ಶ್ರೀನಿವಾಸಪುರ:ದೇಶದಲ್ಲಿಯೇ ಅತಿ ಹೆಚ್ಚು ಮಾವು ಬೆಳೆಯುವ ಶ್ರೀನಿವಾಸಪುರದಲ್ಲಿ ಮಾವು ಮಂಡಿಗಳು ಹಾಗು ಕೃಷಿ ಉತ್ಪನ್ನ ಮಾರುಕಟ್ಟೆ ಇರುವಂತ ಶ್ರೀನಿವಾಸಪುರ-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ಇದ್ದು, ಇಲ್ಲಿ ಮಾವು ರವಾನಿಸಲು ಬರುವಂತ ಬಾರಿಗಾತ್ರದ ಲಾರಿಗಳು ರಾಷ್ಟ್ರೀಯ ಹೆದ್ದಾರಿ ಬದಿ ನಿಲ್ಲಿಸಿಕೊಂಡು ಟ್ರಾಫಿಕ್ ಸಮಸ್ಯೆ ಉಂಟುಮಾಡುತ್ತಿದ್ದಾರೆ ಇದರಿಂದ ಈ ರಸ್ತೆಯಲ್ಲಿ ಅಪಘಾತಗಳಿಗೆ ಕಾರಣವಾಗುತ್ತಿದೆ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಕನ್ನಡಪರ ಸಂಘಟನೆಗಳ ವತಿಯಿಂದ ತಾಲ್ಲೂಕು ದಂಡಾಧಿಕಾರಿಗಳಿಗೆ ಮತ್ತು ಪೋಲಿಸ್ ಇಲಾಖೆಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿರುತ್ತಾರೆ.ಪ್ರತಿ ವರ್ಷ ಮೇ,ಜುನ್,ಜುಲೈ ತಿಂಗಳ ಅಂತ್ಯದವರಿಗೂ ಮಾವು ಕಟಾವು ಆರಂಭವಾಗುತ್ತದೆ ಅವುಗಳನ್ನು ತಂದು ಮಂಡಿಗಳಿಗೆ ಹಾಕುತ್ತಾರೆ ಸಾವಿರಾರು ಟನ್ ಮಾವನ್ನು ದೇಶದ ವಿವಿಧ ಭಾಗದ ಮಾರುಕಟ್ಟೆಗಳಿಗೆ ಸಾಗಿಸಲು ಇಲ್ಲಿಗೆ ದೇಶದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಾರಿಗಾತ್ರದ ಲಾರಿಗಳು ಬರುತ್ತವೆ ಇದರೊಂದಿಗೆ ಮಾವು ಪ್ಯಾಕಿಂಗ್ ವಸ್ತುಗಳ ಅಂಗಡಿಗಳು ಅಲ್ಲೆ ಪ್ರಾರಂಭಿಸುತ್ತಾರೆ ಲಾರಿ ಕಮೀಷನ್ ಆಫಿಸ್ ಗಳು,ಮಾವು ಸಾಗಿಸಲು ಕೂಲಿ ಕಾರ್ಮಿಕರು ಇದರ ಜೊತೆಗೆ ಹೊರಗಡೆಯಿಂದ…
Author: Srinivas_Murthy
ಗ್ರಾಮಸ್ಥರಲ್ಲಿ ಚಿರತೆ ಆತಂಕ ನಗರದಲ್ಲಿ ಸಂಚರಿಸಿದ ಕೃಷ್ಣಮೃಗ ಕೊಡದವಾಡಿಯಲ್ಲಿ ಜಿಂಕೆ ರಕ್ಷಣೆ ಚಿಂತಾಮಣಿ:ಕಳೆದ ಎರಡು ಮೂರು ದಿನಗಳಿಂದ ಚಿಂತಾಮಣಿ ನಗರ ಸೇರಿದಂತೆ ತಾಲೂಕಿನಲ್ಲಿ ಕಾಡು ಪ್ರಾಣಿಗಳ ವಿಚಾರ ಹೆಚ್ಚು ಚರ್ಚೆಗೆ ಬರುತ್ತಿದೆ,ರಾತ್ರಿ ವೆಳೆ ಕೃಷ್ಣಮೃಗವೊಂದು ದಾರಿತಪ್ಪಿಯೋ ನೀರು ಆರಿಸಿಯೋ ನಗರಕ್ಕೆ ಬಂದು ನಾಯಿಗಳ ದಾಳಿಗೆ ಸಿಲುಕಿ ಸಾವನ್ನಪ್ಪಿದರೆ,ತಾಲೂಕಿನ ಮೋಟಮಾಕಲಪಲ್ಲಿಯಲ್ಲಿ ಚಿರತೆ ಜಿಂಕೆಯನ್ನು ಬೇಟೆಯಾಡಿದ್ದು ಗ್ರಾಮಸ್ಥರನ್ನು ಆತಂಕಕ್ಕೆ ಈಡುಮಾಡಿದೆ ಇನ್ನೂ ಕೊಡದವಾಡಿಯಲ್ಲಿ ನಾಯಿಗಳ ದಾಳಿಗೆ ಒಳಗಾಗಿದ್ದ ಜಿಂಕೆಯನ್ನು ಗ್ರಾಮಸ್ಥರು ಕಾಪಾಡಿದ್ದಾರೆ.ಚಿಂತಾಮಣಿ ತಾಲೂಕಿನ ಮುಂಗಾನಹಳ್ಳಿ ಹೋಬಳಿ ಮಾದಮಂಗಲದ ಬಳಿ ಕೆಲ ದಿನಗಳ ಹಿಂದೆ ಚಿರತೆಯೊಂದು ಕಾಣಿಸಿಕೊಂಡು ಗ್ರಾಮಸ್ಥರು ಭಿತಿಗೋಳಗಾಗಿದ್ದು ಮಾಸುವ ಮುನ್ನವೆ ಇದೀಗ ಮಾದಮಂಗಲಕ್ಕೆ ಹೊಂದಿಕೊಂಡಿರುವ ಕೋನಪಲ್ಲಿ ಬಳಿಯ ಕುಗ್ರಾಮವಾದ ಮೋಟಮಾಕಲಪಲ್ಲಿ ಅರಣ್ಯ ವ್ಯಾಪ್ತಿಗೆ ಸೇರಿದ ಕೋನಪಲ್ಲಿ ಗ್ರಾಮದ ಹರೀಶ್ ಎಂಬುವರ ಹೊಲದಲ್ಲಿ ರಾತ್ರಿ ವೆಳೆ ಬಂದ ಚಿರತೆ ಜಿಂಕೆಯನ್ನು ಬೇಟಿಯಾಡಿದೆ ನಂತರದಲ್ಲಿ ಅರ್ದಂಬರ್ಧ ಜಿಂಕೆಯನ್ನು ತಿಂದಿರುವ ಚಿರತೆ ಜಿಂಕೆ ಶವವನ್ನು ಅಲ್ಲೆ ಬಿಟ್ಟು ಹೋಗಿದೆ, ಚಿರತೆ ಓಡಾಟದ ಹೆಚ್ಚೆ ಗುರುತುಗಳು ಸ್ಪಷ್ಟವಾಗಿ ಗ್ರಾಮಸ್ಥರಿಗೆ…
ರೈತಾಪಿ ಮಕ್ಕಳೆ ಇರುವ ಶಾಲೆ ಪ್ರಾರಂಭದಿಂದಲೂ ದಾಖಲೆ ಫಲಿತಾಂಶ ಶ್ರೀನಿವಾಸಪುರ :ತಾಲೂಕಿನ ಪ್ರತಿಷ್ಠಿತ ಖಾಸಗಿ ವಿಐಪಿ ಶಾಲೆ ಸಿ.ಬಿ.ಎಸ್.ಇ 10ನೇ ತರಗತಿ ಪರೀಕ್ಷೆಯಲ್ಲಿ 100 ಫಲಿತಾಂಶ ಸಾಧಿಸಿದೆ ಎಂದು ಶಾಲಾ ಆಡಳಿತ ಮಂಡಲಿ ಅಧ್ಯಕ್ಷಡಾ|| ವೇಣುಗೋಪಾಲ್ ತಿಳಿಸಿದರು. ಅವರು ಶಾಲ ಅವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ನಮ್ಮ ವಿಐಪಿ ಶಾಲೆಯ ಸಿಬಿಎಸ್‌ಇ 10ನೇ ತರಗತಿಯಲ್ಲಿ ಒಟ್ಟು 50 ವಿದ್ಯಾರ್ಥಿಗಳು ಸಿಬಿಎಸ್‌ಇ ಪರೀಕ್ಷೆಗೆ ಹಾಜರಾಗಿದ್ದು ಎಲ್ಲಾ 50 ವಿದ್ಯಾರ್ಥಿಗಳು ತೇರ್ಗಡೆಯಾಗುವುದರ ಮೂಲಕ ಶಾಲೆಗೆ ಶೇಕಡಾ ನೂರರಷ್ಟು ಫಲಿತಾಂಶ ತಂದು ಕೊಟ್ಟಿದ್ದಾರೆ ಎಂದರು.ವಿಐಪಿ ಶಾಲೆ ಪ್ರಾರಂಭವಾಗಿ 9 ವರ್ಷಗಳು ಕಳೆಯುತ್ತಿದೆ ಇದುವರೆಗೂ ಸಿಬಿಎಸ್‌ಇ 10ನೇ ತರಗತಿಯ 3 ಬ್ಯಾಚ್ ವಿದ್ಯಾರ್ಥಿಗಳು ಉತ್ತಮವಾಗಿ ನೂರರಷ್ಟು ಫಲಿತಾಂಶ ಸಾಧಿಸಿಕೊಂಡು ಸಿಬಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತ ಬಂದಿದ್ದು ಈ ಬಾರಿಯೂ 4ನೇ ಬ್ಯಾಚ್ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ- 07, ಉನ್ನತ ಶ್ರೇಣಿ– 10, ಪ್ರಥಮ ಶ್ರೇಣಿ -15, ದ್ವಿತೀಯಶ್ರೇಣಿ– 12,ತೃತೀಯ ಶ್ರೇಣಿಯಲ್ಲಿ -06 ವಿದ್ಯಾರ್ಥಿಗಳು ತೇರ್ಗಡೆಯಾಗಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದು…
ಶ್ರೀನಿವಾಸಪುರ: ಶ್ರೀನಿವಾಸಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-69ರಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಡು ಜಿಂಕೆಯೊಂದು ಮೃತಪಟ್ಟಿದೆ. ಬಾರಿ ಗಾತ್ರದ ಜಿಂಕೆಯೊಂದು ರಸ್ತೆ ದಾಟುವಾಗ ಚಿಂತಾಮಣಿ ಕಡೆ ಹೊರಟಿದ್ದ ಕಾರಿನ ಮೇಲೆ ಬಿದ್ದು ಜಿಂಕೆ ಸ್ಥಳದಲ್ಲಿಯೇ ಮೃತಪಟ್ಟಿದೆ. ತಿರುಪತಿ ದರುಶನ ಮುಗಿಸಿ ಚಿಕ್ಕಬಳ್ಳಾಪುರದ ಕಡೆ ಹೋರಟಿದ್ದ ಕಾರು ಕಲ್ಲೂರು ಅರಣ್ಯ ಇಲಾಖೆ ಸಸ್ಯ ಕ್ಷೇತ್ರದ ಬಳಿ ಹೋಗುತ್ತಿದ್ದಾಗ ವಾಹನದ ಮೇಲೆ ಬಾರಿ ಗಾತ್ರದ ವಸ್ತು ಬಿದ್ದಂತಾಗಿ ಕಾರು ನಿಯಂತ್ರಣ ತಪ್ಪಿದಂತಾಯಿತು ತಕ್ಷಣ ಕಾರು ನಿಲ್ಲಿಸಿ ನೋಡಿದಾಗ ರಸ್ತೆ ಬದಿ ಜಿಂಕೆ ಸತ್ತುಬಿದ್ದಿದೆ ಎಂದು ಕಾರು ಚಾಲಕ ಚಿರಂಜಿವಿ ಹೇಳುತ್ತಾರೆ.ಕಾರು ಹಾಗು ಜಿಂಕೆ ಶವ ವಶಕ್ಕೆ ಪಡೆದ ಅರಣ್ಯ ಇಲಾಖೆಸಾರ್ವಜನಿಕರು ಅಪಘಾತ ಸುದ್ಧಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದಾಗ ಅರಣ್ಯ ರಕ್ಷಕ ಅನಿಲ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೆಲಧಿಕಾರಿಗಳ ಸೂಚನೆಯಂತೆ ಕಾರನ್ನು ವಶಕ್ಕೆ ಪಡೆದು,ಜಿಂಕೆ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ತಗೆದುಕೊಂಡು ಹೋದರು.ಅರಣ್ಯ ಅಧಿಕಾರಿಗಳು ಹೇಳುವಂತೆ ಕಲ್ಲೂರು ಅರಣ್ಯದಲ್ಲಿ…
ಪುಲಗೂರಕೋಟೆ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ ಕೋಳಿ ಎಸೆದ ಫಾರಂ ಮಾಲಿಕನ ವಿರುದ್ದ ಕ್ರಮ ಜರುಗಿಸಲು ರೈತರ ಅಗ್ರಹ ಶ್ರೀನಿವಾಸಪುರ:ಆಂಧ್ರದ ಕೋಳಿ ಫಾರಂ ಮಾಲೀಕನೊರ್ವ ತನ್ನ ಫಾರಂನಲ್ಲಿ ಹವಾಮಾನ ವೈಪರಿತ್ಯದಿಂದ ಸತ್ತ ಕೋಳಿಗಳನ್ನುತಂದು ಆಂಧ್ರ ಗಡಿಯಲ್ಲಿರುವ ಕರ್ನಾಟಕದ ಕೆರೆಯಲ್ಲಿ ಬಿಸಾಡಿರುವ ಘಟನೆ ತಾಲೂಕಿನ ನೆಲವಂಕಿ ಹೊಬಳಿಯ ಪುಲಗೂರಕೋಟೆ ಪಂಚಾಯಿತಿ ವ್ಯಾಪ್ತಿಯ ಬಾಣಲಪಲ್ಲಿಯಲ್ಲಿ ನಡೆದಿರುತ್ತದೆ.ಆಂಧ್ರದ ಚಂಬಕೂರು-ಮದನಪಲ್ಲಿ ರಸ್ತೆಯಲ್ಲಿರುವ ಆಂಧ್ರದ ವ್ಯಕ್ತಿಗೆ ಸೇರುವ ಕೋಳಿ ಫಾರಂನಲ್ಲಿ ಬಿಸಿಲಿನ ಬೇಗೆ ತಾಳಲಾರದೆ ಸುಮಾರು 500 ಕ್ಕೂ ಹೆಚ್ಚು ಕೋಳಿಗಳು ಸಾವನಪ್ಪಿವೆ ಸತ್ತ ಕೋಳಿಗಳನ್ನು ತಂದು ಗಡಿಯಂಚಿನ ಕರ್ನಾಟಕದ ಕೆರೆಯಲ್ಲಿ ಬಿಸಾಡಲಾಗಿದ್ದು ಕೆರೆಯ ಗುಣಿಗಳಲ್ಲಿ ಇದ್ದಂತ ನೀರಿನಲ್ಲಿ ಸತ್ತ ಕೋಳಿಗಳನ್ನು ಎಸೆದಿದ್ದು ಅದನ್ನು ತಿನ್ನಲು ನಾಯಿಗಳ ಹಿಂಡು ಕೆರೆಯನ್ನು ಆವರಿಸಿಕೊಂಡು ಕೋಳಿಗಳ ಕಳೆಬರಗಳನ್ನು ಎಳೆದಾಡಿ ಕೆರೆಯಲ್ಲಿದ್ದ ಅಲ್ಪಸ್ವಲ್ಪ ನೀರನೆಲ್ಲ ಮಲೀನ ಗೊಳಿಸಿವೆ ಎಂದು ಗ್ರಾಮಸ್ಥರು ದೂರುತ್ತಾರೆ.ಕೆರೆಯಲ್ಲಿದ್ದ ನೀರನ್ನು ಗ್ರಾಮದ ಜಾನುವಾರುಗಳು,ಕುರಿ ಮೆಕೆ ಸಾಕಾಣಿಕೆ ಮಾಡುವ ರೈತರು ತಮ್ಮ ಜಾನುವಾರಗಳಿಗೆ ಇದೆ ನೀರನ್ನೆ ಕುಡಿಸುತ್ತಿದ್ದರು.ಸತ್ತ ಕೋಳಿಗಳನ್ನು ಬಿಸಾಡಿರುವ ಪರಿಣಾಮ ಕೆರೆ…
ಐದು ದಿನಗಳ ಕಾಲ ತೀವ್ರ ಒಣ ಹವೆ ಅಗತ್ಯಕ್ಕೆ ತಕ್ಕಂತೆ ವ್ಯವಸ್ಥೆ ಮಾಡಿಕೊಳ್ಳಲು ಸಾರ್ವಜನಿಕರಿಗೆ ಅಧಿಕಾರಿ ಕರೆ ಕೋಲಾರ:ಮೇ ನಾಲ್ಕನೆ ತಾರಿಕಿನವರಿಗೆ ರಾಜ್ಯಾದ್ಯಂತ ಒಣಹವೆ ಮುಂದುವರೆಯಲಿದ್ದು ಮುಂದಿನ ವಾರದಲ್ಲಿ ರಾಜ್ಯಾದ್ಯಂತ ತಾಪಮಾನ 38 ರಿಂದ 40 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಲಿದೆ ಹೀಗಾಗಿ ಮುಂದಿನ ವಾರವಿಡೀ ರಣ ಬಿಸಿಲು ಕರ್ನಾಟಕವನ್ನು ಕಾಡಲಿದೆ ಇದರ ಪರಿಣಾಮ ಕೋಲಾರ ಜಿಲ್ಲೆಯ ಮೇಲೂ ಆಗಲಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ ಅವರು ಸಾರ್ವಜನಿಕರಿಗೆ ಸೂಚನೆ ನೀಡಿ ಬೆಂಗಳೂರು ಹವಾಮಾನ ಹಾಗೂ ವಿಜ್ಞಾನ ಕೇಂದ್ರ ಇಲಾಖೆಯು ನೀಡಿರುವ ಪ್ರಕಟಣೆಯಂತೆ ರಾಜ್ಯಾದ್ಯಂತ ಹವಾಮಾನ ಪರಿಸ್ಥಿತಿ ಕುರಿತು ಸಾರ್ವಜನಿಕರಿಗೆ ಶಾಖದ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದು ಆಗ್ನೇಯ ಮಧ್ಯಪ್ರದೇಶದಿಂದ ದಕ್ಷಿಣ ಒಳನಾಡಿನಲ್ಲಿ ಕರ್ನಾಟಕದವರೆಗೆ ವಿದರ್ಭ,ಮರಾಠವಾಡ ಮತ್ತು ಉತ್ತರ ಆಂತರಿಕ ಕರ್ನಾಟಕದಾದ್ಯಂತ ಸುಮಾರು 1.5 ಕಿ.ಮೀ. ಸಮುದ್ರ ಮಟ್ಟದಿಂದ 105 ಕಿ.ಮೀ. ವರೆಗೆ ವ್ಯಾಪಿಸಿರುತ್ತದೆ ಹವಾಮಾನ ವ್ಯವಸ್ಥೆಗಳ ಪ್ರಭಾವದಡಿಯಲ್ಲಿ ಮುಂದಿನ 3-4 ದಿನಗಳ…
ಬಹು ನೀರಿಕ್ಷೀತ ಬಹುಭಾಷ ಚಿತ್ರ ಅರ್ಧ ನಾರೀಶ್ವರ ಪಾತ್ರದಲ್ಲಿ ಅಲ್ಲು ಅರ್ಜುನ್.ಅಭಿನಯಕ್ಕೆ ಸಿನಿಮಾ ಪ್ರಿಯರ ಕಾತುರ ನ್ಯೂಜ್ ಡೆಸ್ಕ್: ಪುಷ್ಪ ದಿ ರೈಸ್ ಚಿತ್ರ ಬಿಡುಗಡೆಯಾದ ನಂತರ ಜಾಗತಿಕವಾಗಿ ಸಿನಿಮಾ ಮನೋರಂಜನೆ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದು ಸಿನಿಮಾ ಪ್ರಿಯರು ಇನ್ನು ಮರೆತಿಲ್ಲ, ನಟ ಅಲ್ಲು ಅರ್ಜುನ್ ನಟನೆ ಅದು ಯಾವ ಮಟ್ಟಕ್ಕೆ ತಲುಪಿದೆ ಅಂದರೆ ಲಿಂಗ ಭೇದ ಇಲ್ಲದೆ ವಯಸ್ಸಿನ ಅಂತರ ಇಲ್ಲದೆ ಜನತೆ ಅಲ್ಲು ಅರ್ಜುನ್ ನಟನಾ ಶೈಲಿಯನ್ನು ಅನುಕರಿಸಿ ಅನಂದಿಸದ್ದರು ಜನತೆ ದೇಶ ವಿದೇಶಗಳಲ್ಲೂ ಇಂದಿಗೂ ಪುಷ್ಪ ಸಿನಿಮಾ ಹಂಗಾಮ ಇದೆ ಎನ್ನಬಹುದು ತಗ್ಗದೆ ಲೇ ಅನ್ನುವ ಅಲ್ಲುಅರ್ಜುನ್ ವಿಶೇಷ ಮ್ಯಾನರಿಸಂ ಡೈಲಾಗ್ ಹಾಗು ನಾಯಕಿ ರಶ್ಮಿಕಾ ಮಂದಣ್ಣ ಅವರ ಸಾಮಿ ಸಾಮಿ ಹಾಡು ಈಗಲೂ ಜನರ ಕಿವಿಯಲ್ಲೂ ಗುಯ್ಯುಗುಟ್ಟುತ್ತಿದೆ. ಪುಷ್ಪ ದಿ ರೈಸ್ ಚಿತ್ರದ ಯಶಸ್ಸು ಅಲ್ಲು ಅರ್ಜುನ್ ನಟನೆ ಯಿಂದ ಉತ್ತೇಜಿತರಾದ ಚಿತ್ರದ ನಿರ್ಮಾಪಕರು ಚಿತ್ರದ ಎರಡನೇ ಭಾಗವನ್ನು ಪುಷ್ಪ 2 ದಿ ರೂಲ್ ಎಂದು…
ಶ್ರೀನಿವಾಸಪುರ:ಶ್ರೀನಿವಾಸಪುರ ತಹಶೀಲ್ದಾರ್ ಅವರ ನೂತನ ಮಹೇಂದ್ರ ಜೀಪಿಗೆ ಖಾಸಗಿ ಬಸ್ ಡಿಕ್ಕಿ ಹೋಡೆದಿದ್ದು ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ,ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರನೊಬ್ಬನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ,ಘಟನೆ ಕೋಲಾರ-ಶ್ರೀನಿವಾಸಪುರ ರಸ್ತೆಯ ಚೆಲ್ದಿಗಾನಹಳ್ಳಿ ಹತ್ತಿರದ ಬೈಪಾಸ್ ಬಳಿ ನಡೆದಿದ್ದು ಮಂಗಳವಾರ ಸಂಜೆ ಕೋಲಾರ ದಿಂದ ಬರುತ್ತಿದ್ದ ಷರಿಫ್ ಬಸ್ ಒವರ್ ಟೇಕ್ ಮಾಡಿಕೊಂಡು ಮುಂದೆ ಸಾಗಿರುತ್ತದೆ ಅದರ ಹಿಂದೆ ಗಾರ್ಮೇಂಟ್ ಕಾರ್ಮಿಕರನ್ನು ಕರೆದುಕೊಂಡು ಬರುತ್ತಿದ್ದ ಖಾಸಗಿ ಬಸ್ ಮುಂದೆ ನುಗ್ಗಿರುತ್ತದೆ ಅದೆ ಸಮಯಕ್ಕೆ ಶ್ರೀನಿವಾಸಪುರ ತಹಶೀಲ್ದಾರ್ ಸುಧೀಂದ್ರ ರವರು ಇದ್ದ ಮಹಿಂದ್ರಾ ಜೀಪು ಬಂದಿದ್ದು ಬಸ್ಸು ಜಿಪೀಗೆ ಡಿಕ್ಕಿ ಹೊಡೆದು ಅಪಘಾತ ಆಗಿದೆ. ಬಸ್ ಹಿಂದೆ ಬರುತ್ತಿದ್ದ ದ್ವಿಚಕ್ರ ವಾಹನ ಸವಾರ ಬಸ್ಸಿಗೆ ಡಿಕ್ಕಿ ಹೊಡೆದಿದ್ದಾನೆ ಅಪಘಾತದಿಂದ ಜೀಪು ಟಯರ್ ಬ್ಲಾಸ್ಟ್ ಆಗಿದ್ದು ವಾಹನದ ಮುಂಬಾಗ ಸ್ವಲ್ಪಮಟ್ಟಿಗೆ ಜಕಂ ಆಗಿದೆ. ಜೀಪಿನಲ್ಲಿದ್ದ ತಹಶೀಲ್ದಾರ್ ಸುಧೀಂದ್ರ ಸೇಫ್ ಆಗಿದ್ದಾರೆ.ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಪಟ್ಟಣ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶ್ರೀನಿವಾಸಪುರದ ಜನತೆಗೆಎಲ್ಲಾ ರೀತಿಯ ಬ್ಯಾಗುಗಳು ಒಂದೇಜಾಗದಲ್ಲಿ ಸಿಗಲು ಅಂಗಡಿ ಪ್ರಾರಂಭBhagyalakshmi Stores concern shop. ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದ ಫೇಮಸ್ ಸ್ಟೇಷನರಿ ಅಂಗಡಿ ಭಾಗ್ಯಲಕ್ಷ್ಮೀ ಸ್ಟೋರ್ಸ್ ವತಿಯಿಂದ ಪ್ರತ್ಯಕವಾಗಿ ಬ್ಯಾಗ್ ಅಂಗಡಿ ಪ್ರಾರಂಭಿಸಿದ್ದಾರೆ.ಸ್ಟೇಷನರಿ ಸೇರಿದಂತೆ ಇತರೆ ವ್ಯಾಪರದಲ್ಲಿ ತಮ್ಮದೇ ಶೈಲಿಯಲ್ಲಿ ವಿಭಿನ್ನವಾಗಿ ಗ್ರಾಹಕರನ್ನು ಆಕರ್ಷಿಸುತ್ತಿರುವ ಭಾಗ್ಯಲಕ್ಷ್ಮೀ ಸ್ಟೋರ್ಸ್ ಆನ್ ಲೈನ್ ಯುಗದಲ್ಲೂ ಸ್ಥಳೀಯವಾಗಿ ಗ್ರಾಹಕರನ್ನು ಹೊಂದುವ ಮೂಲಕ ಪಟ್ಟಣದಲ್ಲಿ ರಿಟೇಲ್ ಹಾಗು ಹೊಲ್ ಸೇಲ್ ವ್ಯಾಪಾರ ನಡೆಸುತ್ತಿದ್ದಾರೆ. ಈಗ ಅವರು ತಾಲೂಕಿನ ಜನತೆಗೆ ಮತ್ತೊಂದು ಕೊಡುಗೆಯಾಗಿ ಎಲ್ಲಾ ರೀತಿಯ ಬ್ಯಾಗ್ ಗಳನ್ನು ಆಕರ್ಷಕ ಬೆಲೆಯಲ್ಲಿ ನೀಡಬೇಕು ಎಂದು “ಶ್ರೀ ಭಾಗ್ಯಲಕ್ಷ್ಮಿ ಬ್ಯಾಗ್ ವರ್ಲ್ಡ್” ಆರಂಭಿಸಿದ್ದಾರೆ.ಭಾಗ್ಯಲಕ್ಷ್ಮೀ ಸ್ಟೋರ್ಸ್ ಇರುವಂತಹ ಕಟ್ಟಡದ ಮೆಲ್ಭಾಗದಲ್ಲಿ ಫಸ್ಟ್ ಫ್ಲೊರ್ ನಲ್ಲಿ ಎಲ್ಲಾ ರೀತಿಯ ಬ್ಯಾಗ್ ವರ್ಲ್ಡ್ ಬ್ಯಾಗುಗಳ ಅಂಗಡಿಯನ್ನು ಆರಂಭಿಸಿದ್ದಾರೆ ಮಹಿಳೆಯರಿಗಾಗಿ ಬಣ್ಣಬಣ್ಣದ ವೆರೈಟಿ ಬ್ಯಾಗುಗಳು ಲಭ್ಯವಿದೆ, ಮಹಿಳೆಯರು ಬಳಸುವಂತ ಉದ್ದನೇಯ,ರೌಂಡ್ ಶೇಪ್,ಅಗಲವಾದ ಆಕರ್ಷಕವಾದ ಹಿಂಬದಿ ನೇತುಹಾಕಿಕೊಳ್ಳುವಂತಹದು,ಯುವತಿಯರು ಬಳೆಸುವಂತ ಸೈಡ್ ಟ್ರೆಂಡಿ ಬ್ಯಾಗುಗಳು,ಚಿತ್ತಾಕರ್ಷಕ ಬಟ್ಟೆಯ ನವೀನ ರೂಪದ ಜರ್ನಿ…
ಶ್ರೀನಿವಾಸಪುರ:ಕೋಲಾರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾನ ಆಗಬೇಕು ಎಂಬ ಉದ್ದೇಶದಿಂದ ಚುನಾವಣಾ ಶಾಖೆ ವತಿಯಿಂದ ಶ್ರೀನಿವಾಸಪುರ ಪಟ್ಟಣದಲ್ಲಿ ಮತದಾರರನ್ನು ವಿಶೇಷವಾಗಿ ಆಕರ್ಷಿಸಲು ಮೂರು ಮತಗಟ್ಟೆಗಳನ್ನು ವಿವಿಧ ಹೆಸರಿನಲ್ಲ್ ಸ್ಥಾಪಿಸಲಾಗಿದೆ.ಪಟ್ಟಣದ ಸರೋಜಿನಿ ರಸ್ತೆಯಲ್ಲಿನ ಸರ್ಕಾರಿ ಶಾಲೆಯ ಬೂತ್ ಸಂಖ್ಯೆ 141 ರಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಮಗಟ್ಟೆಗೆ ಗುಲಾಬಿ ಬಣ್ಣ ಬಳೆದು ಸಖಿ ಮತಗಟ್ಟೆಯಂದು ಘೋಷಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಿದ್ದಾರೆ,ರಂಗಾರಸ್ತೆಯಲ್ಲಿ ಬೂತ್ ಸಂಖ್ಯೆ 144 ಮತಗಟ್ಟೆಯನ್ನು ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಮತದಾನದ ಮಹತ್ವ ಸಾರುವ ಸ್ಲೋಗನ್ ಗಳೊಂದಿಗೆ ಯುವ ಮತಮಗಟ್ಟೆಯಂದು ಸ್ಥಾಪಿಸಿದ್ದಾರೆ,ತ್ಯಾಗರಾಜ ಕಾಲೋನಿಯಲ್ಲಿನ ಶಾಲೆಯ ಮತಗಟ್ಟೆಯನ್ನು ವಿವಧತೆಯಲ್ಲಿ ಏಕತೆ ಮಾವಿನ ಉರು ಎಂದು ಬಿಂಬಿಸುವ ರೀತಿಯಲ್ಲಿ ಮಾವಿನ ಎಲೆಗಳ ತೋರಣ ಕಟ್ಟಿ,ಮಾವಿನ ಮಹತ್ವ ಹೇಳುವ ಬರಹಗಳೊಂದಿಗೆ ಸಾಂಸ್ಕೃತಿಕ ಮತಗಟ್ಟೆ ಸ್ಥಾಪಿಸಲಾಗಿದೆ. ಮತದಾರರನ್ನು ಆಕರ್ಷಿಸಲು ವಿಶೇಷವಾದ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎನ್ನುತ್ತಾರೆ ಚುನಾವಣೆ ಅಧಿಕಾರಿಗಳು. ರಂಗಾರಸ್ತೆಯ ಮತಗಟ್ಟೆ ಸಂಖ್ಯೆ 140 ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು…