ಶಿಕ್ಷಕಿ ವೀಣಾ ಅಮಾನತ್ತು ಮಾಡಿರುವ ಶಿಕ್ಷಣ ಇಲಾಖೆಶ್ರೀನಿವಾಸಪುರ:ಶಾಲ ಶಿಕ್ಷಕರ ನಡುವೆ ಸಾಮರಸ್ಯ ಇಲ್ಲದೆ ಸರ್ಕಾರಿ ಶಾಲೆಯೊಂದು ಶೈಕ್ಷಣಿಕವಾಗಿ ಸೊರಗುತ್ತಿದೆ ಎಂದು ದಳಸನೂರು ಗ್ರಾಮಸ್ಥರು ಆರೋಪಿಸಿರುತ್ತಾರೆ. ಇಲ್ಲಿನ ಶಿಕ್ಷಕರಲ್ಲಿ ಹೊಂದಾವಣಿಕೆ ಇಲ್ಲದೆ ಸರ್ಕಾರಿ ಶಾಲೆಯಲ್ಲಿ ಒಂದೆ ದಿನ 18 ವಿಧ್ಯಾರ್ಥಿಗಳು ವರ್ಗಾವಣೆ ತಗೆದುಕೊಂಡು ಹೊಗಿದ್ದಾರೆ ಇದರಿಂದ ಶಾಲೆ ಮುಚ್ಚುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಪೋಷಕರು ಮತ್ತು ಎಸ್ ಡಿ ಎಂ ಸಿ ಆಡಳಿತ ಮಂಡಳಿ ಸದಸ್ಯರು ಕಳಕಳ ವ್ಯಕ್ತಪಡಿಸುತ್ತಿದ್ದಾರೆ.ತಾಲೂಕಿನ ಕಸಬಾ ಹೋಬಳಿ ದಳಸನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ ವಿಧ್ಯಾರ್ಥಿಗಳು ಐಎ ಎಸ್, ಐಪಿಎಸ್ ಹಾಗು ಕೆ ಎ ಎಸ್ ಸೇರಿದಂತೆ ರಾಜ್ಯ ಮಟ್ಟದ ಅಧಿಕಾರಿಗಳಾಗಿದ್ದಾರೆ ಆದರೆ ಇಂದು ಶಾಲೆಯ ಪರಿಸ್ಥಿತಿ ಶೋಚನಿಯ ಮಟ್ಟ ತಲುಪಿದೆ ಎಂದು ಗ್ರಾಮಸ್ಥರು ಅಲವತ್ತುಕೊಳ್ಳುತ್ತಾರೆ.ಹಿಂದೆಲ್ಲ ನ್ಯಾಯ ಪಂಚಾಯಿತಿ ನಡೆದಿತ್ತುಇಲ್ಲಿರುವ ಆರು ಮಂದಿ ಶಿಕ್ಷಕರ ನಡುವೆ ಸಾಮರಸ್ಯ ಕೊರತೆ ಇಂದು ನಿನ್ನೆಯದಲ್ಲ ಈ ಹಿಂದೆ ಹಲವಾರು ಬಾರಿ ಇಂತಹ ಪರಿಸ್ಥಿತಿ ನಿರ್ಮಾಣ ಆದಾಗ ಎಸ್.ಡಿ.ಎಂ…
Author: Srinivas_Murthy
ಬಂಗಾರಪೇಟೆ:ಭಾರತದ ಖ್ಯಾತ ನೃತ್ಯ ನಿರ್ದೇಶಕ ನಟ ನಿರ್ಮಾಪಕ ಇಂಡಿಯನ್ ಮೈಕಲ್ ಜಾಕ್ಸನ್ ಎಂದು ಹೆಸರು ಪಡೆದಿರುವ ಕರ್ನಾಟಕದವರೆ ಆದ ಪ್ರಭುದೇವ ಕೋಲಾರ ಜಿಲ್ಲೆಯ ಬಂಗಾರಪೇಟೆ ಹತ್ತಿರ ಜೀಯೋನಿ ಗಾಲ್ಫ್ ಕ್ಲಭ್ ಬಳಿ ವಿಲ್ಲಾ ಖರಿದಿಸಿದ್ದು ಈ ಸಂಬಂಧ ಬಂಗಾರಪೇಟೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿ ಜಮೀನು ನೊಂದಣಿ ಪ್ರಕ್ರಿಯೆ ಮುಗಿಸಿ ಹೋಗಿದ್ದಾರೆ.ತಲೆಗೆ ಕ್ಯಾಪ್ ಧರಿಸಿ ಮುಖಕ್ಕೆ ಸ್ಕಾರ್ಪ್ ಹಾಕಿಕೊಂಡು ಬಂದ ಪ್ರಭುದೇವಕನ್ನಡದ ನಟ ಪ್ರಭುದೇವ ಬಂಗಾರಪೇಟೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಲು ತಮ್ಮನ್ನು ಜನತೆ ಗುರುತು ಹಿಡಿಯಬಾರದು ಎಂದು ತಲೆಗೆ ಕ್ಯಾಪ್ ಧರಿಸಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದರಾದರೂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೊಂದಣಿ ಪ್ರಕ್ರಿಯೆಲ್ಲಿ ತೊಡಗಿದ್ದಾಗ ಜನರು ಗುರುತು ಹಿಡಿದು ಪ್ರಚಾರವಾಗಿ ಸಾಕಷ್ಟು ಸಂಖ್ಯೆಯಲ್ಲಿ ಜನ ಜಮಾವಣೆ ಗೊಂಡ ಪರಿಣಾಮ ಒಂದಷ್ಟು ಜನರಿಗೆ ಸೆಲ್ಫಿ ನೀಡಿ ಜನ ಜಂಗುಳಿ ಮಧ್ಯದಿಂದ ಕಾರಿನತ್ತ ತೆರಳಿ ಕಾರು ಏರಿ ಹೋಗಿದ್ದಾರೆ. ವಿಶೇಷ ಏನು ಅಂದ್ರೆ, ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದ ಪ್ರಭುದೇವ ಜೊತೆಗೆ…
ಮೈತ್ರಿ ಕೂಟದಲ್ಲಿ ಬಿರಕು!ತ್ರಿಕೋನ ಸ್ಪರ್ದೆ ಇರುತ್ತದ?ಕಾಂಗ್ರೆಸ್ ಅಭ್ಯರ್ಥಿ ಫೈನಲ್ ಆಗಿಲ್ಲ. ಕೋಲಾರ:ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಯಾವ ಪಕ್ಷವೂ ಅಭ್ಯರ್ಥಿಯನ್ನು ಫೈನಲ್ ಮಾಡಿಲ್ಲ ಎನ್ನಲಾಗುತ್ತಿದೆ ಆರಂಬಂದಿದಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿರುವ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಹೊರತು ಪಡಿಸಿದರೆ ಉಳಿದ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ನಿರಂತರವಾಗಿ ಚುನಾವಣೆ ಗೆದ್ದಿರುತ್ತಾರೆ. ಹಾಗಾಗಿ ಕೋಲಾರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಬದ್ರಕೋಟೆ ಎನ್ನಬಹುದು. 1984 ರಲ್ಲಿ ಜನತಾ ಪಕ್ಷದ ಅಭ್ಯರ್ಥಿ ವಿ.ವೆಂಕಟೇಶ್ ಹಾಗು ಕಳೆದ 2019 ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಗೆದ್ದಿದ್ದು ಹೊರತು ಪಡಿಸಿದರೆ ಬಹುತೇಕ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿರುವುದು ಇಲ್ಲಿ ಇತಿಹಾಸ.1952 ರಲ್ಲಿ ದೊಡ್ಡತಿಮ್ಮಯ್ಯ ಎನ್ನುವ ಕಾಂಗ್ರೆಸ್ ಅಭ್ಯರ್ಥಿ ಗೆಲವಿನಿಂದ ಆರಂಭವಾದ ಕಾಂಗ್ರೆಸ್ ವಿಜಯ 1957,1962 ಮೂರು ಅವಧಿಗೆ ಸಂಸದರಾಗಿದ್ದರು ನಂತರ 1967 ರಲ್ಲಿ ಗೆಲವು ಸಾಧಿಸಿದ ಜಿವೈ ಕೃಷ್ಣನ್ 1971,1977,1980 ನಾಲ್ಕು ಬಾರಿ ಸಂಸದರಾಗಿದ್ದರು ನಂತರದಲ್ಲಿ ಜಿವೈ ಕೃಷ್ಣನ್ ವಿರುದ್ದ ಸ್ಚಪಕ್ಷೀಯರೆ ಅಸಮಧಾನಗೊಂಡ ಪರಿಣಾಮ 1984 ರಲ್ಲಿ ಜನತಾ…
ಶ್ರೀನಿವಾಸಪುರ:ನೀತಿ ಸಂಹಿತೆ ಜಾರಿಯಾಗಿರುವ ಹಿನ್ನಲೆಯಲ್ಲಿ ಗ್ರಾಮದಲ್ಲಿ ಕಟ್ಟಿದ್ದ ಕೇಸರಿ ಧ್ವಜ,ಫ್ಲೆಕ್ಸ್ ಬಂಟಿಕ್ಸ್ ಗಳನ್ನು ಪಂಚಾಯತಿ ಸಿಬ್ಬಂದಿ ತೆರವು ಗೊಳಿಸಿ ಅವುಗಳನ್ನು ಗ್ರಾಮದ ಸ್ಮಶಾನದಲ್ಲಿ ಎಸೆದು ಉದ್ದಟತನ ಮೆರೆದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಗ್ರಾಮದ ಮನೆಗಳ ಮೇಲೆ ಕಟ್ಟಿದ್ದ ಕೇಸರಿ ಧ್ವಜ ರಾಮನ ಭಾವಚಿತ್ರದ ಪ್ಲೆಕ್ಸ್ಗಳನ್ನು ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ಶನಿವಾರ ತರಾತುರಿಯಲ್ಲಿ ತೆರವು ಮಾಡಿದ ಪಂಚಾಯಿತಿ ಸಿಬ್ಬಂದಿ ಸ್ಮಶಾನಕ್ಕೆ ಎಸೆದಿದ್ದಾರೆ ಎಂದು ತಾಲೂಕಿನ ಅಡ್ಡಗಲ್ ಪಂಚಾಯತಿ ಗ್ರಾಮಸ್ಥರು ಆರೋಪಿಸಿದ್ದಾರೆ.ಗ್ರಾಮದಲ್ಲಿ ಕೇಸರಿ ಧ್ವಜ,ಫ್ಲೆಕ್ಸ್ ಬಂಟಿಕ್ಸ್ ತೆರವು ವಿಚಾರ ರಾದ್ದಾಂತವಾಗುತ್ತಿದ್ದಂತೆ ಗೌವನಪಲ್ಲಿ ಠಾಣ ಪೋಲಿಸರು ತಕ್ಷಣ ಗ್ರಾಮಕ್ಕೆ ಆಗಮಿಸಿ ಪಂಚಾಯಿತಿ ಅಧಿಕಾರಿ ಹಾಗು ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ಕೂರಿಸಿ ಮಾತನಾಡಿ ಸ್ಮಶಾನಕ್ಕೆ ಎಸೆದಿದ್ದ ಧ್ವಜ,ಫ್ಲೆಕ್ಸ್ ಬಂಟಿಕ್ಸ್ ಗಳನ್ನು ಅಲ್ಲಿಂದ ತೆರವು ಮಾಡಿ ಗ್ರಾಮಸ್ಥರ ಸಲಹೆಯಂತೆ ನೀರಿನಲ್ಲಿ ವಿಸರ್ಜಿಸಲು ಸೂಚಿಸಿದ್ದಾಗಿ ಪೋಲಿಸರು ಹೇಳುತ್ತಾರೆ.ತೆರುವಿಗೆ ಎರಡು ತಿಂಗಳು ಬೇಕಾಯಿತ?ಇವುಗಳನ್ನು ತೆರವು ಮಾಡಲು ಗ್ರಾಮ ಪಂಚಾಯತಿ ಸಿಬ್ಬಂದಿಗೆ ಎರಡು ತಿಂಗಳು ಬೇಕಾಯಿತ ಎಂದು…
ಶ್ರೀನಿವಾಸಪುರ:ಕರ್ನಾಟಕದ ಬಹುತೇಕ ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಫೈನಲ್ ಮಾಡಿದ್ದಾಗಿದೆ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಎನ್.ಡಿ.ಎ ಅಭ್ಯರ್ಥಿ ಇನ್ನೂ ಫೈನಲ್ ಆಗದೆ ದಿನಕ್ಕೊಂದು ಸುದ್ಧಿ ಹೊರ ಬಿಳುತ್ತಿದೆ ಇನ್ನೇನೂ ಕೆಲವೆ ಗಂಟೆಗಳ ಅವಧಿಯಲ್ಲಿ ಚುನಾವಣೆ ದಿನಾಂಕ ಘೋಷಣೆ ಪ್ರಕಟನೆ ಹೊರಬಿಳುವ ಹೊತ್ತಿನಲ್ಲಿ ಅಭ್ಯರ್ಥಿ ಫೈನಲ್ ಆಗದೆ ಇರುವುದು ಜೆಡಿಎಸ್-ಬಿಜೆಪಿ ಕಾರ್ಯಕರ್ತರಲ್ಲಿ ತೀವ್ರ ಕೂತೂಹಲ ಮೂಡಿಸಿದೆ.ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಇರುವ ಎಂಟು ವಿಧಾನ ಸಭಾ ಕ್ಷೇತ್ರಗಳಾದ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮತ್ತು ಚಿಂತಾಮಣಿ ಹಾಗು ಕೋಲಾರ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳು ಕೋಲಾರ ವ್ಯಾಪ್ತಿಗೆ ಬರುತ್ತವೆ. ಶಿಡ್ಲಘಟ್ಟ,ಮುಳಬಾಗಿಲು,ಶ್ರೀನಿವಾಸಪುರ ಸೇರಿ ಮೂರು ವಿಧಾನ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ ಉಳಿದಂತೆ ಚಿಂತಾಮಣಿ,ಕೋಲಾರ,ಕೆ.ಜಿಎಫ್,ಬಂಗಾರಪೇಟೆ,ಮಾಲೂರು 5 ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ ಈ ಲೆಕ್ಕಾಚಾರದಲ್ಲಿ ಎನ್.ಡಿ.ಎ ಮೈತ್ರಿ ಅಭ್ಯರ್ಥಿ ಎನ್ನಲಾಗುತಿತ್ತು ಆದರೆ ದಿಡೀರ್ ಬೆಳೆವಣಿಗೆಯಲ್ಲಿ ಹಾಸನ ಮತ್ತು ಮಂಡ್ಯ ಎರಡು ಕ್ಷೇತ್ರಗಳು ಮಾತ್ರ ಜೆಡಿಎಸ್ ಗೆ ಉಳಿದಂತೆ ಕೋಲಾರ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ದೆ ಮಾಡುವ ಬಗ್ಗೆ…
ಶ್ರೀನಿವಾಸಪುರ:ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಪ್ರಮುಖ ಗುತ್ತಿಗೆದಾರ ರೋಣೂರು ಭಾಗದ ಪ್ರಭಾವಿ ಮುಖಂಡ ಮಾಜಿ ಪಂಚಾಯಿತಿ ಅಧ್ಯಕ್ಷ ರೋಣೂರುಚಂದ್ರಶೇಖರ್ ಶ್ರೀನಿವಾಸಪುರ ಮಂಡಲದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ರೋಣೂರುಚಂದ್ರಶೇಖರ್ ಬಿಜೆಪಿಯಲ್ಲಿ ಸಕ್ರಿಯರಾಗಿದ್ದರು ಅರಣ್ಯ ತೆರವು ಕಾರ್ಯಚರಣೆ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ ನಡೆಸಿದ ಹೋರಾಟಕ್ಕೆ ರೈತರನ್ನು ಒಗ್ಗೂಡಿಸಿ ಸರ್ಕಾರದ ವಿರುದ್ದ ಪರಣಾಮಕಾರಿಯಾಗಿ ಹೋರಾಟಮಾಡಲು ಸಂಸದರಿಗೆ ಸಾತ್ ನೀಡಿದ್ದರು ಈ ಎಲ್ಲಾ ಬೆಳವಣಿಗೆಯ ಹಿನ್ನಲೆಯಲ್ಲಿ ಅವರ ಕ್ರೀಯಾಶಿಲ ರಾಜಕಾರಣವನ್ನು ಗುರುತಿಸಿ ಅವರಿಗೆ ಬಿಜೆಪಿ ತಾಲೂಕು ಅಧ್ಯಕ್ಷ ಪದವಿ ಜವಾಬ್ದಾರಿ ನೀಡಿದೆ ಎನ್ನುತ್ತಾರೆ ರೋಣೂರುಚಂದ್ರು ಅಭಿಮಾನಿಗಳು.ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ,ವಿಧಾನಪರಿಷತ್ ಸದಸ್ಯ ವೈ.ಎ.ನಾರಯಣಸ್ವಾಮಿ,ಕೋಲಾರ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್,ತಾಲೂಕು ಉಪಾಧ್ಯಕ್ಷ ನಲ್ಲಪಲ್ಲಿರೆಡ್ಡೆಪ್ಪ ಹಾಗು ರೈತ ಮೊರ್ಚಾ ಮುಖಂಡ ಚಿರುವುನಹಳ್ಳಿಲಕ್ಷ್ಮಣಗೌಡ ಮುಂತಾದವರು ಇದ್ದರು. ಪದಗ್ರಹಣ ಕಾರ್ಯಕ್ರಮದಲ್ಲಿ ತಾಲೂಕು ವಕ್ಕಲಿಗರ ಸಂಘದ ವೇಣುಗೋಪಾಲರೆಡ್ಡಿ,ನಿಲಟೂರುಚಿನ್ನಪ್ಪರೆಡ್ಡಿ,ಆನಂದರೆಡ್ಡಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪಧಾಧಿಕಾರಿಗಳು ಮತ್ತು ಪ್ರಸನ್ನಕುಮಾರ್ ಅವರು ನೂತನ…
ನ್ಯೂಜ್ ಡೆಸ್ಕ್:ಪ್ರೀತಿಗೆ ಜಾತಿ, ಧರ್ಮ,ಭಾಷೆ,ಪ್ರಾದೇಶಿಕತೆ ಖಂಡಗಳು ಯಾವುದು ಅಡ್ಡಿಯಾಗುವುದಿಲ್ಲ, ಪ್ರೇಮಿಗಳು ಪ್ರೀತಿಯನ್ನು ಗೆಲ್ಲಲು ಎಂತಹ ಕಷ್ಟ ಕೋಟಲೆಗಳನ್ನು ಎದುರಿಸಲು ಸಿದ್ಧವಾಗುತ್ತಿದ್ದ ಕಾಲವೊಂದಿತ್ತು, ಈಗ ಹೈಟೆಕ್ ಯುಗ ತಮ್ಮ ಪ್ರೀತಿಯನ್ನು ಪೋಷಕರಿಗೆ ತಿಳಿಸಿ ಅವರನ್ನು ಒಪ್ಪಿಸಿ ಮದುವೆಯಾಗುವಂತ ಕಾಲ ನಡೆಯುತ್ತಿದೆ, ಇಂತಹ ಪ್ರಯತ್ನದಲ್ಲಿ ಆಂಧ್ರದ ಯುವತಿಯೊಬ್ಬಳು ತನ್ನ ಖಂಡಾಂತರದಾಚಗಿನ ಪ್ರೀತಿಯನ್ನು ಹಿರಿಯರಿಗೆ ತಿಳಿಸಿ ಅವರ ಮನವೊಲಿಸಿ.ಮದುವೆಯಾಗಿದ್ದಾಳೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ಅಮ್ಮಾಯಿ ಅಮೇರಿಕಾದ ಅಬ್ಬಾಯಿ ಹಿಂದು ಸಂಪ್ರದಾತದಂತೆ ಮದುವೆಯಾದ ಅಪರೂಪದ ಘಟನೆ ನಡೆದಿದೆ.ಪಲಮನೇರು ಪಟ್ಟಣದ ಸಾಯಿನಗರದ ಪಂಚಾಯಿತಿ ಅಧಿಕಾರಿ ಭಾಸ್ಕರ್ ಮತ್ತು ಶಿಕ್ಷಕಿ ಸುಮಲತಾ ರೆಡ್ಡಿ ದಂಪತಿಯ ಪುತ್ರಿ ರೇವೂರಿ ಮೀನಾ ನಾಲ್ಕು ವರ್ಷಗಳಿಂದ ಅಮೆರಿಕ ದೇಶದ ಮಿಚಿಗನ್ ರಾಜ್ಯದ ನಗರದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾಳೆ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅಮೇರಿಕಾ ದೇಶದ ವಾಟರ್‌ಪೋರ್ಟ್ ಟೌನ್‌ನ ಬ್ರಾಡ್ಲಿ ಟೆರ್ರಿ ಎಂಬ ಯುವಕನೊಂದಿಗೆ ಲವ್ ಆಗಿದೆ ನಂತರದಲ್ಲಿ ಪ್ರೀತಿ ಮ್ರೇಮಾಂಕುರವಾದಾಗಿ ಮೀನಾ ತನ್ನ ಹೆತ್ತವರಿಗೆ ವಿಷಯ ಮುಟ್ಟಿಸಿದ್ದಾಳೆ ಇದಾದ…
ಶ್ರೀನಿವಾಸಪುರ:ರಾಜ್ಯದಲ್ಲಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಹಿತ ಕಾಪಾಡುವುದರಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದ್ದು,ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ತು ಸದಸ್ಯ ವೈ.ಎ.ನಾರಾಯಣಸ್ವಾಮಿ ಆರೋಪಿಸಿದರು.ಅವರು ಇಂದು ಶ್ರೀನಿವಾಸಪುರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಶಿಕ್ಷಣ ಕ್ಷೇತ್ರದಲ್ಲಿ ಅನಗತ್ಯ ಗೊಂದಲ ಸೃಷ್ಠಿಯಾಗುತ್ತಿದೆ,ಶಿಕ್ಷಕರ ವಿಚಾರದಲ್ಲಿ ಇಲ್ಲದ ಸಮಸ್ಯಗಳನ್ನು ಹುಟ್ಟುಹಾಕುತ್ತ ವ್ಯವಸ್ಥೆಯನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದೆ,ಸಂಸ್ಕಾರ ತಿಳುವಳಿಕೆ ಇಲ್ಲದಂತ ವ್ಯಕ್ತಿಯನ್ನು ಶಿಕ್ಷಣ ಮಂತ್ರಿ ಮಾಡಿರುವ ಸಿದ್ದರಾಮಯ್ಯ ಸರ್ಕಾರ ಶಿಕ್ಷಕಕರು,ವಿದ್ಯಾರ್ಥಿಗಳು,ಶಿಕ್ಷಣ ವ್ಯವಸ್ಥೆ ಹಾಗು ಶಿಕ್ಷಣ ಸಂಸ್ಥೆಗಳ ಕುರಿತಂತೆ ಅಸಹನೆ ಹಾಗು ನಿರ್ಲಕ್ಷ್ಯ ನಿಲವು ಹೊಂದಿದ್ದಾರೆ ಎಂದು ದೂರಿದರು.ರಾಜ್ಯದಲ್ಲಿ ಅಡಳಿತರೂಡ ಕಾಂಗ್ರೆಸ್ ಸರ್ಕಾರದ ಯೋಜನೆಗಳಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತಿದೆ,ರಾಜ್ಯದ ಅಭಿವೃದ್ದಿ ಕುಂಠಿತಗೊಂಡಿದೆ ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣ ಇರುವುದಿಲ್ಲ ಎಂದರು.ಶಿಕ್ಷಕರಿಗೆ ಒಳಿತು ಮಾಡಿದ್ದ ಬಿಜೆಪಿ ಸರ್ಕಾರರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಶಿಕ್ಷಕರ ಪರವಾಗಿ ಉತ್ತಮ ನೀಲವು ಹೊಂದಿತ್ತು ಅಲ್ಲದೆ 4400…
ಶ್ರೀನಿವಾಸಪುರ: ಲೋಕಸಭೆ ಚುನಾವಣೆಗೆ ಭಾರತ ಚುನಾವಣಾ ಆಯೋಗವು ಶೀಘ್ರದಲ್ಲಿಯೇ ವೇಳಾಪಟ್ಟಿ ಪ್ರಕಟಿಸಲಿದ್ದು, ಚುನಾವಣೆ ಘೋಷಣೆಯಾದ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಹೀಗಾಗಿ ಎಲ್ಲ ಸಿದ್ಧತೆಗಳನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದರು.ಅವರು ಲೋಕಸಭೆ ಚುನಾವಣೆ ಸಂಬಂಧ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಾರಯಣ್ ಜೊತೆಗೂಡಿ ಶ್ರೀನಿವಾಸಪುರಕ್ಕೆ ಭೇಟಿ ನೀಡಿ ತಹಶೀಲ್ದಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಚುನಾವಣೆ ಸಂಬಂದಿತ ತಾಲೂಕು ಆಡಳಿತ ಕೈಗೊಂಡಿರುವ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿದರು.ಚುನಾವಣೆಗೆ ನೀತಿ ಸಂಹಿತೆ ಜಾರಿಯಾದ ಕೂಡಲೆ ಸಾರ್ವಜನಿಕ ಸ್ಥಳಗಳು ಸೇರಿದಂತೆ ವಿವಿಧೆಡೆ ಅಳವಡಿಸಲಾಗಿರುವ ಜಾಹೀರಾತು, ಪ್ರಕಟಣೆ, ಬ್ಯಾನರ್‌ಗಳನ್ನು ತೆರವುಗೊಳಿಸಿ,ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸುವ ನಿಟ್ಟಿನಲ್ಲಿ ತಹಸಿಲ್ದಾರರ ಸೇರಿದಂತೆ ತಾಲೂಕಿನ ಅಧಿಕಾರಿಗಳ ಪಾತ್ರ ಮುಖ್ಯವಾಗಿದ್ದು ಚುನಾವಣಾ ಆಯೋಗದ ನಿರ್ದೇಶನವನ್ನು ಪಾಲಿಸಲು ಅಧಿಕಾರಿಗಳು ಸಹಕಾರ ನೀಡುವಂತೆ ಸೂಚಿಸಿದರು.ಚುನಾವಣೆಗಾಗಿ ಈಗಾಗಲೆ ನಿಗದಿಪಡಿಸಲಾಗಿರುವ ಮತಗಟ್ಟೆಗಳಲ್ಲಿ ವಿಕಲಚೇತನರಿಗಾಗಿ ರ್ಯಾಂಪ್ ವ್ಯವಸ್ಥೆ ಇರುವುದು ಸೇರಿದಂತೆ ಶೌಚಾಲಯ, ವಿದ್ಯುತ್ ಸಂಪರ್ಕ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳು ಇರುವ ಕುರಿತು ಪರಶೀಲಿಸಿ ಅವಶ್ಯಕತೆಗಳನ್ನು…
ಶ್ರೀನಿವಾಸಪುರ : ಬಡ ಕುಟುಂಬದ ಹಿನ್ನಲೆಯಿಂದ ಬಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಡವರ ಹಸಿವು ನೋವು ಅರಿತವರಾಗಿ ಸಮಾನ್ಯನು ಅಕ್ಕಿ ಖರಿದಿ ಮಾಡಬೇಕು ಎಂಬ ಉದ್ದೇಶದಿಂದ ಭಾರತ್ ಅಕ್ಕಿಯನ್ನು 29 ರೂಗೆ ನೀಡುವಂತ ಮಹತ್ತರ ಯೋಜನೆಯನ್ನು ನರೇಂದ್ರ ಮೋದಿ ಜಾರಿಗೆ ತಂದಿದ್ದಾರೆ ಎಂದು ಬಿಜೆಪಿ ಕೋಲಾರ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್ ಹೇಳಿದರು.ಅವರು ಶ್ರೀನಿವಾಸಪುರದಲ್ಲಿ ತಾಲೂಕು ಬಿಜೆಪಿ ವತಿಯಿಂದ ಭಾರತ್ ಅಕ್ಕಿ ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದರು. ಇದೊಂದು ಮಹತ್ತರ ಯೋಜನೆಯಾಗಿದ್ದು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದನ್ನು ಜಾರಿಗೆ ತಂದಿದ್ದು,ಬಡವರು ಸಾಮನ್ಯರು ಇದರ ಸದುಪಯೋಗ ಪಡೆಸಿಕೊಳ್ಳುವಂತೆ ಕರೆ ಇತ್ತರು.ಪ್ರಸ್ತುತ 2ಸಾವಿರ ಮೂಟೆಯನ್ನು ವಿತರಣೆ ಮಾಡಲಾಗುತ್ತಿದೆ ಮುಂದಿನ ದಿನಗಳಲ್ಲಿ ಬೇಡಿಕೆ ತಕ್ಕಂತೆ ಭಾರತ್ ಅಕ್ಕಿಯನ್ನು ತರಿಸಿ ವಿತರಣೆ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ರೋಣೂರು ಚಂದ್ರು,ನಲ್ಲಪಲ್ಲಿ ರೆಡ್ಡಪ್ಪ, ಜೆಸಿಬಿ ಅಶೋಕ್‌ರೆಡ್ಡಿ,ರವಣಪ್ಪ ಮುಂತಾದವರು ಇದ್ದರು.