ನ್ಯೂಜ್ ಡೆಸ್ಕ್:ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಗೆ ಹೊಂದಿಕೊಂಡು ಸುಮಾರು 25 ಕೀ.ಮಿ ದೂರದ ಆಂಧ್ರದ ಸತ್ಯಸಾಯಿ ಜಿಲ್ಲೆಯ ಪ್ರಖ್ಯಾತ ವಿಜಯ ನಗರದ ಅರಸರ ಶಿಲ್ಪಕಲಾ ವೈಭವದ ಹಾಗು ಯುನೆಸ್ಕೋ ಪಾರಂಪರಿಕ ಕಟ್ಟಡಗಳ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಲೇಪಾಕ್ಷಿಗೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿರುತ್ತಾರೆ ಲೇಪಾಕ್ಷಿಯ ಮಹಿಮಾನ್ವಿತ ಶ್ರೀ ವೀರಭದ್ರ ಹಾಗು ಭದ್ರಕಾಳಿಯಮ್ಮ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ಶ್ರೀ ವೀರಭದ್ರ ದೇವರ ಮೂಲ ವಿಗ್ರಹಕ್ಕೆ ಸ್ವತಹಃ ಮಂಗಳಾರತಿ ಬೆಳಗಿದ್ದಾರೆ. ಪೂಜೆಯ ನಂತರ ದೇವಸ್ಥಾನದ ಅರ್ಚಕರು ಮೋದಿ ಅವರಿಗೆ ಶಾಲು ಹೊದೆಸಿ ವೇದಾಶಿರ್ವಾದ ಮಾಡಿದ್ದು,ದೇವರ ಪುತ್ಥಳಿಯನ್ನು ಪ್ರಧಾನಿಗೆ ನೀಡಿರುತ್ತಾರೆ. ದೇವರಿಗೆ ಪ್ರದಕ್ಷಿಣೆ ನಮಸ್ಕಾರ ಹಾಕಿದ ಮೋದಿ ದೇವಸ್ಥಾನದ ವೈಶಿಷ್ಟತೆ ಹಾಗೂ ಸ್ಥಳ ಪುರಾಣ ವಿಚಾರಿಸಿ ತಿಳಿದುಕೊಂಡಿದ್ದಾರೆ ದೇವಸ್ಥಾನದ ಆವರಣದಲ್ಲಿ ಸುಮಾರು 40 ನಿಮಿಷಗಳ ಕಾಲ ನೆಲದಲ್ಲಿ ಕುಳಿತಿದ್ದ ಮೋದಿ ದೇವಾಲಯದಲ್ಲಿ ಏರ್ಪಡಿಸಿದ್ದ ಶ್ರೀರಾಮ ಕೀರ್ತನೆಗಳ ಸಂಗೀತ ಕಛೇರಿಯನ್ನು ಮೋದಿ ಆಲಾಪಿಸಿದ್ದು ಅಲ್ಲದೆ ಸಂಗೀತಗಾರರೊಂದಿಗೆ ಕೈ ಚಪ್ಪಾಳೆ ತಟ್ಟಿದ್ದಾರೆ.…
Author: Srinivas_Murthy
ಶ್ರೀನಿವಾಸಪುರ:ಮಾವು ಬೆಳೆ ಕುರಿತಂತೆ ಬೆಳೆಗಾರರಿಗೆ ಕಾರ್ಯಗಾರ ಏರ್ಪಡಿಸಿರುವುದಾಗಿ ಕಾರ್ಯಗಾರದಲ್ಲಿ ಮಾವು ಬೆಳೆಗಾರರು ಪಾಲ್ಗೋಂಡು ಮಾವಿನ ಬೆಳೆಗೆ ತಗಲುವ ರೋಗ ನಿಯಂತ್ರಣ ಕುರಿತಂತೆ ಔಷಧಿಗಳ ಸಿಂಪರಣೆ ಅನುಸರಿಸಬೇಕಾದ ಕ್ರಮಗಳ ಕುರಿತಾಗಿ ವಿಷಯ ತಜ್ಞರು ಮಾವು ಬೆಳೆಗಾರರಿಗೆ ಮಾಹಿತಿ ನೀಡಲಿದ್ದಾರೆ ಎಂದು ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪ ರೆಡ್ಡಿ ಹೇಳಿದರು ಅವರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.ದಿನಾಂಕ 17ಜನವರಿ 2024 ರಂದು ಬುಧವಾರ ಬೆಳಗ್ಗೆ 11 ಗಂಟೆಗೆ ಸರ್ಕಾರಿ ಬಾಲಕರ ಕಾಲೇಜು ಮುಂಬಾಗದ ಮಾರುತಿ ಸಭಾ ಭವನದಲ್ಲಿ ಒಂದು ದಿನದ ಕಾರ್ಯಗಾರವನ್ನು ತೋಟಗಾರಿಕಾ ಇಲಾಖೆ, ಮಾವು ಅಭಿವೃದ್ಧಿ ಮಂಡಳಿ ಮತ್ತು ಕೃಷಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದೆ ಇಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಮತ್ತು ಕೃಷಿ ವಿಜ್ಞಾನ ಕೇಂದ್ರದ ನುರಿತ ವಿಜ್ಞಾನಿಗಳು ತೋಟಗಾರಿಕಾ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಭಾಗವಹಿಸುತ್ತಿದ್ದು ಕಾರ್ಯಗಾರದಲ್ಲಿ ಮಾವು ಬೆಳೆಗಾರರು ಮತ್ತು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿ ವರ್ಷ ಮಾವಿನ ತೋಟಗಳಿಗೆ ಐದಾರು ಬಾರಿ ಔಷಧಿ…
ಶ್ರೀನಿವಾಸಪುರ:ತಾಲೂಕಿನ ದಲಿತ ಸಮುದಾಯದ ಹಿರಿಯ ನಾಯಕ ಹಾಗು ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಕ್ರೌನ್ಸಿಲರ್ ಶ್ರೀನಿವಾಸನ್ ಅವರ ಹತ್ಯೆಯನ್ನು ಸಿಬಿಐಗೆ ವಹಿಸಬೇಕು ಎಂದು ಇಂದು ವಿವಿಧ ಮಠಾಧೀಶರು ಮತ್ತು ಹಾಗೂ ಸಂಘ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಒಕ್ಕೂರಲಿನಿಂದ ಅಗ್ರಹಿಸಲಾಯಿತು.ಅ.23 ರಂದು ಕೌನ್ಸಿಲರ್ ಶ್ರೀನಿವಾಸನ್ ಅವರನ್ನು ಅವರ ತೋಟದ ಬಳಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು,ಈ ಸಂಬಂದ ಆರೋಪಿಗಳನ್ನು ಬಂಧಿಸಲಾಗಿದ್ದು ಹಾಗು ಒತ್ತಾಯದ ಮೇರೆಗೆ ಹತ್ಯೆ ತನಿಖೆಯನ್ನು ಸಿಒಡಿಗೆ ವಹಿಸಲಾಗಿದೆ.ಶ್ರದ್ಧಾಂಜಲಿ ಸಭೆಯಲ್ಲಿ ಛಲವಾದಿ ಗುರುಪೀಠದ ಬಸವನಾಗಿದೇವ ಶರಣರು ಮಾತನಾಡಿ ಹುಟ್ಟುಹೋರಾಟಗಾರರಾಗಿದ್ದ ಕೌನ್ಸಿಲರ್ ಶ್ರೀನಿವಾಸನ್ ಹತ್ಯೆಯಾಗಿ ಇಂದು ನಮ್ಮಿಂದ ದೂರವಾಗಿರುವ ವಿಚಾರ ಅತ್ಯಂತ ದುರದುಷ್ಟಕರ,ಅವರ ಹತ್ಯೆಗೆ ಸಂಚು ರೂಪಿಸಿದವರು ಕಾನೂನು ಬದ್ದವಾಗಿ ಶಿಕ್ಷಗೆ ಒಳಗಾದರೆ ಮಾತ್ರ ಹತ್ಯೆಯಾದ ಕೌನ್ಸಿಲರ್ ಶ್ರೀನಿವಾಸನ್ ಅವರಿಗೆ ಚಿರಶಾಂತಿಃ ದೊರೆಯಲಿದೆ ಇಲ್ಲವಾದರೆ ಸಾಧ್ಯವಾಗದು,ಅವರ ಹತ್ಯೆಯನ್ನು ಅವರ ಕುಟುಂಬದ ಹಾಗು ಅಭಿಮಾನಿ ಬಳಗ ಬಯಸಿದಂತೆ ಸಿಬಿಐಗೆ ವಹಿಸಲು ಈ ಶ್ರದ್ಧಾಂಜಲಿ ಸಭೆ ಮೂಲಕ ಒಕ್ಕೂರಲಿನಿಂದ ಅಗ್ರಹಿಸುವುದಾಗಿ ಹೇಳಿದರು.ಸೇರಗೊಡ್ಡಿ ಬೇಡಿಕೊಳ್ಳುತ್ತೇನೆ ನ್ಯಾಯ ಕೊಡಿಸಿಕೌನ್ಸಿಲರ್…
ಶ್ರೀನಿವಾಸಪುರ: ಶ್ರೀನಿವಾಸಪುರದಲ್ಲಿ ದಿನನಿತ್ಯ ಕಾಲೇಜು ವಿದ್ಯಾರ್ಥಿನಿಯರು ಹಾಗು ಪ್ರೌಡಶಾಲೆ ಹೆಣ್ಮಕ್ಕಳು ಓಡಾಡುವ ಪ್ರದೇಶದಲ್ಲಿ ಫುಟ್ ಪಾತ್ ಗಳನ್ನು ಅತಿಕ್ರಮಿಸಿಕೊಂಡು ಪೆಟ್ಟಿ ಅಂಗಡಿಗಳು ಟೀ ಹೋಟೆಲ್ ಗಳು ಹಾಗು ತರಕಾರಿ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಲ್ಲದೆ ಅಲ್ಲೆ ಶಾಪಿಂಗ್ ಮಾಡಲು ಅಂಗಡಿಗಳನ್ನು ಒಪನ್ ಮಾಡುವ ಮೂಲಕ ಜನರಿಗೆ ತೊಂದರೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.ಶ್ರೀನಿವಾಸಪುರದ ಎಂ.ಜಿ.ರಸ್ತೆಯಲ್ಲಿ ದಾರಿ ಉದ್ದಕ್ಕೂ ಪಾದಚಾರಿ ಮಾರ್ಗ ಒಂದಲ್ಲ ಒಂದು ರೀತಿಯಲ್ಲಿ ಅತಿಕ್ರಮಣಕ್ಕೆ ಒಳಗಾಗಿದೆ ತರಕಾರಿ ಮಾರುಕಟ್ಟೆ ಬಳಿ ತರಕಾರಿ ಅಂಗಡಿಗಳು ಹಾಗು ಅವರೆಕಾಯಿ ಮಂಡಿ ವ್ಯಾಪರಸ್ಥರ ಕಾಟ ಆದರೆ,ಹಳೆ ಬಸ್ ನಿಲ್ದಾಣದಿಂದ ಕಾಲೇಜಿಗೆ ಹೋಗುವ ಮಾರ್ಗದಲ್ಲಿ ಇನ್ನೊಂದು ಕಥೆ ತೆರೆದುಕೊಳ್ಳುತ್ತದೆ,ತಾಲೂಕು ದಣಿ ತಹಶೀಲ್ದಾರ್ ಕಚೇರಿ ಇರುವ ಮಿನಿವಿಧಾನಸೌಧ ಕಾಂಪೌಂಡ್ ಗೋಡೆಗೆ ಒತ್ತಿಕೊಂಡು ಇರುವ ಪುಟ್ಬಾತ್ ನಲ್ಲಿ ಬಾಡಿಗೆ ಕಾರುಗಳ ನಿಲ್ದಾಣ ಮಾಡಿಕೊಳ್ಳಲಾಗಿದೆ ಮುಂದೆ ಇಂದಿರಾ ಕ್ಯಾಂಟಿನ್ ನಂತರ ಬಾಯ್ಸ್ ಮಿಡ್ಲ್ ಸ್ಕೂಲ್ ಹಾಗು ಸರ್ಕಾರಿ ಮಹಿಳಾ ಕಾಲೇಜು ಆವರಣದ ಗೆಟ್ ಮುಚ್ಚಿ ಗೊಡೆಗೆ ಬಳಿ ಇದ್ದ ಕಾಲುವೆ ಮೆಲೆ ವರಸೆಯಾಗಿ…
ಶ್ರೀನಿವಾಸಪುರ:ಎಲ್ಲಾ ಸಮಾಜಗಳೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದ ಕೌನ್ಸಿಲರ್ ಶ್ರೀನಿವಾಸನ್ ಅವರ ಹತ್ಯೆ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ರಿಪಬ್ಲಿಕ್ ಪಾರ್ಟಿ ಆಪ್ ಇಂಡಿಯಾದ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ಹೇಳಿದರು ಅವರು ಇಂದು ಪಟ್ಟಣದ ಕೌನ್ಸಿಲರ್ ಶ್ರೀನಿವಾಸನ್ ಅವರ ಮನೆಯಲ್ಲಿ ಇಂದು ನಡೆದಂತ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರುಕೌನ್ಸಿಲರ್ ಶ್ರೀನಿವಾಸನ್ ಅವರ ಹತ್ಯೆಯನ್ನು ಸಿಬಿಐ ಗೆ ವಹಿಸಬೇಕು ಎಂದು ಅಗ್ರಹಿಸಿ ಬೆಂಗಳೂರಿನಲ್ಲಿ ಧರಣಿ ನಡೆಸಿದಾಗ ಪ್ರತಿಭಟನೆ ಸ್ಥಳಕ್ಕೆ ಸರ್ಕಾರದ ಪ್ರತಿನಿಧಿಯಾಗಿ ಬಂದಿದ್ದ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿಸುರೇಶ್ ಅವರು ಕೌನ್ಸಿಲರ್ ಶ್ರೀನಿವಾಸನ್ ಹತ್ಯೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಹತ್ಯೆಯನ್ನು ಸಿಒಡಿಗೆ ವಹಿಸುವುದಾಗಿ ಹೇಳಿದ್ದರು ಅದರಂತೆ ತನಿಖೆ ನಡೆಯುತ್ತಿದೆ ಆದರೆ ಹತ್ಯೆಯಲ್ಲಿ ಪ್ರಮುಖ ಆರೋಪಿಯಾಗಿರುವ ವ್ಯಕ್ತಿ ಹೇಳಿಕೆ ನಮಗೆ ಹಲವಾರು ಅನುಮಾನಗಳು ಹುಟ್ಟುಹಾಕುತ್ತಿದೆ ಆರೋಪಿಯ ಹಿಂದಿರುವ ಸಂಚುಗಾರ ಯಾರು ಎಂಬ ಸತ್ಯ ಹೊರ ಬರಬೇಕಿದೆ ಇದಕ್ಕಾಗಿ ಸೆರೆ ಸಿಕ್ಕಿರುವ ಆರೋಪಿಗಳನ್ನು ಮಂಪರು ಪರಿಕ್ಷೆಗೆ ಒಳಪಡಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿರುವುದಾಗಿ ಹೇಳಿದರು.ಈ ಬಗ್ಗೆ ಸರ್ಕಾರದ ಗಮನಕ್ಕೆ…
ಶ್ರೀನಿವಾಸಪುರ: ಶ್ರೀನಿವಾಸಪುರ ತಾಲ್ಲೂಕಿನ ರೊಜೊರನಹಳ್ಳಿ ಕ್ರಾಸ್ ನಲ್ಲಿ ನಿರ್ಮಾಣವಾಗಿದ್ದ ವಿಶಾಲವಾದ ವೃತ್ತದಲ್ಲಿ ಹೈ ಮ್ಯಾಸ್ಟ್ ಲೈಟ್ ಸ್ಥಾಪಿಸುವ ಸಲುವಾಗಿ ನಿರ್ಮಾಣ ಮಾಡಿದ್ದ ವೃತ್ತಾಕಾರದ ಕಲ್ಲಿನ ಕಟ್ಟೆಯಲ್ಲಿ ಈಗ್ಗೆ 5-6 ತಿಂಗಳ ಹಿಂದೆ ರಾತ್ರಿಗೆ ರಾತ್ರಿ ನಾಡ ಪ್ರಭು ಕೆಂಪೇಗೌಡ ಪುತ್ತಳಿ ಸ್ಥಾಪಿಸಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.ಕೆಲವರು ತೀವ್ರವಾಗಿ ವಿರೋಧಿಸಿದ ಹಿನ್ನಲೆಯಲ್ಲಿ ತಾಲೂಕು ಆಡಳಿತ ಪುತ್ತಳಿ ವಿಚಾರ ಬಗೆಹರಿಸಲಾಗುದೆ ಒದ್ದಾಡುತ್ತಿದ್ದಾಗ, ಸಂಸದ ಮುನಿಸ್ವಾಮಿ ಈ ವಿಚಾರವಾಗಿ ಎಂಟ್ರಿ ಕೊಟ್ಟು ಯಾರಿಗೂ ಸಮಸ್ಯೆ ಆಗದಂತೆ ಎಲ್ಲಾ ಸಮುದಾಯದ ನಾಯಕರ ಪುತ್ತಳಿಗಳನ್ನು ಸ್ಥಾಪಿಸಲು ರಸ್ತೆ ಪಕ್ಕದ ಕಲ್ಯಾಣಿಯ ಒಂದು ಭಾಗವನ್ನು ಸಮತಟ್ಟು ಮಾಡಿ ಅಲ್ಲಿ ಪುತ್ಥಳಿಗಳನ್ನು ಸ್ಥಾಪಿಸುವ ಭರವಸೆ ನೀಡಿದ್ದು ವಿಷಯ ಅಲ್ಲಿಗೆ ಸದ್ದಡಗಿತ್ತು.ಈಗ ಪುತ್ಥಳಿ ವಿಚಾರ ಏಕಾ ಏಕಿ ಮುನ್ನಲೆಗೆ ಬಂದಿದೆ ಪುತ್ಥಳಿ ಕಟ್ಟೆ ನಿರ್ಮಾಣ ವಿವಾದಕ್ಕೆ ಕಾರಣವಾಗಿದೆ ಕಲ್ಯಾಣಿ ಬಳಿ ಸಮತಟ್ಟು ಮಾಡುತ್ತಿರುವ ಜಾಗದಲ್ಲಿ ಕೇವಲ ಕೆಂಪೇಗೌಡ ಪುತ್ತಳಿ ಮಾತ್ರ ಸ್ಥಾಪಿಸುವ ಕುರಿತಂತೆ ಒಂದು ಪುತ್ಥಳಿ ಸ್ಥಾಪಿಸಲು ಆಗುವಷ್ಟು ಸ್ಥಳ ಮಾತ್ರ ಸಮತಟ್ಟು…
ಕೋಲಾರ: ಕೋಲಾರ-ಚಿಕ್ಕಬಳ್ಳಾಪುರದ ಹಾಲು ಒಕ್ಕೂಟದ ಅಧ್ಯಕ್ಷ ಹಾಗು ನಿರ್ದೇಶಕರ ಮನೆಗಳ ಮೇಲೆ ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯ( ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಹಾಲು ಒಕ್ಕೂಟದ ಅಧ್ಯಕ್ಷ ಹಾಗು ಮಾಲೂರು ಶಾಸಕ ನಂಜೇಗೌಡ ಅವರಿಗೆ ಸೇರಿದ ಮಾಲೂರು ತಾಲೂಕಿನ ಕೊಮ್ಮನಹಳ್ಳಿ ಗ್ರಾಮದ ಮನೆಯಲ್ಲಿ ಶೋಧ,ಹುತ್ತೂರು ಹೋಬಳಿ ಕೋಚಿಮುಲ್ ಕಚೇರಿಯಲ್ಲಿ, ಕೊಮ್ಮನಹಳ್ಳಿ ನಂಜುಂಡೇಶ್ವರ ಸ್ಟೋನ್ ಕ್ರಷರ್ನಲ್ಲಿ ಹಾಗು ಶಾಸಕರ ಬೆಂಗಳೂರಿನ ನಿವಾಸದಲ್ಲೂ ಪರಿಶೀಲನೆ ನಡೆಸಿದ್ದಾರೆ.ಕೋಚಿಮುಲ್ ನೇಮಕಾತಿಯಲ್ಲಿ ಅವ್ಯವಹಾರ ಹಿನ್ನೆಲೆ ದಾಳಿಯಾಗಿದೆ ಎಂದು ಶಂಕಿಸಲಾಗುತ್ತಿದ್ದು ನಂಜೇಗೌಡ ಅವರ ಆಪ್ತ ಸಹಾಯಕ ಹರೀಶ್ ಅವರ ದೊಡ್ಡಮಲ್ಲೆ ಗ್ರಾಮದ ಮನೆ,ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ(MD) ಗೋಪಾಲ್ ಮೂರ್ತಿ ಅವರ ಮನೆ, ಕೋಚಿಮುಲ್ ಆಡಳಿತಾತ್ಮಕ ನಿರ್ದೇಶಕ ನಾಗೇಶ್ ಅವರ ಬೆಂಗಳೂರು ರಾಮಮೂರ್ತಿ ನಗರದಲ್ಲಿರುವ ಮನೆ, ಮಾಲೂರು ಕೋಚಿಮುಲ್ ಕಚೇರಿ,ಚಿಂತಾಮಣಿ ತಾಲೂಕಿನ ನಿರ್ದೇಶಕ ಅಶ್ವಥನಾರಯಣಬಾಬು ಅವರ ಚಿಂತಾಮಣಿಯ ಪ್ರಭಾಕರ ಬಡಾವಣೆ ಮನೆ ಸೇರಿದಂತೆ 10 ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ಮಾಡಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.ಕೋಲಾರ-ಚಿಕ್ಕಬಳ್ಳಾಪುರದ ಹಾಲು ಒಕ್ಕೂಟದ ಸಿಬ್ಬಂದಿ ನೇಮಕಾತಿ…
ಶ್ರೀನಿವಾಸಪುರ:ಆಯೋಧ್ಯೆ ರಾಮ ಮಂದಿರದ ಮಂತ್ರಾಕ್ಷತೆಯನ್ನು ಮಹಿಳೆಯರಿಂದ ಮನೆ ಮನೆಗೂ ವಿತರಣೆ ಮಾಡಲಾಗುತ್ತಿದೆ.ದೇಶಾದ್ಯಂತ ಪ್ರತಿ ಹಿಂದೂ ಮನೆಗೂ ವಿತರಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು ಈ ಅಭಿಯಾನದ ಭಾಗವಾಗಿ ಅಯೋಧ್ಯೆಯಿಂದ ಬಂದಿರುವಂತ ಶ್ರೀರಾಮನ ಮಂತ್ರಾಕ್ಷತೆಯನ್ನು ಶ್ರೀನಿವಾಸಪುರ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹಿಂದೂ ಸಂಘಟನೆ ಕಾರ್ಯಕರ್ತರು,ವಿವಿಧ ಮಹಿಳಾ ಮಂಡಳಿಯ ಮಾತೆಯರು ವಿವಿಧ ಯುವಕ ಸಂಘಗಳ ಕಾರ್ಯಕರ್ತರು ಮುಖಂಡರು ಮಂತ್ರಾಕ್ಷತೆಯನ್ನು ಮನೆ ಮನೆಗೂ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪಟ್ಟಣದ ವಿವಿಧ ಬಡಾವಣೆಗಳಿಗೆ ಹೋಗಿ ಮಂತ್ರಾಕ್ಷತೆಯನ್ನು ನೀಡುವ ಕೆಲಸ ಮಾಡುತ್ತಿದ್ದು,ಮಂತ್ರಾಕ್ಷತೆ ಪಡೆಯುವಂತವರು ಯಾರೂ ಕೂಡ ಹಣವನ್ನು ನೀಡಿವಂತಿಲ್ಲ. ಅಥವಾ ವಸ್ತು ರೂಪದಲ್ಲಿ ಕಾಣಿಕೆ ನೀಡಬಾರದು ಮಂತ್ರಾಕ್ಷತೆ ವಿತರಣೆ ಅಭಿಯಾನವಾಗಿರುವ ಹಿನ್ನಲೆಯಲ್ಲಿ ಯಾವುದೇ ರೀತಿಯ ವ್ರತಾಚಾರಣೆ, ಕಟ್ಟು ಪಾಡು ನಿಯಮಗಳು ಇರುವುದಿಲ್ಲ, ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ವಿಗ್ರಹ ಪ್ರಾಣಪ್ರತಿಷ್ಠೆಯ ದಿನವಾದ ಜನವರಿ 22 ಸೋಮವಾರದಂದು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹಳ್ಳಿ-ಹಳ್ಳಿಗಳ ದೇವಾಲಯಗಳಲ್ಲಿ ವಿಶೇಷ ಪೂಜೆ,ಹೊಮ,ಹವನ, ಸತ್ಸಂಗ, ಭಜನೆ ಕಾರ್ಯಕ್ರಮ ಹಮ್ಮಿಕೊಂಡು ಸಂಜೆ ದೇವಾಲಯ ಸೇರಿದಂತೆ ಮನೆ ಮನೆಯ ಮುಂಬಾಗದಲ್ಲಿ ಮಣ್ಣಿನ ಹಣತೆಯ ದೀಪಗಳನ್ನು…
ನ್ಯೂಜ್ ಡೆಸ್ಕ್:ಜನವರಿ 22 ರಂದು ಅಯೋಧ್ಯೆಯ ನೂತನ ರಾಮಮಂದಿರದಲ್ಲಿ ರಾಮಲಲ್ಲಾನ ವಿಗ್ರಹ ಪ್ರತಿಷ್ಠಾಪನೆಗೆ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ತಿರುಮಲವಾಸಿ ಶ್ರೀ ವೆಂಕಟ್ಟೇಶ್ವರನಿಗೆ ಅರ್ಪಿಸುವ ಲಡ್ಡು ಪ್ರಸಾದವನ್ನು ಕೊಡುಗೆಯಾಗಿ ನೀಡಲಾಗುತ್ತಿದೆ.ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆಯುವ ಬಾಲರಾಮನ ಮೂರ್ತಿ ಪ್ರಾಣಪ್ರತಿಷ್ಟಾಪನೆ ದಿನದಂದು ಅಯೋಧ್ಯೆಯಲ್ಲಿ ಭಾಗವಹಿಸುವ ಭಕ್ತರು ಮತ್ತು ಗೌರವಾನ್ವಿತ ಅತಿಥಿಗಳಿಗೆ ತಲಾ 25 ಗ್ರಾಂ ತೂಕದ ಒಂದು ಲಕ್ಷ ತಿರುಪತಿ ಲಡ್ಡುಗಳನ್ನು ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ)ಮಂಡಳಿ ವತಿಯಿಂದ ಲಡ್ಡು ಪ್ರಸಾದವನ್ನು ವಿತರಿಸಲಾಗುತ್ತಿದೆ ಎಂದು ಈವೋ ಧರ್ಮಾರೆಡ್ಡಿ ತಿಳಿದ್ದಾರೆ. ಈ ಮೂಲಕ ಅಯೋಧ್ಯೆಯ ರಾಮದೇವರ ಸೇವೆಯಲ್ಲಿ ಟಿಟಿಡಿ ಶ್ರೀ ವೆಂಕಟೇಶ್ವರ ದೇವಸ್ಥಾನ ಮಂಡಳಿ ತೊಡಗಿಸಿಕೊಂಡಿದೆ.
ಭಾರತದ ಪ್ರಾಚೀನ ನಗರ ಅಯೋಧ್ಯೆಯ ಮೇಲೆ ಮುಸ್ಲಿಂ ಆಕ್ರಮಣಕಾರರಿಂದ ಸತತವಾಗಿ 76 ಬಾರಿ ದಾಳಿ ಹಿಂದುಗಳ ಭಾವನೆಗಳನ್ನು ಗುರಿಯಾಗಿಸಿಕೊಂಡು ದಾಳಿ. ನ್ಯೂಜ್ ಡೆಸ್ಕ್:ಅಯೋಧ್ಯೆ ಭಾರತದ ಪ್ರಾಚೀನ ನಗರಗಳಲ್ಲೊಂದು,ಶ್ರೀ ರಾಮಚಂದ್ರನ ಜನ್ಮಸ್ಥಳವಾದ ಅಯೋಧ್ಯೆಯನ್ನು ರಾಮ ಜನ್ಮಭೂಮಿ ಎನ್ನುತ್ತಾರೆ ಇದು ಉತ್ತರ ಪ್ರದೇಶದಲ್ಲಿದ್ದು ಸರಯೂ ನದಿ ತೀರದಲ್ಲಿದೆ.ಅಯೋಧ್ಯೆಯು ಭಾರತೀಯರ ಆರು ಪವಿತ್ರ ಸ್ಥಳಗಳಲ್ಲಿ ಒಂದೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.ದಾಳಿಕೊರರಿಂದ ನಲುಗಿದ ರಾಮಜನ್ಮಭೂಮಿರಾಮ ಈ ನೆಲದ ಆದರ್ಶ ಕೇವಲ ಭಾರತೀಯರಿಗೆ ಮಾತ್ರವಲ್ಲ ವಿಶ್ವದಲ್ಲಿನ ಜನಿಸಿದ ಯಾವುದೇ ವ್ಯಕ್ತಿಗೆ ರಾಮನೇ ಆದರ್ಶ. ಅದಕ್ಕಾಗಿಯೇ ಮರ್ಯಾದಾ ಪುರುಷೋತ್ತಮ ಎಂದು ಕರೆಯುವುದು. ಪುರುಷ ಎನ್ನುವುದು ಲಿಂಗಸೂಚಕವಲ್ಲ.ರಾಮನ ಗುಣಗಳೇ ಮಹಿಳೆಯಲ್ಲೂ ಇರಬೇಕು ಎನ್ನುವುದು ಅಪೇಕ್ಷೆ. ಸಹನೆ, ಚಾರಿತ್ರ್ಯ, ಭ್ರಾತೃತ್ವ ಭಾವ, ಗುರುಹಿರಿಯರಲ್ಲಿ ಗೌರವ, ಪತ್ನಿಯಲ್ಲಿ (ಅಥವಾ ಪತಿಯಲ್ಲಿ) ನಿಷ್ಠೆ, ಯಾವುದೇ ಸಂದರ್ಭದಲ್ಲೂ ತನ್ನ ಗಡಿಯನ್ನು ಮೀರದ ಕಾರಣಕ್ಕೆ ರಾಮನನ್ನು ಶ್ರೇಷ್ಠ ಎನ್ನಲಾಗುತ್ತದೆ. ಇಂತಹ ವ್ಯಕ್ತಿ ಜನಿಸಿದ ರಾಮಜನ್ಮಭೂಮಿಯ ಮೇಲೆ ಹಿಂದೂಗಳಿಗೆ ವಿಶೇಷ ಅಂದರೆ ಭಾವನಾತ್ಮಕವಾದ ವಿಶೇಷ ಭಕ್ತಿ ಈ ಪುಣ್ಯಭೂಮಿಯಲ್ಲಿನ ಅಯೋಧ್ಯೆಯ ರಾಮಮಂದಿರದ…