Author: Srinivas_Murthy

ಮಾಲೂರು:ಕೋಲಾರ ಜಿಲ್ಲೆ ಮಾಲೂರು ತಾಲೂಕು ಮಾಸ್ತಿ ಭಾಗದ ಬೈರನದೊಡ್ಡಿ ಗ್ರಾಮದ ಅಯೋಧ್ಯೆನಗರದ ಆರ್ಯವೈಶ್ಯ ನಾಮಧಾರಿ ನಗರ್ತರ ಸಮುದಾಯದವರು ನಿರ್ಮಿಸಿರುವ ಶ್ರೀ ನಗರೇಶ್ವರ ನೂತನ ಶಿಲಾ ದೇವಾಲಯ ಸ್ಥಿರ ಬಿಂಬ ಪ್ರತಿಷ್ಠಾಪನೆ ಹಾಗೂ ವಿಮಾನ ಗೋಪುರ ಕಳಸಾರೋಹಣ ಮತ್ತು ಕುಂಭಾಭಿಷೇಕ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಲೋಕಾರ್ಪಣೆಯಾಯಿತು.ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದ ಶಿಲಾ ದೇವಾಲಯದಲ್ಲಿ ಎರಡು ದಿನಗಳ ಕಾಲ ನಡೆದಂತ ಧಾರ್ಮಿಕ ಕಾರ್ಯಕ್ರಮಗಳನ್ನು ಬಂಗಾರಪೇಟೆಯ ಶ್ರೀನಿವಾಸಶಾಸ್ತ್ರಿ ತಂಡ ಅಚ್ಚುಕಟ್ಟಾಗಿ ನಡೆಸಿಕೊಟ್ಟರು ಗ್ರಾಮಸ್ಥರು ಮನೆಯ ಹಬ್ಬದಂತೆ ಸಂಪೂರ್ಣವಾಗಿ ದೇವಾಲಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ದೇವಾಲಯವನ್ನು ಕುಪ್ಪಂನ ಆಗಮಶಾಸ್ತ್ರದ ನುರಿತ ಶಿಲ್ಪಿ ಚಂದ್ರಶೇಖರ್ ತಂಡದ ಶಿಲ್ಪಕಾರರು ನಿರ್ಮಾಣ ಮಾಡಿದ್ದು,ಗರ್ಭಗುಡಿಯಲ್ಲಿ ಆಗಮಶಾಸ್ತ್ರದಂತೆ ಶ್ರೀ ನಗರೇಶ್ವರ ದೇವರ ಸುಮಾರು ಐದು ಅಡಿ ಎತ್ತರದ ಬೃಹತ್ ಗಾತ್ರದ ಕೃಷ್ಣ ಶಿಲೆಯ ಶಿವಲಿಂಗವನ್ನು ಶಿವಾರಪಟ್ಟಣದ ಶಿಲ್ಪಿ ಮಂಜುನಾಥ ಆಚಾರ್ಯ ಕೈಯಲ್ಲಿ ಕೆತ್ತಿಸಲಾಗಿದೆ. ದೇವಾಲಯ ಮುಂಭಾಗದಲ್ಲಿ ಧ್ವಜ ಸ್ತಂಭವನ್ನು ಸ್ಥಾಪಿಸಿದ್ದು ಗರ್ಭಾಲಯದ ಆವರಣದಲ್ಲಿ ಪ್ರಸನ್ನ ಗಣಪತಿ ಹಾಗು ಶ್ರೀ ಪಾರ್ವತಾಂಭ ವಿಗ್ರಹಗಳನ್ನು ಪ್ರತಿಷ್ಟಾಪನೆ ಮಾಡಲಾಗಿದೆ.…

Read More

ಚಿಂತಾಮಣಿ:ಖಾಸಗಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸಜೀವವಾಗಿ ಸುಟ್ಟು ಕರಕಲರಾಗಿದ್ದು ಇತರೆ ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಚಿಂತಾಮಣಿ-ಮದನಪಲ್ಲಿ ರಸ್ತೆಯಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಲ್ಲಿ ಹಾಗು ಜೋಗ್ಯಾನಹಳ್ಳಿ ಗೆಟ್ ನಡುವೆ ಭಾನುವಾರ ನಡು ಮಧ್ಯಾನಃ ನಡೆದಿದೆ.ಕಡಪಾದಿಂದ ಬೆಂಗಳೂರಿಗೆ ವಾಪಸ್ಸು ಹೋಗುತ್ತಿದ್ದ ಕುಟುಂಬ.ಬೆಂಗಳೂರಿನಿಂದ ತಿರುಪತಿಗೆ ಹೋಗುವ ಖಾಸಗಿ ಬಸ್ ಭಾರತಿ ಸರ್ವಿಸ್ ಚಿಂತಾಮಣಿ-ಮದನಪಲ್ಲಿ ರಸ್ತೆಯಲ್ಲಿ ಎದುರಿಗೆ ಅತಿ ವೇಗವಾಗಿ ಬರುತ್ತಿದ್ದ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿ ಹಳ್ಳಕ್ಕೆ ಉರಳಿ ಬಿದ್ದಿದೆ ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿ ಏಕಾ ಏಕಿ ಬೆಂಕಿ ಹೊತ್ತಿಕೊಂಡಿದೆ ಇದರಿಂದಾಗಿ ಕಾರಿನಲ್ಲಿದ್ದ ಐವರ ಪೈಕಿ ಇಬ್ಬರು ಸಜೀವವಾಗಿ ಸುಟ್ಟುಹೋಗಿದ್ದಾರೆ.ಅಪಘಾತದಲ್ಲಿ ಸಜೀವವಾಗಿ ಸುಟ್ಟು ಮೃತಪಟ್ಟವರನ್ನು ಆಂಧ್ರದ ಕಡಪ ಮೂಲದ ಧನಂಜಯರೆಡ್ಡಿ(45)ಅವರ ತಾಯಿ ಕಳಾವತಿ(62)ಎಂದು ಗುರುತಿಸಲಾಗಿದೆ.ತೀವ್ರವಾಗಿ ಗಾಯಗೊಂಡಿರುವ ಶೋಭಾ(29 ವರ್ಷ)ಮಹಾಲಕ್ಷ್ಮಿ(60)ಮನ್ವಿತ್ (3ವರ್ಷ) ಸೇರಿದಂತೆ ಮೃತಪಟ್ಟ ಇಬ್ಬರು ಒಟ್ಟು ಐವರು ವ್ಯಕ್ತಿಗಳು ಒಂದೇ ಕುಟುಂಬದವರಾಗಿದ್ದು ಇವರೆಲ್ಲರೂ ಬೆಂಗಳೂರಿನಲ್ಲಿ ವಾಸವಿದ್ದು ಊರಿಗೆ ಬಂದಿದ್ದು ವಾಪಸ್ಸು ಬೆಂಗಳೂರಿಗೆ ಹೋಗುವಾಗ ಅಪಘಾತ ಆಗಿದೆ.ಘಟನೆ…

Read More

ವಿಭಜಿತ ಕೋಲಾರ-ಚಿಕ್ಕಬಳ್ಳಾಪುರದ ರೈತಾಪಿ ಜನರ ಆಶೋತ್ತರಗಳಿಗೆ ಸ್ಪಂದಿಸದೆ ಸಿದ್ದರಾಮಯ್ಯ ನಿರಾಶದಾಯಕ ಬಜೆಟ್ ಮಂಡಿಸಿದ್ದಾರೆ ಎಂದು ವಿಶೇಷವಾಗಿ ಮಾವು ಬೆಳೆಗಾರರು ತೀವ್ರ ಅಕ್ರೋಶ ಹೊರಹಾಕಿದ್ದಾರೆ. ಶ್ರೀನಿವಾಸಪುರ:ರೈತರ ಆಶೋತ್ತರಗಳಿಗೆ ಸ್ಪಂದಿಸದೆ ಗೊತ್ತು ಗುರಿ ಇಲ್ಲದಂತೆ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಕಣ್ಣ ಕಿವಿ ಇಲ್ಲದೆ ರೈತ ವಿರೋಧಿ ಬಜೆಟ್‌ ಮಂಡಿಸಿದೆ ಎಂದು ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಗದ ಅಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ ಹೇಳಿದ್ದಾರೆ.ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಮಳೆಯಿಲ್ಲದ ಬರಡು ಭೂಮಿಯಲ್ಲಿ ನೆತ್ತರು ಹರಿಸಿ ಹಣ್ಣು ಮತ್ತು ತರಕಾರಿಗಳನ್ನು ಬೆಳೆದು ನಗರದ ಜನರಿಗೆ ಉಣಬಡಿಸುತ್ತಿದ್ದಾರೆ ಅಂತಹವರ ಕನಿಷ್ಠ ಕಷ್ಟ ಅರಿಯದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡಪಾಯಿ ರೈತರ ಮರಣ ಶಾಸನ ಬರೆಯಲು ಹೋರಟಿದ್ದಾರೆ ಎಂದು ತಮ್ಮ ಟೀಕಿಸಿದ್ದಾರೆ.ಅವಿಭಜಿತ ಜಿಲ್ಲೆಗಳ ಎಲ್ಲಾ ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಬಜೆಟ್ ಕುರಿತಾಗಿ ಜಿಲ್ಲೆಗಳಿಗೆ ಆಗಿರುವ ಅನ್ಯಾಯದ ವಿರುದ್ದ ವಿಧಾನಸೌಧದಲ್ಲಿ ಪಕ್ಷಾತೀತವಾಗಿ ಚರ್ಚೆ ಮಾಡುವಂತರಾಗಿ ಎಂದು ಒತ್ತಾಯಿಸಿದ್ದಾರೆ.ಯಾವುದೆ ನದಿ ಮೂಲಗಳು ಇಲ್ಲದ ನಮ್ಮ ಭಾಗಕ್ಕೆ ಇತರೆ…

Read More

ನ್ಯೂಜ್ ಡೆಸ್ಕ್:ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದ 16ನೇ ಬಾರಿಗೆ ಬಜೆಟ್​ ಮಂಡಿಸಿಸುವ ಮೂಲಕ ದಾಖಲೆ ಬಜೆಟ್ ಮಂಡಿಸಿದ್ದಾರೆ 2025-26ನೇ ಸಾಲಿನ ಬಜೆಟ್​ ಅನ್ನು ಬರೊಬ್ಬರಿ 3 ಗಂಟೆ 30 ನಿಮಿಷಗಳ ಕಾಲ ಮುಂಗಡ ಪತ್ರ ಓದಿ ಮಂಡಿಸಿದರು.ಈ ಬಾರಿಯ ಬಜೆಟ್​​ನಲ್ಲಿ ಗ್ಯಾರೆಂಟಿ ಯೋಜನೆಗಳಿಗೆ 51 ಸಾವಿರ ಕೋಟಿ ರೂ. ಬೃಹತ್ ಅನುಧಾನ ಮೀಸಲಿಟ್ಟಿದ್ದಾರೆ.ಬಜೆಟ್ ನಲ್ಲಿ ಉಪಮುಖ್ಯಮಂತ್ರಿಗಳಾದ ಶಿವಕುಮಾರ್ ಅವರ ಕನಸಿನ ಬ್ಯ್ರಾಂಡ್ ಬೆಂಗಳೂರಿಗೆ ಹೆಚ್ಚಿನ ಅನುಧಾನಗಳನ್ನು ನೀಡುವ ಮೂಲಕ ಯೋಜನೆಗಳ ಮಹಾಪೂರವೆ ಹರಿಸಿದ್ದಾರೆ.ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ, 1,800 ಕೋಟಿ ರೂ. ಮೊತ್ತದ 21 ಯೋಜನೆಗಳಿಗೆ ಅನುಮೋದನೆ. 413 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಆರೋಗ್ಯ ಯೋಜನೆ ಜಾರಿ.ಉಪ-ವಿಧಿಗಳು 2025ರ ಅನುಷ್ಠಾನದಿಂದ ವಾರ್ಷಿಕ 750 ಕೋಟಿ ರೂ. ಆದಾಯವನ್ನು ನಿರೀಕ್ಷಿಸಲಾಗಿದೆ.ಖಾಸಗಿ ಸಹಭಾಗಿತ್ವದಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣ ಉನ್ನತೀಕರಣ,ಬೆಂಗಳೂರು ಸೇಫ್ ಸಿಟಿ ಯೋಜನೆಯಡಿ ಖಾಸಗಿ ಸಹಭಾಗಿತ್ವದಲ್ಲಿ ಮೆಜೆಸ್ಟಿಕ್‌ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಸಂಕೀರ್ಣದೊಂದಿಗೆ ಸಾರಿಗೆ ಹಬ್ ನಿರ್ಮಿಸಲು ಉದ್ದೇಶ ಹೊಂದಲಾಗಿದೆ.ಬೆಂಗಳೂರಿನ ಕೆ.ಆರ್.ಪುರಂ ನಲ್ಲಿ…

Read More

ಶ್ರೀನಿವಾಸಪುರ: ಈ ಬಾರಿ ವಿಧಾನ ಸಭೆಯಲ್ಲಿ 2025-26ನೇ ಸಾಲಿನ ಬಜೆಟ್ ಮಂಡಿಸುವ ಮೂಲಕ ರಾಜ್ಯ ರಾಜಕೀಯದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದವರು ಎಂಬ ಹೆಗ್ಗಳಿಕೆಯನ್ನು ಸಿಎಂ ಸಿದ್ದರಾಮಯ್ಯ ಹೊಂದಲಿದ್ದಾರೆ.ರಾಜ್ಯ ವಿಧಾನ ಮಂಡಲದ ಬಜೆಟ್ ಅಧಿವೇಶನ ಸೋಮವಾರದಿಂದ ಆರಂಭವಾಗಿದ್ದು, ಮಾರ್ಚ್ 21ರವರೆಗೆ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 16ನೇ ಬಾರಿಗೆ ಮಂಡಿಸಲಿದ್ದು ಬಜೆಟ್‌ ಕುರಿತಾಗಿ ಶ್ರೀನಿವಾಸಪುರದ ಜನತೆ ಸಾಕಷ್ಟು ನೀರಿಕ್ಷೆಗಳನ್ನು ಹೊಂದಿದ್ದಾರೆ.2025 ವರ್ಷದ ಮೊದಲ ಅಧಿವೇಶನ ಇದಾಗಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ್ದಾರೆ.ಇದಾದ ಬಳಿಕ ಮಾರ್ಚ್4, 5,6ರವರೆಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯುತ್ತದೆ. ಮಾರ್ಚ್ 7ರಂದು ಸಿಎಂ ಸಿದ್ದರಾಮಯ್ಯನವರು 2025-26ನೇ ಸಾಲಿನ ಬಜೆಟ್ ಅಂದಾಜು 4 ಲಕ್ಷ ಕೋಟಿ ರೂ.ಗಳನ್ನು ದಾಟಲಿದೆ ಎನ್ನುವ ಮಾತು ಕೇಳಿಬರುತ್ತಿದೆ.ಮುಖ್ಯಮಂತ್ರಿಗಳ ಬಜೆಟ್ ತಾಲೂಕು ಜನರ ನಿರೀಕ್ಷೆ ಏನು?ಶ್ರೀನಿವಾಸಪುರ ಕೇಂದ್ರಿಕೃತವಾಗಿ ಪ್ರಪಂಚ ಪ್ರಸಿದ್ಧ ಮಾವು ಬೆಳೆಯನ್ನು ಸುಮಾರು 50 ಸಾವಿರ ಹೆಕ್ಟೇರ್‍ ನಲ್ಲಿ…

Read More

ಕೋಲಾರ:ಜೆಡಿಎಸ್ JD(S) ಮುಖಂಡ ಸಿಎಂಆರ್.ಶ್ರೀನಾಥ್ ಅವರ ನಿವಾಸಕ್ಕೆ ಉಡುಪಿ ಪೇಜಾವರಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಗಳು ಕೋಲಾರ ನಗರದ ಪೇಟೆಚಾಮನಹಳ್ಳಿಯಲ್ಲಿನ ಅವರ ನಿವಾಸಕ್ಕೆ ಭೇಟಿ ನೀಡಿದ್ದರು ಈ ಸಂದರ್ಭದಲ್ಲಿ ಸಿಎಂಆರ್.ಶ್ರೀನಾಥ್ ಕುಟುಂಬದವರು ಶ್ರೀಗಳನ್ನು ಮನೆಯ ದ್ವಾರದಲ್ಲಿ ಸ್ವಾಗತಿಸಿದರು.ನಂತರ ಶ್ರೀಗಳ ಪಾದಪೂಜೆ ನೆರವೇರಿಸಿದರು ಪಾದಪೂಜೆ ಸ್ವೀಕರಿಸಿದ ಶ್ರೀಗಳು ಫಲ ಮಂತ್ರಾಕ್ಷತೆ ಹಾಗು ಆಶೀರ್ವಚನ ನೀಡಿ ಭಕ್ತರನ್ನು ಆಶೀರ್ವದಿಸಿದರು.ಸನಾತನ ಧರ್ಮದ ವಿರಾಟ್ ಪ್ರದರ್ಶನ ಕುಂಭಮೇಳಸನಾತನ ಧರ್ಮದ ವಿರಾಟ್ ಪ್ರದರ್ಶನ ಕುಂಭಮೇಳದಲ್ಲಿ ಕಾಣಸಿಗುತಿತ್ತು ಇಡೀ ಜಗತ್ತಿನಲ್ಲೇ ಅತ್ಯಂತ ಅದ್ಬುತ ಕಾರ್ಯಕ್ರಮವಾಗಿ ಹೊರಹೊಮ್ಮಿದೆ ಇಷ್ಟೊಂದು ಮಂದಿ ಒಂದು ಕಡೆ ಕಾರ್ಯಕ್ರಮಕ್ಕೆ ಸೇರುವುದು ಮತ್ತೆಲ್ಲೂ ಸಾಧ್ಯವಿಲ್ಲ ಎಂದು ಪೇಜಾವರದ ಶ್ರೀವಿಶ್ವಪ್ರಸನ್ನ ತೀರ್ಥರು ಅಭಿಪ್ರಾಯಪಟ್ಟರು.ಅವರು ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು ಧರ್ಮಶ್ರದ್ಧೆ ಎಂತದ್ದು ಎಂಬುದಕ್ಕಿ ಇದು ಸಾಕ್ಷಿಯಾಗಿದೆ ಮತ್ತು ಮೇಳ ಯಶಸ್ವಿಯಾಗಿದೆ,ಕುಂಭಮೇಳಕ್ಕೆ ಬಂದಂತ ಜನಸ್ತೋಮಕ್ಕೆ ಮಾಡಿದ್ದ ವ್ಯವಸ್ಥೆಗಳು ನಿಜಕ್ಕೂ ಅನನ್ಯ ಎಂದ ಅವರು, ಕೋಟ್ಯಾಂತರ ಮಂದಿ ಪಾಲ್ಗೊಳ್ಳುವ ಜಾಗದಲ್ಲಿ ಸಮಸ್ಯೆಗಳಿಗೆ ಅವಕಾಶವಿಲ್ಲದಂತೆ ವ್ಯವಸ್ಥೆ ಮಾಡಿದ್ದು, ಶ್ಲಾಘನೀಯ ಇದು ನಮ್ಮ ಸನಾತನ ಧರ್ಮ ಶಕ್ತಿ…

Read More

ನ್ಯೂಜ್ ಡೆಸ್ಕ್: ರಾಯಲ್‌ ಎನ್‌ಫೀಲ್ಡ್‌ ಬುಲೆಟ್ ಬೈಕ್‌ನ ಟ್ಯಾಂಕ್‌ ಮೇಲೆ ಪ್ರೇಮಿಯನ್ನು ಕೂರಿಸಿಕೊಂಡು ಪೋಲಿ ರೈಡ್‌ ಮಾಡಿದ್ದ LOVER BOY ಅನ್ನು ಬೆಂಗಳೂರು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.ಬೆಂಗಳೂರು-ಹೊಸೂರು ರಸ್ತೆಯ ಸೋಮಪುರದ ಕ್ರಿಸ್ಟಾಲ್ ಅಪಾರ್ಟ್ ಮೆಂಟ್ ತಿರುವಿನಲ್ಲಿ ರಾಯಲ್‌ ಎನ್‌ಫೀಲ್ಡ್‌ ಬುಲೆಟ್ ಬೈಕ್‌ನಲ್ಲಿ ಪ್ರೇಮಿಗಳು ಹಿಂದುಮುಂದಾಗಿ ಕುಳಿತು ಅಸಭ್ಯಕರವಾಗಿ ಜನನಿಬಿಡ ರಸ್ತೆಯಲ್ಲಿ ಪೋಲಿ ರೈಡ್‌ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು,ತಮಿಳನಾಡು ನೊಂದಣಿಯ ಬುಲೆಟ್ ಬೈಕ್‌ ಸಂಖ್ಯೆ ಸಾರ್ವಜನಿಕವಾಗಿ ಕಾಣಿಸುತ್ತಿದ್ದು ಅಧಾರವಾಗಿ ಬೆಂಗಳೂರಿನ ಸರ್ಜಾಪುರ ಪೊಲೀಸರಿಂದ ಬೈಕ್ ಸವಾರನ ಬಂಧನವಾಗಿದೆ.ರಸ್ತೆ ಸುರಕ್ಷತೆಗೆ ಅಪಾಯ ಒದಗಿಸಿದ್ದ ಪೋಲಿ ರೈಡ್‌ಬೆಳ್ಳಂದೂರು ನಿವಾಸಿಯಾಗಿರುವ ಟೆಕ್ಕಿ ಎರಡು ವರ್ಷಗಳ ಹಿಂದೆ ಚೆನ್ನೈನಿಂದ ಬೆಂಗಳೂರಿಗೆ ಬಂದು ನೆಲೆಸಿದ್ದು ಅವನ ಪ್ರೇಯಸಿ ಸಹ ಅವನೊಂದಿಗೆ ಬೆಂಗಳೂರಿಗೆ ಬಂದಿದ್ದಾಳೆ ಎರಡು ಮೂರು ದಿನಗಳ ಹಿಂದೆ ಮುನಿಸಿಕೊಂಡಿದ್ದ ಪ್ರೇಯಸಿಯನ್ನು ಸಮಧಾನ ಪಡಿಸಲು ಬೈಕ್ ಸವಾರಿ ನೆಪದಲ್ಲಿ ಅವಳನ್ನು ತನ್ನ ತೊಡೆಯ ಮೇಲೆ ಎದರು ಬದರಾಗಿ ಕೂರಿಸಿಕೂಂಡು ಬೆಂಗಳೂರು- ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಪ್ರೇಮಿಗಳ…

Read More

ಬೆಂಗಳೂರು:ಕಾಂಗ್ರೆಸ್ ಸಚಿವರೊಬ್ಬರ ಮೇಲೆ ಅರಣ್ಯ ಭೂಮಿ ಒತ್ತುವರಿ ಮಾಡಿರುವ ಬಗ್ಗೆ ಆರೋಪಿಸಿ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಲಾಗಿದೆ.ಕಾರವಾರ ಜಿಲ್ಲೆಯ ಭಟ್ಕಳದ ಆರ್‌ಟಿಐ ಕಾರ್ಯಕರ್ತರಾದ ಶಂಕರ್ ನಾಯಕ್, ನಾಗೇಂದ್ರ ನಾಯಕ್ ಮತ್ತು ನಾಗೇಶ್ ನಾಯಕ್ ಅವರು ಉತ್ತರ ಕನ್ನಡ (uttara kannda) ಜಿಲ್ಲೆಯ ಉಸ್ತುವಾರಿ ಸಚಿವ ಹಾಗು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಂಕಾಳು ವೈದ್ಯ ವಿರುದ್ಧ ರಾಜ್ಯಪಾಲರಿಗೆ ದಾಖಲಿಸಿದ್ದಾರೆ.ಅರಣ್ಯ ಸಂರಕ್ಷಣಾಧಿಕಾರಿಗಳಿಗೂ ದೂರು ನೀಡಲಾಗಿದೆ. ಅಲ್ಲದೆ ಹೆಚ್ಚುವರಿಯಾಗಿ, ಕ್ರಮ ಕೈಗೊಳ್ಳುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.ದೂರುದಾರರ ಪ್ರಕಾರ, ಸಚಿವ ಭಟ್ಕಳ ತಾಲೂಕಿನ ಬೈಲೂರಿನ ಸರ್ಕಾರಿ ಅರಣ್ಯ ಜಾಗದ ಸರ್ವೆ ನಂ- 600ರಲ್ಲಿ ಅಕ್ರಮವಾಗಿ ತಮ್ಮ ಬೀನಾ ವೈದ್ಯ ಶಿಕ್ಷಣ ಸಂಸ್ಥೆಗಾಗಿ ಅರಣ್ಯ ಭೂಮಿ ಒತ್ತುವರಿ ಮಾಡಿರುವುದಾಗಿ ಆರೋಪಿಸಲಾಗಿದೆ. ಮೇ 18, 2024 ರಂದು ಒತ್ತುವರಿ ಮಾಡಲಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದು ದೂರು ದಾಖಲು ಮಾಡಲಾಗಿದ್ದರೂ, ಅರಣ್ಯ ಅಧಿಕಾರಿಗಳು ಸಚಿವ ವೈದ್ಯ ಅವರ ಹೆಸರನ್ನು ಬಿಟ್ಟು ಇತರರ ವಿರುದ್ಧ…

Read More

ಶ್ರೀನಿವಾಸಪುರ:ಜಮೀನು ವ್ಯಾಜ್ಯದ ಹಿನ್ನಲೆಯಲ್ಲಿ ದೌರ್ಜನ್ಯದಿಂದ ವಿಧವೆ ಮಹಿಳೆಗೆ ಸೇರಿದ ಮನೆ ತಗಡಿನ ಶೇಡ್ ಮತ್ತು ಕಾಂಪೌಂಡ್ ಗೊಡೆಯನ್ನು ನೆಲಕ್ಕುರಳಿಸಿರುವ ಘಟನೆ ಗುರುವಾರ ಮಧ್ಯರಾತ್ರಿ ಪಟ್ಟಣದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ನಡೆದಿದ್ದು ಈ ಕುರಿತಾಗಿ ಶ್ರೀನಿವಾಸಪುರ ಠಾಣೆಯಲ್ಲಿ ದೂರುದಾಖಲಾಗಿದ ದೌರ್ಜನ್ಯಕ್ಕೆ ಒಳಗಾದ ವಿಧವೆ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.ಘಟನೆ ಕುರಿತಾಗಿ ವಿಧವೆ ಮಹಿಳೆ ವಿಜಯಮ್ಮ ಅವರ ಮಗ ರಮೇಶ್ ಕುಮಾರ್ ಹಾಗು ಮೈದುನ ಶ್ರೀನಿವಾಸಶೆಟ್ಟಿ ಮಾಹಿತಿ ನೀಡಿದ್ದು ರೈಲ್ವೇ ಉದ್ಯೋಗಿಯಾಗಿದ್ದ ನಮ್ಮ ಅಣ್ಣ ಪಾಳ್ಯದ ನಾಗರಾಜು ತಮ್ಮ ಪತ್ನಿ ವಿಜಯಮ್ಮನ ಹೆಸರಿಗೆ 1986 ರಲ್ಲಿ 1 ಕುಂಟೆ (33×33)ಜಮೀನು ಖರಿದಿಸಿ ಅಲ್ಲಿ ಚಿಕ್ಕದಾಗಿ ಮನೆ ನಿರ್ಮಿಸಿಕೊಂಡು ಪಕ್ಕದ ಜಾಗದಲ್ಲಿ ರೆಕ್ ಶೇಡ್ ಹಾಕಿಕೊಂಡಿದ್ದು ನೀರಿನ ತೊಟ್ಟಿ ನಿರ್ಮಿಸಿ ಕಾಂಪೌಂಡ್ ಹಾಕಿಕೊಂಡಿದ್ದ ಅವರು ಅಲ್ಲೆ ವಾಸಿಸುತ್ತಿದ್ದರು.ಇತ್ತಿಚಿಗೆ ಪಕ್ಕದ ಜಮೀನಿನ ಮಾಲಿಕರಾದ ಮೊಗಿಲಹಳ್ಳಿ ಗ್ರಾಮದ ನರೇಶ್ ಮತ್ತು ಮಂಜುನಾಥರೆಡ್ಡಿ ಜಮೀನು ಅಳತೆ ವಿಚಾರದಲ್ಲಿ ತಕರಾರು ತಗೆದು ಜಮೀನು ಸರ್ವೆ ಮಾಡಿಸಿ ನಿಮ್ಮ ಜಮೀನು ಉತ್ತರ ದಕ್ಷಿಣದ…

Read More

ಶ್ರೀನಿವಾಸಪುರ:ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ 2024ರ ಜನವರಿ 22ರಲ್ಲಿ ರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಿ ಒಂದು ವರ್ಷ ಪೂರೈಸಿದೆ ಇದರ ಅಂಗವಾಗಿ ಶ್ರೀನಿವಾಸಪುರದ ಕಸಬಾ ಹೋಬಳಿ ನಲ್ಲಪಲ್ಲಿ ಗ್ರಾಮದಲ್ಲಿ ರಾಮರ ಗುಡಿ ಆವರಣದಲ್ಲಿ ವಿಶೇಷ ಪೂಜೆ ಹೋಮ ಹವನ ಆಯೋಜಿಸಲಾಗಿತ್ತು.ಶ್ಯಾನುಭೋಗ ಸೂರ್ಯನಾರಯಣರಾವ್ ಕುಟುಂಬದ ಖ್ಯಾತ ಹೈಕೋರ್ಟ್ ವಕೀಲ ನಟರಾಜಶರ್ಮ,ವಾಣಿಜ್ಯೋದ್ಯಮಿ ಅನಂತನಾರಯಣಶರ್ಮ,ರೇಷ್ಮೆ ಇಲಾಖೆ ಹೀರಿಯ ಅಧಿಕಾರಿ ಶ್ರೀನಿವಾಸಶರ್ಮ ಕುಟುಂಬದವರು ಪಾಲ್ಗೋಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಬಿ.ವಿ.ರೆಡ್ಡಿ,ಆನಂದಗೌಡ,ಮುಖ್ಯಾಧಿಕಾರಿ ನಾಗರಾಜ್,ಮಾಜಿ ಸದಸ್ಯೆ ಚೈತನ್ಯಬಾಬು,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಳೇಪೇಟೆ ಮಂಜು,ಬಿಜೆಪಿ ಲಕ್ಷ್ಮಣಗೌಡ ಪೂಲುಶಿವಾರೆಡ್ಡಿ,ಬಿಜೆಪಿರೆಡ್ಡಪ್ಪ ವಕೀಲಸೊಣ್ಣೆಗೌಡ ಗೋಪಾಲರೆಡ್ಡಿ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಕೀಲ ನಟರಾಜಶರ್ಮ ಮಾತನಾಡಿ ಅಯೋಧ್ಯೆ ಪ್ರಭು ಶ್ರೀರಾಮನ ಜನ್ಮಸ್ಥಳವೆಂದು ನಮ್ಮ ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಅದರಂತೆ 2024ರಲ್ಲಿ ಅಯೋಧ್ಯೆಯಲ್ಲಿ ರಾಮ ದೇವಾಲಯದ ನಿರ್ಮಾಣ ಕಾರ್ಯ ಪೂರ್ಣಗೊಂಡು ರಾಮಲಲ್ಲಾ ಪ್ರಾಣ ಪ್ರತಿಷ್ಟಾಪನೆ ಮಾಡಲಾಗಿದ್ದು ರಾಮ ಮಂದಿರ ಹಿಂದೂ ಧರ್ಮೀಯರ ಜೀವಾಳವಾಗಿದೆ.ಇದೀಗ ಅಯೋಧ್ಯೆಯ ಬಾಲ ರಾಮನ ಪ್ರತಿಷ್ಠಾಪನೆಯಾಗಿ ಒಂದು ವರ್ಷ…

Read More