ಶೇ 50% ರಿಯಾಯತಿ ಧರದಲ್ಲಿ ಮಾರಾಟನಾನಾ ಕಂಪನಿಯ ತರಾವರಿ ಫ್ಯಾನ್, ಏರ್ ಕೂಲರ್7 ಸಾವಿರಕ್ಕೂ ಹೆಚ್ಚು ಬೆಲೆಯ ವಸ್ತುಗಳಿಗೆ ಸಾಲ ಶ್ರೀನಿವಾಸಪುರ:ಜನರನ್ನು ಕಾಡುತ್ತಿರುವ ಬಿರು ಬೆಸಿಗೆಯ ತಾಪದಿಂದ ಜನರನ್ನು ಕಾಪಾದಲು ಶ್ರೀನಿವಾಸಪುರದ ಸಾಯಿ-ರಜನಿ ಸಂಸ್ಥೆಯ ಶುಭಂ ಗೃಹಪಯೋಗಿ ವಸ್ತುಗಳ ಮಳಿಗೆಯಲ್ಲಿ ನಾನಾ ಕಂಪನಿಯ ಗಮನ ಸೆಳೆಯುವಂತ ತರಾವರಿ ಫ್ಯಾನ್, ಏರ್ ಕೂಲರ್,ಎಸಿ ವಸ್ತುಗಳ ರಿಯಾತಿ ಧರದ ಮೇಳ ಆಯೋಜಿಸಲಾಗಿದೆ. ಜನರ ಅವಶ್ಯಕತೆಗೆ ತಕ್ಕಂತೆ ಅನಕೂಲವಾದ ಫ್ಯಾನ್, ಏರ್ ಕೂಲರ್,ಎಸಿ ವಸ್ತುಗಳನ್ನು ರಿಯಾತಿ ಧರದಲ್ಲಿ ನೀಡಲು ಶುಭಂ ಗೃಹಪಯೋಗಿ ವಸ್ತುಗಳ ಮಳಿಗೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಮಾಲಿಕರು.ಭಾರತದಲ್ಲಿರುವ ಉನ್ನತ ಗುಣಮಟ್ಟದ ಬ್ರಾಂಡ್ ನ ಆಕರ್ಷಕ ಫ್ಯಾನ್,ಏರ್ ಕೂಲರ್,ಎಸಿ(ಹವಾನಿಂತ್ರಣ ಸಲಕರಣೆ) ವಸ್ತುಗಳ ಹಾಗೂ ಅಪರೂಪದ ಉಪಕರಣಗಳ ದೊಡ್ಡ ಸಂಗ್ರಹ ಒಂದೇ ಸೂರಿನಡಿ ಸಿಗಲಿದ್ದು ಖರೀದಿಗೆ ಉತ್ತಮ ವಾತವರಣ ಕಲ್ಪಿಸಿದ್ದು, ಜೊತೆಗೆ ಶೇ 50% ರಿಯಾಯತಿ ಧರದಲ್ಲಿ ಷರತ್ತುಗಳ ಅನ್ವಯದಂತೆ ಗ್ರಾಹಕರಿಗೆ ಮಾರಾಟಮಾಡಲಾಗುತ್ತಿದೆ.ಅವಶ್ಯಕತೆ ಇರುವಂತವರಿಗೆ 7 ಸಾವಿರಕ್ಕೂ ಹೆಚ್ಚು ಬೆಲೆಯ…
Author: Srinivas_Murthy
ಕೋಲಾರ:ಕೋಲಾರ ಮೀಸಲು ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಮಲ್ಲೇಶ್ ಬಾಬು ಹೆಸರು ಫೈನಲ್ ಆಗುತ್ತಿದ್ದಂತೆ ರಾಜಕೀಯ ತಂತ್ರ-ಪ್ರತಿತಂತ್ರ ಜೋರಾಗುತ್ತಿದೆ. ಕಡಾಕಂಡಿತವಾಗಿ ಕೋಲಾರ ಕ್ಷೇತ್ರವನ್ನು ಗೆಲ್ಲಲು ಮೈತ್ರಿ ಕೂಟದಲ್ಲಿ ಕಸರತ್ತು ಶುರುವಾಗಿದೆ ಇದಕ್ಕಾಗಿ ಕೋಲಾರ ಎನ್‌ಡಿಎ ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಇಂದು ಕೋಲಾರದಲ್ಲಿ ಹಾಲಿ ಬಿಜೆಪಿ ಸಂಸದ ಮುನಿಸ್ವಾಮಿ ಮನೆಗೆ ಭೇಟಿನೀಡಿ ಬೆಂಬಲಿಸುವಂತೆ ಕೋರಿದರು.ಕೋಲಾರ ನಗರದ ಎಸ್ ಜಿ ಲೇಔಟ್ ನಲ್ಲಿರುವ ಮುನಿಸ್ವಾಮಿ ಮನೆಗೆ ಭೇಟಿ ನೀಡಿದ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬುಸಂಸದ ಮುನಿಸ್ವಾಮಿಗೆ ಶಾಲು ಹೊದಿಸಿ ಸನ್ಮಾನಿಸಿ ಚುನಾವಣೆಯಲ್ಲಿ ಸಹಾಯ ಮಾಡುವಂತೆ ಹಾಲಿ ಸಂಸದರನ್ನು ಕೋರಿದರು. ಇದಕ್ಕೆ ಪ್ರತಿಯಾಗಿ ಸಂಸದ ಮುನಿಸ್ವಾಮಿ ಮಲ್ಲೇಶ್ ಅವರಿಗೆ ಸಿಹಿ ತಿನ್ನಿಸಿ ಶುಭಾಶಯ ಕೋರಿದರು.ಈ ಸಂದರ್ಭದಲ್ಲಿ ಶ್ರೀನಿವಾಸಪುರ ಶಾಸಕ ಹಾಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ವೆಂಕಟಶಿವಾರೆಡ್ಡಿ,ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್, ಎಂ.ಎಲ್.ಸಿ ಗೋವಿಂದರಾಜು,ಚಿಂತಾಮಣಿ ಮಾಜಿ ಶಾಸಕ ಜೆ.ಕೆ ಕೃಷ್ಣಾರೆಡ್ಡಿ,ಕೋಲಾರ ಸಿಎಂಆರ್ ಶ್ರೀನಾಥ್,ಕೋಚಿಮುಲ್ ನಿರ್ದೇಶಕ ವಡಗೂರು ಹರೀಶ್, ಮುಂತಾದವರು ಇದ್ದರು. ಸಿಎಂಆರ್ ಮನೆಯಲ್ಲಿ ಜೆಡಿಎಸ್…
ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗು ಸಚಿವ ಕೆ.ಎಚ್. ಮುನಿಯಪ್ಪ ಬಣಗಳ ನಡುವಿನ ಜಗಳದ ಪರಿಣಾಮ ಕೋಲಾರ ಮೀಸಲು ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಹೈಕಮಾಂಡ್ ಅಚ್ಚರಿ ಅಭ್ಯರ್ಥಿ ಹೆಸರನ್ನು ಪ್ರಕಟಿಸಿದೆ. ಬೆಂಗಳೂರು ಪಾಲಿಕೆ ಮಾಜಿ ಮೇಯರ್ ವಿಜಯಕುಮಾರ್ ಪುತ್ರ ಹಾಗು ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರುವ ಗೌತಮ್ ಅವರನ್ನು ಕಣಕ್ಕಿಳಿಸಲು ಪಕ್ಷ ತೀರ್ಮಾನಿಸಿದೆ. ಈ ಬಗ್ಗೆ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಬಿಡುಗಡೆ ಮಾಡಿರುವ ಪತ್ರದಲ್ಲಿ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸಲು ಕೆ.ವಿ. ಗೌತಮ್ ಅವರಿಗೆ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಒಪ್ಪಿಗೆ ಸೂಚಿಸಿದೆ ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಇದರೊಂದಿಗೆ ರಾಜ್ಯದ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಪ್ರಕಟಿಸಿದ್ದಂತಾಗಿದೆ ಬಾಕಿ ಇದ್ದ ನಾಲ್ಕು ಕ್ಷೇತ್ರಗಳ ಪೈಕಿ ಬಳ್ಳಾರಿ, ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರಕ್ಕೆ ಶುಕ್ರವಾರ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು ಕೋಲಾರ ಕ್ಷೇತ್ರದ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣಗಳ ನಡುವಿನ…
ಕೋಲಾರ ಟಿಕೆಟ್ ಹಂಚಿಕೆ ಬೀದಿಗೆ ಬಂದ ಬಣ ಜಗಳ ಟ್ರಬಲ್ ಶೂಟರ್ ಶಿವಕುಮಾರ್ ಅಂಗಳಕ್ಕೆ ಶಿವಕುಮಾರ್ ನಿರ್ಧಾರದತ್ತ ಕಾರ್ಯಕರ್ತರು ಜೆಡಿಎಸ್ ಕೊನೆ ಕ್ಷಣದಲ್ಲಿ ಅಭ್ಯರ್ಥಿ ಬದಲಾವಣೆ ಕೋಲಾರ:ಕೋಲಾರ ಜಿಲ್ಲಾ ಕಾಂಗ್ರೆಸ್ ಪಕ್ಷದ ಬಣಗಳ ನಡುವಿನ ಕಿತ್ತಾಟದಿಂದ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರ ಇದು ವರಿಗೂ ಬಗೆಹರಿದಿಲ್ಲ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಗುರುವಾರದಿಂದ ಆರಂಭವಾಗಲಿದ್ದರು ಕೋಲಾರ ಬಿಜೆಪಿ ಅಭ್ಯರ್ಥಿ ಅಯ್ಕೆ ಹೈಕಮಾಂಡ್‌ಗೆ ಬಿಸಿ ತುಪ್ಪವಾಗಿದೆ ಮುನಿಯಪ್ಪ-ರಮೇಶ್‌ಕುಮಾರ್ ಬಣಗಳ ನಡುವಿನ ತಿಕ್ಕಾಟ ಜೋರಾಗಿದ್ದು, ಒಂದು ಬಣದ ಪರ ಅಭ್ಯರ್ಥಿಗೆ ಟಿಕೆಟ್ ಸಿಕ್ಕರೆ ಮತ್ತೊಂದು ಬಣ ವಿರೋಧವಾಗಿ ಕೆಲಸ ಮಾಡುವ ಸಾಧ್ಯತೆಗಳಿವೆ. ಸಚಿವ ಕೆ.ಹೆಚ್.ಮುನಿಯಪ್ಪ ಕುಟುಂಬಕ್ಕೆ ಕಾಂಗ್ರೆಸ್ ಟಿಕೆಟ್ ನೀಡುವುದಕ್ಕೆ ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಶಾಸಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕೋಲಾರ ಭಾಗದ ಕಾಂಗ್ರೆಸ್ ಶಾಸಕರು, ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ಬಗ್ಗೆ ನಡೆದಂತ ಹೈಡ್ರಾಮ ಕೋಲಾರ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರ ಕಾಂಗ್ರೆಸ್ ಪಕ್ಷದಲ್ಲಿ ಕೋಲಾಹಲವನ್ನೆ ಸೃಷ್ಟಿಸಿದಿಯಂತೆ…
ಕೋಲಾರ ಲೋಕಸಭಾ ಟಿಕೆಟ್ ವಿಚಾರ ಕಾಂಗ್ರೆಸ್‌ನಲ್ಲಿ ಬಿಗ್ ಹೈಡ್ರಾಮಾರಾಜೀನಾಮೆಗೆ ಮುಂದಾದ ನಾಲ್ವರು ಶಾಸಕರು, ಇಬ್ಬರು ಪರಿಷತ್ ಸದಸ್ಯರುಶಾಸಕರ ರಾಜೀನಾಮೆ ತಡೆದ ಕೋಲಾರ ಉಸ್ತುವಾರಿ ಸಚಿವ ಭೈರತಿ ಕೋಲಾರ:ಕೋಲಾರ ಕಾಂಗ್ರೆಸ್ ಟಿಕೆಟ್ ಹಂಚಿಕೆ ಕಾಂಗ್ರೆಸ್ ಹೈಕಮಾಂಡ್ ಗೆ ಬಗೆ ಹರಿಯದ ಕಗ್ಗಾಂಟಾಗಿ ಕಾಡುತ್ತಿದೆ ಇವತ್ತು ನಡೆದಂತ ಬೆಳವಣಿಗೆಯಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ ಕುಟುಂಬಕ್ಕೆ ಕಾಂಗ್ರೆಸ್ ಟಿಕೆಟ್ ನೀಡುವುದಕ್ಕೆ ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಶಾಸಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಕೋಲಾರ ಭಾಗದ ಕಾಂಗ್ರೆಸ್ ಶಾಸಕರು, ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲು ಮುಂದಾಗಿದ್ದು ಕೋಲಾರ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರ ಕಾಂಗ್ರೆಸ್ ಪಕ್ಷದಲ್ಲಿ ಕೋಲಾಹಲವನ್ನೆ ಸೃಷ್ಟಿಸಿದೆ, ಪಕ್ಷದೊಳಗೆ ಭುಗಿಲೆದ್ದಿರುವ ಅಸಮಾಧಾನ ಹೋಗಲಾಡಿಸಲು ಸ್ವತಃ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅಖಾಡಕ್ಕಿಳಿದ್ದಾರೆ.ಇವತ್ತು ರಾತ್ರಿ ಹೈವೋಲ್ಟೇಜ್ ಮೀಟಿಂಗ್ಟಿಕೆಟ್ ವಿಚಾರಕ್ಕೆ ಎರಡು ಬಣಗಳ ನಡುವಿನ ತಾರಕ್ಕೇರಿರುವ ಅಸಮಾಧಾನ ಬಗೆ ಹರೆಸಲು ಸಿಎಂ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಮಾರ್ಚ್ 27 ರಂದು ರಾತ್ರಿ ಹೈ ವೋಲ್ಟೇಜ್ ಮೀಟಿಂಗ್…
ಶ್ರೀನಿವಾಸಪುರ:ತಾಲೂಕಿನ ತಾಡಿಗೋಳ್ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವ ಮಂಗಳವಾರ ಸಡಗರದಿಂದ ನಡೆಯಿತು. ಸಾವಿರಾರು ಮಂದಿ ಪಾಲ್ಗೊಂಡು ರಥ ಎಳೆದರು.ಪಾಲ್ಗುಣ ಮಾಸದಲ್ಲಿ ನಡೆಯುವ ರಥೋತ್ಸವಕ್ಕೆ ದೊಡ್ದ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಧನ್ಯರಾದರು.ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು ಬಾಳೆಹಣ್ಣು ಧವನವನ್ನು ರಥಕ್ಕೆ ಅರ್ಪಿಸಿದರು. ದೇವಾಲಯದಲ್ಲಿ ವೀರಾಜಮಾನನಾದ ಶ್ರೀ ಲಕ್ಷ್ಮಿಸಮೇತ ನರಸಿಂಹಸ್ವಾಮಿ ದರ್ಶನ ಪಡೆದು ಪುನಿತರಾದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಮಾರ್ಚ್ 21 ರಿಂದ ಉತ್ಸವಗಳು ಆರಂಭಗೊಂಡು, ಮಾರ್ಚ್ 29ರವರೆಗೆ ನಡೆಯಲಿರುವ ಕಾರ್ಯಕ್ರಮಗಳು ಮಾರ್ಚ್ 21 ರಂದು ಗುರುವಾರ ಅಂಕುರಾರೋಹಣ ಮತ್ತು ಧ್ವಜಾರೋಹಣ ಹಾಗು ರಾತ್ರಿ ಸಿಂಹವಾಹನೋತ್ಸವ, 22 ಶುಕ್ರವಾರ ದಂದು ಹಗಲು ಶೇಷವಾಹನೋತ್ಸವ ರಾತ್ರಿಗೆ ಚಂದ್ರಪ್ರಭ ಉತ್ಸವ,ಮಾರ್ಚ್ 23 ರಂದು ಶನಿವಾರ ರಾತ್ರಿ ಗಜವಾಹನೋತ್ಸವ, ಮಾರ್ಚ್ 24 ರಂದು ಭಾನುವಾರ ಹಗಲು ಹನುಮಂತ ವಾಹನೋತ್ಸವ ರಾತ್ರಿಗೆ ಮೋಹಿನಿ ಉತ್ಸವ,ಮಾರ್ಚ್ 25 ರಂದು ಸೋಮವಾರ ಕಾಶಿಯಾತ್ರೆ ಹಾಗು ದೇವರಿಗೆ ಕಲ್ಯಾಣೋತ್ಸವ ರಾತ್ರಿಗೆ ಗರುಡೋತ್ಸವ,ಮಾರ್ಚ್ 26 ರಂದು ಮಂಗಳವಾರ ರಥೊತ್ಸವ ಅಖಂಡ ಭಜನೆ ಮೊದಲಾದ ಧಾರ್ಮಿಕ ಕಾರ‍್ಯಕ್ರಮಗಳು…
ನ್ಯೂಜ್ ಡೆಸ್ಕ್: ಬೆಂಗಳೂರು ವಕೀಲರ ಸಹಕಾರ ಸಂಘದ ಅಧ್ಯಕ್ಷರಾಗಿ ತಾಲೂಕಿನ ತಿನ್ನಲಿ ಗ್ರಾಮದ ಟಿ.ಎನ್.ಶಂಕರ್ ಆಯ್ಕೆಯಾಗಿದ್ದಾರೆ.ಬೆಂಗಳೂರು ವಕೀಲರ ಸಹಕಾರ ಸಂಘದ ನಿರ್ದೇಶಕರಾಗಿ ಎರಡನೆ ಬಾರಿಗೆ ಆಯ್ಕೆಯಾಗಿದ್ದ ಅವರು ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಪಡೆದು ಅಧ್ಯಕ್ಷರಾಗಿ ಅಯ್ಕೆಯಾಗಿದ್ದಾರೆ. ಟಿ.ಎನ್.ಶಂಕರ್ ವಕೀಲರ ಸಹಕಾರ ಸಂಘದ ಅಧ್ಯಕ್ಷರಾಗಿ ಅಯ್ಕೆಯಾಗಿರುವುದಕ್ಕೆ ಖುಷಿ ಹಾಗು ಹೆಮ್ಮೆ ತರುವಂತ ವಿಷಯವಾಗಿದೆ ಎಂದು ಯಲ್ದೂರು ನ್ಯಾಷನಲ್ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಬೆಂಗಳೂರಿನಲ್ಲಿ ಉದ್ಯಮಿ ಆಗಿರುವ ಲಕ್ಷ್ಮೀಸಾಗರ ಲೋಕನಾಥಗೌಡ ಶುಭಹಾರೈಸಿದ್ದಾರೆ. ಕೋಲಾರ ಹಾಲು ಒಕ್ಕೂಟದ ಮುಳಬಾಗಿಲು ನಿರ್ದೇಶಕ ಹಾಗು ಹೀರಿಯ ವಕೀಲ ಕಾಡೇನಹಳ್ಳಿ ನಾಗರಾಜಗೌಡ ವಕೀಲರ ಸಹಕಾರ ಸಂಘದ ಅಭಿವೃದ್ಧಿಗೆ ಶ್ರಮಿಸುವಂತೆ ಶುಭಕೋರಿದ್ದಾರೆ.
ಬೆಂಗಳೂರಿನ ಬ್ಯಾಡರಳ್ಳಿಯಲ್ಲಿ ಘಟನೆಜೀವ ಉಳಿಸಿದ ಪೋಲಿಸ್ ಶ್ರೀನಿವಾಸಪುರದವರು ನ್ಯೂಜ್ ಡೆಸ್ಕ್: ನೀರಿನ ತೊಟ್ಟಿಗೆ ಬಿದ್ದು ಪ್ರಾಣಾಪಯದಲ್ಲಿದ್ದ ಮಗುವೊಂದನ್ನು ಪೊಲೀಸ್ ಅಧಿಕಾರಿ ರಕ್ಷಿಸಿದ ಘಟನೆ ಬೆಂಗಳೂರು ನಗರದ ಮಾಗಡಿ ರಸ್ತೆ ಬ್ಯಾಡರಹಳ್ಳಿಯ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ನಡೆದಿದೆ.ಇವತ್ತು ದಿನ ಹೇಗಿದೆ ಅಂದರೆ ದೂರು ನೀಡಲು ಪೋಲಿಸ್ ಠಾಣೆಗೆ ಹೋದರೆ ಸಾರ್ವಜನಿಕರನ್ನು ಪೋಲಿಸರು ಸೌಜನ್ಯವಾಗಿ ಮಾತನಾಡುವ ಪರಿಸ್ಥಿತಿ ಇಲ್ಲದಂತ ವಾತವರಣ ಪೋಲಿಸ್ ಠಾಣೆಗಳಲ್ಲಿ ನಿರ್ಮಾಣವಾಗಿದೆ ಅಷ್ಟೊಂದು ಒತ್ತಡದಲ್ಲಿ ಪೋಲಿಸ್ ಇಲಾಖೆಯಲ್ಲಿ ಅಧಿಕಾರಿಗಳು ಪೋಲಿಸ್ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಇಂತಹ ಒತ್ತಡದಲ್ಲೂ ಪೋಲಿಸ್ ಅಧಿಕಾರಿಯೊಬ್ಬರು ಪ್ರಾಣಾಪಯದಲ್ಲಿದ್ದ ಮಗುವಿನ ಪ್ರಾಣ ಉಳಿಸಿ ಮಾನವೀಯತೆ ಮೆರೆದಿದ್ದಾರೆ.ಮಗು ಜೀವ ಉಳಿಸಿದ ಪೋಲಿಸ್ ಅಧಿಕಾರಿ ಶ್ರೀನಿವಾಸಪುರದವರುಮಗುವನ್ನು ಕಾಪಾಡಿದ ಪೋಲಿಸ್ ಅಧಿಕಾರಿ ಶ್ರೀನಿವಾಸಪುರ ತಾಲೂಕಿನ ಗೌವನಪಲ್ಲಿ ಪಂಚಾಯಿತಿಯ ಆದಿರಾಜಪಲ್ಲಿ ಗ್ರಾಮದ ಎ.ಆರ್. ನಾಗರಾಜ್ ಅವರು ಬೆಂಗಳೂರಿನ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆ ಪಿಎಸ್‌ಐ ಆಗಿದ್ದಾರೆ.ಮಗುವನ್ನು ರಕ್ಷಿಸಿದ್ದು ಹೇಗೆ?ಬ್ಯಾಡರಹಳ್ಳಿಯ ಬಿಇಎಲ್ ಲೇಔಟ್‌ನಲ್ಲಿ ಮಾರ್ಚ್ 6 ರಂದು ಮಧ್ಯಾಹ್ನನದ ವೇಳೆ ಮಗು ನೀರಿನ ಸಂಪಿನಲ್ಲಿ ಬಿದ್ದಿದೆ ದಯವಿಟ್ಟು…
ಶ್ರೀನಿವಾಸಪುರ:ಪಟ್ಟಣದಲ್ಲಿ ನೆಲೆಸಿರುವ ಶ್ರೀ ಗಣೇಶ ಹಾಗು ಶ್ರೀ ಸತ್ಯನಾರಯಣಸ್ವಾಮಿ ಸಮೇತ ಶ್ರೀವರದ ಬಾಲಂಜನೇಯ ದೇವಾಲಯದ ಬ್ರಹ್ಮರಥೋತ್ಸವವು ಸೋಮವಾರ ಕಾಮನಹುಣ್ಣಿಮೆ ಅಥಾವ ಹೋಳಿಹುಣ್ಣಿಮೆಯಂದು ಭಕ್ತ ಸಾಗರದ ನಡುವೆ ಸಂಭ್ರಮ ಸಡಗರದಿಂದ ನೇರವೇರಿತು.ಪ್ರತಿ ವರ್ಷ ಪಾಲ್ಗುಣ ಮಾಸದ ಹೋಳಿಹುಣ್ಣಿಮೆಯಂದು ಬ್ರಹ್ಮರಥೋತ್ಸವ ನಡೆಯುತ್ತದೆ. ಅದರಂತೆ ಸೋಮವಾರ ನಡೆದ ಬ್ರಹ್ಮರಥೋತ್ಸವ ಕಾರ‍್ಯಕ್ರಮದಲ್ಲಿ ಸಾವಿರಾರು ಭಕ್ತರು ಭಕ್ತಿ ಶ್ರದ್ದೆಯಿಂದ ಹನುಮಂತ ದೇವರಿಗೆ ಜೈಕಾರ ಹಾಕುತ್ತ ಗೋವಿಂದ ನಾಮಗಳನ್ನು ಹೇಳುತ್ತ,ಪರಂಪರೆಯಂತೆ ಬಾಳೆಹಣ್ಣು,ಧವನವನ್ನು ರಥಕ್ಕೆ ಎಸೆದು ರಥೋತ್ಸವದ ಮೆರಗನ್ನ ಹೆಚ್ಚಿಸಿ,ರಥವನ್ನು ಎಳೆದು ಧನ್ಯರಾದರು.ನಂತರದಲ್ಲಿ ಭಕ್ತರು ತೇರಿನ ಚಕ್ರಕ್ಕೆ ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು.ಮುಂಜಾನೆಯೆ ದೇವರ ಕೈಂಕರ್ಯ ಆರಂಭಮುಂಜಾನೆಯೆ ದೇವಾಲಯದಲ್ಲಿ ಕಳಶ ಸ್ಥಾಪಿಸಿ ವೇದ ಮಂತ್ರ ಪಾರಾಯಣ ಮಾಡಿ ಮೂಲ ವಿಗ್ರಹಗಳಿಗೆ ಜಲಾಭಿಷೇಕ, ಪಂಚಾಮೃತ ಅಭಿಷೇಕಾಧಿಗಳನ್ನು ನೇರವೇರಿಸಿ,ಕುಂಕುಮಾರ್ಚನೆ,ವಿಶೇಷ ಹೂವಿನ ಅಲಂಕಾರ ಹಾಗೂ ಆಭರಣ ಅಲಂಕಾರ ಮಾಡಲಾಗಿದ್ದು ಸರತಿ ಸಾಲಿನಲ್ಲಿ ಬಂದಂತ ಭಕ್ತರಿಗೆ ದೇವರ ದರ್ಶನದ ವ್ಯವಸ್ಥೆ ಮಾಡಲಾಗಿತ್ತು.ಭಾನುವಾರ ಸಂಜೆ ದೇವಾಲಯದ ಆವರಣದಲ್ಲಿ ನಡೆದ ಶ್ರೀ ಸೀತಾರಾಮರ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲೂ ಜನರು ಭಕ್ತಿಯಿಂದ ಪಾಲ್ಗೊಂಡಿದ್ದರು.ರಥಕ್ಕೆ…
ಶ್ರೀನಿವಾಸಪುರ: ಕಾಂಗ್ರೆಸ್ ಮುಖಂಡ ದಲಿತ ನಾಯಕ ಶ್ರೀನಿವಾಸನ್ ಕೊಲೆ ಆರೋಪದಲ್ಲಿ ಬಂದಿತರಾಗಿರುವಂತ ವ್ಯಕ್ತಿಗಳ ಸಂಬಂಧಿಕರು ಜಗಜೀವನ ಪಾಳ್ಯದಲ್ಲಿ ನಮ್ಮೊಂದಿಗೆ ವಾಸಿಸುವುದು ಬೇಡ ಎಂದು ಜಗಜೀವನ ಪಾಳ್ಯ ಮತ್ತು ದಯಾನಂದ ರಸ್ತೆ ನಿವಾಸಿಗರು ಪೋಲಿಸರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿರುತ್ತಾರೆ.ಶ್ರೀನಿವಾಸನ್ ಅವರ ಕೊಲೆ ಆರೋಪದಲ್ಲಿ ಬಂದಿತರಾಗಿರುವ ವ್ಯಕ್ತಿಗಳ ಕುಟುಂಬಗಳ ಸದಸ್ಯರು ಹಾಗು ಬಂಧುಗಳು ಕೊಲೆಯಾದ ನಂತರದಲ್ಲಿ ಪರಾರಿಯಾಗಿದ್ದರು ದಿನಗಳದಂತೆ ಇತ್ತಿಚಿಗೆ ಕೆಲವರು ಒಬ್ಬೊಬ್ಬರಾಗಿ ಬರುತ್ತಿದ್ದು ಅವರಿಂದ ವಾರ್ಡ್ ನಂ 20 ರ ಜಗಜೀವನ ಪಾಳ್ಯ ಮತ್ತು ದಯಾನಂದ ರಸ್ತೆಯ ಜನರ ನಡುವೆ ಸೌಹಾರ್ದತೆ ಕದಡುತ್ತದೆ ಮತ್ತು ಕೊಲೆ ಕುರಿತಂತೆ ಪ್ರತ್ಯಕ್ಷ ಸಾಕ್ಷಿ ಗಳಿಗೆ ಮತ್ತು ಅವರ ಸಂಬಂಧಿಕರಿಗೆ ಅಪಾಯ ಆಗುವಂತ ಆತಂಕದ ಪರಿಸ್ಥಿತಿ ಏರ್ಪಡುತ್ತಿದ್ದು ಕೊಲೆ ಆರೋಪಿಯ ಸಂಬಂದಿಕರು ಜಗಜೀವನ ಪಾಳ್ಯ ಹಾಗೂ ದಯಾನಂದ ಭಾಗದಲ್ಲಿ ಬರುವುದು ಒಡಾಡುವುದು ಬೇಡ ಮತ್ತು ಅವರು ಇಲ್ಲಿ ಇರಲು ಅವಕಾಶ ಮಾಡಿಕೊಡಬಾರದು ಈ ಬಗ್ಗೆ ಪೋಲಿಸರು ಮದ್ಯಸ್ಥಿಕೆ ವಹಿಸಿ ಅವರಿಗೆ ತಿಳುವಳಿಕೆ ಮೂಡಿಸಬೇಕು ಎಂದು ಒತ್ತಾಯಿಸಿ…