Author: Srinivas_Murthy

ಶ್ರೀನಿವಾಸಪುರ:ಕೋಲಾರ,ಬೆಂಗಳೂರು ಗ್ರಾಮಾಂತರ,ಹಾಸನ, ಮಂಡ್ಯ,ತುಮಕೂರು, 5+23 ಸೀಟು ಹಂಚಿಕೆಯ ಸೂತ್ರದ ಅಡಿಯಲ್ಲಿ ವನ್ನು ಬಿಜೆಪಿ-ಜೆಡಿಎಸ್‌ ಮೈತ್ರಿ ಬಹುತೇಕ ಫೈನಲ್ ಎನ್ನುವ ಮಾತು ಕೇಳಿಬರುತ್ತಿದೆ.ಜೆಡಿಎಸ್ ಭದ್ರಕೋಟೆಯಾಗಿರುವ ಕೋಲಾರ ಮೀಸಲು ಕ್ಷೇತ್ರ ಸೇರಿದಂತೆ ಮಂಡ್ಯ, ಬೆಂಗಳೂರು ಗ್ರಾಮಾಂತರ, ಹಾಸನ,ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳಲ್ಲಿ ತನ್ನ ಸಾಂಪ್ರದಾಯಿಕ ಪ್ರಾಭಲ್ಯ ಹೊಂದಿರುವ ಜೆಡಿಎಸ್ ಐದು ಕ್ಷೇತ್ರಗಳನ್ನು ಉಳಸಿಕೊಳ್ಳಲು ಜೆಡಿಎಸ್ ಶತಾಯಗತಾಯ ಪ್ರಯತ್ನ ನಡೆಸಿ ಅದನ್ನು ಮೈತ್ರಿ ಧರ್ಮದಲ್ಲಿ ಬಿಜೆಪಿ ವರಿಷ್ಟರ ಬಳಿ ಕೇಳಿತ್ತು ಅದರಂತೆ ರಾಜ್ಯ ಬಿಜೆಪಿ ನಾಯಕರ ಅಭಿಪ್ರಾಯವನ್ನು ಪಡೆದಂತ ಬಿಜೆಪಿ ವರಿಷ್ಠರು, ಕೇಂದ್ರ ಗೃಹಮಂತ್ರಿ ಅಮಿತ್ ಷಾ ಗಮನಕ್ಕೆ ತಂದಿದ್ದರು ಅದರಂತೆ ಅಮಿತ್ ಷಾ ತಾವೆ ಆಸಕ್ತಿ ತೋರಿ ದೆಹಲಿಯ ಪೊಲಿಟಿಕಲ್ ಅನಾಲಿಸ್ಟ ತಂಡದ ಕೈಯಲ್ಲಿ ಸರ್ವೆ ಮಾಡಿಸಿದ್ದು ಒಂದು ತಿಂಗಳ ಅವಧಿಯಲ್ಲಿ ಮಾಡಿಸಿರುವ ಸರ್ವೆಯಲ್ಲಿ ಐದು ಕ್ಷೇತ್ರಗಳಲ್ಲಿ ಜೆಡಿಎಸ್ ಗೆ ಅನಕೂಲಕರವಾದ ವಾತವರಣ ಇದೆ ಎನ್ನವ ಮಾಹಿತಿ ಲಭ್ಯವಾಗಿದಿಯಂತೆ,ಸರ್ವೆ ವರದಿಯಂತೆ ಐದು ಕ್ಷೇತ್ರಗಳನ್ನು ಜೆಡಿಎಸ್ ಗೆ ನೀಡಲಾಗುತ್ತಿದೆ ಎನ್ನುವ ಮಾಹಿತಿ ಹೊರ ಬಿದಿದ್ದೆ.ಬೆಂಗಳೂರು ಗ್ರಾಮಾಂತರ ಅಥಾವ…

Read More

ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕಿನ ನಿರುದ್ಯೋಗ ಯುವಕರ ಸಮಸ್ಯೆ ನಿವಾರಿಸಲು ತಾಲೂಕಿನ ಎರಡು ಕಡೆ ಕೈಗಾರಿಕಾ ಪ್ರದೇಶಗಳ ಸ್ಥಾಪನೆ ಮಾಡಿ ಕೈಗಾರಿಗಳನ್ನು ತರುಲು ತಾವು ಶ್ರಮಿಸುತ್ತಿರುವುದಾಗಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು.ಅವರು ಇಂದು ತಾಲೂಕು ಆಡಳಿತ ಆಯೋಜಿಸಿದ್ದ ಎಪ್ಪತೈದನೆ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ಅನುಕೂಲ ಆಗುವ ದಿಸೆಯಲ್ಲಿ ಮುಳಬಾಗಿಲು ರಸ್ತೆಯಲ್ಲಿನ ಯದರೂರು ಬಳಿ ಹಾಗು ಮದನಪಲ್ಲಿ ರಸ್ತೆಯಲ್ಲಿ ಕೈಗಾರಿಕಾ ಪ್ರದೇಶಗಳನ್ನು ಸ್ಥಾಪನೆಗೆ ಆದ್ಯತೆ ನೀಡುವುದಾಗಿ ತಿಳಿಸಿದರು ಜನರ ನೀರಿಕ್ಷೇಗಳಂತೆ ತಾಲೂಕಿನ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತಿರುವೆ ಶಿಕ್ಷಣ,ಆರೋಗ್ಯ ಕ್ಷೇತ್ರಗಳ ಆಭಿವೃದ್ಧಿಗೂ ಆದ್ಯತೆ ನೀಡಿದ್ದು ಕ್ಷೇತ್ರದಲ್ಲಿ ಅಭಿವೃದ್ಧಿಯೇ ಧ್ಯೆಯವಾಗಿ ಶ್ರೀನಿವಾಸಪುರ ಪಟ್ಟಣವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಹೇಳಿದರು.ವಿಧಾನಪರಿಷತ್ ಸದಸ್ಯ ವೈ.ಎ.ನಾರಯಣಸ್ವಾಮಿ ಮಾತನಾಡಿ 1950 ಜನವರಿ 26 ಭಾರತ ತನ್ನ ಸಂವಿಧಾನವನ್ನು ಜಾರಿಗೊಳಿಸಿದ ದಿನ.ರಾಜಾಡಳಿತವನ್ನು ಅಂತ್ಯಗೊಳಿಸಿ ಪ್ರಜಾಪ್ರಭುತ್ವದ ಅಸ್ಥಿತ್ವವನ್ನು ಸ್ಥಾಪಿಸಿದ ದಿನವಾದ ಗಣರಾಜ್ಯೋತ್ಸವ ಭಾರತೀಯರ ಪಾಲಿಗೆ ಅತ್ಯಂತ ಮಹತ್ವ ಹಾಗು ಹೆಮ್ಮೆಯ ದಿನವಾಗಿದ್ದು,ಇವತ್ತು ಭಾರತ ದೇಶದ ಅಭಿವೃದ್ಧಿ ಪ್ರಪಂಚದ ಎಲ್ಲಾ…

Read More

ಮೈಸೂರು-ಬೆಂಗಳೂರು-ಚನೈ ನಡುವೆ ಪ್ರಯಾಣದ ಅವಧಿ ಕಡಿಮೆ ಮಾಡುವ ಉದ್ದೇಶದಿಂದ ಹೈಸ್ಪಿಡ್ ಬುಲೆಟ್ ಟ್ರೈನ್ ನ್ಯೂಜ್ ಡೆಸ್ಕ್: ಭಾರತದ ರೈಲು ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಕಾಣಸಿಗುತ್ತಿದೆ ಸಾಂಪ್ರದಾಯಿಕ ರೈಲು ಮಾರ್ಗಗಳಲ್ಲಿ ವಂದೇಭಾರತ ಸೆಮಿ ಸ್ಪೀಡ್ ರೈಲು ಸಾಗುತ್ತಿದೆ, ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಭಾರತ ವಿದೇಶಿ ಸಹಯೋಗದಲ್ಲಿ ಹೈಸ್ಪೀಡ್ ರೈಲುಗಳ ಸಂಚರಾಕ್ಕೆ ಅನವು ಮಾಡಿಕೊಡಲು ನ್ಯಾಶನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಮುಂದಾಗಿದೆ ಇದರಂತೆ ಮೊದಲ ದಕ್ಷಿಣ ಭಾರತದ ಎರಡು ಪ್ರಮುಖ ರಾಜ್ಯಗಳ ರಾಜಧಾನಿಗಳು ಹಾಗು ಪ್ರಧಾನ ವ್ಯಾಪಾರಿ ಕೇಂದ್ರಗಳಾಗಿರುವ ಬೆಂಗಳೂರು ಹಾಗೂ ಚೆನ್ನೈ ನಡುವೆ ಈಗಾಗಲೇ ಸೆಮಿ ಹೈಸ್ಪೀಡ್‌ ರೈಲು ಎಂದು ಖ್ಯಾತಿಪಡೆದಿರುವ ವಂದೇ ಭಾರತ್‌ ರೈಲು ಸಂಚಾರ ಆರಂಬವಾಗಿರುವ ಬೆನ್ನಲ್ಲೇ ಮೈಸೂರು-ಬೆಂಗಳೂರು-ಚೆನ್ನೈ ಬುಲೆಟ್ ರೈಲು ಯೋಜನೆ ಕುರಿತಂತೆ ಯೋಜನೆಯ ಕಾಮಗಾರಿಗೆ ದಿನಗಣನೆ ಆರಂಭವಾಗಿದೆ ಈ ಸಂಬಂಧ ಭೂಮಾಪನ ಕಾರ್ಯ ನಡೆಯುತ್ತಿದ್ದು,ದಕ್ಷಿಣ ಭಾರತದಲ್ಲಿಯೇ ಪ್ರಥಮ ಎನ್ನುವಂತೆ ಮೈಸೂರು-ಬೆಂಗಳೂರು ಮತ್ತು ಚೆನ್ನೈ ನಗರಗಳನ್ನು ಸಂಪರ್ಕಿಸುವ ಬುಲೆಟ್ ಟ್ರೈನ್ ಎಂದು ಕರೆಯಲ್ಪಡುವ…

Read More

ಶ್ರೀನಿವಾಸಪುರ:ದಾಯದಿಗಳ ನಡುವಿನ ಜಮೀನಿನ ವಿವಾದ ಗಲಾಟೆಗಳಾಗಿ ಎರಡು ಕುಟುಂಬದವರು ಬಡಿದಾಡಿಕೊಂಡಿರುವ ಘಟನೆ ರೋಣೂರು ಹೋಬಳಿಯ ದಿಂಬಾಲ ಗ್ರಾಮದಲ್ಲಿ ನಡೆದಿರುತ್ತದೆ.ದಾಯಾದಿ ಕಲಹದಲ್ಲಿ ದಂಪತಿ ಗಾಯಗೊಂದ್ದು ಇವರನ್ನು ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ.ಜಮೀನಿನಲ್ಲಿ ಕೆಲಸ ಮಾಡುವ ವೇಳೆ ವಿನಾಕಾರಣ ಬಂದು ಹಲ್ಲೇ ಮಾಡಿದ್ದಾರೆಂದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಾರೆಡ್ಡಿ ಆರೋಪ ಮಾಡಿರುತ್ತಾರೆ.ಅಣ್ಣ-ತಮ್ಮಂದಿರ ನಡುವಿನ ಜಮೀನು ವಿವಾದ ನ್ಯಾಯಾಲಯದಲ್ಲಿದೆ,ಇದನ್ನು ದಾಖಲು ಮಾಡಿರುವುದನ್ನೆ ದೃಷ್ಟಿಯಲ್ಲಿರಿಸಿಕೊಂಡುಅಗಾಗ ಖ್ಯಾತೆ ತಗೆದು ಜಗಳ ಕಾಯುತ್ತಿದ್ದರು ಎಂದು ಶಿವಾರೆಡ್ಡಿ ಹೇಳುತ್ತಾರೆ.ಶಿವಾರೆಡ್ಡಿ ತನ್ನ ಸ್ವಂತ ದೊಡ್ಡಪ್ಪನ ಮಕ್ಕಳಾದ ಸುಧಾಕರ್, ಶ್ರೀದರ್, ಚಂದ್ರಾ ರೆಡ್ಡಿ, ಬೈರೆಡ್ಡಿ ಒಗ್ಗೂಡಿ ನನ್ನ ಹಲ್ಲೆ ಮಾಡಿರುವುದಾಗಿ ಹೇಳಿದ್ದಾರೆ.ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಶ್ರೀನಿವಾಸಪುರ:ಶ್ರೀರಾಮನ ಪ್ರಾಣಪ್ರತಿಷ್ಟಾಪನೆ ಅಂಗವಾಗಿ ಶ್ರೀನಿವಾಸಪುರ ಪಟ್ಟಣದ ಆಟೋಚಾಲಕರ ಸಂಘದ ವತಿಯಿಂದ ಅನ್ನದಾನ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಆಟೋಚಾಲಕರ ಸಂಘದ ಮುಖ್ಯಸ್ಥ ಜಗದೀಶ್@ಆಟೋಜಗನ್ ಮಾತನಾಡಿ ಶ್ರೀರಾಮ ಭಕ್ತಿಯ ಪ್ರತಿಕ ಅಂತಹ ರಾಮನ ಮಂದಿರ ಉದ್ಘಾಟನೆ ಆಗಿರುವುದು ನಮ್ಮ ಹಿಂದಿನ ಪೀಳಿಗೆಯವರಿಗೆ ಸಿಗದ ಅದೃಷ್ಟ ನಮಗೆ ಸಿಕ್ಕಿದೆ ಇದು ನಾವು ಮಾಡಿರುವ ಪುಣ್ಯದ ಫಲ ಎಂದು ಎಂದರು. ಸೌಹಾರ್ದತೆಯಿಂದ ರಾಮಮಂದಿರ ಲೋಕಾರ್ಪಣೆಯಾಗಿದ್ದು ಶ್ರೀರಾಮನ ಕೃಪಾಕಟಾಕ್ಷ ನಮ್ಮಂತ ದುಡಿಯುವ ವರ್ಗದ ಮೇಲೆ ಇರುತ್ತದೆ ಎನ್ನವ ನಂಬಿಕೆ ಇಟ್ಟು ಬದುಕು ಸಾಗಿಸೋಣ ಎಂದರು.ಬಸ್ ನಿಲ್ದಾಣದ ಬಳಿಯ ಮಹಾತ್ಮಗಾಂಧಿ ಆಟೋಚಾಲಕರ ಸಂಘ ಹಾಗು ಮುಳಬಾಗಿಲು ವೃತ್ತದ ಆಟೋಚಾಲಕರು ತಮ್ಮ ನಿಲ್ದಾಣಗಳಲ್ಲಿ ಕೆಸರಿ ಧ್ವಜಗಳನ್ನು ಹಾರಿಸಿ ವಿದ್ಯತ್ ದೀಪಾಲಂಕರಣ ಮಾಡಿ ಶ್ರೀರಾಮನ ಫೋಟೋ ಇಟ್ಟು ಪೂಜೆ ಸಲ್ಲಿಸಿ ಪುನೀತರಾದರು.ಅವರು ಕಟ್ಟಿದ್ದ ರಾಮರಾಜ್ಯ ಪ್ರಾರಂಭ ಎನ್ನುವ ಬ್ಯಾನರ್ ಅಕರ್ಷಣೀಯವಾಗಿತ್ತು.ಹಿರಿಯ ಆಟೋಚಾಲಕ ರಮೇಶ್ ಮುಂತಾದವರು ಇದ್ದರು.

Read More

ಶ್ರೀನಿವಾಸಪುರ: ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಶ್ರೀನಿವಾಸಪುರದಾದ್ಯಂತ ಹಳ್ಳಿ ಹಳ್ಳಿಗಳಲ್ಲಿ, ವಾರ್ಡುಗಳಲ್ಲಿ, ಗಲ್ಲಿಗಳು ಸೇರಿದಂತೆ ಎಲ್ಲಾ ರಸ್ತೆಗಳು ಕೆಸರಿಮಯವಾಗಿ ಸರ್ವವೂ ರಾಮಮವಾಗಿತ್ತು ಎತ್ತನೋಡಿದರು ಶ್ರೀರಾಮನ ಚಿತ್ರಹೊತ್ತ ಎತ್ತರದ ಬ್ಯಾನರಗಳು ರಾಜಾಜಿಸುತ್ತ ಇದ್ದರೆ,ಮೈಕುಗಳಲ್ಲಿ ಶ್ರೀರಾಮನ ಹಾಡುಗಳು ಅಬ್ಬರದ ಸಂಗೀತದಲ್ಲಿ ಕೇಳಿಬರುತಿತ್ತು ಒಟ್ಟಾರೆಯಾಗಿ ತಾಲೂಕಿನಾದ್ಯಂತ ರಾಮನಜಪ ನಿರಂತರವಾಗಿತ್ತು.ವಿಶೇಷವಾಗಿ ಗ್ರಾಮೀಣ ಭಾಗದ ಜನರು ಅತ್ಯಂತ ಉತ್ಸಾಹದಿಂದ ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಅನ್ವಯ ಮಹಿಳೆಯರು ತಮ್ಮ ಮನೆಗಳ ಮುಂದೆ ಬಣ್ಣ ಬಣ್ಣದ ಚಿತ್ತಾರದ ರಂಗೋಲಿಗಳನ್ನು ಬಿಡಿಸಿ ಹಬ್ಬದ ಅಡುಗೆ ಮಾಡಿ ಸಡಗರದಿಂದ ರಾಮೋತ್ಸವ ಆಚರಿಸಿದರು.ಮಧ್ಯಾಹ್ನದ ಹೊತ್ತಿಗೆ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಆಗುತ್ತಿದ್ದಂತೆ ದೀಪಾವಳಿಯನ್ನು ನೆನಪಿಸುವಂತೆ ಪಟಾಕಿ ಸಿಡಿಸಿ ಕೆಸರಿಶಾಲು ಹಾಕಿ ಯುವಕರು ಕುಣಿದು ಕುಪ್ಪಳಿಸಿ ಹರ್ಷೋದ್ಘಾರದೊಂದಿಗೆ ಸಂಬ್ರಮಿಸಿದರು.ತಾಲೂಕಿನ ಅರಿಕೇರಿಯ ಪುರಾಣ ಪ್ರಸಿದ್ಧ ಶ್ರೀ ಕೋದಂಡರಾಮ ದೇವರ ಮೆರವಣಿಗೆಯನ್ನು ಶ್ರೀನಿವಾಸಪುರ ಪಟ್ಟಣದ ರಥಬೀದಿಗಳಲ್ಲಿ ನಡೆಸಿದ ದೇವಾಲಯದ ಅಧ್ಯಕ್ಷ ಇಂದಿರಾಭವನ್ ರಾಜಣ್ಣ, ದೇವಾಲಯದಲ್ಲಿ ಶ್ರೀ ರಾಮತಾರಕ ಹೋಮ ಹವನ ಮಾಡಿ ಅನ್ನ ಸಂತರ್ಪಣೆ ನಡೆಸಿದರು. ಯಲ್ದೂರಿನ ಐತಿಹಾಸಿಕ ಶ್ರೀ…

Read More

ಶ್ರೀನಿವಾಸಪುರ:ಐನೂರೈವತ್ತು ವರ್ಷಗಳ ದೀರ್ಘಕಾಲದಿಂದ ರಾಮಜನ್ಮಭೂಮಿಗೆ ಕಾಯುತ್ತಿದ್ದ ದಿನಗಳಿಗೆ ಅಂತ್ಯ ಹಾಡುವ ಕಾಲ ಸನ್ನಿಹಿತವಾಗಿದೆ ಈ ತಿಂಗಳ 22ರಂದು ಸೋಮವಾರ ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆ ಕಾರ್ಯನಡೆಯಲಿದೆ. ಈ ನಿಮಿತ್ತ ಇಡೀ ದೇಶವೆ ರಾಮಮಯವಾಗಿದೆ. ಈ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗುವ ಸಂದರ್ಭದಲ್ಲಿ, ಹಿಂದೆ ನಡೆದಿರುವ ಹೋರಾಟದ ಪಾತ್ರಗಳು ಸ್ಮರಣೀಯವಾದದ್ದು. ಅಯೋಧ್ಯೆಯ ಶ್ರೀರಾಮಜನ್ಮಭೂಮಿ ಮುಕ್ತಿ ಆಂದೋಲನದಲ್ಲಿ 1990ರ ಅಕ್ಟೋಬರ್ 30 ಮತ್ತು 1992ರ ಡಿಸೆಂಬರ್ 6ರ ಕರಸೇವೆಗಳು ನಿರ್ಣಾಯಕ ಪಾತ್ರ ವಹಿಸಿದವು. 1990ರಲ್ಲಿ ಕರಸೇವಕರ ಮೇಲೆ ಗೋಲಿಬಾರ್ ನಡೆದರೆ, 1992ರ ಡಿಸೆಂಬರ್ 6ರಂದು ವಿವಾದಿತ ಕಟ್ಟಡ ಧರೆಗುರುಳಿತು. ಈ ಕರಸೇವೆಯಲ್ಲಿ ಪಾಲ್ಗೊಂಡವರು ಅಂದಿನ ಹೋರಾಟದ ಹಾದಿಯನ್ನು ಮೆಲುಕು ಹಾಕುತ್ತ ಏನೆಲ್ಲ ಹೇಳಿದರು ಎಂದು ಇಲ್ಲಿ ವಿವರಿಸಲಾಗಿದೆ.1990 ರ ಅವಧಿಯಲ್ಲಿ ಬಿಜೆಪಿ ವರಿಷ್ಠ ಎಲ್.ಕೆ.ಅಡ್ವಾನಿ ಅವರು ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣದ ಕುರಿತು ಜಾಗೃತಿ ಮೂಡಿಸಲು ದೇಶದ್ಯಾಂತ ರಥಯಾತ್ರೆ ನಡೆಸಿದರು. ದೇಶಾದ್ಯಂತ ಸಂಚರಿಸಿದ ರಥಯಾತ್ರೆ ಶ್ರೀನಿವಾಸಪುರದಲ್ಲೂ ಸಂಚರಿಸಿ ರಾಮಮಂದಿರ ಬಗ್ಗೆ ಸಂಚಲನ ಉಂಟುಮಾಡಿತ್ತು. ಶ್ರೀರಾಮನ…

Read More

ಶ್ರೀನಿವಾಸಪುರ:ರಾಮಲಲ್ಲಾನ ಪ್ರಾಣಪ್ರತಿಷ್ಟೆ ನಡೆಯುವ ಜನವರಿ 22 ಹುಟ್ಟುವುದಕ್ಕೆ ಮುಂಚಿತವಾಗಿಯೇ ಶ್ರೀನಿವಾಸಪುರದಲ್ಲಿ ರಾಮನಾಮ ಜಪ ಶುರುವಾಗಿದೆ ಇಂದು ಭಾನುವಾರ ಅರಕೇರಿ ಶ್ರೀಕೋದಂಡರಾಮ ದೇವರ ಉತ್ಸವವನ್ನು ಇಂದು ಶ್ರೀನಿವಾಸಪುರ ಪಟ್ಟಣದ ರಥಬೀಧಿಗಳಲ್ಲಿ ಮೆರವಣಿಗೆ ಮಾಡಲಾಯಿತು ಅರಕೇರಿ ಶ್ರೀಕೋದಂಡರಾಮ ದೇವಾಲಯದ ಅಧ್ಯಕ್ಷ, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ ನೇತೃತವದಲ್ಲಿ ನಡೆದಂತ ಕಾರ್ಯಕ್ರಮದಲ್ಲಿ ಸಪ್ತಾಶ್ವ ಬೆಳ್ಳಿಪಲ್ಲಕ್ಕಿಯಲ್ಲಿ ಶ್ರೀಕೋದಂಡರಾಮ ದೇವರನ್ನು ಕೂರಿಸಿ ಶೋಭಾಯಾತ್ರೆ ಮಾಡಲಾಯಿತು ಶೋಭಾಯಾತ್ರೆಯಲ್ಲಿ ಅನ್ನಪೂರ್ಣೇಶ್ವರಿ ಭಜನಾ ಮಂಡಳಿಯ ಮುಖ್ಯಸ್ಥ ಡಾ.ರಮಾನಂದ ಸಾರಥ್ಯದಲ್ಲಿ ಮಹಿಳೆಯರು ಸೇರಿದಂತೆ ರಾಮಭಕ್ತರು ರಾಮನಾಮದ ಹಾಡುಗಳಿಗೆ ರಸ್ತೆಯಲ್ಲೆ ಹೆಜ್ಜೆ ಹಾಕಿದರು.ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಟೆ ಅಂಗವಾಗಿ ಅರಿಕೇರಿಯಲ್ಲಿ ನಾಳೆ ನಡೆಯುವ ಶ್ರೀ ರಾಮರ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ರಾಮನ ಭಕ್ತರು ಆಗಮಿಸುವಂತೆ ರಾಜಣ್ಣ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಹಾಲು ಡೈರಿ ಕಾರ್ಯದರ್ಶಿ ಶ್ರೀನಿವಾಸಶೆಟ್ಟಿ,ನಂಬಿಹಳ್ಳಿರಮೇಶ್,ಶ್ರೀ ನಗರೇಶ್ವರ ದೇವಸ್ಥಾನದ ಮುಖ್ಯಸ್ಥರಾದ ಕಪಾಲಿ ಮೋಹನ್,ರಾಜಶೇಖರ್,ಕಪಾಲಿ ಶಿವು,ಹರಿ,ಬಿಜೆಪಿ ಮುಖಂಡ ಲಕ್ಷ್ಮಣಗೌಡ,ಟಿ.ನಾರಯಣಸ್ವಾಮಿ,ಸತ್ಸಂಗ ಬಳಗದ ಲೊಕೇಶ್,ರಘು,ಗುರುಮೂರ್ತಿ,ರಾಘವೇಂದ್ರ ಮುಂತಾದವರು ಇದ್ದರು

Read More

ಶ್ರೀನಿವಾಸಪುರ:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ಕೊಟ್ಟಿರುವ ದೇಶಾದ್ಯಂತ ದೇವಾಲಯ ಸಂಕೀರ್ಣಗಳಲ್ಲಿ ಸ್ವಚ್ಛತಾ ಶ್ರಮಧಾನ ಕಾರ್ಯಕ್ರಮದ ಅನ್ವಯದಂತೆ ಶ್ರೀನಿವಾಸಪುರ ತಾಲೂಕು ಬಿಜೆಪಿ ವತಿಯಿಂದ ಶನಿವಾರ ಶ್ರೀನಿವಾಸಪುರ ಪಟ್ಟಣದ ಶ್ರೀ ನಗರೇಶ್ವರ ದೇವಸ್ಥಾನ ಆವರಣದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹಾಗು ಪುರಸಭೆ ಸಿಬ್ಬಂದಿಯೊಂದಿಗೆ ಕೋಲಾರ ಸಂಸದ ಮುನಿಸ್ವಾಮಿ ಸ್ವಚ್ಚತಾ ಕಾರ್ಯಕ್ರಮಮದಲ್ಲಿ ಭಾಗವಹಿಸಿದ್ದರು, ಈ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ ಪುರಸಭೆ ಕಾರ್ಮಿಕರನ್ನು ಗೌರವದಿಂದ ಕಾಣುವುದರೊಂದಿಗೆ ಅವರು ಸ್ವಚ್ಚವಾಗಿರಲು ಸಹಕಾರ ನೀಡಬೇಕಾದುದು ನಮ್ಮ ಕರ್ತವ್ಯ ಎಂದು ಪೌರಕಾರ್ಮಿಕರ ಪಾದ ತೊಳೆದು,ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರೋಣೂರುಚಂದ್ರು, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಇಂದಿರಾಭನ್ ರಾಜಣ್ಣ,ಶಿವಮೂರ್ತಿ,ಲಕ್ಷ್ಮಣಗೌಡ,ಪುರಸಭೆ ಮುಖ್ಯಾಧಿಕಾರಿ ಸತ್ಯನಾರಯಣ ವ್ಯವಸ್ಥಾಪಕ ನವೀನ್ ಚಂದ್ರ,ಬಾಲಕೃಷ್ಣ,ಮಾಜಿ ಸದಸ್ಯ ರಾಮಾಂಜಿ,ಷಫಿಉಲ್ಲಾ,ದೇವಾಲಯ ಆಡಳಿತ ಮಂಡಳಿಯ ಕಪಾಲಿಶಿವು,ಕಪಾಲಿ ಮೋಹನ್,ಗೀರಿಶ್ ಮುಂತಾದವರು ಇದ್ದರು.

Read More

ಶ್ರೀನಿವಾಸಪುರ: ಊರು ಅಭಿವೃದ್ಧಿಯಾಗಬೇಕು ಎನ್ನುವುದಾದರೆ ಊರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿದಾಗ ಮಾತ್ರ ಊರಿನ ಅಭಿವೃದ್ಧಿಗೆ ಪೂರಕವಾತವರಣ ನಿರ್ಮಾಣವಾಗಿ ವಸತಿ ಮಾಡಬಹುದು,ಸುರಕ್ಷಿತವಾಗಿ ವ್ಯಾಪಾರ ವ್ಯವಹಾರ ನಡೆಸಬಹುದು ಎಂಬ ನಂಬಿಕೆ ಬಂಡವಾಳ ಹೂಡಿಕೆದಾರರಿಗೆ ಬರುತ್ತದೆ.ಬೆಂಗಳೂರು ಮಹಾ ನಗರಕ್ಕೆ ನೂರು ಕೀ.ಮಿ ದೂರದ ಊರಾದ ಶ್ರೀನಿವಾಸಪುರ ವೈಷಮ್ಯ ರಾಜಕಾರಣಕ್ಕೆ ಕರ್ನಾಟಕದಲ್ಲೆ ಫೇಮಸ್ಸು, ಇಲ್ಲಿ ಬೆಳೆಯುವ ಮಾವಿಕಾಯಿ ಪ್ರಪಂಚಕ್ಕೆ ಪ್ರಸಿದ್ಧಿ ಇಂತಹ ಊರಿನಲ್ಲಿ ಸರಿಯಾದ ರಸ್ತೆ ಇಲ್ಲ ರಾಜಧಾನಿ ಬೆಂಗಳೂರಿನಿಂದ ಇಲ್ಲಿಗೆ ಬರಲು ಸಮರ್ಪಕವಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ, ಇನ್ನು ಊರು ಉದ್ಧಾರದ ಬಗ್ಗೆ ಉದ್ದುದ್ದ ಭಾಷಣ ಬಿಗಿದರೆ ಕೇಳೋರು ಯಾರು ಇಂತಹ ಪರಿಸ್ಥಿತಿ ಶ್ರೀನಿವಾಸಪುರ ಪಟ್ಟಣವನ್ನು ಕಾಡುತ್ತಿದೆ.ಅಂತರರಾಜ್ಯಗಳ ಸಂಪರ್ಕದ ಶ್ರೀನಿವಾಸಪುರಶ್ರೀನಿವಾಸಪುರ ಪಟ್ಟಣ ಅತ್ತ ದೂರದ ತಮಿಳುನಾಡು ಇತ್ತ ಆಂಧ್ರದ ಊರುಗಳನ್ನು ಸಂಪರ್ಕಿಸುವ ಕೇಂದ್ರವಾಗಿದೆ ಮುಳಬಾಗಿಲು-ಚಿಂತಾಮಣಿ,ಆಂಧ್ರದ ಚಿತ್ತೂರು-ಹಿಂದೂಪುರ,ಹೊಸೂರು-ಮದನಪಲ್ಲೆ ಗಳಿಗೆ ಹೋಗಿಬರುವರು ಶ್ರೀನಿವಾಸಪುರ ಪಟ್ಟಣದಲ್ಲಿ ಹಾದುಹೋಗಬೇಕು ಇಲ್ಲಿರುವ ರಸ್ತೆಗಳು ಹಾಗು ರಾಷ್ಟ್ರೀಯ ಹೆದ್ದಾರಿಯ ರಸ್ತೆಯಲ್ಲೆ ಸಂಚರಿಸಬೇಕು ಇಲ್ಲಿ ಪ್ರತಿ ದಿನವೂ ದೊಡ್ದ ಮಟ್ಟದ ಟ್ರಾಫಿಕ್ ಇರುತ್ತದೆ.…

Read More