Author: Srinivas_Murthy

ಶ್ರೀನಿವಾಸಪುರ:ಹಣ ಪಣಕ್ಕಿಟ್ಟು ಇಸ್ಪೀಟ್ ಆಡುತ್ತಿದ್ದ ಗುಂಪಿನ ಮೇಲೆ ಪೋಲಿಸರು ದಾಳಿ ನಡೆಸಿ ಇಸ್ಪೀಟ್ ಆಡುತ್ತಿದ್ದವರನ್ನು ಬಂಧಿಸಿ 4 ದ್ವಿಚಕ್ರ ವಾಹನಗಳು ಮತ್ತು ಹಣವನ್ನು ವಶಪಡಿಸಿಕೊಂಡಿದ್ದಾರೆ.ಶ್ರೀನಿವಾಸಪುರ ತಾಲ್ಲೂಕಿನ ಅಲಂಬಗಿರಿ ಗ್ರಾಮದ ಸಮೀಪ ಮಾವಿನ ತೋಟದಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದವರ ಮೇಲೆ ಮುಳಬಾಗಿಲು ಡಿ.ವೈ.ಎಸ್.ಪಿ ನಂದಕುಮಾರ್ ನೇತೃತ್ವದಲ್ಲಿ ಶ್ರೀನಿವಾಸಪುರ ಪೋಲಿಸ್ ಸರ್ಕಲ್ ಇನ್ಸಪೇಕ್ಟರ್ ಮೊಹಮದ್ ಗೊರವನಕೊಳ್ಳ,ಮುಳಬಾಗಿಲು ಗ್ರಾಮಾಂತರ ಪಿ.ಎಸ್.ಐ ವಿಠ್ಠಲ್ ತಳವಾರ್.ರಾಯಲ್ಪಾಡ್ ಪಿ.ಎಸ್.ಐ ಯೋಗಿಶ್ ಕುಮಾರ್ ತಂಡ ದಾಳಿ ನಡೆಸಿ ನೇತೃತ್ವದಲ್ಲಿ ದಾಳಿ ಮಾಡಿದ್ದು ಏಳು ಮಂದಿ ಇಸ್ಪೀಟ್ ಆಡುತ್ತಿದ್ದವರನ್ನು ಬಂಧಿಸಿರುತ್ತಾರೆ ಇಸ್ಪೀಟ್ ಆಟದಲ್ಲಿ ಪಣಕ್ಕಿಟ್ಟಿದ್ದ 42200/- ಹಣ ಹಾಗು ಅಲ್ಲಿದ್ದ 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ಬಂದಿತ ಆರೋಪಿಗಳಲ್ಲಿ ಚಿಂತಾಮಣಿ,ಶ್ರೀನಿವಾಸಪುರ ತಾಲೂಕಿನವರು ಇದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.ತಾಲೂಕಿನಲ್ಲಿ ಇತ್ತಿಚಿಗೆ ಇಸ್ಪೀಟ್ ದಂದೆ ಎಗ್ಗು ಸಿಗ್ಗಿಲ್ಲದೆ ಎಲ್ಲಂದರಲ್ಲಿ ನಡೆಯುತ್ತಿದೆ ಎಂದು ಸಾರ್ವಜನಿಕರು ತೀವ್ರಧಾಟಿಯಲ್ಲಿ ಆರೋಪಿಸುತ್ತಾರೆ.

Read More

ನ್ಯೂಜ್ ಡೆಸ್ಕ್:ಅಪ್ಪಟ ಕನ್ನಡ ಪ್ರತಿಭೆ ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಮಗಳ ಮದುವೆ ಚನೈ ನಗರದಲ್ಲಿ ಅದ್ದೂರಿಯಾಗಿ ನೇರವೇರಿದೆ.ನಟ ಅರ್ಜುನ್ ಸರ್ಜಾ ಮಗಳು,ನಟಿ ಐಶ್ವರ್ಯ ಅರ್ಜುನ್ ಮತ್ತು ತಮಿಳು ಸಿನಿಮಾ ರಂಗದ ಹಾಸ್ಯನಟ ತಂಬಿ ರಾಮಯ್ಯ ಅವರ ಪುತ್ರ ಯುವ ನಾಯಕ ಉಮಾಪತಿ ಅವರೊಂದಿಗೆ ನಟಿ ಐಶ್ವರ್ಯಾ ಅರ್ಜುನ್ ಸರ್ಜಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಅರ್ಜುನ್ ಸಂಬಂಧಿಕರು ಹಾಗೂ ಕೆಲ ಗಣ್ಯರ ಸಮ್ಮುಖದಲ್ಲಿ ಈ ಮದುವೆ ನಡೆದಿರುವುದು ವಿಶೇಷ.ಚೆನ್ನೈನ ಗೇರುಗಂಬಕ್ಕಂನಲ್ಲಿ ಅರ್ಜುನ್ ಸರ್ಜಾ ತಮ್ಮ ಇಷ್ಟ ದೇವರು ಹನುಮಂತನ ಆಲಯ ಅಂಜನಸುತ ಶ್ರೀ ಯೋಗಾಂಜನೇಯ ಮಂದಿರಂ ಕಟ್ಟಿಸಿದ್ದು ಅಲ್ಲೇ ಮಗಳ ಮದುವೆ ಜೂನ್ 10 ರಂದು ನಡೆದಿದೆ,ಇದೇ ತಿಂಗಳ 14ರಂದು ಚೆನ್ನೈನ ಲೀಲಾ ಪ್ಯಾಲೇಸ್‌ನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಎಲ್ಲಾ ಸೆಲೆಬ್ರಿಟಿಗಳನ್ನು ಅರ್ಜುನ್ ಸರ್ಜಾ ಆಹ್ವಾನಿಸಲಿದ್ದಾರೆ. ಕಳೆದ ವರ್ಷ ನಿಶ್ಚಿತಾರ್ಥ ನಡೆದಿತ್ತು.ಈ ಜೋಡಿ ಅಕ್ಟೋಬರ್ 28, 2023 ರಂದು ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು. ವಿಶಾಲ್…

Read More

ಶ್ರೀನಿವಾಸಪುರ:ಬೆಂಗಳೂರು ಸೆಂಟ್ರೆಲ್ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ಅವರನ್ನು ಅವರ ಕಛೇರಿಯಲ್ಲಿ ಭೇಟಿಮಾಡಿದ ಶ್ರೀನಿವಾಸಪುರದ ಕೈವಾರ ತಾತಯ್ಯ ಬಳಗದ ಯುವಕರು ಶುಭಾಶಯ ಕೋರಿದ್ದಾರೆ.ಈ ಸಂದರ್ಭದಲ್ಲಿ ಶ್ರೀನಿವಾಸಪುರ ಪುರಸಭೆ ಸದಸ್ಯ ಭಾಸ್ಕರ್ ಮಾತನಾಡಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಪಿ. ಸಿ. ಮೋಹನ್ ಅವರು ಸತತ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದ್ದು ಇದು ಬಲಿಜ ಸಾಮಜಕ್ಕೆ ಹೆಮ್ಮೆಯ ವಿಚಾರವಾಗಿದೆ ಎಂದು ತಿಳಿಸಿದರು.ಬಲಿಜ ಸಮಾಜದ ಯುವಕರಾದ ಬಿ.ಎಲ್.ದುರ್ಗಾಪ್ರಸಾದ್,ಹೆಮಂತ್ ಕುಮಾರ್ ಮುಂತಾದವರು ಇದ್ದರು.

Read More

ಕೋಲಾರ:ಕೋಲಾರ ಲೋಕಸಭಾ ವ್ಯಾಪ್ತಿಯಲ್ಲಿ ನೀರಾವರಿ ಯೋಜನೆ, ಯುಕವರಿಗೆ ಉದ್ಯೋಗ ಸೃಷ್ಟಿಸಿ ಕುರಿತಂತೆ ಯೋಜನೆಗಳನ್ನು ರೂಪಿಸಿ ಜಾರಿಗೆ ತರಲು ಮೊದಲ ಆಧ್ಯತೆಯನ್ನು ನೀಡುವುದಾಗಿ ಸಂಸದ ಮಲ್ಲೇಶ್‌ಬಾಬು ಹೇಳಿದರು.ಮೊದಲ ಬಾರಿಗೆ ಸಂಸತ್ ಪ್ರವೇಶಿಸಿರುವ ಅವರು ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕೋಲಾರ ಜನತೆ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಗೌರ್ಹಾನಿತವಾಗಿ ನಿಭಾಯಿಸುತ್ತೇನೆ 5 ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಸಾಕಷ್ಟು ಅನುಭವವನ್ನು ಹೊಂದಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿದರೆ ಅವರ ಜೊತೆ ಇದ್ದು ಅವರ ಕಾರ್ಯಶೈಲಿಯಂತೆ ಜಿಲ್ಲೆಯ ಜನತೆಗೆ ನ್ಯಾಯ ಒದಗಿಸುವುದಾಗಿ ತಿಳಿಸಿದರು.ಕುಮಾರಸ್ವಾಮಿಯವರಿಗೆ ಯಾವ ಖಾತೆ ನೀಡುತ್ತಾರೆ ಎನ್ನುವುದು ಬಿಜೆಪಿ ಹೈಕಮಾಂಡ್ ಹಾಗೂ ಕುಮಾರಸ್ವಾಮಿ ಅವರಿಗೆ ಬಿಟ್ಟ ವಿಚಾರ ನೀರಾವರಿ ಯೋಜನೆಗಳು ಅನುಷ್ಠನಗೊಳಿಸಲು ಸೂಕ್ತವಾದ ಸಚಿವ ಸ್ಥಾನ ನೀಡಿದರೆ ಉತ್ತಮ ಎಂದು ತಿಳಿಸಿದರು.ಕಳೆದ 5 ವರ್ಷಗಳಲ್ಲಿ ಬಿಜೆಪಿ ಸಂಸದರಾಗಿದ್ದ ಎಸ್ ಮುನಸ್ವಾಮಿ ಅವರು ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ದಿ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ ಸಮಯದ ಅಭಾವದಿಂದ…

Read More

ಶ್ರೀನಿವಾಸಪುರ:ಮಳೆಯಿಲ್ಲದೇ, ಬಿಸಿಲಿನ ಝಳಕ್ಕೆ ಕಂಗಾಲಾಗಿದ್ದ ಶ್ರೀನಿವಾಸಪುರದ ಜನರ ಮೊಗದಲ್ಲಿ ಇದೀಗ ಸಂತಸ ಮೂಡಿದೆ.37 ಡಿಗ್ರಿ ಸೆಲ್ಸಿಯಸ್‌ ತಾಪಮಾನದಿಂದ ಸೆಕೆಗೆ ಜನರು ಬಸವಳದಿದ್ದರು ಇದೀಗ, ಮಳೆಯಾಗಿರುವುದರಿಂದ ತಂಪಾದ ವಾತಾವರಣ ಮೂಡಿದೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಶ್ರೀನಿವಾಸಪುರ ಪಟ್ಟಣದಲ್ಲಿ ರಸ್ತೆಗಳು ಜಲಾವೃತಗೊಂಡು,ರಾಷ್ಟ್ರೀಯ ಹೆದ್ದಾರಿಯಲ್ಲಿನ ರೈಲ್ವೆ ಬ್ರೀಡ್ಜ್ ನೀರು ಆವರಿಸಿಕೊಂಡು ವಾಹನ ಸವಾರರು ಪರದಾಡುವಂತಾಯಿತು.ಮಳೆ ಮತ್ತು ಜಲಾವೃತದಿಂದಾಗಿ ಪಟ್ಟಣದ ಅಂಬೇಡ್ಕರ್ ಪಾಳ್ಯ,ನಗರೇಶ್ವರ ದೇವಾಲಯದ ಆವರಣ ಮುಂಬಾಗ ಶ್ರೀನಿವಾಸಪುರ-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ರೈಲ್ವೆ ಸೇತುವೆ ಕೆಳಗಡೆ ಮತ್ತು ಇನ್ನಿತರೆಡೆ ಜನ ವ್ಯವಸ್ಥೆ ಅಸ್ಥವ್ಯಸ್ತ ಗೊಂಡು ಜನ ಪರದಾಡುವಂತಾಯಿತು.ಪಟ್ಟಣದ ಬಹುತೇಕ ಚರಂಡಿಗಳು ಹೂಳು ತುಂಬಿಕೊಂಡಿದ್ದು ನೀರು ಹರಿಯಲು ಸಾಧ್ಯವಾಗದೆ ಚರಂಡಿಯ ಕೊಳಚೆ ನೀರು ರಸ್ತೆಗಳ ಮೇಲೆ ಹರಿಯಿತು.ಆಜಾದ್ ರಸ್ತೆಯಲ್ಲಿರುವ ಮಾಂಸದ ಅಂಗಡಿಗಳ ತ್ಯಾಜ್ಯದ ನೀರು ಹರಿದು ಅಕ್ಬರ್ ರಸ್ತೆಯ ಕನ್ಸರ್ ವೇನ್ಸಿಯಲ್ಲಿನ ಮೊರಿ ಸೇರುತ್ತದೆ ತೀರಾ ಇತ್ತಿಚಿಗೆ ನಿರ್ಮಾಣ ಮಾಡಿರುವ ಅಕ್ಬರ್ ರಸ್ತೆ ಕನ್ಸರ್ ವೇನ್ಸಿಯಲ್ಲಿ ಮೊರಿ ತೀರಾ ಕಳಪೆ ಗುಣಮಟ್ಟದಾಗಿದೆ ಇಲ್ಲಿ ನೀರು ಸರಾಗವಾಗಿ…

Read More

ಶ್ರೀನಿವಾಸಪುರ:ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲವು ಸಾಧಿಸಿದ್ದು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ತಮ್ಮ ಸಮೀಪದ ಪ್ರತಿಸ್ಪರ್ದಿ ಕಾಂಗ್ರೆಸ್ ಗೌತಮ್ ಅವರಿಗಿಂತ ಸುಮಾರು ಒಂಬತ್ತು ಸಾವಿರ ಮತಗಳ ಅಂತರ ದೊರತಿದೆ.ಉಳಿದಂತೆ ಜೆಡಿಎಸ್ ಅಭ್ಯರ್ಥಿ ಲೋಕಸಭಾ ಕ್ಷೇತ್ರದಾದ್ಯಂತ ಉತ್ತಮ ಮತ ಗಳಿಸಿದ್ದು ತಮ್ಮ ಸ್ವಕ್ಷೇತ್ರ ಬಂಗಾರುಪೇಟೆಯಲ್ಲಿ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಮತ ಗಳಿಸಿದ್ದಾರೆ ಉಳಿದಂತೆ ಶಿಡ್ಲಘಟ್ಟಕ್ಷೇತ್ರದಲ್ಲಿ 411 ಕಾಂಗ್ರೇಸ್ ಹೆಚ್ಚುಮತಗಳ ಅಂತರ,ಚಿಂತಾಮಣಿಕ್ಷೇತ್ರದಲ್ಲಿ 7250 ಜೆಡಿಎಸ್ ಹೆಚ್ಚು ಮತ ಗಳಿಕೆ, ಶ್ರೀನಿವಾಸಪುರಕ್ಷೇತ್ರದಲ್ಲಿ 9492 ಜೆಡಿಎಸ್ ಹೆಚ್ಚು ಮತ ಗಳಿಕೆ, ಮುಳಬಾಗಿಲಿನ ಮೀಸಲು ವಿಧಾನ ಸಭಾ ಕ್ಷೇತ್ರದಲ್ಲಿ 32529 ಜೆಡಿಎಸ್ ಹೆಚ್ಚು ಮತ ಗಳಿಕೆ, ಕೆ.ಜಿ.ಎಫ್.ಮೀಸಲು ವಿಧಾನ ಸಭಾ ಕ್ಷೇತ್ರದಲ್ಲಿ 34431 ಕಾಂಗ್ರೇಸ್ ಹೆಚ್ಚುಮತಗಳ ಅಂತರ, ಬಂಗಾರುಪೇಟೆಮೀಸಲು ವಿಧಾನ ಸಭಾ ಕ್ಷೇತ್ರದಲ್ಲಿ 28134 ಜೆಡಿಎಸ್ ಹೆಚ್ಚು ಮತಗಳ ಅಂತರ,ಕೋಲಾರ ಕ್ಷೇತ್ರದಲ್ಲಿ 8940 ಜೆಡಿಎಸ್ ಮತಗಳ ಅಂತರ,ಮಾಲೂರು ಕ್ಷೇತ್ರದಲ್ಲಿ 13300 ಜೆಡಿಎಸ್ ಹೆಚ್ಚು ಮತಗಳ ಅಂತರ.ಪಡೆದಿರುವ ಎನ್ಡಿಯೆ ಮೈತ್ರಿ…

Read More

ಶ್ರೀನಿವಾಸಪುರ:ನಡೆದಿದ್ದು ಶಿಕ್ಷಕರ ಚುನಾವಣೆ ಅದರೆ ನಡೆದ ರೀತಿ ಯಾವ ಸಾರ್ವತ್ರಿಕ ಚುನಾವಣೆಗೂ ಕಡಿಮೆ ಇಲ್ಲದಂತೆ ಎಲ್ಲವೂ ಖುಲ್ಲಂ ಖುಲ್ಲಾ ಎನ್ನುವಂತಿತ್ತು. ಇಂದು ನಡೆದಂತ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಶೈಲಿ ಸಾರ್ವಜನಿಕರನ್ನು ಗಾಭರಿ ಪಡಿಸಿದೆ ಚುನಾವಣೆಗೂ ಒಂದು ವಾರದ ಮುಂಚಿನಿಂದಲೂ ಮತದಾರರನ್ನು ಓಲೈಸಿಕೊಳ್ಳಲು ಪಾನಕ ಪನ್ಯಾರ ಪ್ಯಾಕೆಜ್ ಗಿಫ್ಟ್ ಸೀರೆ ಇನ್ನಿತರೆ ವ್ಯವಹಾರವಾಗಿ ವ್ಯವಸ್ಥಿತವಾಗಿ ಸರಬರಾಜು ಮಾಡುವ ಮೂಲಕ ಪಟ್ಟಭದ್ರರಾದ ಮತದಾರ ಶಿಕ್ಷಕರನ್ನು ಒಲಸಿಕೊಳ್ಳುವ ಕಾರ್ಯ ಭರದಿಂದ ನಡೆದಿದೆ ಎನ್ನಲಾಗುತ್ತಿದ್ದು ಇಂದು ಚುನಾವಣೆ ದಿನ ಕೊಸರು ಎನ್ನುವಂತೆ ಪೆಟ್ರೊಲ್ ಗಾದರು ಇರಲಿ ಎಂಬ ಗೊಜಾಟದ ವ್ಯವಹಾರ ನಾಚಿಕೆ ಗಿಚಿಗೆ ಊರಿಂದಾಚಗೆ ಎನ್ನುವಂತೆ ನಡಿತಿತ್ತು. ಮತದಾನ ಕೇಂದ್ರ ಇದ್ದ ತಹಶೀಲ್ದಾರ್ ಕಚೇರಿ ಬಳಿಯ ಸುತ್ತಮುತ್ತಲ ಪ್ರದೇಶದಲ್ಲಿ ಹಾಕಲಾಗಿದ್ದ ರಾಜಕೀಯ ಪೆಂಡಾಲ ಕೆಳಗೆ ಹೋಗಿಬರುತ್ತಿದ್ದವರು ಕೈ ಬೆಚ್ಚಗೆ ಮಾಡಿಕೊಂಡು ಪುನಿತರಾಗುತ್ತಿದ್ದರು.ಕೈ ಕೆಲಸ ಅಗದಿದ್ದರೆ ಶ್ರೀಲಕ್ಷ್ಮೀನರಸಿಂಹ ಸ್ವಾಮಿಯೇನ ನಮಃ ಎಂದು ಎದುರುಗಿದ್ದ ನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ ಮುಖ ಊದಿಸಿಕೊಂಡು ಕುಳತಿದ್ದವರನ್ನು ಮರಿ ನಾಯಕರು ಯಾರದ್ರೂ…

Read More

ತುಮಕೂರು: ತುಮಕೂರು ಜಿಲ್ಲೆ ಕುಣಿಗಲ್ ನಲ್ಲಿ ನರರೂಪ ರಾಕ್ಷಸನಂತೆ ವರ್ತಿಸಿರುವ ಪತಿ ತನ್ನ ಪತ್ನಿಯನ್ನು ರಣ ಭೀಕರವಾಗಿ ಹತ್ಯೆಮಾಡಿದ್ದಾನೆ.ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ತನ್ನ ಪತ್ನಿಯ ತಲೆ ಕಡಿದು ರುಂಡ-ಮುಂಡವನ್ನು ಬೇರ್ಪಡಿಸಿದ್ದೆ ಅಲ್ಲದೆ ಚರ್ಮ ಸುಲಿದು ರಾಕ್ಷಸನಂತೆ ವರ್ತಿಸಿದ್ದಾನೆ.ದಾರುಣವಾಗಿ ಕೊಲೆಯಾದ ಮಹಿಳೆಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಪುಷ್ಪ (38) ಎಂದು ಗುರುತಿಸಲಾಗಿದ್ದು ಮೃತ ಮಹಿಳೆ ಕೆಲ ವರ್ಷದ ಹಿಂದೆ ಸುಗ್ಗನಹಳ್ಳಿ ಶಿವರಾಮ್ (45) ಎಂಬಾತನೊಂದಿಗೆ ಪ್ರೀತಿಸಿ ಮದುವೆಯಾಗಿದ್ದಳು,ಇಬ್ಬರು ಅಂತರ್ಜಾತಿ ಮದುವೆಯಾಗಿ ಜೀವನ ನಡೆಸುತ್ತಿದ್ದರು ಇವರಿಗೆ ಎಂಟು ವರ್ಷದ ಮಗನಿದ್ದಾನೆ.ಕಳೆದ ಕೆಲ ತಿಂಗಳ ಹಿಂದೆ ದಂಪತಿ ಹುಲಿಯೂರು ದುರ್ಗದ ಹೊಸಪೇಟೆಯ ಶಾಂತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪುಷ್ಪ ಕೆಲ ಮನೆಗಳಲ್ಲಿ ಮೆನ ಕೆಲಸ ಮಾಡುತ್ತಿದ್ದು, ಗಂಡ ಶಿವರಾಮ್ ಸ್ಥಳೀಯ ಸಾಮಿಲ್‌ನಲ್ಲಿ ಹೆಲ್ಪರ್ ಕೆಲಸ ಮಾಡುತ್ತಿದ್ದ.ಪತಿ-ಪತ್ನಿ ನಡುವೆ ಹೊಂದಾವಣಿಕೆ ಇಲ್ಲದೆ ಜಗಳ ನಡೆಯುತ್ತಿತ್ತು, ಕೃತ್ಯ ನಡೆದ ದಿನ ರಾತ್ರಿ ಪತಿ ಊಟ ಬಡಿಸುವಂತೆ ಪತ್ನಿಗೆ ಹೇಳಿದ್ದು…

Read More

ನ್ಯೂಜ್ ಡೆಸ್ಕ್: ಮೇ 25 ರಿಂದ ಸೂರ್ಯನು ತನ್ನ ನಕ್ಷತ್ರವನ್ನು ಬದಲಾಯಿಸಿದ್ದು ಕೃತಿಕಾ ನಕ್ಷತ್ರದಿಂದ ರೋಹಿಣಿ ನಕ್ಷತ್ರದತ್ತ ಪ್ರಯಾಣ ಆರಂಭಿಸಿದ್ದು ಅಂದಿನಿಂದ ರೋಹಿಣಿ ಕಾರ್ತೆ ಆರಂಭವಾಗುತ್ತದೆ. ಸೂರ್ಯನು ರೋಹಿಣಿ ನಕ್ಷತ್ರದಲ್ಲಿರುವ ಸಮಯವನ್ನು ರೋಹಿಣಿ ಕಾರ್ತೆ ಎಂದು ಪರಿಗಣಿಸಲಾಗುತ್ತದೆ.ಇದರಿಂದ ಸೂರ್ಯನ ಶಾಖದ ಪ್ರಭಾವ ಅತಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ಬೇಸಿಗೆಯ ಬಿಸಿ ಇನ್ನಷ್ಟು ಏರಿಕೆಯಾಗುತ್ತದೆ ಎನ್ನಲಾಗುತ್ತಿದ್ದು ತೀವ್ರವಾದ ಶಾಖವನ್ನು ಅನುಭವಿಸುವ ಅನಿವಾರ್ಯತೆ ಇದಿಯಂತೆ ತಾಪಮಾನವು ಏರುತ್ತಲೇ ಇರುತ್ತದೆ. ಉತ್ತರ ಭಾರತದಲ್ಲಿ ಬಹುತೇಕ ರಾಜ್ಯಗಳಲ್ಲಿ ಸುಮಾರು 50 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ಏರಿಕೆಯಾಗಿದೆ ಏರುತ್ತಿರುವ ಬಿಸಿಲಿನ ತಾಪಕ್ಕೆ ಜನ ತತ್ತರಗೊಂಡಿದ್ದಾರೆ ಸಾವು ನೋವುಗಳಿಗೆ ಕಾರಣವಾಗುತ್ತಿದೆ ಬಿಸಿಲ ಧಗೆ.ಭಾರತೀಯ ಹವಾಮಾನ ಇಲಾಖೆ ಹಲವು ಭಾಗಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.ಜೋತ್ಯಿಷ್ಯ ವಿಜ್ಞಾನದಲ್ಲೂ ಹಲವು ಬದಲಾವಣೆಸೂರ್ಯ ನಕ್ಷತ್ರವನ್ನು ಬದಲಾವಣೆಯಿಂದ ಜೋತ್ಯಿಷ್ಯ ವಿಜ್ಞಾನದ ಪ್ರಕಾರ ಕೆಲವು ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ ಎಂದು ಶಾಸ್ತ್ರತಜ್ಞರು ಹೇಳುತ್ತಾರೆ.ಮೇಷ,ಮಿಥುನ,ಸಿಂಹ,ಕನ್ಯಾ ಹಾಗು ಧನುಷ್ಯ ರಾಶಿಗಳವರಿಗೆ ಉತ್ತಮ ಫಲಿತಾಂಶ ಸಿಗಲಿದಿಯಂತೆ.ಸುಟ್ಟುಕರಕಲಾದ ಬೈಕುಗಳುಈ ನಡುವೆ ತೆಲಂಗಾಣ ರಾಜ್ಯದ ಜಗಿತ್ಯಾಲ…

Read More

ಶ್ರೀನಿವಾಸಪುರ:ನಾಲ್ಕೈದು ಮಂದಿ ಯುವಕರ ಗುಂಪು ದ್ವಿಚಕ್ರ ವಾಹನಗಳಲ್ಲಿ ಬಂದು ಶ್ರೀನಿವಾಸಪುರ ಬಸ್ ನಿಲ್ದಾಣ ಬಳಿಯ ಹಾಫ್ ಕಾಮ್ಸ್ ಮುಂಬಾಗ ಪೋಲಿಸ್ ಠಾಣೆಗೆ ಕೂಗಳತೆ ದೂರದಲ್ಲಿ ನಡುರಸ್ತೆಯಲ್ಲಿ ಸಾರ್ವಜನಿಕವಾಗಿ ಮದ್ಯದ ಬಾಟಿಲ್ ಹಾಗು ರಸ್ತೆಯಲ್ಲಿ ಸ್ಥಾಪಿಸಿದ್ದ ಪ್ಲಾಸ್ಟಿಕ್ ರಸ್ತೆ ವಿಭಜಕಗಳನ್ನು ಹಿಡಿದು ಬಡಿದಾಡಿಕೊಂಡಿದ್ದಾರೆ.ಬಡಿದಾಟದ ದೃಶ್ಯಗಳನ್ನು ನೋಡಿದವರು ಬೆಚ್ಚಿಬಿದ್ದಿದ್ದಾರೆ.ಘಟನೆ ನಡೆದು ಎರಡು ದಿನವಾದರು ಪೋಲಿಸರು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.ಯುವಕರು ರೌಡಿ ಗ್ಯಾಂಗುಗಳಂತೆ ಸಾರ್ವಜನಿಕವಾಗಿ ಮದ್ಯದ ಬಾಟಲಗಳಲ್ಲಿ ಬಡೆದಾಡಿಕೊಂಡು ಸಾರ್ವಜನಿಕವಾಗಿ ಭಿಕರತೆಯಿಂದ ನಡೆದುಕೊಂಡಿದ್ದನ್ನು ಜನ ನೋಡಿದ್ದಾರೆ ದಾರಿ ಹೊಕರು ಘಟನೆಯನ್ನು ತಮ್ಮ ಮೊಬೈಲ್ ಗಳಲ್ಲಿ ಚಿತ್ರಿಸಿಕೊಂಡಿದ್ದು ಎನ್ನಲಾದ ಬಿದಿಕಾಳಗದ ವಿಡಿಯೋ ಈಗ ಎಲ್ಲಡೆ ವೈರಲ್ ಆಗಿದೆ.ಅದರ ಅಧಾರದಲ್ಲಿ,ವಿಡಿಯೋದಲ್ಲಿ ಇರುವ ದ್ವಿಚಕ್ರ ವಾಹನದ ನಂಬರ್ ಅಧಾರದಲ್ಲಿ ಘಟನೆಯಲ್ಲಿ ಪಾಲ್ಗೋಂಡವರನ್ನು ಹುಡುಕಿ ಹೆಡೆ ಮುರಿ ಕಟ್ಟಲು ಪೋಲಿಸರಿಗೆ ಸಾಧ್ಯ ಇಲ್ಲವ ಎಂದು ಜನತೆ ಪ್ರಶ್ನಿಸಿದ್ದಾರೆ.ಸಿನಿಮಾ ವಿಲಗಳ ರಿತಿ ಫೊಸುಜನ ನೋಡು ನೋಡುತ್ತಿದ್ದಂತೆ ಬಡಿದಾಡಿಕೊಂಡು ಯುವಕರು ಪ್ಲಾಸ್ಟಿಕ್ ವಿಭಜಕಗಳನ್ನು ಗದೆಯಂತೆ ಎತ್ತಿಕೊಂಡು ಸಿನಿಮಾಗಳಲ್ಲಿನ…

Read More