ಶ್ರೀನಿವಾಸಪುರ: ವಿಶ್ವ ಪ್ರಸಿದ್ಧ ಮಾವಿನ ಹಣ್ಣನ ನಗರ ಪ್ರಮುಖ ತಾಲೂಕು ಮುಖ್ಯಕೇಂದ್ರ ರಾಜಕೀಯ ಜಿದ್ದಾಜಿದ್ದಿನ ಕ್ಷೇತ್ರವೆಂದೇ ಹೆಸರಾಗಿರುವ ಶ್ರೀನಿವಾಸಪುರ ಪಟ್ಟಣದಲ್ಲಿ ಬಹುತೇಕ ರಸ್ತೆಗಳಿಗೆ ಪುಟ್ ಪಾತ್ ಇಲ್ಲ ಹಾಗಾಗಿ ಇಲ್ಲಿನ ಜನ ರಸ್ತೆಯಲ್ಲೆ ಸಂಚರಿಸುತಿದ್ದು ಇಲ್ಲಿ ಎಲ್ಲವೂ ಆಯೋಮಯವಾಗಿದೆ.ಸದಾ ಗಿಜಗುಟ್ಟುವ ರಸ್ತೆಗಳಿಗೆ ಪುಟ್ ಪಾತ್ ಮಾಡಬೇಕು ಎಂಬ ಆಲೋಚನೆ ರಸ್ತೆ ಮಾಡುವಂತ ಇಂಜನಿಯರ್ ಗಳಿಗೆ ಇಲ್ಲ ಎನ್ನುವುದಾದರೆ ಅವರು ಒದಿದ್ದಾರು ಏನನ್ನು ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುವಂತ ಮಾತುಗಳು.ಸಂಚಾರ ವ್ಯವಸ್ಥೆ ಸುಗಮವಾಗಿಲ್ಲ,ಪಟ್ಟಣದ ಹೃದಯ ಭಾಗದಲ್ಲಿನ ಮಾರುಕಟ್ಟೆ ಮುಂಬಾಗ ಹಾಗೂ ಪುಂಗನೂರು ರಸ್ತೆ ಎನ್ನುವ ಎಂ.ಜಿ.ರಸ್ತೆಯಲ್ಲಿ ಫುಟ್ ಪಾತ್‌ಗಳು ಅತಿಕ್ರಮಣಗೊಂಡಿವೆ,ಇದರಿಂದ ಪಾದಚಾರಿಗಳು ರಸ್ತೆ ಮಧ್ಯೆ ಸಾಗುವಂತಾಗಿದ್ದು, ವಾಹನಗಳ ಸಂಚಾರ ಸಹ ಅಸ್ತವ್ಯಸ್ತಗೊಂಡಿದೆ.ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಫುಟ್ ಪಾತ್ ಸೇರಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದ್ದು, ಪಾದಚಾರಿಗಳು,ವಾಹನ ಸವಾರರು ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ.ಇದರಿಂದ ನಗರದ ಅಂದವೂ ಹಾಳಾಗುತ್ತಿದೆ.ಇಲ್ಲಿ ಯಾವ ನಿಯಮಗಳು ಅಚ್ಚುಕಟ್ಟಾಗಿ ಪಾಲನೆಯಾಗುವುದಿಲ್ಲ.ಇದಕ್ಕೆಲ್ಲ ಕಾರಣ ಆಡಳಿತದಲ್ಲಿ ಸ್ಥಳೀಯ ರಾಜಕಾರಣಿಗಳು ನಂದೆಲ್ಲಿಡಲಿ ಎಂದು…
Author: Srinivas_Murthy
ತಿರುಪತಿ:ದಕ್ಷಿಣ ಭಾರತದ ಪ್ರಖ್ಯಾತ ರಾಹು-ಕೇತು ಪೂಜೆ ನಡೆಯುವ ಆಂಧ್ರದ ಶ್ರೀಕಾಳಹಸ್ತೀಶ್ವರ ದೇವಾಲಯದಲ್ಲಿ ಭಾನುವಾರ ನಡೆದಂತ ರಾಹು-ಕೇತು ಪೂಜೆಗಳು ಸಾರ್ವಕಾಲಿಕ ದಾಖಲೆಯಾಗಿದೆ.ದೇವಸ್ಥಾನದಲ್ಲಿ ಐದು ವಿವಿಧ ಧರದ ಟಿಕೆಟ್ ಗಳಲ್ಲಿ ರಾಹು-ಕೇತು ಸರ್ಪದೋಷ ನಿವಾರಣಾ ಪೂಜೆಗಳು ನಡೆಯುತ್ತವೆ ರಾಹು-ಕೇತು ಪೂಜೆಗಳ ದಾಖಲೆರಾಹು-ಕೇತು ಪೂಜಾ ಟಿಕೆಟ್ ಗಳು ಭಾನುವಾರ ಒಂದೇ ದಿನ 9,168 ಟಿಕೆಟ್‌ಗಳು ಮಾರಾಟವಾಗಿವೆ. 14 ತಿಂಗಳ ಹಿಂದೆ ಐದು ವಿಭಾಗಗಳಲ್ಲಿ ದಾಖಲೆಯ 7,200 ಟಿಕೆಟ್‌ಗಳು ಮಾರಾಟವಾಗಿದ್ದು, ಆಷಾಢ ಮಾಸದ ಭಾನುವಾರ ಅಮಾವಾಸ್ಯೆ ಬಂದಿದ್ದರಿಂದ ಜನತೆ ದೇವಾಲಯದಲ್ಲಿ ಪೂಜೆ ಮಾಡಲು ಮುಗಿಬಿದಿದ್ದು ಒಂದೇ ದಿನ 9,168 ರಾಹುಕೇತು ಪೂಜೆಯ ಟಿಕೆಟ್ ಮಾರಾಟವಾಗಿ ಹೊಸ ದಾಖಲೆ ನಿರ್ಮಿಸಿದೆ. ಶ್ರೀಕಾಳಹಸ್ತೀಶ್ವರ ದೇವಸ್ಥಾನದ ರಾಹುಕೇತು ಮಂಟಪಗಳು ಬೆಳಗ್ಗೆಯಿಂದ ಸಂಜೆಯವರೆಗೆ ಭಕ್ತರಿಂದ ತುಂಬಿ ತುಳುಕಾಡುತಿತ್ತು 5,000 ರೂ ಮೊತ್ತದ 154 ಟಿಕೆಟ್ ಗಳು,2,500 ರೂ ಮೊತ್ತದ 610ಟಿಕೆಟ್ ಗಳು,1,500 ರೂ ಮೊತ್ತದ 933ಟಿಕೆಟ್ ಗಳು,750 ರೂ ಮೊತ್ತದ 2,288 ಟಿಕೆಟ್ ಗಳು,500 ರೂ ಮೊತ್ತದ 5,183ಟಿಕೆಟ್ ಗಳು,,. ಸೇರಿ ಒಟ್ಟು…
ಚಿತ್ತೂರು:ಒಂದು ಟನ್ ನೀಲಂ ಮಾವು 1.10 ಲಕ್ಷ ರೂಗಳಿಗೆ ಬಿಕರಿಯಾಗಿದೆ. ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ಬಂಗಾರಪಾಳ್ಯದ ಪ್ರಖ್ಯಾತ ಮಾವು ಮಾರುಕಟ್ಟೆಯಲ್ಲಿ ಭಾನುವಾರ ರೈತರು ತಂದಿದ್ದ ಉತ್ತಮ ಗುಣಮಟ್ಟದ ನೀಲಂ ತಳಿಯ ಮಾವಿನ ಹರಾಜು ನಡೆದು ಒಂದು ಟನ್ ಕಾಯಿ 1.10 ಲಕ್ಷಕ್ಕೆ ವ್ಯಾಪಾರವಾಗಿದೆ.ಪೆದ್ದುಪ್ಪರಪಲ್ಲಿಯ ರೈತ ಖಾದರವಲ್ಲಿ ತಂದಿದ್ದ ಮಾವಿನ ಹಣ್ಣನ್ನು ಚೆನ್ನೈ ಮತ್ತು ಬೆಂಗಳೂರಿನ ವ್ಯಾಪಾರಿಗಳು ಖರೀದಿಸಿದ್ದಾರೆ.
ಶ್ರೀನಿವಾಸಪುರ:ಪುರಸಭೆ ಮೀಸಲಾತಿ ಸೋಮವಾರ ಪ್ರಕಟವಾಗಿದ್ದು ಅಧ್ಯಕ್ಷ ಸ್ಥಾನ ಸಾಮನ್ಯ ಹಾಗು ಉಪಾಧ್ಯಕ್ಷ ಎಸ್ಸಿ ಮಹಿಳೆಗೆ ಒಲಿದಿದೆ. ಮಿಸಲಾತಿ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಸ್ಥಳೀಯ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿದೆ,ಸಾರ್ವಜನಿಕ ಲೆಕ್ಕಚಾರಗಳ ಕುರಿತಾಗಿ ಚರ್ಚೆಗಳು ಆರಂಭವಾಗಿದೆ, ಕಳೆದ ಹದಿನೈದು ತಿಂಗಳಿನಿಂದ ರಾಜಕೀಯ ಚಟುವಟಿಕೆ ಇಲ್ಲದೆ ಪುರಸಭೆಯಲ್ಲಿ ಅಧಿಕಾರಿಗಳಿದೆ ಕಾರ್ಯಕಲಾಪ ಸಾಗಿತ್ತು ಈಗ ಮೀಸಲಾತಿ ಪ್ರಕಟವಾಗಿರುವುದು ಸ್ಥಳೀಯ ಪುರಸಭೆ ಸದಸ್ಯರಲ್ಲಿ ರಾಜಕೀಯ ಗರಿಗೆದರಿದೆ ಒಟ್ಟು 23 ಸದಸ್ಯರ ಶ್ರೀನಿವಾಸಪುರ ಪುರಸಭೆಯಲ್ಲಿ ಜೆಡಿಎಸ್11 ಹಾಗು ಕಾಂಗ್ರೆಸ್ 12 ಸದಸ್ಯರನ್ನು ಹೊಂದಿದೆ, ರಾಜಕೀಯ ಲೆಕ್ಕಾಚಾರದಂತೆ ಸುಮಾರು 8 ವಾರ್ಡುಗಳಲ್ಲಿ ಮುಸ್ಲಿಂ ಸದಸ್ಯರಿದ್ದಾರೆ,ಎರಡು ಪಕ್ಷಗಳಿಗೆ ಅಧ್ಯಕ್ಷ ಸ್ಥಾನದ ಆಯ್ಕೆ ಅಷ್ಟು ಈಝಿಯಾಗಿ ಬಗೆಹರಿಸಲಾಗದ ಮಾತಾಗಿದೆ.
ಶ್ರೀನಿವಾಸಪುರ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಬದುಕು ಕಟ್ಟಿಕೊಳ್ಳಬೇಕು. ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡು ಬೆಳೆಯಬೇಕು ಎಂದು ಸಾಹಿತಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಹೇಳಿದರು.ಪಟ್ಟಣದ ಜಗದ್ಗುರು ಭಾರತೀತೀರ್ಥ ಸಭಾ ಭವನದಲ್ಲಿ, ದೆಹಲಿಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ತಾಲ್ಲೂಕು ಘಟಕ ಹಾಗೂ ಸ್ವಾಮಿ ವಿವೇಕಾನಂದ ಚಾರಿಟಿಬಲ್ ಟ್ರಸ್ಟ್ ಸಂಯೂಕ್ತವಾಗಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾಕೃತಿಕ ಏರು ಪೇರಿಗಳಿಂದಾಗಿ ಕೃಷಿಕ ಸಮುದಾಯ ಆರ್ಥಿಕ ಸಂಕಷ್ಟದಲ್ಲಿದೆ ಮಳೆ ಹಾಗೂ ಅಂತರ್ಜಲ ಕೊರತೆಯಿಂದಾಗಿ ಬೇಸಾಯ ನಷ್ಟದ ಕಸುಬಾಗಿ ಮಾರ್ಪಟ್ಟಿದೆ ಇಂಥ ಪರಿಸ್ಥಿತಿಯಲ್ಲಿ ರೈತಾಪಿ ಜನತೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾಗಿದೆ ಜಿಲ್ಲೆಯ ನರಸಾಪುರ, ವೇಮಗಲ್ ಕೈಗಾರಿಕಾ ಪ್ರದೇಶಗಳು ನಿರ್ಮಾಣವಾಗಿದ್ದು ಅದರಂತೆ ಶ್ರೀನಿವಾಸಪುರದ ಹೊರವಲಯದಲ್ಲಿ ಕೈಗಾರಿಕಾ ಪ್ರದೇಶ ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ. ಅಲ್ಲಿ ಉದ್ಯಗಗಳನ್ನು ಪಡೆಯಬೇಕಾದರೆ ಕೌಶಲ್ಯದ ನೈಪುಣ್ಯ ಶಿಕ್ಷಣ ಪಡೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.ದೆಹಲಿಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ತಾಲ್ಲೂಕು ಘಟಕ ಹಾಗೂ ಸ್ವಾಮಿ…
ಚಿಂತಾಮಣಿ:ಮುಡಾ ಹಗರಣದಲ್ಲಿ ಸರ್ಕಾರ ಪತನವಾಗುವುದು ಗ್ಯಾರೆಂಟಿ ಎಂದು ಶ್ರೀನಿವಾಸಪುರ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು ಅವರು ಚಿಂತಾಮಣಿ ನಗರದ ಹೊರವಲಯದಲ್ಲಿ ಜೆಕೆ ಭವನದಲ್ಲಿ ನಡೆದಂತ ಕೋಲಾರ ಹಾಗು ಚಿಕ್ಕಬಳ್ಳಾಪುರ ಸಂಸದರ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.ಚಿಂತಾಮಣಿ ಮಾಜಿ ಶಾಸಕ ಕೃಷ್ಣಾರೆಡ್ಡಿ ತಮ್ಮ ಸಾರ್ವಜನಿಕ ಕಚೇರಿ ಜೆಕೆ ಭವನದಲ್ಲಿ ಆಯೋಜಿಸಿದ್ದ ಕೋಲಾರ-ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ವಿಜೇತರಾದ ಕೋಲಾರ ಸಂಸದ ಮಲ್ಲೇಶ್ ಬಾಬು ಹಾಗು ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಅವರುಗಳಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ವೆಂಕಟಶಿವಾರೆಡ್ಡಿ ನಾನು 5 ಬಾರೀ ಶಾಸಕನಾಗಿರುವೆ ನನ್ನ 45 ವರ್ಷದ ರಾಜಕೀಯ ಜೀವನದಲ್ಲಿ ಇತಂಹ ಕೆಟ್ಟ ಹಾಗು ಭ್ರಷ್ಟ ಸರ್ಕಾರವನ್ನು ನಾನು ನೋಡಿಲ್ಲಾ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ತೀವ್ರ ಬೇಸರವನ್ನು ಹೊರಹಾಕಿದರು.ಅಭಿವೃದ್ಧಿ ಶ್ಯೂನ್ಯ ಸರ್ಕಾರದಲ್ಲಿ ಬಿಟ್ಟಿ ಭಾಗ್ಯಗಳನ್ನು ಕೊಟ್ಟು ರಾಜ್ಯವನ್ನು ಶ್ರೀಲಂಕಾ ಪಾಕಿಸ್ತಾನದ ಪರಿಸ್ಥಿತಿಗೆ ತಳ್ಳಲಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರವನ್ನು ಜರಿದರು.ಲೋಕಸಭಾ ಚುನಾವಣೆಯಲ್ಲಿ ಕೋಲಾರ-ಚಿಕ್ಕಬಳ್ಳಾಪುರ…
ಶ್ರೀನಿವಾಸಪುರ:ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ವಿದ್ಯಾರ್ಥಿಯೊಬ್ಬ ಬಸ್ಸಿಗೆ ಡಿಕ್ಕಿ ಹೋಡೆದು ಮೃತ ಪಟ್ಟಿರುತ್ತಾನೆ.ಮೃತ ವಿದ್ಯಾರ್ಥಿಯನ್ನು ತಾಲೂಕಿನ ತಮಟಂಪಲ್ಲಿ ಗ್ರಾಮದ ನಿವಾಸಿ ಹಾಗು ಚಿಂತಾಮಣಿ ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿ ಭಾರ್ಗವ್ ರೆಡ್ಡಿ (18) ಎಂದು ಗುರುತಿಸಲಾಗಿದೆ.ಮೃತ ವಿದ್ಯಾರ್ಥಿ ಕಾಲೇಜಿಗೆ ಹೋಗಲು ಬೆಳ್ಳಂ ಬೆಳಿಗ್ಗೆ ತಮ್ಮ ಮನೆಯಿಂದ ಹೋಗಿದ್ದಾನೆ,ಆದರೆ ಬಸ್ಸು ತಪ್ಪಿಹೋಗಿದೆ, ಬಸ್ಸು ಹಿಡಿಯಲು ಅಡ್ಡಗಲ್ ಗೆ ಹೋಗುವುದಕ್ಕಾಗಿ ಮನೆಯಲ್ಲಿದ್ದ ದ್ವಿಚಕ್ರವಾಹನ ತಗೆದುಕೊಂಡು ಹೋರಟಿದ್ದಾನೆ ದಾರಿಯಲ್ಲಿ ಇಕ್ಕಾಟ್ಟಾದ ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದಾಗ ಎದುರಿನಿಂದ ಬಂದಂತ ಸರ್ಕಾರಿ ಬಸ್ಸಿ ಗೆ ಡಿಕ್ಕಿ ಹೋಡೆದಿರುತ್ತಾನೆ ಡಿಕ್ಕಿ ಹೋಡೆದ ರಭಸಕ್ಕೆ ದ್ವಿಚಕ್ರವಾಹನದಿಂದ ಕೆಳಕ್ಕೆ ಬಿದ್ದ ವಿದ್ಯಾರ್ಥಿ ತಲೆಗೆ ತೀವ್ರಪೆಟ್ಟಾಗಿದೆ ಕಾಲಿಗೆ ಗಾಯವಾಗಿ ರಕ್ತಸಾವ್ರವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ. ವಿದ್ಯಾರ್ಥಿಯ ಮೃತ ದೇಹ ಕಂಡೋಡನೆ ಹೆತ್ತವರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ,ಘಟನಾ ಸ್ಥಳಕ್ಕೆ ಗೌನಿಪಲ್ಲಿ ಪೊಲೀಸ್ ಠಾಣಾ ವೃತ್ತ ನೀರಿಕ್ಷಕ ಜಯಾನಂದ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿಂತಾಮಣಿ:ಈ ಶೈಕ್ಷಣಿಕ ವರ್ಷದಿಂದಲೆ ಚಿಂತಾಮಣಿಯಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾರ್ಯರಂಭವಾಗಲಿದೆ. ದಶಕಗಳ ಕನಸಿಗೆ ಈಗ ಜೀವಬಂದಿದೆ ಎನ್ನಬಹುದು, ಪ್ರಸಕ್ತ ಸಾಲಿನಿಂದಲೆ ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯದ ಸಂಯೋಜಿತ ಇಂಜನಿಯರಿಂಗ್ ಕಾಲೆಜು ಆರಂಭಗೊಳ್ಳಲಿದ್ದು ಈ ಶೈಕ್ಷಣಿಕ ವರ್ಷದ ಸಿಇಟಿ ಕೌನ್ಸಲಿಂಗ್ ಸೀಟ್ ಮ್ಯಾಟ್ರಿಕ್ಸ್ ಗೆ ಸೇರಿಸಲಾಗಿದ್ದು ಮುಂದೆ ನಡೆಯುವಂತ ಸಿಇಟಿ ಕೌನ್ಸಲಿಂಗ್ ನಲ್ಲಿ ವಿದ್ಯಾರ್ಥಿಗಳು ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.ಆರಂಭಿಕ ನಾಲ್ಕು ಕೋರ್ಸುಗಳುಸರಕಾರಿ ಪಾಲಿಟೆಕ್ನಿಕ್‌ನಲ್ಲಿ ತಾತ್ಕಾಲಿಕವಾಗಿ ತರಗತಿಗಳು ಪ್ರಾರಂಭವಾಗಲಿದ್ದು ನೂತನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಕಂಪ್ಯೂಟರ್ ಸೈನ್ಸ್, ಬಿ.ಇ. ಕಂಪ್ಯೂ ಟರ್ ಸೈನ್ಸ್ (AIML)Artificial Intelligence Markup Language, ಬಿ.ಇ. ಇನ್ ಎಲೆಕ್ಟಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಎಂಜನಿಯರಿಂಗ್ ಹಾಗೂ ಬಿ.ಇ. ಎಲೆಕ್ಟಿಲ್ ಹಾಗೂ ಎಲೆಕ್ಟ್ರಾನಿಕ್ಸ್ ಸೇರಿದಂತೆ ನಾಲ್ಕು ಕೋರ್ಸುಹಳನ್ನು ಆರಂಭಿಸಲಾಗುತ್ತದೆ ಬರುವಂತ ವರ್ಷಗಳಲ್ಲಿ ಇನ್ನಷ್ಟು ಹೊಸ ಕೋರ್ಸುಗಳ ಸೇರ್ಪಡೆ ಆಗಲಿದೆ. ಇಂಜಿನಿಯರಿಂಗ್ ಕಾಲೇಜಿಗೆ ಅವಶ್ಯಕವಾಗಿರುವ ಬೋಧಕ ಸಿಬ್ಬಂದಿಯನ್ನು ರಾಜ್ಯದ ವಿವಿಧ ಸರ್ಕಾರಿ ತಾಂತ್ರಿಕ ಮಹಾ ವಿದ್ಯಾಲಯಗಳಲ್ಲಿ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತಿರುವ ಆಧ್ಯಾಪಕರನ್ನು ಚಿಂತಾಮಣಿ ನೂತನ ಕಾಲೇಜಿಗೆ ನಿಯೋಜಿಸಲು…
ಕರ್ನಾಟಕದ ಸಚಿವ ಸಂತೋಷ್ ಲಾಡ್ ರಕ್ಷಣಾ ಕಾರ್ಯದಲ್ಲಿ ಪಾಲ್ಗೋಂಡಿದ್ದಾರೆ ಸಿದ್ದರಾಮಯ್ಯ ಮೇಲ್ವಿಚಾರಣೆ ನಡೆತ್ತಿದ್ದಾರೆ ನ್ಯೂಜ್ ಡೆಸ್ಕ್: ವಯನಾಡಿನಲ್ಲಿ ಸುರಿದ ರಣ ಭೀಕರ ಮಳೆಯಿಂದಾಗಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಸಿಲುಕಿ ಮೃತಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ,ಈ ಸಂದಿಗ್ದಸ್ಥಿಯಲ್ಲಿ ಕನ್ನಡಿಗರು ಸಿಲುಕಿಕೊಂಡಿರುವ ಬಗ್ಗೆ ಪ್ರಾಥಮಿಕ ಮಾಹಿತಿ ದೊರೆತ ಹಿನ್ನಲೆಯಲ್ಲಿ ಅವರನ್ನು ರಕ್ಷಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಸೂಚನೆ ನೀಡಿದ ಮೇರೆಗೆ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಪ್ರವಾಹ ಪೀಡಿತ ವಯನಾಡಿಗೆ ತೆರಳಿದ್ದಾರೆ. ಕೇರಳ ಸರ್ಕಾರದ ಜೊತೆ ಕೈ ಜೋಡಿಸಿ ಜನರ ಜೀವ,ಆರೋಗ್ಯ ರಕ್ಷಣೆಗೆ ನೆರವಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದು ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಗಳು, ಸಂತ್ರಸ್ಥರ ರಕ್ಷಣೆ ಸೇರಿದಂತೆ ತೊಡಗಿಸಿಕೊಂಡಿದ್ದಾರೆ.ವಯನಾಡಿಗೆ ಹೋಗಿರುವ ಸಚಿವ ಸಂತೋಷ್ ಲಾಡ್ ಸದ್ಯ ಕೇರಳ ರಾಜ್ಯದ ಮುಖ್ಯಮಂತ್ರಿ ಕಚೇರಿ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ದುರಂತದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ತುರ್ತು ಮತ್ತು ಕ್ಷಿಪ್ರ ಕ್ರಮಗಳನ್ನು…
ಶ್ರೀನಿವಾಸಪುರ:ಸೇವೆಯಲ್ಲಿ ಕರ್ತವ್ಯನಿಷ್ಠೆಯೊಂದಿಗೆ ಕಾರ್ಯನಿರ್ವಹಿಸಿ ಸರಳ ವ್ಯಕ್ತಿತ್ವದಲ್ಲಿ ಸಾರ್ಥಕತೆ ಕಂಡುಕೊಂಡು ನಿವೃತ್ತಿ ಹೊಂದುತ್ತಿರುವ ನೌಕರರ ಜೀವನ ಸುಖಮಯವಾಗಿರಲಿ ಎಂದು ಪುರಸಭೆ ಮುಖ್ಯಾಧಿಕಾರಿ ಸತ್ಯನಾರಯಣ ಶುಭಹಾರೈಸಿದರು.ಪುರಸಭೆಯಲ್ಲಿ ನೌಕರರಾಗಿ ಕಾರ್ಯನಿರ್ವಹಿಸಿ ವಯೋಸಹಜ ನಿವೃತ್ತರಾದ ಕಚೇರಿ ಸಹಾಯಕಿ ಶಾಂತಮ್ಮ ಹಾಗು ನೀರು ಸರಬರಾಜು ವಿಭಾಗದ ಕೃಷ್ಣ ಅವರನ್ನು ಗೌರವಿಸಿ ಬಿಳ್ಕೊಡುಗೆ ಕೊಟ್ಟು ಮಾತನಾಡಿದರು. ಸೇವಾವಧಿಯಲ್ಲಿ ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಪ್ರಾಮಾಣಿಕವಾದ ಸೇವೆ ಸಲ್ಲಿಸಿ ಸೌಹಾರ್ದತೆಯಿಂದ ನಡೆದುಕೊಂಡಿದ್ದರೆ ನಿವೃತ್ತಿ ನಂತರವೂ ಸಮಾಜದಲ್ಲಿ ಹೆಚ್ಚಿನ ಗೌರವ ಸಿಕ್ಕುತ್ತದೆ ಎಂದರು.ಪರಿಸರ ಇಂಜನೀಯರ್ ಲಕ್ಷ್ಮೀಶ ಮಾತನಾಡಿ ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಸಹಜ ಆದರೆ ಅವರು ಕಾರ್ಯನಿರ್ವಹಣೆ ಸಮಯದಲ್ಲಿ ಎಲ್ಲರೊಂದಿಗೆ ಸೌಹಾರ್ದತೆಯಿಂದ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದುವುದು ಅತ್ಯಂತ ಹೆಮ್ಮೆಯ ವಿಚಾರ ಈ ವಿಚಾರದಲ್ಲಿ ಶಾಂತಮ್ಮ ಮತ್ತು ಕೃಷ್ಣ ಯಶ್ವಸಿಯಾಗಿದ್ದಾರೆ ಎಂದರು.ಹಿರಿಯ ಲೆಕ್ಕಾಧಿಕಾರಿ ನಾಗೇಶ ಮಾತನಾಡಿ ಸರ್ಕಾರಿ ಸೇವೆಯಲ್ಲಿ ಏಳುಬಿಳುಗಳು ಸಹಜ ಕಚೇರಿಯಲ್ಲಿ ಸಹಾಯರಾಗಿದ್ದ ಶಾಂತಮ್ಮ ಎಲ್ಲರಿಗೂ ಹಿರಿಕ್ಕನಾಗಿ ಸಿಬ್ಬಂದಿಯೊಂದಿಗೆ ಸೌಹಾರ್ದತೆಯಿಂದ ಕಾರ್ಯನಿರ್ವಹಣೆ ಮಾಡುತ್ತಿದ್ದರು,ನೀರು ಸರಬರಾಜು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ ಕೃಷ್ಣ ಪ್ರಾಮಾಣಿಕವಾಗಿ ವಿಶ್ವಾಸಾರ್ಹತೆಯಿಂದ ಕೆಲಸ…