ಶ್ರೀನಿವಾಸಪುರ: ಅರಣ್ಯ ಇಲಾಖೆ ಕಿರಕುಳಕ್ಕೆ ಬೆಸೆತ್ತು ತಾಲೂಕಿನ ದಳಸನೂರು ಗ್ರಾಮಸ್ಥರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ, ಇಂದು ಗ್ರಾಮದಲ್ಲಿ ಮೆರವಣಿಗೆ ನಡೆಸಿದ ಗ್ರಾಮಸ್ಥರು ಕಳೆದ 30-40 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದ ರೈತಾಪಿ ಜನರನ್ನು ಅರಣ್ಯ ಈಗ ಏಕಾಏಕಿ ಒಕ್ಕಲೆಬ್ಬಿಸಿದೆ ರೈತಾಪಿ ಜನರ ಅನುಭವದಲ್ಲಿದ್ದ ನೂರಾರು ಎಕರೆ ಸಾಗುವಳಿ ಜಮೀನನ್ನು ಅರಣ್ಯ ಇಲಾಖೆ ದೌರ್ಜನ್ಯವಾಗಿ ಕಿತ್ತುಕೊಂಡಿದೆ, ಜಮೀನು ಕಳೆದುಕೊಂಡ ಕೃಷಿಕರು ಅಕ್ಷರಶಃ ಬಿದಿಪಾಲಾಗಿದ್ದಾರೆ,ನಮಗೆ ನ್ಯಾಯ ಒದಗಿಸುವ ದೃಷ್ಠಿಯಿಂದ ಸರ್ಕಾರ ಜಂಟಿ ಸರ್ವೆ ಮಾಡಿಸಿ ರೈತರ ನೆರವಿಗೆ ಬರುವಂತೆ ಒತ್ತಾಯಿಸಿದರು ಇದುವರಿಗೂ ನಮ್ಮ ಮನವಿಗೆ ನ್ಯಾಯ ಸಿಕ್ಕಿಲ್ಲ ಇದರಿಂದ ನಾವು ನಮ್ಮ ರಕ್ಷಣೆಗೆ ಬಾರದ ಸರ್ಕಾರದ ಕ್ರಮ ಖಂಡಿಸಿ ಅರಣ್ಯ ಇಲಾಖೆಯ ಅಧಿಕಾರಿಗಳ ದೌರ್ಜನ್ಯದ ವಿರುದ್ದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಲು ಗ್ರಾಮಸ್ಥರು ನಿರ್ಧಾರ ಮಾಡಿದ್ದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
Author: Srinivas_Murthy
ಮೈತ್ರಿ ಅಭ್ಯರ್ಥಿ ಭರ್ಜರಿ ರೋಡ್ ಶೋಶೋ ನಂತರ ಕೊನೆಯಲ್ಲಿ ಆದದ್ದೆ ಬೇರೆಯಾರು ಜೊತೆಯಲ್ಲಿ ಉಳಿಲಿಲ್ಲ ಕೋಲಾರ: ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಎಂ.ಮಲ್ಲೇಶ್ ಗುರುವಾರ ನಾಮ ಪತ್ರ ಸಲ್ಲಿಸಿದ್ದಾರೆ ನಾಮ ಪತ್ರ ಸಲ್ಲಿದಾಗಲೆ ಮೈತ್ರಿ ಕೂಟದ ಸಮನ್ವಯತೆ ಹಳ್ಳ ಹಿಡಿಯಿತಾ,ಮೈತ್ರಿ ಪಕ್ಷಗಳ ಮುಖಂಡರು ತಮ್ಮ ದಾರಿ ನೊಡಿಕೊಂಡು ಹೊದ ಹಿನ್ನಲೆಯಲ್ಲಿ ಅಭ್ಯರ್ಥಿ ನಡುರಸ್ತೆಯಲ್ಲಿ ಒಬ್ಬಂಟಿಯಾದರ ಇಂತಹ ಹಲವಾರು ಮಾತುಗಳು ನಿನ್ನೆ ಕೋಲಾರದ ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿದೆ.ರಾಜ್ಯಮಟ್ಟದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಅದರಂತೆ ಸೀಟು ಹಂಚಿಕೆಯಲ್ಲಿ ಮಂಡ್ಯ,ಹಾಸನ ಹಾಗು ಕೋಲಾರ ಕ್ಷೇತ್ರಗಳು ಜೆಡಿಎಸ್ ಪಾಲಾಗಿದೆ,ಕೋಲಾರ ಟಿಕೆಟ್ ಗಾಗಿ ಬಿಜೆಪಿ-ಜೆಡಿಎಸ್ ನಾಯಕರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದಾದರೂ ಕೊನೆಗೂ ಜೆಡಿಎಸ್ ವಶವಾಯಿತು,ಅಭ್ಯರ್ಥಿ ಘೋಷಣೆಯಾದ ನಂತರ ಅಭ್ಯರ್ಥಿ ಮಲ್ಲೇಶ್ ಬಾಬು ಮೊದಲ ಬಾರಿಗೆ ನಾಮಪತ್ರ ಸಲ್ಲಿಸಿದ್ದು ಈ ಸಂದರ್ಭದಲ್ಲಿ ಮಾಜಿ ಸಚಿವ ವರ್ತೂರ್ ಪ್ರಕಾಶ್ ಸೇರಿದಂತೆ ಜೆಡಿಎಸ್ ಇಬ್ಬರು ಶಾಸಕಾರದ ವೆಂಕಟಶಿವಾರೆಡ್ಡಿ,ಸಮೃದ್ಧಿಮಂಜುನಾಥ್ ಹಾಗು ಕೋಲಾರದ ಸಿ.ಎಂ.ಆರ್ ಶ್ರೀನಾಥ್ ಜೊತೆ…
ಕೋಲಾರ:ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ನಾಮಪತ್ರ ಸಲ್ಲಿಸುವ ವೇಳೆಯೂ ಬಣ ರಾಜಕೀಯ ಮುಂದುವರೆದಿದ್ದು ಇದರಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ಎರಡು ಬಾರಿ ನಾಮ ಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಮೊದಲ ಸಲ ನಾಮ ಪತ್ರ ಸಲ್ಲಿಸಿಸುವ ಸಂದರ್ಭದಲ್ಲಿ ಸಚಿವರಾದ ಬೈರತಿ ಸುರೇಶ್,ಡಾ.ಎಂ.ಸಿ.ಸುಧಾಕರ್, ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್,ಶಾಸಕ ನಾರಯಣಸ್ವಾಮಿ ಇದ್ದರು.ಎರಡನೆ ಬಾರಿಗೆ ನಾಮ ಪತ್ರ ಸಲ್ಲಿಸುವಾಗ ಸಚಿವ ಕೆ.ಎಚ್.ಮುನಿಯಪ್ಪ,ಶಾಸಕಿ ರೂಪಕಲಾ ಎಂ.ಶಶಿಧರ್,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ,ಶಿಡ್ಲಘಟ್ಟ ರಾಜೀವ್ ಗೌಡ ಇದ್ದರು.ನಾಮ ಪತ್ರ ಸಲ್ಲಿಕೆ ನಂತರ ಒಂದಾದ ಬಣಕೋಲಾರ ಮೀಸಲು ಕ್ಷೇತ್ರದಲ್ಲಿ ಹೊಸ ಮುಖ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಎರಡು ಬಾರಿ ಪ್ರತ್ಯಕವಾಗಿ ಬಣಗಳ ಜೊತೆ ಹೋಗಿ ನಾಮ ಪತ್ರ ಸಲ್ಲಿಸಿದ ನಂತರ ಹೊರಗೆ ಬಂದಾಗ ಸಚಿವ ಬೈರತಿ ಸುರೇಷ್ ನೇತೃತ್ವದಲ್ಲಿ ಎರಡು ಬಣಗಳ ಶಾಸಕರು ಮಂತ್ರಿಗಳು ಮುಖಂಡರು ಜೊತೆಗೂಡಿ ಸಾರ್ವಜನಿಕರಿಗೆ ಫೋಟೋ ಪೊಸ್ ಕೊಟ್ಟು ದರ್ಶನ ನೀಡಿದಲ್ಲದೆ ಎಲ್ಲರೂ ವಿಜಯದ ಸಂಕೇತ ಎಂಬಂತೆ ಎರಡು ಬೆರಳು ತೋರಿಸಿದರು. ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್…
ಶ್ರೀನಿವಾಸಪುರದ ಲಿಂಗಾಪುರ ನಾಗರಾಜ್ ಮುಖ್ಯಸ್ಥರಾದರಿಲೇಬಲ್ ಆರ್ಗಾನಿಕ್ ಸರ್ಟಿಫಿಕೇಷನ್ ಸಂಸ್ಥೆ(ರೊಕೊ)ಸಂಸ್ಥೆ ವತಿಯಿಂದ ಕಲಿಕಾ ಸಾಮಗ್ರಿಗಳ ವಿತರಣೆ ಶ್ರೀನಿವಾಸಪುರ : ಸರ್ಕಾರಿ ಶಾಲೆಯಲ್ಲಿನ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಜೀವನದಲ್ಲಿ ಉನ್ನತ ಗುರಿ ಸಾಧಿಸಲು ಗ್ರಾಮೀಣ ಶೈಕ್ಷಣಿಕ ವ್ಯವಸ್ಥೆಗೆ ಜೀವ ತುಂಬುವಂತ ಕೆಲಸವನ್ನು ಬೆಂಗಳೂರಿನ ರಿಲೇಬಲ್ ಆರ್ಗಾನಿಕ್ ಸರ್ಟಿಫಿಕೇಷನ್ ಸಂಸ್ಥೆ(ರೊಕೊ) ಮಾಡಿದೆ. ಸಂಸ್ಥೆ ವತಿಯಿಂದ ಶ್ರೀನಿವಾಸಪುರ ತಾಲೂಕಿನ ಕೆಲವೊಂದು ಸರ್ಕಾರಿ ಶಾಲೆಗಳಿಗೆ ಕಲಿಕಾ ಸಾಮಾಗ್ರಿಗಳು ಸೇರಿದಂತೆ ಸಲಕರಣೆಗಳನ್ನು ವಿತರಿಸಿದ್ದಾರೆ. ಇದ್ಯಾವುದು ಹೇಳಿಕೆಗೆ ಅಥಾವ ಫೋಟೋ ಸೆಷನ್ ಗಾಗಿ ಕಾಟಾಚಾರಕ್ಕೆ ವಿತರಿಸಿದ ವಸ್ತುಗಳಲ್ಲ ಭರ್ಜರಿ ನಲವತ್ತಾರು ಲಕ್ಷ ಮೌಲ್ಯದ ನಲಿಕಲಿ ಟೇಬಲ್‌ಗಳು, ಚೇರುಗಳು, ಶಾಲಾ ಬ್ಯಾಗ್‌ಗಳು, ವಿಧ್ಯಾರ್ಥಿಗಳಿಗೆ ಟ್ರಾಕ್ ಸೂಟ್ ಹಾಗು ನೋಟ್ ಪುಸ್ತಕಗಳನ್ನು ವಿತರಿಸಲಾಗಿದೆ.ರಿಲೇಬಲ್ ಆರ್ಗಾನಿಕ್ ಸರ್ಟಿಫಿಕೇಷನ್ (ರೊಕೊ) ಸಂಸ್ಥೆ ಮುಖ್ಯಸ್ಥ ನಾಗರಾಜ್ ಶ್ರೀನಿವಾಸಪುರ ತಾಲೂಕಿನ ಲಿಂಗಾಪುರ ಗ್ರಾಮದವರಾಗಿದ್ದು ಅವರು ತಾವು ಒದಿದ ಶಾಲೆಗಳಲ್ಲಿನ ಶೈಕ್ಷಣಿಕ ವ್ಯವಸ್ಥೆಯನ್ನು ಬಲ ಪಡಿಸುವ ಕೆಲಸ ಮಾಡಿದ್ದಾರೆ.ಅವರು ತಾಲೂಕಿನ ಚೆನ್ನಯ್ಯಗಾರಿಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಯಲ್ಲಿ ಸಲಕರಣೆಗಳನ್ನು ವಿತರಿಸಿ…
ಶ್ರೀನಿವಾಸಪುರ:ರಾಜ್ಯದ ಹಿತ ದೃಷ್ಠಿಯಿಂದ ಜೆಡಿಎಸ್ ಪಕ್ಷ ಬಿಜೆಪಿ ಯೊಂದಿಗೆ ಮೈತ್ರಿ ಮಾಡಿಕೊಂಡಿರುವುದಾಗಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು. ಅವರು ಇಂದು ತಾಲೂಕು ಜೆಡಿಎಸ್ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ ರಾಷ್ಟ್ರಕ್ಕೆ ಮೋದಿ ನಾಯಕತ್ವ ಹೇಗೊ ರಾಜ್ಯಕ್ಕೆ ಕುಮಾರಣ್ಣನ ನಾಯಕತ್ವ ಅಗತ್ಯವಾಗಿದೆ.ರಾಜ್ಯದಲ್ಲಿ ಎನ್.ಡಿ.ಎ ಮೈತ್ರಿ ಬಲದಿಂದ ಎಲ್ಲಾ ಸ್ಥಾನಗಳಲ್ಲೂ ಎಂ.ಪಿ ಅಭ್ಯರ್ಥಿಗಳು ಜಯಸಾಧಿಸುತ್ತಾರೆ.ಶ್ರೀನಿವಾಸರ ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದ್ದು ಶ್ರೀನಿವಾಸಪುರದ ಉತ್ತಮ ಭವಿಷ್ಯಕ್ಕಾಗಿ ಯೋಜನೆಗಳನ್ನು ಕಾರ್ಯಗತ ಗೊಳಿಸುವ ಸಲುವಾಗಿ ಶ್ರೀನಿವಾಸಪುರದಲ್ಲಿ ಕೋಲಾರ ಲೋಕಸಭಾ ಮೀಸಲು ಕ್ಷೇತ್ರದ ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಮಲ್ಲೇಶ್ ಬಾಬು ಅವರಿಗೆ ಹೆಚ್ಚಿನ ಲೀಡ್ ನೀಡುವ ಮೂಲಕ ಗೆಲ್ಲಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.ನಮ್ಮೂರ ಹೆಣ್ಮಗಳ ಮಗ ಮಲ್ಲೇಶ್ಶ್ರೀನಿವಾಸಪುರ ತಾಲೂಕಿನ ರಾಯಲಪಾಡು ಹೋಬಳಿಯ ಮುದಿಮಡಗು ಪಂಚಾಯಿತಿಯ ಹೆಣ್ಮಮಗಳು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮನವರ ಮಗನಾಗಿರುವ ಮಲ್ಲೇಶ್ ಬಾಬು ಅವರ ತಂದೆ ದಿವಂಗತ ಮುನಿಸ್ವಾಮಿ ಐ ಎ ಎಸ್ ಅಧಿಕಾರಿಯಾಗಿ ಸಾಮಜಿಕ ಕಳಕಳಿಯಿಂದ ಕಾರ್ಯನಿರ್ವಹಿಸುತ್ತಿದ್ದರು ಇಂತಹ ವಿದ್ಯಾವಂತ ಕುಟುಂಬದಿಂದ ಬಂದಿರುವ…
ಮಳೆಯಿಲ್ಲ ನೀರಿಲ್ಲ ಕರೆಂಟಿಲ್ಲ ಮಾವು ಇಲ್ಲಶ್ರೀನಿವಾಸಪುರ:ವಿಭಜಿತ ಕೋಲಾರ ಜಿಲ್ಲೆಯ ಜನತೆ ಬಿಸಿಲ ಧಗೆಗೆ ತತ್ತರಿಸಿ ಹೋಗಿದ್ದಾರೆ ಹಗಲು ಸೂರ್ಯನ ತಾಪಕ್ಕೆ ಭೂಮಿ ಕಾದ ಕೆಂಡವಾಗುತ್ತಿದ್ದು, ರಾತ್ರಿ ಧಗೆ ಹೆಚ್ಚಾಗುತ್ತಿದೆ.ಮಳೆ ಇಂದೋ ನಾಳೆಯೋ ಬರಬಹುದು ಎಂಬ ನೀರಿಕ್ಷೆಯಲ್ಲಿ ಬಿಸಿ ಗಾಳಿಯನ್ನು ಸೇವಿಸುತ್ತ ಜನತೆ ಪರಿತಪಿಸುತ್ತಿದ್ದಾರೆ.ಈಗಾಗಲೆ ಕಳೆದ 122 ವರ್ಷಗಳಲ್ಲೇ ಅತ್ಯಂತ ಹೆಚ್ಚು ತಾಪಮಾನ ದಾಖಲಾಗಿದೆ ಇದು ಜನರ ಅರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ ಅದರಲ್ಲೂ ವಯಸ್ಸಾದವರು ಎಳೆಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುವಂತಾಗಿದ್ದು ಆರೋಗ್ಯ ಸಮಸ್ಯೆಗಳು ಕಾಡುತ್ತದೆ ಎಂಬ ಆತಂಕ.ಬಿಸಿಲ ತಾಪಕ್ಕೆ ಮನೆ ಸೇರುತ್ತಿರುವ ಜನತೆಬಿಸಿಲ ತಾಪಕ್ಕೆ ಹೆದರಿ ಜನ ಮುಂಜಾನೆಯೆ ಕೆಲಸ ಕಾರ್ಯಗಳನ್ನು ಆರಂಭಿಸುತ್ತಿದ್ದು ಬೆಳಿಗ್ಗೆ ಹತ್ತುಗಂಟೆ ಹೊತ್ತಿಗೆ ಬಿಸಿಲು ಪ್ರಖರವಾಗುತ್ತ ಹೋಗಿ ಹನ್ನೆರಡು ಗಂಟೆಯೊಷ್ಟೊತ್ತಿಗೆ ಭೂಮಿ ಕಾದು ಕೆಂಡವಾಗುತ್ತಿದೆ ಇದರಿಂದ ಜನತೆ ರಣ ಬಿಸಿಲಿನ ಕಾರಣಕ್ಕೆ ಮಧ್ಯಾನದಃ ಹೊತ್ತಿಗೆ ಮನೆ ಸೇರಿಕೊಳ್ಳುತ್ತಿದ್ದಾರೆ,ಇದರಿಂದಾಗಿ ಪಟ್ಟಣ ಹಾಗು ನಗರದ ರಸ್ತೆಗಳು ಜನ ಸಂಚಾರ ಇಲ್ಲದೆ ಬಿಕೋ ಎನ್ನುತ್ತಿವೆ ಇದು ವ್ಯಾಪಾರದ ಮೇಲೂ ತೀವ್ರ ಪರಿಣಾಮ…
ನ್ಯೂಜ್ ಡೆಸ್ಕ್: ತಮಿಳುನಾಡು ಅಂದರೆ ದ್ರಾವಿಡ ನೆಲೆ ಅಲ್ಲಿನ ರಾಜಕೀಯ ಸಾಮಜಿಕ ಹೋರಾಟ ಎಲ್ಲವೂ ದ್ರಾವಿಡ ಮೂಲದ್ದೆ ಇಂತಹ ಭೂಮಿಯಲ್ಲಿ ಈ ಬಾರಿ ರಾಜಕೀಯದಲ್ಲಿ ಬದಲಾವಣೆಯ ದೊಡ್ಡ ಗಾಳಿ ಬೀಸಬಹುದು ಎನ್ನುವ ಮಾತು ಕೇಳಿಬರುತ್ತಿದೆ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಪ್ರಾಂತೀಯ ಕದನದಲ್ಲಿ ಒಂದೇರಡು ಸ್ಥಾನಗಳಿಗೆ ಸೀಮಿತವಾಗಿದ್ದ ಬಿಜೆಪಿ ಈಗ ಆಣ್ಣಾಮಲೈ ಎಂಬ ಯುವ ನಾಯಕತ್ವ ಹಾಗು ಹಿಂದುಳಿದ ಅಸ್ತ್ರ ಬಳಿಸಿ ಚುನಾವಣೆ ಎದುರಿಸಲು ಮುಂದಾಗಿರುವುದು ತಮಿಳುನಾಡಿನ ರಾಜಕೀಯ ಕುರಿತಾಗಿ ಇಡೀ ದೇಶದ ಗಮನ ಸೆಳೆಯುವಂತಾಗಿದೆ.ಲೋಕಲ್ ಎಲೆಕ್ಷನ್ ನಲ್ಲಿ ಉತ್ತಮ ಸಾಧನೆಇದಕ್ಕೆ ಪೂರಕವಾಗಿ ಫೆಬ್ರವರಿ ತಿಂಗಳಲ್ಲಿ ತಮಿಳುನಾಡು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ದಿಸಿ ಕಳೆದ ಬಾರಿಗಿಂತಲೂ ಹೆಚ್ಚು ಸಾಧನೆ ಮಾಡಿದಿದ್ದು,ಬಿಜೆಪಿ 1 ಕಾರ್ಪೊರೇಷನ್ ವಾರ್ಡ್, 24 ಪುರಸಭೆ ವಾರ್ಡ್ ಮತ್ತು 102 ಪಟ್ಟಣ ಪಂಚಾಯಿತಿ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ, ಪ್ರಾತಿನಿಧ್ಯವೇ ಇಲ್ಲದ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ನಂತರ ಬಿಜೆಪಿ ಮೂರನೇ ಅತಿದೊಡ್ಡ…
ಅಭ್ಯರ್ಥಿ ಫೈನಲ್ ಆದರೂ ಕಾರ್ಯಕರ್ತರ ನಡುವಿನ ಗೊಂದಲ ಬಗೆ ಹರೆದಿಲ್ಲ ಮುಳಬಾಗಿಲು:ಕೋಲಾರ ಮೀಸಲು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಇಂದು ಪ್ರಖ್ಯಾತ ಪುಣ್ಯಕ್ಷೇತ್ರವಾದ ಮುಳಬಾಗಿಲು ಕುರುಡುಮಲೆ ಗಣೇಶ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮುಳಬಾಗಿಲಿನಲ್ಲಿ ಕಾರ್ಯಕರ್ತರ ಸಭೆ ನಡೆಸಿ ಅಧಿಕೃತವಾಗಿ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.ಕುರುಡುಮಲೆಯಲ್ಲಿರುವ ವಿನಾಯಕ ದೇವಾಲಯದಲ್ಲಿ ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಕೋಲಾರ ಉಸ್ತುವಾರಿ ಸಚಿವ ಭೈರತಿಸುರೇಶ್ ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ.ಸುಧಾಕರ್ ಸೇರಿದಂತೆ ಕೋಲಾರದ ಶಾಸಕ ಕೊತ್ತೂರು ಮಂಜುನಾಥ್, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ,ಪರಿಷತ್ ಸದಸ್ಯರದ ಅನಿಲ್,ನಸೀರ್ ಆಹ್ಮದ್ ಮುಂತಾದವರು ಭಾಗಿಯಾಗಿದ್ದರು.ಶಿಡ್ಲಘಟ್ಟ ಉಸ್ತುವಾರಿ ಗದ್ದಲ ಪಂಚಾಯಿತಿಕುರುಡುಮಲೆ ಗಣೇಶನಿಗೆ ಪೂಜೆ ಮುಗಿಸಿದ ನಂತರ ಮುಳಬಾಗಿಲು ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಶಿಡ್ಲಘಟ್ಟ ಕಾಂಗ್ರೆಸ್ ನಲ್ಲಿರುವ ಗುಂಪುಗಾರಿಕೆ ಬುಗಿಲೆದ್ದಿತು ಕಾರ್ಯಕರ್ತರ ಗದ್ದಲ ದೊಡ್ದ ಸದ್ದುಮಾಡಿತು. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಟಿಕೆಟ್ ವಂಚಿತ ಪುಟ್ಟು ಆಂಜಿನಪ್ಪ ಕಾಂಗ್ರೆಸ್…
ಶ್ರೀನಿವಾಸಪುರ: ಮಾನಸೀಕವಾಗಿ ಮನನೊಂದ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಹೋಬಳಿ ಶಿಗಪಲ್ಲಿ@ಶೀಗೆಹಳ್ಳಿ ಗ್ರಾಮದಲ್ಲಿ ನಡೆದಿದೆ.ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾನು ನೇಣಿಗೆ ಶರಣಾದ ತಂದೆಯೊಬ್ಬನ ಕಥೆ,ಕೃಷಿ ಕಾರ್ಮಿಕನಾಗಿದ್ದ ಶಿಗಪಲ್ಲಿ ನಾರಾಯಣಸ್ವಾಮಿ (40) ಹೆಂಡತಿ ಹಾಗು ಇಬ್ಬರು ಮಕ್ಕಳೊಂದಿಗೆ ಗ್ರಾಮದಲ್ಲಿಯೇ ವಾಸವಾಗಿದ್ದ ಇತ್ತಿಚಿಗೆ ಗಂಡ ಹೆಂಡತಿ ನಡುವೆ ಅನ್ಯೊನ್ಯತೆ ಕಡಿಮೆಯಾಗಿ ಪತ್ನಿ ಕಾಣೆಯಾಗುತ್ತಾಳೆ, ಈ ಬಗ್ಗೆ ಗ್ರಾಮದಲ್ಲಿ ಹಲವಾರು ಉಹಾಪೋಹಗಳು ಹರಡುತ್ತವೆ,ನಂತರದ ಬೆಳವಣಿಗೆಯಲ್ಲಿ ಆಕೆ ಕೋಲಾರದ ಬಳಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿರುವುದಾಗಿ ಹೇಳುತ್ತಾರೆ,ಇತ್ತ ನಾರಯಣಸ್ವಾಮಿ ಬಗ್ಗೆ ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ಹಳೆಯ ಪ್ರಕರಣಕ್ಕೆ ಸಂಬಂದಿಸಿದಂತೆ ದೂರು ಇದ್ದು ಪೋಲಿಸರು ಕರೆದಾಗ ಠಾಣೆಗೆ ಹೋಗಿಬರುತ್ತಿದ್ದ, ಹೀಗೆ ಹಲವಾರು ರಿತಿಯಲ್ಲಿ ಮಾನಸಿಕವಾಗಿ ತೊಳಲಾಟಕ್ಕೆ ಸಿಲುಕಿದ್ದ ಆತ ತನ್ನ ಇಬ್ಬರು ಮಕ್ಕಳಾದ ಪವನ್ (12) ಮತ್ತು ನಿತಿನ್ (10) ವಿಷ ಕುಡಿಸಿ ತಾನು ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ ಎಂದು ಗ್ರಾಮಸ್ಥರು ಶಂಕೆ…
ಶ್ರೀನಿವಾಸಪುರ:ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿದ್ದ ಸವಾರರು ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಕಮತಂಪಲ್ಲಿ ಕ್ರಾಸ್ ನಲ್ಲಿ ನಡೆದಿರುತ್ತದೆ.ತಾಲೂಕಿನ ಕಡಪ- ಬೆಂಗಳೂರು ಹೆದ್ದಾರಿಯಲ್ಲಿ ತಾಡಿಗೋಳ್ ನಂತರದ ಕಮತಂಪಲ್ಲಿ ಕ್ರಾಸ್ ನಲ್ಲಿ ನಡೆದಿರುವ ಅಪಘಾತ ನಡೆದಿದ್ದು ಮೃತ ದುರ್ದೈವಿಗಳನ್ನು ತಾ.ಬೈರಗಾನಪಲ್ಲಿ ಗ್ರಾಮದ ಗೋಪಾಲಪ್ಪ(58) ಹಾಗು ಚಿಂತಾಮಣಿ ತಾ.ಕೊನಪ್ಪಲ್ಲಿ ನಿವಾಸಿ ವೆಂಕಟೇಶ್ (45) ಎಂದು ಗುರುತಿಸಲಾಗಿದೆ.ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿರುತ್ತದೆ.ಬೆಂಗಳೂರು ನೊಂದಣಿ ಹೊಂದಿರುವ ಮಾರುತಿ ಎಸ್ ಕ್ರಾಸ್ ಹೈಬ್ರಿಡ್ ನಿಲಿ ಬಣ್ಣದ ಕಾರು ಚಿಂತಾಮಣಿ ಕಡೆಗೆ ವೇಗವಾಗಿ ಹೋಗುತಿದ್ದು ಚಾಲಕನ ನಿಯಂತ್ರಣ ತಪ್ಪಿ ಚಿಂತಾಮಣಿಯಲ್ಲಿ ಸಂತೆ ಮುಗಿಸಿ ಬೈರಗಾನಪಲ್ಲಿಗೆ ಹೋರಟಿದ್ದ ಇಬ್ಬರಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿಯಾಗಿ ಅಪಘಾತ ನಡೆದಿದೆ ಎನ್ನುಲಾಗಿದ್ದು, ಡಿಕ್ಕಿಯಾದ ರಭಸಕ್ಕೆ ಕಾರು ಮತ್ತು ಸವಾರರ ಸಮೇತ ದ್ವಿಚಕ್ರ ವಾಹನ ಸುಮಾರು 15 ಅಡಿಗಳ ಆಳದ ಕಂದಕಕ್ಕೆ ಬಿದ್ದಿದ್ದು ಹಳ್ಳದಲ್ಲಿದ್ದ ಕಲ್ಲು ಬಂಡೆಗಳಿಗೆ ಬಡಿದು ದ್ವಿಚಕ್ರ ಸವಾರರು ಸ್ಥಳದ್ಲ್ಲೆ ಮೃತಪಟ್ಟಿರುತ್ತಾರೆ.ರಸ್ತೆ ಮಾರ್ಗ ಸೂಚಿ ಇಲ್ಲದ್ದೆ ಅಪಘಾತಕ್ಕೆ ಕಾರಣ!ಚಿಂತಾಮಣಿಯ ಮಾಡಿಕೆರೆ…