಶಿಸುತ್ತಿದ್ದು ಇದನ್ನು ತಡೆಯಲು ವಿಫಲವಾಗುತ್ತಿದ್ದೇವೆ, ಒಮ್ಮೆ ಬಳಸಿ ಬಿಸಾಡಬಹುದಾದ ರೇಜರ್‌ಗಳು ಈಗ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಲಭ್ಯವಿವೆ. ಪದೇ ಪದೇ ತೊಳೆದು ಉಪಯೋಗಿಸಲು ಸಮಯವಿಲ್ಲದವರು ಇಂತಹ ರೇಜರ್ ಗಳನ್ನು ಖರೀದಿಸುತ್ತಿದ್ದಾರೆ. ವಾಸ್ತವವಾಗಿ, ಈ ವಸ್ತುಗಳ ತಯಾರಿಕೆ ಮತ್ತು ಪ್ಯಾಕಿಂಗ್ ಗಾಗಿ ಹೆಚ್ಚು ಪ್ಲಾಸ್ಟಿಕ್ ಅನ್ನು ಬಳಸಲಾಗುತ್ತದೆ. ಪ್ಲ್ಯಾಸ್ಟಿಕ್ ಹೊದಿಕೆ ಮತ್ತು ಪ್ಲಾಸ್ಟಿಕ್ ಕೇಸ್ ಅನ್ನು ಹೆಚ್ಚುವರಿಯಾಗಿ ರೇಜರ್ ಪ್ಯಾಕಿಂಗ್ ಸಂದರ್ಭದಲ್ಲಿ ಬಳಸಲಾಗುತ್ತದೆ. ರೇಜರ್ ಸಂಪೂರ್ಣವಾಗಿ ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದೆ. ಬದಲಿಗೆ ಲೋಹದಿಂದ ಮಾಡಲ್ಪಟ್ಟ ರೇಜರ್ ಬಳಸಿದರೆ ಅದಕ್ಕೆ ಬ್ಲೇಡ್ ಅನ್ನು ಮಾತ್ರ ಬದಲಾಯಿಸಬಹುದಾಗಿರುತ್ತದೆ ಲೋಹದ ರೇಜರ್ ಪ್ಲಾಸ್ಟಿಕ್ ಬಳಸಿ ಬಿಸಾಡಬಹುದಾದ ರೇಜರ್‌ಗಿಂತ ತುಸು ದುಬಾರಿ ಅನಿಸಬಹುದು ಆದರೆ ಒಮ್ಮೆ ಖರೀದಿಸಿದ ನಂತರ ಬ್ಲೇಡ್‌ಗಳು ಕಡಿಮೆ ವೆಚ್ಚಕ್ಕೆ ಸಿಗುತ್ತದೆ.ಅಡುಗೆ ಮಾಡಲು ಸಮಯವಿಲ್ಲದ ಸೋಮಾರಿ ಜನರು ರೆಡಿಮೇಡ್ ಆಹಾರವನ್ನು…
ನ್ಯೂಜ್ ಡೆಸ್ಕ್:’ಜೂನಿಯರ್ ಎನ್.ಟಿ.ಆರ್ ನಟನೆಯ “ದೇವರ” ಸಿನಿಮಾ ರೀಲಿಜ್ ಗಾಗಿ ನಂದಮೂರಿ ಅಭಿಮಾನಿಗಳು ಕಾತುರದಿಂದ ಕಾಯುತ್ತ ಕೂತಿದ್ದಾರೆ ಎರಡು ವರ್ಷಗಳಕಾಲ ಯಾವುದೆ ಎನ್.ಟಿ.ಆರ್ ಸಿನಿಮಾ ಇರಲಿಲ್ಲ 2022 ರಲ್ಲಿ ಬಿಡುಗಡೆಯಾದ RRR ನಂತರ ದೇವರ ಸಿನಿಮಾ ಬರುತ್ತಿದೆ.ಈಗಾಗಲೆ ಬಿಡುಗಡೆಯಾಗಿರುವ ಒಕ್ಕೆ ಮತ್ತು ಚುಡುಮಲ್ಲೆ ಹಾಡುಗಳು ದಾಖಲೆ ಮಟ್ಟದಲ್ಲಿ ವಿಕ್ಷಕರನ್ನು ತಲುಪಿದ್ದು ಅಭಿಮಾನಿಗಳು ಫೀದಾ ಆಗಿದ್ದು ಮೂರನೇಯ ಹಾಡಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.ಸೆಪ್ಟೆಂಬರ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ಧಿ ಹೊರಬಿದ್ದಿದೆ.ದೇವರ ಸಿನಿಮಾ ಕೊರಟಾಲ ಶಿವ ಬರೆದು ನಿರ್ದೇಶಿಸಿದ್ದು ರೊಮ್ಯಾಂಟಿಕ್ ಆಕ್ಷನ್ ಎಂಟರ್‌ಟೈನರ್ ಮತ್ತು ಸುಧಾಕರ್ ಮಿಕ್ಕಿಲಿನೇನಿ ಮತ್ತು ನಂದಮೂರಿ ಕಲ್ಯಾಣ್ ರಾಮ್ ಜಂಟಿಯಾಗಿ ನಿರ್ಮಿಸಿರುವಂತ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್, ಜಾನ್ವಿ ಕಪೂರ್(ಶ್ರೀದೇವಿ ಮಗಳು), ಸೈಫ್ ಅಲಿ ಖಾನ್, ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ.
ನ್ಯೂಜ್ ಡೆಸ್ಕ್: ಮದುವೆಯ ಅಹ್ವಾನ ಪತ್ರಿಕೆ ವಿನೂತನವಾಗಿ ಇರಬೇಕು ಸಾಕಷ್ಟು ಪ್ರಚಾರವಾಗಬೇಕು ಎಂದೆಲ್ಲಾ ಕಸರತ್ತು ಮಾಡಿ ಅಹ್ವಾನಪತ್ರಿಕೆ ಮುದ್ರಿಸುತ್ತಾರೆ. ಇಲ್ಲೊಬ್ಬ ಶಿಕ್ಷಕಿ ತನ್ನ ವೃತ್ತಿಗೆ ಅನುಗುಣವಾಗಿ ಪ್ರಶ್ನಾವಳಿಯ ರೂಪದಲ್ಲಿ ಮದುವೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಿದ್ದು, ಮದುವೆ ಅಹ್ವಾನ ಪತ್ರಿಕೆಯಲ್ಲಿ ಒಂದೇ ಉತ್ತರ ಬಹು ಆಯ್ಕೆಯೊಂದಿಗೆ 8 ಪ್ರಶ್ನೆಗಳಾಗಿ ವಿಂಗಡಿಸಲಾಗಿದೆ ಅದರಲ್ಲಿ ವರ, ವಧು, ಮದುವೆ ದಿನಾಂಕ, ಸಮಯ, ಮಂಟಪ, ಭೋಜನದ ವಿವರಗಳಿಂದ ತುಂಬಿದೆ. ಇದು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪೆನುಮಂತ್ರ ಮಂಡಲದ ಮರ್ಟೇರುವಿನ ಶಿಕ್ಷಕಿ ಪ್ರತ್ಯೂಷಾ ಅವರ ವಿವಾಹ ಪತ್ರಿಕೆಯಾಗಿದ್ದು ಈ ತಿಂಗಳ 23ರಂದು ಮದುವೆ ನಡೆಯಲಿದೆ.
ನ್ಯೂಜ್ ಡೆಸ್ಕ್:ಆಂಧ್ರ ಪ್ರದೇಶದ ಪುಂಗನೂರಿನ ಚೌಡೇಪಲ್ಲಿ ಮಂಡಲದ ಕಾಟಿಪೇರಿಯ ಮೌನಿಕಾ ಮದನಪಲ್ಲಿ ಅಬಕಾರಿ ಇಲಾಖೆ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಭಾನುವಾರ ರಜೆ ಇದ್ದ ಹಿನ್ನೆಲೆಯಲ್ಲಿ ಮಕ್ಕಳಾದ ಅನಿಶಾ ರೆಡ್ಡಿ ಮತ್ತು ತನೀಷ್ ರೆಡ್ಡಿ ಅವರೊಂದಿಗೆ ಸ್ವಗ್ರಾಮದಲ್ಲಿ ಹೊಲ ಹಾಗು ಹಸುಗಳನ್ನು ನೋಡಿ ಬರಲು ಹೋಗಿದ್ದು ಮಗಳು ಅನಿಶಾ ರೆಡ್ಡಿ ಹಸುವಿನ ಹಗ್ಗವನ್ನು ಹಿಡಿದು ಆಟವಾಡುಲು ಹೋದಾಗ ಹಸು ಗಾಬಾರಿಗೊಂಡು ಓಡಲು ಪ್ರಾರಂಭಿಸಿ ನೀರಿನ ಹಳ್ಳಕ್ಕೆ ಇಳದಿದೆ ಹಗ್ಗ ಹಿಡದಿದ್ದ ಮಗು ಸಹ ಹಸುವಿನೊಂದಿಗೆ ಹೋಗಿ ನಿರಿನಲ್ಲಿ ಬಿದ್ದಿದ್ದಾಳೆ ಇದನ್ನು ಗಮನಿಸಿ ಮಗುವನ್ನು ರಕ್ಷಿಸಲು ತಾಯಿ ಕೂಡ ನೀರಿನಲ್ಲಿ ಇಳಿದ್ದಾಳೆ ನೀರಿನಕೊಳ ಆಳ ಇದ್ದು ತಾಯಿ ಮಗು ಇಬ್ಬರೂ ಈಜು ಬಾರದೆ ಮುಳಗಿ ಸಾವನ್ನಪ್ಪಿದ್ದಾರೆ.
ಶ್ರೀನಿವಾಸಪುರ:ಶ್ರೀನಿವಾಸಪುರ ತಾಲ್ಲೂಕು ಬಯಲು ಸೀಮೆ ಪ್ರದೇಶವಾಗಿದ್ದು ಇಲ್ಲಿ ಶಾಶ್ವತ ನೀರಾವರಿ ಸೌಲಭ್ಯವಿಲ್ಲದೆ ರೈತರು ತಮ್ಮ ಸ್ವಾಭಿಮಾನದ ಬದುಕಿಗಾಗಿ ಮಳೆಯಾಧಾರಿತ ಕೃಷಿಯನ್ನು ಮಾಡುತ್ತ ಎಣಗಾಡುತ್ತಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ಗ್ರಾಮೀಣ ಜನರ ಜೀವನಕ್ಕೆ ಅಧಾರವಾಗಿರಲು ಉದ್ಯೋಗ ಸೃಷ್ಠಿಸಲು ಶ್ರೀನಿವಾಸಪುರ ತಾಲೂಕಿನ ಎರಡು ಕಡೆ ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸಲು ಉದ್ದೇಶಿಸಿರುವುದಾಗಿ ಶಾಸಕ ವೆಂಕಟಶಿವಾರೆಡ್ಡಿ ಪತ್ರಿಕಾ ಪ್ರಕಟಣೆ ಮೂಲಕ ಹೇಳಿದ್ದಾರೆ.ಶ್ರೀನಿವಾಸಪುರ-ಮುಳಬಾಗಲು ರಸ್ತೆಯ ಯದರೂರು ಭಾಗದಲ್ಲಿ 2000 ಎಕರೆ ಹಾಗೂ ಮದನಪಲ್ಲಿ ರಸ್ತೆಯ ಲಕ್ಷ್ಮಿಪುರ ಭಾಗದಲ್ಲಿ 3000 ಎಕರೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಕೈಗಾರಿಕಾ ಪ್ರದೇಶಗಳಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಇಟ್ಟುಕೊಂಡು ಯೋಜನೆ ರೂಪಿಸಿದ್ದು ಕಾರ್ಯೋನ್ಮುಖವಾಗಿದೆ ಶ್ರೀನಿವಾಸಪುರ-ಮುಳಬಾಗಿಲು ರಸ್ತೆಯ ಎದುರೂರು ಗ್ರಾಮದ ಆಸುಪಾಸಿನಲ್ಲಿ 2,000 ಎಕರೆ ಕೈಗಾರಿಕಾ ಅಭಿವೃದ್ಧಿಗೆ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ ಈಗಾಗಲೆ ಅನುಮೋದನೆ ಸಹ ನೀಡಿದೆ ಜಮೀನು ಸ್ವಾಧೀನ ಪ್ರಕ್ರಿಯೆಗಾಗಿ ಪ್ರಾಥಮಿಕ ನೋಟಿಫಿಕೇಶನನ್ನು ನೀಡಿದ್ದು ಇಲ್ಲಿ ಕೆಲ ಸಣ್ಣ-ಪುಟ್ಟ ಸಮಸ್ಯೆಗಳು ಇದೆ ಆದನ್ನು ನಿವಾರಿಸುವ ಪ್ರಯತ್ನ ಮಾಡಲಾಗುತ್ತಿದ್ದು ಅಷ್ಟರಲ್ಲಿ ಜಮೀನು ಸ್ವಾಧೀನ ಪಡಿಸಿಕೊಳ್ಳುವ ವಿಚಾರವನ್ನು ದುರ್ಭಳಕೆ ಮಾಡಿಕೊಂಡ…