Author: Srinivas_Murthy

ನ್ಯೂಜ್ ಡೆಸ್ಕ್: ಬೈಕ್ ವೀಲಿಂಗ್ ಪುಂಡರ ಹಾವಳಿ ದಿನೆ ದಿನೆ ಮಿತಿ ಮೀರುತ್ತಿದ್ದು ಅದರಲ್ಲೂ ಹೆದ್ದಾರಿಗಳಲ್ಲಿ ಸಂಚಾರ ದಟ್ಟಣೆ ನಡುವೆಯೇ ಡೊಂಟ್ ಕೇರ್ ಎಂದು ಪುಂಡರು ವೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವುದು ಸಾಮಾನ್ಯವಾಗಿಬಿಟ್ಟಿದೆ ಇದು ಕೆಲವೊಮ್ಮೆ ಅಪಘಾತಕ್ಕೂ ಕಾರಣವಾಗುತ್ತಿದ್ದು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ರು ಕ್ರಮ ಕೈಗೊಳ್ಳದ ಕಾರಣ ಜನರು ಸಹ ವೀಲಿಂಗ್ ಪುಂಡರ ವಿರುದ್ದ ರೋಸಿಹೋಗಿದ್ದು ಸಾರ್ವಜನಿಕರೆ ವೀಲಿಂಗ್ ಮಾಡುತ್ತಿದ್ದ ಪುಂಡರಿಗೆ ತಕ್ಕ ಪಾಠ ಕಲಿಸಿದ ಘಟನೆ ನಡದಿದೆ.ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯ ನೆಲಮಂಗಲ ಫ್ಲೈಓವರ್ ಅಡಕಮಾರನಹಳ್ಳಿ ಬಳಿ ವೀಲಿಂಗ್ ಮಾಡುತ್ತಿದ್ದ ಪುಂಡರು ಅಪಘಾತ ಮಾಡಿದ್ದಾರೆ. ವೀಲಿಂಗ್ ಮಾಡುತ್ತಿದ್ದ ಯುವಕನೊಬ್ಬ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಘಟನೆ ಬಳಿಕ ಇತರ ವಾಹನಗಳ ಸವಾರರು ಆಕ್ರೋಶ ಭರಿತರಾಗಿ ವೀಲಿಂಗ್ ಮಾಡುತ್ತಿದ್ದ ಬೈಕ್‌ಗಳನ್ನು ತಡೆದಿದ್ದಾರೆ ಇದರಿಂದ ಅಪಘಾತವಾದ ಬೈಕ್ ನ್ನು ಅಲ್ಲೆ ಬಿಟು ಪುಂಡರು ಹೋಡಿ ಹೋಗಿದ್ದಾರೆ ಅಲ್ಲಿದ್ದ ಜನರ ಗುಂಪು ಬೈಕ್ ಅನ್ನು ಫ್ಲೈಒವರ್ ನಿಂದ ಕೆಳಗೆ ಎಸೆದು ತಮ್ಮ…

Read More

ಶ್ರೀನಿವಾಸಪುರ:ಕೋಲ್ಕತಾದ ಕೀರಿಯ ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಪೈಶಾಚಿಕವಾಗಿ ಹತ್ಯೆ ಮಾಡಿದ ರಾಕ್ಷಸೀಯ ಘಟನೆ ಖಂಡಿಸಿ ಇಂದು ಶ್ರೀನಿವಾಸಪುರದ ವೈದ್ಯರು ಪ್ರತಿಭಟನೆ ನಡೆಸಿದರು.ಪಶ್ಚಿಮ ಬಂಗಾಳದ ಕೋಲ್ಕತಾ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿರುವ ಟ್ರೈನಿ ವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಬರ್ಬರ ಕೊಲೆಯನ್ನು ಖಂಡಿಸಿ ಇಂದು ತಾಲೂಕು ಭಾರತೀಯ ವೈದ್ಯಕೀಯ ಸಂಘ ಮುಷ್ಕರ ನಡೆಸಿತು ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆವರೆಗೆ 24 ಗಂಟೆಗಳ ಕಾಲ ತುರ್ತು ವೈದ್ಯಕೀಯ ಸೇವೆಯನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು ಬಂದ್ ಮಾಡಿದ ಶ್ರೀನಿವಾಸಪುರ ತಾಲೂಕಿನ ಖಾಸಗಿ ಹಾಗು ಸರ್ಕಾರಿ ಆಸ್ಪತ್ರೆಗಳವರು ಆರೋಗ್ಯಸಿಬ್ಬಂದಿ ಮತ್ತು ವೈದ್ಯರು ಪ್ರತಿಭಟನೆಯಲ್ಲಿ ಪಾಲ್ಗೋಂಡಿದ್ದರು.ಈ ಸಂದರ್ಬದಲ್ಲಿ ತಾಲೂಕು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ವೆಂಕಟಾಚಲ ಮಾತನಾಡಿ ಕೊಲ್ಕತ್ತಾದಲ್ಲಿ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಹತ್ಯೆಮಾಡಿರುವುದು ಅತ್ಯಂತ ಹೇಯ ಕೃತ್ಯ ಮುಂದಿನ ದಿನಗಳಲ್ಲಿ ಆಸ್ಪತ್ರೆ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಮಹಿಳೆಯರಿಗೆ ರಕ್ಷಣೆ ನೀಡಬೇಕು,ವೈದ್ಯಕೀಯ ಕ್ಷೇತ್ರದಲ್ಲೂ ರಕ್ಷಣೆ…

Read More

ಕೋಲಾರ : ಕೋಲಾರ ಜಿಲ್ಲೆಯಾದ್ಯಂತ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ಜಿಲ್ಲಾಧಿಕಾರಿ ಅಕ್ರಂ ಪಾಷ ಕಠಣ ಕ್ರಮಕ್ಕೆ ಸೂಚಿಸಿದ್ದಾರೆ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವವರ ವಿರುದ್ಧ ಕಾಯ್ದೆಯನುಸಾರ ಕ್ರಮ ತಗೆದುಕೊಳ್ಳಲು ಪ್ರತಿ ತಾಲ್ಲೂಕುವಾರು ಸಮಿತಿ ರಚಿಸಲು ಸೂಚಿಸಿದ್ದಾರೆ. ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ಬಳಕೆ ಕುರಿತಾಗಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹಾಗೂ ಪರಿಸರ ಸ್ನೇಹಿ ಪರ್ಯಾಯ ವಸ್ತುಗಳನ್ನು ಉಪಯೋಗಿಸುವ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳಾದ ಕ್ಯಾರಿಬ್ಯಾಗ್, ಚಮಚ, ತಟ್ಟೆ, ಲೋಟ ಇತ್ಯಾದಿ ತಯಾರಿಕ ಘಟಕಗಳು, ಗೋದಾಮು ಮತ್ತು ಮಾರಾಟ ಮಳಿಗೆಗಳ ಮೇಲೆ ನಿಗಾ ಇಟ್ಟು, ದಾಳಿ ನಡೆಸಿ ಅಂತವರ ವಿರುದ್ಧ ದಂಡ ಹಾಗೂ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬೇಕೆಂದು ಸಂಬಂಧಪಟ್ಟ ಪುರಸಭೆ ಪಟ್ಟಣಪಂಚಾಯಿತಿ ನಗರ ಸಭೆಗಳು ಹಾಗು ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡಿದ್ದಾರೆ.ಜಿಲ್ಲಾಡಳಿತ ವತಿಯಿಂದ ಸಾರ್ವಜನಿಕರೆಗೆ ಹೆಚ್ಚಿನ ರೀತಿಯಲ್ಲಿ ತಲುಪುವ ಹಾಗೆ ಜಾಗೃತಿ ಫಲಕಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಬೇಕು…

Read More

ಶ್ರೀನಿವಾಸಪುರ:ಸ್ವಾತಂತ್ರ ಹೋರಾಟಗಾರರನ್ನು ನಿರ್ಲಕ್ಷಿಸಿ ಸ್ಥಳೀಯ ಸಂಪ್ರದಾಯ ಮುರಿದು ಇಲ್ಲಿನ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಸ್ವಾತಂತ್ರೋತ್ಸವ ಕಾರ್ಯಕ್ರಮವನ್ನು ಮಾಡುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.ದೇಶಾದ್ಯಂತ ಸಂಭ್ರಮ ಸಡಗರದಿಂದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಆಯೋಜಿಸುವುದು ಅದರಲ್ಲಿ ಸ್ವಾತಂತ್ರ ಹೋರಾಟಗಾರರ ಕುಟುಂಬಗಳ ಸದಸ್ಯರನ್ನು ಪಾಲ್ಗೋಳ್ಳಲು ಅವಕಾಶ ನೀಡುವುದು ದೇಶದ ಸಂಪ್ರದಾಯ ಹಾಗೆ ಇದು ಶ್ರೀನಿವಾಸಪುರದಲ್ಲಿ ಮೊದಲಿನಿಂದಲೂ ಇರುವಂತ ಪದ್ದತಿಯಾಗಿತ್ತು. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಹಿಂದೊಮ್ಮೆ ರಾಜ್ಯಪಾಲರ ಭವನಕ್ಕೂ ಶ್ರೀನಿವಾಸಪುರದ ಸ್ವಾತಂತ್ರ ಹೋರಾಟಗಾರರನ್ನು ಅಹ್ವಾನಿಸಿದ್ದು ಇತಿಹಾಸ ಈ ಬಾರಿ 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಆಯೋಜನೆಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಅಧ್ಯಕ್ಷರು ಹೋರಾಟಗಾರರ ಕುಟುಂಬಸ್ಥರನ್ನು ನಿರ್ಲಕ್ಷಿಸಿ ಕಾರ್ಯಕ್ರಮ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ವಿಮರ್ಶಗೆ ಒಳಗಾಗಿದೆ.ಇದುವರಿಗೂ ನಡೆದಂತ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಹಿಂದೆ ಸ್ವತಃ ಸ್ವಾತಂತ್ರ್ಯ ಹೋರಾಟಗಾರರನ್ನು ಕರೆಸಿ ಸ್ವಾತಂತ್ರ್ಯ ಹೋರಾಟದ ಅನುಭವಗಳನ್ನು ಸಾರ್ವಜನಿಕರಿಗೆ ಭಾಷಣದ ಮೂಲಕ ತಿಳಿಸಲು ಅವಕಾಶ ಕಲ್ಪಿಸಿ ಗೌವರವಿಸುತ್ತಿದ್ದರು ಹೋರಾಟಗಾರರು ಕಾಲವಾದ ನಂತರದಲ್ಲಿ ಸ್ಥಳೀಯವಾಗಿ ಇದ್ದಂತ ಸ್ವಾತಂತ್ರ್ಯ ಹೋರಾಟಗಾರ…

Read More

ನ್ಯೂಜ್ ಡೆಸ್ಕ್:ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಮಹಿಳಾ ಟ್ರೈನಿ ವೈದ್ಯೆಯ ಮೇಲೆ ನಡೆದಿರುವ ಸಾಮೂಹಿಕ ಹತ್ಯಾಚಾರ ದೇಶದಲ್ಲಿ ದೊಡ್ದ ಮಾಡಿದ್ದು ಅದು ಮಾಸುವ ಮುನ್ನವೆ ಉತ್ತರಪ್ರದೇಶದಲ್ಲಿ ಒಂಟಿಯಾಗಿ ಹೋಗುತ್ತಿದ್ದ ನರ್ಸ್ ಮೇಲೆ ಹಲ್ಲೆ ನಡೆಸಿ ನಂತರ ಪೊದೆಯೊಳಗೆ ಎಳೆದೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಧಾರುಣ ಘಟನೆ ಬೆಳಕಿಗೆ ಬಂದಿದೆ.ಉತ್ತರ ಪ್ರದೇಶದ ಬಿಲಾಸಪುರ ಪೊಲೀಸರ ಪ್ರಕಾರ ಉತ್ತರಾಖಂಡದ ಖಾಸಗಿ ಆಸ್ಪತ್ರೆಯಿಂದ ಉತ್ತರ ಪ್ರದೇಶದ ಗಡಿ ಬಳಿಯ ತನ್ನ ಮನೆಗೆ ಹಿಂದಿರುಗುತ್ತಿದ್ದ ನರ್ಸ್ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈಯಲಾಗಿದೆ. 33 ವರ್ಷದ ಮಹಿಳೆ ತನ್ನ 11 ವರ್ಷದ ಮಗಳೊಂದಿಗೆ ಬಿಲಾಸ್‌ಪುರದ ಬಾಡಿಗೆ ಮನೆಯಲ್ಲಿ ವಾಸವಿದ್ದು ಅವರು ರುದ್ರಪುರದ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು ಜುಲೈ 30ರಂದು ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿರುವಾಗ ಘಟನೆ ನಡೆದಿದೆ.ರಾತ್ರಿಯಾದರು ಮನೆಗೆ ಬಾರದೆ ಇದ್ದ ಕಾರಣ ಮೃತಳ ಸಹೋದರಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಎಂಟು ದಿನಗಳ ನಂತರ ದಿಬ್ದಿಬಾ…

Read More

ನ್ಯೂಜ್ ಡೆಸ್ಕ್:ಪ್ರತಿ ಮನುಷ್ಯನ ಜೀವನದಲ್ಲಿ ಸ್ಮಾರ್ಟ್ ಫೋನ್ ಒಂದು ಭಾಗವಾಗಿಬಿಟ್ಟಿದೆ ಬೆಳಿಗ್ಗೆ ಹಾಸಿಗೆಯಿಂದ ಏಳುವಾಗಿನಿಂದ ರಾತ್ರಿ ಮಲಗುವತನಕ ಕೈಯಲ್ಲಿ ಸ್ಮಾರ್ಟ್ ಫೋನ್ ಇರಬೇಕು.ಬಾತ್ ರೂಮ್ ಗೆ ಹೋದರೂ ಸರಿ ಫೋನ್ ತೆಗೆದುಕೊಂಡು ಹೋಗಿ ಕಮೋಡ್ ಮೇಲೆ ಕೂತು ಪೋನ್ ಬಳಸುವಂತವರಿದ್ದಾರೆ. ಕಮೋಡ್ ಮೇಲೆ ಕೂತು ಸಮಯ ಕಳೆದರೆ, ಹಲವಾರು ರಿತಿಯ ಸೋಂಕುಗಳಿಗೆ ಒಳಗಾಗುವ ಅಪಾಯ ಇದೆ ಎನ್ನುತ್ತಾರೆ ತಜ್ಞರು.ಶೌಚಾಲಯ ಸೇರಿದಂತೆ ಸ್ನಾನಗೃಹದಲ್ಲಿ 10 ನಿಮಿಷಕ್ಕಿಂತ ಹೆಚ್ಚಿನ ಹೊತ್ತು ಇರಬೇಡಿ ಏಕೆಂದರೆ ಒಂದೇ ಭಂಗಿಯಲ್ಲಿ ದೀರ್ಘಕಾಲ ಕುಳಿತರೆ, ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂಬ ಎಚ್ಚರಿಕೆ ನೀಡಿರುತ್ತಾರೆ.ಶೌಚಾಲಯದಲ್ಲಿ ನಮ್ಮ ದೇಹದ ಮೇಲೆ ಗಮನ ಹರಿಸುವುದು ಬಹಳ ಮುಖ್ಯ. ಏಕೆಂದರೆ ಟಾಯ್ಲೆಟ್ ಸೀಟಿನಲ್ಲಿ ಒಂದೇ ಭಂಗಿಯಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು ಸೊಂಟದ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಇದು ಬೆನ್ನುನೋವಿನ ಸಮಸ್ಯೆಗೆ ಕಾರಣವಾಗುತ್ತದೆ ನೋವು ಹೆಚ್ಚಾದರೆ, ಇನ್ನಿತರೆ ಸಮಸ್ಯೆಗಳು ಕಾಡುತ್ತದೆ ಸಮರ್ಪಕವಾಗಿ ನಡೆಯಲು ಆಗದ ಸ್ಥಿತಿ ತಲುಪುವ ಅವಕಾಶ ಇರುತ್ತದೆ ಸ್ನಾಯುಗಳಲ್ಲಿ ಊತ ಮತ್ತು ಸೆಳೆತದ ಸಮಸ್ಯೆಗಳ ಉಂಟಾಗಬಹುದು…

Read More

ನ್ಯೂಜ್ ಡೆಸ್ಕ್:ಜಾಗತಿಕ ಮಟ್ಟದಲ್ಲಿ ಔಷಧಿ ಸಸ್ಯಗಳ ಕುರಿತಾಗಿ ಬಹುರಾಷ್ಟ್ರೀಯ ಸಂಸ್ಥೆಯಾಗಿ ರೂಪಗೊಂಡಿರುವ ಬೆಂಗಳೂರು ಮೂಲದ ಸಮಿ-ಸಬಿನ್ಸಾ ಗ್ರೂಪ್ ಕಂಪನಿ ತನ್ನ ನಿರ್ವಹಣಾ ತಂಡಕ್ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ಶ್ರೀನಿವಾಸಪುರ ಮೂಲದ ಡಾ.ದೇವರಾಜ್ ರೆಡ್ಡಿ ಅವರನ್ನು ಘೋಷಿಸಿದೆ. “ಸಮಿ-ಸಬಿನ್ಸಾ ಗ್ರೂಪ್ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಬಹು ಎತ್ತರಕ್ಕೆ ಬೆಳೆದಿದೆ,ಸಮಿ ಸಬಿನ್ಸಾ ಗುಂಪು ಸಂಶೋಧನಾ ಆಧಾರಿತ ಜಾಗತಿಕ (MNC) ಹರ್ಬಲ್ ಔಷಧ ತಯಾರಿಕಾ ಸಂಸ್ಥೆಯಾಗಿದ್ದು ಸುಮಾರು 18 ದೇಶಗಳಲ್ಲಿ ಕಾರ್ಯಚಟುವಟುವಟಿಕೆ ವಿಸ್ತರಿಸಿದೆ, ಗುಣಮಟ್ಟದ ಸಸ್ಯಧಾರಿತ ಉತ್ಪನ್ನಗಳಿಂದ ವಿಶ್ವಾದ್ಯಂತ ತನ್ನದೆ ಆದಂತ network ಹೊಂದಿದೆ. ಡಾ.ದೇವರಾಜ್ ರೆಡ್ಡಿ ಔಷಧಿ ಸಸ್ಯಗಳ ಕುರಿತಾಗಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ. ಜಾಗತಿಕ B2B ಮಾರುಕಟ್ಟೆಯಲ್ಲಿ ಪ್ರಮಾಣಿತ ಗಿಡಮೂಲಿಕೆಗಳ ಸಾರಗಳು ಮತ್ತು ಸಂಶ್ಲೇಷಿತ ಅಣುಗಳ ತಯಾರಿಕೆಗೆ ಸಂಬಂಧಿಸಿದ ಗಮನಾರ್ಹ ಸಂಶೋಧನಾ ಅನುಭವವನ್ನು ಹೊಂದಿದ್ದಾರೆ.ಉತ್ಪಾದನೆ ಮತ್ತು ಗುಣಮಟ್ಟದ ಕಾರ್ಯಾಚರಣೆಗಳ ಯೋಜನೆಗಳನ್ನು ಅಭಿವೃದ್ಧಿಪಡಿದ್ದಾರೆ.ಇವರು ಕರ್ನಾಟಕದ ಮೈಸೂರು ವಿಶ್ವವಿದ್ಯಾನಿಲಯದಿಂದ ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದಿರುತ್ತಾರೆ.ಬೆಂಗಳೂರು ಪೀಣ್ಯದಲ್ಲಿನ ಸಮಿ-ಸಬಿನ್ಸಾ ಗ್ರೂಪ್‌ನ ಕಾರ್ಪೊರೇಟ್ ಕಚೇರಿಯಲ್ಲಿ ಕಾರ್ಯಚಟುವಟಿಕೆ ಇದ್ದು ಎಲ್ಲಾ ಉತ್ಪನ್ನಗಳು,…

Read More

ಶ್ರೀನಿವಾಸಪುರ:ತಾಲೂಕಿನ ಮಣಿಗಾನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದು ಚುನಾವಣೆಯಲ್ಲಿ ಒಟ್ಟು 12 ನಿರ್ದೇಶಕರು ಆಯ್ಕೆಯಾಗಿದ್ದು ಇದರಲ್ಲಿ 11 ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲವು ಸಾಧಿಸಿ ಅಧಿಕಾರರಕ್ಕೆ ಬಂದಿದೆ.ಮಣಿಗಾನಹಳ್ಳಿ ಶ್ರೀನಿವಾಸ್ ರೆಡ್ಡಿ, ಕಿರುವಾರ ಲಕ್ಷ್ಮಣರೆಡ್ಡಿ, ತಿಮ್ಮಸಂದ್ರ ನಾರಾಯಣಸ್ವಾಮಿ, ತಿಮ್ಮಸಂದ್ರ ಬೈರೆಡ್ಡಿ , ಆಲವಾಟ ವೆಂಕಟೇಶ್ ರೆಡ್ಡಿ ಆಯ್ಕೆಯಾಗಿದ್ದು ಹಿಂದುಳಿದ ವರ್ಗ “ಎ” ಕ್ಷೇತ್ರದಿಂದ ಆರಿಕುಂಟೆ ಚಿಕ್ಕರಾಮಪ್ಪ, ಹಿಂದುಳಿದ ವರ್ಗ “ಬಿ” ಕ್ಷೇತ್ರದಿಂದ ಬಂಡಪಲ್ಲಿ ಸುರೇಶ್ ರೆಡ್ಡಿ , ಪರಿಶಿಷ್ಟ ಜಾತಿ ಕ್ಷೇತ್ರದಿಂದ ಜೆ ವಿ ಕಾಲೋನಿಯ ಲಕ್ಷ್ಮೀದೇವಮ್ಮ , ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಮಣಿಗಾನಹಳ್ಳಿ ಅಂಜಪ್ಪ,ಮಹಿಳೆ ಕ್ಷೇತ್ರದಿಂದ ದೊಡಮಲದೊಡ್ಡಿ ವಿಜಯಮ್ಮ, ಹಾಗು ಆರಿಕುಂಟೆ ಸುಕನ್ಯ, ಸಾಲಗಾರರಲ್ಲದ ಕ್ಷೇತ್ರದಿಂದ ಮಣಿಗಾನಹಳ್ಳಿ ನಾರಾಯಣಸ್ವಾಮಿ ಆಯ್ಕೆಯಾಗಿದ್ದಾರೆ. ಒಟ್ಟು 12 ನಿರ್ದೇಶಕರ ಪೈಕಿ 11 ನಿರ್ದೇಶಕರು ಕಾಂಗ್ರೆಸ್ ಬೆಂಬಲಿತ ನಿರ್ದೇಶಕರೆ ಆಯ್ಕೆಯಾಗಿದ್ದು ಒರ್ವ ನಿರ್ದೇಶಕ ಮಾತ್ರ ಜೆಡಿಎಸ್ ಬೆಂಬಲಿತ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೇಸ್ ಮುಖಂಡರು…

Read More

ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದಲ್ಲಿ ಶ್ರೀ ವೆಂಕಟೇಶ್ವರ ದೇವಾಲಯ ಇಲ್ಲದೆ ಶ್ರೀನಿವಾಸನ ಭಕ್ತರು ಇಲ್ಲಿ ಪರಿತಪಿಸುತ್ತಿದ್ದರು,ಈಗ ಭಕ್ತರ ಬಕುತಿಗೆ ದೇವ ದೇವ ಶ್ರೀನಿವಾಸ ಒಲಿದಿದ್ದಾನೆ, ಶ್ರೀನಿವಾಸಪುರ ಪಟ್ಟಣದ ವಲ್ಲಭಾಯ್ ರಸ್ತೆಯ ಕಟ್ಟೆಕೆಳಗಿನ ಪಾಳ್ಯದಲ್ಲಿ ಶ್ರೀ ನೀಳಾ ಮತ್ತು ಭೂನೀಳಾ ಸಮೇತ ಶ್ರೀ ವೆಂಕಟೇಶ್ವರ ಸ್ವಾಮಿಯ ನೂತನ ಶಿಲಾ ಬಿಂಬದೊಂದಿಗೆ ಜಿರ್ಣೋದ್ಧಾರವಾಗಿ ಇಂದು ಶ್ರಾವಣದ ಪ್ರಥಮ ಶುಕ್ರವಾರ ವೇಧಘೋಷಗಳೊಂದಿಗೆ ಪಂಚಸೂತ್ರಗಳೊಂದಿಗೆಮೂಲಮೂರ್ತಿಗಳಿಗೆ ಪ್ರಾಣ ಪ್ರತಿಷ್ಟಾಪನೆ ಮಾಡಲಾಗಿ ಲೋಕಾರ್ಪಣೆ ಮಾಡಲಾಯಿತು.ದೇವಾಲಯದ ಆವರಣದಲ್ಲಿ ಶ್ರೀ ಅಭಯಾಂಜನೇಯಸ್ವಾಮಿ,ಮಹಾಗಣಪತಿ ಮತ್ತು ಗರುಡ ದೇವರುಗಳು ಸೇರಿದಂತೆ ಶ್ರೀನಿವಾಸ ದೇವರ ದ್ವಾರಪಾಲಕರಾದ ಜಯ-ವಿಜಯ ವಿಗ್ರಹಗಳ ನೂತನ ಶಿಲಾ ಬಿಂಬಗಳ ಪ್ರತಿಷ್ಠಾಪನೆಯಾಗಿದೆ.ಕಳೆದ ಮೂರು ದಿನಗಳಿಂದ ವಿವಿಧ ಪೂಜಾ ಕಾರ್ಯಕ್ರಮಗಳು ಹೋಮ ಹವನ ಆಯೋಜಿಸಲಾಗಿತ್ತು. ದೇವಾಲಯ ಜಿರ್ಣೋದ್ಧಾರ ಕಾರ್ಯಕ್ರಮದಲ್ಲಿ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ. ಎಂ.ಆರ್. ಜಯರಾಮ್,ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಇಒ ಎ.ಎನ್.ರವಿಕುಮಾರ್, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ,ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್,ಕೈವಾರ ಕ್ಷೇತ್ರ ಮಠದ ಸಂಚಾಲಕ ಬಾಲಕೃಷ್ಣ ಭಾಗವತರ್,ಬಿ.ಎಲ್. ಕುಟುಂಬದ ಹಿರಿಯ ಸದಸ್ಯರಾದ ಬಿ.ಎಮ್.ರಾಮಚಂದ್ರಯ್ಯ, ಬಿ.ಎಲ್.ಸೂರ್ಯನಾರಾಯಣ, ಬಿ.ಎಂ.ಪ್ರಕಾಶ್, ಸ್ಥಳೀಯ…

Read More

ಬೆಂಗಳೂರು:ಆಂಧ್ರದ ಉಪಮುಖ್ಯಮಂತ್ರಿ ಹಾಗು ಖ್ಯಾತ ನಟ ಪವನ್ ಕಲ್ಯಾಣ್ ಇಂದು ಬೆಂಗಳೂರಿಗೆ ಆಗಮಿಸಿದ್ದ ವೇಳೆ ಸಿಎಂ ಸಿದ್ದರಾಮಯ್ಯ ಅವರನ್ನು ಗುರುವಾರ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಔನೊಪಚಾರಿಕವಾಗಿ ಮಾತನಾಡಿದ್ದಾರೆ. ಆಂಧ್ರ ಪ್ರದೇಶ ಚುನಾವಣೆ ಗೆಲುವಿನ ಹಾಗೂ ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡ ಪವನ್‌ ಅವರಿಗೆ ಸಿಎಂ ಶುಭಾಶಯ ತಿಳಿಸಿದ್ದಾರೆ.ಆನೆ ಮಾನವ ಸಂಘರ್ಷದ ಸಭೆಬೆಂಗಳೂರಿನ ವಿಧಾನಸೌಧದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಾನವ ಆನೆ ಸಂಘರ್ಷ ನಿರ್ವಹಣೆ ಸಮ್ಮೇಳನದ ಕುರಿತಾಗಿ ಆಂಧ್ರ ಅರಣ್ಯ ಇಲಾಖೆ ಸಚಿವರು ಆಗಿರುವ ಡಿಸಿಎಂ ಪವನ್ ಕಲ್ಯಾಣ್ ಆಗಮಿಸಿದ್ದರು.ಆಗಸ್ಟ್‌ 12 ಕ್ಕೆ ಸಮ್ಮೇಳನಕರ್ನಾಟಕ-ಆಂಧ್ರ ಗಡಿ ಭಾಗದಲ್ಲಿ ಆನೆ ಹಾವಳಿ ತಪ್ಪಿಸಲು ಆಗಸ್ಟ್ 12 ವಿಶ್ವ ಆನೆಗಳ ದಿನದಂದು ಬೆಂಗಳೂರಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ವಿಶ್ವಾದ್ಯಂತದಿಂದ ತಜ್ಞರು ಆಗಮಿಸಲಿದ್ದು ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಪವನ್‌ ಕಲ್ಯಾಣ್‌ ಕರ್ನಾಟಕ ಅರಣ್ಯ ಸಚಿವ ಈಶ್ವರಖಂಡ್ರೆಯೊಂದಿಗೆ ಸೇರಿ ಬಿಡುಗಡೆ ಮಾಡಿದ್ದಾರೆ.ಸಮ್ಮೇಳನದಲ್ಲಿ ವನ್ಯಜೀವಿ- ಮಾನವ ಸಂಘರ್ಷ ನಿಯಂತ್ರಣಕ್ಕೆ ಯಾವ ಯಾವ ದೇಶದಲ್ಲಿ ಯಾವ ಅನುಸರಿಸಿರುವ ಪರಿಹಾರ ಮಾರ್ಗಗಳ…

Read More