Author: Srinivas_Murthy

ಶ್ರೀನಿವಾಸಪುರ: ತಾಲೂಕಿನ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯ ರಾಯಲ್ಪಾಡು ಹೋಬಳಿ ಸುಣ್ಣಕಲ್ಲು ಗ್ರಾಮದ ಕೋಟೆ ಜಾಗದಲ್ಲಿದ್ದ ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನ ದೇವಾಲಯಕ್ಕೆ ಸೇರಿರುವಂತ ಸ್ಥಳವನ್ನು ಖಾಸಗಿ ವ್ಯಕ್ತಿಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಖಾತೆ ಮಾಡಿಕೊಟ್ಟಿದ್ದಾರೆ ಎಂದು ಸಂಸದ ಮುನಿಸ್ವಾಮಿ ಆರೋಪಿಸಿದರು.ಅಕ್ರಮವಾಗಿ ಒತ್ತುವರಿಯಾಗಿರುವಂತ ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನದ ಜಾಗಕ್ಕೆ ಸಂಸದ ಮುನಿಸ್ವಾಮಿ ಭೇಟಿ ನೀಡಿ ಅಲ್ಲಿದ್ದ ದೇವರ ಮೂರ್ತಿಗಳಿಗೆ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕಂದಾಯ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡ ಸಂಸದ ಮುನಿಸ್ವಾಮಿ ಸುಮಾರು 11 ಎಕರೆ ಜಾಗ ಒತ್ತುವರಿಯಾಗಿದ್ದು ಇದಕ್ಕೆ ಕಂದಾಯ ಅಧಿಕಾರಿಗಳು ಸಹಕಾರ ನೀಡಿದ್ದಾರೆ ಹಣ ನೀಡಿದರೆ ದೇವಸ್ಥಾನದ ಜಾಗವನ್ನು ಖಾತೆ ಮಾಡಿಕೊಡ್ತೀರಾ? ದೇವಸ್ತಾನದ ಜಾಗ ಹದ್ದುಬಸ್ತು ಮಾಡದೆ ಹೋದರೆ ನಾನು ಸುಮ್ಮನೆ ಕೂರುವುದಿಲ್ಲ ಎಂದು ಅಧಿಕಾರಿಯ ವಿರುದ್ದ ಹರಿಹಾಯ್ದರು. ಈ ಸಂದರ್ಭದಲ್ಲಿ ರಾಯಲ್ಪಾಡು ಹೋಬಳಿಯ ರಾಜಸ್ವ ನಿರೀಕ್ಷಕ ಗುರುರಾಜ್ ರಾವ್ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ರೋಣೂರು ಚಂದ್ರಶೇಖರ್, ಸೇರಿದಂತೆ ಮುಂತಾದವರು…

Read More

ಶ್ರೀನಿವಾಸಪುರ:ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಂ ಶ್ರೀನಿವಾಸನ್ ಕೊಲೆ ಅರೋಪದಲ್ಲಿ ಬಂದಿತನಾಗಿರುವ ಆರೋಪಿಯ ತಾಯಿ ಪುರಸಭೆ ಸದಸ್ಯೆಯಾಗಿದ್ದು ಆಕೆ ಪುರಸಭೆ ಸದಸ್ಯೆಯಾಗಿ ಮುಂದುವರೆಯಬಾರದು ಈ ತಕ್ಷಣ ರಾಜಿನಾಮೆ ನೀಡಬೇಕು ಮತ್ತು ಆಕೆ ತನ್ನ ಮನೆಗೆ ಪುರಸಭೆ ವತಿಯಿಂದ ಅಕ್ರಮ ಬಿಲ್ ಮಾಡಿಕೊಂಡಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ಅಗ್ರಹಿಸಿ ವಾರ್ಡ್ ನಂ 20 ನಿವಾಸಿಗರು ಪುರಸಭೆ ಸದಸ್ಯೆ ಲೀಲಾವತಿ ಶ್ರೀನಿವಾಸ್ ಮನೆ ಮುಂದೆ ಪ್ರತಿಭಟನಾ ಧರಣಿ ನಡೆಸಿದರು. ದಲಿತ ಸಮುದಾಯದ ಪ್ರಭಾವಿ ಕಾಂಗ್ರೇಸ್ ಮುಖಂಡ,ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಂ ಶ್ರೀನಿವಾಸನ್ ಕಳೆದ ಅಕ್ಟೋಬರ್ ನಲ್ಲಿ ತಮ್ಮ ತೋಟದ ಮನೆ ಬಳಿ ಬರ್ಬರವಾಗಿ ಕೊಲೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿದಂತೆ ಕೆಲವೆ ಗಂಟೆಗಳ ಅವಧಿಯಲ್ಲಿ ಪೊಲೀಸರು ಆರೋಪಿಗಳನ್ನು ಬಂದಿಸಿದ್ದರು, ಬಂದಿತ ಆರೋಪಿಗಳಲ್ಲಿ ಶ್ರೀನಿವಾಸಪುರ ಪಟ್ಟಣದ ವಾರ್ಡ್ ನಂ 20 ಪುರಸಭೆ ಸದಸ್ಯೆ ಲೀಲಾವತಿ ಶ್ರೀನಿವಾಸ್ ರವರ ಮಗ ಚಂದನ್ ಸಹ ಆರೋಪಿಯಂದು ಪೋಲಿಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ, ಕೊಲೆ ಘಟನೆ ನಡೆದ ನಂತರದಲ್ಲಿ…

Read More

ಶ್ರೀನಿವಾಸಪುರ:ಡಾ ಬಿಆರ್ ಅಂಬೇಡ್ಕರ್ ಅವರು ನಮಗೆ ನೀಡಿದ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ.ನಾವು ವಿದೇಶಿ ಆಳ್ವಿಕೆಯಿಂದ ಮುಕ್ತರಾಗಿ ಸ್ವಾತಂತ್ರ್ಯಗೊಂಡು ಆಧುನಿಕವಾಗಿ ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ನಿರ್ಮಾಣವಾಗಲು ಸಂವಿಧಾನ ಸಹಕಾರಿಯಾಗಿದೆ,ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮೂಲಭೂತ ಹಕ್ಕುಗಳು ನಮ್ಮ ಸಂವಿಧಾನ ನಮಗೆ ನೀಡಿರುವ ಬಹುದೊಡ್ಡ ಕೊಡುಗೆಗಳಾಗಿವೆ ಎಂದು ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು.ಮುಳಬಾಗಿಲು ತಾಲೂಕಿನಿಂದ ಆಗಮಿಸಿದ ಸಂವಿಧಾನ ಜಾಗೃತಿ ಜಾಥವನ್ನು ತಾಲೂಕಿನ ಗಡಿಯಲ್ಲಿ ಅಂಬೇಡ್ಕರ್ ಪುಥ್ಥಳಿಗೆ ಮಾಲಾರ್ಪಣೆ ಮಾಡಿ ಅದ್ಧೂರಿಯಾಗಿ ಸ್ವಾಗತಿಸಿದ ಅವರು ನಂತರ ಲಕ್ಷ್ಮೀಸಾಗರದ ಶತಶೃಂಗ ಶಾಲಾ ಆವರಣದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು ಭಾರತೀಯ ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜನವರಿ 26 ರಿಂದ ಫೆಬ್ರವರಿ 23ರ ವರೆಗೆ ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥ ಸಂಚರಿಸಲಿದ್ದು ನಮ್ಮ ತಾಲೂಕಿಗೂ ಆಗಮಿಸಿದೆ ಅತ್ಯಂತ ಹೆಮ್ಮೆಯಿಂದ ನಾವೆಲ್ಲ ಸ್ವಾಗತಿಸಿದ್ದೇವೆ ತಾಲೂಕಿನಾದ್ಯಂತ ಸಂಚರಿಸಲು ಸಹಕಾರ ಮಾಡಿಕೊಡುವ ಮೂಲಕ ಸಂವಿಧಾನದ ಮೌಲ್ಯಗಳು ಮತ್ತು ಆಶಯಗಳ ಕುರಿತಾಗಿ ಎಲ್ಲರಿಗೂ ಅರಿವು ಮೂಡಿಸೋಣ…

Read More

ಶ್ರೀನಿವಾಸಪುರ:ಫಸಲ್ ಭೀಮಾ ಯೋಜನೆಯ ಹಣ ನೀಡದೆ ವಿಳಂಬ ನೀತಿ ಅನುಸರಿಸುತ್ತ ಈ ವರ್ಷವೂ ಮಾವು ಬೆಳೆಗಾರರನ್ನು ವಿಮಾ ಸಂಸ್ಥೆ ವಂಚಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿ ನೂರಾರು ರೈತರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಮಾವು ಬೆಳೆಗಾರರು ಕಟ್ಟಿದ್ದ ವಿಮಾ ಕಂತಿನ ಕ್ಲೈಮ್ ಹಣವನ್ನು ಕಳೆದ ಅಕ್ಟೋಬರ್ ನಲ್ಲೆ ನೀಡಬೇಕಾಗಿತ್ತು ಆದರೆ ವಿಮಾ ಕಂತು ಕಟ್ಟಿಸಿಕೊಂಡಿರುವ ಎಚ್ ಡಿ ಎಫ್ ಸಿ ಇರ್ಗೋ ಕಂಪನಿಯವರು ಫೆಬ್ರವರಿ ಬಂದರು ಕ್ಲೈಮ್ ಹಣ ನೀಡದೆ ತಡ ಮಾಡುತ್ತ ರೈತರನ್ನು ಯಾಮಾರಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ಕೋಲಾರ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ ಆರೋಪಿಸಿದರು.ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಘ ಹಾಗು ಇತರೆ ರೈತ ಸಂಘಟನೆಗಳ ಮುಖಂಡರು ಎಚ್ ಡಿ ಎಫ್ ಸಿ ಕಂಪನಿ ವಿರುದ್ಧ ಘೋಷಣೆಗಳನ್ನು ಕೂಗುತ್ತ ವಿಮಾ ಕಂಪನಿಯವರು ವಿಮೆ ಹಣ ನೀಡದೆ ಅನ್ಯಾಯ ಎಸಗುತ್ತಿದ್ದಾರೆ ಎಂದು ಆರೋಪಿಸಿದರು ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ತಹಶೀಲ್ದಾರ್ ಸುಧೀಂದ್ರ…

Read More

ನ್ಯೂಜ್ ಡೆಸ್ಕ್:ಹಣಕಾಸು ಮಂತ್ರಿಗಳ ಬಹುಪಾಲು ಬಜೆಟ್ ಭಾಷಣಗಳು,ದೇಶದ ಭೌಗೋಳಿಕ ರಾಜಕೀಯ ವಿಷಯಗಳ ಕುರಿತಂತೆ ಉದ್ದುದ್ದ ಭಾಷಣ ಇರುತ್ತದೆ ಆದರೆ ಈ ವರ್ಷದ ಮಧ್ಯಂತರ ಬಜೆಟ್ ಭಾಷಣದಲ್ಲಿ,ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಭಾಷಣದಲ್ಲಿ ಭಾರತ ಕೇಂದ್ರವಾಗಿ ಜಾಗತಿಕಮಟ್ಟದ ಆರ್ಥಿಕ ವ್ಯವಸ್ಥೆಯಲ್ಲಿ ಆಗಬಹುದಾದ ಬದಲಾವಣೆಯ ಹೊಸ ಚಿತ್ರಣದ ಕುರಿತಾಗಿ ಮಂಡಿಸಿದ್ದಾರೆ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (IMEC) ಕುರಿತಂತೆ ನೂತನ ಆರ್ಥಿಕ ನೀತಿ ನಿಯಮಗಳನ್ನು ಪ್ರಸ್ತುತಪಡಿಸಿದ್ದಾರೆ.ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಮಂಡಿಸುವಾಗ ‘ಐಎಂಇಸಿ’ ಯೋಜನೆಯನ್ನು ಪ್ರಸ್ತಾಪಿಸಿದರು. ಈ ಯೋಜನೆಯು ಭಾರತದಲ್ಲಿ ಮುಂದಿನ ನೂರುವರ್ಷಗಳಲ್ಲಿ ಜಾಗತಿಕ ವ್ಯಾಪಾರಕ್ಕೆ ಆಧಾರವಾಗಲಿದೆ ಮತ್ತು ಇದು ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವದಲ್ಲಿ ಗೇಮ್ ಚೇಂಜರ್ ಆಗಲಿದೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ.ಭಾರತದ ನೆಲದಲ್ಲಿ ಈ ಯೋಜನೆಯನ್ನು ಪ್ರಾರಂಭಿಸುವುದು ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಲಿದೆ ಎಂದು ಅವರು ಬಣ್ಣಿಸಿದ್ದಾರೆ. ‘ಐಎಂಇಸಿ’IMEC ಯೋಜನೆ ಏನು?ಪ್ರಪಂಚದ ವ್ಯಾಪಾರದ ಜೀವನಾಡಿ ಆಗುವ ಕುರಿತಂತೆ ಐಮ್ಯಾಕ್ ಯೋಜನೆ IMEC ವಿವರ ಹೀಗಿದೆ ಯೋಜನೆಯು ಮಧ್ಯಪ್ರಾಚ್ಯದ ಮೂಲಕ ಯುರೋಪಿನೊಂದಿಗೆ ಭಾರತವನ್ನು…

Read More

ಚಿಂತಾಮಣಿ:ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಬರುವಂತ ಶೈಕ್ಷಣಿಕ ವರ್ಷಕ್ಕೆ ಸರ್ಕಾರಿ ಇಂಜನಿಯರಿಂಗ್ ಕಾಲೇಜು ಕಾರ್ಯರಂಭ ಆಗುವ ಸೂಚನೆ ಕಂಡುಬರುತ್ತಿದೆ.ರಾಜ್ಯದ ಉನ್ನತ ಶಿಕ್ಷಣ ಸಚಿವರು ಚಿಕ್ಕಬಳ್ಳಾಪುರ ಜಿಲ್ಲೆ ಉಸ್ತುವಾರಿ ಸಚಿವ ಹಾಗು ಚಿಂತಾಮಣಿ ಶಾಸಕ ಡಾ.ಎಂ.ಸಿ.ಸುಧಾಕರ್‌ ಚಿಕ್ಕಬಳ್ಳಾಪುರ ಜಿಲ್ಲೆಗೆ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಮಂಜೂರಾತಿ ಪ್ರಕ್ರಿಯೆ ಪೂರ್ಣಗೊಳಿಸಿದ್ದು ಆರಂಭಿಕವಾಗಿ ಖಾಸಗಿ ಕಟ್ಟಡದಲ್ಲಿ ಸರ್ಕಾರಿ ಇಂಜನಿಯರಿಂಗ್ ಕಾಲೇಜು ಆರಂಭವಾಗಲಿದೆ ಎನ್ನುವ ಮಾತು ದಟ್ಟವಾಗಿ ಕೇಳಿಬರುತ್ತಿದ್ದು ಮುಂದಿನ ಜುನ್ ಜುಲೈ ತಿಂಗಳಲ್ಲಿ ದಾಖಲಾತಿಗಳು ಪ್ರಾರಂಭವಾಗಿ ದಿನಗಳಲ್ಲಿ ಕಾಲೇಜಿನ ತರಗತಿಗಳು ಶುರುವಾಗಲಿದೆ ಎನ್ನವಮಾತು ಕೇಳಿಬರುತ್ತಿದೆ.ಸಚಿವ ಡಾ.ಸುಧಾಕರ್ ಹೇಳಿರುವಂತೆ ಚಿಂತಾಮಣಿ ನಗರದ ಬೆಂಗಳೂರು ರಸ್ತೆಯಲ್ಲಿ ಯಾದವ ಹಾಸ್ಟಲ್ ಬಳಿ ಸುಮಾರು ಹತ್ತು ಎಕರೆ ಜಾಗವನ್ನು ಇಂಜನಿಯರಿಂಗ್ ಕಾಲೇಜು ನಿರ್ಮಿಸಲು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗೆ ಮಂಜೂರು ಮಾಡಿದ್ದು ಆರಂಭಿಕ 70 ಕೋಟಿ ಅಂದಾಜು ವೆಚ್ಚದಲ್ಲಿ ಎಂಜಿನಿಯರಿಂಗ್ ಕಾಲೇಜನ್ನು ನಿರ್ಮಿಸುವ ಬಗ್ಗೆ ತಿಳಿಸಿದ್ದಾರೆ, ಕಾಲೇಜು ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಅದರಲ್ಲೂ ವೃತ್ತಿ ಪರ…

Read More

ನ್ಯೂಜ್ ಡೆಸ್ಕ್: ಭಾರತದ ರಾಜಕೀಯದ ಲೋಹದ ಪುರುಷ ಬಿಜೆಪಿ ಭೀಷ್ಮ ಎಂದೇ ಜನಪ್ರಿಯರಾದ ಮಾಜಿ ಉಪ ಪ್ರಧಾನಿ, ಅಪ್ರತಿಮ ಹೋರಾಟಗಾರ, ಹಿರಿಯ ಮುತ್ಸದ್ದಿ ರಾಜಕಾರಣಿ, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಟ್ಟಾಳು,ಸಂಘಟನೆಗಾರ, ಲಾಲ್ ಕೃಷ್ಣ ಅಡ್ವಾಣಿ (ಎಲ್ ಕೆ ಅಡ್ವಾಣಿ 96) ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಅನ್ನು ಭಾರತ ಸರ್ಕಾರ ಘೋಷಣೆ ಮಾಡಿದೆ.ಭಾರತದ ರಾಜಕೀಯ ಇತಿಹಾಸದಲ್ಲಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಪ್ರತ್ಯಕ ಹೆಸರು ಇದೆ ಕೇವಲ ಎರಡು ಸ್ಥಾನಗಳಿದ್ದ ಬಿಜೆಪಿ ಇಂದು ಪೂರ್ಣಪ್ರಮಾಣದ ಅಧಿಕಾರದಲ್ಲಿ ಇದೆ ಎನ್ನುವುದಾದರೆ ಅದಕ್ಕೆ ಎಲ್ ಕೆ ಅಡ್ವಾಣಿ ರಾಜಕೀಯ ಕೃಷಿ ಸಾಕಷ್ಟು ಇದೆ 1980 ಮತ್ತು 1990 ರ ದಶಕದಲ್ಲಿ, ಅಡ್ವಾಣಿ ಅವರು ಬಿಜೆಪಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ರಾಜಕೀಯ ಶಕ್ತಿಯನ್ನಾಗಿಸಿದ ಅಡ್ವಾನಿ ಸ್ವಾತಂತ್ರ್ಯ ನಂತರದಲ್ಲಿ ಕಾಂಗ್ರೆಸ್ ನಂತಹ ಪ್ರಬಲ ರಾಷ್ಟ್ರೀಯ ಪಕ್ಷದ ಎದರು ಮತ್ತೊಂದು ರಾಷ್ಟ್ರೀಯ ಪಕ್ಷವನ್ನಾಗಿಸಿ ಲೋಕಸಭೆಯಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವನ್ನಾಗಿಸಲು ಕಾರಣಿಭೂತರಾಗಿದ್ದಾರೆ. ಇಂದು…

Read More

ಶ್ರೀನಿವಾಸಪುರ:ತಾಲೂಕಿನ ಕಸಬಾ ಹೋಬಳಿ ಪಾಳ್ಯ ಗ್ರಾಮದ ಹಾಲು ಉತ್ಪಾದಕರ ಸಂಘಕ್ಕೆ ಹಿರಿಯ ಸಹಕಾರಿ ಧುರಿಣ ಹಾಗು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಭೈರಾರೆಡ್ಡಿ ಆರನೆಯ ಬಾರಿಗೆ ಆವಿರೋಧವಾಗಿ ಆಯ್ಕೆಯಾಗಿದ್ದಾರೆ.ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಭೈರಾರೆಡ್ಡಿ ಒಬ್ಬರೆ ನಾಮ ಪತ್ರವನ್ನು ಸಲ್ಲಿಸಿದ್ದರು. ಚುನಾವಣಾಧಿಕಾರಿಯಾಗಿದ್ದ ಶಂಕರ ನಾಮಪತ್ರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಪರಿಶೀಲಿಸಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಆಗಿರುವುದನ್ನು ಘೋಷಿಸಿದರು.ಸುಮಾರು 12 ಮಂದಿ ನಿರ್ದೇಶಕರು ಇರುವ ಸಹಕಾರ ಸಂಘದಲ್ಲಿ ಭೈರಾರೆಡ್ಡಿ ಆರನೆಯ ಬಾರಿಗೆ ಅಧ್ಯಕ್ಷರಾಗಿ ಅಯ್ಕೆಯಾಗುವ ಮೂಲಕ ದಾಖಲೆ ಮಾಡಿರುತ್ತಾರೆ.ಅಧ್ಯಕ್ಷರಾಗಿ ಆಯ್ಕೆಯಾದ ಭೈರಾರೆಡ್ಡಿ ಮಾತನಾಡಿ ಕಸಬಾ ಹೋಬಳಿಯಲ್ಲಿ ಅತಿ ಹೆಚ್ಚುಹಾಲು ಶೇಖರಣೆಯಾಗುತ್ತಿರುವ ಹೆಗ್ಗಳಿಕೆ ಇರುವ ಪಾಳ್ಯ ಹಾಲು ಉತ್ಪಾದಕರ ಸಂಘದ ಅಭಿವೃದ್ಧಿಗಾಗಿ ಸದಸ್ಯರು ಮತ್ತು ನಿರ್ದೇಶಕರ ವಿಶ್ವಾಸ ತೆಗೆದುಕೊಂಡು ಯಾವುದೇ ಪಕ್ಷ ಬೇಧವಿಲ್ಲದೇ ಶ್ರಮಿಸುವುದಾಗಿ ಹೇಳಿದರು. ಹಾಲು ಉತ್ಪಾದಕರಿಗೆ ಸಹಕಾರ ಸಂಘದಿಂದ ಬರುವ ಸವಲತ್ತು ಮತ್ತು ಸಾಲ ಸೌಲಭ್ಯಗಳನ್ನು ನೇರವಾಗಿ ಹಾಲು ಉತ್ಪಾದಕರಿಗೆ ತಲುಪಿಸುವಂತ ಕಾರ್ಯ ಮಾಡುವುದಾಗಿ ಭರವಸೆ…

Read More

ನ್ಯೂಜ್ ಡೆಸ್ಕ್: ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಮದ್ಯಂತರ ಬಜೆಟ್ ನಲ್ಲಿ ಮೂಲಭೂತ ಸೌಕರ್ಯಗಳು ಸೇರಿದಂತೆ ವರ್ಗವಾರು ವಿಂಗಡನೆ ಮಾಡಲಾಗಿದೆ. ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಇರುವ ಕಾರಣ ಮೋದಿ ಸರ್ಕಾರದ 2ನೇ ಅವಧಿಯ ಹಾಗೂ ನೂತನ ಸಂಸತ್‌ನ ಭವನದದಲ್ಲಿ ಮೊದಲ ಬಾರಿಗೆ ಮಂಡಿಸಿರುವ ಬಜೆಟ್ ನಲ್ಲಿ ಟಾರ್ಗೆಟ್ 2047 ಎಂಬ ಪರಿಕಲ್ಪನೆ ಸ್ಪಷ್ಟವಾಗಿದೆ.ದೇಶದ ಆರ್ಥಿಕತೆಯಲ್ಲಿ ಅಗಾಧ ಬೆಳವಣಿಗೆಯಾಗಿದ್ದು ಜಾಗತಿಕ ಮಟ್ಟದಲ್ಲಿ ಆರ್ಥಿಕ ಸಂಕಷ್ಟ ಇದೆಯಾದರು ಭಾರತ ದೇಶ ಆರ್ಥಿಕತೆಯಲ್ಲಿ ಸ್ಥಿರವಾಗಿದೆ,ಮೋದಿ ಸಾರಥ್ಯದ ಆಡಳಿತದಲ್ಲಿ ಭಾರತ ಆರ್ಥಿಕಾಭಿವೃದ್ದಿ ಕಂಡಿದೆ ಎಂದು ಆರ್ಥಿಕ ಮಂತ್ರಿ ನಿರ್ಮಲಾ ಸೀತಾರಾಮನ್ ಬಜೆಟ್ ವೇಳೆ ಪ್ರಸ್ತಾಪಿಸಿದ್ದಾರೆ. ರೈತಾಪಿವರ್ಗ,ಬಡವರು,ಯುವಕರು ಹಾಗು ಮಹಿಳೆಯರು ಎಂದು ವರ್ಗವಾರು ವಿಂಗಡನೆ ಮಾಡುವುದರೊಂದಿಗೆ ಜಾತಿ, ಧರ್ಮ, ಆರ್ಥಿಕ ಭೇದವಿಲ್ಲದೆ ಎಲ್ಲ ಸಮುದಾಯದವರಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ 2047 ಹೊತ್ತಿಗೆ ದೇಶವನ್ನು ಬಡತನ ಮುಕ್ತ ಮಾಡುವ ಗುರಿ ಹೊಂದಲಾಗಿದ್ದು,ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್ ಎಂಬ ನಾನ್ನೂಡಿಯಂತೆ ‘ಜೈ…

Read More

ನ್ಯೂಜ್ ಡೆಸ್ಕ್: ಸ್ವಾತಂತ್ರ್ಯ ಹೋರಾಟಗಾರ ಸಮಾಜವಾದಿ ಆಂದೋಲನಕಾರ ಮಾಜಿ ಮುಖ್ಯಮಂತ್ರಿ ದಿವಂಗತ ಕರ್ಪೂರಿ ಠಾಕೂರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ಘೋಷಿಸಿ ಭಾರತ ಸರ್ಕಾರ ಗೌರವಿಸಿದೆ.ಅವರ ಜನ್ಮ ಶತಮಾನೋತ್ಸವದ ಹಿನ್ನಲೆಯಲ್ಲಿ ಭಾರತ ಸರ್ಕಾರ ಠಾಕೂರ್‌ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಲು ನಿರ್ಧರಿಸಿರುವುದು ಸರ್ವತಾ ಹರ್ಷ ವ್ಯಕ್ತವಾಗಿದೆ.ಹಿಂದುಳಿದ ಮತ್ತು ಅವಕಾಶ ವಂಚಿತರ ಉನ್ನತಿಗಾಗಿ ಕರ್ಪೂರಿ ಅವರು ಬದ್ಧತೆ ಮತ್ತು ದೂರದೃಷ್ಟಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದು ಭಾರತದ ಸಾಮಾಜಿಕ ಹಾಗು ರಾಜಕೀಯದಲ್ಲಿ ಅಳಿಸಲಾಗದಂತಹ ಛಾಪು ಮೂಡಿಸಿದ್ದಾರೆ.ರಾಜಕೀಯ ವ್ಯವಸ್ಥೆಯಲ್ಲಿ ಯಾರಾದರೂ ಸಾಮಾಜಿಕ ನ್ಯಾಯ ಪ್ರತಿಪಾದಿಸಿದರೆ ಅದಕ್ಕೆ ಪ್ರೇರಣೆ ಕರ್ಪೂರಿ ಠಾಕೂರ್ ಎನ್ನಬಹುದು.ಇಂದು ಅವರು ಇಲ್ಲ ಆದರೆ ಅವರ ಸಮಾಜವಾದಿ ಚಿಂತನೆಗಳು ಜೀವಂತವಾಗಿದೆ ಅತ್ಯಂತ ಸರಳ ಜೀವಿಯಾಗಿದ್ದ ಕರ್ಪೂರಿ ಠಾಕೂರ್ ಹೃದಯವಂತ ನಾಯಕ,ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಭೂ ಸುಧಾರಣೆಗಳನ್ನು ಜಾರಿಗೆ ತಂದು ಜಮೀನ್ದಾರರಿಂದ ಭೂರಹಿತ ದಲಿತರಿಗೆ ಭೂಮಿಯನ್ನು ಮರುಹಂಚಿಕೆ ಮಾಡಲು ಕಾರಣಕರ್ತರಾಗಿ ಜನರಿಂದ ಜನನಾಯಕ ಪೀಪಲ್ಸ್ ಹೀರೋ ಎಂದು…

Read More