ನ್ಯೂಜ್ ಡೆಸ್ಕ್:ನಟಸಿಂಹ ನಂದಮೂರಿ ಬಾಲಕೃಷ್ಣ ನಾಯಕನಾಗಿ ಸ್ಟಾರ್ ಡೈರೆಕ್ಟರ್ ಬಾಬಿಕೊಲ್ಲಿ (ಕೆ.ಎಸ್.ರವೀಂದ್ರ) ನಿರ್ದೇಶನದಲ್ಲಿ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಡಿಯಲ್ಲಿ ಸೂರ್ಯದೇವರ ನಾಗವಂಶಿ ನಿರ್ಮಿಸುತ್ತಿರುವ ಚಿತ್ರವನ್ನು ಫಾರ್ಚೂನ್ ಫೋರ್ ಸಿನಿಮಾಸ್ ಮತ್ತು ಶ್ರೀಕರ ಸ್ಟುಡಿಯೋಸ್ ಪ್ರಸ್ತುತಪಡಿಸುತ್ತಿದೆ.ಇದು ಬಾಲಕೃಷ್ಣ ಅವರ ವೃತ್ತಿ ಜೀವನದ 109ನೇ ಸಿನಿಮಾ ‘ಅಖಂಡ’, ‘ವೀರಸಿಂಹ ರೆಡ್ಡಿ’, ‘ಭಗವಂತ ಕೇಸರಿ’ಯಂತಹ ಕಂಟಿನ್ಯೂ ಹಿಟ್‌ಗಳ ಮೂಲಕ ಬಾಲಯ್ಯ ಸೂಪರ್ ಫಾರ್ಮ್‌ನಲ್ಲಿದ್ದರೆ. ಮೆಘಾಸ್ಟಾರ್ ಚಿರಂಜಿವಿ ನಟನೆಯ ‘ವಾಲ್ತೇರು ವೀರಯ್ಯ’ ಸಿನಿಮಾ ನಿರ್ದೇಶನ ಮಾಡಿದ ಬಾಬಿಕೊಲ್ಲಿ ಕೂಡ ದೊಡ್ಡ ಬ್ಲಾಕ್‌ಬಸ್ಟರ್ ಸಾಧನೆಯ ಸಾಲಿನಲ್ಲಿದ್ದಾರೆ ಹಾಗಾಗಿ ಬಾಬಿ ಕೊಲ್ಲಿ ನಿರ್ದೇಶದಲ್ಲಿ ಬಾಲಕೃಷ್ಣ ಅವರ 109ನೇ ಸಿನಿಮಾ ಬಾಲಯ್ಯನ ಅಭಿಮಾನಿಗಳಲ್ಲಿ ಭಾರಿ ನೀರಿಕ್ಷೆಗಳನ್ನು ಹುಟ್ಟುಹಾಕಿದೆ.ಶಿವರಾತ್ರಿ ವಿಶೇಷ ಸಂದರ್ಭದಲ್ಲಿ ಬಾಲಕೃಷ್ಣ 109ನೇ ಸಿನಿಮಾದ ಝಲಕ್ ಬಿಡುಗಡೆಯಾಗಿದ್ದು ಇದು 1 ನಿಮಿಷ 24 ಸೆಕೆಂಡುಗಳ ಗ್ಲಿಂಪ್ಸ್ ನಲ್ಲಿ ಉರಿಯುತ್ತಿರುವ ಕಾಡು,ನೀರು ಹರಿಯುವ ಡ್ಯಾಮನಲ್ಲಿ ನೀರಿನ ಬದಲು ಬೆಂಕಿ ಜರಿಯಂತೆ ದುಮ್ಮಿಕ್ಕುವ ದೃಶ್ಯಗಳನ್ನು ತೋರಿಸಲಾಗಿದೆ.ಜೊತೆಗೆ ಬಾಲಕೃಷ್ಣ ಅವರ ಫಸ್ಟ್ ಲುಕ್ ನಲ್ಲಿ ಕತ್ತಿ ಹಿಡಿದಿರುವ…
Author: Srinivas_Murthy
ಶ್ರೀನಿವಾಸಪುರ:ಪಟ್ಟಣದಲ್ಲಿ ಮರುಬಳಕೆ ಮಾಡಬಹುದಾದ ಒಣಕಸ ವಿಲೇವಾರಿಗಾಗಿ ಶ್ರೀನಿವಾಸಪುರ ಪುರಸಭೆ ವತಿಯಿಂದ ವಿಶೇಷವಾದ ಕಾರ್ಯಕ್ರಮ ರೂಪಿಸಿದೆ ಪಟ್ಟಣವನ್ನು ಸ್ವಚ್ಛ ಮತ್ತು ಸುಂದರವನ್ನಾಗಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸತ್ಯನಾರಯಣ್ ಹೇಳಿದರು.ಅವರು ಪುರಸಭೆ ವತಿಯಿಂದ ಆರಂಭಿಸಿರುವ ಒಣತ್ಯಾಜ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಶೀಲನೆ ನಡೆಸಿ ಮಾತನಾಡಿದರು.ಜನತೆ ರಸ್ತೆ ಬದಿಗೆ ಹಾಕುವಂತ ಒಣಕಸದಲ್ಲಿ ಮರುಬಳಕೆಯಾಗುವ ಪ್ಲಾಸ್ಟಿಕ್ ಸಂಬಂದಿಸಿದಂತ ಘನತ್ಯಾಜ್ಯವನ್ನು ಬೆರ್ಪಡಿಸುವ ಪೌರಕಾರ್ಮಿಕರು ಇಲ್ಲಿಗೆ ತಂದು ಸಂಗ್ರಹಿಸುತ್ತಾರೆ. ಇದಕ್ಕೆ ಪಟ್ಟಣದ ಸಾರ್ವಜನಿಕರು ಸಹಕಾರ ನೀಡುವ ಅವಶ್ಯಕತೆ ಇದೆಎಲ್ಲೆಂದರಲ್ಲಿ ಕಸ ಬೀಸಾಡುವುದರಿಂದ ಪಟ್ಟಣದ ಅಂದ ಕೆಡುತ್ತಿತ್ತದೆ,ಬೀದಿ ನಾಯಿಗಳು ಕೋತಿಗಳು ಕಸವನ್ನು ಚಲ್ಲಾಪಿಲ್ಲಿ ಮಾಡುತ್ತದೆ ಜೊತೆಗೆ ಅವುಗಳು ಅದರಲ್ಲಿ ಆಹಾರ ಹುಡುಕಿ ತಿಂದರೆ ಅನೇಕ ಸಾಂಕ್ರಾಮಿಕ ರೋಗಗಳಿಗೂ ಕಾರಣವಾಗುತ್ತದೆ ಇವೆಲ್ಲವುಗಳಿಗೆ ಪರಿಹಾರ ಕಂಡುಕೊಳ್ಳಲು ಪುರಸಭೆ ವತಿಯಿಂದ ಈ ಪ್ರಯೋಗ ಮಾಡಲಾಗಿದೆ ಎಂದರು. ಪುರಸಭೆ ಆರೋಗ್ಯ ನೀರಿಕ್ಷಕ ರಮೇಶ್ ಮಾತನಾಡಿ ಘನತ್ಯಾಜ್ಯ ಸಂಗ್ರಹದಲ್ಲಿ ಆದ್ಯತೆ ಮೇರೆಗೆ ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ಹಳೆ ಬಟ್ಟೆಯಂತ ತ್ಯಾಜ್ಯಗಳನ್ನು ವಿವಿಧ ರೀತಿಯ ಘನತ್ಯಾಜ್ಯವನ್ನು ಸಂಗ್ರಹಿಸಿ…
ಶ್ರೀನಿವಾಸಪುರ:ಮನುಷ್ಯ ಎಷ್ಟೆ ಎತ್ತರಕ್ಕೆ ಬೆಳೆದರೂ ತಾನು ಹುಟ್ಟಿದ ಊರು ತಾನು ಕಲಿತ ಶಾಲೆ ಇವುಗಳನ್ನು ಮರೆಯುವಂತಾಗಬಾರದು ಇದನ್ನು ನಿವೃತ್ತ ಇಂಜನಿಯರ್ ಬೀಸೇಗೌಡ ತನ್ನೂರು ಚಿರುವನಹಳ್ಳಿಯ ಅಭಿವೃದ್ಧಿಗೆ ಸದಾ ಚಿಂತಿಸುತ್ತ ಗ್ರಾಮದ ಅಭಿವೃದ್ಧಿಯನ್ನು ತಪ್ಪದೆ ಮಾಡುತ್ತ ಬಂದಿದ್ದಾರೆ ಎಂದು ಶಾಸಕ ವೆಂಕಟಶಿವಾರೆಡ್ದಿ ಹೇಳಿದರು ಅವರು ತಾಲೂಕಿನ ಕಸಬಾ ಹೋಬಳಿ ಚಿರುವನಹಳ್ಳಿಯ ಲೋಕೋಪಯೋಗಿ ಇಲಾಖೆ ನಿವೃತ್ತ ಮುಖ್ಯ ಅಭಿಯಂತರ ಬಿಸೇಗೌಡ ಅವರು ತಮ್ಮ ತಂದೆ-ತಾಯಿ ಮುನಿಲಕ್ಷ್ಮಮ್ಮ ಹಾಗೂ ಶ್ರೀ ತಾಚೇಗೌಡ ನೆನಪಿಗೆ ಗ್ರಾಮದ ಸರ್ಕಾರಿ ಶಾಲೆಗೆ ಎರಡು ಕೊಠಡಿಗಳನ್ನು ನಿರ್ಮಿಸಿದ್ದು ಅದರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಇದೊಂದು ಅದ್ಭುತವಾದ ಕಾರ್ಯಕ್ರಮವಾಗಿದೆ,ಅವರು ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆ ಪಡೆದು ಗ್ರಾಮದ ಬಗ್ಗೆ ಕಾಳಜಿವಹಿಸಿ ಸರ್ಕಾರಿ ಶಾಲೆಗೆ ಬೇಕಾದ ಕೊಠಡಿ,ವಿದ್ಯಾರ್ಥಿಗಳಿಗೆ ಡೆಸ್ಕ್,ಕಂಪ್ಯೂಟರ್ ಗಳನ್ನು ಸಹ ಕೊಡುಗೆಯಾಗಿ ನೀಡಿದ್ದಾರೆ ಸರ್ಕಾರಿ ಶಾಲೆಗಳ ಬಗ್ಗೆ ಇವರಿಗೆ ಇರುವ ಕಾಳಜಿ ಗ್ರಾಮೀಣ ಭಾಗದಿಂದ ಬಂದು ಉನ್ನತ ಪದವಿಗಳಲ್ಲಿ ಇರುವ ಎಲ್ಲರಿಗೂ ಮಾದರಿಯಾಗಬೇಕು ಎಂದರು.ಕೊಠಡಿಗಳ ದಾನಿ ಅಭಿಯಂತರ ಬಿಸೇಗೌಡ ಮಾತನಾಡಿ ನಾನು ಓದಿದ…
ಶ್ರೀನಿವಾಸಪುರ:ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತವಾಗಿ ದ್ವಿಚಕ್ರ ವಾಹನ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಅಪಘಾತ ಘಟನೆ ತಾಲೂಕಿನ ಗೌವನಪಲ್ಲಿ ರಸ್ತೆಯ ಕಪ್ಪಲ್ಲಿ ಬಳಿ ನಡೆದಿರುತ್ತದೆ.ಮೃತ ವ್ಯಕ್ತಿಯನ್ನು ಗೌನಿಪಲ್ಲಿಯ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯದ ಸಿಬ್ಬಂದಿ ದೇವರಾಜ್ (50) ಎಂದು ಗುರುತಿಸಲಾಗಿದೆ.ಮೃತ ವ್ಯಕ್ತಿ ಗೌನಿಪಲ್ಲಿ ವಿದ್ಯಾರ್ಥಿ ನಿಲಯದಲ್ಲಿ ಕೆಲಸ ಮುಗಿಸಿ ತನ್ನ ಸ್ವಗ್ರಾಮವಾದ ಯಚ್ಚನಹಳ್ಳಿಗೆ ದ್ವಿಚಕ್ರವಾಹನದಲ್ಲಿ ಹಿಂತಿರುಗುತ್ತಿರುವಾಗ ಕಪ್ಪಲ್ಲಿ ಗ್ರಾಮದ ಬಳಿ ಇರುವ ತಿರುವಿನಲ್ಲಿ ಎದುರಿನಿಂದ ಬಂದ ಕಾರು ಡಿಕ್ಕಿಯಾಗಿ ದ್ವಿಚಕ್ರ ಸವಾರ ಗಂಭೀರವಾಗಿ ಗಾಯಗೊಂಡಿದ್ದು,ಕೋಲಾರ ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ಚಿಕಿಸ್ಥೆಗೆ ರವಾನಿಸಲಾಗಿದೆ ಅಲ್ಲಿ ಚಿಕಿಸ್ಥೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ.ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀನಿವಾಸಪುರ:ಸುಮಾರು ಅರವತ್ತುಕ್ಕೂ ಹೆಚ್ಚು ಜನ ರಾಮಭಕ್ತರು ಇಂದು ಅಯೋಧ್ಯೆಯ ಶ್ರೀರಾಮಲಲ್ಲಾನ ದರ್ಶನ ಮಾಡಲು ಹೋರಟರು.ಅರವತ್ತುಕ್ಕೂ ಜನರ ತಂಡ ಅಯೋಧ್ಯೆಗೆ ಪ್ರಯಾಣ ಬೆಳಿಸಿದ್ದು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಪೂಜೆ ಸಲ್ಲಿಸಿ ರಾಜ್ಯ ಸಾರಿಗೆ ಸಂಸ್ಥೆ ಬಸ್ ಮೂಲಕ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಚಿರುವುನಹಳ್ಳಿಲಕ್ಷ್ಮಣಗೌಡ ಮಾತನಾಡಿ ರಾಮಲಲ್ಲಾನ ದರ್ಶನಕ್ಕೆ ಹೋಗುತ್ತಿರುವ ನಮಗೆ ಸಂತಸವಾಗುತ್ತಿದೆ ಇಲ್ಲಿಂದ ನಾವು ಬೆಂಗಳೂರಿನ ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣಕ್ಕೆ ಹೋಗಲಿದ್ದು ಅಲ್ಲಿ ವಿಶೇಷ ರೈಲಿನಲ್ಲಿ ಬುಧವಾರ ನಸುಕಿನ ಜಾವದಲ್ಲಿ ಅಯೋಧ್ಯೆಗೆ ತೆರಳಲಿರುವುದಾಗಿ ಹೇಳಿದರು, ಅಯೋಧ್ಯೆಗೆ ಹೋರಟಿರುವ ನಮಗೆ ಊಟ ಉಪಚಾರವನ್ನು ಅತ್ಯಂತ ವ್ಯವಸ್ಥೆವಾಗಿ ಮಾಡಲಾಗಿದೆ ಎಂದು ತಿಳಿಸಿದರು.ಅಯೋಧ್ಯೆ ಯಾತ್ರಾತ್ರಿಗಳು ಸುಖಕರವಾಗಿ ಪ್ರಯಾಣಿಸಲಿ ಎಂದು ಬಿಜೆಪಿ ಹಿರಿಯ ಮುಖಂಡ ಟಿ.ನಾರಯಣಸ್ವಾಮಿ,ವಿಶ್ವಹಿಂದು ಪರಿಷತ್ ಮುಖಂಡ ವೇಮಣ್ಣ,ದಿವಾಕರ್,ಜಯರಾಮರೆಡ್ಡಿ ಶುಭ ಹಾರೈಸಿದರು.
ನ್ಯೂಜ್ ಡೆಸ್ಕ್:ಬಿಜೆಪಿ ಸರ್ಕಾರ ಮಂಡಿಸಿದ ಮಧ್ಯಂತರ ಬಜೆಟ್ ನಲ್ಲಿ ಕೋಲಾರಕ್ಕೆ ಯಾವುದೇ ಹೊಸ ರೈಲು ಮಾರ್ಗದ ಪ್ರಸ್ತಾವನೆ ಇಲ್ಲದ್ದು ವಿಶೇಷ ಎನ್ನಬಹುದು,ಕೋಲಾರ ಜಿಲ್ಲೆಗೆ ಹೊಸ ರೈಲು ಹಾಗೂ ಮಾರ್ಗ ಘೋಷಣೆ ಆಗಬಹುದು ಎಂದು ಅವಿಭಜಿತ ಕೋಲಾರ ಜಿಲ್ಲೆಯ ಜನತೆ ನಿರಿಕ್ಷೆ ಹೊಂದಿದ್ದರು,ಕೋಲಾರ ಕೇಂದ್ರೀಕರಿಸಿ ವಿವಿಧ ನಗರಗಳಿಗೆ ರೈಲು ಮಾರ್ಗಗಳ ನಿರ್ಮಾಣದ ಬಗ್ಗೆ ದೇವೆಗೌಡರು ಪ್ರಧಾನಿಯಾದಾಗಿನಿಂದಲೂ ಹೇಳಲಾಗುತ್ತಿದೆ, ಆದರೂ ಅದು ಕಾರ್ಯಯೋಜನೆ ಆಗಿಲ್ಲ.ಸರ್ಕಾರಗಳು ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಒಂದಾಗಿರುವ ರೈಲು ಸೇವೆ ಕುರಿತಾಗಿ ಜಿಲ್ಲೆಯ ಜನತೆಗೆ ಸೌಕರ್ಯಗಳು ಅಷ್ಟೇನೂ ಸಮಾಧಾನಕರವಲ್ಲ ಎನ್ನಬಹುದು.ವಿಭಜಿತ ಕೋಲಾರ ಜಿಲ್ಲೆಯಲ್ಲಿ ಯಾವುದೆ ನದಿ ನಾಲೆಗಳು ಇಲ್ಲ ಬಯಲುಸೀಮೆ ಜಿಲ್ಲೆಯಾಗಿದ್ದು ಇಲ್ಲಿನ ರೈತರು ಶ್ರಮವಹಿಸಿ ಬಂಗಾರದ ಬೆಳೆ ಬೆಳೆದರು ಉತ್ತಮ ಧರ ಸಿಗದೆ ಪರೆದಾಡುವ ಪರಿಸ್ಥಿತಿ. ಇವರ ಬೇಕು ಬೇಡಗಳ ಅರಿಯದ ರಾಜ್ಯ ಅಥಾವ ಕೇಂದ್ರ ಸರ್ಕಾರಗಳು ಬಜೆಟ್ ಮಂಡಿಸುವಾಗ ಈ ಭಾಗದ ಜನತೆಯ ನಿರೀಕ್ಷೆಗಳೇನು ಎಂಬುದನ್ನು ಪರಿಗಣಿಸದೆ ಇರುವುದು ದುರಂತ ಎಂದು ಜನರ ಆರೋಪ ,ಬೃಹತ್ ಬೆಂಗಳೂರು ಮಹಾನಗರಕ್ಕೆ…
ಕೋಲಾರ: ಶ್ರೀನಿವಾಸಪುರದ ಯುವಕ,ಮುಳಬಾಗಿಲು ಶಾಸಕ, ಸಮೃದ್ಧಿ ಸಮೂಹ ಸಂಸ್ಥೆಗಳ ಮಾಲಿಕ ಸಮೃದ್ಧಿ ಮಂಜುನಾಥ್ ಅವರು ಬಂಗಾರದ ಅಂಗಡಿ ಸಿರಿ ಸಮೃದ್ಧಿ ಗೋಲ್ಡ್ ಪ್ಯಾಲೆಸ್ ಅನ್ನು ಕೋಲಾರ ನಗರದಲ್ಲಿ ಎರಡನೆಯ ಮಳಿಗೆಯನ್ನು ಸೋಮವಾರ ಆರಂಭಿಸಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ವತಃ ಶಿರಡಿಸಾಯಿನಾಥನಿಗೆ ಪೂಜೆ ಸಲ್ಲಿಸಿ ಉದ್ಘಾಟಿಸಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿ ಮಾತನಾಡಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಾಗೂ ಸಮರ್ಪಕ ತೂಕ, ಕಡಿಮೆ ಬೆಲೆಯ ಹೊಸ ಹೊಸ ವಿನ್ಯಾಸದ ಆಭರಣಗಳನ್ನು ಕೋಲಾರದ ಜನತೆಗೆ ನೀಡುವ ಮೂಲಕ ಉತ್ತಮವಾಗಿ ವ್ಯಾಪಾರ ಮಾಡಲಿ ಎಂದು ಶುಭಕೋರಿದರು.ಸಿರಿಸಮೃದ್ಧಿ ಗೋಲ್ಡ್ ಪ್ಯಾಲೇಸ್ ಮಾಲಿಕ ಸಮೃದ್ಧಿ ಮಂಜುನಾಥ್ ಮಾತನಾಡಿ ಬೆಂಗಳೂರಿನ ಯಲಹಂಕದಲ್ಲಿ ಪ್ರಥಮ ಮಳಿಗೆಯಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿಭಿನ್ನ ಹಾಗೂ ವಿಶೇಷವಾಗಿ ತಯಾರಾದ ಹೊಸ ವಿನ್ಯಾಸದ ಪರಿಶುದ್ಧ ಹಾಗೂ ಬಿಐಎಸ್ ಹಾಲ್‌ಮಾರ್ಕ್ ಒಳಗೊಂಡ ಆಭರಣಗಳು, ಇಂದಿನ ಕಾಲಘಟ್ಟಕ್ಕೆ ತಕ್ಕಂತಹ ವಿನೂತನ ಶೈಲಿಯ ವಿನ್ಯಾಸದ ಆಭರಣಗಳು, ಚಿನ್ನ ಬೆಳ್ಳಿ ಹಾಗೂ ವಜ್ರದ ಆಭರಣಗಳ ಬೃಹತ್ ಭಂಡಾರ, ಕಡಿಮೆ ಬೆಲೆಯ ಹೆಚ್ಚು…
ನ್ಯೂಜ್ ಡೆಸ್ಕ್: ಶ್ರೀ ಕೃಷ್ಣನ ನಗರ ಗುಜರಾತನ ದ್ವಾರಕದಲ್ಲಿರುವ ಅರಬ್ಬಿ ಸಮುದ್ರದ ಆಳಕ್ಕಿಳಿದ ಪ್ರಧಾನಿ ನರೇಂದ್ರ ಮೋದಿ,ಸಮುದ್ರ ತಟದಲ್ಲಿ ಸಮುದ್ರದೊಳಗಿರುವ ದ್ವಾರಕಾಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ ನವಿಲು ಗರಿಗಳನ್ನು ಸಮುದ್ರದೊಳಗೆ ಒಯ್ದು ಶ್ರೀ ಕೃಷ್ಣನಿಗೆ ಸಮರ್ಪಿಸಿದ್ದಾರೆ.ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಗುಜರಾತ್ ರಾಜ್ಯದಲ್ಲಿರುವ ದ್ವಾರಕ ಅತ್ಯಂತ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ. ಸಮುದ್ರದೊಳಗೆ ಇಳಿದು ದ್ವಾರಕ ದರ್ಶನ ಮಾಡಿ ಪೂಜೆ ಸಲ್ಲಿಸಿರುವ ಮೋದಿಯ ಅತ್ಯಂತ ಕಠಿಣವಾದ ಸಾಧನೆ ಬಗ್ಗೆ ಸರ್ವತಾ ಶ್ಲಾಘನೆಗೆ ವ್ಯಕ್ತವಾಗಿದೆ.ಭಾರತದ ಅತ್ಯಂತ ಪ್ರಾಚೀನ ನಗರಿಗಳಲ್ಲಿ ಒಂದಾಗಿರುವ ದ್ವಾರಕಾಗೆ ಭಾನುವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅರಬ್ಬೀ ಸಮುದ್ರದ ಪಂಚಕುಯಿ ಕರಾವಳಿ ತೀರದ ಬಳಿ ಸ್ಕೂಬಾ ಡೈವಿಂಗ್ ಮಾಡಿ ಅಂಡರ್ ವಾಟರ್ ನಲ್ಲಿ ಸಾಹಸಮಯವಾಗಿ ಪೂಜೆ ಸಲ್ಲಿಸಿದ್ದಾರೆ.ಸಮುದ್ರದ ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಮಾಡುವುದು ಅತ್ಯಂತ ದಿವ್ಯವಾದ ಅನುಭವವಾಗಿತ್ತು. ನಾನು ಆಧ್ಯಾತ್ಮಿಕ ಭವ್ಯತೆ ಮತ್ತು ಪ್ರಾಚೀನ ಯುಗಕ್ಕೆ ಹೋದಂತೆ ಭಾಸವಾಯಿತು. ಭಗವಾನ್ ಶ್ರೀ ಕೃಷ್ಣ ನಮ್ಮೆಲ್ಲರನ್ನು…
ಶ್ರೀನಿವಾಸಪುರ: ಜನರಿಗೆ ಒದಗಿಸುವ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ರಸ್ತೆ ಅಭಿವೃದ್ಧಿ ಮಹತ್ವದ್ದು ಅದನ್ನು ಒದಗಿಸುವಾಗ ಜನತೆ ಯಾಕೆ ಬೇಡ ಅನ್ನುತ್ತಾರೆ,ಅದರಲ್ಲೂ ಪ್ರಮುಖ ರಸ್ತೆಯೊಂದರ ಅಭಿವೃದ್ಧಿಯಿಂದ ಊರಿಗೆ ಎಷ್ಟೆಲ್ಲಾ ಅನಕೂಲ ಅಗುತ್ತದೆ ಎಂದರೆ ಊರಿನ ಜನತೆ ಖುಷಿ ಪಡುತ್ತಾರೆ, ಆದರೆ ಶ್ರೀನಿವಾಸಪುರದ ಪೋಸ್ಟಾಫಿಸ್ ರಸ್ತೆ ನಿರ್ಮಾಣ ಮಾಡುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಶ್ರೀನಿವಾಸಪುರದ ಅಧಿಕಾರಿಗಳ ಎಡವಟ್ಟೊ ಸ್ಥಳೀಯ ರಾಜಕೀಯ ಅಡ್ಡಗಾಲೋ ಅವೈಜ್ಞಾಕವಾದ ರಸ್ತೆ ನಿರ್ಮಾಣದಿಂದಾಗಿ ಮತ್ತಷ್ಟು ಸಮಸ್ಯೆಗಳು ಪೋಸ್ಟಾಫಿಸ್ ರಸ್ತೆಯನ್ನು ಕಾಡುತ್ತದೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇಂತಹ ರಸ್ತೆ ಅಭಿವೃದ್ಧಿ ನಮಗೆ ಬೇಡ ಎನ್ನುತ್ತಿದ್ದಾರೆ.ಮುಂಬರುವ ದಿನಗಳಲ್ಲಿ ವಾಹನ ಸಂಚಾರ ದಟ್ಟನೆ ಹೆಚ್ಚಳ!ಹಿಂದೆಲ್ಲ ರಸ್ತೆಗಳ ನಿರ್ಮಾಣ ಮಾಡಿದರೆ ಮುಂದಿನ ಐವತ್ತು ವರ್ಷಗಳು ಕಾಲ ರಸ್ತೆ ಸಂಚಾರಕ್ಕೆ ಅನಕೂಲವಾಗಿರಬೇಕು ಎನ್ನುವ ಕಾಲ ಇತ್ತು, ಈಗಿನ ಬದಲಾದ ಕಾಲ ಘಟ್ಟದಲ್ಲಿ ಜನ ಸಂಚಾರ ವಾಹನ ಸಂಚಾರ ದಿನೆದಿನೆ ಏರುತ್ತಿರುವ ಹಿನ್ನಲೆಯಲ್ಲಿ ರಸ್ತೆ ಆದಷ್ಟು ವಿಶಾಲವಾಗಿರಬೇಕು ಗುಣಮಟ್ಟದಾಗಿರಬೇಕು ಎನ್ನುವ ಕಾಲ, ಇದಕ್ಕೆ ತದ್ವಿರುದ್ದ ಎನ್ನುವಂತೆ ಪೋಸ್ಟಾಫಿಸ್ ರಸ್ತೆ ನಿರ್ಮಾಣ…
ಶ್ರೀನಿವಾಸಪುರ:ಶಾಲಾ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಕಾರ್ಯಕ್ರಮ ಇದೊಂದು ಉತ್ತಮ ಕಾರ್ಯಕ್ರಮವಾಗಿದೆ ಎಂದು ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು ಅವರು ಶ್ರೀನಿವಾಸಪುರ ಪಟ್ಟಣದ ತ್ಯಾಗರಾಜ ಬಡಾವಣೆಯಲ್ಲಿರುವಂತ ಕರ್ನಾಟಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ(ಬೈರೆಡ್ಡಿ ಸ್ಕೂಲ್)ಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ,ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಹಾಗು ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಮತ್ತು ಕೆ ಎಂ ಎಫ್ ಇವರ ಸಹಯೋಗದಲ್ಲಿ ಮದ್ಯಾಹ್ನ ಉಪಹಾರ ಯೋಜನೆಯಡಿ ತಾಲ್ಲೂಕು ಹಂತದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ 1 ರಿಂದ 10 ನೇ ತರಗತಿ ಎಲ್ಲಾ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರವಾಗಿ ಬಿಸಿ ಹಾಲಿನೊಂದಿಗೆ ಮಿಶ್ರಣಗೊಳಿಸಿ ಶಾಲಾ ಮಕ್ಕಳಿಗೆ ವಿತರಣೆ ಮಾಡುವಂತ ಕಾರ್ಯಕ್ರಮವನ್ನು ಸಧ್ಯ ಈಗ ವಾರಕ್ಕೆ ಮೂರು ದಿನ ನೀಡುತ್ತಿದ್ದು ಅದನ್ನು ವಾರದ 6 ದಿನಗಳು ನೀಡಿದರೆ ಒಳ್ಳೆಯದು ಎಂದು ಹೇಳಿದ ಅವರು ಸರ್ಕಾರಿ ಶಾಲೆಗಳ ಮಕ್ಕಳು ಯಾವುದೇ ರೀತಿಯ ಆಪೌಷ್ಠಿಕತೆಯಿಂದ ಬಳಲಬಾರದು ಎಂದು ಕೇಂದ್ರ ಸರ್ಕಾರ ಅತುತ್ಯಮವಾದ ಕಾರ್ಯಕ್ರಮ ರೂಪಿಸಿದೆ…